` premam poojyam, - chitraloka.com | Kannada Movie News, Reviews | Image

premam poojyam,

 • 10 ಕೋಟಿ ಕ್ಲಬ್ ಸೇರಿದ ಪ್ರೇಮಂ ಪೂಜ್ಯಂ

  10 ಕೋಟಿ ಕ್ಲಬ್ ಸೇರಿದ ಪ್ರೇಮಂ ಪೂಜ್ಯಂ

  ಪ್ರೇಮಂ ಪೂಜ್ಯಂ. ನೆನಪಿರಲಿ ಪ್ರೇಮ್ ಅಭಿನಯದ 25ನೇ ಸಿನಿಮಾ. ಈ ಮ್ಯೂಸಿಕಲ್ ಲವ್ ಸ್ಟೋರಿ 25ನೇ ದಿನ ಪೂರೈಸಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಡಾ.ರಾಘವೇಂದ್ರ ನಿರ್ದೇಶನದ ಮೊದಲ ಸಿನಿಮಾ ಪ್ರೇಮಂ ಪೂಜ್ಯಂ. ಒಂದು ಪವಿತ್ರ ಪ್ರೇಮವನ್ನು ಅಷ್ಟೇ ಪವಿತ್ರವಾಗಿ ಹೇಳಿರುವ ಸಿನಿಮಾ.

  ಸಿನಿಮಾದ ನಿರ್ಮಾಪಕರೆಲ್ಲ ವೈದ್ಯರೇ. ವೈದ್ಯರಿಂದ ವೈದ್ಯರಿಗಾಗಿ ವೈದ್ಯರೇ ನಿರ್ಮಿಸಿದ ಚಿತ್ರ ಈಗ ಕಾಲೇಜು ವಿದ್ಯಾರ್ಥಿಗಳ ಮನಸ್ಸು ಗೆದ್ದಿದೆ. ಚಿತ್ರದ ಲೆಂಗ್ತ್ ಕೂಡಾ ಕಡಿಮೆ ಮಾಡಿದ ಮೇಲೆ ಚಿತ್ರಕ್ಕೆ ವೇಗವೂ ಸಿಕ್ಕಿದೆ . ಅಷ್ಟೇ ಅಲ್ಲ, ಚಿತ್ರದ ಕಲೆಕ್ಷನ್ ಸುಧಾರಿಸಿದ್ದು ಚಿತ್ರವೀಗ 10 ಕೋಟಿ ಕ್ಲಬ್ ಸೇರಿದೆ.

 • Aindrita likely to act in 'Premam Poojyam'

  aindrita likely to act in premam poojyam

  Actress Aindrita Ray who married Diganth in December is back in action. The actress who was away from acting is said to have been roped in as the heroine for Prem's new film 'Premam Poojyam'

  'Premam Poojyam' is Prem's 25th film and is being directed by debutante Raghavendra. The director himself has scripted and composed the music for the film apart from directing it.

  Rakshith Kedambadi and Rajkumar Janakiraman who are doctors by profession are producing the film. Naveen Kumar is the cinematographer. The shooting for the film is expected to start from May.

 • Premam Poojyam Movie Review, Chitraloka Rating 3.5/5

  Premam Poojyam Movie Review, Chitraloka Rating 3.5/5

  Film: Premam Poojyam

  Duration: 173.33 minutes 

  Certificate: U/A 

  Cast: Prem Kumar, Brinda Acharya, Sadhu Kokila, Aindrita Ray, Master Anand, Avinash, TS Nagabharana 

  Director: Raghavendra BS

  Stars: 3.5/5 

  The teaser and trailer of this movie made this one of the most expected Kannada movies this year. This is also Nainapirali Prem's 25th movie, making it a landmark for the actor. A lot was riding on this movie in terms of hopes and hype surrounding it. The film delivers on its promise. 

  From the breathtaking cinematography of Naveen Kumar to the crisp scissor hands of Harish Komme, the emotionally charged performances led by Prem and a romantic drama that tries to be a fairytale, Premam Poojyam is a film for the family.

  More than anyone else, it looks like Prem has put his heart and soul in this film. He is not only refreshing and amazing in acting but also renders a soulful acting performance. As an youthful and energetic medical student, a charming lover boy and a medical professional, he fits the bill perfectly. 

  The story takes place in a 20-year timeline. From Srihari completing his PUC in a Mandya village to securing a Medical seat after trumping CET to falling in love with a Malnad Catholic in medical college, the first half the film is a very beautiful journey in the picturesque locales of Himalayas and all the other beautiful places of India. 

  While you enjoy the beauty of the first half, be prepared for the drama and twists in the second half. Anyone with college in their minds can relate to these situations. 

  Overall Premam Poojyam is a film with a beautiful heart and an even better soul. Watch it for Prem.

 • Puneeth Sings For 'Premam Poojyam'

  puneeth signs for premam poojyam

  Just a day after singing a song for Ganesh starrer 'Geetha', actor Puneeth Rajakumar sang a song for 'Nenapirali' Prem's 25th film 'Premam Poojyam' the very next day.

  Puneeth has sung a song for 'Premam Poojyam' under the music direction of Raghavendra. Prem says the song is about Dr Rajkumar and this is the first time that Puneeth has sung a song about his father for any film. The song recording was done recently and Prem was overwhelmed by Puneeth's gesture.

  Raghavendra apart from composing the music has scripted and directed the film also. Rakshith Kedambadi and Rajkumar Janakiraman who are doctors by profession are producing the film. Naveen Kumar is the cinematographer.

 • ದತ್ತು ಮಕ್ಕಳೊಂದಿಗೆ ಪ್ರೇಮಂ ಪೂಜ್ಯಂ ಹುಟ್ಟುಹಬ್ಬ

  premem poojyam motion poster launched

  ನೆನಪಿರಲಿ ಪ್ರೇಮ್, ಚಿತ್ರರಂಗದಲ್ಲಿ ಸಾಧನೆಯ ಹೊಸ್ತಿಲಲ್ಲಿ ನಿಂತಿದ್ದಾರೆ. ಅವರ 25ನೇ ಚಿತ್ರ ಸೆಟ್ಟೇರಿದೆ. ಪ್ರೇಮಂ ಪೂಜ್ಯಂ ಚಿತ್ರದ ಮೋಷನ್ ಪೋಸ್ಟರ್‍ನ್ನು ಪ್ರೇಮ್ ಹುಟ್ಟುಹಬ್ಬದಂದೇ ಹೊರತಂದಿದೆ ಚಿತ್ರತಂಡ. ಅದರಲ್ಲೂ ವಿಶೇಷವೆಂದರೆ, ವಿಕಲಚೇತನ ಮಕ್ಕಳಿಂದ. 

  ಕಳೆದ 10 ವರ್ಷಗಳಿಂದ ಪ್ರೇಮ್, ಇಬ್ಬರು ವಿಶೇಷ ಮಕ್ಕಳನ್ನು ದತ್ತು ಪಡೆದಿದ್ದಾರೆ. ಅವರ ಸಂಪೂರ್ಣ ಆಗುಹೋಗು ನೋಡಿಕೊಳ್ತಿರೋ ಪ್ರೇಮ್, ಆ ದೇವರ ಮಕ್ಕಳಿಂದಲೇ ತಮ್ಮ ಚಿತ್ರದ ಪೋಸ್ಟರ್ ರಿಲೀಸ್ ಮಾಡಿಸಿದ್ದಾರೆ.

  ಡಾ.ರಾಘವೇಂದ್ರ ನಿರ್ದೇಶನದ ಈ ಚಿತ್ರಕ್ಕೆ ಐಂದ್ರಿತಾ ರೇ ನಾಯಕಿ. 

 • ದೇವರಂತಾ ಪ್ರೇಮಿಗೆ.. ದೇವತೆಯ ಪ್ರೀತಿ ಸಿಗುತ್ತಾ..?

  ದೇವರಂತಾ ಪ್ರೇಮಿಗೆ.. ದೇವತೆಯ ಪ್ರೀತಿ ಸಿಗುತ್ತಾ..?

  ಪ್ರೇಮಂ ಪೂಜ್ಯಂ. ಈಗ ಥಿಯೇಟರಿನಲ್ಲಿರೋ ಸಿನಿಮಾದಲ್ಲಿರೋದು ಒಂದು ಅಪ್ಪಟ ಲವ್ ಸ್ಟೋರಿ. ಲವ್ ಸ್ಟೋರಿ ಎಂದರೆ ಅಂತಿಂತಾ ಲವ್ ಸ್ಟೋರಿ.. ಟೈಟಲ್ಲಿಗೆ ತಕ್ಕಂತೆ ಪ್ರೀತಿ ಎಂದರೆ ಪೂಜಿಸಲೇಬೇಕು ಎನ್ನಿಸುವಂತಾ ಲವ್ ಸ್ಟೋರಿ. ಒಂದು ಪವಿತ್ರ ಪ್ರೇಮ ಕಥೆ.

  ಶೆರ್ಲಿನ್‍ಳನ್ನು ಮೊದಲ ನೋಟದಲ್ಲೇ ಪ್ರೀತಿಸುವ ಶ್ರೀಹರಿಗೆ, ಅವಳೆಂದರೆ ಅಂಬಾರಿಯೊಳಗಿನ ದೇವತೆಯಷ್ಟೇ ಭಕ್ತಿ ಮತ್ತು ಪ್ರೀತಿ. ಈ ಶ್ರೀಹರಿಗೊಬ್ಬ ಗೆಳೆಯ ಮಾಸ್ಟರ್ ಆನಂದ್. ಕೊನೆಗೆ ಬರೋದು ಐಂದ್ರಿತಾ ರೇ. ಕಚಗುಳಿ ಇಡೋಕೆ ತಲೈವಾ ಸಾಧು. ಫೈನಲೀ... ಹೀರೋಗೆ ಪ್ರೀತಿ ಸಿಕ್ಕಿತಾ.. ಇಲ್ವಾ.. ಅದನ್ನ ತಿಳ್ಕೊಳ್ಳೋಕೆ ಥಿಯೇಟರಿಗೇ ಹೋಗಬೇಕು. ರಾಘವೇಂದ್ರ ಅವರ ನಿರ್ದೇಶನದ ಮೊದಲ ಚಿತ್ರವಿದು. ಡಾಕ್ಟರುಗಳೆಲ್ಲ ಒಟ್ಟಾಗಿ ಸೇರಿಕೊಂಡು.. ಡಾಕ್ಟರುಗಳ ಲವ್ ಸ್ಟೋರಿ ಹೇಳಿದ್ದಾರೆ. ಲವ್ ಅನ್ನೋದು ಹಾರ್ಟಿಗೆ ಸಂಬಂಧಪಟ್ಟಿರೋದ್ರಿಂದ ಇದನ್ನು ಎದೆ ಬಡಿತ ಹೇಳೋ ಪ್ರೇಮಕಥೆ ಎನ್ನಬಹುದು. ಪ್ರೀತಿಸಿ.. ಪ್ರೇಮಿಸಿ.. ಪೂಜಿಸಿ..

 • ಪ್ರೇಮಂ ಪೂಜ್ಯಂ ಅಪ್ಪುಗೆ ಸಮರ್ಪಣೆ : ಪ್ರೇಮ್

  ಪ್ರೇಮಂ ಪೂಜ್ಯಂ ಅಪ್ಪುಗೆ ಸಮರ್ಪಣೆ : ಪ್ರೇಮ್

  ನೆನಪಿರಲಿ ಪ್ರೇಮ್ ಮತ್ತು ಪುನೀತ್ ಅವರ ಬಾಂಧವ್ಯ ಹೊಸದೇನಲ್ಲ. ಶಿವಣ್ಣ ನೇತೃತ್ವದಲ್ಲಿ ಪ್ರತಿ ವರ್ಷ ಹೋಗುತ್ತಿದ್ದ ಶಬರಿಮಲೆ ಯಾತ್ರೆಯಲ್ಲಿ ಪುನೀತ್ ಜೊತೆ ಪ್ರೇಮ್ ಕೂಡಾ ಇರುತ್ತಿದ್ದರು. ಅವರು ನನಗೆ ಫ್ಯಾಮಿಲಿ ಫ್ರೆಂಡ್ ರೀತಿಯಲ್ಲೇ ಇದ್ದರು ಎಂದು ನೆನಪಿಸಿಕೊಳ್ಳುವ ಪ್ರೇಮ್ ತಮ್ಮ 25ನೇ ಸಿನಿಮಾ ಪ್ರೇಮಂ ಪೂಜ್ಯಂ ಚಿತ್ರವನ್ನು ಪುನೀತ್ ಅವರಿಗೇ ಸಮರ್ಪಿಸಿದ್ದಾರೆ.

  ಚಿತ್ರದ ನಿರ್ದೇಶಕ ಡಾ.ರಾಘವೇಂದ್ರ ಚಿತ್ರದ ಕಥೆಯನ್ನು ಅಂಬರೀಷ್ ಅವರಿಗೂ ರೀಡಿಂಗ್ ಕೊಟ್ಟಿದ್ದರಂತೆ. ಕಥೆಯನ್ನು ಇಷ್ಟಪಟ್ಟಿದ್ದ ಅಂಬಿ, ಏನೂ ಚೇಂಜ್ ಮಾಡಬೇಡ. ಇದೇ ರೀತಿ ಸಿನಿಮಾ ಮಾಡು ಎಂದಿದ್ದರಂತೆ. ನನ್ನ ಸ್ಕ್ರಿಪ್ಟ್ ನಂಬಿ ಒಟ್ಟು 28 ಜನ ವೈದ್ಯರು ನಿರ್ಮಾಣಕ್ಕೆ ಮುಂದೆ ಬಂದರು. ಅದು ನನ್ನ ಧೈರ್ಯವನ್ನು ಹೆಚ್ಚಿಸಿತು ಎನ್ನುವ ರಾಘವೇಂದ್ರ, ಪ್ರೀತಿಯನ್ನು ಪೂಜ್ಯ ಭಾವದಿಂದಲೇ ನೋಡಬೇಕು ಅನ್ನೋದನ್ನು ಕಥೆಯಲ್ಲಿ ಹೇಳಿದ್ದೇವೆ. ಅದಕ್ಕೆ ಪೂರಕವಾಗಿರೋದು ಸಂಗೀತ. ಒಬ್ಬ ಡಾಕ್ಟರ್ ರೂಪಿಸಿದ ಕಥೆಗೆ ಶಕ್ತಿ ತುಂಬಿರೋದು 28 ವೈದ್ಯರು. ಡಾಕ್ಟರ್‍ಗಳೇ ಹೇಳ್ತಿರೋ ಡಾಕ್ಟರ್ ಲವ್ ಸ್ಟೋರಿ ಪ್ರೇಮಂ ಪೂಜ್ಯಂ ಇದೇ ನವೆಂಬರ್ 12ರಂದು ರಿಲೀಸ್ ಆಗುತ್ತಿದೆ.

 • ಪ್ರೇಮಂ ಪೂಜ್ಯಂ ಪ್ರಚಾರದ ಹಬ್ಬ

  ಪ್ರೇಮಂ ಪೂಜ್ಯಂ ಪ್ರಚಾರದ ಹಬ್ಬ

  ನೆನಪಿರಲಿ ಪ್ರೇಮ್ ಅವರ ಮೈಲಿಗಲ್ಲು ಸಿನಿಮಾ ಪ್ರೇಮಂ ಪೂಜ್ಯಂ. ಇದು ಅವರ 25ನೇ ಸಿನಿಮಾ. ಪ್ರೇಮ್ ಲವ್ ಸ್ಟೋರಿ ಮೂಲಕವೇ ಪ್ರೇಮಂ ಪೂಜ್ಯಂ ಮ್ಯಾಜಿಕ್ ಮಾಡಲು ರೆಡಿಯಾಗಿದ್ದಾರೆ. ವೈದ್ಯರೇ ಸೇರಿ ನಿರ್ಮಿಸಿ, ನಿರ್ದೇಶಿಸಿರುವ ಚಿತ್ರದಲ್ಲಿರೋದು ಡಾಕ್ಟರ್‍ಗಳ ಲವ್ ಸ್ಟೋರಿಯಂತೆ. ಚಿತ್ರ ಅಕ್ಟೋಬರ್ ಕೊನೆಯ ವಾರ ರಿಲೀಸ್ ಆಗುತ್ತಿದೆ. ಅದೂ ಭಜರಂಗಿ 2 ಚಿತ್ರದ ಎದುರು. ಚಿತ್ರದ ಪ್ರಚಾರವೂ ಜೋರಾಗಿದೆ.

  ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರೇಮಂ ಪೂಜ್ಯಂ ಪೋಸ್ಟರ್‍ಗಳು ರಾರಾಜಿಸುತ್ತಿವೆ. ಕೆಡಂಬಾದಿ ಕ್ರಿಯೇಷನ್ಸ್‍ನವರು ಬಸ್ಸು, ಆಟೋ, ಕ್ಯಾಬ್ಸ್.. ಎಲ್ಲವುಗಳ ಮೇಲೂ ಪ್ರೇಮಂ ಪೂಜ್ಯಂ ಪೋಸ್ಟರ್ ರಾರಾಜಿಸುವಂತೆ ಮಾಡಿದ್ದಾರೆ.

  ಪ್ರೇಮ್ ಹೀರೋ ಆಗಿರೋ ಚಿತ್ರದಲ್ಲಿ ಬೃಂದಾ ಆಚಾರ್ಯ ನಾಯಕಿ.  ಡಾ. ಬಿ.ಎಸ್.ರಾಘವೇಂದ್ರ ಅವರ ನಿರ್ದೇಶನದ ಪ್ರೇಮಂ ಪೂಜ್ಯಂ, ಹಬ್ಬವನ್ನೇ ಶುರು ಮಾಡಿದೆ.

 • ಪ್ರೇಮಂ ಪೂಜ್ಯಂ ಸಖತ್ ಲವ್ಲಿ

  ಪ್ರೇಮಂ ಪೂಜ್ಯಂ ಸಖತ್ ಲವ್ಲಿ

  ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ 25ನೇ ಸಿನಿಮಾ ಪ್ರೇಮಂ ಪೂಜ್ಯಂ. ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ನೋಡಿದವರು ಹೇಳ್ತಿರೋದು ಒಂದೇ ಮಾತು.. ಇದು ಸಖತ್ ಲವ್ಲಿಯಾಗಿದೆ.

  ಪವಿತ್ರವಾದ ಪ್ರೀತಿಯ ಅನುಭವ ಪಡೆದಿರುವ ಪ್ರತಿಯೊಬ್ಬರಿಗೂ ಇದು ಇಷ್ಟವಾಗುತ್ತೆ ಅನ್ನೋದು ಪ್ರೇಮ್ ಮಾತು. ಈ ಚಿತ್ರದಲ್ಲಿ ಒಟ್ಟು 12 ಹಾಡುಗಳಿವೆಯಂತೆ. ಹರಿಹರನ್, ಸೋನು ನಿಗಮ್, ವಿಜಯ ಪ್ರಕಾಶ್, ಅರ್ಮಾನ್ ಮಲಿಕ್, ಮೋಹಿತ್ ಚೌಹಾಣ್ ಹಾಡಿರುವ ಹಾಡುಗಳು. ರಾಘವೇಂದ್ರ ಅವರ ಮ್ಯೂಸಿಕ್ ಹೊಸತನದ ಅನುಭವ ನೀಡುತ್ತಿದೆ.

  ಅಂದಹಾಗೆ ಚಿತ್ರದ ನಿರ್ದೇಶಕ ಡಾ.ಬಿ.ಎಸ್.ರಾಘವೇಂದ್ರ ಅವರೇ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ಕೂಡಾ. ಡಾ.ರಕ್ಷಿತ್ ಕೆಡಂಬಾಡಿ, ಡಾ.ರಾಜ್ಕುಮಾರ್ ಜಾನಕಿರಾಮನ್, ಡಾ.ಮನೋಜ್ ಕೃಷ್ಣನ್ ಅವರ ಜೊತೆ ಡಾ.ರಾಘವೇಂದ್ರ  ಕೂಡಾ ನಿರ್ಮಾಪಕರು. ವೃಂದಾ ಆಚಾರ್ಯ ಚಿತ್ರಕ್ಕೆ ಹೀರೋಯಿನ್. ಒಂದು ಚೆಂದದ ಪೇಂಯ್ಟಿಂಗ್ನಂತಿರೋ ಪ್ರೇಮಂ ಪೂಜ್ಯಂ ಚಿತ್ರದ ಟ್ರೇಲರ್, ಮನಸ್ಸಿಗೆ ಮುದ ನೀಡುತ್ತಿರುವುದಂತೂ ಸುಳ್ಳಲ್ಲ.

 • ಪ್ರೇಮಂ ಪೂಜ್ಯಂ ಸೆನ್ಸಾರ್ ಸಂಪನ್ನಂ

  ಪ್ರೇಮಂ ಪೂಜ್ಯಂ ಸೆನ್ಸಾರ್ ಸಂಪನ್ನಂ

  ಲವ್ಲಿ ಸ್ಟಾರ್ ವೃತ್ತಿಜೀವನದ ಮೈಲಿಗಲ್ಲು ಸಿನಿಮಾ ಪ್ರೇಮಂ ಪೂಜ್ಯಂ. ಇದು ಅವರ 25ನೇ ಸಿನಿಮಾ. ಅಕ್ಟೋಬರ್ 29ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿರೋ ಪ್ರೇಮಂ ಪೂಜ್ಯಂ ಚಿತ್ರ ಸೆನ್ಸಾರ್ ಮುಗಿಸಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

  ಕೆದಂಬಾಡಿ ಕ್ರಿಯೇಷನ್ಸ್ ನಿರ್ಮಾಣದ ಚಿತ್ರಕ್ಕೆ ಡಾಕ್ಟರುಗಳೇ ಪ್ರೊಡ್ಯೂಸರ್ಸ್. ಡೈರೆಕ್ಟರ್ ರಾಘವೇಂದ್ರ ಕೂಡಾ ವೈದ್ಯರೇ. ಸಂಗೀತವೂ ಅವರದ್ದೇ. ಮಧುರವಾದ ಹಾಡು, ಸುಂದರವಾದ ದೃಶ್ಯಗಳು ಚಿತ್ರದ ಪ್ಲಸ್ ಪಾಯಿಂಟ್ಸ್. ಪ್ರೇಮ್ ಎದುರು ನಾಯಕಿಯಾಗಿರುವುದು ಶೃಂಗೇರಿ ಸುಂದರಿ ಬೃಂದಾ ಆಚಾರ್ಯ.

  ಒಂದು ಮಧುರ ಅನುಭವ ಕೊಡುವ ಲವ್ ಸ್ಟೋರಿಗೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು ಹೇಗೆ? ಚಿತ್ರದ ಟ್ರೇಲರ್ ನೋಡಿದವರಿಗೆ ಅಶ್ಲೀಲತೆಯಾಗಲೀ, ಕ್ರೌರ್ಯವಾಗಲೀ ಇರುವ ಸುಳಿವು ಕೂಡಾ ಇಲ್ಲ. ಹಾಗಿದ್ದರೂ ಚಿತ್ರಕ್ಕೆ ಯು ಸರ್ಟಿಫಿಕೇಟ್ ಬದಲು ಯು/ಎ ಸಿಕ್ಕಿದ್ದು ಏಕೆ ಅನ್ನೋ ಪ್ರಶ್ನೆಗೆ ಸಿನಿಮಾ ರಿಲೀಸ್ ಆಗುವವರೆಗೂ ಕಾಯಬೇಕು

 • ಪ್ರೇಮಂ ಪೂಜ್ಯಂನಲ್ಲಿ 12 ಮಧುರ ಪ್ರೇಮಗೀತೆ. ಆದರೆ.....

  ಪ್ರೇಮಂ ಪೂಜ್ಯಂನಲ್ಲಿ 12 ಮಧುರ ಪ್ರೇಮಗೀತೆ. ಆದರೆ.....

  ಒಂದಲ್ಲ.. ಎರಡಲ್ಲ.. 12 ಹಾಡುಗಳು. 12ಕ್ಕೆ ಹನ್ನೆರಡೂ ಪ್ರೇಮಗೀತೆಗಳೇ.. ಒಂದೊಂದು ಹಾಡೂ ಪೇಂಯ್ಟಿಂಗ್‍ನಂತೆ ಸೊಗಸಾಗಿವೆ. ಪ್ರೇಮ್, ಬೃಂದಾ ಆಚಾರ್ಯ, ಐಂದ್ರಿತಾ ರೇ.. ಎಲ್ಲರೂ ಚೆಂದ ಚೆಂದ ಕಾಣಿಸುತ್ತಾರೆ. ಅಷ್ಟೂ ಹಾಡುಗಳಿಗೆ ಸಂಗೀತ ನೀಡಿರುವುದು ಸ್ವತಃ ನಿರ್ದೇಶಕ ರಾಘವೇಂದ್ರ.

  ನಾನು ಸಂಗೀತ ನಿರ್ದೇಶಕನಾಗಬೇಕು ಎಂದುಕೊಂಡವನು. ಹಳೆಯ ಹಾಡುಗಳೆಂದರೆ ತುಂಬಾ ಇಷ್ಟ. ಪ್ರೀತಿಯನ್ನು ಅಭಿವ್ಯಕ್ತಿಸಲು ಹಾಡುಗಳೇ ಅತ್ಯುತ್ತಮ ಎಂದು ನಂಬಿದವನು ನಾನು. ಆದರೆ, ಚಿತ್ರದ ಕಥೆ, ಚಿತ್ರಕಥೆ ಬರೆದ ನಂತರ ಜೊತೆಗಿದ್ದವರೆಲ್ಲ ನಾನೇ ನಿರ್ದೇಶನವನ್ನೂ ಮಾಡಬೇಕು ಎಂದರು. ಹೀಗಾಗಿ ಡೈರೆಕ್ಟರ್ ಆದೆ ಎನ್ನುತ್ತಾರೆ ರಾಘವೇಂದ್ರ.

  12 ಪ್ರೇಮಗೀತೆಗಳಿದ್ದರೂ ಒಂದೇ ಒಂದು ಹಾಡಿನಲ್ಲಿ ಹೀರೋ ಹೀರೋಯಿನ್ ಪರಸ್ಪರ ಟಚ್ ಕೂಡಾ ಮಾಡಲ್ಲ. ಇದು ಚಿತ್ರದ ಇನ್ನೊಂದು ಹೈಲೈಟ್. ಪ್ರೀತಿಯನ್ನು ದೇವರ ಸ್ಥಾನದಲ್ಲಿಟ್ಟು ರೂಪಿಸಿರೋ ಕಥೆಯಲ್ಲಿ ಒಂದೊಂದು ಹಾಡು ಕೂಡಾ ಹೈಲೈಟ್. ಹಾಡುಗಳ ಮೂಲಕವೇ ಚಿತ್ರದ ಕಥೆ ಸಾಗುತ್ತಾ ಹೋಗುತ್ತೆ ಎನ್ನುತ್ತಾರೆ ರಾಘವೇಂದ್ರ.

  12 ಹಾಡುಗಳನ್ನು ಹರಿಹರನ್, ಸೋನು ನಿಗಮ್, ಸಾಧು ಕೋಕಿಲ, ವಿಜಯ್ ಪ್ರಕಾಶ್, ಅರ್ಮಾನ್ ಮಲಿಕ್, ಮೃದುಲಾ ವಾರಿಯರ್, ಶಹಬಾಜ್ ಅಮಾನ್, ಮೋಹಿತ್ ಚೌಹಾನ್.. ಮೊದಲಾದ ಖ್ಯಾತ ವಿಖ್ಯಾತರಿಂದಲೇ ಹಾಡಿಸಿದ್ದಾರೆ.

 • ಪ್ರೇಮಿಗಳ ದಿನಕ್ಕೆ ಪ್ರೇಮಂ ಪೂಜ್ಯಂ 2 ಆರಂಭ ?

  ಪ್ರೇಮಿಗಳ ದಿನಕ್ಕೆ ಪ್ರೇಮಂ ಪೂಜ್ಯಂ 2 ಆರಂಭ ?

  ಪ್ರೇಮಂ ಪೂಜ್ಯಂ. ನೆನಪಿರಲಿ ಪ್ರೇಮ್ ಅಭಿನಯದ 25ನೇ ಸಿನಿಮಾ. ವೈದ್ಯ ಜಗತ್ತಿನ ಅದ್ಭುತ ಪ್ರೇಮಿಗಳ ವಿಭಿನ್ನ ಕಥೆ ಹೇಳಿದ್ದ ಡಾ.ರಾಘವೇಂದ್ರ, ಈಗ ಚಿತ್ರದ ಸೀಕ್ವೆಲ್‍ಗೆ ಕೈ ಹಾಕಿದ್ದಾರೆ. ಪ್ರೇಮಂ ಪೂಜ್ಯಂ 2 ಸಿದ್ಧವಾಗುತ್ತಿದೆ.

  ಅದೇ ಪ್ರೇಮ್, ಅದೇ ಬೃಂದಾ ಆಚಾರ್ಯ, ಅದೇ ಡೈರೆಕ್ಟರ್. ಅಧಿಕೃತವಾಗಿ ಶುರುವಾಗುತ್ತಿರೋದು ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಯಂದು. ಪ್ರೇಮಂ ಪೂಜ್ಯಂ ದುರಂತ ಅಂತ್ಯದ ಸಿನಿಮಾ. ಈಗ ಅದೇ ಜೋಡಿಯನ್ನಿಟ್ಟುಕೊಂಡು  ಸೀಕ್ವೆಲ್ ಹೇಗೆ ಮಾಡ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.

 • ಪ್ರೇಮಿಗಳಿಗೊಂದು ದಿವ್ಯಮಂತ್ರ ಕೊಟ್ಟ ಪ್ರೇಮ್

  ಪ್ರೇಮಿಗಳಿಗೊಂದು ದಿವ್ಯಮಂತ್ರ ಕೊಟ್ಟ ಪ್ರೇಮ್

  ಲವ್ ಲಿ ಸ್ಟಾರ್ ಪ್ರೇಮ್ ನಟಿಸುತ್ತಿರೋ 25ನೇ ಸಿನಿಮಾ ಪ್ರೇಮಂ ಪೂಜ್ಯಂ. ಪ್ರೇಮ ಕಥೆಯ ಸಿನಿಮಾಗಳ ಮೂಲಕವೇ ಸ್ಟಾರ್ ಆಗಿ ಲವ್ಲಿ ಸ್ಟಾರ್ ಪಟ್ಟಕ್ಕೇರಿದ ಪ್ರೇಮ್, ಪ್ರೇಮಂ ಪೂಜ್ಯಂ ಚಿತ್ರದಲ್ಲಿ ಪ್ರೇಮಿಗಳಿಗಾಗಿ ಪ್ರೇಮ ಮಂತ್ರವನ್ನೇ ಕೊಟ್ಟಿದ್ದಾರೆ. ಚಿತ್ರದ ಟೈಟಲ್ ಸಾಂಗ್ ನೋಡಿದವರಿಗೆ ಹಾಗೆ ಅನಿಸದೇ ಇರದು.

  ಪ್ರೇಮಂ ಪೂಜ್ಯಂ ಚಿತ್ರದ ಟೈಟಲ್ ಟ್ರ್ಯಾಕ್ ಕೇಳಿದರೆ, ಪ್ರೇಮಿಗಳ ಹೃದಯ ಕದಿಯೋಕೆ ರೆಡಿಯಾಗಿದ್ದಾರೆ ಪ್ರೇಮ್ ಅನ್ನೋ ಸತ್ಯ ಅರಿವಾಗದೇ ಇರದು. ಡಾ. ರಾಘವೇಂದ್ರ ನಿರ್ದೇಶದನ ಚೊಚ್ಚಲ ಸಿನಿಮಾ ಪ್ರೇಮಂ ಪೂಜ್ಯಂ. ಅಂದಹಾಗೆ ಈ ಹಾಡಿಗೆ ಸಾಹಿತ್ಯ ಮತ್ತು ಸಂಗೀತ ಎರಡೂ ರಾಘವೇಂದ್ರ ಅವರದ್ದೇ.

  ಪ್ರೇಮ್ ಗೆ ಜೋಡಿಯಾಗಿ ಬೃಂದಾ ಆಚಾರ್ಯ ನಟಿಸುತ್ತಿದ್ದು, ಲವ್ ಫೀಲಿಂಗ್ ಕೊಡುತ್ತಿರುವುದಂತೂ ಪಕ್ಕಾ.

 • ಪ್ರೇಮ್ 9 ಅವತಾರ

  prem's 9 avatara in premam poojyam

  ಪ್ರೇಮಂ ಪೂಜ್ಯಂ, ನೆನಪಿರಲಲಿ ಪ್ರೇಮ್ ಅವರ 25ನೇ ಸಿನಿಮಾ. ಪ್ರಾಣ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಪ್ರೇಮ್‍ಗೆ ಅತಿ ದೊಡ್ಡ ಬ್ರೇಕ್ ಕೊಟ್ಟಿದ್ದು ನೆನಪಿರಲಿ ಸಿನಿಮಾ. ಈಗ 25ನೇ ಚಿತ್ರಕ್ಕೆ ಸಿದ್ಧರಾಗುತ್ತಿರುವ ಪ್ರೇಮ್, ಪ್ರೇಮಂ ಪೂಜ್ಯಂನಲ್ಲಿ 9 ವಿವಿಧ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

  ಒಟ್ಟು 9 ಗೆಟಪ್ಪುಗಳಿವೆ. ಕ್ಲೀನ್ ಶೇವ್, ಗಡ್ಡಧಾರಿ, ಸ್ಟೈಲಿಷ್ ಲುಕ್ಕುಗಳು, ಟ್ರಿಮ್ಮಿಂಗ್ ಲುಕ್.. ಹೀಗೆ ಪಾತ್ರದ ಜರ್ನಿಗೆ ತಕ್ಕಂತೆ ವಿವಿಧ ಆಯಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಡಿಫರೆಂಟ್ ಲುಕ್‍ಗೆ ಯತ್ನಿಸುತ್ತಿದ್ದೇನೆ ಎಂದಿದ್ದಾರೆ ಪ್ರೇಮ್.

  ಪ್ರೇಮಂ ಪೂಜ್ಯಂಗೆ ರಾಘವೇಂದ್ರ ನಿರ್ದೇಶಕರಾದರೆ, ಡಾ. ರಕ್ಷಿತ್ ಕೆದಂಬಾಡಿ ಮತ್ತು ಡಾ. ರಾಜ್‍ಕುಮಾರ್ ಜಾನಕಿರಾಮ್ ನಿರ್ಮಾಪಕರು.

   

 • ಮಂಡ್ಯ.. ಮಳವಳ್ಳಿ.. ಮೈಸೂರು.. ವಿಯೆಟ್ನಾಂ : ಪ್ರೇಮಂ ಪೂಜ್ಯಂ ಲವ್ ಜರ್ನಿ

  ಮಂಡ್ಯ.. ಮಳವಳ್ಳಿ.. ಮೈಸೂರು.. ವಿಯೆಟ್ನಾಂ : ಪ್ರೇಮಂ ಪೂಜ್ಯಂ ಲವ್ ಜರ್ನಿ

  ಇದು ನನ್ನ 25ನೇ ಸಿನಿಮಾ. ನಾನು ಅನುಭವಿ ನಿರ್ದೇಶಕರನ್ನೇ ಹುಡುಕುತ್ತಿದ್ದೆ. ಆದರೆ, ಡಾ. ರಾಘವೇಂದ್ರ ಅವರನ್ನು ಭೇಟಿ ಮಾಡಿ ಕಥೆ ಹೇಳಿದ ನಂತರ ನನ್ನ ನಿರ್ಧಾರ ಬದಲಾಯ್ತು. ರಾಘವೇಂದ್ರ ಅವರು ಕಥೆ ಹೇಳೋ ಶೈಲಿಯೇ ಡಿಫರೆಂಟ್. ಇದು ಲವ್ ಸ್ಟೋರಿನೇ. ಆದರೆ, ವಿಭಿನ್ನ ಅನುಭವ ಕೊಡುವುದಂತೂ ಪಕ್ಕಾ..

  ಹೀಗೆ ವಿಶ್ವಾಸದಿಂದಲೇ ಹೇಳುತ್ತಾ ಹೋದರು ಡಾ.ಶ್ರೀಹರಿ ಅಲಿಯಾಸ್ ನೆನಪಿರಲಿ ಪ್ರೇಮ್. ಚಿತ್ರದಲ್ಲಿ ಪ್ರೇಮ್ ಅವರ ಪಾತ್ರದ ಹೆಸರು ಶ್ರೀಹರಿ. ಮಂಡ್ಯ.. ಮಳವಳ್ಳಿ.. ಮೈಸೂರು.. ವಿಯೆಟ್ನಾಂವರೆಗಿನ 2 ದಶಕದ ಜರ್ನಿ ಚಿತ್ರದಲ್ಲಿದೆ. ಚಿತ್ರದಲ್ಲಿ ನಾನು ಹೀರೋಯಿನ್‍ನ್ನು ಟಚ್ ಕೂಡಾ ಮಾಡಲ್ಲ. ಆದರೆ, ಚಿತ್ರದಲ್ಲಿ 12 ಹಾಡುಗಳಿವೆ ಎಂದು ನಕ್ಕರು ಪ್ರೇಮ್. ಅಷ್ಟು ಚೆಂದದ ನಾಯಕಿಯನ್ನು ನಿರ್ದೇಶಕರು ಮುಟ್ಟೋಕೂ ಬಿಡಲಿಲ್ಲ ಅನ್ನೋ ಅಸಮಾಧಾನವಿತ್ತೇನೋ..

  ಅಂದಹಾಗೆ ಚಿತ್ರದಲ್ಲಿ ಬೃಂದಾ ಆಚಾರ್ಯ ನಾಯಕಿ. ಐಂದ್ರಿತಾ ಕೂಡಾ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿದ್ದಾರೆ. ಪ್ರಾಣ ಚಿತ್ರದಿಂದ ಶುರುವಾದ ಸಿನಿ ಜರ್ನಿ, ಈಗ ಪ್ರೇಮಂ ಪೂಜ್ಯಂವರೆಗೂ ತಂದು ನಿಲ್ಲಿಸಿದೆ. ನೆನಪಿರಲಿ ಪ್ರೇಮ್.. ಜೊತೆ ಜೊತೆಯಲಿ ಪ್ರೇಮ್.. ಎಂದೆಲ್ಲ ಕರೆಸಿಕೊಂಡಿದ್ದ ಲವ್ಲಿ ಸ್ಟಾರ್ ಪ್ರೇಮ್ ಅವರಿಗೆ ಇದು 25ನೇ ಸಿನಿಮಾ. ಗುಡ್ ಲಕ್.

 • ವಿಯೆಟ್ನಾಂನಲ್ಲಿ ಚಿತ್ರೀಕರಣಗೊಂಡ ಫಸ್ಟ್ ಮೂವಿ ಪ್ರೇಮಂ ಪೂಜ್ಯಂ

  ವಿಯೆಟ್ನಾಂನಲ್ಲಿ ಚಿತ್ರೀಕರಣಗೊಂಡ ಫಸ್ಟ್ ಮೂವಿ ಪ್ರೇಮಂ ಪೂಜ್ಯಂ

  ವಿಯೆಟ್ನಾಂ ಅನ್ನೋ ದೇಶದ ಹೆಸರು ಕನ್ನಡಿಗರಿಗೆ ಬಹುತೇಕರಿಗೆ ಗೊತ್ತಿಲ್ಲ. ಗೊತ್ತಿದ್ದವರಿಗೆ ಶೀತಲ ಸಮರದ ಯುದ್ಧದ ಕಾರಣದಿಂದಾಗಿ ಗೊತ್ತಷ್ಟೆ.. ಆ ದೇಶದಲ್ಲೀಗ ಪ್ರೇಮಂ ಪೂಜ್ಯಂ ಟೀಂ, ಶೂಟಿಂಗ್ ಮಾಡಿರುವುದೇ ವಿಶೇಷ. ಪ್ರೇಮ್ ಮತ್ತು ಬೃಂದಾ ಆಚಾರ್ಯ ನಡುವಿನ ರೊಮ್ಯಾಂಟಿಕ್ ದೃಶ್ಯಗಳ ಚಿತ್ರೀಕರಣಕ್ಕೆ ವಿಯೆಟ್ನಾಂನ ಮಾಂಗ್ ಕಾಯ್`ಗೆ ತೆರಳಿತ್ತಂತೆ ಚಿತ್ರತಂಡ.

  ಅಲ್ಲಿ ಎಲ್ಲವೂ ಮಂಜು. ನೋಡೋಕೆ ಬ್ಯೂಟಿಫುಲ್. ಆದರೆ.. ಎಷ್ಟೋ ಬಾರಿ ಸೂರ್ಯದ ದರ್ಶನವೇ ಆಗುತ್ತಿರಲಿಲ್ಲ. ಹೀಗಾಗಿ ಹಗಲು ಹೊತ್ತಿನಲ್ಲೇ ಲೈಟ್ ಬಳಸಿ ಶೂಟ್ ಮಾಡಿದ್ದೇವೆ ಎನ್ನುತ್ತಾರೆ ಕೊರಿಯೋಗ್ರಾಫರ್ ನವೀನ್ ಕುಮಾರ್.

  ಮಾಂಗ್ ಕಾಯ್ ಪ್ರದೇಶ ಬರೋದು ವಿಯೆಟ್ನಾಂ-ಚೀನಾ ಬಾರ್ಡರ್‍ನಲ್ಲಂತೆ. ಅಲ್ಲಿಗೆ ಫ್ಲೈಟುಗಳಿಲ್ಲ. ಕಾರಿನಲ್ಲೇ ಹೋಗಬೇಕು. ಅದೂ 600 ಕಿ.ಮೀ. ದೂರ. 60 ಜನರ ತಂಡ ಮತ್ತು ಚಿತ್ರೀಕರಣದ ಉಪಕರಣಗಳು.. ಒಂದೊಂದು ಸೀನ್ ಕೂಡಾ ಅಷ್ಟೇ ಶ್ರಮ ಬೇಡುತ್ತದೆ ಎನ್ನುತ್ತಾರೆ ನವೀನ್. ಆ ಶ್ರಮಕ್ಕೆ ಪ್ರತಿಫಲವೂ ಸಿಕ್ಕಿದೆ. ಒಂದೊಂದು ಸೀನ್ ಕೂಡಾ ಪೈಂಟಿಂಗ್‍ನಂತೆ ಬಂದಿದೆ ಅನ್ನೋ ಖುಷಿ ನಿರ್ದೇಶಕ ಡಾ.ರಾಘವೇಂದ್ರ ಅವರಿಗೆ ಇದೆ. ಇದು ವೈದ್ಯರುಗಳೇ ಒಟ್ಟಾಗಿ ಸೇರಿ ನಿರ್ಮಿಸಿ, ನಿರ್ದೇಶಿಸ್ತಿರೋ ಸಿನಿಮಾ. ಒಂಥರಾ ಡಾಕ್ಟರ್ ಲವ್ ಸ್ಟೋರಿ.

 • ವೈದ್ಯರ ಮನಸ್ಸು ಗೆದ್ದ ಪ್ರೇಮಂ ಪೂಜ್ಯಂ

  ವೈದ್ಯರ ಮನಸ್ಸು ಗೆದ್ದ ಪ್ರೇಮಂ ಪೂಜ್ಯಂ

  ಪ್ರೇಮಂ ಪೂಜ್ಯಂ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಪ್ರೀತಿಯನ್ನು ದೇವರಿಗೆ ಹೋಲಿಸಿ ಪವಿತ್ರ ಪ್ರೀತಿಯೇ ಶ್ರೇಷ್ಟ ಎಂದು ತೋರಿಸಿರುವ ಪರಿ ಎಲ್ಲ ವಯೋಮಾನದವರಿಗೂ ಮೆಚ್ಚುಗೆಯಾಗಿದೆ. ವಿಶೇಷವಾಗಿ ವೈದ್ಯರಿಗೆ.

  ಇದು ವೈದ್ಯರಿಂದ ವೈದ್ಯರಿಗಾಗಿ ವೈದ್ಯರೇ ಸೃಷ್ಟಿಸಿರುವ ಅಪರೂಪದ ಸಿನಿಮಾ. ಚಿತ್ರದ ನಿರ್ಮಾಪಕರೂ ಡಾಕ್ಟರ್ಸ್. ನಿರ್ದೇಶಕರೂ ಡಾಕ್ಟರ್. ಸಂಗೀತ ನಿರ್ದೇಶಕರೂ ಡಾಕ್ಟರ್. ಹೀಗಾಗಿ ವೈದ್ಯರಿಗೆ ಸಿನಿಮಾ ಇನ್ನಷ್ಟು ಇಷ್ಟವಾಗಿದೆ. ನೆನಪಿರಲಿ ಪ್ರೇಮ್ ಅಭಿನಯದ 25ನೇ ಸಿನಿಮಾ ಪ್ರೇಮಂ ಪೂಜ್ಯಂ. ಡಾ.ರಾಘವೇಂದ್ರ ನಿರ್ದೇಶಿಸಿರುವ ಚಿತ್ರವನ್ನು ವೈದ್ಯರುಗಳು ತಂಡೋಪತಂಡವಾಗಿ ಬಂದು ನೋಡಿ ಮೆಚ್ಚಿದ್ದಾರೆ.

 • ವೈದ್ಯರಿಂದ.. ವೈದ್ಯರಿಗಾಗಿ.. ವೈದ್ಯೋ ನಾರಾಯಣೋ ಹರಿ..

  ವೈದ್ಯರಿಂದ.. ವೈದ್ಯರಿಗಾಗಿ.. ವೈದ್ಯೋ ನಾರಾಯಣೋ ಹರಿ..

  ಲವ್ಲೀ ಸ್ಟಾರ್ ಪ್ರೇಮ್ ನಟಿಸುತ್ತಿರುವ ಅವರ 25ನೇ ಸಿನಿಮಾ ಪ್ರೇಮಂ ಪೂಜ್ಯಂ. ಆ ಚಿತ್ರತಂಡ ಈಗೊಂದು ಚೆಂದದ ಹಾಡು ಬಿಡುಗಡೆ ಮಾಡಿದೆ. ವೈದ್ಯೋ ನಾರಾಯಣೋ ಹರಿ.. ಎಂಬ ಈ ಹಾಡು ಎಲ್ಲರ ಮೆಚ್ಚುಗೆ ಗಳಿಸಿದೆ. ಈ ಹಾಡನ್ನು ಬಿಡುಗಡೆ ಮಾಡಿರೋದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ.

  ಹಾಡಿನಲ್ಲಿ ಕೊರೊನಾ ರೋಗಿಗಳು ಮತ್ತು ಕೊರೊನಾ ವೈರಸ್ ಮಧ್ಯೆ ತಡೆಗೋಡೆಯಾಗಿ ವೈದ್ಯರು ನಿಂತಿರುವಂತೆ ಚಿತ್ರಿಸಿರುವ ಆರ್ಟ್ ವರ್ಕ್ ಮೈಝುಮ್ ಎನಿಸುವಂತಿದೆ. ವೈದ್ಯರು ಸದ್ಯಕ್ಕೆ ರೋಗ ಮತ್ತು ರೋಗಿಗಳ ಮಧ್ಯೆ ಅಕ್ಷರಶಃ ತಡೆಗೋಡೆಯಾಗಿಯೇ ನಿಂತಿದ್ದಾರೆ.

  ವಿಶೇಷವೆಂದರೆ ಈ ಹಾಡು ವೈದ್ಯರಿಂದ ವೈದ್ಯರಿಗಾಗಿ ವೈದ್ಯರಿಗೋಸ್ಕರ. ಪ್ರೇಮಂ ಪೂಜ್ಯಂ ಚಿತ್ರದ ನಿರ್ದೇಶಕ ಮತ್ತು ಕಥೆಗಾರ ಡಾ.ರಾಘವೇಂದ್ರ. ಇನ್ನು ನಿರ್ಮಾಪಕರಾಗಿರುವ ಡಾ.ರಕ್ಷಿತ್ ಕೆದಂಬಾಡಿ, ಡಾ.ರಾಜ್‍ಕುಮಾರ್ ಜಾನಕಿರಾಮ್, ಡಾ.ರಾಘವೇಂದ್ರ, ಡಾ. ಮನೋಜ್ ಕೃಷ್ಣನ್ ಎಲ್ಲರೂ ವೈದ್ಯರೇ. ಇನ್ನು ಈ ಹಾಡಿಗೆ ಸಂಗೀತ ನೀಡಿರುವುದು ಒನ್ಸ್ ಎಗೇಯ್ನ್ ಡಾ.ರಾಘವೇಂದ್ರ. ಸಾಹಿತ್ಯವೂ ಅವರದ್ದೇ. ಹಾಡಿರುವುದು ಮಾತ್ರ ವಿಜಯ್ ಪ್ರಕಾಶ್. ಒಟ್ಟಿನಲ್ಲಿ ಈ ಹಾಡು ವೈದ್ಯರಿಂದ.. ವೈದ್ಯರಿಗಾಗಿ.. ವೈದ್ಯರಿಗೋಸ್ಕರ..

 • ಶನಿಯ ದಾಮಿನಿಯೇ ಪ್ರೇಮ್ ಅರಗಿಣಿ

  tv actress debuts in prem's movie

  ಪ್ರೇಮಂ ಪೂಜ್ಯಂ, ಇದು ನೆನಪಿರಲಿ ಪ್ರೇಮ್ ಅಭಿನಯದ 25ನೇ ಸಿನಿಮಾ. ಡಾ.ರಾಘವೇಂದ್ರ ಎಂಬುವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ. ಬೃಂದಾ ಆಚಾರ್ಯ ಪ್ರೇಮ್‍ಗೆ ನಾಯಕಿ.

  ಸಾಫ್ಟ್‍ವೇರ್ ಕೆಲಸ ಬಿಟ್ಟು, ನಟನೆಗೆ ಬಂದು ಇಲ್ಲೇ ನೆಲೆ ನಿಲ್ಲುವ ಹಠಕ್ಕೆ ಬಿದ್ದಿದ್ದಾರೆ ಬೃಂದಾ. ಹಾಗಂತ ಇವರಿಗೆ ಕ್ಯಾಮೆರಾ ಹೊಸದಲ್ಲ. 

  ಮಹಾಕಾಳಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಬೃಂದಾಗೆ, ಹೆಸರು ತಂದ ಇನ್ನೊಂದು ಧಾರಾವಾಹಿ ಶನಿ. ಆ ಧಾರಾವಾಹಿಯಲ್ಲಿ ದಾಮಿನಿಯಾಗಿ ನಟಿಸಿರುವ ಬೃಂದಾ, ಈ ಚಿತ್ರದ 2ನೇ ನಾಯಕಿ.

  ಐಂದ್ರಿತಾ ರೇ ಜೊತೆ ಬೃಂದಾ ಆಚಾರ್ಯ ಕೂಡಾ ನಾಯಕಿಯಾಗಿ ನಟಿಸುತ್ತಿದ್ದು, ಇಬ್ಬರು ನಾಯಕಿಯರಿಗೆ ಒಬ್ಬನೇ ನಾಯಕ ಎನ್ನುವುದೇ ಕುತೂಹಲ ಹುಟ್ಟಿಸಿದೆ.

 • ಶಿವಣ್ಣ ಚಿತ್ರದ ಎದುರು ಪ್ರೇಮ್ ಸಿನಿಮಾ

  ಶಿವಣ್ಣ ಚಿತ್ರದ ಎದುರು ಪ್ರೇಮ್ ಸಿನಿಮಾ

  ಅಕ್ಟೋಬರ್ 14ಕ್ಕೆ ದುನಿಯಾ ವಿಜಯ್ ಅವರ ಸಲಗ ಮತ್ತು ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 3 ರಿಲೀಸ್ ಆಗುತ್ತಿವೆ. ಇಬ್ಬರು ಸ್ಟಾರ್ ನಟರ ಚಿತ್ರಗಳು ಒಂದೇ ದಿನ ರಿಲೀಸ್ ಆಗುತ್ತಿರುವುದು ಅನಿರೀಕ್ಷಿತ ಬೆಳವಣಿಗೆ. ಆದರೆ, ಈ ಸ್ಟಾರ್ ವಾರ್ ಇಲ್ಲಿಗೇ ನಿಂತಿಲ್ಲ. ಅಕ್ಟೋಬರ್ 29ಕ್ಕೆ ಶಿವಣ್ಣ ಅಭಿನಯದ ಬಹುನಿರೀಕ್ಷಿತ ಚಿತ್ರ ಭಜರಂಗಿ 2 ರಿಲೀಸ್ ಆಗುತ್ತಿದೆ.

  ಅದೇ ದಿನ ನೆನಪಿರಲಿ ಪ್ರೇಮ್ ಅಭಿನಯದ 25ನೇ ಸಿನಿಮಾ ಪ್ರೇಮಂ ಪೂಜ್ಯಂ ಕೂಡಾ ರಿಲೀಸ್ ಆಗುತ್ತಿದೆ. ಪ್ರೇಮಂ ಪೂಜ್ಯಂ ಮೇಲೆ ಪ್ರೇಮ್ ಭಾರೀ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಡಾಕ್ಟರುಗಳೇ ಸೇರಿ ಸೃಷ್ಟಿಸಿರುವ ಪ್ರೇಮಕಥೆ, ಪ್ರೇಮಂ ಪೂಜ್ಯಂ. ನಿರ್ದೇಶಕರು, ನಿರ್ಮಾಪಕರು ಎಲ್ಲರೂ ವೈದ್ಯರೇ. ಅದೊಂದು ಕ್ಲಾಸ್ ಲವ್ ಸ್ಟೋರಿ ಅನ್ನೋ ಸುಳಿವು ಈಗಾಗಲೇ ಟ್ರೇಲರು, ಹಾಡುಗಳಲ್ಲಿ ಸಿಕ್ಕಿದೆ.

  ಇತ್ತ ಶಿವಣ್ಣ, ಹರ್ಷ ಮತ್ತು ಅರ್ಜುನ್ ಜನ್ಯಾ ಒಟ್ಟಿಗೇ ಸೇರಿರುವ ಭಜರಂಗಿ 2, ಹ್ಯಾಟ್ರಿಕ್ ಕನಸಿನಲ್ಲಿದೆ. ಶೃತಿ ಮತ್ತು ಜಾಕಿ ಭಾವನಾರ ಭಯಂಕರ ಲುಕ್ಕುಗಳು ಚಿತ್ರದ ಮೇಲೆ ವಿಪರೀತ ನಿರೀಕ್ಷೆ ಮೂಡಿಸಿವೆ. ಒಟ್ಟಿನಲ್ಲಿ ಅಕ್ಟೋಬರ್ 29ಕ್ಕೂ ಸ್ಟಾರ್ ವಾರ್ ಫಿಕ್ಸ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery