` nenapirali prem, - chitraloka.com | Kannada Movie News, Reviews | Image

nenapirali prem,

 • ಲೈಫ್ ಈಸ್ ಬ್ಯೂಟಿಫುಲ್

  life is beautiful

  ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಒನ್‍ಲೈನ್ ಸ್ಟೋರಿ ಏನು..? ನಿರ್ದೇಶಕರು ಹೇಳೋದು ಒಂದೇ ವರ್ಡ್ ಉತ್ತರ. ಲೈಫ್ ಈಸ್ ಬ್ಯೂಟಿಫುಲ್. ಚಿತ್ರದ ಕಥೆ ಇರುವುದು ಹಾಗೂ ಚಿತ್ರಕಥೆಯೊಳಗಿನ ಹೂರಣ ಇದೆ..

  ಜೀವನವನ್ನು ನಾವು ಇಷ್ಟಪಟ್ಟಂತೆ ಬದುಕಬೇಕು ಎಂದು ಕನಸು ಕಾಣುವ ನಾಯಕಿ. ಕಟ್ಟುಪಾಡುಗಳನ್ನೆಲ್ಲ ಧಿಕ್ಕರಿಸಿ ಹೊರಡುವ ಅವಳಿಗೆ, ಯಾವುದೋ ಕಾರಣದಿಂದಾಗಿ ಒಂದು ಸೆಲ್ಫಿಗೆ ಒಂದಾಗ್ತಾರೆ. ಅವರು ಸೆಲ್ಫಿಗೆ ಒಂದಾಗೋದು ಏಕೆ ಅನ್ನೋದೇ ಇಂಟ್ರೆಸ್ಟಿಂಗ್ ಆಗಿದ್ಯಂತೆ. 

  ಬೋಲ್ಡ್ ಹುಡುಗಿಯಾಗಿ ಹರಿಪ್ರಿಯಾ, ಕೋಟ್ಯಧಿಪತಿಯಾಗಿ ಪ್ರಜ್ವಲ್ ದೇವರಾಜ್, ನಿರ್ದೇಶಕನಾಗುವ ಕನಸು ಹೊತ್ತ ಹುಡುಗನಾಗಿ ಪ್ರೇಮ್ ನಟಿಸಿದ್ದಾರೆ. ಇವರೆಲ್ಲರನ್ನೂ ಒಟ್ಟಿಗೇ ನಿಲ್ಲಿಸಿ ಸೆಲ್ಫಿ ತಗೊಂಡಿರೋದು ದಿನಕರ್ ತೂಗುದೀಪ್. ಸೆಲ್ಫಿ ಹೆಂಗಿದ್ಯೋ.. ಇದೇ ವಾರ ನೋಡಿ ಹೇಳಿ.

 • ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಹೀರೋ ಯಾರು..?

  prajwal devaraj, hari priya, nenapirali prem in life jothondu selfi

  ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದಲ್ಲಿ ಆನ್‍ಸ್ಕ್ರೀನ್ ಮೇಲೆ ಇಬ್ಬರು ಹೀರೋಗಳಿದ್ದಾರೆ. ಲವ್ಲಿ ಸ್ಟಾರ್ ಪ್ರೇಮ್. ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್. ಹೀರೋಯಿನ್ ಹರಿಪ್ರಿಯಾ. ಇನ್ನು ಡೈರೆಕ್ಟರ್ ದಿನಕರ್ ತೂಗುದೀಪ್ ಕೂಡಾ ಚಿತ್ರದ ಇನ್ನೊಬ್ಬ ಹೀರೋನೇ. ತಮ್ಮ ಹೆಸರಿನಲ್ಲೇ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಕರೆತರುವ ಶಕ್ತಿಯಿರುವ ಕನ್ನಡದ ಕೆಲವೇ ನಿರ್ದೇಶಕರಲ್ಲಿ ದಿನಕರ್ ಕೂಡಾ ಒಬ್ಬರು. ಆದರೆ, ನಟ ಪ್ರೇಮ್ ಪ್ರಕಾರ ಇವರಲ್ಲಿ ಯಾರೊಬ್ಬರೂ ಚಿತ್ರದ ಹೀರೋ ಅಲ್ಲ. ಹಾಗಾದರೆ ಹೀರೋ ಯಾರು..?

  ಚಿತ್ರದ ಹೀರೋ ಕಥೆ. ಕಥೆ ಎಷ್ಟು ಫ್ರೆಶ್ ಆಗಿದೆ, ಚಿತ್ರದಲ್ಲ ಪ್ರತಿಯೊಬ್ಬರೂ ಹೈಲೈಟ್ ಆಗುತ್ತಾರೆ. ಕಥೆಯೇ ಹೀರೋ ಅಂತಾರೆ ಪ್ರೇಮ್. ಚಿತ್ರಕ್ಕೆ ಕಥೆ ಬರೆದಿರುವುದು ದಿನಕರ್ ಅವರ ಪತ್ನಿ ದಿವ್ಯಾ.

  ನಮಗೆ ಇಷ್ಟವಾದವರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತೇವೆ. ಒಳ್ಳೆಯ ಬ್ಯಾಕ್‍ಗ್ರೌಂಡ್ ಕಂಡಾಗ ಅದರ ಹಿನ್ನೆಲೆಯಲ್ಲಿ ಸೆಲ್ಫಿ ತೆಗೆದುಕೊಳ್ತೇವೆ. ಸುಮ್ಮನೆ ಎಲ್ಲಿ ಅಂದ್ರೆ ಅಲ್ಲಿ ಸೆಲ್ಫಿ ತೆಗೆದುಕೊಳ್ಳಲ್ಲ. ಲೈಫ್ ಕೂಡಾ ಹಾಗೇನೆ ಅನ್ನೋದು ಚಿತ್ರದ ಥೀಮ್. ಹಾಗಾದರೆ ಸೆಲ್ಫಿ.. ಅದರಲ್ಲೂ ಲೈಫ್ ಜೊತೆಗೆ ಹೇಗಿರಬಹುದು. ಅದೊಂದು ಅದ್ಭುತ ಜರ್ನಿ. ಡೋಂಟ್ ಮಿಸ್ ಅಂತಾರೆ ಪ್ರೇಮ್.

 • ಲೈಫ್ ಜೊತೆ ಸೆಲ್ಫಿಗೆ ಸೆಲ್ಫಿ ಕಳಿಸಿದ್ರಾ..?

  selfie contest from life jothe ondu selfie

  ಲೈಫ್ ಜೊತೆ ಒಂದ್ ಸೆಲ್ಫಿ. ಸಾರಥಿ ನಂತರ ತೂಗುದೀಪ ದಿನಕರ್ ನಿರ್ದೇಶಿಸಿರುವ ಸಿನಿಮಾ. ಪ್ರಜ್ವಲ್ ದೇವರಾಜ್, ನೆನಪಿರಲಿ ಪ್ರೇಮ್ ಮತ್ತು ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿರುವ ಸಿನಿಮಾ. ಸಿನಿಮಾಗೆ ಕಥೆ ಬರೆದಿರುವುದು ದಿನಕರ್ ಪತ್ನಿ ಮಾನಸ. ಸಮೃದ್ಧಿ ಮಂಜುನಾಥ್ ಮತ್ತು ವಿರಾಟ್ ಸಾಯಿ ನಿರ್ಮಾಣದ ಚಿತ್ರ, ರಿಲೀಸ್‍ಗೆ ರೆಡಿಯಾಗಿದೆ. 

  ರಿಲೀಸ್ ಹೊತ್ತಿನಲ್ಲೇ ಪ್ರೇಕ್ಷಕರಿಗೆ ಆಸಕ್ತಿಕರ ಸ್ಪರ್ಧೆಯೊಂದನ್ನೂ ಇಟ್ಟಿದೆ. ನೀವು ಮಾಡಬೇಕಿರೋದು ಇಷ್ಟೆ. ನಿಮ್ಮದೊಂದು ಚೆಂದದ ಸೆಲ್ಫಿ ತೆಗೆದು 

  9743873656ಗೆ ಕಳಿಸಿಕೊಡಬೇಕು. ಫೇಸ್‍ಬುಕ್, ಟ್ವಿಟರ್, ಇನ್‍ಸ್ಟಾಗ್ರಾಂಗಳಲ್ಲಿ.. ನಿಮ್ಮ ಸೆಲ್ಫಿಯನ್ನು ಲೈಫ್ ಜೊತೆ ಒಂದ್ ಸೆಲ್ಫಿ ಪೇಜ್‍ಗೆ ಟ್ಯಾಗ್ ಮಾಡಬೇಕು.

  ಇಷ್ಟು ಮಾಡಿದ್ರೆ ನಮಗೇನು ಅಂತೀರಾ..? ನಿಮ್ಮ ಅದೃಷ್ಟ ಚೆನ್ನಾಗಿದ್ದರೆ, ಪ್ರಜ್ವಲ್, ಹರಿಪ್ರಿಯಾ, ಪ್ರೇಮ್, ದಿನಕರ್.. ಇವರೆಲ್ಲ ನಿಮಗೆ ಡಿನ್ನರ್ ಕೊಡಿಸ್ತಾರೆ. ಅವರೆಲ್ಲರ ಜೊತೆ ಒಟ್ಟಿಗೇ ಊಟ ಮಾಡಿ, ಮಾತನಾಡಿ, ಅವರೆಲ್ಲರೊಂದಿಗೆ ಒಂದು ಸೆಲ್ಫಿಯನ್ನೂ ತೆಗೆದುಕೊಳ್ಳಬಹುದು. ಸೆಲ್ಫಿ ಕಳಿಸಿದ್ರಾ..?

 • ಲೈಫ್ ಮಧ್ಯೆ ಪ್ರೇಮ್ ಒಂದ್ ಹೋಟ್ಲು..!

  lovely star prem turns hotelier

  ಲವ್ಲಿ ಸ್ಟಾರ್ ಪ್ರೇಮ್ ಹೋಟೆಲ್ ಶುರು ಮಾಡಿದ್ದಾರೆ. ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುವಾಗಲೇ ಉದ್ಯಮ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಗೆಳೆಯರ ಜೊತೆ ಸೇರಿ ರೆಸ್ಟೋರೆಂಟ್‍ವೊಂದನ್ನು ಶುರು ಮಾಡುತ್ತಿದ್ದಾರೆ.

  ಸಿನಿಮಾ ನನ್ನ ಮೊದಲ ಆದ್ಯತೆ. ರೆಸ್ಟೋರೆಂಟ್‍ಗೆ ಬಂದಿರೋದು ಗೆಳೆಯರ ಮೇಲಿನ ಪ್ರೀತಿಗಾಗಿ. ಉದ್ಯಮದಲ್ಲಿಯೂ ಯಶಸ್ಸು ಸಾಧಿಸಬೇಕೆಂಬ ಆಸೆಯಿದೆ ಎಂದಿದ್ದಾರೆ ಪ್ರೇಮ್.

  ಪ್ರೇಮ್ ಇವತ್ತು ಲವ್ಲಿ ಸ್ಟಾರ್ ಆಗಿರಬಹುದು. ಆದರೆ, ಜೀವನದ ಪ್ರತಿ ಹಂತದಲ್ಲಿಯೂ ಕಷ್ಟನಷ್ಟಗಳನ್ನು ಅನುಭವಿಸಿಕೊಂಡೇ ಬೆಳೆದವರು ಪ್ರೇಮ್. ಪ್ರೇಮ್ ಅವರ ಹೊಸ ಉದ್ಯಮ ಸಾಹಸಕ್ಕೆ ಶುಭವಾಗಲಿ.

   

 • ವಿಯೆಟ್ನಾಂನಲ್ಲಿ ಚಿತ್ರೀಕರಣಗೊಂಡ ಫಸ್ಟ್ ಮೂವಿ ಪ್ರೇಮಂ ಪೂಜ್ಯಂ

  ವಿಯೆಟ್ನಾಂನಲ್ಲಿ ಚಿತ್ರೀಕರಣಗೊಂಡ ಫಸ್ಟ್ ಮೂವಿ ಪ್ರೇಮಂ ಪೂಜ್ಯಂ

  ವಿಯೆಟ್ನಾಂ ಅನ್ನೋ ದೇಶದ ಹೆಸರು ಕನ್ನಡಿಗರಿಗೆ ಬಹುತೇಕರಿಗೆ ಗೊತ್ತಿಲ್ಲ. ಗೊತ್ತಿದ್ದವರಿಗೆ ಶೀತಲ ಸಮರದ ಯುದ್ಧದ ಕಾರಣದಿಂದಾಗಿ ಗೊತ್ತಷ್ಟೆ.. ಆ ದೇಶದಲ್ಲೀಗ ಪ್ರೇಮಂ ಪೂಜ್ಯಂ ಟೀಂ, ಶೂಟಿಂಗ್ ಮಾಡಿರುವುದೇ ವಿಶೇಷ. ಪ್ರೇಮ್ ಮತ್ತು ಬೃಂದಾ ಆಚಾರ್ಯ ನಡುವಿನ ರೊಮ್ಯಾಂಟಿಕ್ ದೃಶ್ಯಗಳ ಚಿತ್ರೀಕರಣಕ್ಕೆ ವಿಯೆಟ್ನಾಂನ ಮಾಂಗ್ ಕಾಯ್`ಗೆ ತೆರಳಿತ್ತಂತೆ ಚಿತ್ರತಂಡ.

  ಅಲ್ಲಿ ಎಲ್ಲವೂ ಮಂಜು. ನೋಡೋಕೆ ಬ್ಯೂಟಿಫುಲ್. ಆದರೆ.. ಎಷ್ಟೋ ಬಾರಿ ಸೂರ್ಯದ ದರ್ಶನವೇ ಆಗುತ್ತಿರಲಿಲ್ಲ. ಹೀಗಾಗಿ ಹಗಲು ಹೊತ್ತಿನಲ್ಲೇ ಲೈಟ್ ಬಳಸಿ ಶೂಟ್ ಮಾಡಿದ್ದೇವೆ ಎನ್ನುತ್ತಾರೆ ಕೊರಿಯೋಗ್ರಾಫರ್ ನವೀನ್ ಕುಮಾರ್.

  ಮಾಂಗ್ ಕಾಯ್ ಪ್ರದೇಶ ಬರೋದು ವಿಯೆಟ್ನಾಂ-ಚೀನಾ ಬಾರ್ಡರ್‍ನಲ್ಲಂತೆ. ಅಲ್ಲಿಗೆ ಫ್ಲೈಟುಗಳಿಲ್ಲ. ಕಾರಿನಲ್ಲೇ ಹೋಗಬೇಕು. ಅದೂ 600 ಕಿ.ಮೀ. ದೂರ. 60 ಜನರ ತಂಡ ಮತ್ತು ಚಿತ್ರೀಕರಣದ ಉಪಕರಣಗಳು.. ಒಂದೊಂದು ಸೀನ್ ಕೂಡಾ ಅಷ್ಟೇ ಶ್ರಮ ಬೇಡುತ್ತದೆ ಎನ್ನುತ್ತಾರೆ ನವೀನ್. ಆ ಶ್ರಮಕ್ಕೆ ಪ್ರತಿಫಲವೂ ಸಿಕ್ಕಿದೆ. ಒಂದೊಂದು ಸೀನ್ ಕೂಡಾ ಪೈಂಟಿಂಗ್‍ನಂತೆ ಬಂದಿದೆ ಅನ್ನೋ ಖುಷಿ ನಿರ್ದೇಶಕ ಡಾ.ರಾಘವೇಂದ್ರ ಅವರಿಗೆ ಇದೆ. ಇದು ವೈದ್ಯರುಗಳೇ ಒಟ್ಟಾಗಿ ಸೇರಿ ನಿರ್ಮಿಸಿ, ನಿರ್ದೇಶಿಸ್ತಿರೋ ಸಿನಿಮಾ. ಒಂಥರಾ ಡಾಕ್ಟರ್ ಲವ್ ಸ್ಟೋರಿ.

 • ವೈದ್ಯರ ಮನಸ್ಸು ಗೆದ್ದ ಪ್ರೇಮಂ ಪೂಜ್ಯಂ

  ವೈದ್ಯರ ಮನಸ್ಸು ಗೆದ್ದ ಪ್ರೇಮಂ ಪೂಜ್ಯಂ

  ಪ್ರೇಮಂ ಪೂಜ್ಯಂ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಪ್ರೀತಿಯನ್ನು ದೇವರಿಗೆ ಹೋಲಿಸಿ ಪವಿತ್ರ ಪ್ರೀತಿಯೇ ಶ್ರೇಷ್ಟ ಎಂದು ತೋರಿಸಿರುವ ಪರಿ ಎಲ್ಲ ವಯೋಮಾನದವರಿಗೂ ಮೆಚ್ಚುಗೆಯಾಗಿದೆ. ವಿಶೇಷವಾಗಿ ವೈದ್ಯರಿಗೆ.

  ಇದು ವೈದ್ಯರಿಂದ ವೈದ್ಯರಿಗಾಗಿ ವೈದ್ಯರೇ ಸೃಷ್ಟಿಸಿರುವ ಅಪರೂಪದ ಸಿನಿಮಾ. ಚಿತ್ರದ ನಿರ್ಮಾಪಕರೂ ಡಾಕ್ಟರ್ಸ್. ನಿರ್ದೇಶಕರೂ ಡಾಕ್ಟರ್. ಸಂಗೀತ ನಿರ್ದೇಶಕರೂ ಡಾಕ್ಟರ್. ಹೀಗಾಗಿ ವೈದ್ಯರಿಗೆ ಸಿನಿಮಾ ಇನ್ನಷ್ಟು ಇಷ್ಟವಾಗಿದೆ. ನೆನಪಿರಲಿ ಪ್ರೇಮ್ ಅಭಿನಯದ 25ನೇ ಸಿನಿಮಾ ಪ್ರೇಮಂ ಪೂಜ್ಯಂ. ಡಾ.ರಾಘವೇಂದ್ರ ನಿರ್ದೇಶಿಸಿರುವ ಚಿತ್ರವನ್ನು ವೈದ್ಯರುಗಳು ತಂಡೋಪತಂಡವಾಗಿ ಬಂದು ನೋಡಿ ಮೆಚ್ಚಿದ್ದಾರೆ.

 • ವೈದ್ಯರಿಂದ.. ವೈದ್ಯರಿಗಾಗಿ.. ವೈದ್ಯೋ ನಾರಾಯಣೋ ಹರಿ..

  ವೈದ್ಯರಿಂದ.. ವೈದ್ಯರಿಗಾಗಿ.. ವೈದ್ಯೋ ನಾರಾಯಣೋ ಹರಿ..

  ಲವ್ಲೀ ಸ್ಟಾರ್ ಪ್ರೇಮ್ ನಟಿಸುತ್ತಿರುವ ಅವರ 25ನೇ ಸಿನಿಮಾ ಪ್ರೇಮಂ ಪೂಜ್ಯಂ. ಆ ಚಿತ್ರತಂಡ ಈಗೊಂದು ಚೆಂದದ ಹಾಡು ಬಿಡುಗಡೆ ಮಾಡಿದೆ. ವೈದ್ಯೋ ನಾರಾಯಣೋ ಹರಿ.. ಎಂಬ ಈ ಹಾಡು ಎಲ್ಲರ ಮೆಚ್ಚುಗೆ ಗಳಿಸಿದೆ. ಈ ಹಾಡನ್ನು ಬಿಡುಗಡೆ ಮಾಡಿರೋದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ.

  ಹಾಡಿನಲ್ಲಿ ಕೊರೊನಾ ರೋಗಿಗಳು ಮತ್ತು ಕೊರೊನಾ ವೈರಸ್ ಮಧ್ಯೆ ತಡೆಗೋಡೆಯಾಗಿ ವೈದ್ಯರು ನಿಂತಿರುವಂತೆ ಚಿತ್ರಿಸಿರುವ ಆರ್ಟ್ ವರ್ಕ್ ಮೈಝುಮ್ ಎನಿಸುವಂತಿದೆ. ವೈದ್ಯರು ಸದ್ಯಕ್ಕೆ ರೋಗ ಮತ್ತು ರೋಗಿಗಳ ಮಧ್ಯೆ ಅಕ್ಷರಶಃ ತಡೆಗೋಡೆಯಾಗಿಯೇ ನಿಂತಿದ್ದಾರೆ.

  ವಿಶೇಷವೆಂದರೆ ಈ ಹಾಡು ವೈದ್ಯರಿಂದ ವೈದ್ಯರಿಗಾಗಿ ವೈದ್ಯರಿಗೋಸ್ಕರ. ಪ್ರೇಮಂ ಪೂಜ್ಯಂ ಚಿತ್ರದ ನಿರ್ದೇಶಕ ಮತ್ತು ಕಥೆಗಾರ ಡಾ.ರಾಘವೇಂದ್ರ. ಇನ್ನು ನಿರ್ಮಾಪಕರಾಗಿರುವ ಡಾ.ರಕ್ಷಿತ್ ಕೆದಂಬಾಡಿ, ಡಾ.ರಾಜ್‍ಕುಮಾರ್ ಜಾನಕಿರಾಮ್, ಡಾ.ರಾಘವೇಂದ್ರ, ಡಾ. ಮನೋಜ್ ಕೃಷ್ಣನ್ ಎಲ್ಲರೂ ವೈದ್ಯರೇ. ಇನ್ನು ಈ ಹಾಡಿಗೆ ಸಂಗೀತ ನೀಡಿರುವುದು ಒನ್ಸ್ ಎಗೇಯ್ನ್ ಡಾ.ರಾಘವೇಂದ್ರ. ಸಾಹಿತ್ಯವೂ ಅವರದ್ದೇ. ಹಾಡಿರುವುದು ಮಾತ್ರ ವಿಜಯ್ ಪ್ರಕಾಶ್. ಒಟ್ಟಿನಲ್ಲಿ ಈ ಹಾಡು ವೈದ್ಯರಿಂದ.. ವೈದ್ಯರಿಗಾಗಿ.. ವೈದ್ಯರಿಗೋಸ್ಕರ..

 • ಶಾರೂಕ್ ಅದೃಷ್ಟದ ರೂಂನಲ್ಲಿ ನೆನಪಿರಲಿ ಪ್ರೇಮ್

  nenapirali prem in sharukh khan's lucky room

  ನೆನಪಿರಲಿ ಪ್ರೇಮ್, ತಮ್ಮ ವೃತ್ತಿಜೀವನದ ಒಂದು ಮೈಲಿಗಲ್ಲಿನಲ್ಲಿ ನಿಂತಿದ್ದಾರೆ. ಅವರ 25ನೇ ಸಿನಿಮಾ ಪ್ರೇಮಂ ಪೂಜ್ಯಂ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಆ ಶೂಟಿಂಗ್ ವೇಳೆಯಲ್ಲಿಯೇ ಅವರಿಗೆ ಶಾರೂಕ್ ಅವರ ಅದೃಷ್ಟದ ರೂಂ ಸಿಕ್ಕಿದೆ.

  ಮನ್ನಾರ್‍ನಲ್ಲಿ ಶೂಟಿಂಗ್‍ನಲ್ಲಿರುವ ಪ್ರೇಮ್‍ಗೆ ಅಲ್ಲಿನ ಹೋಟೆಲ್‍ನ ಸ್ಪೆಷಲ್ ರೂಂ ನೀಡಲಾಗಿದೆ. ಅದು ಚೆನ್ನೈ ಎಕ್ಸ್‍ಪ್ರೆಸ್ ಚಿತ್ರೀಕರಣದ ವೇಳೆ ಶಾರೂಕ್ ಖಾನ್ ಉಳಿದುಕೊಂಡಿದ್ದ ರೂಂ. ಶಾರೂಕ್ ನೆನಪಿಗಾಗಿ ಆ ರೂಂನ್ನು ಶಾರೂಕ್ ಹಾಗೂ ಚೆನ್ನೈ ಎಕ್ಸ್‍ಪ್ರೆಸ್ ಪೋಸ್ಟರುಗಳಿಂದಲೇ ಅಲಂಕರಿಸಲಾಗಿದೆ. 

  ಶಾರೂಕ್ ಅಭಿಮಾನಿಯೂ ಆಗಿರುವ ಪ್ರೇಮ್‍ಗೆ ಇದು ಥ್ರಿಲ್ ಕೊಟ್ಟಿದೆ. ಶಾರೂಕ್‍ಗೆ ಚೆನ್ನೈ ಎಕ್ಸ್‍ಪ್ರೆಸ್‍ನಂತಹುದೇ ದೊಡ್ಡ ಸಕ್ಸಸ್ ಸಿಗಲಿ.

 • ಸುಸು ಚಿಕ್ಕಣ್ಣ ನೋಡಿದಿರಾ.. ನೊಡಿದಿರಾ..

  chikkana as susu in dalapathi

  ಹಾಸ್ಯನಟ ಚಿಕ್ಕಣ್ಣ, ದಳಪತಿಯಲ್ಲಿ ಸುಸು ಎಂಬ ಪಾತ್ರ ಮಾಡಿದ್ದಾರೆ. ಏನ್ರೀ ಇದು ಸುಸು ಎಂದು ಮೂಗು ಮುರಿಯಬೇಡಿ. ಸುಸು ಎಂದರೆ, ಬೇರೇನಲ್ಲ, ಸುರಾಪುರದ ಸುಂದರಾಂಗ ಎಂದರ್ಥ. ಶಾರ್ಟ್ & ಸ್ವೀಟಾಗಿ ಸುಸು ಎಂದು ಕರೆಯಲಾಗಿದೆ. ಅಷ್ಟೆ.

  ದಳಪತಿಯಲ್ಲಿ ಚಿಕ್ಕಣ್ಣನವರದ್ದು ಹೀರೋ ಫ್ರೆಂಡ್ ಪಾತ್ರ. ನಾಯಕ ಪ್ರೇಮ್, ಸುಸು ಎಂದು ಕರೆದಾಗಲೆಲ್ಲ ಎಂಟ್ರಿ ಕೊಡುವ ಚಿಕ್ಕಣ್ಣ, ಪ್ರಾಸಬದ್ಧವಾಗಿ ಮಾತನಾಡುತ್ತಾ ನಕ್ಕು ನಲಿಸುತ್ತಾರೆ. ಚಿಕ್ಕಣ್ಣ ಇದುವರೆಗೆ ಇಂತಹ ಪಾತ್ರ ಮಾಡಿಲ್ಲ ಎಂದು ವಿಶ್ವಾಸದಿಂದ ಹೇಳಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜ್. ಸಿನಿಮಾ ನಾಳೆ ರಿಲೀಸ್. ಸುಸು ಮಾಡಲು.. ಅಲ್ಲಲ್ಲ.. ನೋಡಲು ಮರೆಯದಿರಿ.

 • ಸೆಲಬ್ರಿಟಿಗಳು ಕಂಡಂತೆ ಪ್ರೇಮಂ ಪೂಜ್ಯಂ

  ಸೆಲಬ್ರಿಟಿಗಳು ಕಂಡಂತೆ ಪ್ರೇಮಂ ಪೂಜ್ಯಂ

  ಪ್ರೇಮಂ ಪೂಜ್ಯಂ ಚಿತ್ರ ರಿಲೀಸ್ ಆಗಿದೆ. ಸಿನಿಮಾ ನೋಡಿದವರ ಪ್ರಕಾರ ಈ ಚಿತ್ರಕ್ಕೆ ಮೂವರು ಹೀರೋಗಳು. ಲವ್ಲೀ ಸ್ಟಾರ್ ಪ್ರೇಮ್, ಡೈರೆಕ್ಟರ್ ರಾಘವೇಂದ್ರ ಮತ್ತು ಕ್ಯಾಮೆರಾಮನ್ ನವೀನ್ ಕುಮಾರ್. ಇಡೀ ಚಿತ್ರವನ್ನು ಒಂದು ಸುಂದರ ಪೇಂಯ್ಟಿಂಗ್‍ನಂತೆ ಕಟ್ಟಿಕೊಟ್ಟಿರೋ ನವೀನ್ ಕುಮಾರ್ ಬಗ್ಗೆ ಪ್ರೇಕ್ಷಕರಷ್ಟೇ ಅಲ್ಲ, ಸಿನಿಮಾ ತಾರೆಗಳೂ ಚೆಂದದ ಮಾತನ್ನಾಡುತ್ತಿದ್ದಾರೆ. ಎಲ್ಲರಿಗೂ ಸಿನಿಮಾ ಇಷ್ಟವಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರೀತಿಯನ್ನು ಹೆಂಗೆಂಗೋ ತೋರಿಸಿ ಹುಚ್ಚು ಹಿಡಿಸುತ್ತಿರುವಾಗ.. ಪ್ರೀತಿಯೇ ದೇವರು ಎಂದು ತೋರಿಸಿರುವ ರಾಘವೇಂದ್ರ ಅವರ ಸ್ಟೈಲ್ ಇಷ್ಟವಾಗಿದೆ. ಪ್ರೇಮ್ ಇನ್ನಷ್ಟು ಯಂಗ್ ಆಗಿದ್ದಾರೆ.

  ಪ್ರೇಮ್ ಅವರ ತಂದೆ : ನನಗಂತೂ ಸಿನಿಮಾ ಸಖತ್ ಇಷ್ಟವಾಯ್ತು. ಪುಟ್ಟಣ್ಣ ಕಣಗಾಲ್ ಅವರಂತೆ ಸಿನಿಮಾ ಮಾಡಿದ್ದಾರೆ ಡೈರೆಕ್ಟರ್.

  ಪ್ರೇಮ್ : ಎಲ್ಲರೂ ಕಣ್ಣೀರಿಡುತ್ತಿದ್ದಾರೆ. ನನ್ನ ಮಗಳನ್ನೂ ಸಿನಿಮಾ ನೋಡೋಕೆ ಕರ್ಕೊಂಡ್ ಬರ್ತೀನಿ.

  ಬೃಂದಾ ಆಚಾರ್ಯ : ಬೇರೆ ಸಿನಿಮಾಗಳನ್ನು ಒಪ್ಪಿಕೊಳ್ಳದೆ 100% ಈ ಚಿತ್ರಕ್ಕೆ ಕಮಿಟ್ ಆಗಿದ್ದೆ. ಅದಕ್ಕೆ ಫಲ ಸಿಕ್ಕಿದೆ. ನನ್ನ ತಮ್ಮ ಸಿನಿಮಾ ನೋಡಿ ಅಳುತ್ತಿದ್ದ.

  ಶರಣ್ : ಇತ್ತೀಚಿನ ದಿನದಲ್ಲಿ ನಾನು ನೋಡಿದ ಅದ್ಭುತ ಪ್ರೇಮಕಾವ್ಯ ಪ್ರೇಮಂ ಪೂಜ್ಯಂ.

  ಖುಷಿ (ದಿಯಾ ಖ್ಯಾತಿ) : ಪ್ರೇಮ್ ಸರ್‍ಗೆ ಏಜ್ ಕಡಿಮೆ ಆಗ್ತಾ ಇದೆ. ಪವಿತ್ರವಾದ ಪ್ರೀತಿ ಹೇಗಿರುತ್ತೆ ಅನ್ನೋದನ್ನ ಅದ್ಭುತವಾಗಿ ತೋರಿಸಿದ್ದಾರೆ.

  ಭಾವನಾ : ತುಂಬಾ ದಿನಗಳ ನಂತರ ಒಂದು ಸುಂದರ ಚಿತ್ರ ನೋಡಿದೆ. ನನಗೆ ತುಂಬಾ ಖುಷಿ ಆಯ್ತು.

  ಪ್ರಥಮ್ : ನೀವೂ ಬನ್ನಿ, ನಿಮ್ಮ ಗರ್ಲ್‍ಫ್ರೆಂಡ್‍ನೂ ಕರ್ಕೊಂಡ್ ಬನ್ನಿ.

  ಕಾರುಣ್ಯ ರಾಮ್ : ಎಲ್ಲ ಹುಡುಗಿಯರಿಗೂ ಈ ಥರಾ ಹುಡುಗ ಸಿಗಬೇಕು. ಲವ್ ಹಿಂಗಿರುತ್ತಾ ಅನ್ನೋದೇ ಖುಷಿ ಕೊಡುತ್ತೆ..

  ಹೀಗೆ ಚಿತ್ರ ನೋಡಿದ ಎಲ್ಲರೂ ಚಿತ್ರವನ್ನು ಹಾಡಿ ಹೊಗಳಿದ್ದಾರೆ. ತರುಣ್ ಸುಧೀರ್, ಅನು ಪ್ರಭಾಕರ್, ಮಾಸ್ಟರ್ ಆನಂದ್.. ಹೀಗೆ ಚಿತ್ರವನ್ನು ನೋಡಿದ ಎಲ್ಲರಿಗೂ ಚಿತ್ರದ ಕಾನ್ಸೆಪ್ಟ್ ಇಷ್ಟವಾಗಿದೆ. ಡಾಕ್ಟರ್ ರಾಘವೇಂದ್ರ ಗೆದ್ದಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery