` nenapirali prem, - chitraloka.com | Kannada Movie News, Reviews | Image

nenapirali prem,

 • Prem's Son Is Hebbuli Fan?

  nenapira;i prem's son image

  Nenapirali Prem shared photos of his son calling it his "Tiger's new style". The style resembles Sudeep's hairstyle in his upcoming film Hebbuli.

  nenapirali_prem_son_hair.jpg

  Though Prem has never shared screen presence with Sudeep, he has acted in a song sung by Sudeep in the film Ring Road Shuba. Whether Prem's soon is a fan of Sudeep is left to speculation. Prem is currently acting in Chauka while Sudeep's Hebbuli will release after Mukunda Murari.

 • Which Would be Nandakishore's Next Film? - Exclusive

  nandakishore image

  Actor turned director Nandakishore has surely put the audience in confusion. The director who has two hits ('Victory' and 'Adhyaksha') and a star film (Sudeep's 'Ranna') to his credit has three films in hand and which among the three will he be directing next is a question in everybody's mind.

  Earlier, there was news that Nandakishore will be directing Radhika Kumaraswamy in a new film after 'Ranna'. Radhika herself has confirmed that she will not only be acting in the film, but also will be producing it. Radhika had said that she is learning horse riding, Kathak and rope training for the film.

  After that, actor 'Nenapirali' Prem had announced that he will be acting in director Nandakishore's film after which it was confirmed that Nandakishore will be directing the 'Kandareega' remake for Dhruva Sarja. With three films in hand, which one would Nandakishore take after 'Ranna' is yet to be answered.

  Which will be Nanda's next film after 'Ranna'? Wait and watch.

 • ಏಪ್ರಿಲ್ 13 ಕ್ಕೆ ದಳಪತಿ ಬಹುಪರಾಕ್..

  dalapathi will release on april 13th

  ನೆನಪಿರಲಿ ಪ್ರೇಮ್ ಅಭಿನಯದ ಚಿತ್ರ ದಳಪತಿ ಏಪ್ರಿಲ್ 13ಕ್ಕೆ ಬಿಡುಗಡೆಗೆ ಸಿದ್ಧವಾಗಿದೆ. ಇದು ಪ್ರಶಾಂತ್ ನಿರ್ದೇಶನದ ಸಿನಿಮಾ. ಜೂಮ್ ನಂತರ ಪ್ರಶಾಂತ್ ನಿರ್ದೇಶಿಸಿರುವ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ. ಪ್ರೇಮ್ ಎದುರು ನಾಯಕಿಯಾಗಿರುವುದು ಕೃತಿ ಕರಬಂಧ.

  ಚಿತ್ರವನ್ನು ವಿತರಣೆ ಮಾಡುತ್ತಿರುವುದು ಜಯಣ್ಣ-ಭೋಗೇಂದ್ರ ಜೋಡಿ. ಯುವ ಸಂಗೀತ ನಿರ್ದೇಶಕ ಚರಣ್‍ರಾಜ್ ಸಂಗೀತ ಚಿತ್ರಕ್ಕಿದೆ. ಇವನು ಪ್ರೇಮಲೋಕದ ದಳಪತಿಯಂತೆ. ಹೇಗೆ ಅನ್ನೊದನ್ನ ತಿಳಿದುಕೊಳ್ಳೋಕೆ ಏಪ್ರಿಲ್ 13ರವರೆಗೆ ಕಾಯಬೇಕು.

 • ಕಥೆಯೇ ಹೀರೋ.. ಹೀರೋ ಅಲ್ಲ - ಪ್ರೇಮ್

  prem talks about life jothe ondu selfie

  ಹೀರೋ ನೋಡಿಕೊಂಡು ಸಿನಿಮಾಗೆ ಬರೋವ್ರ ಕಾಲ ಮುಗಿದು ಹೋಗಿದೆ. ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ನಾವೂ ಬದಲಾಗಬೇಢಕು. ಅವರೇನೋ ಹೊಸದನ್ನು ಕೇಳುತ್ತಿದ್ದಾರೆ. ಬಯಸುತ್ತಿದ್ಧಾರೆ. ಅವರ ಆಲೋಚನೆಗೆ ತಕ್ಕಂತೆ ನಾವು ಹೊಸತನ ಕೊಡಬೇಕು. ಕಥೆ ಚೆನ್ನಾಗಿರಬೇಕು. ನಾವು ಅದನ್ನು ಹೇಳುವ ಶೈಲಿ ಅವನಿಗೆ ಕುತೂಹಲ ಹುಟ್ಟಿಸಬೇಕು. ಅದು ಅವನದ್ದೇ ಅಥವಾ ಅವನ ಸುತ್ತಮುತ್ತಲಿನ ಪರಿಸರದ ಕಥೆಯಾಗಿರಬೇಕು. ಆಗ ಪ್ರೇಕ್ಷಕ ಸಿನಿಮಾ ಜೊತೆ ಕನೆಕ್ಟ್ ಆಗುತ್ತಾನೆ.

  ಈ ಮಾತು ಹೇಳಿರೋದು ನೆನಪಿರಲಿ ಪ್ರೇಮ್. ಹಾಗೆ ನೋಡಿದ್ರೆ, ಪ್ರೇಮ್ ಮೊದಲಿನಿಂದಲೂ ಸಿದ್ಧಸೂತ್ರದ ಚೌಕಟ್ಟನ್ನು ಮುರಿದೇ ಸಿನಿಮಾ ಮಾಡಿ ಗೆದ್ದವರು. ಅವರ ಹಿಟ್ ಚಿತ್ರಗಳಾದ ನೆನಪಿರಲಿ, ಜೊತೆ ಜೊತೆಯಲಿ, ಚಾರ್‍ಮಿನಾರ್, ಚೌಕ.. ಹೀಗೆ ಹಿಟ್ ಸಿನಿಮಾಗಳ್ಯಾವುವೂ ಸಿದ್ಧಸೂತ್ರದ ಒಳಗೆ ಇದ್ದ ಸಿನಿಮಾಗಳಲ್ಲ. ಈಗ.. ಮತ್ತೊಮ್ಮೆ ಪ್ರೇಮ್ ಮತ್ತು ದಿನಕರ್ ತೂಗುದೀಪ್ ಜೊತೆಯಾಗಿದ್ದಾರೆ. ಲೈಫ್ ಜೊತೆ ಒಂದ್ ಸೆಲ್ಫಿ ತೆಗೆದುಕೊಂಡಿದ್ದಾರೆ.

  ದಿನಕರ್ ಜೊತೆ ಇದು ನನ್ನ 2ನೇ ಸಿನಿಮಾ. ಅವರು ಎಲ್ಲವನ್ನೂ ಪಕ್ಕಾ ಪ್ಲಾನ್ ಮಾಡಿಕೊಂಡೇ ಮಾಡ್ತಾರೆ. ಇದು ನಮ್ಮ ನಿಮ್ಮೆಲ್ಲರ ನಡುವಿನ ಬದುಕಿನ ಕಥೆ. ಖಂಡಿತಾ ನಿಮಗೆ ಇಷ್ಟವಾಗುತ್ತೆ ಅಂತಾರೆ ಪ್ರೇಮ್.

  ಪ್ರೇಮ್, ಪ್ರಜ್ವಲ್ ದೇವರಾಜ್ ಮತ್ತು ಹರಿಪ್ರಿಯಾ ಜೋಡಿಯಾಗಿ ನಟಿಸಿರುವ ಸಿನಿಮಾ, ಬಿಡುಗಡೆಗೆ ಸಿದ್ಧವಾಗಿದೆ. 

   

 • ಕಷ್ಟ ಬಂದೋರೆಲ್ಲ ಸೆಲ್ಫಿ ನೋಡ್ಕಳಿ

  life jothe ondu selfie has a good message about life

  ಲೈಫ್ ಜೊತೆ ಒಂದ್ ಸೆಲ್ಫಿ... ದಿನಕರ್ ಅವರ ಪತ್ನಿ ಮಾನಸಾ ಅವರು ಬರೆದಿರುವ ಕಥೆ. ಪ್ರತಿಯೊಬ್ಬರ ಜೀವನದಲ್ಲೂ ಕಷ್ಟ ಅನ್ನೋದು ಬರುತ್ತೆ. ಒಬ್ಬೊಬ್ಬರೂ ಆ ಕಷ್ಟವನ್ನು ಬೇರೆ ಬೇರೆ ರೀತಿ ಫೇಸ್ ಮಾಡ್ತಾರೆ. ತಾಳ್ಮೆಯೊಂದಿದ್ದರೆ ಎಂಥ ಕಷ್ಟವನ್ನಾದರೂ ಪಳಗಿಸಬಹುದು, ಗೆಲ್ಲಬಹುದು ಅನ್ನೋದೇ ಚಿತ್ರದ ಕಥೆ. 

  ಮಾನಸಾ, ಇದಕ್ಕೂ ಮೊದಲು ಕೆಲವೊಂದಿಷ್ಟು ಕಥೆ ಹೇಳಿದ್ದರು. ಅದೇಕೋ, ಅವು ನನಗೆ ಇಷ್ಟವಾಗಿರಲಿಲ್ಲ. ಈ ಕಥೆ ಕೇಳುತ್ತಿದ್ದಂತೆಯೇ ಥ್ರಿಲ್ ಆಯ್ತು. ಈಗ ಸಿನಿಮಾ ರೆಡಿ ಎನ್ನುತ್ತಾರೆ ದಿನಕರ್.

  ಸಾರಥಿ ನಂತರ ಮತ್ತೆ ನಿರ್ದೇಶನ ವಿಳಂಬವಾಗೋಕೆ ಕಾರಣ, ಚೇಂಜ್. ಹಳೆಯ ಸಿನಿಮಾಗಿಂತ, ನಾನು ಮಾಡುವ ಹೊಸ ಸಿನಿಮಾ ಡಿಫರೆಂಟ್ ಆಗಿರಬೇಕು. ನನಗೆ ಅದು ಹೊಸತೆನಿಸಬೇಕು. ಹೀಗಾಗಿ ಲೇಟ್ ಎನ್ನುತ್ತಾರೆ.

  ಪ್ರಜ್ವಲ್ ಮತ್ತು ಪ್ರೇಮ್ ಜೊತೆ, ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿರೋದು ಹರಿಪ್ರಿಯಾ. ಅಲ್ಲೊಂದು ಬ್ಯೂಟಿಫುಲ್ ಪ್ರೇಮಕಥೆಯಿದೆ. ಅದು ಪ್ರೇಮಕಾವ್ಯ ಎನ್ನುತ್ತಾರೆ ದಿನಕರ್. ಸಿನಿಮಾ ರಿಲೀಸ್‍ಗೆ ರೆಡಿ. ಮುಂದಿನ ವಾರ ಥಿಯೇಟರ್‍ಗೆ ಹೋಗಿ ಲೈಫ್ ಜೊತೆ ಒಂದ್ ಸೆಲ್ಫಿ ತಗೊಳ್ಳಿ.

 • ಟ್ರ್ಯಾಕ್ಟರ್ ಡ್ರೈವರ್ ಕೃತಿ ಕರಬಂಧ

  kriti kharbandha drives tractor in dalapathi

  ದಳಪತಿ ಚಿತ್ರದಲ್ಲಿ ಲೇಡಿ ರೌಡಿಯಾಗಿ ಕಾಣಿಸಿಕೊಂಡಿರುವ ಕೃತಿ ಕರಬಂಧ, ಚಿತ್ರದಲ್ಲಿ ಟ್ರ್ಯಾಕ್ಟರ್ ಡ್ರೈವರ್ ಕೂಡಾ ಆಗಿದ್ದಾರೆ. ಟ್ರ್ಯಾಕ್ಟರ್ ಓಡಿಸುವುದು ಕಾರು, ಜೀಪು ಓಡಿಸಿದ ಹಾಗಲ್ಲ. ಟ್ರ್ಯಾಕ್ಟರ್‍ಗ ಗೇರು, ಕ್ಲಚ್ಚು, ಸ್ಟೇರಿಂಗು, ಬ್ರೇಕು ಎಲ್ಲವೂ ರಫ್ ಆಗಿರುತ್ತವೆ. ಹಾಗೆ ಟ್ರ್ಯಾಕ್ಟರ್‍ನ್ನು ಓಡಿಸುವ ಅನುಭವ ಇಲ್ಲದೇ ಇದ್ದರೂ, ಟ್ರ್ಯಾಕ್ಟರ್ ಓಡಿಸಿದ್ದಾರೆ ಕೃತಿ ಕರಬಂಧ.

  ನಿರ್ದೇಶಕರು ರಿಯಲ್ಲಾಗಿಯೇ ಟ್ರ್ಯಾಕ್ಟರ್ ಓಡಿಸೋಕೆ ಹೇಳಿದ್ದರು. ಹಾಗಾಗಿ ಸ್ವಲ್ಪ ತರಬೇತಿ ಪಡೆದುಕೊಂಡೇ ಚಲಾಯಿಸಿದೆ. ಜೊತೆಗೆ ಟ್ರ್ಯಾಕ್ಟರ್‍ನ ಮುಂದೆ ಪ್ರೇಮ್ ಕುಳಿತಿರುತ್ತಾರೆ. ಟ್ರ್ಯಾಕ್ಟರ್ ಓಡಿಸುತ್ತಲೇ ರೊಮ್ಯಾಂಟಿಕ್ ಹಾಡಿಗೆ ರಿಯಾಕ್ಷನ್ ಕೊಡಬೇಕಿತ್ತು. ಎಲ್ಲವನ್ನೂ ನಿಭಾಯಿಸಿದೆವು ಎಂದು ಹೇಳಿಕೊಂಡಿದ್ದಾರೆ ಕೃತಿ ಕರಬಂಧ.

  ಚಿತ್ರದಲ್ಲಿನ ಗುನುಗುನುಗುನುಗವ.. ಹಾಡಿಗೆ ಈ ರೀತಿ ಟ್ರ್ಯಾಕ್ಟರ್ ಓಡಿಸಿದ್ದಾರೆ ಕೃತಿ. ನೈಜವಾಗಿರಲಿ ಎಂಬ ಉದ್ದೇಶದಿಂದ ಕಲಾವಿದರಿಂದಲೇ ಇವುಗಳನ್ನು ಮಾಡಿಸುತ್ತೇನೆ. ಕೃತಿ ಅವರ ಧೈರ್ಯವನ್ನು ಮೆಚ್ಚಲೇಬೇಕು ಎಂದು ಕೊಂಡಾಡಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜ್.

 • ಡೈರೆಕ್ಟರ್ ದಿನಕರ್ ಜೊತೆ ಒಂದ್ ಸೆಲ್ಫಿ

  dinakar talks about life jothe ondu selfie

  ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರವನ್ನು ರಿಲೀಸ್‍ಗೆ ರೆಡಿ ಮಾಡಿರುವ ದಿನಕರ್ ತೂಗುದೀಪ್ & ಟೀಂ, ಚಿತ್ರದ ಪ್ರಚಾರವನ್ನು ವಿಭಿನ್ನವಾಗಿ ಮಾಡುತ್ತಿದೆ. 7 ವರ್ಷಗಳ ನಂತರ ಸಿನಿಮಾ ನಿರ್ದೇಶನಕ್ಕೆ ಇಳಿದಿರುವ ದಿನಕರ್, ಚಿತ್ರದ ಬಗ್ಗೆ ಮಾತನಾಡಿದ್ದಾರೆ.

  ಚಿತ್ರದಲ್ಲಿ 3 ಪಾತ್ರಗಳೇ ಹೈಲೈಟ್. ಪ್ರಜ್ವಲ್ ವಿರಾಟ್ ಎಂಬ ಹೆಸರಿನ ಮಲ್ಟಿಮಿಲಿಯನೇರ್ ಪಾತ್ರ. ಲೈಫಲ್ಲಿ ಎಲ್ಲ ಇದ್ದರೂ, ಏನೋ ಇಲ್ಲ ಎಂಬ ಕೊರಗಿನಲ್ಲಿರುವ ವ್ಯಕ್ತಿ.

  ಪ್ರೇಮ್ ಅವರದ್ದು ನಕುಲ್ ಎಂಬ ಎಂಎನ್‍ಸಿ ಉದ್ಯೋಗಿಯ ಪಾತ್ರ. ಅವರಿಗೆ ನಿರ್ದೇಶಕನಾಗಬೇಕು ಎಂಬ ಕನಸು.

  ಹರಿಪ್ರಿಯಾ ಅವರದ್ದೂ ಒಂದು ಸಮಸ್ಯೆ ಇರುತ್ತೆ. ಅವರೂ ಒಂದು ಕೊರಗಿನಲ್ಲೇ ಇರ್ತಾರೆ. 

  ಹೀಗೆ ಕೊರಗುವ ಜೀವಗಳೆಲ್ಲ ಒಂದು ಕಡೆ ಸೇರುತ್ತವೆ. ಗೋವಾದಲ್ಲಿ ಪರಿಚಯವಾಗೋ ಮೂವರನ್ನೂ ಕನ್ನಡಿಗರು ಎಂಬ ವಿಷಯ ಒಗ್ಗೂಡಿಸುತ್ತೆ. ಮೊದಲರ್ಧ ಸಮಸ್ಯೆಗಳಾದರೆ, ದ್ವಿತೀಯಾರ್ಧ ಪರಿಹಾರ. ಸಿನಿಮಾ ನೋಡುವಾಗ ಪ್ರತಿಯೊಬ್ಬರೂ ತಮ್ಮ ಜೊತೆ, ತಮ್ಮ ಲೈಫ್ ಜೊತೆ ಒಂದ್ ಸೆಲ್ಫಿ ತಗೋತಾರೆ ಅನ್ನೋ ಕಾನ್ಫಿಡೆನ್ಸ್ ದಿನಕರ್ ಅವರಿಗೆ ಇದೆ.

  ಸಮೃದ್ಧಿ ಮಂಜುನಾಥ್ ನಿರ್ಮಾಣದ ಚಿತ್ರಕ್ಕೆ ಹರಿಕೃಷ್ಣ ಸಂಗೀತ ನಿರ್ದೇಶನವಿದೆ.

 • ದಳಪತಿ ಪ್ರೇಮ್ ಕಂಡಂತೆ...

  prem feels wonderful about dalapathi

  ಲವ್ಲಿಸ್ಟಾರ್ ಪ್ರೇಮ್‍ಗೆ ಪುರುಷ ಅಭಿಮಾನಿಗಳಿಗಿಂತ ಮಹಿಳಾ ಅಭಿಮಾನಿಗಳೇ ಹೆಚ್ಚು. ಅದು ಸ್ವತಃ ಪ್ರೇಮ್ ಅವರಿಗೂ ಅನುಭವಕ್ಕೆ ಬಂದಿದೆ. ಪ್ರೇಮ್ ಅವರ ಪ್ರತಿ ಚಿತ್ರ ರಿಲೀಸ್ ಆದಾಗಲೂ ಅವರ ಅಭಿಮಾನಿಗಳು ಒಂದು ಡಿಮ್ಯಾಂಡ್ ಇಡ್ತಾನೇ ಇದ್ರಂತೆ. ನಿಮ್ಮ ಸಿನಿಮಾದಲ್ಲಿ ಹೆಲ್ದೀ ರೊಮ್ಯಾನ್ಸ್ ಜಾಸ್ತಿ  ಇರಲಿ ಅಂತಿದ್ರಂತೆ. ಜೊತೆಗೆ ಫೈಟು, ಮೆಲೋಡ್ರಾಮ ಇರಲಿ ಎನ್ನುತ್ತಿದ್ದರಂತೆ.

  ದಳಪತಿ ಚಿತ್ರದಲ್ಲಿ ಅದೆಲ್ಲವೂ ಇದೆ. ಹೀಗಾಗಿಯೇ ಈ ಸಿನಿಮಾ ನನಗೆ ಸ್ಪೆಷಲ್ ಎನ್ನುತ್ತಿದ್ದಾರೆ ಪ್ರೇಮ್. ಪ್ರೀತಿ ಮತ್ತು ಸ್ನೇಹಕ್ಕಾಗಿ ಯಾವುದೇ ಕಷ್ಟವನ್ನಾದರೂ ಮೈಮೇಲೆ ಎಳೆದುಕೊಳ್ಳುವ ಪಾತ್ರ ದಳಪತಿಯಲ್ಲಿದೆ. ನೀವು, ನಿಮ್ಮ ಕುಟುಂಬದ ಸಮೇತ ಚಿತ್ರಮಂದಿರಕ್ಕೆ ಬಂದು ಎಂಜಾಯ್ ಮಾಡಬಹುದು ಎಂದು ಆಹ್ವಾನ ಕೊಟ್ಟಿದ್ದಾರೆ ಪ್ರೇಮ್.

  ಕೃತಿ ಕರಬಂಧ ನಾಯಕಿಯಾಗಿರುವ ಸಿನಿಮಾಗೆ ಪ್ರಶಾಂತ್ ರಾಜ್ ನಿರ್ದೇಶಕ. ಇದೇ ವಾರ ರಿಲೀಸ್.

 • ದಳಪತಿ ಶುರುವಾದ ಮೇಲೆ ಏನೇನೆಲ್ಲ ಆಗೋಯ್ತು ಗೊತ್ತಾ..?

  what was the reason for dalapathi's delay

  ದಳಪತಿ. ಎಲ್ಲವೂ ಪ್ಲಾನ್‍ನಂತೆಯೇ ಆಗಿದ್ದರೆ, 2017ರಲ್ಲೇ ತೆರೆಗೆ ಬರಬೇಕಿತ್ತು. ಜೂಮ್ ಚಿತ್ರಕ್ಕೂ ಮೊದಲೇ ನಿರ್ದೇಶಕ ಪ್ರಶಾಂತ್ ರಾಜ್‍ರ ಒನ್‍ಲೈನ್ ಸ್ಟೋರಿ ಕೇಳಿಯೇ ಪ್ರೇಮ್ ಓಕೆ ಎಂದುಬಿಟ್ಟಿದ್ದರು. ಕೃತಿ ಕರಬಂಧ ಕೂಡಾ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದರೆ, ದಳಪತಿ ತೆರೆಗೆ ಬರೋಕೆ ಒಂದು ವರ್ಷ ಕಾಯಬೇಕಾಯ್ತು. ಇಷ್ಟಕ್ಕೂ ಕಾರಣಗಳೇನು ಗೊತ್ತಾ..?

  ದಳಪತಿ ಚಿತ್ರಕ್ಕೆ ಓಕೆ ಎನ್ನುವಾಗಲೇ ಕೃತಿ ಕರಬಂಧ ಒಂದು ಷರತ್ತು ಹಾಕಿದ್ದರು. ಬಾಲಿವುಡ್ ಚಿತ್ರದ ಮಾತುಕತೆಯೊಂದು ಫೈನಲ್ ಹಂತದಲ್ಲಿದೆ. ಅದು ಓಕೆ ಆದರೆ, ಡೇಟ್ಸ್ ಅಡ್ಜಸ್ಟ್ ಮಾಡಿಕೊಳ್ಳಬೇಕು ಎಂದಿದ್ದರು. ಪ್ರಶಾಂತ್ ಕೂಡಾ ಓಕೆ ಎಂದಿದ್ದರು. ಕೃತಿ ಬಾಲಿವುಡ್‍ಗೆ ಹೋದರು. ಸಿನಿಮಾ ತಡವಾಗೋಕೆ ಶುರುವಾಗಿದ್ದೇ ಆಗ.

  ಇತ್ತ ಪ್ರೇಮ್, ಚೌಕ ಚಿತ್ರಕ್ಕೆ ಹೋದರು. ಚೌಕದ ವೇಳೆಯಲ್ಲಿ ಕೃತಿಯ ಡೇಟ್ಸ್ ಸಿಕ್ಕರೂ, ಪ್ರೇಮ್ ಚೌಕದ ಗೆಟಪ್ ಬದಲಾಯಿಸುವ ಹಾಗಿರಲಿಲ್ಲ. ಹೀಗಾಗಿ ದಳಪತಿ ಮತ್ತೆ ಮುಂದಕ್ಕೆ ಹೋಯ್ತು.

  ಅತ್ತ ಪ್ರೇಮ್, ಇತ್ತ ಕೃತಿ ರೆಡಿಯಾಗಿ ಬರುವಷ್ಟರಲ್ಲಿ ನಿರ್ದೇಶಕ ಪ್ರಶಾಂತ್ ರಾಜ್, ಜೂಮ್‍ನಲ್ಲಿ ಬ್ಯುಸಿಯಾಗಿಬಿಟ್ಟಿದ್ದರು. 

  ಹೀಗೆ ಎಲ್ಲವನ್ನೂ ಮುಗಿಸಿದ ಪ್ರಶಾಂತ್ ಚಿತ್ರಕ್ಕೆ ಕೈ ಹಾಕಿದ್ದು ಜೂಮ್ ಮುಗಿದ ಮೇಲೆಯೇ. ರಿಲೀಸ್ ವೇಳೆಗೆ ಯುಎಫ್‍ಓ, ಕ್ಯೂಬ್ ವಿರುದ್ಧದ ಪ್ರತಿಭಟನೆ, ಮತ್ತೆ ಎರಡು ವಾರ ಮುಂದೆ ಹೋಗುವಂತೆ ಮಾಡಿತು. ಈಗ.. ಕಾಲ ಕೂಡಿ ಬಂದಿದೆ.

  ಚಿತ್ರ ತಡವಾಗಿರಬಹುದು. ಆದರೆ, ಕಥೆ ಫ್ರೆಶ್ ಆಗಿದೆ. ನನ್ನ ಸಿನಿಮಾದ ಕಥೆಗಳು ಕನಿಷ್ಠ ನಾಲ್ಕೈದು ವರ್ಷ ಚಾಲ್ತಿಯಲ್ಲಿರುವಂತಹ ಕಥೆಗಳಾಗಿರುತ್ತವೆ. ದಳಪತಿ ಕೂಡಾ ಅಂಥಾದ್ದೇ ಚಿತ್ರ ಎಂದಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜ್.

 • ನೆನಪಿರಲಿ ಪ್ರೇಮ್ ಮನೆಯಲ್ಲಿ ಪಿಯು ಸೆಲಬ್ರೇಷನ್

  celebrations at nenapirlai prem's house

  ಪಿಯು ರಿಸಲ್ಟ್ ಅನೌನ್ಸ್ ಆಗಿದೆ. ಮಕ್ಕಳ ಫಲಿತಾಂಶ ನೋಡಿ ಹೆತ್ತವರು ಖುಷಿಯಾಗಿದ್ದಾರೆ. ಅಂತಹುದೇ ಖುಷಿಯಲ್ಲಿರೋದು ನೆನಪಿರಲಿ ಪ್ರೇಮ್. ಪ್ರೇಮ್ ಅವರ ದೊಡ್ಡ ಮಗಳು ಅಮೃತಾ ಪಿಯುಸಿಯಲ್ಲಿ ಫಸ್ಟ್ ಕ್ಲಾಸ್ ಬಂದಿದ್ದಾರೆ. ಕೈತುಂಬಾ ಮಾಕ್ರ್ಸು. 91%. 

  ಎಸ್ಸೆಸ್ಸಿಲ್ಸಿಯಲ್ಲೂ ಒಳ್ಳೆಯ ರಿಸಲ್ಟು ಕೊಟ್ಟಿದ್ದ ಅಮೃತಾ, ಪಿಯುನಲ್ಲೂ ಒಳ್ಳೆಯ ಅಂಕ ತೆಗೆದಿದ್ದಾಳೆ. ಪ್ರೇಮ್ ಮಗಳ ಜೊತೆ ಪಾರ್ಟಿ ಮಾಡಿ ಖುಷಿಪಟ್ಟಿದ್ದಾರೆ.

 • ನೆನಪಿರಲಿ ಪ್ರೇಮ್‍ಗೆ ಮಯೂರನಾಗುವಾಸೆ..!

  nenapirali prem is awaiting for a historical role

  ನೆನಪಿರಲಿ ಪ್ರೇಮ್, 25ನೇ ಸಿನಿಮಾದ ಹೊಸ್ತಿಲಲ್ಲಿ ನಿಂತಿದ್ದಾರೆ. ನಾಳೆ ಬಿಡುಗಡೆಯಾಗುತ್ತಿರುವ ದಳಪತಿ, ಅವರ 23ನೇ ಸಿನಿಮಾ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಲೈಫ್ ಜೊತೆ ಒಂದ್ ಸೆಲ್ಫಿ, 24ನೇ ಚಿತ್ರ. ಅದಾದ ನಂತರದ್ದು ಇನ್ನೂ ಫೈನಲ್ ಆಗಿಲ್ಲ.

  ಹೇಗಿರಬೇಕು ನಿಮ್ಮ 25ನೇ ಸಿನಿಮಾ ಎಂದರೆ, ಪ್ರೇಮ್ ಕಣ್ಣೆದುರು ನಲಿದಾಡುವುದು ಅಣ್ಣಾವ್ರ ಮಯೂರ. ಅಂಥಾದ್ದೊಂದು ಐತಿಹಾಸಿಕ ಪಾತ್ರವನ್ನು ನಾನು ಮಾಡಬೇಕು. ಕನ್ನಡದಲ್ಲಿ ಎಷ್ಟೆಲ್ಲ ಐತಿಹಾಸಿಕ ನಾಯಕರಿದ್ದಾರೆ. ಎಚ್ಚಮನಾಯಕ, ಮದಕರಿ ನಾಯಕ, ನೃಪತುಂಗ.. ಇಂತಹವರ ಕಥೆಗಳನ್ನು ಸಿನಿಮಾ ಮಾಡಬೇಕು ಎನ್ನುತ್ತಾರೆ ಪ್ರೇಮ್.

  ಇಂತಹ ಕಥೆಗಳನ್ನು ಸಿನಿಮಾ ಮಾಡುತ್ತೇನೆ ಎಂದರೆ, ಎಷ್ಟು ಡೇಟ್ಸ್ ಬೇಕಾದರೂ ಅಡ್ಜಸ್ಟ್ ಮಾಡಿಕೊಳ್ಳುತ್ತೇನೆ ಎನ್ನುವ ಪ್ರೇಮ್‍ಗೆ ತಮ್ಮ 25ನೇ ಸಿನಿಮಾ ಐತಿಹಾಸಿಕ ಚಿತ್ರವಾಗಬೇಕು ಎಂಬ ಕನಸು ಹೊತ್ತಿದ್ದಾರೆ. ಆ ಕನಸಿಗೆ ನೀರೆರೆಯುವ ನಿರ್ಮಾಪಕ, ನಿರ್ದೇಶಕರು ಸಿಗಬೇಕಷ್ಟೆ. ಸದ್ಯಕ್ಕೆ ದಳಪತಿ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದಾರೆ ಪ್ರೇಮ್.

   

 • ನೆನಪಿರಲಿ.. ಪ್ರೇಮ್‍ಗೆ 17 ವರ್ಷ

  nenapirlai prem completes 17 years in film industry

  ಪ್ರೇಮ್ ಪಾಲಿಗೆ ಪ್ರಥಮ ಚುಂಬನವಾಗಿದ್ದು ಪ್ರಾಣ. ಚುಂಬನದ ಮಧುರಾನುಭೂತಿ ಕೊಟ್ಟಿದ್ದು ನೆನಪಿರಲಿ. ನಾವು ಹೇಳ್ತಿರೋದು ಪ್ರೇಮ್ ಬಗ್ಗೆ. ಬರೀ ಪ್ರೇಮ್ ಎಂದರೆ ಯಾರು ಅನ್ನೋ ಗೊಂದಲ ಬರಬಹುದು. ಚಿತ್ರರಂಗದಲ್ಲಿ ಪ್ರೇಮ್‍ಗಳ ಸಂಖ್ಯೆ ಹೆಚ್ಚು. ಹೀಗಾಗಿಯೇ.. ಈ ಪ್ರೇಮ್ ಹಿಂದೆ ಅವರ ಸೂಪರ್ ಹಿಟ್ ಸಿನಿಮಾ ನೆನಪಿರಲಿ ಸೇರಿಕೊಂಡುಬಿಟ್ಟಿದೆ. ಪ್ರೇಮ್ ಅನ್ನೋ ಅವರ ಹೆಸರೇ ಸರ್‍ನೇಮ್‍ನಂತೆ ಉಳಿದುಕೊಂಡಿದೆ.

  17 ವರ್ಷಗಳ ಹಿಂದೆ ತೆರೆಕಂಡಿದ್ದ ಪ್ರಾಣ ಅನ್ನೋ ಚಿತ್ರ ಪೋಸ್ಟರ್‍ನಿಂದಲೇ ಗಮನ ಸೆಳೆದಿದ್ದ ಸಿನಿಮಾ. ಸಿನಿಮಾಗೆ ಒಳ್ಳೆಯ ವಿಮರ್ಶೆ ಸಿಕ್ಕಿತು. ನಾಯಕನಿಗೆ ಹೊಗಳಿಗೆ ಸಿಕ್ಕಿತು. ಆದರೆ, ಪ್ರೇಮ್‍ರನ್ನು ಸ್ಟಾರ್ ಮಾಡಿದ್ದು ನೆನಪಿರಲಿ. ನಿರ್ದೇಶಕ ರತ್ನಜ ಅವರ ಕ್ಲಾಸಿಕ್ ಸಿನಿಮಾದಿಂದಾಗಿ ಪ್ರೇಮ್ ನೆನಪಿರಲಿ ಪ್ರೇಮ್ ಆಗಿಬಿಟ್ಟರು. ಮುಂದಿನದ್ದು ಇತಿಹಾಸ.

  ಅದಾದ ಮೇಲೆ ಪ್ರೇಮ್ 17 ವರ್ಷಗಳ ವೃತ್ತಿಜೀವನದಲ್ಲಿ ಗೆಲುವು ಕಂಡಿದ್ದಾರೆ. ಜೊತೆ ಜೊತೆಯಲಿ, ಸವಿ ಸವಿ ನೆನಪು, ಪಲ್ಲಕ್ಕಿ, ಚಾರ್‍ಮಿನಾರ್, ಚೌಕ, ಮಳೆ.. ಹೀಗೆ ಹಿಟ್ ಸಿನಿಮಾ ಕೊಟ್ಟಿದ್ದಾರೆ.

  ಐ ಯಾಮ್ ಸಾರಿ, ಮತ್ತೆ ಬನ್ನಿ ಪ್ರೀತ್ಸೋಣ, ಚಂದ್ರದಂತಹ ಪ್ರಯೋಗಾತ್ಮಕ ಚಿತ್ರಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡಿದ್ದಾರೆ. ಚಿತ್ರಗಳ ಸಂಖ್ಯೆ 25 ದಾಟಿದೆ. ಮದುವೆಯಾಗಿದೆ. ಮಗುವೂ ಇದೆ. ಇವತ್ತಿಗೂ ಪ್ರೇಮ್ ಹುಡುಗಿಯರ ಪಾಲಿಗೆ ಲವ್ಲಿ ಸ್ಟಾರ್. 

  ಸಾಗಿ ಬಂದ ಹಾದಿ ಚಿಕ್ಕದು. ಸಾಗಬೇಕಿರುವ ದಾರಿ ದೊಡ್ಡದು. ಎಲ್ಲರ ಪ್ರೀತಿ ಹೀಗೆಯೇ ಇರಲಿ. ಒಳ್ಳೆಯ ಸಿನಿಮಾಗಳ ಮೂಳಕ ಅಭಿಮಾನದ ನೆರಳಲ್ಲಿ ಗಟ್ಟಿಯಾಗಿ ಸಾಗಬೇಕಿದೆ ಎಂದು ಹೇಳಿಕೊಂಡಿದ್ದಾರೆ ಪ್ರೇಮ್.

 • ಪ್ರೀತಿಯ ದಳಪತಿ ಪ್ರೇಮ್

  dalapathi prem is for love

  ದಳಪತಿ. ಹಾಗೆಂದ ಕೂಡಲೇ ಯುದ್ಧ, ರಣರಂಗ, ಫೈಟು ನೆನಪಾದರೆ ಆಶ್ಚರ್ಯವಿಲ್ಲ. ಏಕೆಂದರೆ, ಹೆಸರೇ ಅಂಥದ್ದು. ಆದರೆ, ಆ ಸಿನಿಮಾದಲ್ಲಿರುವು ಲವ್ಲೀ ಸ್ಟಾರ್ ಪ್ರೇಮ್ ಎಂದರೆ, ಏನಂತೆ ಸ್ಟೋರಿ ಅಂತಾರೆ ಅಭಿಮಾನಿಗಳು. ಡೈರೆಕ್ಟರ್ ಪ್ರಶಾಂತ್ ರಾಜ್ ಅಂದ್ರೆ, ಬಿಡು ಗುರು, ಲವ್ ಸ್ಟೋರಿನೇ ಇರುತ್ತೆ ಅಂತಾರೆ. ಅಷ್ಟರಮಟ್ಟಿಗೆ ಪ್ರೇಮ್ ಮತ್ತು ಪ್ರಶಾಂತ್ ರಾಜ್ ಕಾಂಬಿನೇಷನ್ ದಳಪತಿಯಲ್ಲೂ ಹುಸಿಯಾಗಿಲ್ಲ.

  ಇವನು ಪ್ರೀತಿಗೆ ದಳಪತಿ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನಿಗೆ ಖುಷಿಯ ಕಥೆ ಹೇಳಬೇಕು. ಗೋಳಿನ ಕಥೆ ನನಗೆ ಇಷ್ಟವಾಗಲ್ಲ. ಕಲರ್‍ಫುಲ್ ಲವ್‍ಸ್ಟೋರಿ ಇರಬೇಕು ಅನ್ನೋದು ಪ್ರಶಾಂತ್ ರಾಜ್ ಕನಸು.

  ಲವ್‍ಗುರು, ಜೂಮ್‍ನಂತಹ ಚಿತ್ರ ಕೊಟ್ಟಿರುವ ಪ್ರಶಾಂತ್ ರಾಜ್, ಇಲ್ಲೂ ಒಂದು ಲವ್ ಸ್ಟೋರಿ ಹೇಳಿದ್ದಾರೆ. ಆದರೆ, ಸಂಪೂರ್ಣ ವಿಭಿನ್ನ ಶೈಲಿಯ ಸಿನಿಮಾ. ಕ್ಲಾಸ್ ಮತ್ತು ಮಾಸ್ ಎರಡೂ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯ ಕಥೆ ಚಿತ್ರದಲ್ಲಿದೆ ಎಂಬ ಭರವಸೆ ನಿರ್ದೇಶಕರದ್ದು. ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇನ್ನೊಂದು ವಾರ ಕಾಯಿರಿ.

 • ಪ್ರೇಮಿಗಳೇ.. ಪ್ರೇಮಿಗಳೇ.. ದಳಪತಿಯಲ್ಲಿದೆ ಪಾಠ

  levely star is now lovely leader

  ದಳಪತಿ. ಇದೇ ವಾರ ಬಿಡುಗಡೆಯಾಗುತ್ತಿರುವ ಚಿತ್ರ. ಈ ಚಿತ್ರದಲ್ಲಿ ಪ್ರೇಮ್, ಲವ್ ಲೀಡರ್ ಆಗಿ ನಟಿಸಿದ್ದಾರಂತೆ. ಪ್ರೀತಿಸುವ ಪ್ರತಿಯೊಬ್ಬರೂ ಪ್ರೀತಿಯನ್ನು ಪಡೆಯೋಕೆ ಸಾಹಸ ಮಾಡಬೇಕು. ಅಂತಹವರಿಗೆ ಇಲ್ಲೊಂದು ಸಂದೇಶ ಇದೆ ಎಂದು ಹೇಳಿದ್ದಾರೆ ಪ್ರೇಮ್. ಚಿತ್ರದಲ್ಲಿ ಆ್ಯಕ್ಷನ್ ಇದೆಯಾದರೂ ಬಾಂಬ್ ಸಿಡಿಯಲ್ಲ. ಜೀಪು, ಕಾರು ಹಾರಾಡುವುದಿಲ್ಲ. ಚಿತ್ರದಲ್ಲಿ ಮಾಸ್ ಲವ್ ಸ್ಟೋರಿ ಇದೆ. ಅದೇ ಚಿತ್ರದ ಸ್ಪೆಷಲ್ ಅಂತಾರೆ ಪ್ರೇಮ್.

  ಪ್ರೀತಿಸುವವರಿಗೆ, ಪ್ರೀತಿಸಬೇಕು ಎಂದು ಕೊಂಡಿರುವವರಿಗೆ ದಳಪತಿಯಲ್ಲೊಂದು ಪಾಠವಿದೆಯಂತೆ. ಅದು ಎಂತಹ ಪಾಠ ಅನ್ನೋದು ಚಿತ್ರಮಂದಿರಕ್ಕೆ ಹೋಗಿ ನೋಡಿದರೆ ತಾನೆ ಗೊತ್ತಾಗೋದು. ಇದೇ ಶುಕ್ರವಾರ ದಳಪತಿ ರಿಲೀಸ್. ಪ್ರಶಾಂತ್ ರಾಜ್ ನಿರ್ದೇಶನದ ಚಿತ್ರದಲ್ಲಿ ಪ್ರೇಮ್‍ಗೆ ಜೊತೆಯಾಗಿರುವುದು ಕೃತಿ ಕರಬಂಧ.

 • ಪ್ರೇಮ್ ದಿನಕರ್ ಜೊತೆ ಜೊತೆಯಲಿ ಸೆಲ್ಫಿ.. 12 ವರ್ಷಗಳ ನಂತರ

  prem nenapirali and dinakar reunite after 12 years

  ನೆನಪಿರಲಿ ಪ್ರೇಮ್ ಮತ್ತು ದಿನಕರ್ ತೂಗುದೀಪ್ ಮತ್ತೊಮ್ಮೆ ಒಂದಾಗಿದ್ದಾರೆ. ಬರೋಬ್ಬರಿ 14 ವರ್ಷಗಳ ನಂತರ. ದಿನಕರ್ ತೂಗುದೀಪ್ ನಿರ್ದೇಶನದ ಮೊದಲ ಸಿನಿಮಾ ಜೊತೆ ಜೊತೆಯಲಿ. ಪ್ರೇಮ್-ರಮ್ಯಾ ಕಾಂಬಿನೇಷನ್‍ನ ಆ ಸಿನಿಮಾ, ನೆನಪಿರಲಿ ಪ್ರೇಮ್‍ರನ್ನು ಲವ್ಲೀ ಸ್ಟಾರ್ ಮಾಡಿದ್ದ ಸಿನಿಮಾ. ಹರಿಕೃಷ್ಣ ಸಂಗೀತ ನಿರ್ದೇಶಕರಾಗಿ ಎಂಟ್ರಿ ಕೊಟ್ಟಿದ್ದ ಸಿನಿಮಾ. 2006ರಲ್ಲಿ ಬಂದಿದ್ದ ಆ ಸಿನಿಮಾ ಸೂಪರ್ ಹಿಟ್ ಆಗಿತ್ತು.

  ಈಗ ಅದೇ ಜೋಡಿ, 14 ವರ್ಷಗಳ ನಂತರ ಪ್ರೇಮ್ ಮತ್ತು ದಿನಕರ್ ಮತ್ತೆ ಒಂದಾಗಿದ್ದಾರೆ. ಲೈಫ್ ಜೊತೆ ಒಂದ್ ಸೆಲ್ಫಿ ಎನ್ನುತ್ತಿದ್ದಾರೆ. ಈ 12 ವರ್ಷಗಳಲ್ಲಿ ದಿನಕರ್ ನಿರ್ದೇಶಿಸಿರುವುದು ಕೇವಲ 4 ಸಿನಿಮಾ. ಜೊತೆ ಜೊತೆಯಲಿ, ನವಗ್ರಹ, ಸಾರಥಿ ಮತ್ತು ಈಗ ಲೈಫ್ ಜೊತೆ ಒಂದ್ ಸೆಲ್ಫಿ. ಈ ಹಿಂದಿನ ಮೂರೂ ಸಿನಿಮಾಗಳೂ ಸೂಪರ್ ಹಿಟ್. ಇನ್ನೊಂದು ವಿಶೇಷವೆಂದರೆ, ಮೂರು ಚಿತ್ರಗಳ ನಡುವೆ ಒಂದಕ್ಕೊಂದು ಹೋಲಿಕೆಯೇ ಇಲ್ಲ. ಅದು ದಿನಕರ್ ಸ್ಪೆಷಾಲಿಟಿ. 

  ಹೀಗಾಗಿ ಈ ಬಾರಿ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಕುರಿತೂ ಸಾವಿರಾರು ನಿರೀಕ್ಷೆಗಳಿವೆ. ಆ ನಿರೀಕ್ಷೆಗಳನ್ನು ದಿನಕರ್ ಸುಳ್ಳು ಮಾಡಲ್ಲ ಅನ್ನೋ ವಿಶ್ವಾಸ ಪ್ರೇಮ್, ಪ್ರಜ್ವಲ್, ಹರಿಪ್ರಿಯಾ ಮತ್ತು ಪ್ರೇಕ್ಷಕ ಪ್ರಭುಗಳದ್ದು. 

 • ಪ್ರೇಮ್‍ಗೆ ಸೆಲ್ಫಿ..ಯಲ್ಲೂ ಮತ್ತೆ ನೆನಪಿರಲಿ..

  prem remembers nenapirali selfie

  ಲವ್ಲೀ ಸ್ಟಾರ್ ಪ್ರೇಮ್ ಖ್ಯಾತರಾಗಿದ್ದೇ ನೆನಪಿರಲಿ ಚಿತ್ರದ ಮೂಲಕ. ಅದಾದ ಮೇಲೆ ಹಲವು ಹಿಟ್ ಕೊಟ್ಟಿದ್ದರೂ ಪ್ರೇಮ್‍ರನ್ನು ನೆನಪಿರಲಿ ಪ್ರೇಮ್ ಎಂದೇ ಅಭಿಮಾನಿಗಳು ಗುರುತಿಸುವುದು. ವಿಶೇಷವೇನು ಗೊತ್ತಾ..? ನೆನಪಿರಲಿ ಚಿತ್ರ ಬಂದು 11 ವರ್ಷ ಕಳೆದುಹೋಗಿದೆ. ಆದರೆ, ಪ್ರೇಮ್‍ಗೆ ಮತ್ತೆ ಮತ್ತೆ ನೆನಪಿರಲಿ ನೆನಪಾಗುತ್ತಿದೆ.

  ಅದಕ್ಕೆ ಕಾರಣವೂ ಇದೆ. ಸದ್ಯಕ್ಕೆ ಪ್ರೇಮ್ ಲೈಫ್ ಜೊತೆ ಒಂದು ಸೆಲ್ಫಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಾರಥಿ ಚಿತ್ರದ ನಂತರ ದಿನಕರ್ ತೂಗುದೀಪ್ ನಿರ್ದೇಶಿಸುತ್ತಿರುವ ಚಿತ್ರ ಇದು. ಪ್ರಜ್ವಲ್ ಹಾಗೂ ಹರಿಪ್ರಿಯಾ ಕೂಡಾ ಚಿತ್ರದಲ್ಲಿದ್ದಾರೆ. 

  ಆದರೆ, ಪ್ರೇಮ್‍ಗೆ ಮತ್ತೆ ನೆನಪಿರಲಿ ನೆನಪಾಗೋಕೆ ಕಾರಣ, ಚಿತ್ರದ ಪಾತ್ರದ ಹೆಸರು. ಸೆಲ್ಫಿಯಲ್ಲಿ ಪ್ರೇಮ್ ಪಾತ್ರದ ಹೆಸರು ನಕುಲ್. ನೆನಪಿರಲಿ ಚಿತ್ರದಲ್ಲಿಯೂ ಪ್ರೇಮ್ ಪಾತ್ರದ ಹೆಸರು ನಕುಲ್. ನಕುಲ್ ಹೆಸರು ನನಗೆ ಲಕ್ಕಿ ಎಂದು ನೆನಪಿಸಿಕೊಂಡಿದ್ದಾರೆ ಪ್ರೇಮ್.

  ಸಮೃದ್ಧಿ ಮಂಜುನಾಥ್, ವಿರಾಟ್ ಸಾಯಿ ಕ್ರಿಯೇಷನ್ಸ್ ಬ್ಯಾನರ್‍ನಲ್ಲಿ ನಿರ್ಮಿಸುತ್ತಿರುವ ಚಿತ್ರ ಮೊದಲ ಹಂತದ ಶೂಟಿಂಗ್ ಮುಗಿಸಿದೆ. ಒಂದೂವರೆ ತಿಂಗಳ ಸತತ ಶೂಟಿಂಗ್ ನಂತರ, ಸದ್ಯಕ್ಕೆ ರೆಸ್ಟ್. 

 • ಭಟ್ರು.. ಹರಿಕೃಷ್ಣ.. ರಘು ದೀಕ್ಷಿತ್ ಪಂಚತಂತ್ರ ಕಾಂಬಿನೇಷನ್

  yogaraj bhat teams up with raghu dixit for a song in panchatantra

  ಪಂಚತಂತ್ರ ಚಿತ್ರವನ್ನು ಫೆಬ್ರವರಿ 14ರ ಪ್ರೇಮಿಗಳ ದಿನಕ್ಕೆ ಬಿಡುಗಡೆ ಮಾಡಲು ರೆಡಿಯಾಗುತ್ತಿರುವ ಯೋಗರಾಜ್ ಭಟ್, ಚಿತ್ರದಲ್ಲಿ ಎರಡು ಜನರೇಷನ್ ಲವ್ ಸ್ಟೋರಿ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಸೂಪರ್ ಹಿಟ್ ಆಗಿವೆ. ಹೊಂಗೆಮರ ಹಾಡಂತೂ ಚಳಿಗಾಲದ ಪ್ರೇಮಕಾಮಗೀತೆಯಾಗುತ್ತಿದೆ. ಇದೆಲ್ಲದರ ನಡುವೆಯೇ ಚಿತ್ರದ ಇನ್ನೊಂದು ಕಾಂಬಿನೇಷನ್ ಹೊರಬಿದ್ದಿದೆ.

  ಚಿತ್ರದಲ್ಲಿ ಕಾರ್ ರೇಸ್ ಕಥೆಯೂ ಇದ್ದು, ಕಾರ್ ರೇಸ್ ಶುರುವಾಗುವ ಹೊತ್ತಿನಲ್ಲಿ ಡಿಚ್ಚಿ ಢಮಾರ್ ಹಾಡು ಬರುತ್ತೆ. ಆ ಹಾಡನ್ನು ಹಾಡಿರೋದು ತಾರಕ ಸ್ವರದ ಸಿಂಗರ್ ರಘು ದೀಕ್ಷಿತ್. ರಘು, ಹರಿಕೃಷ್ಣ ಮತ್ತು ಯೋಗರಾಜ್ ಭಟ್ ಮೂವರೂ ಒಟ್ಟಿಗೇ ಒಂದಾಗಿರುವ ಹಾಡಿದು.

  ಇದರ ಜೊತೆಯಲ್ಲೇ ಬ್ಯಾಡ ಹೋಗು ಅಂದ್ಬಿಟ್ರು.. ನಾನು ಬಂದ್ಬಿಟ್ಟೆ.. ಅಂತಾ ಇನ್ನೊಂದು ಹಾಡು ರೆಡಿ ಮಾಡಿಟ್ಟಿದ್ದಾರೆ ಭಟ್ಟರು. ಅದು ಭಗ್ನಪ್ರೇಮಿಗಳಿಗಾಗಿ. 

  ಒಟ್ಟಿನಲ್ಲಿ ಪಂಚತಂತ್ರ ಅನ್ನೋದು ಪ್ರೇಮ ಕಥೆ. ಕಾಮಕಥೆ. ಭಾವನಾ ಲೋಕದ ವ್ಯಥೆ. ಪ್ರೀತಿ ಪ್ರೇಮ ಪ್ರಣಯದ ಕಥೆ.

 • ಮತ್ತೆ ಮದುವೆಯಾದರು ಲವ್ಲಿ ಸ್ಟಾರ್ ಪ್ರೇಮ್

  prem married again

  ಲವ್ಲಿ ಸ್ಟಾರ್ ಪ್ರೇಮ್.. ಅದೇ ನೆನಪಿರಲಿ ಪ್ರೇಮ್.. ಮತ್ತೊಮ್ಮೆ ಮದುವೆಯಾಗಿದ್ದಾರೆ. ಮಕ್ಕಳ ಎದುರಿಗೇ ತಾಳಿ ಶಾಸ್ತ್ರೋಕ್ತವಾಗಿ ತಾಳಿ ಕಟ್ಟಿದ್ದಾರೆ. ಸಪ್ತಪದಿ ತುಳಿದಿದ್ದಾರೆ.  ಪ್ರೇಮ್ ಮದುವೆಯಾಗಿರುವ ಹುಡುಗಿ ಜ್ಯೋತಿ. ಗಾಬರಿಯಾಗಬೇಡಿ. ತಮ್ಮ ಪತ್ನಿಯನ್ನೇ ಎರಡನೇ ಬಾರಿ ಮದುವೆಯಾಗಿದ್ದಾರೆ.

  ಇದೆಲ್ಲ ನಡೆದಿರೋದು ಡಾನ್ಸ್ ಡಾನ್ಯ್ಸ್ ಜ್ಯೂನಿಯರ್ಸ್ ಕಾರ್ಯಕ್ರಮದಲ್ಲಿ. ಆ ಕಾರ್ಯಕ್ರಮದಲ್ಲಿ ಪ್ರೇಮ್ ಜಡ್ಜ್ ಆಗಿದ್ದಾರೆ. ಫ್ಯಾಮಿಲಿ ರೌಂಡ್ಸ್ ಕಾರ್ಯಕ್ರಮದಲ್ಲಿ ಎಲ್ಲರೂ ತಮ್ಮ ಕುಟುಂಬದವರೊಂದಿಗೆ ಬರಬೇಕಿತ್ತು. ಹಾಗೆ ಬಂದವರಿಗೆ ಇದ್ದ ಟಾಸ್ಕ್​ ಪ್ರಕಾರ, ಪ್ರೇಮ್ ತಮ್ಮ ಇಬ್ಬರು ಮಕ್ಕಳ ಎದುರು ಪತ್ನಿ ಜ್ಯೋತಿಗೆ ಮತ್ತೊಮ್ಮೆ ತಾಳಿ ಕಟ್ಟಿ, ಸಪ್ತಪದಿ ತುಳಿದಿದ್ದಾರೆ. ಆ ಮದುವೆಗೆ ಅವರಿಬ್ಬರ ಮಕ್ಕಳು ಸಾಕ್ಷಿಯಾದದ್ದು ವಿಶೇಷ.

 • ಮಾಮ ಅಂದಾಗ ತಿರುಗಿ ನೋಡಿದ್ದು ಪ್ರೇಮ್

  kriti and prem's funny expeience

  ಮಾಮ ಅಂದ್ರೆ ಪ್ರೇಮ್ ಯಾಕೆ ತಿರುಗಿ ನೋಡ್ಬೇಕು ಅಂತೀರಾ..? ಕರೆದಿದ್ದು ಕೃತಿ ಕರಬಂಧ ಆದರೆ, ತಿರುಗಿ ನೋಡ್ಲೇಬೇಕಲ್ವಾ..? ಅಂಥ ಚೆಂದದ ಹುಡುಗಿ ಪ್ರೀತಿಯಿಂದ ಮಾಮಾ ಅಂತಾ ಕರೆದಾಗ.. ತಿರುಗಿ ನೋಡದೇ ಇರೋಕಾದ್ರೂ ಹೇಗೆ ಸಾಧ್ಯ ಹೇಳಿ. ಇದು ದಳಪತಿ ಚಿತ್ರದ ಶೂಟಿಂಗ್‍ನಲ್ಲಿ ನಡೀತಿದ್ದ ಸ್ವಾರಸ್ಯದ ಒಂದು ಭಾಗವಷ್ಟೆ.

  ಕ್ಯಾಮೆರಾ ಆಫ್ ಆದ ನಂತರವೂ ಪ್ರೇಮ್ ಲವಲವಿಕೆಯ ನಟ. ಸೆಟ್‍ನಲ್ಲಿದ್ದವರನ್ನೆಲ್ಲ ನಗುತ್ತಾ, ನಗಿಸುತ್ತಾ ಇರುವ ಕಲಾವಿದ. ಆ ತಮಾಷೆಯ ವ್ಯಕ್ತಿತ್ವ ಕೃತಿಗೂ ಇಷ್ಟವಾಗಿಬಿಟ್ಟಿತ್ತಂತೆ. ಶೂಟಿಂಗ್ ಟೈಮಲ್ಲಿ ಇಬ್ಬರೂ ಒಟ್ಟಿಗೇ ಟ್ರ್ಯಾಕ್ಟರ್ ಓಡಿಸಿದ್ದೂ ಇದೆ ಎಂದು ಶೂಟಿಂಗ್ ನೆನಪು ಹಂಚಿಕೊಂಡಿದ್ದಾರೆ ಕೃತಿ ಮತ್ತು ಪ್ರೇಮ್.

  ಅಂದಹಾಗೆ ಕೃತಿ ಮಾಮಾ ಎಂದಾಗಲೆಲ್ಲ ಪ್ರೇಮ್ ಕೃತಿಯನ್ನು ಕರೆಯುತ್ತಿದ್ದುದು ಭಾಜಿ ಅಂತಾ. 

  ಏ.13ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾದಲ್ಲಿ ಫ್ರೆಶ್ ಆದ ಲವ್‍ಸ್ಟೋರಿಯಿಂದ. ನಿರ್ದೇಶಕ ಪ್ರಶಾಂತ್ ರಾಜ್ ಹೆಸರಾಗಿರುವುದೇ ವಿಭಿನ್ನ ಲವ್‍ಸ್ಟೋರಿಗಳಿಗೆ. ದಳಪತಿ ಅನ್ನೋ ಹೆಸರಿಟ್ಟುಕೊಂಡು ಅದರಲ್ಲಿ ಎಂಥ ಲವ್‍ಸ್ಟೋರಿ ಹೇಳ್ತಾರೆ ಅನ್ನೋ ಕುತೂಹಲ ಪ್ರೇಕ್ಷಕರಿಗೂ ಇದೆ.

 • ರಾಧಿಕಾ ಕುಮಾರಸ್ವಾಮಿ ಮತ್ತು ನೆನಪರಲಿ ಪ್ರೇಮ್ ಜೊತೆ ಜೊತೆಯಲಿ

  Prem and Radhika Kumaraswamy Together

  ಚೌಕ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ ನಟ ನೆನಪಿರಲಿ ಪ್ರೇಮ್, ರಾಧಿಕಾ ಕುಮಾರ ಸ್ವಾಮಿ ಜೊತೆಗೆ ಬರುತ್ತಿದ್ದಾರೆ. ಟಿವಿ ಶೋನಲ್ಲಿ. ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್ ಸೀಸನ್ 2ನಲ್ಲಿ ನೆನಪಿರಲಿ ಪ್ರೇಮ್ ಜಡ್ಜ್. ಅವರ ಜೊತೆಗೆ ಜಡ್ಜ್ ಆಗಿ ಕೂರುತ್ತಿರುವ ನಾಯಕಿ ರಾಧಿಕಾ ಕುಮಾರಸ್ವಾಮ

  ನೆನಪಿರಲಿ ಪ್ರೇಮ್​ಗೆ ಟಿವಿ ಶೋ ಹೊಸದಲ್ಲ. ಈ ಮೊದಲು ಪುಟಾಣಿ ಪಂಟ್ರು ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದ ಪ್ರೇಮ್​ಗೆ, ಕಿರುತೆರೆಯಲ್ಲಿ ಇದು 2ನೇ ಅನುಭವ. ಹೆಚ್ಚೂ ಕಡಿಮೆ ತೆರೆಮರೆಗೆ ಸರಿದವರಂತೆ ಇರುವ ರಾಧಿಕಾ ಕುಮಾರಸ್ವಾಮಿ, ಈ ಶೋ ಮೂಲಕ ಟಿವಿಯಲ್ಲಿ ಬರುತ್ತಿರುವುದು ಈ ರಿಯಾಲಿಟಿ ಶೋನ ವಿಶೇಷ.

  ಇವರಿಬ್ಬರ ಜೊತೆ 3ನೇ ಜಡ್ಜ್ ಆಗಿರುವದು ಕೊರಿಯೋಗ್ರಾಫರ್ ಸಲ್ಮಾನ್. ಜೂನ್ 24ರಿಂದ ಸ್ಟಾರ್ ಸುವರ್ಣದಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ

Trayambakam Movie Gallery

Rightbanner02_butterfly_inside

Paddehuli Movie Gallery