1. ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ, ನಿರ್ದೇಶಕ ಹೇಮಂತ್ ರಾವ್ ನಿರ್ದೇಶಿಸಿರುವ 2ನೇ ಸಿನಿಮಾ ಇದು. ಇದರ ನಡುವೆಯೇ ಹೇಮಂತ್, ಹಿಂದಿಯ ಅಂದಾದುನ್ ಚಿತ್ರಕ್ಕೆ ಸ್ಕ್ರಿಪ್ಟ್ ಮಾಡಿದ್ದರು. ಆ ಸಿನಿಮಾ 100 ಕೋಟಿ ಬಾಚಿತ್ತು. ಸಕ್ಸಸ್ಫುಲ್ ನಿರ್ದೇಶಕನ 2ನೇ ಸಿನಿಮಾ.
2.ಪುನೀತ್ ರಾಜ್ಕುಮಾರ್ ಸ್ವಂತ ಬ್ಯಾನರ್ನ ಮೊದಲ ಸಿನಿಮಾ ಕವಲುದಾರಿ. ಡಾ.ರಾಜ್ ಬ್ಯಾನರ್ಗಳಲ್ಲಿ ಕಥೆಯೇ ಪ್ರಧಾನ. ಅದೇ ಫಾರ್ಮುಲಾವನ್ನು ಪುನೀತ್ ಕೂಡಾ ಪಿಆರ್ಕೆ ಬ್ಯಾನರ್ನಲ್ಲಿ ಅನುಸರಿಸಿದ್ದಾರೆ.
3. 80ರ ದಶಕದ ಕಾಲದ ಕ್ರೈಂ ಥ್ರಿಲ್ಲರ್ ಸಿನಿಮಾ. ಹೇಮಂತ್ ರಾವ್, ಅನಂತ್ನಾಗ್ ಕಾಂಬಿನೇಷನ್ನ 2ನೇ ಸಿನಿಮಾ ಕವಲುದಾರಿ. ಅನಂತ್ರನ್ನು ಗೋಧಿಬಣ್ಣದಲ್ಲಿ ಮುಗ್ಧ ಅಜ್ಜನಂತೆ ತೋರಿಸಿದ್ದ ಹೇಮಂತ್, ಇಲ್ಲಿ ಬುದ್ದಿವಂತ ಆಫೀಸರ್ ಮಾಡಿದ್ದಾರೆ.
4. ಚಿತ್ರಕ್ಕೆ ಹಿನ್ನೆಲೆ ಸಂಗೀತ ಮಾಡಿಸಿರುವುದು ಮ್ಯಾಸೆಡೊನಿಯಾದಲ್ಲಿ. 100ಕ್ಕೂ ಹೆಚ್ಚು ತಂತ್ರಜ್ಞರು ಈ ಚಿತ್ರಕ್ಕೆ ಲೈವ್ ಇನ್ಸ್ಟ್ರುಮೆಂಟ್ ನುಡಿಸಿದ್ದಾರೆ.
5. ಚಿತ್ರದಲ್ಲಿ ಯಾವುದೇ ಮೆಸೇಜ್ ಇಲ್ಲ. ಜನ ಇಷ್ಟಪಡಬೇಕು. ಅವರಿಗೆ ಇಷ್ಟವಾಗಿದ್ದು, ಅನಿಸಿದ್ದೇ ಚಿತ್ರದ ಸಂದೇಶ.
ಹೀಗೆ ಚಿತ್ರದ ಬಗ್ಗೆ ವಿವರಗಳ ಪಟ್ಟಿ ಮಾಡುತ್ತಾ ಹೋಗುವ ಹೇಮಂತ್, ಪ್ರೇಕ್ಷಕರನ್ನು ತುಂಬಾ ಬುದ್ದಿವಂತರು ಎಂದೇ ಭಾವಿಸಿ ಕಥೆ, ಚಿತ್ರಕಥೆ ಮಾಡಿದ್ದೇನೆ ಎಂದಿದ್ದಾರೆ. ಅಲಮೇಲಮ್ಮ ಟ್ರೇಲರ್ ನೋಡಿ ರಿಷಿಯನ್ನು ಆಯ್ಕೆ ಮಾಡಿದ್ದ ಹೇಮಂತ್ ರಾವ್, ಸಂಗೀತಕ್ಕೆ ಚರಣ್ ರಾಜ್ ಅವರನ್ನೇ ಕಂಟಿನ್ಯೂ ಮಾಡಿಕೊಂಡಿದ್ದಾರೆ. ವೇವ್ಲೆಂಗ್ತ್ ಓಕೆ ಆಗುತ್ತೆ ಎನ್ನುವುದೇ ಇದಕ್ಕೆ ಕಾರಣ. ಸಿನಿಮಾ ನಾಳೆಯಿಂದ ಥಿಯೇಟರುಗಳಲ್ಲಿರಲಿದೆ.