` nenapirali prem, - chitraloka.com | Kannada Movie News, Reviews | Image

nenapirali prem,

 • ರಾಧಿಕಾ ಕುಮಾರಸ್ವಾಮಿ ಮತ್ತು ನೆನಪರಲಿ ಪ್ರೇಮ್ ಜೊತೆ ಜೊತೆಯಲಿ

  Prem and Radhika Kumaraswamy Together

  ಚೌಕ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ ನಟ ನೆನಪಿರಲಿ ಪ್ರೇಮ್, ರಾಧಿಕಾ ಕುಮಾರ ಸ್ವಾಮಿ ಜೊತೆಗೆ ಬರುತ್ತಿದ್ದಾರೆ. ಟಿವಿ ಶೋನಲ್ಲಿ. ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್ ಸೀಸನ್ 2ನಲ್ಲಿ ನೆನಪಿರಲಿ ಪ್ರೇಮ್ ಜಡ್ಜ್. ಅವರ ಜೊತೆಗೆ ಜಡ್ಜ್ ಆಗಿ ಕೂರುತ್ತಿರುವ ನಾಯಕಿ ರಾಧಿಕಾ ಕುಮಾರಸ್ವಾಮ

  ನೆನಪಿರಲಿ ಪ್ರೇಮ್​ಗೆ ಟಿವಿ ಶೋ ಹೊಸದಲ್ಲ. ಈ ಮೊದಲು ಪುಟಾಣಿ ಪಂಟ್ರು ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದ ಪ್ರೇಮ್​ಗೆ, ಕಿರುತೆರೆಯಲ್ಲಿ ಇದು 2ನೇ ಅನುಭವ. ಹೆಚ್ಚೂ ಕಡಿಮೆ ತೆರೆಮರೆಗೆ ಸರಿದವರಂತೆ ಇರುವ ರಾಧಿಕಾ ಕುಮಾರಸ್ವಾಮಿ, ಈ ಶೋ ಮೂಲಕ ಟಿವಿಯಲ್ಲಿ ಬರುತ್ತಿರುವುದು ಈ ರಿಯಾಲಿಟಿ ಶೋನ ವಿಶೇಷ.

  ಇವರಿಬ್ಬರ ಜೊತೆ 3ನೇ ಜಡ್ಜ್ ಆಗಿರುವದು ಕೊರಿಯೋಗ್ರಾಫರ್ ಸಲ್ಮಾನ್. ಜೂನ್ 24ರಿಂದ ಸ್ಟಾರ್ ಸುವರ್ಣದಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ

 • ರೌಡಿ ಕೃತಿ ಕರಬಂಧ..!

  kriti kharbandha is now rowdy

  ಕೃತಿ ಕರಬಂಧ ಎಂದರೆ ತಕ್ಷಣ ನೆನಪಾಗೋದು ಆಕೆಯ ನಗು. ಅದರಲ್ಲೂ ಗೂಗ್ಲಿಯಲ್ಲಿ ಆಗಾಗ್ಗೆ ತಲೆ ಕೂದಲನ್ನು ಹಿಂದಕ್ಕೆ ಸರಿಸುತ್ತಾ ಯಶ್‍ರನ್ನು ಕಾಡುವ ಸ್ಟೈಲು. ಅದಾದ ಮೇಲೆ ಕೃತಿ ಕರಬಂಧ ಕನ್ನಡದ ಹಲವು ಸ್ಟಾರ್‍ಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ನಗು, ಸೌಂದರ್ಯಕ್ಕೆ ಹೆಸರಾದ ಕೃತಿ ಕರಬಂಧ ಇದೇ ಮೊದಲ ಬಾರಿಗೆ ರೌಡಿಯಾಗಿದ್ದಾರೆ.

  ಕೃತಿ ಕರಬಂಧ ರೌಡಿಯಾಗಿರೋದು ದಳಪತಿ ಚಿತ್ರದಲ್ಲಿ. ಸಿನಿಮಾದಲ್ಲಿ ಕೃತಿ ಕರಬಂಧ ಅವರದ್ದು ಕಾಲೇಜು ಕಾರಿಡಾರ್‍ನಲ್ಲಿ ಕಾಣಿಸಿಕೊಳ್ಳುವ ಬ್ಯೂಟಿಫುಲ್ ರೌಡಿಯ ಪಾತ್ರ. ಪಾತ್ರವನ್ನು ನಿರ್ದೇಶಕ ಪ್ರಶಾಂತ್ ರಾಜ್ ಸ್ಟೈಲಿಶ್ ಆಗಿ ತೆರೆಗೆ ತಂದಿದ್ದಾರೆ. ಇನ್ನು ಪ್ರೇಮ್ ಅವರ ಜೊತೆ ನಟಿಸಿದ ಕಾರಣ, ನನ್ನ ಕನ್ನಡ ಸುಧಾರಿಸಿದೆ. ಪ್ರೇಮ್ ತುಂಬಾ ಒಳ್ಳೆಯ ಕನ್ನಡ ಮಾತನಾಡ್ತಾರೆ. ಹೀಗಾಗಿ ರಿಹರ್ಸಲ್ ಮಾಡಿ ಮಾಡಿ ಇನ್ನೊಂದಿಷ್ಟು ಕನ್ನಡ ಕಲಿತಿದ್ದೇನೆ ಎಂದಿದ್ದಾರೆ ಗೂಗ್ಲಿ ಬ್ಯೂಟಿ.

  ಸದ್ಯಕ್ಕೆ ದಕ್ಷಿಣ ಭಾರತದ ಎಲ್ಲ ಭಾಷೆಯ ಚಿತ್ರರಂಗ ಹಾಗೂ ಬಾಲಿವುಡ್‍ನಲ್ಲೂ ಸರಿದಾಡುತ್ತಿರುವ ಚೆಲುವೆ, ಕನ್ನಡದಲ್ಲಿಯೇ ಗುರುತಿಸಿಕೊಂಡೆ. ಆದರೆ, ಇತ್ತೀಚೆಗೆ ಕನ್ನಡ ಚಿತ್ರರಂಗದಿಂದ ಯಾರೂ ಅಪ್ರೋಚ್ ಮಾಡುತ್ತಿಲ್ಲ. ನನಗೆ ಈಗಲೂ ಕನ್ನಡದಲ್ಲಿ ಹೆಚ್ಚು ಹೆಚ್ಚು ನಟಿಸುವ ಆಸೆಯಿದೆ ಎಂದು ಹೇಳಿಕೊಂಡಿದ್ದಾರೆ. ಎರಡು ಹಿಂದಿ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಕೃತಿ, ತೆಲುಗು ಚಿತ್ರವೊಂದರಲ್ಲೂ ನಟಿಸುತ್ತಿದ್ದಾರಂತೆ.

 • ಲವ್ಲಿ ಸ್ಟಾರ್ ಪ್ರೇಮಂ ಪೂಜ್ಯಂ.. ಇದು ಡಾಕ್ಟರ್ ಸಿನಿಮಾ

  lovely star prem;s

  ಲವ್ಲಿ ಸ್ಟಾರ್ ಪ್ರೇಮ್ 25ನೇ ಸಿನಿಮಾ ಮಾಡುತ್ತಿದ್ದಾರೆ ಎಂದು ಗೊತ್ತಾದಾಗಲೇ, ಏನಿರಬಹುದು ಸಿನಿಮಾ ಕಥೆ..? ಎಂಬ ಕುತೂಹಲ ಗರಿಗೆದರಿತ್ತು. ಮೊದಲೇ ಲವ್ಲಿ ಸ್ಟಾರ್, ನಿರ್ದೇಶಕರು ಬೇರೆ ಹೊಸಬರು.. ಹೀಗೆ ಕುತೂಹಲ ಸೃಷ್ಟಿಸಿದ್ದ ಸಿನಿಮಾದ ಟೈಟಲ್ ಪ್ರೇಮಂ ಪೂಜ್ಯಂ.

  ಪ್ರೇಮಂ ಎಂದರೆ ಪ್ರೇಮ್ ಕೂಡಾ ಆಗಬಹುದು. ಪ್ರೇಮವೂ ಆಗಬಹುದು. ಪ್ರೇಮಂ ಪೂಜ್ಯಂ ಚಿತ್ರದ ಫಸ್ಟ್‍ಲುಕ್ ಹೊರಬಿದ್ದಿದೆ. ಕೋಟ್ಯಧಿಪತಿಯ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ ನಟ ಪ್ರೇಮ್.

  ಅಂದಹಾಗೆ ಇದು ಕಂಪ್ಲೀಟ್ ಡಾಕ್ಟರ್ ಸಿನಿಮಾ. ಸಿನಿಮಾ ನಿರ್ದೇಶಕ ವೃತ್ತಿಯಲ್ಲಿ ಡಾಕ್ಟರ್ ಆಗಿರುವ ರಾಘವೇಂದ್ರ. ನಿರ್ಮಾಪಕರಾಗಿರುವ ರಕ್ಷಿತ್ ಮತ್ತು ರಾಜ್‍ಕುಮಾರ್, ಇಬ್ಬರೂ ಡಾಕ್ಟರುಗಳೇ. 

 • ಲೈಫ್ ಈಸ್ ಬ್ಯೂಟಿಫುಲ್

  life is beautiful

  ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಒನ್‍ಲೈನ್ ಸ್ಟೋರಿ ಏನು..? ನಿರ್ದೇಶಕರು ಹೇಳೋದು ಒಂದೇ ವರ್ಡ್ ಉತ್ತರ. ಲೈಫ್ ಈಸ್ ಬ್ಯೂಟಿಫುಲ್. ಚಿತ್ರದ ಕಥೆ ಇರುವುದು ಹಾಗೂ ಚಿತ್ರಕಥೆಯೊಳಗಿನ ಹೂರಣ ಇದೆ..

  ಜೀವನವನ್ನು ನಾವು ಇಷ್ಟಪಟ್ಟಂತೆ ಬದುಕಬೇಕು ಎಂದು ಕನಸು ಕಾಣುವ ನಾಯಕಿ. ಕಟ್ಟುಪಾಡುಗಳನ್ನೆಲ್ಲ ಧಿಕ್ಕರಿಸಿ ಹೊರಡುವ ಅವಳಿಗೆ, ಯಾವುದೋ ಕಾರಣದಿಂದಾಗಿ ಒಂದು ಸೆಲ್ಫಿಗೆ ಒಂದಾಗ್ತಾರೆ. ಅವರು ಸೆಲ್ಫಿಗೆ ಒಂದಾಗೋದು ಏಕೆ ಅನ್ನೋದೇ ಇಂಟ್ರೆಸ್ಟಿಂಗ್ ಆಗಿದ್ಯಂತೆ. 

  ಬೋಲ್ಡ್ ಹುಡುಗಿಯಾಗಿ ಹರಿಪ್ರಿಯಾ, ಕೋಟ್ಯಧಿಪತಿಯಾಗಿ ಪ್ರಜ್ವಲ್ ದೇವರಾಜ್, ನಿರ್ದೇಶಕನಾಗುವ ಕನಸು ಹೊತ್ತ ಹುಡುಗನಾಗಿ ಪ್ರೇಮ್ ನಟಿಸಿದ್ದಾರೆ. ಇವರೆಲ್ಲರನ್ನೂ ಒಟ್ಟಿಗೇ ನಿಲ್ಲಿಸಿ ಸೆಲ್ಫಿ ತಗೊಂಡಿರೋದು ದಿನಕರ್ ತೂಗುದೀಪ್. ಸೆಲ್ಫಿ ಹೆಂಗಿದ್ಯೋ.. ಇದೇ ವಾರ ನೋಡಿ ಹೇಳಿ.

 • ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಹೀರೋ ಯಾರು..?

  prajwal devaraj, hari priya, nenapirali prem in life jothondu selfi

  ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದಲ್ಲಿ ಆನ್‍ಸ್ಕ್ರೀನ್ ಮೇಲೆ ಇಬ್ಬರು ಹೀರೋಗಳಿದ್ದಾರೆ. ಲವ್ಲಿ ಸ್ಟಾರ್ ಪ್ರೇಮ್. ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್. ಹೀರೋಯಿನ್ ಹರಿಪ್ರಿಯಾ. ಇನ್ನು ಡೈರೆಕ್ಟರ್ ದಿನಕರ್ ತೂಗುದೀಪ್ ಕೂಡಾ ಚಿತ್ರದ ಇನ್ನೊಬ್ಬ ಹೀರೋನೇ. ತಮ್ಮ ಹೆಸರಿನಲ್ಲೇ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಕರೆತರುವ ಶಕ್ತಿಯಿರುವ ಕನ್ನಡದ ಕೆಲವೇ ನಿರ್ದೇಶಕರಲ್ಲಿ ದಿನಕರ್ ಕೂಡಾ ಒಬ್ಬರು. ಆದರೆ, ನಟ ಪ್ರೇಮ್ ಪ್ರಕಾರ ಇವರಲ್ಲಿ ಯಾರೊಬ್ಬರೂ ಚಿತ್ರದ ಹೀರೋ ಅಲ್ಲ. ಹಾಗಾದರೆ ಹೀರೋ ಯಾರು..?

  ಚಿತ್ರದ ಹೀರೋ ಕಥೆ. ಕಥೆ ಎಷ್ಟು ಫ್ರೆಶ್ ಆಗಿದೆ, ಚಿತ್ರದಲ್ಲ ಪ್ರತಿಯೊಬ್ಬರೂ ಹೈಲೈಟ್ ಆಗುತ್ತಾರೆ. ಕಥೆಯೇ ಹೀರೋ ಅಂತಾರೆ ಪ್ರೇಮ್. ಚಿತ್ರಕ್ಕೆ ಕಥೆ ಬರೆದಿರುವುದು ದಿನಕರ್ ಅವರ ಪತ್ನಿ ದಿವ್ಯಾ.

  ನಮಗೆ ಇಷ್ಟವಾದವರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತೇವೆ. ಒಳ್ಳೆಯ ಬ್ಯಾಕ್‍ಗ್ರೌಂಡ್ ಕಂಡಾಗ ಅದರ ಹಿನ್ನೆಲೆಯಲ್ಲಿ ಸೆಲ್ಫಿ ತೆಗೆದುಕೊಳ್ತೇವೆ. ಸುಮ್ಮನೆ ಎಲ್ಲಿ ಅಂದ್ರೆ ಅಲ್ಲಿ ಸೆಲ್ಫಿ ತೆಗೆದುಕೊಳ್ಳಲ್ಲ. ಲೈಫ್ ಕೂಡಾ ಹಾಗೇನೆ ಅನ್ನೋದು ಚಿತ್ರದ ಥೀಮ್. ಹಾಗಾದರೆ ಸೆಲ್ಫಿ.. ಅದರಲ್ಲೂ ಲೈಫ್ ಜೊತೆಗೆ ಹೇಗಿರಬಹುದು. ಅದೊಂದು ಅದ್ಭುತ ಜರ್ನಿ. ಡೋಂಟ್ ಮಿಸ್ ಅಂತಾರೆ ಪ್ರೇಮ್.

 • ಲೈಫ್ ಜೊತೆ ಸೆಲ್ಫಿಗೆ ಸೆಲ್ಫಿ ಕಳಿಸಿದ್ರಾ..?

  selfie contest from life jothe ondu selfie

  ಲೈಫ್ ಜೊತೆ ಒಂದ್ ಸೆಲ್ಫಿ. ಸಾರಥಿ ನಂತರ ತೂಗುದೀಪ ದಿನಕರ್ ನಿರ್ದೇಶಿಸಿರುವ ಸಿನಿಮಾ. ಪ್ರಜ್ವಲ್ ದೇವರಾಜ್, ನೆನಪಿರಲಿ ಪ್ರೇಮ್ ಮತ್ತು ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿರುವ ಸಿನಿಮಾ. ಸಿನಿಮಾಗೆ ಕಥೆ ಬರೆದಿರುವುದು ದಿನಕರ್ ಪತ್ನಿ ಮಾನಸ. ಸಮೃದ್ಧಿ ಮಂಜುನಾಥ್ ಮತ್ತು ವಿರಾಟ್ ಸಾಯಿ ನಿರ್ಮಾಣದ ಚಿತ್ರ, ರಿಲೀಸ್‍ಗೆ ರೆಡಿಯಾಗಿದೆ. 

  ರಿಲೀಸ್ ಹೊತ್ತಿನಲ್ಲೇ ಪ್ರೇಕ್ಷಕರಿಗೆ ಆಸಕ್ತಿಕರ ಸ್ಪರ್ಧೆಯೊಂದನ್ನೂ ಇಟ್ಟಿದೆ. ನೀವು ಮಾಡಬೇಕಿರೋದು ಇಷ್ಟೆ. ನಿಮ್ಮದೊಂದು ಚೆಂದದ ಸೆಲ್ಫಿ ತೆಗೆದು 

  9743873656ಗೆ ಕಳಿಸಿಕೊಡಬೇಕು. ಫೇಸ್‍ಬುಕ್, ಟ್ವಿಟರ್, ಇನ್‍ಸ್ಟಾಗ್ರಾಂಗಳಲ್ಲಿ.. ನಿಮ್ಮ ಸೆಲ್ಫಿಯನ್ನು ಲೈಫ್ ಜೊತೆ ಒಂದ್ ಸೆಲ್ಫಿ ಪೇಜ್‍ಗೆ ಟ್ಯಾಗ್ ಮಾಡಬೇಕು.

  ಇಷ್ಟು ಮಾಡಿದ್ರೆ ನಮಗೇನು ಅಂತೀರಾ..? ನಿಮ್ಮ ಅದೃಷ್ಟ ಚೆನ್ನಾಗಿದ್ದರೆ, ಪ್ರಜ್ವಲ್, ಹರಿಪ್ರಿಯಾ, ಪ್ರೇಮ್, ದಿನಕರ್.. ಇವರೆಲ್ಲ ನಿಮಗೆ ಡಿನ್ನರ್ ಕೊಡಿಸ್ತಾರೆ. ಅವರೆಲ್ಲರ ಜೊತೆ ಒಟ್ಟಿಗೇ ಊಟ ಮಾಡಿ, ಮಾತನಾಡಿ, ಅವರೆಲ್ಲರೊಂದಿಗೆ ಒಂದು ಸೆಲ್ಫಿಯನ್ನೂ ತೆಗೆದುಕೊಳ್ಳಬಹುದು. ಸೆಲ್ಫಿ ಕಳಿಸಿದ್ರಾ..?

 • ಲೈಫ್ ಮಧ್ಯೆ ಪ್ರೇಮ್ ಒಂದ್ ಹೋಟ್ಲು..!

  lovely star prem turns hotelier

  ಲವ್ಲಿ ಸ್ಟಾರ್ ಪ್ರೇಮ್ ಹೋಟೆಲ್ ಶುರು ಮಾಡಿದ್ದಾರೆ. ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುವಾಗಲೇ ಉದ್ಯಮ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಗೆಳೆಯರ ಜೊತೆ ಸೇರಿ ರೆಸ್ಟೋರೆಂಟ್‍ವೊಂದನ್ನು ಶುರು ಮಾಡುತ್ತಿದ್ದಾರೆ.

  ಸಿನಿಮಾ ನನ್ನ ಮೊದಲ ಆದ್ಯತೆ. ರೆಸ್ಟೋರೆಂಟ್‍ಗೆ ಬಂದಿರೋದು ಗೆಳೆಯರ ಮೇಲಿನ ಪ್ರೀತಿಗಾಗಿ. ಉದ್ಯಮದಲ್ಲಿಯೂ ಯಶಸ್ಸು ಸಾಧಿಸಬೇಕೆಂಬ ಆಸೆಯಿದೆ ಎಂದಿದ್ದಾರೆ ಪ್ರೇಮ್.

  ಪ್ರೇಮ್ ಇವತ್ತು ಲವ್ಲಿ ಸ್ಟಾರ್ ಆಗಿರಬಹುದು. ಆದರೆ, ಜೀವನದ ಪ್ರತಿ ಹಂತದಲ್ಲಿಯೂ ಕಷ್ಟನಷ್ಟಗಳನ್ನು ಅನುಭವಿಸಿಕೊಂಡೇ ಬೆಳೆದವರು ಪ್ರೇಮ್. ಪ್ರೇಮ್ ಅವರ ಹೊಸ ಉದ್ಯಮ ಸಾಹಸಕ್ಕೆ ಶುಭವಾಗಲಿ.

   

 • ಸುಸು ಚಿಕ್ಕಣ್ಣ ನೋಡಿದಿರಾ.. ನೊಡಿದಿರಾ..

  chikkana as susu in dalapathi

  ಹಾಸ್ಯನಟ ಚಿಕ್ಕಣ್ಣ, ದಳಪತಿಯಲ್ಲಿ ಸುಸು ಎಂಬ ಪಾತ್ರ ಮಾಡಿದ್ದಾರೆ. ಏನ್ರೀ ಇದು ಸುಸು ಎಂದು ಮೂಗು ಮುರಿಯಬೇಡಿ. ಸುಸು ಎಂದರೆ, ಬೇರೇನಲ್ಲ, ಸುರಾಪುರದ ಸುಂದರಾಂಗ ಎಂದರ್ಥ. ಶಾರ್ಟ್ & ಸ್ವೀಟಾಗಿ ಸುಸು ಎಂದು ಕರೆಯಲಾಗಿದೆ. ಅಷ್ಟೆ.

  ದಳಪತಿಯಲ್ಲಿ ಚಿಕ್ಕಣ್ಣನವರದ್ದು ಹೀರೋ ಫ್ರೆಂಡ್ ಪಾತ್ರ. ನಾಯಕ ಪ್ರೇಮ್, ಸುಸು ಎಂದು ಕರೆದಾಗಲೆಲ್ಲ ಎಂಟ್ರಿ ಕೊಡುವ ಚಿಕ್ಕಣ್ಣ, ಪ್ರಾಸಬದ್ಧವಾಗಿ ಮಾತನಾಡುತ್ತಾ ನಕ್ಕು ನಲಿಸುತ್ತಾರೆ. ಚಿಕ್ಕಣ್ಣ ಇದುವರೆಗೆ ಇಂತಹ ಪಾತ್ರ ಮಾಡಿಲ್ಲ ಎಂದು ವಿಶ್ವಾಸದಿಂದ ಹೇಳಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜ್. ಸಿನಿಮಾ ನಾಳೆ ರಿಲೀಸ್. ಸುಸು ಮಾಡಲು.. ಅಲ್ಲಲ್ಲ.. ನೋಡಲು ಮರೆಯದಿರಿ.

Trayambakam Movie Gallery

Rightbanner02_butterfly_inside

Paddehuli Movie Gallery