` ayushmanbhava, - chitraloka.com | Kannada Movie News, Reviews | Image

ayushmanbhava,

 • 'Ayushmanbhava' Teaser Released

  ayushmanbhava teaser released

  Shivarajakumar starrer 'Ayushmanbhava' is all set to release on the 1st of November. Meanwhile, the first teaser of the film was launched on Monday in the DGK Channel of You Tube.

  If going by the teaser, the film looks like a psychological thriller with lots of super natural elements. However, the team is tight-lipped about the film and has not revealed anything about it.

  'Ayushmanbhava' stars Shivarajakumar, Rachita Ram, Nidhi Subbaiah, Ananth Nag, Prabhu, Avinash, Suhasini and others in prominent roles. The film is being produced by Dwarkish under Dwarkish Chitra. This is his 52nd film as a producer. P K H Das is the camerman.  

 • 1969 ಡಾ.ರಾಜ್ ಜೊತೆ.. 2019.. ಶಿವರಾಜ್ ಕುಮಾರ್ ಜೊತೆ.. ದ್ವಾರಕೀಶ್ ಚಿತ್ರ

  then it was dr raj, now its shivarajkumar

  ದ್ವಾರಕೀಶ್ ಚಿತ್ರ, ಕನ್ನಡ ಚಿತ್ರರಂಗದ ಹೆಮ್ಮೆಯ ಸಿನಿಮಾ ಪ್ರೊಡಕ್ಷನ್ಸ್ ಸಂಸ್ಥೆ. ಇಷ್ಟು ಸುದೀರ್ಘ ಕಾಲ ಚಿತ್ರರಂಗದಲ್ಲಿ ಉಳಿದು ಬೆಳೆದಿರುವ ಚಿತ್ರಸಂಸ್ಥೆಗಳ ಸಂಖ್ಯೆ ಬೆರಳೆಣಿಕೆ ದಾಟೋದಿಲ್ಲ. ಹೀಗಾಗಿಯೇ ದ್ವಾರಕೀಶ್ ಚಿತ್ರ ಸ್ಪೆಷಲ್ ಅನ್ನೋದು. ಕನ್ನಡಿಗರಿಂದ ಕುಳ್ಳ ಎಂದೇ ಕರೆಸಿಕೊಳ್ಳೋ ದ್ವಾರಕೀಶ್, ಈಗ ಸಂಸ್ಥೆಯನ್ನು ತಮ್ಮ ಮಗ ಯೋಗೀಶ್ ಅವರಿಗೆ ವಹಿಸಿದ್ದಾರೆ. ಆ ಸಂಸ್ಥೆಯಿಂದ ಈಗ ಹೊರಬರುತ್ತಿರುವ ಆಯುಷ್ಮಾನ್ ಭವ. ಇದರಲ್ಲೊಂದು ವಿಶೇಷವಿದೆ.

  ದ್ವಾರಕೀಶ್ ಬ್ಯಾನರಿನ ಮೊದಲ ಸಿನಿಮಾ ಮೇಯರ್ ಮುತ್ತಣ್ಣ. ಅದು ಡಾ.ರಾಜ್, ಭಾರತಿ ಅಭಿನಯದ, ಸಿದ್ದಲಿಂಗಯ್ಯ ನಿರ್ದೇಶನದ ಚಿತ್ರ. ದ್ವಾರಕೀಶ್ ಅವರು ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಂಡಿದ್ದು ಹಾಗೆ. ಅದಾಗಿ ಈಗ 2019. ಸರಿಯಾಗಿ 50ನೇ ವರ್ಷ. ಆಯುಷ್ಮಾನ್ ಭವ ಚಿತ್ರದಲ್ಲಿ ಶಿವರಾಜ್ ಕುಮಾರ್ ನಾಯಕ. ರಚಿತಾ ರಾಮ್ ನಾಯಕಿ. ಪಿ. ವಾಸು ನಿರ್ದೇಶನ. ಅಂದಹಾಗೆ ಇದು ದ್ವಾರಕೀಶ್ ಚಿತ್ರ ಬ್ಯಾನರ್‍ನ 52ನೇ ಸಿನಿಮಾ. ಗುರುಕಿರಣ್ ಅವರಿಗೆ 100ನೇ ಸಿನಿಮಾ.

  ಮೇಯರ್ ಮುತ್ತಣ್ಣ ರಿಲೀಸ್ ಆದಾಗ ನಾನು 7 ವರ್ಷದ ಬಾಲಕ. ಈಗ ಅವರ ಬ್ಯಾನರ್‍ನ 52ನೇ ಸಿನಿಮಾದಲ್ಲಿ ನಾನು ನಾಯಕ ಎಂದು ನೆನಪಿಸಿಕೊಂಡ ಶಿವಣ್ಣ, ಚಿತ್ರದಲ್ಲಿ ರಚಿತಾ ರಾಮ್, ಅನಂತ ನಾಗ್, ಸುಹಾಸಿನಿ ಎಲ್ಲರ ಪಾತ್ರಗಳೂ ಚೆನ್ನಾಗಿವೆ ಎಂದರು. ಅಷ್ಟೇ ಅಲ್ಲ, ಯೋಗಿಯಂತಹ ಮಗನನ್ನು ಪಡೆದ ದ್ವಾರಕೀಶ್ ಪುಣ್ಯವಂತರು ಎಂದು ಹೇಳೋದನ್ನು ಮರೆಯಲಿಲ್ಲ.

 • 3 ವರ್ಷಗಳ ನಂತರ ನಿಧಿ ಸುಬ್ಬಯ್ಯ COMING BACK

  nidhi subbaiah makes a come back after 3 years

  2009ರಲ್ಲಿ ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರದಿಂದ ಬೆಳ್ಳಿತೆರೆಗೆ ಬಂದಿದ್ದ ನಿಧಿ ಸುಬ್ಬಯ್ಯ 3 ವರ್ಷಗಳ ಹಿಂದೆ ಕನ್ನಡ ಬೆಳ್ಳಿತೆರೆಯಿಂದ ದೂರವಾಗಿದ್ದರು. ಬಹುಶಃ ಅಣ್ಣಾಬಾಂಡ್ ಚಿತ್ರವೇ ಕೊನೆಯಿರಬೇಕು. ಅದಾದ ಮೇಲೆ ನಿಧಿ ಕನ್ನಡದಲ್ಲಿ  ನಟಿಸಿರಲಿಲ್ಲ. ಬಾಲಿವುಡ್ ಸೇರಿಕೊಂಡಿದ್ದರು. ಈ 3 ವರ್ಷಗಳ ನಂತರ ಆಯುಷ್ಮಾನ್ ಭವ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ ನಿಧಿ.

  ಪಿ. ವಾಸು ನಿರ್ದೇಶನದ ಆಯುಷ್ಮಾನ್ಭವದಲ್ಲಿ ನಿಧಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನನಗೆ ತವರು ಮನೆಗೆ ವಾಪಸ್ ಆದಂತೆ ಭಾಸವಾಗುತ್ತಿದೆ. ಇದು ನನ್ನ ಕಮ್ ಬ್ಯಾಕ್ ಸಿನಿಮಾ ಅಲ್ಲ. ಸ್ಟೇ ಬ್ಯಾಕ್ ಸಿನಿಮಾ ಎಂದಿದ್ದಾರೆ ನಿಧಿ. ಶಿವರಾಜ್ ಕುಮಾರ್ ಎದುರು ಗ್ಲಾಮರಸ್ ಹಳ್ಳಿ ಹುಡುಗಿಯಾಗಿ ನಟಿಸಿರುವ ನಿಧಿ, ನನ್ನನ್ನು ಕನ್ನಡ ಪ್ರೇಕ್ಷಕರು ಮರೆತಿಲ್ಲ. ಮತ್ತೆ ಅಂತಹುದೇ ಸ್ವಾಗತ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

 • Ayushmanbhava' Teaser On October 14th

  ayushmanbhava teaser on oct 14th

  The countdown for the release (November 01st) of Shivarajakumar starrer 'Ayushmanbhava' has started and only 18 days are left for the film's release. Meanwhile, the first teaser of th efilm is all set to be released on the 14th of October.

  The first teaser release of 'Ayushmanbhava' is scheduled on the 14th of October at 12 PM. The teaser will be released in the DGK channel of You Tube.

  'Ayushmanbhava' stars Shivarajakumar, Rachita Ram, Nidhi Subbaiah, Ananth Nag, Prabhu and others in prominent roles. The film is being produced by Dwarkish under Dwarkish Chitra. This is his 52nd film as a producer. P K H Das is the camerman.  

 • Dwarakish Chitra-P Vasu-Shivanna Hit Jodi Wraps Aayushmanbhava Shoot

  ayushmanbhava wraps shooting

  Continuing its lucky 'Aa' word, Dwarakish Chitra, one of sandalwood's prestigious banners is back with its 52th venture - Aayushmanbhava starring Karunada Chakravarthy Dr. Shivarajakumar. With this the hit Jodi of Shivanna and director P Vasu are returning after their phenomenal success of Shivalinga. 

  Whereas, on the other side, it also marks the return of another hit combination of producer Dwarakish and P Vasu of Aapthamitra and Aaptharakshaka series. The makers of the film have released the brand new poster of the film featuring hat trick hero Shivarajakumar on the occasion of his 57th birthday.

  After the success of Amma I Love You and a Kannada short film 'Muddhu Muddhagi', the Dwarkish banner has completed the shooting of 'Aayushmanbhava'. Gurukiran who has been another lucky composer for the banner continues with this one too. 

 • Gurukiran Scores Century With 'Ayushmanbhava'

  gurukiran scores century with ayushman

  Shivarajakumar's new film 'Ayushmanbhava' is all set to release in November. One of the highlights of the film is, it is music director Gurukiran's 100th film as composer.

  Gurukiran himself disclosed during the press meet of the film. Gurukiran started his journey as a music composer with Upendra's 'A', 20 years back. In these 20 years Gurukiran has composed music for 100 films and 'Ayushmanbhava' is his 100th film as a composer.

  'Ayushmanbhava' stars Shivarajakumar, Rachita Ram and others in prominent roles. The film is being produced by Dwarkish under Dwarkish Chitra. This is his 52nd film as a producer. P K H Das is the camerman.

 • It's 'Ayushmanbhava' vs 'Ranganayaki' on November 1st

  its ayushmanbhava vs ranganayaki

  Dayal had earlier announced that he will be announcing the release date of his new film 'Ranganayaki' on Ayudha Pooja day. Likewise, Dayal has announced the release date of the film today and the film is all set to be released on the 01st of November.

  .Earlier, producer Yogi Dwarkish had announced that he is releasing 'Ayushmanbhava' on the 01st of November acrosss Karnataka. With Dayal also fixing the same date, it's 'Ayushmanbhava' versus 'Ranganayaki' on the Rajyotsava day.

  'Ranganayaki' stars Aditi Prabhudeva, M G Srinivas, Sundar Raj, Suchendra Prasad, Shivaram, Chandrachud, Yethiraj and others in prominent roles. Naveen Krishna has written the dialogues. Manikanth Kadri has composed the music. S V Narayan has produced the film.

 • Nidhi Subbaiah Back With 'Ayushmanbhava'

  nidhi subbaiah back with ayushman bhava

  Nidhi Subbaiah who was last seen in 'Nanna Ninna Prema Kathe' starring Vijay Raghavendra is back to acting once again. The actress has played a prominent role in Shivarajakumar's 'Ayushmanbhava' after a gap of three years.

  Nidhi married her boyfriend Lavesh in 2017 and was settled in Mumbai. Now Nidhi is not only back in Bangalore, but also is looking forward to pursue her career as an actress. Nidhi says she is looking for good roles and has already acted in a prominent role in 'Ayushmanbhava'.

  'Ayushmanbhava' stars Shivarajakumar, Rachita Ram and others in prominent roles. The film is being produced by Dwarkish under Dwarkish Chitra. This is his 52nd film as a producer. P K H Das is the camerman.  

 • Shivanna Roars in Ayushmanbhava Teaser

  shivarajkumar roars in ayushmanbhava teaser

  Dwarakish Chitra, which started with its first ever venture 'Mayor Muthanna' in the year 1969 is celebrating its grand 50th year, and it continues to enthrall the Kannada audience as it is set for one more exciting venture - Ayushmanbhava, releasing on November 1.

  In 'Mayor Muthanna', it was the legendary Dr. Rajkumar and on turning 50, the prestigious production house turns to none other than Karunada Chakravarthy Dr. Shivarajkumar, son of the legendary actor. The official teaser of the film which is out now is trending on top on social media, and promises to be another sure shot hit for the Century Star.

  Director P Vasu seems to have raised the bars with some extra action and suspense in Ayushmanbhava along with some brilliant visual effects for an edge of the seat experience.

  With less than a month for the release, Ayushmanbhava is certainly roaring to hit the screens.

 • Shivarajakumar's Film Titled 'Ayushmanbhava'

  shivarajkumar's film titled ayushman

  The shooting for Shivarajakumar's new film being directed by senior director P Vasu is completed and the film is in the post-production stage. Now the team has announced the title of the film on the occasion of Shivarajakumar's birthday on Friday.

  The film has been titled as 'Ayushmanbhava' and not 'Anand'. Earlier, it was being said that the film has been titled as 'Anand', which is also the actor's debut film as a hero. However, the titled has been changed due to various reasons.

  'Ayushmanbhava' stars Shivarajakumar, Rachita Ram and others in prominent roles. The film is being produced by Dwarkish under Dwarkish Chitra. This is his 52nd film as a producer. P K H Das is the camerman, while Gurukiran is the music director.

 • ಆಯುಷ್ಮಾನ್ ಭವ ಗ್ರಾಫಿಕ್ಸ್ ಎಫೆಕ್ಟ್‍ಗೆ ಖರ್ಚಾಗಿದ್ದೆಷ್ಟು ಕೋಟಿ..?

  ayushaman bhava's another attraction is visual effects

  ಶಿವಣ್ಣ, ಪಿ.ವಾಸು, ದ್ವಾರಕೀಶ್ ಬ್ಯಾನರ್ ಕಾಂಬಿನೇಷನ್ನಿನ ಆಯುಷ್ಮಾನ್ ಭವ, ನವೆಂಬರ್ 1ಕ್ಕೆ ರಿಲೀಸ್ ಆಗುತ್ತಿದೆ. ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ಚಿತ್ರದ ಇಂಟ್ರೆಸ್ಟಿಂಗ್ ವಿಷಯಗಳೂ ಹೊರಬೀಳುತ್ತಿವೆ. ವಾಸು ಚಿತ್ರ ಎಂದ ಮೇಲೆ ಅಲ್ಲೊಂದು ಅದ್ಭುತ ಕಥೆ ಇರುತ್ತೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಬಾರಿ ಕಥೆಯಷ್ಟೇ ಅಲ್ಲ, ಚಿತ್ರದಲ್ಲಿ ಅದ್ಭುತವಾದ ಗ್ರಾಫಿಕ್ಸ್ ಕೂಡಾ ಇದೆಯಂತೆ.

  ಚಿತ್ರದ ಗ್ರಾಫಿಕ್ಸ್, ವಿಷ್ಯುಯಲ್ಸ್ ಎಫೆಕ್ಟ್‍ಗೆಂದೇ ಸುಮಾರು 2 ಕೋಟಿ ಖರ್ಚು ಮಾಡಿದ್ದಾರಂತೆ ನಿರ್ಮಾಪಕ ಯೋಗೀಶ್ ದ್ವಾರಕೀಶ್. ಹೆಚ್ಚೂ ಕಡಿಮೆ 1 ಗಂಟೆಯ ದೃಶ್ಯ ವೈಭವವನ್ನು ಗ್ರಾಫಿಕ್ಸಿನಿಂದಲೇ ಸಿಂಗರಿಸಿದ್ದಾರಂತೆ.

  ಶಿವಣ್ಣ ಜೊತೆ ರಚಿತಾ ರಾಮ್ ಇದೇ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಅನಂತ್‍ನಾಗ್, ನಿಧಿ ಸುಬ್ಬಯ್ಯ, ಸಾಧುಕೋಕಿಲ ಮೊದಲಾದವರು ನಟಿಸಿದ್ದಾರೆ. ಗುರುಕಿರಣ್ ಸಂಗೀತ ನಿರ್ದೇಶನದ 100ನೇ ಚಿತ್ರವಿದು. 

 • ಆಯುಷ್ಮಾನ್ ಭವ ಟೀಸರ್ ರಿಲೀಸ್ ಮುಹೂರ್ತ ಫಿಕ್ಸ್

  ayushmanbhava teaser release date fixed

  ಆಯುಷ್ಮಾನ್ ಭವ, ದ್ವಾರಕೀಶ್ ಬ್ಯಾನರಿನಲ್ಲಿ ಶಿವಣ್ಣ ನಟಿಸಿರುವ ಚಿತ್ರ. ಪಿ.ವಾಸು, ಶಿವಣ್ಣ ಜೋಡಿಗೆ ಇದು 2ನೇ ಸಿನಿಮಾ. ರಚಿತಾ ರಾಮ್ ನಾಯಕಿಯಾಗಿರುವ ಚಿತ್ರದಲ್ಲಿ ಅನಂತ್ ನಾಗ್, ಸುಹಾಸಿನಿ, ನಿಧಿ ಸುಬ್ಬಯ್ಯ ಮೊದಲಾದವರು ನಟಿಸಿರುವ ಚಿತ್ರ ನವೆಂಬರ್‍ನಲ್ಲಿ ರಿಲೀಸ್ ಆಗುತ್ತಿದೆ.

  ಹಾಡುಗಳ ಲಿರಿಕಲ್ ವಿಡಿಯೋ ಬಿಟ್ಟಿರುವ ಚಿತ್ರತಂಡ ಈಗ ಟೀಸರ್ ಬಿಡುಗಡೆಗೆ ಮುಹೂರ್ತವಿಟ್ಟಿದೆ. ಅಕ್ಟೋಬರ್ 14 ರಂದು ಮಧ್ಯಾಹ್ನ 12 ಗಂಟೆಗೆ ಟೀಸರ್ ರಿಲೀಸ್ ಆಗಲಿದೆ. ಹೇಗಿರಲಿದೆ ಸಿನಿಮಾ..? ಮತ್ತೊಂದು ಸೈಕಲಾಜಿಕಲ್ ಥ್ರಿಲ್ಲರ್..? ವೇಯ್ಟ್ ಮಾಡಿ..

 • ಆಯುಷ್ಮಾನ್ ಭವ.. ಇಲ್ಲೂ ಇದೆಯಾ ದೆವ್ವ..?

  ayushmanbhava spikes interest

  ಪಿ.ವಾಸು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರಗಳಿಗೆ ಫೇಮಸ್. ದೆವ್ವಗಳನ್ನೂ ಬಿಟ್ಟಿಲ್ಲ. ವಿಷ್ಣುಗೆ ಆಪ್ತಮಿತ್ರದಂತ ಸೈಕಲಾಜಿಕಲ್ ಥ್ರಿಲ್ಲರ್, ಆಪ್ತರಕ್ಷಕದಲ್ಲಿ ರಿಯಲ್ ದೆವ್ವದ ಚಿತ್ರ ಕೊಟ್ಟಿದ್ದ ಪಿ.ವಾಸು, ಶಿವರಾಜ್ ಕುಮಾರ್ ಅವರಿಗೆ ಶಿವಲಿಂಗ ಎಂಬ ದೆವ್ವದಂತಾ ಹಿಟ್ ಕೊಟ್ಟಿದ್ದವರು. ಈಗ ಆಯುಷ್ಮಾನ್ ಭವ ಟೀಸರ್ ಹೊರಬಿದ್ದಿದೆ. ದೆವ್ವ ಇದೆಯಾ..? ಅಥವಾ ಸೈಕಲಾಜಿಕಲ್ ಥ್ರಿಲ್ಲರ್ ಕಥೆಯಾ..? ಕುತೂಹಲ ಹುಟ್ಟಿಸುವಲ್ಲಿ ಗೆದ್ದಿದೆ ಆಯುಷ್ಮಾನ್ ಭವ ಟೀಸರ್.

  ನೀನ್ ಶಬ್ಧಾನಾ ಇಷ್ಟ ಪಡ್ತಿದ್ದೀಯ ಅಂದ್ರೆ, ನಿನ್ನ ದೇಹದಲ್ಲಿ ತಾಳ ಇನ್ನೂ ಇದೆ ಎಂದಾಯ್ತು ಅನ್ನೋ ಡೈಲಾಗ್, ಇದು ಸೈಕಲಾಜಿಕಲ್  ಥ್ರಿಲ್ಲರ್ ಇರಬಹುದಾ ಎನ್ನಿಸಿದ್ರೆ, ರಚಿತಾ ರಾಮ್ ಅವರ ಲುಕ್ ಬೇರೇನೋ ಕಥೆ ಹೇಳುತ್ತೆ. ಒಂದು ಎನರ್ಜೆಟಿಕ್ ಆ್ಯಕ್ಷನ್ ಮತ್ತು ಪಿ.ವಾಸು ಅವರ ಇಷ್ಟದ ಟ್ರೈನ್ ಪ್ರತ್ಯಕ್ಷವಾಗುತ್ತೆ.

  ಯೋಗಿ ದ್ವಾರಕೀಶ್ ನಿರ್ಮಾಣದಲ್ಲಿ ಬರುತ್ತಿರೋ ಚಿತ್ರದಲ್ಲಿ ಅನಂತ್ ನಾಗ್, ಸುಹಾಸಿನಿ, ನಿಧಿ ಸುಬ್ಬಯ್ಯ, ಸುಧಾ ಬೆಳವಾಡಿ, ಜೈಜಗದೀಶ್, ಶಿವಾಜಿಪ್ರಭು ನಟಿಸಿದ್ದಾರೆ.

 • ಆಯುಷ್ಮಾನ್ ಭವ.. ಹಾಡುಗಳೇ ವಿಸ್ಮಯ..!

  ayushmanbhava songs mesmerize evryone

  ಶಿವರಾಜ್ ಕುಮಾರ್, ಪಿ.ವಾಸು, ದ್ವಾರಕೀಶ್ ಬ್ಯಾನರ್, ಗುರುಕಿರಣ್, ರಚಿತಾ ರಾಮ್, ಅನಂತ್ ನಾಗ್ ಕಾಂಬಿನೇಷನ್ನಿನ ಸಿನಿಮಾ ಆಯುಷ್ಮಾನ್ ಭವ. ವಿಶೇಷವೆಂದರೆ, ದ್ವಾರಕೀಶ್ ಚಿತ್ರಕ್ಕೆ 50 ವರ್ಷ ಪೂರೈಸಿರುವ ಹೊತ್ತಿನಲ್ಲಿ ಬಂದಿರುವ ಚಿತ್ರದ ಮೂಲಕವೇ ಗುರುಕಿರಣ್ ಸೆಂಚುರಿ ಬಾರಿಸುತ್ತಿದ್ದಾರೆ.

  ಈಗ ಚಿತ್ರದ ಇನ್ನೊಂದು ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಸರ ಸರ..ಸರ ಧುಮುಕೊ ನೀರಿಗೆ.. ಗರಿಗೆದರುತ ಹಾರೋ ಹಕ್ಕಿಗೆ.. ಎಂಬ ಹಾಡಿದು. ಈಗಾಗಲೇ ಆಯುಷ್ಮಾನ್ ಭವ ಚಿತ್ರದ ಕೃಷ್ಣಾ ನೀ ಬೇಗನೆ ಬಾರೋ.. ಮತ್ತು ಥಕಿಟ ಥಕಿಟ ಹಾಡುಗಳ ಲಿರಿಕಲ್ ವಿಡಿಯೋ ಹೊರಬಿದ್ದಿವೆ.

  ವಿಶೇಷವೆಂದರೆ ತಮ್ಮ 100ನೇ ಚಿತ್ರದಲ್ಲಿ ಗುರುಕಿರಣ್ ಬಳಸಿರುವ ಮ್ಯೂಸಿಕ್. ಇದುವರೆಗೆ ಗುರುಕಿರಣ್ ಚಿತ್ರದಲ್ಲಿ ಕಾಣಿಸದೇ ಇರುವ ಹೊಸತನದ ಸ್ಪರ್ಶ ಆಯುಷ್ಮಾನ್ ಭವ ಚಿತ್ರದ ಹಾಡುಗಳಲ್ಲಿದೆ. ಕನ್ನಡದ ಹಳೆಯ ಸಂಗೀತ ಮಾಂತ್ರಿಕರನ್ನು ನೆನಪಿಸಿಕೊಂಡೇ 100ನೇ ಚಿತ್ರಕ್ಕೆ ಮ್ಯೂಸಿಕ್ ಕೊಟ್ಟ ಹಾಗಿದೆ ಗುರುಕಿರಣ್. ಗುನುಗುವ ಹಾಡುಗಳು.

 • ಗುರುಕಿರಣ್ 100  ಆಯುಷ್ಮಾನ್ ಭವ

  gurukiran makes century with ayushman bhava

  ಗುರುಕಿರಣ್, ಕನ್ನಡ ಚಿತ್ರರಂಗದ ಮ್ಯೂಸಿಕ್ ಟ್ರ್ಯಾಕ್ ಬದಲಿಸಿದ ಪ್ರತಿಭೆ. ಎ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಎಂಟ್ರಿ ಕೊಟ್ಟ ಗುರುಕಿರಣ್, ಈಗ 100 ಚಿತ್ರ ಪೂರೈಸಿದ್ದಾರೆ. ಗುರುಕಿರಣ್ ಪಾಲಿನ 100ನೇ ಸಿನಿಮಾ ಆಯುಷ್ಮಾನ್ ಭವ.

  ಗುರುಕಿರಣ್ ಎಂಟ್ರಿ ಕೊಟ್ಟಿದ್ದು ಎ ಚಿತ್ರದ ಮೂಲಕ. ಉಪೇಂದ್ರ, ಕರಿಯ, ಅಸುರ, ಅಪ್ಪು, ಅಭಿ, ನಂದಿ, ಕುಟುಂಬ, ಜೋಗಿ, ಆಪ್ತಮಿತ್ರ.. ಹೀಗೆ ಗುರುಕಿರಣ್ ಹಾದಿಯಲ್ಲಿ ಹಲವು ಹಿಟ್ ಚಿತ್ರಗಳಿವೆ. ಗುರುಕಿರಣ್ ಚಿತ್ರರಂಗದ ಪಯಣದಲ್ಲಿ ಅವರನ್ನು ಅತೀ ಎತ್ತರಕ್ಕೆ ಕರೆದುಕೊಂಡು ಹೋಗಿದ್ದು ಜೋಗಿ ಸಿನಿಮಾ. ಅದಾಗಿದ್ದು ಶಿವಣ್ಣನ ಜೊತೆಯಲ್ಲಿ. ಈಗ 100ನೇ ಸಿನಿಮಾ. ಮತ್ತೆ ಶಿವಣ್ಣನ ಜೊತೆ.

  100 ಚಿತ್ರಗಳಾದ ಖುಷಿ ಹಂಚಿಕೊಂಡಿರುವ ಗುರುಕಿರಣ್, ತಮಗೆ ಅವಕಾಶ ನೀಡಿದ ನಿರ್ದೇಶಕ ಉಪೇಂದ್ರ, ಸಂಗೀತ ನಿರ್ದೇಶಕ ವಿ.ಮನೋಹರ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

 • ನವೆಂಬರ್‍ಗೆ ಆಯುಷ್ಮಾನ್ ಭವ

  ayushman bhav may release in november

  ಶಿವರಾಜ್ ಕುಮಾರ್ ಇದೇ ಮೊದಲ ಬಾರಿಗೆ ದ್ವಾರಕೀಶ್ ಬ್ಯಾನರಿನಲ್ಲಿ ನಟಿಸಿರುವ ಚಿತ್ರ ಆಯುಷ್ಮಾನ್ ಭವ. ಆನಂದ್ ಎಂದು ಮೊದಲು ಟೈಟಲ್ ಇಟ್ಟುಕೊಂಡಿದ್ದ ಚಿತ್ರಕ್ಕೆ ಆಯುಷ್ಮಾನ್ ಭವ ಎಂದು ಟೈಟಲ್ ಬದಲಿಸಲಾಯ್ತು. ಶಿವಲಿಂಗ ಚಿತ್ರದ ನಂತರ ಶಿವಣ್ಣ ಮತ್ತು ನಿರ್ದೇಶಕ ಪಿ.ವಾಸು ಮತ್ತೊಮ್ಮೆ ಜೊತೆಯಾಗಿರುವ ಚಿತ್ರವಿದು.

  ಇದೇ ಮೊದಲ ಬಾರಿಗೆ ರಚಿತಾ ರಾಮ್, ಶಿವರಾಜ್‍ಕುಮಾರ್‍ಗೆ ನಾಯಕಿಯಾಗಿದ್ದಾರೆ. ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿದ್ದಾರೆ.

  ಚಿತ್ರವನ್ನು ನವೆಂಬರ್‍ನಲ್ಲಿ ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ. ಹಲವು ವಿಶೇಷಗಳ ಕಾರಣಕ್ಕೇ ಗಮನ ಸೆಳೆದಿರುವ ಆಯುಷ್ಮಾನ್ ಭವ ರಿಲೀಸ್‍ಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

 • ಸೋತಾಗ ನಾನಿದ್ದೇನೆ ಎಂದು ಬಂದ ಶಿವಣ್ಣ

  yogi dwarkish talks about ayushman bhava

  ಒಂದು ಸಿನಿಮಾ ಗೆದ್ದಾಗ ಹತ್ತಿರ ಬರುವವರೇ ಬೇರೆ.. ಆದರೆ, ಸೋತ ಬೇಸರದಲ್ಲಿರುವವರಿಗೆ ನಾನಿದ್ದೇನೆ ಎಂದು ಧೈರ್ಯ ತುಂಬುವುದೇ ಬೇರೆ. ದ್ವಾರಕೀಶ್ ಬ್ಯಾನರಿನಲ್ಲಿ ಬಂದ ಅಮ್ಮ ಐ ಲವ್ ಯು ಸಿನಿಮಾ, ಆ ಸಿನಿಮಾದ ಕಥೆ, ಸಂದೇಶ ಎಲ್ಲದರ ಬಗ್ಗೆಯೂ ಒಳ್ಳೆಯ ರಿವ್ಯೂ ಬಂತಾದರೂ ಬಾಕ್ಸಾಫೀಸ್‍ನಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿಲ್ಲ. ಅದೇ ಬೇಸರದಲ್ಲಿದ್ದವರಿಗೆ ತಕ್ಷಣ ನೆನಪಾಗಿದ್ದು ಶಿವರಾಜ್ ಕುಮಾರ್.

  ಅಮ್ಮ ಐ ಲವ್ ಯು ಚಿತ್ರದ ಆಡಿಯೋ ರಿಲೀಸ್ ಮಾಡಿದ್ದ ಶಿವಣ್ಣ, ದ್ವಾರಕೀಶ್ ಬ್ಯಾನರ್‍ನಲ್ಲಿ ಸಿನಿಮಾ ಮಾಡುವ ಇಚ್ಚೆ ವ್ಯಕ್ತಪಡಿಸಿದ್ದರು. ಅದನ್ನು ನೆನಪಿಸಿಕೊಂಡು ಶಿವಣ್ಣರನ್ನು ಕಾಂಟ್ಯಾಕ್ಟ್ ಮಾಡಿದಾಗ ಯೆಸ್ ಎಂದ ಶಿವಣ್ಣ, ಪಿ.ವಾಸು ಅವರ ಕಥೆ ಕೇಳಿದ್ದ ಶಿವಣ್ಣ, ಅದನ್ನೇ ಸಿನಿಮಾ ಮಾಡಿ ಎಂದು ಯೋಗೀಶ್ ದ್ವಾರಕೀಶ್ ಅವರಿಗೆ ಹೇಳಿದರಂತೆ.

  ಗೆದ್ದಾಗ ಚಾನ್ಸ್ ಕೊಡುವುದು ಬೇರೆ. ಸೋತವರಿಗೆ ಅವಕಾಶ ಕೊಡುವುದು ಬೇರೆ ಎನ್ನುವ ಯೋಗೀಶ್ ದ್ವಾರಕೀಶ್, ಶಿವರಾಜ್ ಕುಮಾರ್ ಗುಣವನ್ನು ಕೊಂಡಾಡಿದ್ದಾರೆ. ಕೇವಲ 20 ನಿಮಿಷದಲ್ಲಿ ಇಡೀ ಮಾತುಕತೆ ಮುಗಿಸಿದ್ದರಂತೆ ಶಿವಣ್ಣ. ಅದೇ ಆಯುಷ್ಮಾನ್ ಭವ ಆಗಿ ರಿಲೀಸ್ ಆಗೋಕೆ ರೆಡಿಯಾಗಿದೆ.

Adhyaksha In America Success Meet Gallery

Ellidhe Illitanaka Movie Gallery