` hafta, - chitraloka.com | Kannada Movie News, Reviews | Image

hafta,

 • Haftha Trailer Launched

  hafta trailer launched

  Haftha movie is creating a buzz in the Kannada film industry from the beginning, be its title or the making. Trailer of the movie was launched at Chamundeshwari studios The movie is all set to release on 21st June.

  Dr H M Krishnamurthy, Lallesh Reddy, KFCC secretary Ba Ma Harish, Treasurer KM Veeresh and others lighted the lamp and Dr. HM Krishnamurthy launched the trailer of the movie.

  Dr HM Krishnamurthy appreciated the trailer and its making, Ba Ma Harish wished the team and KM Veeresh advised the producer about persons in the name of Book My Show exploiting the money for fake rating and voting inspite of Book My show warning.

  Haftha movie is produced by Maitri Manjunath, Balaraj TC Palya and is directed by debutant director Prakash Hebbala. Vardhan who had acted in couple of movies is making his debut as a full fledged hero. Raghav Naag, Bimbashree, Neenasam, Soumya Thithira are the other share the screen space.

  Haftha is an underworld movie and Vardhan is seen in a transgender character also.

 • Haftha Trailer On June 11th

  hafta trailer on june 11th

  Vardhan starter Haftha trailer will be releasing on June 11th.

  Haftha is an underworld movie which has created lot of buzz because of transgender’s character. Movie has been shot in Bengaluru, Mangalore, Gokarna, Muradesheara and other places. 

  Haftha is directed by debutante director Prakash Hebbala starring Vardhan, Raghav Maah, Bimbashree in lead roles. Movie is produced by Maitri Manju Arth and. Alarms TC Palya .

 • ಕರಾವಳಿ ಅಂಡರ್‍ವಲ್ರ್ಡ್ ಹಫ್ತಾ

  coastal area underworld story is hafta

  ಮುಂದಿನ ವಾರ ತೆರೆಗೆ ಬರುತ್ತಿರುವ ಹಫ್ತಾದಲ್ಲಿರೋದು ಕರಾವಳಿ ಭೂಗತ ಜಗತ್ತಿನ ಕಥೆ. ಹಲವು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದ ವರ್ಧನ್ ತೀರ್ಥಹಳ್ಳಿ ಈ ಚಿತ್ರದಲ್ಲಿ ಹೀರೋ ಆಗಿದ್ದಾರೆ. ಗೂಳಿಹಟ್ಟಿ ಚಿತ್ರದಲ್ಲಿ ನಟಿಸಿದ್ದ ರಾಘವ್ ನಾಗ್ ಕೂಡಾ ಇನ್ನೊಂದು ಪ್ರಮುಖ ಪಾತ್ರಕ್ಕೆ ಜೊತೆಯಾಗಿದ್ದಾರೆ.

  ಕರಾವಳಿ ಎಂಬ ಸಮುದ್ರದಲ್ಲಿ ನೀರೂ ಒಂದೇ.. ರಕ್ತವೂ ಒಂದೇ.. ಎನ್ನುವ ಡೈಲಾಗುಗಳ ಮಧ್ಯೆ ಒಂದು ಲವ್‍ಸ್ಟೋರಿಯೂ ಇದೆ. ಮೈತ್ರಿ ಮಂಜುನಾಥ್, ಬಾಲರಾಜ್ ನಿರ್ಮಾಣದ ಚಿತ್ರಕ್ಕೆ ಪ್ರಕಾಶ್ ಹೆಬ್ಬಾಳ್ ನಿರ್ದೇಶನವಿದೆ. ಬಹುತೇಕ ಹೊಸಬರೇ ಇರುವ ಪಕ್ಕಾ ಕಮರ್ಷಿಯಲ್ ಸಿನಿಮಾ ಹಫ್ತಾ.

 • ಕೆಟ್ಟವರನ್ನು ಕೊಲ್ಲಲು ಕೆಟ್ಟವರೇ ಬರಬೇಕು..

  haftais an unique underworld story

  ದುಷ್ಟರನ್ನು ಸಂಹರಿಸಲು ದೇವರು ಮತ್ತೆ ಮತ್ತೆ ಹುಟ್ಟಿಬರುತ್ತಾನೆ ಎನ್ನುತ್ತದೆ ಭಗವದ್ಗೀತೆ. ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ಎನ್ನುವುದರ ಅರ್ಥ ಇದೇ. ಹಲವು ಸಿನಿಮಾಗಳಲ್ಲಿ ಇರೋದು ಇದೇ ಥೀಮ್‍ಲೈನ್. ಆದರೆ, ಹಫ್ತಾ ಹಾಗಲ್ಲ. ಇದೇ ಥೀಮ್‍ಲೈನ್‍ನ್ನು ಸ್ವಲ್ಪ ಚೇಂಜ್ ಮಾಡಿದ್ದಾರೆ.

  ಕೆಟ್ಟವರನ್ನು ಸಂಹಾರ ಮಾಡೋಕೆ ಕೆಟ್ಟವರೇ ಹುಟ್ಟಿಬರಬೇಕು ಎನ್ನುವ ಅರ್ಥ ಇರುವ ಕಥೆ ಹೆಣೆದಿದ್ದಾರೆ ನಿರ್ದೇಶಕ ಪ್ರಕಾಶ್ ಹೆಬ್ಬಾಳ್.

  ಪ್ರಕಾಶ್ ಹೆಬ್ಬಾಳ್‍ಗೆ ನಿರ್ದೇಶಕರಾಗಿ ಇದು ಮೊದಲ ಸಿನಿಮಾ. ಭೂಗತ ಜಗತ್ತಿನ ಕಥೆ ಇರುವ ಚಿತ್ರದಲ್ಲಿ ಸುಪಾರಿ ಕಿಲ್ಲಿಂಗ್‍ಗೆ ಬೇರೆಯದ್ದೇ ವ್ಯಾಖ್ಯಾನ ಇದೆಯಂತೆ. ಜೂನ್ 21ಕ್ಕೆ ರಿಲೀಸ್ ಆಗುತ್ತಿರುವ ಚಿತ್ರದಲ್ಲಿ ವರ್ಧನ್ ತೀರ್ಥಹಳ್ಳಿ ಹೀರೋ. ಅವರು ಮಂಗಳಮುಖಿ ಪಾತ್ರದಲ್ಲಿ ನಟಿಸಿರುವುದು ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದೆ. ಜೂನ್ 21ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾಗೆ ಮೈತ್ರಿ ಮಂಜುನಾಥ್ ನಿರ್ಮಾಪಕ.

 • ಭೂಗತಲೋಕದಲ್ಲೊಂದು.. ಲವ್ ಸೆಂಟಿಮೆಂಟ್ ಕಥೆ..!

  hafta is a complete entertainer

  ಹಫ್ತಾ.. ಚಿತ್ರದಲ್ಲಿರೋದು ಭೂಗತ ಲೋಕದ ಕಥೆ ಅನ್ನೋದನ್ನು ಚಿತ್ರತಂಡ ಓಪನ್ ಆಗಿಯೇ ಹೇಳಿಕೊಂಡಿದೆ. ಸಾಫ್ಟ್‍ವೇರ್ ಹುಡುಗ ಭೂಗತ ಲೋಕವನ್ನು ಕಾರ್ಪೊರೇಟ್ ಶೈಲಿಯಲ್ಲಿ ಆಳುವ ಮನಸ್ಸು ಮಾಡುತ್ತಾನೆ. ಮಾತನಾಡದೇ ಕೆಲಸ ಮಾಡುವ, ಬುದ್ದಿವಂತಿಕೆಯನ್ನು ಕ್ರೈಂಗೆ ಬಳಸಿಕೊಳ್ಳುವ ನಾಯಕನಾಗಿ ರಾಘವ್ ನಾಗ್ ಇದ್ದರೆ, ಮಂಗಳಮುಖಿ ಪಾತ್ರವೂ ಸೇರಿದಂತೆ ಮೂರು ಶೇಡ್‍ಗಳಲ್ಲಿ ಕಾಣಿಸಿಕೊಂಡಿರೋದು ವರ್ಧನ್. 

  ಇದರ ನಡುವೆ ಸ್ನೇಹದ ಸೆಂಟಿಮೆಂಟ್ ಇದೆ. ಸೆಕ್ಸ್ ವರ್ಕರ್ ಬದುಕಿನ ತಲ್ಲಣವೂ ಇದೆ. ಮಗುವಿನ ಸೆಂಟಿಮೆಂಟ್ ಇದೆ. ಹುಡುಗಿ-ಹುಡುಗರ ರೊಮ್ಯಾನ್ಸ್ ಇದೆ.. ಒಟ್ಟಿನಲ್ಲಿ ಇದು ಎಲ್ಲರೂ ಕುಟುಂಬ ಸಮೇತ ಕುಳಿತು ನೋಡಬಹುದಾದ ಸಿನಿಮಾ ಎನ್ನುವುದು ನಿರ್ದೇಶಕ ಪ್ರಕಾಶ್ ಹೆಬ್ಬಾಳ ಕಾನ್ಫಿಡೆನ್ಸ್.

 • ಲವ್ ಮಾಡಿದ ಹುಡುಗ ಮಂಗಳಮುಖಿಯಾಗಿಬಿಟ್ಟರೆ.. ವಾಟ್ ನೆಕ್ಸ್ಟ್..?

  uniue under world love story is hafta

  ಅವನು ಅವಳನ್ನು ಪ್ರೀತಿಸುತ್ತಾನೆ. ಅವಳೂ ಅವನನ್ನು ಪ್ರೀತಿಸುತ್ತಾಳೆ. ಅವನು ಇದ್ದಕ್ಕಿದ್ದಂತೆ ಮಂಗಳಮುಖಿಯಾಗಿಬಿಡುತ್ತಾನೆ. ಹುಡುಗಿಗೆ ಆಘಾತ.. ಇದು ಹಫ್ತಾ ಚಿತ್ರದ ಲವ್‍ಟ್ರ್ಯಾಕ್. ಚಿತ್ರದಲ್ಲಿ ಕೇವಲ ಕರಾವಳಿ ಭೂಗತ ಜಗತ್ತಿನ ಕಥೆಯಷ್ಟೆ ಅಲ್ಲ, ಅಲ್ಲೊಂದು ವಿಚಿತ್ರ ಎನಿಸುವ ಸುಂದರ ಪ್ರೇಮಕಥೆಯೂ ಇದೆ.

  ಚಿತ್ರದ ಹೀರೋ ವರ್ಧನ್ ತೀರ್ಥಹಳ್ಳಿ, ಚಿತ್ರರಂಗಕ್ಕೆ ಬಂದು 12 ವರ್ಷಗಳ ನಂತರ ಹೀರೋ ಆಗಿದ್ದಾರೆ. ರಫ್ & ಟಫ್ ಶಾರ್ಪ್ ಶೂಟರ್, ಅರ್ಧನಾರೀಶ್ವರ ಮತ್ತು ಮಂಗಳಮುಖಿಯ ಪಾತ್ರದಲ್ಲಿ ನಟಿಸಿದ್ದಾರೆ. 

  ಉಗ್ರಂ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ಬಂದು ಹೋದರೂ ಕೆಲವೇ ನಿಮಿಷಗಳಲ್ಲಿ ಗಮನ ಸೆಳೆದಿದ್ದರು. ಅದೇ ನನ್ನನ್ನು ಆಕರ್ಷಿಸಿತು. ಹೀಗಾಗಿ ಅವರನ್ನು ಈ ಚಿತ್ರಕ್ಕೆ ಹೀರೋ ಆಗಿ ಆಯ್ಕೆ ಮಾಡಿಕೊಂಡೆ ಎನ್ನುತ್ತಾರೆ ನಿರ್ದೇಶಕ ಪ್ರಕಾಶ್ ಹೆಬ್ಬಾಳ.

  ಚಿತ್ರದಲ್ಲಿ ರಾಘವ ನಾಗ್ ಇನ್ನೊಬ್ಬ ಹೀರೋ. ಬಿಂಬಶ್ರೀ ಹೀರೋಯಿನ್. ಇದೇ ವಾರ ರಿಲೀಸ್ ಆಗುತ್ತಿರುವ ಹಫ್ತಾ ಚಿತ್ರದ ಟ್ರೇಲರ್ ಕುತೂಹಲ ಹುಟ್ಟಿಸಿದೆ.

 • ಸೌಮ್ಯ ತಿತಿರಾಗೆ ಮೊದಲ ಚಿತ್ರದ ಪಾತ್ರವೇ ಚಾಲೆಂಜಿಂಗ್

  soumya in challenging role for hafta

  ಇದೇ ವಾರ ರಿಲೀಸ್ ಆಗುತ್ತಿರುವ ಚಿತ್ರ ಹಫ್ತಾ, ಒಬ್ಬೊಬ್ಬರಿಗೆ ಒಂದೊಂದು ವಿಶೇಷ ಕಾರಣಕ್ಕೆ ಮಹತ್ವ ಪಡೆದುಕೊಂಡಿದೆ. ಚಿತ್ರದ ಇಬ್ಬರು ನಾಯಕಿಯರಲ್ಲಿ ಒಬ್ಬರಾಗಿರುವ ಸೌಮ್ಯ ತಿತಿರಾಗೆ ಇದು ಒಂಥರಾ ಸವಾಲಿನ ಪಾತ್ರ. ಅವರು ಈ ಚಿತ್ರದಲ್ಲಿ ಸೆಕ್ಸ್ ವರ್ಕರ್ ಪಾತ್ರ ಮಾಡಿದ್ದಾರೆ.

  ಸೆಕ್ಸ್ ವರ್ಕರ್ ಆಗಿದ್ದರೂ, ಅವರಿಗೆ ಅಲ್ಲೊಂದು ಲವ್ ಸ್ಟೋರಿ ಇದೆ. ರಾಘವ್ ಜೊತೆಗಿನ ಲವ್ ಸ್ಟೋರಿ ವಿಭಿನ್ನವಾಗಿದೆ. ಸೆಕ್ಸ್ ವರ್ಕರ್ ಪಾತ್ರವಾಗಿದ್ದರೂ, ಎಲ್ಲಿಯೂ ವಲ್ಗರ್ ಆಗಿ ತೋರಿಸಿಲ್ಲ ಎನ್ನುವುದು ನಿರ್ದೇಶಕ ಪ್ರಕಾಶ್ ಹೆಬ್ಬಾಳ ಮಾತು.

  ಈಗಾಗಲೇ ತಮಿಳಿನಲ್ಲಿ ಒಂದು ಚಿತ್ರದಲ್ಲಿ ನಟಿಸಿರುವ ಸೌಮ್ಯ, ಸೆಕ್ಸ್ ವರ್ಕರ್ ಪಾತ್ರವನ್ನೂ ಹೇಗೆ ಚೆನ್ನಾಗಿ ತೋರಿಸಬಹುದು ಎನ್ನುವುದಕ್ಕೆ ಈ ಚಿತ್ರ ಸಾಕ್ಷಿ ಎನ್ನುತ್ತಾರೆ. 

 • ಹಫ್ತಾದಲ್ಲಿ ಕೊಡಗಿನ ಕುವರಿ ಸೌಮ್ಯಾ

  coorg beauty in hafta

  ಹಫ್ತಾ ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಇದ್ದಾರೆ. ನಿರ್ದೇಶಕ ಪ್ರಕಾಶ್ ಹೆಬ್ಬಾಳ ಅವರಿಗೆ ಇದು ಚೊಚ್ಚಲ ಸಿನಿಮಾ. ಮೈತ್ರಿ ಮಂಜುನಾಥ್ ನಿರ್ಮಾಣದ ಸಿನಿಮಾದಲ್ಲಿ ಹೊಸಬರಿಗೇ ಹೆಚ್ಚು ಅವಕಾಶ ನೀಡಲಾಗಿದೆ. ಚಿತ್ರದ ನಾಯಕಿಯೂ ಕನ್ನಡ ಚಿತ್ರರಂಗಕ್ಕೆ ಹೊಸಬರೇ.

  ಮೂಲತಃ ಕೊಡಗಿನವರಾದ ಸೌಮ್ಯ ತಿತೀರಾ, ಹಫ್ತಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಾಡೆಲಿಂಗ್ ಕ್ಷೇತ್ರದಿಂದ ಬಂದಿರುವ ಚೆಲುವೆ, 2018ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲ್‍ವರೆಗೂ ತಲುಪಿದ್ದವರು.

  ರೌಡಿಸಂ ಕಥೆಯ ಚಿತ್ರದಲ್ಲಿ ಸೌಮ್ಯಾ ಅವರದ್ದು ಸಮಾಜದಿಂದ ತಿರಸ್ಕøತವಾದ ಹೆಣ್ಣಿನ ಪಾತ್ರ.  ಬಹಳ ಡಿಫರೆಂಟ್ ಕ್ಯಾರೆಕ್ಟರ್ ಎಂದು ಮಾಹಿತಿ ನೀಡಿದ್ದಾರೆ ನಿರ್ದೇಶಕ ಪ್ರಕಾಶ್ ಹೆಬ್ಬಾಳ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery