` trivikrama, - chitraloka.com | Kannada Movie News, Reviews | Image

trivikrama,

  • ವಿಕ್ರಂ ರವಿಚಂದ್ರನ್ ಸ್ವಾಗತಕ್ಕೆ ಒಂದಾದ ಸ್ಯಾಂಡಲ್‍ವುಡ್

    ವಿಕ್ರಂ ರವಿಚಂದ್ರನ್ ಸ್ವಾಗತಕ್ಕೆ ಒಂದಾದ ಸ್ಯಾಂಡಲ್‍ವುಡ್

    ಕನಸುಗಾರ ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಂ ಅವರನ್ನು ಸ್ವಾಗತಿಸಲು ಇಡೀ ಚಿತ್ರರಂಗ ಸಜ್ಜಾಗಿ ನಿಂತಿದೆ. ಜೂನ್ 19ಕ್ಕೆ ವಿಕ್ರಂ ಸ್ವಾಗತಕ್ಕೆ ಸ್ಯಾಂಡಲ್‍ವುಡ್ ದಿಗ್ಗಜರೆಲ್ಲ ಒಂದಾಗಿ ಬರುತ್ತಿದ್ದಾರೆ. ಜೂನ್ 24ಕ್ಕೆ ತ್ರಿವಿಕ್ರಮ ಮೂವಿ ರಿಲೀಸ್ ಆಗುತ್ತಿದೆ. ಅದಕ್ಕೆ ಮುನ್ನ ನಾಯಂಡಹಳ್ಳಿ ಸಮೀಪದಲ್ಲಿರೋ ನಂದಿ ಲಿಂಕ್ಸ್ ಗ್ರೌಂಡ್‍ನಲ್ಲಿ ಪ್ರೀ-ರಿಲೀಸ್ ಈವೆಂಟ್ ನಡೆಯಲಿದೆ.

    ಶಿವಣ್ಣ, ಡಾಲಿ ಧನಂಜಯ್, ಲೂಸ್ ಮಾದ ಯೋಗಿ, ಶರಣ್, ಜೋಗಿ ಪ್ರೇಮ್, ನೀನಾಸಂ ಸತೀಶ್, ಅಜೇಯ್ ರಾವ್, ಡಾರ್ಲಿಂಗ್ ಕೃಷ್ಣ, ಶ್ರೀನಗರ ಕಿಟ್ಟಿ, ರವಿಶಂಕರ್ ಗೌಡ, ವಸಿಷ್ಠ ಸಿಂಹ, ಸುಮನ್, ರಕ್ಷಿತಾ ಪ್ರೇಮ್, ತಾರಾ ಅನುರಾಧಾ ಇರಲಿದ್ದಾರೆ. ವಿಕ್ರಂ ಸಿನಿಮಾಗೆ ಶುಭ ಕೋರಲು ಅಪ್ಪ ರವಿಚಂದ್ರನ್, ಅಣ್ಣ ಮನುರಂಜನ್, ನಾಯಕಿ ನಿಶ್ವಿಕಾ ನಾಯ್ಡು ಸೇರಿದಂತೆ ಇಡೀ ಚಿತ್ರತಂಡ ಇರಲಿದೆ. ಈಗಾಗಲೇ ವಿಕ್ರಂ ಚಿತ್ರದ ಹಾಡನ್ನು ಶಿವಣ್ಣ ಪ್ರಮೋಟ್ ಮಾಡಿದ್ದಾರೆ.

    ಸಹನಾ ಮೂರ್ತಿ ನಿರ್ದೇಶನದ ಸಿನಿಮಾಗೆ ಸೋಮಣ್ಣ ಟಾಕೀಸ್ ಬಂಡವಾಳ ಹೂಡಿದೆ. ರಾಮ್ಕೋ ಸೋಮಣ್ಣ ನಿರ್ಮಾಪಕರು. ಈಗಾಗಲೇ ಚಿತ್ರದ ಹಾಡುಗಳು ಸೌಂಡ್ ಮಾಡುತ್ತಿವೆ.