ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಹೀರೋ ರಾಜ್ ಬಿ.ಶೆಟ್ಟಿ ಮೊಟ್ಟೆ ಸ್ಟಾರ್ ಎಂದೇ ಫೇಮಸ್. ಅದು ಒಂದು ಮೊಟ್ಟೆಯ ಕಥೆ ಎಫೆಕ್ಟು. ಕವಿತಾ ಗೌಡ ಕೂಡಾ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕಲಾವಿದೆ. ವಿದ್ಯಾ ವಿನಾಯಕ ಧಾರಾವಾಹಿಯಿಂದ ಫೇಮಸ್ ಆಗಿದ್ದವರು.
ಇನ್ನು ಚಿತ್ರದ ನಿರ್ಮಾಪಕ ಚಂದ್ರಶೇಖರ್, ಗೋಲ್ಡನ್ ಹ್ಯಾಂಡು. ಅವರು ಮುಟ್ಟಿದ್ದೆಲ್ಲ ಚಿನ್ನವಾಗ್ತಿರೋ ಕಾಲವಿದು. ಚಮಕ್, ಅಯೋಗ್ಯ, ಬೀರ್ಬಲ್ ಚಿತ್ರಗಳೇ ಸಾಕ್ಷಿ.
ಆದರೆ, ಈ ಸುಜಯ್ ಶಾಸ್ತ್ರಿ ಯಾರು..? ಅವರು ಚಿತ್ರರಂಗದಲ್ಲಿ ಪರಿಚಿತ ಮುಖವೇ ಆದರೂ, ಪ್ರೇಕ್ಷಕರಿಗೆ ಸ್ವಲ್ಪ ಅಪರಿಚಿತ ಮುಖವೇ. ಆದರೆ ನಿಮಗೆ ಸಗಣಿ ಪಿಂಟೋ ನೆನಪಿದ್ದರೆ.. ಅವರೇ ಈ ಸುಜಯ್ ಶಾಸ್ತ್ರಿ.
ಬೆಲ್ಬಾಟಂ ಚಿತ್ರದಲ್ಲಿ ನಿದ್ರೆಯನ್ನೇ ಮಾಡದೆ ಕನಸು ಕಾಣುವ, ಸಿನಿಮಾ ರೀಲುಗಳನ್ನು ನೋಡುತ್ತಲೇ ಕಲ್ಪನಾ ಲೋಕದಲ್ಲಿ ವಿಹರಿಸುವ, ಕಳ್ಳತನ ಮಾಡಿ ಕದ್ದಿದ್ದನ್ನು ವಾಪಸ್ ಕೊಟ್ಟು ಹುಷಾರು ಎನ್ನುವ.. ಮಾತಿನ ಮೋಡಿಗಾರ ಸಗಣಿ ಪಿಂಟೋನೇ.. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಿರುವ ಸುಜಯ್ ಶಾಸ್ತ್ರಿ. ನಿರ್ದೇಶಕ.
ಒಂದು ಮಜವಾದ ಕಥೆಯೊಂದಿಗೆ ಕಾಮಿಡಿಯನ್ನೇ ತುಂಬಿ ಪ್ರೇಕ್ಷಕರ ಎದುರು ಆಗಸ್ಟ್ 15ಕ್ಕೆ ಬರುತ್ತಿದ್ದಾರೆ ಸುಜಯ್ ಶಾಸ್ತ್ರಿ. ಎಂಜಾಯ್..