` trivikrama, - chitraloka.com | Kannada Movie News, Reviews | Image

trivikrama,

  • 'Trivikrama' Teaser To Be Launched Today

    trivikrama teaser to be launched on today

    The first look poster of Ravichandran's son Vikram's debut film 'Trivikrama' was launched recently. Now the teaser of the film is all set to be launched on Saturday (August 10th) evening in Bangalore.

    The teaser release event is hell at the G T World Mall in Magadi Road in Bangalore. Ravichandran, Shivarajakumar, Darshan, Ganesh, Rachita Ram and Sanvi Srivatsav will be launching the teaser officially. Many other celebrities from Sandalwood are expected to be a part of the event.

    'Trivikrama' is being written and directed by Sahana Murthy. Akanksha Singh is the heroine. Apart from that, Akshara Gowda, Sadhu Kokila, Tulasi Shivamani, Chikkanna, Suchendraprasad and others play prominent roles in the film.

  • Akanksha To Star Opposite Vikram In 'Trivikrama'

    akanksha to star opposite vikram

    Ravichandran's son Trivikram debut film 'Trivikrama' is scheduled to be launched on the 10th of August. Meanwhile, the heroine for Vikram has been selected and Mumbai girl Akanksha has been roped in as the heroine of the film.

    'Trivikrama' is being written and directed by Sahana Murthy, who had earlier directed 'Rose' and Shivarajakumar starrer 'Mass Leader'. Apart from Vikram and Akanksha, Sadhu Kokila, Tulasi Shivamani, Chikkanna, Suchendraprasad and others play prominent roles in the film. 

    'Trivikrama' is being produced by Somanna and Suresh. Arjun Janya is the music director, while Santhosh Rai Pathaje is the cinematographer. The film will be shot in Bangalore, Dandeli, Rajasthan, Bangkok and other places.

  • First Look Of 'Trivikrama' Released

    first look of trivikrama released

    Actor-director Ravichandran on Wednesday released the first look poster of his son Vikram's debut film 'Trivikrama', which is all set to be launched on the 09thh of August.

    The photo and teaser shoot of the film was done recently. But the team has kept the first look strictly under wraps. Ravichandran on Wednesday officially released the first look of the film. Actor Vikram, director Sahana Murthy, producer Santhosh Rai Pathaje and others were present at the occasion.

    'Trivikrama' is being written and directed by Sahana Murthy. Akanksha Singh is the heroine. Apart from that, Akshara Gowda, Sadhu Kokila, Tulasi Shivamani, Chikkanna, Suchendraprasad and others play prominent roles in the film. 'Trivikrama' is being produced by Somanna and Suresh. Arjun Janya is the music director, while Santhosh Rai Pathaje is the cinematographer.

  • Rohith Roy Joins The Team Of 'Trivikrama'

    rohith roy joins the team of trivikrama

    Well known Bollywood actor Rohith Roy has joined the team of 'Trivikrama' and this is the first time that Rohith is acting in a South film.

    Rohith had acted in films like 'Kabil', 'Ek Khiladi Ek Haseena', 'Apartment' 'pLan' and other films. He had also acted in many television serials including 'Swabhiman' and 'Des Mein Nikla Hoga Chand'. Rohith will be playing a negative role in the film and has already given a green signal to act in the film

    'Trivikrama' is being written and directed by Sahana Murthy. Akanksha Singh is the heroine. Apart from that, Akshara Gowda, Sadhu Kokila, Tulasi Shivamani, Chikkanna, Suchendraprasad and others play prominent roles in the film. Arjun Janya is the music composer, while Santhosh Rai Pathaje is the cinematographer.

     

  • Vikram Gets A Gift On His Birthday ... Guess what?

    vikram gets a gift on his birthday

    V Ravichandran's second son Vikram is celebrating his birthday today. To mark the occasion, the team of his debut film as a hero 'Trivikrama' has gifted him a teaser of the movie.

    The teaser was released today morning on the A2 Music channel on YouTube. Within a span of six hours, the teaser has garnered more than 75 thousand views. Vikram is seen in a mass look in this film and many have commented about his presence and the bgm in the teaser.

    'Trivikrama' is almost complete except for some songs and the team intends to complete the shooting soon. The film is written and directed by Sahana Murthy. Akanksha Singh is the heroine. Apart from that, Akshara Gowda, Sadhu Kokila, Tulasi Shivamani, Chikkanna, Suchendraprasad and others play prominent roles in the film.

  • Vikram's Film Likely To Be Titled As 'Trivikrama'

    vikram's new film titled trivikrama

    Ravichandran's second son Vikram alias Vicky is all set to make his debut as a hero and the film is scheduled to be launched on the Varamahalakshmi festival on August 09th. Meanwhile, there is a buzz that the film is likely to be titled as 'Trivikrama'.

    The new film is being written and directed by Sahana Murthy, who had earlier directed 'Rose' and Shivarajakumar starrer 'Mass Leader'. This is his third film as a director and Sahana Murthy has written the story and is launching Vikram through this film. Sahana Murthy is in search of a new heroine for this film.

    The new film is being produced by Somanna and Suresh. Arjun Janya is the music director, while Santhosh Rai Pathaje is the cinematographer.

  • ಅಪ್ಪಂಗೂ ಶಕುಂತಲ.. ಮಗನಿಗೂ ಶಕುಂತಲಾ.. : ತ್ರಿವಿಕ್ರಮ ಶೇಕ್ ಶೇಕ್

    ಅಪ್ಪಂಗೂ ಶಕುಂತಲ.. ಮಗನಿಗೂ ಶಕುಂತಲಾ.. : ತ್ರಿವಿಕ್ರಮ ಶೇಕ್ ಶೇಕ್

    ವಿಕ್ರಂ ರವಿಚಂದ್ರನ್ ನಟನೆಯ ಮೊದಲ ಸಿನಿಮಾ ತ್ರಿವಿಕ್ರಮ. ಇದೇ ಜೂನ್ 24ಕ್ಕೆ ರಿಲೀಸ್ ಆಗುತ್ತಿದೆ. ಚಿತ್ರದ ಪ್ಲೀಸ್ ಮಮ್ಮಿ ಹಾಡು ಹಿಟ್ ಆಗಿದ್ದು, ಈಗ ಇನ್ನೊಂದು ಹಾಡು ರಿಲೀಸ್ ಆಗಿದೆ. ಶೇಕ್ ಯುವರ್ ಬಾಡಿ ಶಕುಂತಲ.. ಹಾಡು.

    ಹಾಡಿನಲ್ಲಿ ವಿಕ್ರಂ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಆಕಾಂಕ್ಷಾ ಶರ್ಮ ಮುದ್ದು ಮುದ್ದಾಗಿ ಕಾಣುತ್ತಾರೆ. ಈ ಹಾಡಿಗೆ ಸಾಹಿತ್ಯ ಯೋಗರಾಜ್ ಭಟ್ ಅವರದ್ದು. ನಕಾಶ್ ಅಜೀಝ್ ಮತ್ತು ಐಶ್ವರ್ಯಾ ರಂಗರಾಜ್ ಹಾಡಿರುವ ಹಾಡಿಗೆ ಸಂಗೀತ ನೀಡಿರುವುದು ಅರ್ಜುನ್ ಜನ್ಯಾ.

    ಸಹನಾ ಮೂರ್ತಿ ನಿರ್ದೇಶನದ ಸಿನಿಮಾ ಜೂನ್ 24ಕ್ಕೆ ರಿಲೀಸ್ ಆಗುತ್ತಿದೆ. ಲವ್ ಸ್ಟೋರಿ ಮೂಲಕವೇ ವಿಕ್ರಂ ರವಿಚಂದ್ರನ್ ಎಂಟ್ರಿ ಕೊಡುತ್ತಿದ್ದಾರೆ. ರಾಮ್ಕೋ ಸೋಮಣ್ಣ ನಿರ್ಮಾಣದ ಚಿತ್ರ ಈಗ ಪ್ರಚಾರ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ.

    ಅಂದಹಾಗೆ ರವಿಚಂದ್ರನ್ ಸಿನಿಮಾ ಎಂದರೆ ನೆನಪಾಗುವ ಹಲವು ನೆನಪುಗಳಲ್ಲಿ ಶಕುಂತಲೆಯೂ ಇದ್ದಾಳೆ. ಪ್ರೇಮಲೋಕದ ನೀನಾ ಶಕುಂತಲ.. ಅನ್ನೋ ಲೈನು ಇಷ್ಟು ವರ್ಷಗಳ ನಂತರವೂ ಪ್ರೇಕ್ಷಕರ ಎದೆಯಲ್ಲಿ ಹಚ್ಚಹಸಿರು. ಈಗ ವಿಕ್ರಂ ಕೂಡಾ ಶಕುಂತಲೆಯ ನೆನಪಲ್ಲೇ ಹಾಡಿ ಕುಣಿಯುತ್ತಿದ್ದಾರೆ. ಶಕುಂತಲೆಗೆ ಮಾತ್ರ.. ವಯಸ್ಸೇ ಆಗಿಲ್ಲ.

  • ಆಕಾಂಕ್ಷಾ ಡ್ಯಾನ್ಸ್ ಬೊಂಬಾಟ್ : ಯಾರಿದು ತ್ರಿವಿಕ್ರಮನ ಚೆಲುವೆ?

    ಆಕಾಂಕ್ಷಾ ಡ್ಯಾನ್ಸ್ ಬೊಂಬಾಟ್ : ಯಾರಿದು ತ್ರಿವಿಕ್ರಮನ ಚೆಲುವೆ?

    ತ್ರಿವಿಕ್ರಮ ಚಿತ್ರದ ಹಾಡು ನೋಡಿದವರು ಬೆರಗಾಗುತ್ತಿರುವುದು ವಿಕ್ರಂ ಮತ್ತು ಆಕಾಂಕ್ಷಾ ಶರ್ಮಾ ಡ್ಯಾನ್ಸ್ಗೆ. ಹಾಡಿನಲ್ಲಿ ಇಬ್ಬರೂ ಸಖತ್ ಸ್ಟೆಪ್ ಹಾಕಿದ್ದಾರೆ. ವಿಕ್ರಂ ಅವರೇನೋ ಕನ್ನಡಿಗರಿಗೆ ಪರಿಚಿತ ಮುಖ. ಮೊದಲನೇ ಸಿನಿಮಾವಾದರೂ, ರವಿಚಂದ್ರನ್ ಅವರ 2ನೇ ಮಗ ಅನ್ನೋ ಪ್ರೀತಿ ಕನ್ನಡಿಗರದ್ದು. ಅಷ್ಟೇ ಕುತೂಹಲ ಮೂಡಿಸಿರುವುದು ಆಕಾಂಕ್ಷಾ ಶರ್ಮಾ.

    ಈ ಆಕಾಂಕ್ಷಾ ಶರ್ಮಾ ಯಾರೆಂದು ಹುಡುಕಿದರೆ ಉತ್ತರ ಜುಗ್ನು ವಿತ್ ಬಾದ್ಷಾ ಮತ್ತು ಟೈಗರ್ ಶ್ರಾಫ್ ಜೊತೆಗಿನ ಎರಡು ಹಾಡುಗಳಲ್ಲಿದೆ. ಅದ್ಭುತ ನೃತ್ಯಗಾರ್ತಿಯಾಗಿರೋ ಆಕಾಂಕ್ಷಾ ಟೈಗರ್ ಶ್ರಾಫ್ ಜೊತೆಗೆ ಸರಿಸಮನಾಗಿ ಹೆಜ್ಜೆ ಹಾಕಿದವರು. ಜಾಹೀರಾತುಗಳಲ್ಲಿ ನಟಿಸುತ್ತಿದ್ದ ಆಕಾಂಕ್ಷಾ ಶರ್ಮಾಗೆ ಇದು ಮೊದಲ ಸಿನಿಮಾ.

    ನಿರ್ದೇಶಕರು ನನ್ನನ್ನು ಆಯ್ಕೆ ಮಾಡಿದ್ದೇ ನನ್ನ ನೃತ್ಯ ನೋಡಿ. ಚಿತ್ರದಲ್ಲಿ ಹೀರೋ ವಿಕ್ರಂ ಅವರಷ್ಟೇ ಅಲ್ಲದೆ, ನನಗೂ ಒಳ್ಳೆಯ ಅವಕಾಶವಿದೆ. ನಟನೆಗೆ ಸ್ಕೋಪ್ ಇದೆ. ಚಿತ್ರದಲ್ಲಿ ನನ್ನ ಅಭಿನಯ ಮತ್ತು ನೃತ್ಯ ಎರಡನ್ನೂ ಪ್ರದರ್ಶಿಸಲು ಅವಕಾಶ ಸಿಕ್ಕಿದೆ ಎಂದಿದ್ದಾರೆ ಆಕಾಂಕ್ಷಾ ಶರ್ಮ. ಸಹನಾ ಮೂರ್ತಿ ನಿರ್ದೇಶನದ ಸಿನಿಮಾ ವಿಕ್ರಂ, ಇದೇ ವಾರ ರಿಲೀಸ್ ಆಗುತ್ತಿದೆ.

  • ಆ್ಯಕ್ಷನ್ ಹೀರೋ ಆಗಿ ಎಂಟ್ರಿ ಕೊಟ್ಟ ತ್ರಿವಿಕ್ರಮ್

    vikram's mass look in trivikrama

    ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಪುತ್ರ ವಿಕ್ರಮ್, ಆ್ಯಕ್ಷನ್ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ವಿಕ್ರಮ್ ಅಭಿನಯದ ಚೊಚ್ಚಲ ಚಿತ್ರ ತ್ರಿವಿಕ್ರಮ್ ಚಿತ್ರದ ಟೀಸರ್ ಹೊರಬಂದಿದ್ದು, ಸಾಹಸ ದೃಶ್ಯಗಳಲ್ಲಿ ಗಮನ ಸೆಳೆದಿದ್ದಾರೆ ವಿಕ್ರಮ್.

    ಸಹನಾ ಮೂರ್ತಿ ನಿರ್ದೇಶನದ ತ್ರಿವಿಕ್ರಮ್ ಚಿತ್ರಕ್ಕೆ ರಾಮ್ಗೋ ಸೋಮಣ್ಣ ನಿರ್ಮಾಪಕರು. ವಿಕ್ರಮ್ ಬರ್ತ್ ಡೇ ವಿಶೇಷವಾಗಿ ಟೀಸರ್ ಬಿಟ್ಟಿರೋ ಕಾರಣದಿಂದ, ಬೇರೆ ಕಲಾವಿದರನ್ನು ಹೈಲೈಟ್ ಮಾಡಿಲ್ಲ. ಚಿತ್ರದ ಶೇ.95ರಷ್ಟು ಚಿತ್ರೀಕರಣ ಮುಗಿದಿದ್ದು, 2021ರ ಸಂಕ್ರಾಂತಿ ಅಥವಾ ಪ್ರೇಮಿಗಳ ದಿನಕ್ಕೆ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಮಾಡಿದೆಯಂತೆ ಚಿತ್ರತಂಡ.

    ವಿಕ್ರಮ್ ಎದುರು ಆಕಾಂಕ್ಷಾ ಶರ್ಮಾ ಚಿತ್ರದ ನಾಯಕಿಯಾಗಿದ್ದಾರೆ. ಅಕ್ಷರಾ ಗೌಡ, ತುಳಸಿ ಶಿವಮಣಿ, ಚಿಕ್ಕಣ್ಣ, ಸಾಧುಕೋಕಿಲ ಮೊದಲಾದವರು ನಟಿಸಿರುವ ಚಿತ್ರಕ್ಕೆ ಸಂಗೀತ ನೀಡಿರುವುದು ಅರ್ಜುನ್ ಜನ್ಯಾ.

  • ಈ ವಾರ 4 ಸಿನಿಮಾ ರಿಲೀಸ್ : ಯಾವ್ ಸಿನಿಮಾ ನೋಡ್ತೀರಾ ?

    ಈ ವಾರ 4 ಸಿನಿಮಾ ರಿಲೀಸ್ : ಯಾವ್ ಸಿನಿಮಾ ನೋಡ್ತೀರಾ ?

    ಒಂದು ಕಡೆ 777 ಚಾರ್ಲಿ ಸೂಪರ್ ಹಿಟ್ ಆಗಿದೆ. ಸ್ಟಾರ್ ಸಿನಿಮಾವೊಂದು ಹಿಟ್ ಆದಾಗ ಉಳಿದ ಚಿತ್ರಗಳಿಗೆ ಅದು ಕೊಡುವ ಹುಮ್ಮಸ್ಸೇ ಬೇರೆ. ಅದರಲ್ಲೂ ಚಾರ್ಲಿ ಹೀರೋ ಬೇಸ್ ಇರೋ ಕಮರ್ಷಿಯಲ್ ಎಂಟರ್‍ಟೈನರ್ ಅಲ್ಲ. ಪಕ್ಕಾ ಕಂಟೆಂಟ್ ಸಿನಿಮಾ. ಚಾರ್ಲಿ ಥಿಯೇಟರುಗಳಲ್ಲಿ ಕಚ್ಚಿಕೊಂಡಿರುವ ಹೊತ್ತಿನಲ್ಲೇ ಈ ವಾರ 4 ಸಿನಿಮಾ ರಿಲೀಸ್ ಆಗುತ್ತಿವೆ.

    ತ್ರಿವಿಕ್ರಮ : ವಿಕ್ರಂ ರವಿಚಂದ್ರನ್ ಮೊದಲ ಸಿನಿಮಾ ತ್ರಿವಿಕ್ರಮ. ಸಹನಾ ಮೂರ್ತಿ ನಿರ್ದೇಶನದ ಸಿನಿಮಾ ಇದು.  ಪಕ್ಕಾ ಲವ್ ಸ್ಟೋರಿ. ವಿಕ್ರಂ ಎದುರು ಆಕಾಂಕ್ಷಾ ಶರ್ಮಾ ಹೀರೋಯಿನ್ ಆಗಿದ್ದಾರೆ.

    ಹರಿಕಥೆ ಅಲ್ಲ ಗಿರಿಕಥೆ : ಇದು ರಿಷಬ್ ಶೆಟ್ಟಿ ಹೀರೋ ಆಗಿರುವ ಸಿನಿಮಾ. ಗರುಡ ಗಮನದ ನಂತರ ಮತ್ತೊಮ್ಮೆ ತೆರೆ ಮೇಲೆ ಬರುತ್ತಿದ್ದಾರೆ. ಹೀರೋ ಆಗಿ. ಇದೊಂದು ಕಂಪ್ಲೀಟ್ ಎಂಟರ್‍ಟೈನರ್ ಎಂದು ರಿಷಬ್ ಶೆಟ್ಟಿ ಹೇಳಿಬಿಟ್ಟಿದ್ದಾರೆ. ರಿಲೀಸ್ ಆಗಿರುವ ಹಾಡು ಮತ್ತು ಟ್ರೇಲರ್ ಎರಡೂ ಇದೇ ರೀತಿ ಇವೆ.

    ತುರ್ತು ನಿರ್ಗಮನ : ಚಿತ್ರದ ಕಥೆ ಮತ್ತು ಕಂಟೆಂಟ್ ಅಷ್ಟೇ ಅಲ್ಲ, ನಿರೂಪಣೆಯೂ ಕೊಡ ಹೊಸದಾಗಿದೆ ಎನ್ನುವ ಫೀಲ್ ಕೊಡುತ್ತಿದೆ ಚಿತ್ರದ ಟ್ರೇಲರ್. ತಮ್ಮ 36 ವರ್ಷಗಳ ಸಿನಿ ಲೈಫಲ್ಲಿ ಇಂತಾ ಸಿನಿಮಾ ಮಾಡಿಲ್ಲ ಅನ್ನೋ ಕಾಂಪ್ಲಿಮೆಂಟ್ ಕೊಟ್ಟಿರೋದು ಸುಧಾರಾಣಿ. ಸುನಿಲ್ ರಾವ್ ರಿಟನ್ರ್ಸ್ ಅನ್ನೋದು ಚಿತ್ರದ ಇನ್ನೊಂದು ಹೈಲೈಟ್.

    ಬುಡ್ಡೀಸ್ : ಇದು ಒಂದು ರೀತಿ ಹೊಸಬರ ಸಿನಿಮಾ. ಹಾಗಂತ ಸಂಪೂರ್ಣ ಹೊಸಬರೂ ಅಲ್ಲ. ಹೀರೋ ಕಿರಣ್ ರಾಜ್ ಕನ್ನಡತಿ ಧಾರಾವಾಹಿಯ ಮೂಲಕ ಗೊತ್ತು. ನಾಯಕಿ ಸಿರಿ ಪ್ರಹ್ಲಾದ್ ಈಗಾಗಲೇ ಒಂದು ಶಿಕಾರಿಯ ಕಥೆಯಲ್ಲಿ ಕಾಣಿಸಿಕೊಂಡಿದ್ದಾರೆ. ಗುರುತೇಜ್ ಶೆಟ್ಟಿ ಚಿತ್ರದ ನಿರ್ದೇಶಕ. ಸ್ನೇಹಕ್ಕೆ ಸಾವಿಲ್ಲ ಅಣ್ತಮ್ಮ ಅನ್ನೋ ಟ್ಯಾಗ್‍ಲೈನಿನಲ್ಲೇ ಇಡೀ ಚಿತ್ರದ ಬಗ್ಗೆ ಒಂದು ಕಲ್ಪನೆ ಮಾಡಿಕೊಳ್ಳಬಹುದು.

  • ಏಕ್.. ದೋ.. ತೀನ್.. ಚಾರ್.. 4 ಸಿನಿಮಾ ಧನ್‍ಧನಾಧನ್

    ಏಕ್.. ದೋ.. ತೀನ್.. ಚಾರ್.. 4 ಸಿನಿಮಾ ಧನ್‍ಧನಾಧನ್

    ಈ ವಾರ 4 ಸಿನಿಮಾ ಸಖತ್ ಸೌಂಡ್ ಮಾಡುತ್ತಿವೆ. ಒಂದೊಂದು ಚಿತ್ರವೂ ಒಂದೊಂದು ರೀತಿಯಲ್ಲಿ. ಕಾನ್ಸೆಪ್ಟ್ ಬೇರೆ.. ಡೈರೆಕ್ಟರ್ ಬೇರೆ.. ಕಥೆಯ ಆತ್ಮವೇ ಬೇರೆ..

    ಹರಿಕಥೆ ಅಲ್ಲ ಗಿರಿಕಥೆ : ಇದು ರಿಷಬ್ ಶೆಟ್ಟಿ ಸಿನಿಮಾ. ಹಾಗಂತ ಈ ಚಿತ್ರಕ್ಕೆ ಅವರು ಡೈರೆಕ್ಟರ್ ಅಲ್ಲ, ಹೀರೋ ಮಾತ್ರ. ಅನಿರುದ್ಧ್ ಮಹೇಶ್ ಮತ್ತು ಕರಣ್ ಅನಂತ್ ಎಂಬ ಇಬ್ಬರು ಹೊಸಬರಿಗೆ ಡೈರೆಕ್ಟರ್ ಕ್ಯಾಪ್ ತೊಡಿಸಿದ್ದಾರೆ. ವಿಡಂಬನೆ ಮತ್ತು ಹಾಸ್ಯದ ಟ್ರ್ಯಾಕ್‍ನಲ್ಲೇ ಸಾಗುವ ಕಥೆಯಲ್ಲಿ ರಿಷಬ್ ಎದುರು ರಚನಾ ಇಂದರ್ ಮತ್ತು ತಪಸ್ವಿನಿ ಪೂಣಚ್ಚ ಹೀರೋಯಿನ್ಸ್. ಹೊನ್ನವಳ್ಳಿ ಕೃಷ್ಣ ಮತ್ತು ಪ್ರಮೋದ್ ಶೆಟ್ಟಿ ಇನ್ನೆರಡು ಪ್ರಧಾನ ಪಾತ್ರದಲ್ಲಿದ್ದಾರೆ. ವಾಸುಕಿ ವೈಭವ್ ಹಾಡುಗಳು ಸಖತ್ ಹಿಟ್ ಆಗಿವೆ.

    ತುರ್ತು ನಿರ್ಗಮನ : ಒಬ್ಬ ವ್ಯಕ್ತಿ ಸಡನ್ ಆಗಿ ಸಾಯುತ್ತಾನೆ. ಸತ್ತ ಮೇಲೆ ಅವನಿಗೆ ಮತ್ತೆ ಬದುಕುವ ಆದರೆ ಮೂರೇ ಮೂರು ದಿನ ಮಾತ್ರ ಬದುಕುವ ಅವಕಾಶ ಸಿಗುತ್ತದೆ. ಆಗ ಆತ ಏನು ಮಾಡಬಹುದು? ಒಂದು ವಿಭಿನ್ನ ಕಥೆಯನ್ನು ಅಷ್ಟೇ ವಿಭಿನ್ನವಾಗಿ ಕಮರ್ಷಿಯಲ್ ಅಂಶಗಳನ್ನಿಟ್ಟುಕೊಳ್ಳದೆ, ಔಟ್ ಆಫ್ ದಿ ಬಾಕ್ಸ್ ಶೈಲಿಯಲ್ಲಿ ಹೇಳಿರೋದು ಹೇಮಂತ್ ಕುಮಾರ್. ರಾಜ್ ಬಿ.ಶೆಟ್ಟಿ, ಸುನಿಲ್, ಸುಧಾರಾಣಿ.. ಹೀಗೆ ಪ್ರತಿಭಾವಂತರ ದಂಡೇ ಚಿತ್ರದಲ್ಲಿದೆ.

    ತ್ರಿವಿಕ್ರಮ : ಹೀರೋಯಿನ್ ಹೆಸರು ತ್ರಿಷಾ. ಹೀರೋ ವಿಕ್ರಂ. ಅವರಿಬ್ಬರ ಹೆಸರು ಕೂಡಿದಾಗ ಸೃಷ್ಟಿಯಾದ ಕಥೆಯೇ ತ್ರಿವಿಕ್ರಮ. ರವಿಚಂದ್ರನ್ ಅವರ 2ನೇ ಮಗ ವಿಕ್ರಂ ಅವರ ಮೊದಲ ಚಿತ್ರ. ಮಿಡ್ಲ್ ಕ್ಲಾಸ್ ಹುಡುಗನ ಲವ್ ಸ್ಟೋರಿ. ಸಹನಾ ಮೂರ್ತಿ ನಿರ್ದೇಶನದ ಸಿನಿಮಾಗೆ ರಾಮ್ಕೋ ಸೋಮಣ್ಣ ಪ್ರೊಡ್ಯೂಸರ್. ರವಿಚಂದ್ರನ್ ಪುತ್ರನ ಸಿನಿಮಾ ಎಂಬ ಕಾರಣಕ್ಕೆ ನಿರೀಕ್ಷೆ ದೊಡ್ಡದಾಗಿದೆ.

    ಬಡ್ಡೀಸ್ : ಇದು ಕಾಲೇಜ್ ಸ್ಟೂಡೆಂಟ್ಸ್ ಲೈಫ್ ಸ್ಟೋರಿ. ಯೂಥ್‍ಫುಲ್ ಕಥೆ. ಕನ್ನಡತಿ ಸೀರಿಯಲ್ ಖ್ಯಾತಿಯ ಕಿರಣ್ ರಾಜ್ ಈ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಗುರುತೇಜ ಶೆಟ್ಟಿ ನಿರ್ದೇಶನದ ಸಿನಿಮಾ ವಿಶೇಷ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತಿದೆ.

  • ಒಂಟೆ ಮೇಲೆ ತ್ರಿವಿಕ್ರಮ ಫೈಟಿಂಗ್

    camel fight sequence in trivikrama

    ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಂ ಅಭಿನಯದ ಮೊದಲ ಚಿತ್ರ ತ್ರಿವಿಕ್ರಮ ಹೊಸ ದಾಖಲೆ ಬರೆದಿದೆ. ರಾಜಸ್ಥಾನದಲ್ಲಿ ಚಿತ್ರೀಕರಣಗೊಂಡಿರುವ ತ್ರಿವಿಕ್ರಮ ಚಿತ್ರಕ್ಕೆ ಮರಳುಗಾಡಿನಲ್ಲಿ ವಿಭಿನ್ನ ಫೈಟಿಂಗ್ ನಡೆಸಲಾಗಿದೆ. ಒಂಟೆಗಳ ಮೇಲೆ ಫೈಟಿಂಗ್ ಮಾಡುವ ಸಾಹಸ ದೃಶ್ಯ ಚಿತ್ರೀಕರಿಸಲಾಗಿದೆ.

    ಒಂಟೆಗಳ ಮೇಲೆ ಚೇಸಿಂಗ್, ಫೈಟಿಂಗ್ ಮಾಡುವುದು ಕನ್ನಡದಲ್ಲಿ ಇದೇ ಪ್ರಥಮ. ಸೈರಾ, ದಬಾಂಗ್, ಬಾಡಿಗಾರ್ಡ್ ಚಿತ್ರಗಳ ಸ್ಟಂಟ್ ಮಾಸ್ಟರ್ ವಿಜಿ, ಸಾಹಸ ದೃಶ್ಯಗಳನ್ನು ಸಂಯೋಜಸಿದ್ದಾರೆ. ವಿಕ್ರಂ ಜೊತೆ ಆಕಾಂಕ್ಷಾ ಶರ್ಮ, ಸಾಧುಕೋಕಿಲ, ರೋಹಿತ್ ರಾಯ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

    ಗೌರಿ ಎಂಟರ್‍ಟೈನರ್ಸ್ ಬ್ಯಾನರ್‍ನಲ್ಲಿ ಸೋಮಣ್ಣ ನಿರ್ಮಿಸುತ್ತಿರುವ ಚಿತ್ರವಿದು. ಸಹನಾ ಮೂರ್ತಿ ನಿರ್ದೇಶನದ ಚಿತ್ರ ವಿಕ್ರಂ ರವಿಚಂದ್ರನ್‍ರ ಮೊತ್ತ ಮೊದಲ ಸಿನಿಮಾ.

  • ಕ್ರೇಜಿಸ್ಟಾರ್ 2ನೇ ಪುತ್ರ ವಿಕ್ರಂ ಚಿತ್ರ ಜೂನ್ 24ಕ್ಕೆ..

    ಕ್ರೇಜಿಸ್ಟಾರ್ 2ನೇ ಪುತ್ರ ವಿಕ್ರಂ ಚಿತ್ರ ಜೂನ್ 24ಕ್ಕೆ..

    ರವಿಚಂದ್ರನ್ ಅವರ 2ನೇ ಪುತ್ರ ವಿಕ್ರಮ್ ರವಿಚಂದ್ರನ್ ನಾಯಕನಾಗಿ ನಟಿಸಿರುವ ತ್ರಿವಿಕ್ರಮ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಜೂನ್ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಕ್ರಂರನ್ನು ಲಾಂಚ್ ಮಾಡುತ್ತಿರೋದು ನಿರ್ದೇಶಕ ಸಹನಾಮೂರ್ತಿ ಮತ್ತು ನಿರ್ಮಾಪಕ ಸೋಮಣ್ಣ. ಚಿತ್ರದಲ್ಲಿ ಹೀರೋಯಿನ್ ಆಗಿ ಆಕಾಂಕ್ಷಾ ಶರ್ಮ ನಟಿಸಿದ್ಧಾರೆ. ಚಿತ್ರದ ಬಿಡುಗಡೆ ಘೋಷಿಸಲು ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಅಣ್ಣ ಮನುರಂಜನ್ ರವಿಚಂದ್ರನ್ ಕೂಡಾ ಇದ್ದು ತಮ್ಮನ ಚಿತ್ರಕ್ಕೆ ಶುಭ ಕೋರಿದರು. ನಟಿ ತಾರಾ, ಸಾಧುಕೋಕಿಲ, ಶರಣ್, ಆದಿ ಲೋಕೇಶ್, ನಿರ್ದೇಕರಾದ ಶಿವಮಣಿ, ಸಂತೋಷ್ ಆನಂದರಾಮ್, ಚೇತನ್ ಕುಮಾರ್ ಮೊದಲಾದ ಗಣ್ಯರು ಚಿತ್ರತಂಡಕ್ಕೆ ಶುಭ ಕೋರಲು ಆಗಮಿಸಿದ್ದರು.

    ಸಿನಿಮಾ ಪೂರ್ತಿಯಾಗಿ 3 ವರ್ಷವಾಯಿತು. ಕೋವಿಡ್ ಕಾರಣದಿಂದ ತಡವಾಯಿತು ಎಂದ ವಿಕ್ರಂ, ಚಿತ್ರದ ಕಥೆ ಅಪ್ಪನಿಗೆ ಗೊತ್ತಿಲ್ಲ. ಆದರೆ ಇಡೀ ಕಥೆಯನ್ನು ಶಿವಣ್ಣ ಮತ್ತು ಪುನೀತ್ ಕೇಳಿದ್ದರು. ಪುನೀತ್ ಕಥೆ ಇಷ್ಟಪಟ್ಟು ನಾನು ಒಂದು ಹಾಡು ಹಾಡ್ತೀನಿ. ಚೆನ್ನಾಗಿ ಡ್ಯಾನ್ಸ್ ಮಾಡಬೇಕು. ಇಲ್ಲ ಅಂದ್ರೆ ಹೊಡೀತೀನಿ ಎಂದಿದ್ದರು ಎಂದು ಭಾವುಕರಾದರು. ನಾನು ರವಿಚಂದ್ರನ್ ಅವರ ಮಗ ಹೌದು. ಆದರೆ ಚಿತ್ರರಂಗಕ್ಕೆ ಹೊಸಬ. ನಮ್ಮ ಚಿತ್ರವನ್ನು ನೋಡಿ ಹಾರೈಸಿ ಎಂದ ವಿಕ್ರಂ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಧನ್ಯವಾದ ಹೇಳಿದರು.

    ಮಿಡಲ್ ಕ್ಲಾಸ್ ಫ್ಯಾಮಿಲಿ ಹುಡುಗ, ಹೈ ಕ್ಲಾಸ್ ಫ್ಯಾಮಿಲಿ ಹುಡುಗಿಯನ್ನು ಏಕೆ ಲವ್ ಮಾಡಬಾರದು ಎಂಬ ವಿಷಯವೇ ಚಿತ್ರದ ಕಥೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ನಟನಾಗಿ ನಾನು ವಿಕ್ರಂ ಅವರಿಗೆ ನೂರಕ್ಕೆ ನೂರು ಅಂಕ ಕೊಡುತ್ತೇನೆ ಎಂದರು ನಿರ್ದೇಶಕ ಸಹನಾ ಮೂರ್ತಿ.  

  • ತ್ರಿವಿಕ್ರಮ ಸೆನ್ಸಾರ್ ಪಾಸ್

    ತ್ರಿವಿಕ್ರಮ ಸೆನ್ಸಾರ್ ಪಾಸ್

    ಜೂನ್ 24ಕ್ಕೆ ರಿಲೀಸ್ ಆಗುತ್ತಿರುವ ತ್ರಿವಿಕ್ರಮ ಚಿತ್ರ ಸೆನ್ಸಾರ್ ಪಾಸ್ ಆಗಿದೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ವಿಕ್ರಂ ರವಿಚಂದ್ರನ್ ಅಭಿನಯದ ಮೊದಲ ಚಿತ್ರವಿದು. ವಿಕ್ರಂ ಎದುರು ಆಕಾಂಕ್ಷಾ ನಾಯಕಿ. ಪಕ್ಕಾ ಲವ್ ಸ್ಟೋರಿಯ ಚಿತ್ರಕ್ಕೆ

    ಸಹನಾ ಮೂರ್ತಿ ನಿರ್ದೇಶನವಿದೆ.

    ಸಿನಿಮಾಗೆ ಸೋಮಣ್ಣ ಟಾಕೀಸ್ ಬಂಡವಾಳ ಹೂಡಿದೆ. ರಾಮ್ಕೋ ಸೋಮಣ್ಣ ನಿರ್ಮಾಪಕರು. ಈಗಾಗಲೇ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಸೌಂಡ್ ಮಾಡುತ್ತಿವೆ.

  • ತ್ರಿವಿಕ್ರಮನ ಪರಾಕ್ರಮ

    trivikrama audio record sold out

    ಆಡಿಯೋ ಮಾರುಕಟ್ಟೆಯಲ್ಲಿ ಹೊಸ ಹೊಸ ದಾಖಲೆಗಳನ್ನು ಬೆನ್ನು ಬೆನ್ನಿಗೆ ಬರೆದವರು ಕ್ರೇಜಿ ಸ್ಟಾರ್ ರವಿಚಂದ್ರನ್. ಈಗ ಅವರ ಪುತ್ರ ವಿಕ್ರಮ್ ಅಭಿನಯದ ತ್ರಿವಿಕ್ರಮ್ ಅದೇ ರೀತಿ ದಾಖಲೆ ಬರೆದಿದೆ. ವಿಕ್ರಮ್ ಅಭಿನಯದ ತ್ರಿವಿಕ್ರಮ್ ಚಿತ್ರದ ಆಡಿಯೋ ಹಕ್ಕುಗಳು 50 ಲಕ್ಷಕ್ಕೆ ಸೇಲ್ ಆಗಿದೆ.

    ರವಿಚಂದ್ರನ್ ಪುತ್ರನಾದರೂ ತಂದೆಯ ನೆರಳಿನಿಂದ ಹೊರಬಂದು ಪ್ರತ್ಯೇಕವಾಗಿ ಗುರುತಿಸಿಕೊಳ್ಳುವ ಹಠ ತೊಟ್ಟಿರುವ ವಿಕ್ರಮ್, ತ್ರಿವಿಕ್ರಮ್ ಚಿತ್ರಕ್ಕಾಗಿ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ನಿರ್ದೇಶಕ ಸಹನಾ ಮೂರ್ತಿ ಚೆಂದದ ಕಥೆಯೊಂದಿಗೆ ಸಿನಿಮಾ ಮಾಡಿದ್ದಾರೆ. ನಿರ್ಮಾಪಕ ಸೋಮಣ್ಣ, ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿಯೇ ಬಂಡವಾಳ ಹೂಡಿದ್ದಾರೆ.

    ಎ2 ಆಡಿಯೋ ಕಂಪೆನಿ, 50 ಲಕ್ಷಕ್ಕೆ ಆಡಿಯೋ ರೈಟ್ಸ್ ಖರೀದಿಸಿದೆ. ಇತ್ತೀಚೆಗೆ ಆಡಿಯೋಗೆ ಮಾರ್ಕೆಟ್ ಇಲ್ಲ. ಆದರೂ ತ್ರಿವಿಕ್ರಮ್ ದಾಖಲೆ ಬರೆದಿದೆ. ಚಿತ್ರದಲ್ಲಿ 6 ಹಾಡುಗಳಿದ್ದು, ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್, ಭರ್ಜರಿ ಚೇತನ್ ಹಾಡುಗಳನ್ನು ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶಕ. 

  • ತ್ರಿವಿಕ್ರಮನ ಪ್ರೇಮೋತ್ಸವ : ಒನ್ ವೀಕ್ ಸೆಲಬ್ರೇಷನ್

    trivikrama love festival

    ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಮತ್ತು ಆಕಾಂಕ್ಷಾ ನಟಿಸುತ್ತಿರುವ ಚಿತ್ರ ತ್ರಿವಿಕ್ರಮ. ಅಪ್ಪಟ ಲವ್ ಸ್ಟೋರಿಯ ಕಥೆಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ನಿರ್ದೇಶಕ ಸಹನಾ ಮೂರ್ತಿ. ಈ ಚಿತ್ರ ಈ ಬಾರಿಯ ವ್ಯಾಲೆಂಟೈನ್ಸ್ ಡೇಯನ್ನು ಒಂದು ವಾರ ಸೆಲಬ್ರೇಟ್ ಮಾಡಲು ಮುಂದಾಗಿದೆ.

    ಫೆ.7ಕ್ಕೆ ರೋಸ್ ಡೇ, ಫೆ.8ಕ್ಕೆ ಪ್ರಪೋಸ್ ಡೇ, ಫೆ.9ಕ್ಕೆ ಚಾಕೊಲೇಟ್ ಡೇ, ಫೆ.10ಕ್ಕೆ ಟೆಡ್ಡಿ ಡೇ, ಫೆ.11ಕ್ಕೆ ಪ್ರಾಮಿಸ್ ಡೇ, ಫೆ.12ಕ್ಕೆ ಕಿಸ್ ಡೇ, ಫೆ.13 ಮತ್ತು ಫೆ.14ಕ್ಕೆ ವ್ಯಾಲೆಂಟೈನ್ಸ್ ಡೇ. ಹೀಗೆ ಒಂದು ವಾರವನ್ನು ವಿಭಿನ್ನವಾಗಿ ಸೆಲಬ್ರೇಟ್ ಮಾಡಲು ನಿರ್ಧರಿಸಿರುವ ತ್ರಿವಿಕ್ರಮ ಟೀಂ, ದಿನಕ್ಕೊಂದರಂತೆ ಥೀಮ್ ಪೋಸ್ಟರ್ ರಿಲೀಸ್ ಮಾಡುತ್ತಿದ್ದಾರೆ.

    ತ್ರಿವಿಕ್ರಮ ಪಕ್ಕಾ ಲವ್ ಸ್ಟೋರಿ. ನಮ್ಮ ಈ ಪ್ರಯತ್ನಕ್ಕೆ ಲವ್ಲೀ ರಿಯಾಕ್ಷನ್ ಸಿಕ್ಕಿದೆ ಎಂದಿದ್ದಾರೆ ಸಹನಾ ಮೂರ್ತಿ.

  • ತ್ರಿವಿಕ್ರಮನಿಗೆ ಗೌಡ ಅಕ್ಷರಾ ಗ್ಲ್ಯಾಮರ್

    panchantantra;s glam doll in vikram's trivikrama

    ಕ್ರೇಜಿಸ್ಟಾರ್ ರವಿಚಂದ್ರನ್ ಅವರ 2ನೇ ಮಗ ವಿಕ್ರಮ್ ಅಭಿನಯದ ಮೊದಲ ಸಿನಿಮಾಗೆ ಇನ್ನೊಬ್ಬ ನಾಯಕಿ ಎಂಟ್ರಿ ಕೊಟ್ಟಿದ್ದಾರೆ. ಪಂಚತಂತ್ರದ ಗ್ಲಾಮರ್ ಗೊಂಬೆ ಅಕ್ಷರಾ ಗೌಡ, ವಿಕ್ರಂಗೆ ಇನ್ನೊಬ್ಬ ನಾಯಕಿ. ಈಗಾಗಲೇ ಆಕಾಂಕ್ಷಾ ಸಿಂಗ್ ನಾಯಕಿಯಾಗಿದ್ದು, 2ನೇ ನಾಯಕಿಯಾಗಿ ಅಕ್ಷರಾ ಗೌಡ ಬಂದಿದ್ದಾರೆ.

    ಚಿತ್ರದಲ್ಲಿ ನನಗೆ ಟ್ರೆಡಿಷನಲ್ ಮತ್ತು ಗ್ಲ್ಯಾಮರಸ್ ಎರಡೂ ರೀತಿ ಇರುವ ಪಾತ್ರವಿದೆ. ಉಳಿದಂತೆ ಕಥೆ ಮತ್ತು ಪಾತ್ರದ ಬಗ್ಗೆ ಹೆಚ್ಚು ಹೇಳುವಂತಿಲ್ಲ. ನಾನಂತೂ ಎಕ್ಸೈಟ್‍ಮೆಂಟ್‍ನಿಂದ ಕಾಯುತ್ತಿದ್ದೇನೆ ಎಂದಿದ್ದಾರೆ ಅಕ್ಷರಾ ಗೌಡ.

    ನಿರ್ದೇಶಕ ಸಹನಾಮೂರ್ತಿ ಚಿತ್ರವನ್ನು ಆಗಸ್ಟ್ 10ರಂದು ಶುರು ಮಾಡಲಿದ್ದು, ಸೋಮಶೇಖರ್ ಮತ್ತು ಸುರೇಶ್ ನಿರ್ಮಾಪಕರು.

  • ತ್ರಿವಿಕ್ರಮ್ ರವಿಚಂದ್ರನ್‌ಗೆ ಬಾಲಿವುಡ್ ವಿಲನ್

    bollywood villains enter trivikrama movie

    ರವಿಚಂದ್ರನ್ ಅವರ ೨ನೇ ಪುತ್ರ ವಿಕ್ರಮ್ ನಟಿಸುತ್ತಿರುವ ಮೊದಲ ಚಿತ್ರ ತ್ರಿವಿಕ್ರಮ. ಸಹನಾ ಮೂರ್ತಿ ನಿರ್ದೇಶನದ ಚಿತ್ರಕ್ಕೀಗ ಬಾಲಿವುಡ್‌ನ ರೋಹಿತ್ ರಾಯ್ ಎಂಟ್ರಿ ಕೊಟ್ಟಿದ್ದಾರೆ. ವಿಲನ್ ಆಗಿ.

    ಶೂಟೌಟ್ ಅಟ್ ಲೋಖಂಡ್‌ವಾಲ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ರೋಹಿತ್, ಈಗ ಸಿಕ್ಕಾಪಟ್ಟೆ ಬ್ಯುಸಿ ವಿಲನ್. ಚಿತ್ರದಲ್ಲಿ ರೋಹಿತ್ ಅವರದ್ದ ಎಸಿಪಿ ಪಾತ್ರವಂತೆ. ಆದರೆ... ನೆಗೆಟಿವ್ ಶೇಡ್‌ನದ್ದು. ಪಾತ್ರಕ್ಕೆ ಇವರೇ ಸೂಕ್ತ ಎನ್ನಿಸಿ ಆಯ್ಕೆ ಮಾಡಿದೆವು ಎನ್ನುತ್ತಾರೆ ಸಹನಾ ಮೂರ್ತಿ.

    ತ್ರಿವಿಕ್ರಮ್‌ಗೆ ಚಿತ್ರದಲ್ಲಿ ಆಕಾಂಕ್ಷಾ ನಾಯಕಿಯಾಗಿದ್ದು, ಅಕ್ಷರಾ ಗೌಡ ಇನ್ನೊಂದು ಪ್ರಮುಖ ಪಾತ್ರದಲ್ಲಿದ್ದಾರೆ. ತೆಲುಗು ನಟ ವಿಜಯ್ ಪ್ರಕಾಶ್, ಸಾಧುಕೋಕಿಲ, ಚಿಕ್ಕಣ್ಣ, ಶಿವಮಣಿ, ಸುಚೇಂದ್ರ ಪ್ರಸಾದ್ ಮೊದಲಾದವರು ನಟಿಸಿರುವ ಚಿತ್ರಕ್ಕೆ ಉದ್ಯಮಿ ಸೋಮಣ್ಣ ಮತ್ತು ಸುರೇಶ್ ನಿರ್ಮಾಪಕರು.

  • ರವಿ ಮಗನ ಸಿನಿಮಾ ಅಂದ್ಕೊಂಡು ಬನ್ನಿ.. ಆದರೆ.. - ವಿಕ್ರಮ್ ರವಿಚಂದ್ರನ್ ಕಾನ್ಫಿಡೆನ್ಸ್ ನೋಡಿದ್ರಾ..?

    vikram ravichandran's trivikrama speciality

    ರವಿಚಂದ್ರನ್ ಅವರ 2ನೇ ಮಗ ವಿಕ್ರಂ ಅಭಿನಯದ ಮೊದಲ ಸಿನಿಮಾ ಶುರುವಾಗಿದೆ. ಸಹನಾ ಮೂರ್ತಿ ನಿರ್ದೇಶನದ ತ್ರಿವಿಕ್ರಮ ಚಿತ್ರಕ್ಕೆ ಚಾಲನೆ ದೊರೆತಿದೆ. ಮುಹೂರ್ತದ ನಂತರ ವಿಕ್ರಮ್ ಮಾತು ಕೇಳಿದರೆ ಇಷ್ಟವಾಗೋದು ಅವರ ಕಾನ್ಫಿಡೆನ್ಸು.

    ಇದು ನನ್ನ ಮೊದಲ ಸಿನಿಮಾ. ಸಿನಿಮಾಗೆ ಎಲ್ಲ ತಯಾರಿ ಮಾಡಿಕೊಂಡೇ ಬಂದಿದ್ದೇನೆ. ಪ್ರೇಕ್ಷಕರು ಬರುವಾಗ ಇದು ರವಿಚಂದ್ರನ್ ಮಗನ ಸಿನಿಮಾ ಎಂದುಕೊಂಡೇ ಬರಲಿ, ಹೋಗುವಾಗ ಇದು ವಿಕ್ರಂ ಸಿನಿಮಾ ಎಂದರೆ ಸಾಕು. ಅದೇ ನನಗೆ ದೊಡ್ಡ ಯಶಸ್ಸು ಎಂದಿದ್ದಾರೆ ವಿಕ್ರಮ್.

    ಚಿತ್ರದಲ್ಲಿ ಹೈವೋಲ್ಟೇಜ್ ಲವ್ ಸ್ಟೋರಿ ಇದೆಯಂತೆ. ನಿನಗೆ ಎಷ್ಟು ಗೊತ್ತಿದೆಯೋ ಅಷ್ಟು ಮಾಡು. ಒತ್ತಡ ತೆಗೆದುಕೊಳ್ಳಬೇಡ ಎಂದಿದ್ದಾರಂತೆ ರವಿಚಂದ್ರನ್. ವಿಕ್ರಂಗೆ ಜೋಡಿಯಾಗಿ ಆಕಾಂಕ್ಷಾ ನಟಿಸುತ್ತಿದ್ದಾರೆ.

  • ರವಿಚಂದ್ರನ್ ಮಗನ ಚಿತ್ರಕ್ಕೆ ಶಿವಣ್ಣ ಸಾಥ್

    ರವಿಚಂದ್ರನ್ ಮಗನ ಚಿತ್ರಕ್ಕೆ ಶಿವಣ್ಣ ಸಾಥ್

    ರವಿಚಂದ್ರನ್ ಮತ್ತು ಡಾ.ರಾಜ್ ಕುಟುಂಬದ ಬಾಂಧವ್ಯಕ್ಕೆ ದಶಕಗಳ ಇತಿಹಾಸವಿದೆ. ಆ ಬಾಂಧವ್ಯ ಈಗಲೂ ಮುಂದುವರೆಯುತ್ತಿದೆ. ಇದೀಗ ರವಿಚಂದ್ರನ್ ಅವರ 2ನೇ ಮಗ ವಿಕ್ರಮ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ತ್ರಿವಿಕ್ರಮ್ ಸಿನಿಮಾ ಇದೇ ಜೂನ್ 24ಕ್ಕೆ ರಿಲೀಸ್ ಆಗುತ್ತಿದೆ. ಚಿತ್ರದ ಪ್ರಚಾರಕ್ಕೆ ಖುದ್ದು ಶಿವಣ್ಣ ಎದ್ದು ನಿಂತಿದ್ದಾರೆ.

    ತ್ರಿವಿಕ್ರಮ ಚಿತ್ರದ ಮಮ್ಮಿ ಮಮ್ಮಿ ಪ್ಲೀಸ್ ಮಮ್ಮಿ.. ಹಾಡನ್ನು ಖುದ್ದು ಶಿವಣ್ಣ ರಿಲೀಸ್ ಮಾಡಿದ್ದಾರೆ.

    ವಿಕ್ರಂ ರವಿಚಂದ್ರನ್ ಚಿತ್ರದಲ್ಲಿ ತಮ್ಮ ತಾಯಿಗೆ ಮಮ್ಮಿ ಅರೇಜ್ಡ್ ಮ್ಯಾರೇಜ್ ಬೇಡ.. ಲವ್ ಮ್ಯಾರೇಜ್ ಆಗ್ತೀನಿ ಎಂದು ಹೇಳಿಕೊಂಡು ಹಾಡಿ ಕುಣಿಯುವ ಹಾಡಿದು. ವಿಕ್ರಂ ಜೊತೆ ಚಿತ್ರದಲ್ಲಿ ಆಕಾಂಕ್ಷಾ ಶರ್ಮ ನಾಯಕಿಯಾಗಿದ್ದಾರೆ. ತುಳಸಿ ಶಿವಮಣಿ ವಿಕ್ರಂ ತಾಯಿಯಾಗಿ ನಟಿಸಿದ್ದಾರೆ. ಚಿಕ್ಕಣ್ಣ, ಸಾಧುಕೋಕಿಲ, ಸುಚೇಂದ್ರ ಪ್ರಸಾದ್, ಶಿವಮಣಿ, ಆದಿ ಲೋಕೇಶ್.. ಸೇರಿದಂತೆ ಬೃಹತ್ ತಾರಾಬಳಗವೇ ಚಿತ್ರದಲ್ಲಿದೆ.

    ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಸಹನಾ ಮೂರ್ತಿ. ರೋಜ್ ಮತ್ತು ಲೀಡರ್ ಚಿತ್ರಗಳ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ. ಸೋಮಣ್ಣ ನಿರ್ಮಾಣದ ಚಿತ್ರ ಗೌರಿ ಎಂಟರ್‍ಟೈನರ್ ಮೂಲಕ ರಿಲೀಸ್ ಆಗುತ್ತಿದೆ.