` shreyas k manju, - chitraloka.com | Kannada Movie News, Reviews | Image

shreyas k manju,

  • Nagashekhar To Direct Shreyas Manju

    nagashekar to direct shreyas manju

    Though director Nagashekhar has not directed any Kannada film in the last one year, he is busy with many scripts. Recently, Nagashekhar had announced that he will be collaborating with 'Darling' Krishna for a new film called 'This email address is being protected from spambots. You need JavaScript enabled to view it.'.

    Now Nagashekhar is likely to direct Shreyas Manju in a new film called 'Q'. Nagashekhar has also released a first poster of the film in social media. The director has narrated an one-liner to producer K Manju and his son Shreyas and both of them have liked it and has given a green signal.

    Now Nagashekhar is busy with the script of the film. Though the film has been announced, it is likely to start sometime next year. First, Nagashekhar is planning to complete 'This email address is being protected from spambots. You need JavaScript enabled to view it.' by this year end and is likely to direct Shreyas only next year.

  • No Birthday Celebrations For Shreyas K Manju, Donates To The Poor 

    no birthday celebrations for k manju's son shreyas

    Actor Shreyas K Manju, son of noted producer K Manju turns a year old today. However, the budding artist has decided to not celebrate it and instead donate the money to the volunteers who are indulged in providing food to the poor and needy, who are facing difficulties during the nationwide lockdown due to Coronavirus outbreak.

    The Paddehuli actor who is up with his next starring alongside the winking sensation Priya Varrier in 'Vishnupriya', said, "We all spend so much money on clothes, food and other luxury items. At times like these when the whole country is locked down due to coronavirus, many have lost their job. Some like us who are blessed can manage our life for a few months. But what about the daily wage workers and what about their family and little children."

    He calls upon his fellow persons and friends to help the poor or to make simple contributions to the government or volunteers who are providing food for the poor. "Please do help the poor. Let us stand together. We are humans and let's show some humanity," he signs off.

    Chitraloka wishes Shreyas on his birthday and congratulates on his noble cause to help the poor during these difficult times.

  • Paddehuli Review: Chitraloka Rating 4/ 5*

    paddehuli movie review

    Debutant Shreyas, son of noted Kannada film producer K Manju, opens his account with an apt commercial entertainer which caters to both mass and the class audience. Director Guru Deshpande returns with a tailor made youthful subject for the first time hero pegged with an inspiring tale of an aspiring musician.

    Unlike the regular starry launch, the maker has kept it simple, delivering justice to crucial aspects in a film, which is story and the making along with appealing performances.

    What makes Paddehuli as a winner is its honesty in giving importance to every department rather turning it into a complete one man show. It has a decent story with a meaningful message to the youngsters, who set out to achieve their dreams against all odds in life.

    Crazy Star V. Ravichandran adds greater value to the script as a father. His character as a Kannada lecturer instills faith and determination in the protagonist's mind when he takes an important decision to fulfil his dreams to become a successful musician.

    In the meanwhile, the film also delivers in terms of entertainment, from rib-tickling humour set in college, to romance, emotional drama and a bits of action in between the path towards protagonist's journey as an aspiring musician.

    The other significant part of Paddehuli, is its content highlighting Kannada language and its rich literature right throughout the movie. In fact, it is the base of this musical saga. The works of popular Kannada writers and the immense treasure of folklore is put to perfect use including the music composed by Ajaneesh Lokanath.

    That's not all, Guru Deshpande has presented this one with some real special surprises right from Sahasa Simha Dr. Vishnuvardhan who inspires yet another debutant, as the first part of the film is set in Chitradurga. That apart, it is also a treat for power star Puneeth Rajkumar and Rakshit Shetty fans who play an inspiring role in it.

    Insofar Shreyas is concerned, he delivers a power packed performance, and is definitely a talent to watch out for. Nishvika Naidu does a beautiful job as a lover and the rest fits the bill as Paddehuli roars loud with well-balanced entertainment for all.

     

  • Puneeth Rajakumar's Special Appearance In 'Paddehuli'

    puneeth rajkumar's special appearance in paddehuli

    Shreyas's debut film 'Paddehuli' is all set to release across Karnataka on the 19th of April. Meanwhile, Puneeth Rajakumar is said to have played a special role in the film. Director Guru Deshapande himself has announced that Puneeth has played a special role, but has not divulged any details about the role.

    PaddeHuli' is produced by M Ramesh Reddy under the Tejaswini Enterprises banner. Guru Deshapande is the director. Ajaneesh Lokanath is the music director, while K S Chandrashekhar is the cinematographer.

    Shreyas, Nishvika Naidu, V Ravichandran, Sudharani, Rakshith Shetty and others play prominent roles.

  • Raana Movie Review, Chitraloka Rating 3.5/5

    Raana Movie Review, Chitraloka Rating 3.5/5

    Film: Raana

    Director: Nanda Kishore

    Cast: Shreyas Manju, Reeshma Nanaiah, Mohan Dhanraj, Samyuktha Hegde, Rajini Bharadwaj, Kote Prabhakar

    Certificate: U/A

    Duration: 119 minutes

    Platform: Theatres

    Review by S Shyam Prasad 

    Unabashedly masala

     Director Nanda Kishore takes a routine story and repackages it into an action thriller that unabashedly caters to the mass audience. This is the biggest plus point of Raana, the second outing of Shreyas Manju after Paddehuli. Raana, unlike his first film, boldly sticks to a formula and delivers. Shreyas too has been remodeled by the director to suit an action image.

    The plot is about a poor youth who aspires to be a cop. He is successful and awaits his posting. But in the meantime, he gets embroiled in the mess of bad elements. Our hero needs to ward off these villains before rightly staking his claim to the police force. Will the rogues allow him to fulfill his destiny? And there are the typical friends of the hero who will go to any lengths to help him out. So who wins in the fight between the few good men and a hoard of villains? The answer is an open secret.

    If you have watched enough masala films, you know what is going to happen. But you still watch it for the excitement and kick such plots provide. The underdog coming up trumps against the bad elements is a story as old as the hills, but it does not prevent us from enjoying it every time. So has the team delivered on packaging it right? The director has done a decent job on this front.

    The rough edge of Shreyas which was present in his debut film is gone. He now looks, acts and performs like a polished actor. Credit should go to the director for polishing him to a neat finish. Even the story is tailor made for the mass audience with its mix of romance, action, songs and one-liners.

    The plot where the hero is trapped in a mistake he has not done but becomes the suspect for the unsavory elements is nicely schemed out. The action choreography in this film is one of the best you have seen in recent times. Ravi Varma shows why he is the best in the business. The film is a crisp two hours long. KM Prakash has wielded sharp scissors to make sure the narrative is fast paced and there is not a single dull moment anywhere.

    Chandan Shetty comes up with some peppy numbers and a melody as well. Shreyas, as mentioned earlier, has emerged a more mature and sensible actor. His chemistry with Reeshma Nanaiah is good. While the heroines have very little to do in an action film like this, Reeshma still manages to mark her presence.

    If action is your staple, this is just what you would order. Have no second thoughts; Raana is just the two-hour power workout your brain was planning to do.

  • ಏಕ್ ಲವ್ ಯಾದಲ್ಲಿ ಮಿಸ್ ಆದ ಮುತ್ತು ರಾಣಾಗೆ ಸಿಕ್ಕೇಬಿಡ್ತು..!

    raana image

    ರೀಷ್ಮಾ ನಾಣಯ್ಯ. ಏಕ್ ಲವ್ ಯಾ ಮೂಲಕ ಬೆಳಕಿಗೆ ಬಂದ ಪ್ರತಿಭೆ. ಜೋಗಿ ಪ್ರೇಮ್ ಶೋಧನೆಯ ಹುಡುಗಿಗೆ ನಂದ ಕಿಶೋರ್ ಕಣ್ಣಿಗೆ ಬೀಳುವುದು ತಡವಾಗಲಿಲ್ಲ. ಏಕ್ ಲವ್ ಯಾದಲ್ಲಿ ಮುಗ್ಧ ಪ್ರೇಮಿಯಾಗಿ, ತ್ಯಾಗಮಯಿಯಾಗಿ ಅತ್ಯಾಚಾರಕ್ಕೊಳಗಾಗಿ ಮಾನಸಿಕ ಸ್ಥಿಮಿತತೆಯನ್ನೇ ಕಳೆದುಕೊಳ್ಳುವ ಹುಡುಗಿಯಾಗಿ ಗಮನ ಸೆಳೆದಿದ್ದರು ರೀಷ್ಮಾ ನಾಣಯ್ಯ. ಅಲ್ಲಿಯೂ ಹೀರೋಗೆ ಮುತ್ತು ಕೊಡುವ ದೃಶ್ಯವಿತ್ತಾದರೂ ಮುತ್ತು ಕೊಟ್ಟಿದ್ದು ಹೀರೋಯಿನ್ ರೀಷ್ಮಾ ಆಗಿರಲಿಲ್ಲ. ರಚಿತಾ ರಾಮ್ ಹೀರೋ ಜೊತೆ ಲಿಪ್ ಲಾಕ್ ಮಾಡಿದ್ದರು. ಆದರೆ ರಾಣಾದಲ್ಲಿ ಶ್ರೇಯಸ್ ಮಂಜು ಜೊತೆ ರೀಷ್ಮಾ ನಾಣಯ್ಯ ತುಟಿಗೆ ತುಟಿ ಒತ್ತಿದ್ದಾರೆ.

    ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಮಾಡಿರುವ ಚಿತ್ರದಲ್ಲಿರುವ ಗಲ್ಲಿಬಾಯ್ ಹಾಡಿನಲ್ಲಿ ತುಟಿಗೆ ತುಟಿ ಸೀನ್ ಬರುತ್ತದೆ. ಮುತ್ತಿನಲ್ಲಿ ಮತ್ತಿನಲ್ಲಿ ಕಳೆದುಹೋಗುವುದು ಶ್ರೇಯಸ್ ಮಂಜು ಮತ್ತು ರೀಷ್ಮಾ ನಾಣಯ್ಯ. ಗಲ್ಲಿಬಾಯ್ ಹಾಡಿಗೆ ಚಂದನ್ ಶೆಟ್ಟಿಯವರದ್ದೇ ಸಾಹಿತ್ಯವೂ ಇದೆ. ಅನಿರುದ್ಧ ಶಾಸ್ತ್ರಿ ಮತ್ತು ಆದಿತಿ ಸಾಗರ್ ಹಾಡಿರುವ ಹಾಡಿಗೆ ಮಾದಕವಾಗಿ ಹೆಜ್ಜೆ ಹಾಕಿರುವುದು ರೀಷ್ಮಾ ನಾಣಯ್ಯ. ಮಾದಕ ಹೆಜ್ಜೆಗೆ ಮೋಹಕವಾಗಿ ಕರಗಿ ಹೋಗುವುದು ಶ್ರೇಯಸ್ ಮಂಜು. ಗುಜ್ಜಲ್ ಪುರುಷೋತ್ತಮ್ ನಿರ್ಮಾಣದ ಸಿನಿಮಾ ಇದೇ ನವೆಂಬರ್ 11ರಂದು ರಿಲೀಸ್ ಆಗಲಿದೆ.

  • ಕೆ. ಮಂಜು ಪುತ್ರನಿಗೆ ಮಚ್ಚು ಹಿಡಿಯೋದು ಹೇಳಿಕೊಟ್ಟ ಶಿವಣ್ಣ

    ಕೆ. ಮಂಜು ಪುತ್ರನಿಗೆ ಮಚ್ಚು ಹಿಡಿಯೋದು ಹೇಳಿಕೊಟ್ಟ ಶಿವಣ್ಣ

    ಕನ್ನಡದಲ್ಲಿ ಮಚ್ಚಿನ ಸಂಸ್ಕøತಿಯ ಚಿತ್ರಗಳಿಗೆ ಓಂಕಾರ ಬರೆದಿದ್ದು ಓಂ ಸಿನಿಮಾ. ಅದಾದ ನಂತರ ಅದೆಷ್ಟೋ ರೌಡಿಸಂ ಚಿತ್ರಗಳು ಬಂದಿವೆ. ಎಲ್ಲ ಹೀರೋಗಳೂ ರೌಡಿಸಂ ಚಿತ್ರಗಳಲ್ಲಿ ನಟಿಸಿದ್ದಾರೆ. ಮಚ್ಚು ಹಿಡಿದಿದ್ದಾರೆ. ಅದರೆ.. ಶಿವಣ್ಣ ಹಿಡಿಯೋ ಸ್ಟೈಲೇ ಬೇರೆ. ಹೀಗಾಗಿಯೇ ಮಚ್ಚು ಹಿಡಿಯೋ ದೃಶ್ಯಗಳಿರೋ ಚಿತ್ರದಲ್ಲಿ ಎಲ್ಲಾದರೊಂದು ಶಿವಣ್ಣ ಪ್ರಸ್ತಾಪ ಇದ್ದೇ ಇರುತ್ತೆ. ಶಿವಣ್ಣ, ಉಪ್ಪಿ ಚಿತ್ರಗಳಲ್ಲಿ ಮಚ್ಚು ಹಿಡಿಯೋದು ಹೇಳಿಕೊಟ್ಟಿದ್ದೇ ನಾನು ಅನ್ನೋ ಡೈಲಾಗೂ ಬರುತ್ವೆ. ಆದರೀಗ ಕಥೆ ಅದಲ್ಲ.

    ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ಈಗ ರಾಣಾ ಅನ್ನೋ ಚಿತ್ರದಲ್ಲಿ ನಟಿಸುತ್ತಿರೋದು ಗೊತ್ತಿರೋ ವಿಷಯವೇ. ನಂದಕಿಶೋರ್ ನಿರ್ದೇಶನದ ಆ ಚಿತ್ರದಲ್ಲಿ ರೌಡಿಸಂ ಕಥೆ ಇದೆಯಂತೆ. ಶಿವಣ್ಣ ಅವರನ್ನು ಭೇಟಿ ಮಾಡಿರೋ ಶ್ರೇಯಸ್, ಶಿವಣ್ಣ ಅವರಿಂದ ಒಂದಿಷ್ಟು ಟಿಪ್ಸ್ ತೆಗೆದುಕೊಂಡಿದ್ದಾರೆ. ಮಚ್ಚು ಹಿಡಿದು ನಿಂತು ಪೋಸ್ ಕೂಡಾ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ ಗೆಸ್ಟ್ ರೋಲ್‍ನಲ್ಲಿ ನಟಿಸುತ್ತಾರಂತೆ ಅನ್ನೋ ಸುದ್ದಿಯೂ ಇದೆ. ಕನ್‍ಫರ್ಮ್ ಆಗಿಲ್ಲ. 

  • ಗಲ್ಲಿಬಾಯ್ ಹಾಡಿನಲ್ಲಿ ರೀಷ್ಮಾಗೆ ಪಪ್ಪಿ ಕೊಟ್ಟ ಶ್ರೇಯಸ್ ಮಂಜು

    ಗಲ್ಲಿಬಾಯ್ ಹಾಡಿನಲ್ಲಿ ರೀಷ್ಮಾಗೆ ಪಪ್ಪಿ ಕೊಟ್ಟ ಶ್ರೇಯಸ್ ಮಂಜು

    ರಾಣಾ ಚಿತ್ರದ ಗಲ್ಲಿಭಾಯ್ ಹಾಡು ರಿಲೀಸ್ ಆಗಿದ್ದು, ಯೂಟ್ಯೂಬ್‍ನಲ್ಲಿ ಟ್ರೆಂಡಿಂಗ್‍ನಲ್ಲಿದೆ. ಹಾಡಿನಲ್ಲಿ ಮೈಮನ ಬಿಚ್ಚಿ ಹಾಡಿ ಕುಣಿದಿರುವ ಜೋಡಿ ಶ್ರೇಯಸ್ ಮಂಜು ಮತ್ತು ರೀಷ್ಮಾ ನಾಣಯ್ಯ.. ತುಟಿಗೆ ತುಟಿ ಒತ್ತಿರುವುದು ವಿಶೇಷ. ಚಂದನ್ ಶೆಟ್ಟಿ ಹಾಡಿನ ಸಾಲುಗಳೇ ಹಾಗಿವೆ. ಮ್ಯೂಸಿಕ್ ಕೂಡಾ ಚಂದನ್ ಶೆಟ್ಟಿ ಅವರದ್ದೇ. ಅನಿರುದ್ಧ ಶಾಸ್ತ್ರಿ ಮತ್ತು ಆದಿತಿ ಸಾಗರ್ ಹಾಡಿರುವ ಹಾಡಿದು.

    ನಂದ ಕಿಶೋರ್ ನಿರ್ದೇಶನದ ರಾಣಾ ಚಿತ್ರಕ್ಕೆ ಗುಜ್ಜಲ್ ಪುರುಷೋತ್ತಮ್ ನಾಯಕ. ಗಲ್ಲಿಭಾಯ್ ಹಾಡನ್ನು ರಿಲೀಸ್ ಮಾಡಿದ್ದು ಜೋಗಿ ಪ್ರೇಮ್.

    ಸಿನಿಮಾದ ಹಾಡು, ಮೇಕಿಂಗ್ ನೋಡಿ ಖುಷಿಯಾಯ್ತು. ನಾಯಕ, ನಾಯಕಿ ಇಬ್ಬರೂ ಅದ್ಭುತವಾಗಿ ಕುಣಿದಿದ್ದಾರೆ. ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲಲಿ ಎಂದು ಹಾರೈಸಿದರು ಪ್ರೇಮ್.

  • ಧಾರವಾಡ ಹುಡುಗಿ ಕಥೆ.. ಕೇರಳದ ಹುಡುಗಿ.. ಕನ್ನಡದ ಹುಡುಗ.. ವಿಷ್ಣುಪ್ರಿಯ ಲವ್ ಸ್ಟೋರಿ

    top specialties in k manju's vishnupriya movie

    ನಿರ್ಮಾಪಕ ಕೆ.ಮಂಜು ತಮ್ಮ ಪುತ್ರ ಶ್ರೇಯಸ್‍ಗಿ ವಿಷ್ಣುಪ್ರಿಯ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಚಿತ್ರದಲ್ಲಿ ವಿಶೇಷತೆಗಳ ಮೇಲೆ ವಿಶೇಷತೆಗಳಿವೆ. ವಿಷ್ಣುಪ್ರಿಯ ವಿಶೇಷ ನಂ.1 : ಚಿತ್ರದ ಕಥೆ ಬರೆದಿರುವುದು ಧಾರವಾಡದ ಹುಡುಗಿ. ಸಿಂಧೂಶ್ರೀ ಎಂಬ ಹುಡುಗಿಯ ಕಥೆ ಸಿನಿಮಾ ಆಗುತ್ತಿದೆ.

    ವಿಷ್ಣುಪ್ರಿಯ ವಿಶೇಷ ನಂ.2 : ಕಣ್ಸನ್ನೆ ಹುಡುಗಿ ಎಂದೇ ಪಡ್ಡೆಗಳ ಹೃದಯಕ್ಕೆ ಲಗ್ಗೆಯಿಟ್ಟಿದ್ದ ಮಲೆಯಾಳಿ ಹುಡುಗಿ ಪ್ರಿಯಾ ವಾರಿಯರ್ ಈ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ವಿಷ್ಣುಪ್ರಿಯ ವಿಶೇಷ ನಂ.3 : ನಿದೇಶಕರಾಗಿರುವುದು ಮಲಯಾಳಂನ ಕೆ.ಪ್ರಕಾಶ್. 1200ಕ್ಕೂ ಹೆಚ್ಚು ಜಾಹೀರಾತು ಮತ್ತು 30ಕ್ಕೂ ಹೆಚ್ಚು ಚಿತ್ರಗಳ ನಿರ್ದೇಶನ ಮಾಡಿರುವ ಖ್ಯಾತಿ ಪ್ರಕಾಶ್ ಅವರದ್ದು.

    ವಿಷ್ಣುಪ್ರಿಯ ವಿಶೇಷ ನಂ.4 : ಚಿತ್ರಕ್ಕೆ ಸಂಗೀತ ನೀಡುತ್ತಿರುವುದು ಗೋಪಿ ಸುಂದರ್. ಮೂಲತಃ ತೆಲುಗಿನವರು, ಈ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ವಿಷ್ಣುಪ್ರಿಯ ವಿಶೇಷ ನಂ.5 : ಎಲ್ಲಕ್ಕಿಂತ ವಿಶೇಷವೆಂದರೆ ನಿರ್ಮಾಪಕ ಮಂಜು, ಇಲ್ಲಿಯೂ ತಮ್ಮ ವಿಷ್ಣು ಪ್ರೇಮವನ್ನು ಮುಂದುವರಿಸಿದ್ದಾರೆ. ಚಿತ್ರದ ಟೈಟಲ್ ವಿಷ್ಣು ಪ್ರಿಯ. ಚಿತ್ರದಲ್ಲಿ ಹೀರೋ ಹೆಸರು ಕೂಡಾ ವಿಷ್ಣು.

  • ನಿರ್ದೇಶಕ ಮೆಚ್ಚಿಕೊಂಡ ರಾಣ

    ನಿರ್ದೇಶಕ ಮೆಚ್ಚಿಕೊಂಡ ರಾಣ

    ಒಬ್ಬ ನಿರ್ದೇಶಕರಿಗೆ ತನ್ನ ಚಿತ್ರದ ಹೀರೋ ಯಾವತ್ತಿಗೂ ಅಚ್ಚುಮೆಚ್ಚು. ಆದರೆ ನಂದ ಕಿಶೋರ್ ಎಂಬ ಹಿಟ್ ಚಿತ್ರಗಳನ್ನೇ ಕೊಟ್ಟ ನಿರ್ದೇಶಕ, ಇನ್ನೂ 2ನೇ ಸಿನಿಮಾ ಮಾಡಿರುವ ಹೀರೋ ಶ್ರೇಯಸ್ ಮಂಜು ಬಗ್ಗೆ ಮೆಚ್ಚುಗೆಯ ಮಾತನ್ನಾಡುವುದಿದೆಯಲ್ಲ. ಅದು ಶ್ರೇಯಸ್ ಮಂಜು ಪ್ರತಿಭೆ.

    ಶ್ರೇಯಸ್ ಮಂಜು ಒಂದು ಅದ್ಭುತ ಪ್ಯಾಕೇಜ್. ವಿಭಿನ್ನ ಪಾತ್ರಗಳಿಗೆ ಹೊಸ ಹೀರೋನನ್ನು ಕೂರಿಸುವುದು ಒಂದು ಚಾಲೆಂಜ್. ಸ್ಟಾರ್ ನಟರಾಗಿದ್ದರೆ ಕೆಲವೊಂದು ಸಬ್ಜೆಕ್ಟ್ ಹೇಳುವುದು ಸುಲಭ. ಅದನ್ನು ಶ್ರೇಯಸ್ ಮಂಜು ಯಶಸ್ವಿಯಾಗಿ ಮಾಡಿದ್ದಾರೆ ಎನ್ನುತ್ತಾರೆ ನಂದಕಿಶೋರ್. ಅಧ್ಯಕ್ಷ, ರನ್ನ, ಪೊಗರು, ಟೈಗರ್, ಬೃಹಸ್ಪತಿ.. ಹೀಗೆ ದೊಡ್ಡ ದೊಡ್ಡ ನಟರ ಚಿತ್ರಗಳನ್ನೇ ನಿರ್ದೇಶಿಸಿ ಗೆದ್ದ ನಂದಕಿಶೋರ್, ಶ್ರೇಯಸ್ ಮಂಜು ಅವರಿಗಾಗಿ ಕಥೆ ಮಾಡಿರಲಿಲ್ಲವಂತೆ.

    ಕಥೆಯೂ ಸಿದ್ಧವಿತ್ತು. ಪ್ರೊಡ್ಯೂಸರ್ ಸಿಕ್ಕಿದ್ರು. ಆ ಕಥೆಗೆ ಶ್ರೇಯಸ್ ಮಂಜು ಫಿಟ್ ಆದ್ರು. ಅವರೊಬ್ಬ ಒಳ್ಳೆ ನಟ. ಡ್ಯಾನ್ಸರ್. ಸ್ಟಂಟ್ಸ್ ಕೂಡಾ ಚೆನ್ನಾಗಿ ಮಾಡುತ್ತಾರೆ. ಒಳ್ಳೆ ಪರ್ಸನಾಲಿಟಿಯೂ ಇದೆ. ಒಳ್ಳೆ ಲುಕ್ ಇದೆ. ಟೋಟಲ್ಲಿ ಗುಡ್ ಓವರ್‍ಆಲ್ ಪ್ಯಾಕೇಜ್ ಎನ್ನುವ ನಂದ ಕಿಶೋರ್ ನಾcಯಕಿ ರೀಷ್ಮಾ ನಾಣಯ್ಯ ಅವರ ಬಗ್ಗೆ ಕೂಡಾ ಪ್ರೀತಿಯಿಂದ ಹೇಳುತ್ತಾರೆ. ಕೆ.ಮಂಜು ಅರ್ಪಿಸಿ, ಗುಜ್ಜಲ್ ಪುರುಷೋತ್ತಮ್ ನಿರ್ಮಾಣ ಮಾಡಿರುವ ರಾಣ ನಾಳೆ ತೆರೆ ಕಾಣುತ್ತಿದೆ.

  • ಪಡ್ಡೆಹುಲಿ ಕಥೆಗೂ ಸಾಹಸ ಸಿಂಹನಿಗೂ ಇದೆ ನಂಟು

    relationship between paddehuli and vishnuvardhan

    ನಿರ್ಮಾಪಕ ಕೆ.ಮಂಜು, ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿಯಾಗಿದ್ದವರು. ಅವರ ಕೊನೆಯ ದಿನಗಳಲ್ಲಿ ವಿಷ್ಣು ಜೊತೆಗಿದ್ದ ಆತ್ಮೀಯರಲ್ಲಿ ಮಂಜು ಕೂಡಾ ಒಬ್ಬರು. ಈಗ ಅವರ ಮಗ ಶ್ರೇಯಸ್ ಹೀರೋ ಆಗಿ ಬರುತ್ತಿದ್ದಾರೆ. ಪಡ್ಡೆಹುಲಿ ಚಿತ್ರದಲ್ಲಿ ಶ್ರೇಯಸ್, ವಿಷ್ಣು ಅಭಿಮಾನಿಯಾಗಿಯೇ ಎಂಟ್ರಿ ಕೊಡುತ್ತಿದ್ದಾರೆ. 

    ಮಗನ ಮೊದಲ ಚಿತ್ರದಲ್ಲಿ ಶ್ರೇಯಸ್‍ಗೆ ನಾಗರಹಾವು ವಿಷ್ಣು ಗೆಟಪ್‍ನಲ್ಲಿ ಚಿತ್ರದುರ್ಗದ ಕೋಟೆಯಲ್ಲೇ ಹಾಡು ಸೃಷ್ಟಿಸಿದ್ದಾರೆ. ರಾಜಾಹುಲಿ ಖ್ಯಾತಿಯ ನಿರ್ದೇಶಕ ಗುರು ದೇಶಪಾಂಡೆ, ಮ್ಯೂಸಿಕಲ್ ಲವ್ ಸ್ಟೋರಿ ಮಾಡಿದ್ದಾರೆ. ಇದೆಲ್ಲದರ ಜೊತೆಗೆ ವಿಷ್ಣುವರ್ಧನ್ ಅವರಿಗೂ ಈ ಚಿತ್ರದ ಕಥೆಗೂ ಒಂದು ಭಾವನಾತ್ಮಕ ನಂಟು ಇದೆ.

    ವಿಷ್ಣುವರ್ಧನ್ ಅವರೇ ಒಮ್ಮೆ ಮಂಜು ಅವರಿಗೆ ಕಾಲೇಜ್ ಬೇಸ್ ಇರುವ ಲವ್ ಸ್ಟೋರಿಯ ಎಳೆಯನ್ನು ಹೇಳಿದ್ದರಂತೆ. ಅದು ಮಂಜು ಅವರಿಗೂ ಇಷ್ಟವಾಗಿತ್ತು. ಅದನ್ನು ಡೆವಲಪ್ ಮಾಡು, ಒಳ್ಳೆ ಸಿನಿಮಾ ಆಗುತ್ತೆ ಎಂದು ಕೂಡಾ ಹೇಳಿದ್ದರಂತೆ.

    ತಮ್ಮ ಮಗನನ್ನು ಗ್ರ್ಯಾಂಡ್ ಆಗಿ ಎಂಟ್ರಿ ಕೊಡಿಸಲು ಕಥೆಯ ಹುಡುಕಾಟದಲ್ಲಿದ್ದಾಗ ನೆನಪಾಗಿದ್ದು ಈ ಕಥೆ. ಅದು ವಿಷ್ಣು ಆಶೀರ್ವಾದ ಎಂದೇ ನಂಬಿಕೊಂಡು ಸಿನಿಮಾ ರೆಡಿ ಮಾಡಿದ್ದಾರೆ.

    ರಮೇಶ್ ರೆಡ್ಡಿ ನಿರ್ಮಾಣದ ಚಿತ್ರದಲ್ಲಿ ರವಿಚಂದ್ರನ್, ಸುಧಾರಾಣಿ, ರಕ್ಷಿತ್ ಶೆಟ್ಟಿ, ಪುನೀತ್ ರಾಜ್‍ಕುಮಾರ್ ಕೂಡಾ ನಟಿಸಿದ್ದಾರೆ. ಅಮ್ಮ ಐ ಲವ್ ಯು ಖ್ಯಾತಿಯ ನಿಶ್ವಿಕಾ ನಾಯ್ಡು ನಾಯಕಿ. 

  • ಪಡ್ಡೆಹುಲಿಗೆ ಅಪ್ಪು ಪವರ್

    paddehuli gets power star's support

    ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಅಭಿನಯದ ಮೊದಲ ಸಿನಿಮಾ ಪಡ್ಡೆಹುಲಿಗೆ ಈಗ ಅಪ್ಪು ಪವರ್ ಸಿಕ್ಕಿದೆ. ವಿಭಿನ್ನ ಹಾಡುಗಳ ಮೂಲಕ ಸದ್ದು ಮಾಡ್ತಿರೋ ಪಡ್ಡೆಹುಲಿ ಚಿತ್ರದ ಆಡಿಯೋ ರೈಟ್ಸ್‍ನ್ನು ಸ್ವತಃ ಪುನೀತ್ ರಾಜ್‍ಕುಮಾರ್ ಅವರೇ ಖರೀದಿಸಿದ್ದಾರೆ. ಪಿಆರ್‍ಕೆ ಆಡಿಯೋ ಮೂಲಕವೇ ಪಡ್ಡೆಹುಲಿ ಮ್ಯೂಸಿಕ್ಕು ಜನರ ಹೃದಯ ಕದಿಯುತ್ತಿದೆ.ಹೀಗಿರುವಾಗಲೇ ಮತ್ತೊಂದು ಪವರ್ ಕೊಟ್ಟಿದ್ದಾರೆ ಪವರ್ ಸ್ಟಾರ್.

    ಪಡ್ಡೆಹುಲಿ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅತಿಥಿ ನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಕಡೆಯ 15 ನಿಮಿಷದಲ್ಲಿ ಪುನೀತ್ ಕಾಣಿಸಿಕೊಳ್ಳಲಿದ್ದಾರೆ. ಅದು ಪ್ರಮುಖ ಪಾತ್ರವಾಗಿದ್ದು, ಯುವಕರಲ್ಲಿ ಜೋಶ್ ಹಾಗೂ ಸ್ಫೂರ್ತಿ ತುಂಬುವ ಪಾತ್ರ ಎಂದಿದ್ದಾರೆ ನಿರ್ದೇಶಕ ಗುರು ದೇಶಪಾಂಡೆ. ಪುನೀತ್ ಅವರನ್ನೇ ಹೈಲೈಟ್ ಮಾಡಿರುವ ಪಡ್ಡೆಹುಲಿಯ ಟ್ರೇಲರ್ ಏಪ್ರಿಲ್ 10ಕ್ಕೆ ಅಂದರೆ ನಾಳೆ ರಿಲೀಸ್ ಆಗುತ್ತಿದೆ.

    ಈಗಾಗಲೇ ಪಡ್ಡೆಹುಲಿಯಲ್ಲಿ ರವಿಚಂದ್ರನ್, ಸುಧಾರಾಣಿ ಪ್ರಧಾನ ಪಾತ್ರಗಳಲ್ಲಿಯೇ ನಟಿಸಿದ್ದರೆ, ರಕ್ಷಿತ್ ಶೆಟ್ಟಿ ಕೂಡಾ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ನಿಶ್ವಿಕಾ ನಾಯ್ಡು ನಾಯಕಿಯಾಗಿರುವ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ.

    ಕೆ.ಮಂಜು ಅವರ ಗೆಳೆಯ ರಮೇಶ್ ರೆಡ್ಡಿ ನುಂಗ್ಲಿ, ಗೆಳೆಯನ ಮಗನನ್ನು ಚಿತ್ರರಂಗಕ್ಕೆ ತರುತ್ತಿರುವುದು ವಿಶೇಷ. ಒಟ್ಟಿನಲ್ಲಿ ಮಂಜು ಪುತ್ರನ ಎಂಟ್ರಿಗೆ ಕ್ರೇಜಿ ಸ್ಟಾರ್, ಪವರ್ ಸ್ಟಾರ್ ಮತ್ತು ಸಿಂಪಲ್ ಸ್ಟಾರ್ ಜೊತೆಯಾಗಿದ್ದಾರೆ.

  • ಪೊಗರು ನಂದಕಿಶೋರ್ ಜೊತೆ ಪಡ್ಡೆಹುಲಿ ಮಂಜು

    ಪೊಗರು ನಂದಕಿಶೋರ್ ಜೊತೆ ಪಡ್ಡೆಹುಲಿ ಮಂಜು

    ಪಡ್ಡೆಹುಲಿ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಭರವಸೆ ಮೂಡಿಸಿರುವ ನಟ ಶ್ರೇಯಸ್ ಮಂಜು. ಕನ್ನಡದ ಖ್ಯಾತ ನಿರ್ಮಾಪಕ  ಕೆ.ಮಂಜು ಪುತ್ರ ಶ್ರೇಯಸ್, ಪ್ರತಿಭಾವಂತ ನಟ ಅನ್ನೋದನ್ನು ಪಡ್ಡೆಹುಲಿಯಲ್ಲಿ ಪ್ರೂವ್ ಮಾಡಿದ್ದರು. ಈಗ ವಿಷ್ಣುಪ್ರಿಯ ಎಂಬ ಚಿತ್ರದ ಮೂಲಕ ಹೊಸತನಕ್ಕೆ ಒಡ್ಡಿಕೊಂಡಿರುವ ಶ್ರೇಯಸ್ ಮಂಜು, ಮುಂದಿನ ಚಿತ್ರವನ್ನು ನಂದಕಿಶೋರ್ ಜೊತೆ ಮಾಡಲಿದ್ದಾರೆ.

    ಏಪ್ರಿಲ್ 5ರಂದು ಹೊಸ ಚಿತ್ರದ ಘೋಷಣೆಯಾಗಿದ್ದು, ಗುಜ್ಜಲ್ ಪುರುಷೋತ್ತಮ್ ನಿರ್ಮಾಪಕ. ಕೆ.ಪಿ.ಶ್ರೀಕಾಂತ್ ಜೊತೆ ಟಗರು ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದ ಪುರುಷೋತ್ತಮ್ಮ, ಈಗ ತಮ್ಮದೇ ಗುಜ್ಜಲ್ ಟಾಕೀಸ್ ಸ್ಥಾಪಿಸಿದ್ದು, ಆ ಸಂಸ್ಥೆಯ ಮೊದಲ  ಸಿನಿಮಾ ಶ್ರೇಯಸ್ ಮಂಜು ಮತ್ತು ನಂದಕಿಶೋರ್ ಕಾಂಬಿನೇಷನ್‍ನಲ್ಲಿ ಬರಲಿದೆ.

  • ಪ್ರೇಮಲೋಕವೇ ಬೇರೆ.. ಪಡ್ಡೆಹುಲಿಯೇ ಬೇರೆ.. 

    ravichandran requess not to compare paddehuli with premeloka

    ರವಿಚಂದ್ರನ್‍ರನ್ನು ಕ್ರೇಜಿಸ್ಟಾರ್ ಆಗಿಸಿದ ಸಿನಿಮಾ ಪ್ರೇಮಲೋಕ. ಆಗಿನ ಕಾಲಕ್ಕೆ ಹಾಡುಗಳ ಮೂಲಕವೇ ರೋಮಾಂಚನ ಮೂಡಿಸಿದ್ದ ಸಿನಿಮಾ ಅದು. ವಿಶೇಷ ಅಂದ್ರೆ, ರವಿಚಂದ್ರನ್ ಹೀರೋ ತಂದೆಯಾಗಿ ನಟಿಸಿರುವ ಪಡ್ಡೆಹುಲಿಯಲ್ಲಿ 10 ಹಾಡುಗಳಿವೆ. ಅವುಗಳಲ್ಲಿ ಟಪ್ಪಾಂಗುಚ್ಚಿ, ಪ್ರೇಮಗೀತೆಗಳ ಜೊತೆಗೆ, ಭಾವಗೀತೆ, ವಚನ ಸಾಹಿತ್ಯದ ಹಾಡುಗಳೂ ಇವೆ. 

    ಇನ್ನೂ ಒಂದು ಹೋಲಿಕೆ ಇದೆ. ರವಿಚಂದ್ರನ್ ಪ್ರೇಮಲೋಕದಲ್ಲಿ ವಿಷ್ಣು, ಅಂಬಿ, ಶ್ರೀನಾಥ್, ಪ್ರಭಾಕರ್, ಲೋಕೇಶ್ ಎಲ್ಲರೂ ಇದ್ದರು. ಪುಟ್ಟ ಪುಟ್ಟ ಪಾತ್ರಗಳಲ್ಲಿ ನಟಿಸಿ, ನನಗೆ ಶುಭ ಕೋರಿದ್ದರು. ಈಗ ಪಡ್ಡೆಹುಲಿಯಲ್ಲಿ ನಾನಿದದ್ದೇನೆ. ಹೊಸ ಹುಡುಗ ಶ್ರೇಯಸ್‍ಗೆ ಶುಭ ಕೋರುತ್ತಿದ್ದೇನೆ ಎಂದಿದ್ದಾರೆ ಕ್ರೇಜಿ ಸ್ಟಾರ್ ರವಿಚಂದ್ರನ್.

    ಅಷ್ಟೇ ಅಲ್ಲ, ಪಡ್ಡೆಹುಲಿಯಲ್ಲಿ ಪುನೀತ್ ರಾಜ್‍ಕುಮಾರ್, ರಕ್ಷಿತ್ ಶೆಟ್ಟಿ, ನಿರ್ದೇಶಕ ಯೋಗರಾಜ್ ಭಟ್, ಸುಧಾರಾಣಿ ಕೂಡಾ ಇದ್ದಾರೆ. ಆದರೆ, ಪ್ರೇಮಲೋಕ, ಪಡ್ಡೆಹುಲಿಯನ್ನು ಹೋಲಿಸುವುದು ಬೇಡ, ಆ ಚಿತ್ರವೇ ಬೇರೆ. ಪಡ್ಡೆಹುಲಿಯೇ ಬೇರೆ. ಪಡ್ಡೆಹುಲಿಯನ್ನು ಹೊಸಬರ ಚಿತ್ರ ಎಂದು ನೋಡಿ ಎಂದು ಮನವಿ ಮಾಡಿರೋದು ರವಿಚಂದ್ರನ್.

    ಕೆ.ಮಂಜು ಪುತ್ರ ಶ್ರೇಯಸ್, ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡ್ತಿರೋ ಸಿನಿಮಾ ಇದು. ಗುರು ದೇಶಪಾಂಡೆ ನಿರ್ದೇಶನದ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ನಾಯಕಿ. 

  • ಮಳ್ಳಿ ಮಳ್ಳಿ ಹಾಡಿಗೆ 25 ದಿನ ಪ್ರಾಕ್ಟೀಸ್ ಮಾಡಿದ್ದೆ : ಶ್ರೇಯಸ್ ಮಂಜು

    ಮಳ್ಳಿ ಮಳ್ಳಿ ಹಾಡಿಗೆ 25 ದಿನ ಪ್ರಾಕ್ಟೀಸ್ ಮಾಡಿದ್ದೆ : ಶ್ರೇಯಸ್ ಮಂಜು

    ಇದೊಂದು ಹಾಡಿಗಾಗಿ ಸತತ 25 ದಿನ ಪ್ರಾಕ್ಟೀಸ್ ಮಾಡಿಸಿದ್ದಾರೆ. ಕೆಲವು ಸ್ಟೆಪ್‍ಗಳನ್ನಂತೂ ನೂರು ನೂರೈವತ್ತು ಸಾರಿ ಮಾಡಿಸಿದ್ದಾರೆ ಇಮ್ರಾನ್ ಸರ್ದಾರಿಯಾ ಮಾಸ್ಟರ್. ಒಂದ್ಸಲ ಅಂತೂ ಕಾಲು ನೋವು ತಡೆಯೋಕೇ ಆಗಲಿಲ್ಲ. ಅದೆಲ್ಲವೂ ಹಾಡಿನ ಔಟ್ ಪುಟ್ ನೋಡಿದ ಮೇಲೆ ಹೊರಟು ಹೋಯ್ತು..

    ರಾಣಾ ಚಿತ್ರದಲ್ಲಿನ ಮಳ್ಳಿ ಮಳ್ಳಿ ಹಾಡಿನ ಬಗ್ಗೆ ಅಷ್ಟೇ ಖುಷಿಯಿಂದ ಹೇಳಿಕೊಂಡಿದ್ದಾರೆ ಹೀರೋ ಶ್ರೇಯಸ್ ಮಂಜು. ಸಂಯುಕ್ತಾ ಹೆಗ್ಡೆ ಜೊತೆ ಸ್ಪೆಷಲ್ ಸಾಂಗ್‍ಗೆ ಸ್ಟೆಪ್ ಹಾಕಿರುವ ಶ್ರೇಯಸ್‍ಗೆ ಹಾಡು ಮತ್ತು ಸಿನಿಮಾ ಎರಡರ ಬಗ್ಗೆಯೂ ಅಧಮ್ಯ ವಿಶ್ವಾಸವಿದೆ. ನಂದ ಕಿಶೋರ್ ನಿರ್ದೇಶನದ ರಾಣಾ ಚಿತ್ರಕ್ಕೆ ಗುಜ್ಜಲ್ ಪುರುಷೋತ್ತಮ್ ನಿರ್ಮಾಪಕರು. ಚಂದನ್ ಶೆಟ್ಟಿ ಸಂಗೀತ ನಿರ್ದೇಶನದ ಮಳ್ಳಿ ಮಳ್ಳಿ ಹಾಡು ಕೂಡಾ ಉತ್ತರ ಕರ್ನಾಟಕ ಶೈಲಿಯಲ್ಲಿಯೇ ಇದೆಯಂತೆ.

  • ಯಶ್ ಸಿನಿಮಾ ಟೈಟಲ್ ಶ್ರೇಯಸ್ ಮಂಜುಗೆ ಸಿಕ್ಕಿದ್ದು ಹೇಗೆ?

    ಯಶ್ ಸಿನಿಮಾ ಟೈಟಲ್ ಶ್ರೇಯಸ್ ಮಂಜುಗೆ ಸಿಕ್ಕಿದ್ದು ಹೇಗೆ?

    ರಾಣಾ. ನಾಳೆ ಬಿಡುಗಡೆಯಾಗುತ್ತಿರುವ ಶ್ರೇಯಸ್ ಮಂಜು ಸಿನಿಮಾ. ನಂದ ಕಿಶೋರ್ ನಿರ್ದೇಶನದ ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿ. ಆ್ಯಕ್ಷನ್-ಫ್ಯಾಮಿಲಿ ಡ್ರಾಮಾ ಸಬ್ಜೆಕ್ಟ್ ಇರೋ ಚಿತ್ರದ ಟೈಟಲ್, ರಾಣಾ ತಂಡಕ್ಕೆ ಸಿಕ್ಕಿದ್ದರ ಹಿಂದೊಂದು ಕಥೆಯಿದೆ. ಏಕೆಂದರೆ ಈ ರಾಣಾ ಅನ್ನೋ ಟೈಟಲ್‍ನಲ್ಲಿ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಮಾಡಬೇಕಿತ್ತು.

    ಗಜಕೇಸರಿ ಚಿತ್ರ ಯಶಸ್ವಿಯಾದ ನಂತರ ಎ.ಹರ್ಷ ಮತ್ತು ಯಶ್ ಕಾಂಬಿನೇಷನ್‍ನಲ್ಲಿ ಸಿದ್ಧವಾಗಬೇಕಿದ್ದ ಸಿನಿಮಾಗೆ ರಾಣಾ ಅನ್ನೋ ಟೈಟಲ್ ಇಡಲಾಗಿತ್ತು. ನಿರ್ಮಾಪಕ ರಮೇಶ್ ಕಶ್ಯಪ್ ರೆಡಿಯಾಗಿದ್ದರು. ಆದರೆ ಸಿನಿಮಾ ಟೇಕಾಫ್ ಆಗಲಿಲ್ಲ. ಕೊನೆಗೆ ಶ್ರೇಯಸ್ ಮಂಜು ಚಿತ್ರಕ್ಕೆ ಪವರ್‍ಫುಲ್ ಟೈಟಲ್ ಬೇಕು ಎನ್ನಿಸಿದಾಗ ರಾಣಾ ಟೈಟಲ್ ನೆನಪಾಯ್ತು. ರಮೇಶ್ ಕಶ್ಯಪ್ ಬಳಿ ಕೇಳಿ ಚಿತ್ರದ ಟೈಟಲ್ ತೆಗೆದುಕೊಂಡವರು ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್.

    ರಾಣಾ ಎಂದರೆ ಮಹಮ್ಮದ್ ಘಜ್ನಿಯ ವಿರುದ್ಧ ಅಪ್ರತಿಮ ಹೋರಾಟ ಮೆರೆದಿದ್ದ ರಾಣಾ ಪ್ರತಾಪ್ ಸಿಂಗ್ ನೆನಪಾಗುತ್ತಾರೆ. ರಾಣಾ ಎಂದರೇನೇ ಯೋಧ. ಚಿತ್ರದ ಕಥೆಗೆ ತಕ್ಕಂತೆ ಮ್ಯಾಚ್ ಆಗುತ್ತೆ ಎನ್ನಿಸಿತು ಎನ್ನುತ್ತಾರೆ ಶ್ರೇಯಸ್ ಮಂಜು. ನಾಳೆ ಸಿನಿಮಾ ರಿಲೀಸ್ ಆಗುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್, ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

  • ರಾಣ ಚಿತ್ರದ ಹೈಲೈಟ್ಸ್ : ಉಧೋ ಉಧೋ ಹುಲಿಗೆಮ್ಮ ಹಾಡಿನಿಂದ ಬೊಂಬಾಟ್ ಆ್ಯಕ್ಷನ್ಸ್‍ವರೆಗೆ..

    ರಾಣ ಚಿತ್ರದ ಹೈಲೈಟ್ಸ್ : ಉಧೋ ಉಧೋ ಹುಲಿಗೆಮ್ಮ ಹಾಡಿನಿಂದ ಬೊಂಬಾಟ್ ಆ್ಯಕ್ಷನ್ಸ್‍ವರೆಗೆ..

    ರಾಣ. ಶ್ರೇಯಸ್ ಮಂಜು ಮತ್ತು ರೀಷ್ಮಾ ನಾಣಯ್ಯ ಪ್ರಧಾನ ಪಾತ್ರದಲ್ಲಿರೋ ಸಿನಿಮಾ. ಲವ್, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಆ್ಯಕ್ಷನ್ ಡ್ರಾಮಾ ಇರೋ ಸಿನಿಮಾ ರಾಣ. ನಂದ ಕಿಶೋರ್ ಒಂದು ಪವರ್‍ಫುಲ್ ಎಂಟರ್‍ಟೇನ್‍ಮೆಂಟ್ ಪ್ಯಾಕೇಜ್ ರೆಡಿ ಮಾಡಿಕೊಟ್ಟಿದ್ದಾರೆ. ಚಿತ್ರದಲ್ಲಿ ಇಷ್ಟೇ ಅಲ್ಲ, ಒಂದು ಚೆಂದದ ಮೆಸೇಜ್ ಕೂಡಾ ಇದೆ.

    ಉಧೋ ಉಧೋ ಹುಲಿಗೆಮ್ಮ.. ಹಾಡು ಉತ್ತರ ಕರ್ನಾಟಕದವರಿಗೆ ಮೆಚ್ಚುಗೆಯಾಗುವುದು ಖಚಿತ. ಭಕ್ತರಿಗಂತೂ ಹೇಳಿ ಮಾಡಿಸಿದಂತಿದೆ. ಚಂದನ್ ಶೆಟ್ಟಿ ಹಾಡು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತೆ.

    ಗಲ್ಲಿಬಾಯ್ ಹಾಡು ರೊಮ್ಯಾಂಟಿಕ್ ಆಗಿದ್ದರೆ, ಸಂಯುಕ್ತಾ ಹೆಗ್ಡೆ ಹೆಜ್ಜೆ ಹಾಕಿರುವ ಮಳ್ಳಿ ಮಳ್ಳಿ ಹಾಡು ಕುರ್ಚಿಯಲ್ಲಿ ಕುಳಿತವರೂ ಡ್ಯಾನ್ಸ್ ಮಾಡುವಂತಿದೆ.

    ಪೊಲೀಸ್ ಆಫೀಸರ್ ಆಗುವ ಕನಸು ಹೊತ್ತು ಹಳ್ಳಿಯಿಂದ ಸಿಟಿಗೆ ಬರುವ ನಾಯಕ ಎದುರಿಸುವ ಸವಾಲುಗಳ ಕಥೆ ಚಿತ್ರದಲ್ಲಿದೆ. ಲವ್ ಸ್ಟೋರಿಯಲ್ಲಿ ರೀಷ್ಮಾ ನಾಣಯ್ಯ ಜಾತಕಕ್ಕೆ ಶ್ರೇಯಸ್ ಮಂಜು ಜಾತಕ ಹೊಂದಾಣಿಕೆಯಾಗಬೇಕು. ಕ್ಯೂಟ್ ಲವ್ ಸ್ಟೋರಿ ಮಧ್ಯೆ ಕಿಸ್ಸಿಂಗ್ ರೊಮ್ಯಾನ್ಸ್ ಎಲ್ಲವೂ ಇದೆ.

    ಚಿತ್ರದಲ್ಲಿರುವ ಪವರ್ ಫುಲ್ ಆ್ಯಕ್ಷನ್ ಸೀನ್ಸ್ ಪ್ರೇಕ್ಷಕರ ಮೈನವಿರೇಳಿಸುವಂತಿದೆ. ಎಲ್ಲದರ ಜೊತೆಗೊಂದು ಚೆಂದದ ಸಂದೇಶವೂ ಇದೆ. ರಾಣ ಚಿತ್ರದ ಹೈಲೈಟ್ಸ್ ಇದು. ಗುಜ್ಜಲ್ ಪುರುಷೋತ್ತಮ್ ನಿರ್ಮಾಣದ ರಾಣ ಚಿತ್ರ ಈಗ ಥಿಯೇಟರಿನಲ್ಲಿದೆ.

  • ರಾಣನಿಗೆ ಜೊತೆಯಾದ ರಾಗಿಣಿ

    ragini image

    ರಾಣ. ಕೆ.ಮಂಜು ಪುತ್ರ ಶ್ರೇಯಸ್ ಮಂಜು ನಾಯಕರಾಗಿರೋ ಸಿನಿಮಾ. ನಂದಕಿಶೋರ್ ನಿರ್ದೇಶನದ ಚಿತ್ರಕ್ಕೀಗ ರಾಗಿಣಿ ದ್ವಿವೇದಿ ಎಂಟ್ರಿ ಕೊಟ್ಟಿದ್ದಾರೆ. ರೀಷ್ಮಾ ನಾಣಯ್ಯ ಮತ್ತು ರಜನಿ ಭಾರದ್ವಾಜ್ ಚಿತ್ರದ ನಾಯಕಿಯರು. ಇಬ್ಬರು ಹೀರೋಯಿನ್ ಇರೋವಾಗ ರಾಗಿಣಿಗೇನು ಕೆಲಸ ಅಂತೀರಾ..?

    ರಾಗಿಣಿ ಚಿತ್ರದ ಸ್ಪೆಷಲ್ ಹಾಡೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಕಾ ನಿನ್ ಮಗ್ಳು ನಂಗೆ ಚಿಕ್ಕೋಳಾಗಲ್ವಾ.. ಹಾಡಿನ ಮೂಲಕ ಹಿಂದೊಮ್ಮೆ ಕಿಚ್ಚು ಹಚ್ಚಿದ್ದರು ರಾಗಿಣಿ. ಅದೇ ನಂದಕಿಶೋರ್ ಚಿತ್ರದಲ್ಲಿ.. ಆ ಹಾಡು ಬರೆದಿದ್ದ ಶಿವು ಭೇರ್ಗಿಯವರೇ ಹೊಸ ಹಾಡು ಬರೆದಿದ್ದು, ರಾಗಿಣಿ ಆ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಗುಜ್ಜಲ್ ಪುರುಷೋತ್ತಮ್ ನಿರ್ಮಾಣದ ಚಿತ್ರಕ್ಕೆ ಸಂಗೀತ ನೀಡುತ್ತಿರೋದು ಚಂದನ್ ಶೆಟ್ಟಿ.

  • ರಾಣನಿಗೆ ಮುಹೂರ್ತ : ಉಪ್ಪಿ ಆ್ಯಕ್ಷನ್ ಕಟ್

    ರಾಣನಿಗೆ ಮುಹೂರ್ತ : ಉಪ್ಪಿ ಆ್ಯಕ್ಷನ್ ಕಟ್

    ಹಾಗಂತ ಉಪೇಂದ್ರ ಅವರೇನೂ ನಿರ್ದೇಶನಕ್ಕಿಳಿದಿಲ್ಲ. ಅಭಿಮಾನಿಗಳು ಆಹಾ.. ಉಪ್ಪಿ ಡೈರೆಕ್ಷನ್ ಮಾಡ್ತಾವ್ರಂತೆ ಅಂತಾ ಥ್ರಿಲ್ ಆಗೋ ಅಗತ್ಯವೂ ಇಲ್ಲ. ಇದು ರಾಣ ಚಿತ್ರದ ಮುಹೂರ್ತದ ಸ್ಟೋರಿ.

    ಶ್ರೇಯಸ್ ಮಂಜು ನಟಿಸುತ್ತಿರುವ ಹೊಸ ಚಿತ್ರ ರಾಣ. ಗವಿಪುರಂನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ. ನಂದಕಿಶೋರ್ ಡೈರೆಕ್ಷನ್`ನ ಈ ಚಿತ್ರಕ್ಕೆ ಗುಜ್ಜಲ್ ಪುರುಷೋತ್ತಮ್ ಪ್ರೊಡ್ಯೂಸರ್. ಮೊದಲ ಶಾಟ್‍ಗೆ ಆ್ಯಕ್ಷನ್ ಕಟ್ ಹೇಳಿ, ಚಿತ್ರಕ್ಕೆ ಶುಭ ಕೋರಿದ್ದು ರಿಯಲ್ ಸ್ಟಾರ್ ಉಪೇಂದ್ರ. ಕ್ಲಾಪ್ ಮಾಡಿದವರು ಗುಜ್ಜಲ್ ಪುರುಷೋತ್ತಮ್ ತಾಯಿ.

    ಪಡ್ಡೆಹುಲಿ ಮಂಜುರ 2ನೇ ಚಿತ್ರಕ್ಕೇ ಇಬ್ಬರು ಹೀರೋಯಿನ್ಸ್. ರೀಷ್ಮಾ ನಾಣಯ್ಯ ಮತ್ತು ರಜನಿ ಭಾರದ್ವಾಜ್. ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್ ಜೊತೆ ಕೆ.ಮಂಜು ಕೂಡಾ ಇದ್ದಾರೆ.

  • ರಾಣಾ ಅವತಾರದಲ್ಲಿ ಶ್ರೇಯಸ್ ಮಂಜು

    ರಾಣಾ ಅವತಾರದಲ್ಲಿ ಶ್ರೇಯಸ್ ಮಂಜು

    ಪಡ್ಡೆಹುಲಿ ಚಿತ್ರದ ನಂತರ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ನಟಿಸುತ್ತಿರುವ ಚಿತ್ರದ ಟೈಟಲ್ ಈಗ ರಿವೀಲ್ ಆಗಿದೆ. ಶ್ರೇಯಸ್ ಮಂಜು ನಟನೆಯ ಚಿತ್ರದ ಟೈಟಲ್ ರಾಣಾ.

    ಪೊಗರು ನಂತರ ದುಬಾರಿ ನಿರ್ದೇಶಿಸಬೇಕಿದ್ದ ನಂದಕಿಶೋರ್, ಆ ಚಿತ್ರವನ್ನು ಕೈಬಿಟ್ಟು ಈಗ ರಾಣಾ ಕೈಗೆತ್ತಿಕೊಂಡಿದ್ದಾರೆ. ಜುಲೈ 7ರಂದು ಚಿತ್ರದ ಮುಹೂರ್ತ ನೆರವೇರಲಿದೆ. ಅದಕ್ಕೂ ಮುನ್ನ ಚಿತ್ರದ ಟೈಟಲ್ ಹೊರಬಿಟ್ಟಿದ್ದಾರೆ ನಂದಕಿಶೋರ್.

    ರಾಣಾ ಚಿತ್ರದ ಟೈಟಲ್ ನಿರ್ಮಾಪಕ ರಮೇಶ್ ಕಶ್ಯಪ್ ಬಳಿ ಇತ್ತಂತೆ. ಯಶ್ ನಟಿಸಬೇಕಿತ್ತು. ಆದರೆ, ಆ ಟೈಟಲ್‍ನ್ನು ಶ್ರೇಯಸ್ ಮಂಜು ಅವರಿಗಾಗಿ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿಯೇ ನಿರ್ಮಾಪಕರಾದ ಪುರುಷೋತ್ತಮ ಗುಜ್ವಾಲ್, ಕೆ.ಮಂಜು ರಮೇಶ್ ಕಶ್ಯಪ್ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.

    ಶ್ರೇಯಸ್ ಮಂಜು ರಾಣಾಗೆ ಚಂದನ್ ಶೆಟ್ಟಿ ಸಂಗೀತವಿದೆ. ರೀಷ್ಮಾ ನಾಣಯ್ಯ ಹೀರೋಯಿನ್.