` avantika shetty, - chitraloka.com | Kannada Movie News, Reviews | Image

avantika shetty,

 • ಫಾರಿನ್‍ಗೂ ಹೊರಡೋಕೆ ರಾಜು ರೆಡಿ..!

  raju kannada medium image

  ರಾಜು ಕನ್ನಡ ಮೀಡಿಯಂ ಸಿನಿಮಾ ಇದೇ ಜನವರಿ 19ರಂದು ರಾಜ್ಯದೆಲ್ಲೆಡೆ ಬಿಡುಗಡೆಯಾಗ್ತಾ ಇದೆ. ಅದಾದ ನಂತರ ಎರಡೇ ವಾರಗಳಲ್ಲಿ ವಿದೇಶಗಳಲ್ಲಿಯೂ ಬಿಡುಗಡೆ ಮಾಡೋಕೆ ಚಿತ್ರತಂಡ ನಿರ್ಧರಿಸಿದೆ. ರಾಜ್ಯದಲ್ಲಿಯೇ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ವಿದೇಶದಲ್ಲಿ ಚಿತ್ರವನ್ನು ಮಾರ್ಕೆಟ್ ಮಾಡೋಕೆ ಫಸ್ಟ್ ರ್ಯಾಂಕ್ ರಾಜು ಚಿತ್ರದ ಸಕ್ಸಸ್ ಹಾಗೂ ಸುದೀಪ್ ಎಂಬ ಎರಡು ಹೆಸರು ಸಾಕು. 

  ಸುದೀಪ್ ಅವರನ್ನು ಸ್ಫೂರ್ತಿಯಾಗಿಟ್ಟುಕೊಂಡು ಹೊರಡುವ ಕನ್ನಡ ಮಾಧ್ಯಮದಲ್ಲಿ ಓದಿದ ಹುಡುಗ, ವಿದೇಶದಲ್ಲಿ ಏನೇನೆಲ್ಲ ಸಾಧಿಸುತ್ತಾನೆ ಅನ್ನೊದು ಚಿತ್ರದ ಕಥೆ. ನವಿರಾದ ಹಾಸ್ಯನ್ನು ಎಲ್ಲಿಯೂ ಬಿಟ್ಟುಕೊಡದೆ ಚಿತ್ರಕಥೆ ಹೆಣೆಯಲಾಗಿದೆ. ನಿರ್ಮಾಪಕ, ನಾಯಕಿ ಬಿಟ್ಟರೆ ಇಡೀ ಸಿನಿಮಾದಲ್ಲಿರೋದು ಫಸ್ಟ್ ರ್ಯಾಂಕ್ ರಾಜು ಚಿತ್ರತಂಡ. ಹೀಗಾಗಿ ಇದು ಬೇರೆಯೇ ದಾಖಲೆ ಬರೆಯುತ್ತೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ ನಿರ್ಮಾಪಕ ಸುರೇಶ್.

 • ಬಗೆಹರಿಯಿತು ಆವಂತಿಕಾ ಶೆಟ್ಟಿ ಕನ್ನಡ ಮೀಡಿಯಂ ರಾಜು ವಿವಾದ

  avantika shetty producer suresh controversy ends

  ರಾಜು ಕನ್ನಡ ಮಿಡಿಯಂ ಚಿತ್ರದ ಅವಂತಿಕಾ ಶೆಟ್ಟಿ ಮತ್ತು ನಿರ್ಮಾಪಕ ಸುರೇಶ್ ನಡುವಿನ ಸಮಸ್ಯೆ ಸಂಪೂರ್ಣ ಇತ್ಯರ್ಥ ಆಗಿದೆ.

  ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ. ರಾ. ಗೋವಿಂದು ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕಥೆಯಲ್ಲಿ ಎಲ್ಲವೂ ಬಗೆಹರಿದಿದೆ. ನಿರ್ಮಾಪಕ ಸುರೇಶ್ ನಟಿ ಅವಂತಿಕಾಗೆ ಕೊಡಬೇಕಿದ್ದ ಬಾಕಿ ಹಣ ಕೊಡಲು ಒಪ್ಪಿದ್ದಾರೆ. ಅತ್ತ, ನಿರ್ಮಾಪಕರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಆವಂತಿಕಾ ಕೂಡಾ ಕೋರ್ಟ್ ಕೇಸ್ ಹಿಂದಕ್ಕೆ ಪಡೆದಿದ್ದಾರೆ

  . ಆ ಕಾಪಿಯನ್ನು ಸಾ.ರಾ. ಗೋವಿಂದು ಅವರಿಗೆ ಕೊಟ್ಟಿದ್ದಾರೆ. ತಮ್ಮ ಬಳಿಯೇ ಇಟ್ಟುಕೊಂಡಿದ್ದ ಚಿತ್ರದ ಕಾಸ್ಟೂಮ್ ಕೂಡಾ ಕೊಡಲು ಒಪ್ಪಿದ್ದಾರೆ. ಇನ್ನು ಆವಂತಿಕಾ ಶೆಟ್ಟಿ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ತಾವು ಡಬ್ ಮಾಡುತ್ತಿಲ್ಲ. ಬೇರೆಯವರು ಡಬ್ ಮಾಡಿದರೂ ನೋ ಪ್ರಾಬ್ಲಂ ಎಂದಿದ್ದಾರೆ.

  ಅಲ್ಲಿಗೆ ತಿಂಗಳ ಹಿಂದಿನ ಕನ್ನಡ ಮೀಡಿಯಂ ರಾಜು ವಿವಾದ ಬಗೆಹರಿದಂತಾಗಿದೆ.

 • ಬರ್ತಾನೆ ಬರ್ತಾನೆ ಕನ್ನಡ ರಾಜು ಬರ್ತಾನೆ

  raju kannada medium image

  ರಾಜು ಕನ್ನಡ ಮೀಡಿಯಂ. ಬಿಡುಗಡೆಗೆ ಮೊದಲೇ ಭರ್ಜರಿ ನಿರೀಕ್ಷೆ ಹುಟ್ಟಿಸಿದ್ದ ಚಿತ್ರ. ಚಿನಕುರುಳಿ ಪಟಾಕಿಯಂತಾ ಡೈಲಾಗುಗಳನ್ನು ಟ್ರೇಲರ್‍ನಲ್ಲಿ ಬಿಟ್ಟಿದ್ದ ಚಿತ್ರತಂಡ, ಪ್ರೇಕ್ಷಕರ ಕಿವಿಗೆ ಕಚಗುಳಿ ಇಟ್ಟಿತ್ತು. ಜೊತೆಗೆ ಚಿತ್ರತಂಡದ ಜೊತೆಗೆ ಕಿಚ್ಚನೂ ಸೇರಿಕೊಂಡ ಮೇಲೆ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಲ್ಲ, ನೂರು ಪಟ್ಟು ಹೆಚ್ಚಾಗಿತ್ತು. ಈಗ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಜನವರಿ 19ಕ್ಕೆ ತೆರೆಗೆ ಬರ್ತಾ ಇದೆ ರಾಜು ಕನ್ನಡ ಮೀಡಿಯಂ.

  ಇಂಗ್ಲಿಷ್ ಗೊತ್ತಿಲ್ಲದ ಹುಡುಗನ ಪಾತ್ರದಲ್ಲಿ ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ಗುರುನಂದನ್ ನಟಿಸಿದ್ದಾರೆ. ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್ ಚಿತ್ರದ ನಾಯಕಿಯರು. ಇಡೀ ಚಿತ್ರಕ್ಕೆ ಟರ್ನಿಂಗ್ ಪಾಯಿಂಟ್ ಕಿಚ್ಚ ಸುದೀಪ್. ಸುದೀಪ್ ಅವರ ಸ್ಟೈಲ್ ಅಂತೂ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹಚ್ಚುತ್ತಿದೆ. ಏನೆಂದರೂ ಜನವರಿ 19ರವರೆಗೆ ಕಾಯಬೇಕು.

 • ರಾಜರಥ ಎಂದರೆ ಅಪ್ಪುನಾ..?

  rajaratha teaser creates hawa

  ರಾಜರಥ. ಅದು ರಂಗಿತರಂಗ ಟೀಂನ ಸಿನಿಮಾ. ಅನೂಪ್ ಭಂಡಾರಿ, ನಿರೂಪ್ ಭಂಡಾರಿ, ಆವಂತಿಕಾ ಶೆಟ್ಟಿ ಮತ್ತೆ ಈ ಚಿತ್ರದಲ್ಲಿ ಒಂದಾಗಿದ್ದಾರೆ. ಆರ್ಯ, ರವಿಶಂಕರ್ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರದಲ್ಲಿ ಅಪ್ಪು ಕೂಡಾ ಇದ್ದಾರೆ.

  ಚಿತ್ರದ ಟ್ರೇಲರ್‍ನಲ್ಲಿ ಕೇಳಿಸಿರುವುದು ಪುನೀತ್ ರಾಜ್‍ಕುಮಾರ್ ಅವರ ವಾಯ್ಸ್. ಇಡೀ ಚಿತ್ರತಂಡವನ್ನು ಪರಿಚಯಿಸುವುದು ಪವರ್‍ಸ್ಟಾರ್. ಚಿತ್ರದ ಟ್ರೇಲರ್ ಸೃಷ್ಟಿಸಿರುವ ಕ್ರೇಜ್‍ನ ಜೊತೆಯಲ್ಲೇ ಟ್ರೇಲರ್‍ನ ಕೊನೆಯಲ್ಲಿ ಬರುವ ಒಂದು ಸಾಲು, ಕುತೂಹಲವನ್ನೂ ಹುಟ್ಟಿಸುತ್ತೆ.

  ರಾಜರಥ ಇನ್ & ಆ್ಯಂಡ್ ಪುನೀತ್ ರಾಜ್‍ಕುಮಾರ್ ಎನ್ನುತ್ತೆ ಆ ಸಾಲು. ಆ ಸಾಲಿನ ಅರ್ಥ ಏನು..? ಪುನೀತ್ ರಾಜ್‍ಕುಮಾರ್, ಚಿತ್ರದದಲ್ಲಿ ಕೇವಲ ನಿರೂಪಕರಾ..? ಅವರೂ ಒಂದು ಪಾತ್ರವಾಗಿದ್ದಾರಾ..? ಚಿತ್ರದ ಟೈಟಲ್ ರಾಜರಥ ಎಂದರೆ ಪುನೀತ್ ರಾಜ್‍ಕುಮಾರ್ ಅವರೇನಾ..? ಕುತೂಹಲ ಹುಟ್ಟಿಸಿರುವ ರಾಜರಥ, ಉತ್ತರಗಳನ್ನು ಸದ್ಯಕ್ಕೆ ಕೊಡುತ್ತಿಲ್ಲ. ಟ್ರೇಲರ್ ದೂಳೆಬ್ಬಿಸುತ್ತಿದೆ.

 • ರಾಜರಥದ ಮೇಲೆ ಭಾರೀ ನಿರೀಕ್ಷೆ ಏಕೆ ಗೊತ್ತಾ..?

  lot of expectations over rajaratha

  ರಾಜರಥ ಚಿತ್ರದ ಹೀರೋ ನಿರೂಪ್ ಭಂಡಾರಿಗೆ ಇದು ಕೇವಲ 2ನೇ ಸಿನಿಮಾ. ನಿರ್ದೇಶಕ ಅನೂಪ್ ಭಂಡಾರಿಗೂ ಇದು 2ನೇ ಸಿನಿಮಾ. ಹೀಗಿದ್ದರೂ ಚಿತ್ರದ ಬಗ್ಗೆ ನಿರೀಕ್ಷೆಗಳು ಮೌಂಟ್ ಎವರೆಸ್ಟ್ ರೇಂಜ್‍ನಲ್ಲಿರೋಕೆ ಕಾರಣಗಳಿವೆ. 

  ರಾಜರಥದಲ್ಲಿರೋದು ರಂಗಿತರಂಗ ಟೀಂ. ಬಾಹುಬಲಿಗೆ ಸಡ್ಡು ಹೊಡೆದು ಗೆದ್ದಿದ್ದ ಚಿತ್ರತಂಡವಾಗಿರೋ ಕಾರಣ, ಚಿತ್ರದ ಮೇಲೆ ನಿರೀಕ್ಷೆ ಸಹಜವಾಗಿಯೇ ಇದೆ.

  ಚಿತ್ರಕ್ಕೆ ಧ್ವನಿ ನೀಡಿರೋದು ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್. ರಾಜರಥ ಎನ್ನುವ ಬಸ್‍ನ ಪಾತ್ರಕ್ಕೆ ಧ್ವನಿಯಾಗಿದ್ದಾರೆ ಪುನೀತ್. ಬಸ್‍ನ ಹೆಸರನ್ನೇ ಚಿತ್ರಕ್ಕಿಟ್ಟಿರುವ ಕಾರಣ, ಕುತೂಹಲ ಜಾಸ್ತಿಯೇ ಇದೆ.

  ಇದೇ ಮೊದಲ ಬಾರಿಗೆ ಚಿತ್ರದಲ್ಲಿ ತಮಿಳು ನಟ ಆರ್ಯ ನಟಿಸಿದ್ದಾರೆ. ಕನ್ನಡದಲ್ಲಿ ಇದು ಅವರಿಗೆ ಮೊದಲ ಸಿನಿಮಾ. ಹೀಗಾಗಿ ಇದೂ ಕೂಡಾ ಚಿತ್ರವನ್ನು ನೋಡಲು ಪ್ರೇರೇಪಿಸುತ್ತಿದೆ.

  ರಾಜರಥ ಚಿತ್ರದಲ್ಲಿ ಕನ್ನಡದಲ್ಲಷ್ಟೇ ಅಲ್ಲ, ತೆಲುಗಿನಲ್ಲಿ ರಾಜರಥಂ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ. ಎರಡೂ ಭಾಷೆಗೆ ಪ್ರತ್ಯೇಕವಾಗಿ ಶೂಟ್ ಮಾಡಲಾಗಿದೆ.

  ತೆಲುಗಿನಲ್ಲಿ ಬಸ್‍ಗೆ ಧ್ವನಿಯಾಗಿರೋದು ಬಾಹುಬಲಿಯ ಬಲ್ಲಾಳದೇವ ರಾಣಾ ದಗ್ಗುಬಾಟಿ.

  ರಂಗಿತರಂಗ ಚಿತ್ರದ ಸಕ್ಸಸ್‍ನ್ನು ಮರೆತು, ಈ ಚಿತ್ರ ನಿರ್ಮಿಸಿದ್ದೇವೆ ಎನ್ನುತ್ತಿದೆ ಚಿತ್ರತಂಡ. ಹೊಸತನದ ಕಥೆ, ಹೊಸ ಲೊಕೇಷನ್‍ಗಳು, ಹೊಸ ಶೈಲಿಯ ಸಂಗೀತ... ಗಮನ ಸೆಳೆಯುತ್ತಿದೆ. ಒಂದು ಚಿತ್ರ ನೋಡಲು ಇನ್ನೇನು ಬೇಕು..?

 • ವಿದೇಶಕ್ಕೆ ಕನ್ನಡ ರಾಜು ಯಾತ್ರೆ..!

  raju kannada medium flies foreign

  ಕರ್ನಾಟಕದಲ್ಲಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಕೊಡುತ್ತಿರುವ ರಾಜು ಕನ್ನಡ ಮೀಡಿಯಂ ಚಿತ್ರ ವಿದೇಶಕ್ಕೆ ಹಾರೋಕೆ ಸಿದ್ಧವಾಗಿದೆ. ಕೆ.ಎ.ಸುರೇಶ್ ನಿರ್ಮಾಣದ ರಾಜು ಕನ್ನಡ ಮೀಡಿಯಂ ಚಿತ್ರಕ್ಕೆ ಸುದೀಪ್ ಸ್ಟಾರ್‍ಪಟ್ಟವನ್ನೇ ಕೊಟ್ಟಿದ್ದರು. ಗುರುನಂದನ್, ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್, ಚಿಕ್ಕಣ್ಣ ನಟಿಸಿರುವ ರಾಜು ಕನ್ನಡ ಮೀಡಿಯಂ ವಿದೇಶಿ ಮಾರುಕಟ್ಟೆಗೆ ಲಗ್ಗೆಯಿಡೋಕೆ ಹೊರಟಿದೆ.

  ಕೆನಡ, ಸಿಂಗಾಪುರ್, ಆಸ್ಟ್ರೇಲಿಯ ಹಾಗೂ ಅಮೆರಿಕಾಗಳಲ್ಲಿ 30 ಚಿತ್ರಮಂದಿರಗಳಲ್ಲಿ ರಾಜು ಕನ್ನಡ ಮೀಡಿಯಂ ಪ್ರದರ್ಶನವಾಗುತ್ತಿದೆ. ಇಡೀ ವಾರ ಯಾವುದೇ ದಿನ ಬೇಕಾದರೂ ಸಿನಿಮಾ ನೋಡಬಹುದು. ಮಲ್ಟಿಪ್ಲೆಕ್ಸ್‍ಗಳನ್ನು ಇಡೀ ವಾರಕ್ಕೆ ಬುಕ್ ಮಾಡಲಾಗಿದೆ ಎಂದು ಹೇಳಿದೆ ಚಿತ್ರತಂಡ.

   

   

#

Adi Lakshmi Purana Movie Gallery

Rightbanner02_butterfly_inside

Yaana Movie Gallery