` rakshitha prem, - chitraloka.com | Kannada Movie News, Reviews | Image

rakshitha prem,

 • Prem's New Flm Is 'Ekalavya'

  prem's new fil is ekalavya

  Writer-director Prem had announced that he will be launching his new film on the 31st of March, which is incidentally his wife Rakshitha's birthday. Likewise, Prem has announced a new film on Sunday and the film is titled as 'Ekalavya'.

  With 'Ekalavya', the Kannada film industry will be witnessing two debuts. One is of Rakshitha's new production company called Rakshitha Film Factory and the second is of her brother Abhishek Rao as a hero. Abhishek had earlier worked as an assistant director for 'The Villain'. Now he has turned full fledged hero with the film. He will be known as Rana from this film.

  The shooting for 'Ekalavya' will begin soon. Meanwhile, Prem is busy finalising the heroine for the film. This time, Prem intends not only to introduce a new girl, but also a Kannadiga.

   

 • Rakshitha's Heart Crying Because Of Kiccha Sudeep !

  rakshitha's heart crying because of kiccha sudeep

  Actress turned producer Rakhitha Prem, who is busy these days producing her maiden venture 'Ek Love Ya' through her production house Rakshita Film Factory, introducing her brother Raanna, is heart broken, and the reason behind it, is one of her closest friends in the industry - Kichcha Sudeepa.

  Disappointed over not being invited to the sets of Dabangg 3, Rakshita Prem has openly expressed it to Kichcha Sudeepa asking why he chose to invite her husband Prem to the sets of Bollywood movie which features her favourite actor Salman Khan and not her.

  She goes on to write to him asking on what has she done to him for not inviting her because of which her heart is crying. However, she wraps it up saying that she being a good friend wishes him all the very best for his act in Dabangg 3.

  Reacting to Rakshita's complaint, Kichcha who is always at his witty best, explains on why he chose to do so. "I don't recollect you coming even once to see me on the sets of The Villain (fearing hubby directing and two years in the making). When you couldn't travel from Chandra layout to Minerva mill, though why trouble you by calling you to Mumbai," Kichcha replies with a naughty smile in the end.

 • Rakshitha's Special Appearance In 'Ek Love Ya'

  rakshitha's special appereance

  The shooting for Prem's new film 'Ek Love Ya' is near completion. Meanwhile, actress Rakshitha, will be making a special appearance in a song along with Rachita Ram.

  Rakshitha making a special appearance in 'Ek Love Ya' is expected from the beginning. The film is not only produced by her, but stars her brother Abhishek alias Rana as a hero. So, there have been speculations that Rakshitha will also be making a comeback in a special appearance. Now it has turned true with the actress ready to dance for a song.

  'Ek Love Ya' is written and directed by Prem. The film stars Rana, Reeshma, Rachita and others in prominent roles. Arjun Janya is the music composer, while Mahendra Simha is the cinematographer.

 • Reeshma Nanaiah Roped In For 'Ek Love Ya'

  reeshma nanaiah roped in for ek love ya

  The shooting for Prem's new film 'Ek Love Ya' is in full progress. Meanwhile, Prem has finalized the heroine for the film. This time, Prem is introducing a new actress called Reeshma Nanaiah as the heroine.

  Ek Love Ya' stars Prem's brother-in-law Abhishek alias Rana as a hero. From the beginning, Prem has been saying that he will be launching a new heroine opposite Rana. Now Reeshma Nanaiah who is basically from Coorg has been roped in as the heroine of the film. Apart from Rana and Reeshma, Rachita has been selected to play a prominent role in the film.

  'Ek Love Ya' is being produced by Rakshitha and the actress has launched a new production company called Rakshitha Film Factory and is producing the film under the banner. Arjun Janya is the music composer, while Mahendra Simha is the cinematographer.

 • ಏಕ್ ಲವ್ ಯಾ ಟೀಸರ್ ನೋಡೋಕೆ ರೆಡಿಯಾಗಿ

  ek love ya teaser soon

  ಸೆನ್ಸೇಷನಲ್ ಡೈರೆಕ್ಟರ್ ಪ್ರೇಮ್ ನಿರ್ದೇಶನದ, ರಕ್ಷಿತಾ ತಮ್ಮ ರಾಣಾ ಅಭಿನಯಿಸುತ್ತಿರುವ ಸಿನಿಮಾ ಏಕ್ ಲವ್ ಯಾ. ಈಗಾಗಲೇ ಯಾರೇ ಯಾರೇ ನೀನು ನಂಗೆ.. ಹೇಳೋ ಆಸೆ.. ಹೇಳೋದ್ ಹೆಂಗೆ ಅನ್ನೋ ಸಾಂಗ್ನ ಪುಟ್ಟದೊಂದು ವಿಡಿಯೋ ಬಿಟ್ಟು ಹವಾ ಎಬ್ಬಿಸಿದ್ದಾರೆ ಪ್ರೇಮ್. ಈಗ ಟೀಸರ್ ಬರಲಿದೆ ಎಂದು ಎದೆಬಡಿತ ಹೆಚ್ಚಿಸಿದ್ದಾರೆ.

  ಎಕ್ಸ್ ಕ್ಯೂಸ್ ಮಿ ನಂತರ ಪ್ರೇಮ್ ಪಕ್ಕಾ ಲವ್ ಸ್ಟೋರಿ ಸಿನಿಮಾ ಮಾಡಿಲ್ಲ. ಈ ಬಾರಿ ತಮ್ಮ ಬಾಮೈದ ರಾಣಾನನ್ನೇ ಹೀರೋ ಮಾಡಿದ್ದಾರೆ. ರಾಣಾಗೆ ಹೀರೋಯಿನ್ ಆಗಿ ರೀಷ್ಮಾ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಇದ್ದಾರೆ. ಜಸ್ಟ್ ವೇಯ್ಟ್..

 • ಏಕ್ ಲವ್ ಯಾ ಟ್ರೇಲರ್ ರಿಲೀಸ್ ಸದ್ಯಕ್ಕಿಲ್ಲ. ರಿಲೀಸ್?

  ಏಕ್ ಲವ್ ಯಾ ಟ್ರೇಲರ್ ರಿಲೀಸ್ ಸದ್ಯಕ್ಕಿಲ್ಲ. ರಿಲೀಸ್?

  ಇದೇ ಜನವರಿಯಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾ ಏಕ್ ಲವ್ ಯಾ. ಜೋಗಿ ಪ್ರೇಮ್ ಡೈರೆಕ್ಷನ್‍ನ ಚಿತ್ರದ ಮೂಲಕ ರಕ್ಷಿತಾ ಪ್ರೇಮ್ ಅವರ ತಮ್ಮ ರಾಣಾ ಹೀರೋ ಆಗಿ ಎಂಟ್ರಿ ಕೊಡಬೇಕಿರುವ ಸಿನಿಮಾ ಏಕ್ ಲವ್ ಯಾ. ಈಗಾಗಲೇ ಚಿತ್ರದ ಎಲ್ಲ ಹಾಡುಗಳು ಹಿಟ್ ಆಗಿದ್ದವು. ಒಂದು ಲೆವೆಲ್ಲಿಗೆ ಪ್ರಚಾರವನ್ನೂ ಮುಗಿಸಿತ್ತು ಪ್ರೇಮ್ ಟೀಂ. ಜೊತೆಗೆ ರಚಿತಾ ರಾಮ್-ರಾಣಾ ಕಿಸ್ಸಿಂಗ್ ಬೇರೆಯದೇ ಸೆನ್ಸೇಷನ್ ಸೃಷ್ಟಿಸಿತ್ತು.

  ಇಷ್ಟೆಲ್ಲ ಆಗಿ ಇವತ್ತು ಅರ್ಥಾತ್ ಜನವರಿ 4ಕ್ಕೆ ರಿಲೀಸ್ ಆಗಬೇಕಿದ್ದ ಏಕ್ ಲವ್ ಯಾ ಟ್ರೇಲರ್ ಬಿಡುಗಡೆ ಮುಂದಕ್ಕೆ ಹೋಗಿದೆ. ನೀಡಿರುವುದು ತಾಂತ್ರಿಕ ಕಾರಣಗಳೇ ಆದರೂ, ಕಾರಣ ಬೇರೆಯದೇ ಇದೆ ಎನ್ನಲಾಗಿದೆ. ಅಕಸ್ಮಾತ್ ಸರ್ಕಾರ 50:50 ರೂಲ್ಸ್ ಜಾರಿಗೆ ತಂದರೆ ಏನು ಮಾಡುವುದು ಎಂಬ ಭಯ ಚಿತ್ರ ತಂಡದ್ದು. ಟ್ರೇಲರ್ ರಿಲೀಸ್ ಮಾಡದೆ ಪ್ರಚಾರ ಮಾಡುವುದೂ ಕಷ್ಟ. ಹೀಗಾಗಿ ಚಿತ್ರದ ರಿಲೀಸ್ ಕೂಡಾ ಮುಂದಕ್ಕೆ ಹೋದರೆ ಆಶ್ಚರ್ಯವಿಲ್ಲ.

  ಆದರೆ ಸದ್ಯಕ್ಕಂತೂ ಜೋಗಿ ಪ್ರೇಮ್ ಜನವರಿ 21ಕ್ಕೆ ಸಿನಿಮಾ ರಿಲೀಸ್ ಮಾಡುವುದು ಪಕ್ಕಾ ಎಂದಿದ್ದಾರೆ. ಚಿತ್ರದ ಇನ್ನೊಂದು ಹಾಡನ್ನು ರಿಲೀಸ್ ಮಾಡುವುದಾಗಿ ಹೇಳಿದ್ದಾರೆ.

 • ಏಕ್ ಲವ್ ಯಾ ಮ್ಯೂಸಿಕ್ ಸೋಲ್ಡ್ ಔಟ್ ದಾಖಲೆ

  ek love ya audio sold out for record hit

  ಹೊಸ ನಟನ ಚಿತ್ರವೊಂದರ ಆಡಿಯೋ ರೈಟ್ಸ್ ಎಷ್ಟಕ್ಕೆ ಹೋಗಬಹುದು. ತುಂಬಾ ದೊಡ್ಡ ಮೊತ್ತವಂತೂ ಸಿಗುವುದು ಕಷ್ಟ. ಆದರೆ, ಆ ಹೊಸಬರ ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಆಗಿದ್ದು, ಸಂಗೀತ ಅರ್ಜುನ್ ಜನ್ಯ ನೀಡಿದ್ದರೆ.. ಯೆಸ್. ಆಗ ಆ ಚಿತ್ರಕ್ಕೆ.. ಚಿತ್ರದ ಹಾಡುಗಳಿಗೆ ತಂತಾನೇ ಡಿಮ್ಯಾಂಡ್ ಸೃಷ್ಟಿಯಾಗುತ್ತೆ. ಏಕ್ ಲವ್ ಯಾ ಚಿತ್ರ ಆ ದಾಖಲೆ ಬರೆದಿದೆ.

  ಏಕ್ ಲವ್ ಯಾ ಚಿತ್ರದ ಆಡಿಯೋ ಹಕ್ಕನ್ನು ಎ2 ಸಂಸ್ಥೆ 81 ಲಕ್ಷಕ್ಕೆ ಖರೀದಿಸಿದೆ. ರಕ್ಷಿತಾ ಅವರ ತಮ್ಮ ರಾಣಾ ನಾಯಕರಾಗಿ ಎಂಟ್ರಿ ಕೊಡುತ್ತಿರುವ ಚಿತ್ರದಲ್ಲಿ ರಚಿತಾ ರಾಮ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರೀಷ್ಮಾ ನಾಯಕಿ. ಫೆಬ್ರವರಿ 14ರ ವ್ಯಾಲೆಂಟೈನ್ಸ್ ಡೇಗೆ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದೆ.

 • ಜೋಗಿ ಪ್ರೇಮ್ ಜೊತೆ ಡಿಂಪಲ್ ಕ್ವೀನ್

  rachita ram in ek love ya

  ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತೊಮ್ಮೆ ಜೋಗಿ ಪ್ರೇಮ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ರಕ್ಷಿತಾ ಅವರ ತಮ್ಮನನ್ನು ಪರಿಚಯಿಸುತ್ತಿರುವ ಏಕ್ ಲವ್ ಯಾ ಚಿತ್ರದಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಹಾಗಂತ, ರಚಿತಾ ರಾಮ್ ಹೀರೋಯಿನ್ ಅಲ್ಲ, ಅರ್ಥಾತ್ ಹೀರೋನ ಪ್ರೇಯಸಿ ಅಲ್ಲ. ಆದರೆ, ಅತ್ಯಂತ ಪ್ರಮುಖವಾದ ಪಾತ್ರವಂತೆ.

  ವಿಲನ್ ಚಿತ್ರದ ಹಾಡೊಂದರಲ್ಲಿ ನಾನು ನಟಿಸಿದ್ದೆ. ಆದರೆ, ಪ್ರೇಮ್ ಅವರ ಡೆಡಿಕೇಷನ್ ಬಹಳ ಇಷ್ಟವಾಗಿತ್ತು. ಅವರು ಬಹಳ ಒಳ್ಳೆಯ ನಿರ್ದೇಶಕ. ಅವರು ನನ್ನನ್ನು ಸೆಟ್‍ನಲ್ಲಿ ಗೌಡ್ತಿ  ಅಂತಾ ಕರೀತಿದ್ರೆ, ನಾನು ಗೌಡಾ ಸರ್ ಅಂತ ಕೂಗ್ತಿದ್ದೆ. ಈ ಚಿತ್ರದಲ್ಲಿ ನನ್ನದು ಅತ್ಯಂತ ಮುಖ್ಯ ಪಾತ್ರ ಎಂದಿದ್ದಾರೆ ರಚಿತಾ ರಾಮ್.

  ರಕ್ಷಿತಾ ಪ್ರೇಮ್ ಅವರ ಸೋದರ ರಾಣಾ  ಏಕ್ ಲವ್ ಯಾ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಕ್ಷಿತಾ ಅವರೇ ಚಿತ್ರದ ನಿರ್ಮಾಪಕಿ.

 • ಡಾರ್ಲಿಂಗ್ ಜೊತೆ ಹೋದ ಪ್ರೇಮ್ - ರಕ್ಷಿತಾ ಮುನಿಸು - ಕಿಚ್ಚನ ಉತ್ತರ ಸೂಪರ್ಬ್

  rakshitha sudeep's friendly banter

  ಜೋಗಿ ಪ್ರೇಮ್ ತಮ್ಮ ಪತ್ನಿ ರಕ್ಷಿತಾರನ್ನು ಡಾರ್ಲಿಂಗ್ ಎನ್ನುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಸುದೀಪ್‍ರನ್ನು ಪ್ರೇಮ್ ಯಾವಾಗಲೂ ಕರೆಯೋದು ಡಾರ್ಲಿಂಗ್ ಎಂತಲೇ. ಈಗ ಈ ಡಾರ್ಲಿಂಗ್ ಜೊತೆ ಸುದೀಪ್ ಮುಂಬೈಗೆ ಹೋಗಿದ್ದಾರೆ. ದಬಾಂಗ್ 3ಯಲ್ಲಿ ನಟಿಸುತ್ತಿರುವ ಸುದೀಪ್, ದಬಾಂಗ್ ಸೆಟ್ಟಿಗೆ ಪ್ರೇಮ್‍ರನ್ನು ಕರೆದುಕೊಂಡು ಹೋಗಿದ್ದಾರೆ.

  ಮುಂಬೈಗೆ ಪ್ರೇಮ್‍ನನ್ನು ಮಾತ್ರ ಕರೆದುಕೊಂಡು ಹೋಗಿದ್ದೀಯ. ನನ್ನನ್ನು ಬಿಟ್ಟು ಹೋಗಿದ್ದೀಯ, ನಾನ್ ಏನ್ ಮಾಡಿದ್ದೆ ನಿನಗೆ.. ಎಂದು ಹುಸಿಮುನಿಸು ತೋರಿದ್ದಾರೆ ರಕ್ಷಿತಾ. ಅದಕ್ಕೆ ಸುದೀಪ್ ಕೊಟ್ಟಿರುವ ಉತ್ತರವೂ ಮಜವಾಗಿದೆ.

  ದಿ ವಿಲನ್ ಶೂಟಿಂಗ್ ನಡೀತಿದ್ದಾಗ, ನಮ್ಮನ್ನು ನೋಡೋಕೆ ಒಂದ್ಸಲ ಕೂಡಾ ನೀನು ಸೆಟ್ಟಿಗೆ ಬರಲಿಲ್ಲ. ಅದಕ್ಕೆ ನಿಮ್ಮ ಪತಿಯೇ ನಿರ್ದೇಶಕ. ಎರಡು ವರ್ಷ ನಿರ್ದೇಶನ ಮಾಡಿದ್ದರು. ಚಂದ್ರಾ ಲೇಔಟ್‍ನಿಂದ ಮಿನರ್ವ ಮಿಲ್ಸ್‍ಗೇ ಬರೋಕೆ ನಿನಗೆ ಸಾಧ್ಯವಾಗಲಿಲ್ಲ, ಇನ್ನು ಮುಂಬೈಗೆ ಕರೆದುಕೊಂಡು ಬರೋದು ಯಾಕೆ ಅಂತಾ ಸುಮ್ಮನಾದ್ವಿ ಎಂದು ಉತ್ತರ ಕೊಟ್ಟಿದ್ದಾರೆ ಕಿಚ್ಚ ಸುದೀಪ್.

  ಇಷ್ಟಕ್ಕೂ ರಕ್ಷಿತಾ ಬೇಸರಕ್ಕೆ ಕಾರಣವೂ ಇದೆ. ಏನಂದ್ರೆ.. ರಕ್ಷಿತಾ ಸಲ್ಮಾನ್ ಖಾನ್‍ರ ಅಭಿಮಾನಿ. ಗೆಳೆಯ ಸುದೀಪ್, ಸಲ್ಮಾನ್ ಜೊತೆ ನಟಿಸುತ್ತಿದ್ದಾರೆ. ಪತಿ ಪ್ರೇಮ್ ಆ ಚಿತ್ರದ ಸೆಟ್ಟಿಗೆ ಹೋಗಿದ್ದಾರೆ. ನಾನ್ ಮಾತ್ರ ಇಲ್ಲ ಅಂದಾಗ ಬೇಜಾರಾಗೋದು ಕಾಮನ್ ಅಲ್ವೇ..

 • ಪ್ರೇಮ್ ಅಂದ್ರೇನೇ ಟೆನ್ಷನ್.. ಹೀಗಂದಿದ್ದು ರಕ್ಷಿತಾ ಮೇಡಂ

  prem didnt miss the date says rakshitha

  ಪ್ರೇಮ್ ಅಂದ್ರೆ ಕ್ರೇಜ್.. ಪ್ರೇಮ್ ಅಂದ್ರೆ ಅದ್ಭುತ ಸಾಂಗ್ಸ್.. ಪ್ರೇಮ್ ಅಂದ್ರೆ ಚೆಂದದ ಮೇಕಿಂಗ್.. ಹ್ಯಾಟ್ರಿಕ್ ಹಿಟ್ ಕೊಟ್ಟ ಡೈರೆಕ್ಟರ್. ಜೋಗಿ ಪ್ರೇಮ್ ಎಂದೇ ಫೇಮಸ್. ಕನ್ನಡದ ಕೆಲವು ವಂಡರ್ ಡೈರೆಕ್ಟರ್ಸ್‍ಗಳಲ್ಲಿ ಪ್ರೇಮ್ ಒಬ್ಬರು. ಇಂತಹ ಪ್ರೇಮ್ ಅಂದ್ರೆ ಟೆನ್ಷನ್ನೋ ಟೆನ್ಷನ್ನು ಅಂದಿರೋದು ಶ್ರೀಮತಿ ರಕ್ಷಿತಾ ಪ್ರೇಮ್.

  ರಕ್ಷಿತಾ ಅವರ ಸೋದರ ರಾಣಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ಪ್ರೇಮ್ ಏಕ್ ಲವ್  ಯಾ ಚಿತ್ರದ ಮೋಷನ್ ಪೋಸ್ಟರ್ ಮತ್ತು ಟೀಸರ್ ರಿಲೀಸ್ ಮಾಡೋಕೆ ರೆಡಿಯಾಗಿದ್ದಾರೆ. ಪ್ರೇಮ್ ಅಂದ್ರೇನೇ ಟೆನ್ಷನ್ ಡೈರೆಕ್ಟರ್ ಎಂದಿರೋ ರಕ್ಷಿತಾ, ಪ್ರೇಮ್ ಇದೇ ಮೊದಲ ಬಾರಿಗೆ ಹೇಳಿದ ದಿನಾಂಕಕ್ಕೆ ಮೋಷನ್ ಪೋಸ್ಟರ್ ಮತ್ತು ಟೀಸರ್ ರಿಲೀಸ್ ಮಾಡುತ್ತಿದ್ದಾರೆ ಎಂದಿದ್ದಾರೆ.

  ಫೆಬ್ರವರಿ 8ಕ್ಕೆ ಮೋಷನ್ ಪೋಸ್ಟರ್ ಬಂದರೆ, ಪ್ರೇಮಿಗಳ ದಿನ ಫೆ.14ಕ್ಕೆ ಟೀಸರ್ ಬರುತ್ತಿದೆ. ರಾಣಾ ಎದುರು ರೀಷ್ಮಾ ನಾಯಕಿಯಾಗಿದ್ದರೆ, ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶಶಿಕುಮಾರ್, ಚರಣ್ ರಾಜ್ ಪೋಷಕ ಪಾತ್ರದಲ್ಲಿರೋ ಚಿತ್ರಕ್ಕೆ ಅರ್ಜುನ್ ಜನ್ಯಾ ಮ್ಯೂಸಿಕ್ ಇದೆ.

   

 • ಪ್ರೇಮ್‍ನ ಯಾರಾದ್ರೂ ಬೈದ್ರೆ ತಡೆದುಕೊಳ್ಳೋಕೆ ಆಗಲ್ಲ - ರಕ್ಷಿತಾ 

  rakshitha talks about her possessiveness over prem

  ಪ್ರೇಮ್ ಮತ್ತು ರಕ್ಷಿತಾ ಅವರ ಅನ್ಯೋನ್ಯ ದಾಂಪತ್ಯದ ಬಗ್ಗೆ ಬಹುತೇಕ ಚಿತ್ರರಂಗದವರಿಗೆ ಚೆನ್ನಾಗಿ ಗೊತ್ತು. ಈ ದಾಂಪತ್ಯದ ಒಂದು ವಿಶೇಷ ಕಥೆ ಹೇಳಿಕೊಂಡಿದ್ದಾರೆ ರಕ್ಷಿತಾ ಪ್ರೇಮ್. ತಮ್ಮ ಸೋದರ ರಾಣಾನನ್ನು ಚಿತ್ರರಂಗಕ್ಕೆ ಪರಿಚಯಿಸುವ ಹೊಣೆಯನ್ನು ತಮ್ಮ ಪತಿಗೇ ವಹಿಸಿರುವ ರಕ್ಷಿತಾ ಏಕ್ ಲವ್ ಯಾ ಚಿತ್ರ ಆರಂಭಿಸಿದ್ದಾರೆ. ಆ ವೇಳೆಯಲ್ಲೇ ಅವರು ಪ್ರೇಮ್ ಕುರಿತಂತೆ ತಮ್ಮ ಪ್ರೀತಿಯನ್ನು ಹೊರಗಿಟ್ಟಿದ್ದು.

  ನಾನು ಪ್ರೇಮ್‍ನನ್ನು ತುಂಬಾ ಬೈಯ್ಯುತ್ತೇನೆ. ನನಗೆ ಯಾವುದನ್ನೂ ಮುಚ್ಚಿಟ್ಟುಕೊಂಡು ಗೊತ್ತಿಲ್ಲ. ಅದಕ್ಕೆ ಪ್ರೇಮ್ ತಲೆಕೆಡಿಸಿಕೊಳ್ಳಲ್ಲ. ಆದರೆ, ಪ್ರೇಮ್‍ನನ್ನು ಯಾರಾದರೂ ಬೇರೆಯವರು ಬೈದರೆ, ಟೀಕಿಸಿದರೆ ನನಗೆ ತುಂಬಾ ಕೋಪ ಬರುತ್ತೆ. ತಡೆದುಕೊಳ್ಳೋಕೆ ಆಗಲ್ಲ. ಸೋಷಿಯಲ್ ಮೀಡಿಯಾಗಳಲ್ಲಿ ಹಾಗೆಲ್ಲ ಬೈದವರನ್ನು ಬ್ಲಾಕ್ ಮಾಡು ಎಂದು ಪ್ರೇಮ್‍ಗೆ ಹೇಳ್ತೇನೆ. ಅವರು ತಲೆ ಕೆಡಿಸಿಕೊಳ್ಳಲ್ಲ. ನಕ್ಕು ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗ್ತಾರೆ' ಎಂದು ಹೇಳಿದ್ದಾರೆ ರಕ್ಷಿತಾ.

  ಅಫ್‍ಕೋರ್ಸ್, ಇತ್ತೀಚೆಗೆ ದಿ ವಿಲನ್ ಚಿತ್ರದ ಕುರಿತಂತೆ ಪ್ರೇಮ್ ವಿವಾದಕ್ಕೆ ಗುರಿಯಾಗಿದ್ದರು. ಕೆಲವರು ಪ್ರೇಮ್‍ರನ್ನು ಬೈದಿದ್ದಕ್ಕೆ, ಟೀಕಿಸಿದ್ದಕ್ಕೆ ರಕ್ಷಿತಾ ಕೆಂಡಾಮಂಡಲವಾಗಿದ್ದರು. 

  ಅಂತಹ ಟೀಕೆಗಳನ್ನು ಎದುರಿಸಿಕೊಂಡು ಪ್ರೇಮ್ ಸ್ಟಾರ್ ನಿರ್ದೇಶಕರಾಗಿದ್ದಾರೆ. ಅವನು ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ ರಕ್ಷಿತಾ.

 • ರಕ್ಷಿತಾ ಹೇಳಿದ ಏಕ್ ಲವ್ ಯಾ ಸ್ಟೋರೀಸ್

  ರಕ್ಷಿತಾ ಹೇಳಿದ ಏಕ್ ಲವ್ ಯಾ ಸ್ಟೋರೀಸ್

  ಏಕ್ ಲವ್ ಯಾ ರಿಲೀಸ್ ಆಗಿದೆ. ಪ್ರೀಮಿಯರ್ ಷೋನಲ್ಲಿ ಎಲ್ಲರೂ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಇದು ರಕ್ಷಿತಾ ತಮ್ಮ ರಾಣಾನನ್ನು ಹೀರೋ ಆಗಿ ಪರಿಚಯಿಸುತ್ತಿರೋ ಸಿನಿಮಾ. ಪ್ರೇಮ್ ನಿರ್ದೇಶಕ. ಈ ವೇಳೆ ರಕ್ಷಿತಾ ಹೇಳಿದ ಸ್ವಾರಸ್ಯದ ಕಥೆಗಳು ಇಲ್ಲಿವೆ.

  ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಶುರು ಮಾಡಿದ್ದೇ ನನ್ನ ತಮ್ಮನಿಗಾಗಿ. ಅವನನ್ನು ಹೀರೋ ಮಾಡೋದಾದರೆ ನಾನೇ ಮಾಡಬೇಕು ಅನ್ನೋದು ಅಮ್ಮನ ಕನಸಾಗಿತ್ತು. ನನ್ನ ಹೆಸರಲ್ಲೇ ಇರಬೇಕು ಅನ್ನೋ ಆಸೆಯಿತ್ತು. ಹೀಗಾಗಿ ಎರಡು ಪ್ರೊಡಕ್ಷನ್ ಹೌಸ್ ಇದ್ದರೂ ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಶುರು ಮಾಡಿದ್ದು.

  ಚಿತ್ರಕ್ಕೆ ಪ್ರೇಮ್ ಹಣ ಹಾಕಿಲ್ಲ. ಪ್ರೇಮ್ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅವನೊಬ್ಬ ಒಳ್ಳೆಯ ಡೈರೆಕ್ಟರ್. ಸಿನಿಮಾ ಚೆನ್ನಾಗಿ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಪ್ರೇಮ್ ಇಡೀ ಟೀಂಗೆ ಸಿನಿಮಾ ತೋರಿಸಿದ್ದಾರೆ. ಪ್ರೇಮ್ ಬಳಿ ಇರೋದು ಎಂತಹ ಟೀಂ ಎಂದರೆ ಇಷ್ಟವಾಗಲಿಲ್ಲ ಅನ್ನೋದನ್ನೂ ಅಷ್ಟೇ ಡೈರೆಕ್ಟ್ ಆಗಿ ಹೇಳಿದ್ದಾರೆ. ಅವರೆಲ್ಲರೂ ಮೆಚ್ಚಿದ್ದಾರೆ.

  ನನಗೆ ಅಪ್ಪು ಸಿನಿಮಾ ನೆನಪಾಗುತ್ತೆ. ಅಪ್ಪು ರಿಲೀಸ್ ಆಗುವಾಗಲೇ ಅಪ್ಪು ಸ್ಟಾರ್ ನಟ. ಹೀರೋ ಆಗಿ ಮೊದಲ ಸಿನಿಮಾ ಆಗಿದ್ದರೂ ಅವರಾಗಲೇ ಸ್ಟಾರ್. ಇಡೀ ಟೀಂನಲ್ಲಿ ನಾನಷ್ಟೇ ಹೊಸಬಳು. ಹೀಗಾಗಿ ಟೆನ್ಷನ್ ಇತ್ತು. ಈಗ ಏಕ್ ಲವ್ ಯಾಗೆ ಕೂಡಾ ಅಂತದ್ದೇ ಟೆನ್ಷನ್ ಇದೆ.

  ನಿರ್ಮಾಪಕಿಯಾಗಿದ್ದು ತಮ್ಮನಿಗಾಗಿ. ಏಕ್ ಲವ್ ಯಾ ಮುಗಿಸಿದರೆ ಸಾಕು ಎನಿಸಿತ್ತು. ಆದರೆ ಈಗ ಇನ್ನಷ್ಟು ಹೊಸ ಸಿನಿಮಾ ಮಾಡು ವ ಪ್ಲಾನ್ ಇದೆ. ಕೆಲವರ ಬಳಿ ಕಥೆ ಕೇಳಿದ್ದೇನೆ. ರಾಜ್ ಬಿ.ಶೆಟ್ಟಿ ಹಾಗೂ ಧನಂಜಯ್ ಚಿತ್ರಗಳು ಇಷ್ಟವಾಗುತ್ತಿವೆ. ರಾಜ್ ಬಿ.ಶೆಟ್ಟಿ ಬಳಿ ಈಗಾಗಲೇ ಕಥೆ ಕೇಳಿದ್ದೇನೆ. ಬೇರೆಯವರಿಗೂ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ ರಕ್ಷಿತಾ ಪ್ರೇಮ್.

 • ರಚಿತಾ ರಾಮ್, ರಾಣಾ ಲವ್ ಕಥೆ ಅಲ್ಲ.. ಸತ್ಯ..!

  ek love ya is reality

  ಏಕ್ ಲವ್ ಯಾ ಟೀಸರ್ ಹೊರಬಿದ್ದ ಕ್ಷಣದಿಂದ ಎಲ್ಲೆಡೆ ಸೆನ್ಸೇಷನ್ ಸೃಷ್ಟಿಸಿದ್ದು ರಚಿತಾ ರಾಮ್ ಧಮ್ ಮತ್ತು ಕಿಸ್ ವಿಡಿಯೋ. ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾದಲ್ಲಿ ರಚಿತಾ ರಾಮ್, ಗ್ರೀಷ್ಮಾ ನಾಣಯ್ಯ ಎದುರು ಹೀರೋ ಆಗಿರುವುದು ರಕ್ಷಿತಾ ಪ್ರೇಮ್ ತಮ್ಮ ರಾಣಾ. ರಾಣಾ ಎಂಟ್ರಿ ಕೊಡುತ್ತಿರುವ ಚಿತ್ರದಲ್ಲಿ ಇರೋದು ಕಾಲ್ಪನಿಕ ಕಥೆನಾ..? ಈ ಪ್ರಶ್ನೆಗೆ ಪ್ರೇಮ್ ಕೊಟ್ಟಿರುವ ಉತ್ತರ ನೋ.

  ಏಕ್ ಲವ್ ಯಾ ಚಿತ್ರದಲ್ಲಿರೋದು ನೈಜ ಕಥೆಯಂತೆ. ರಿಯಲ್ ಲೈಫಲ್ಲಿ ಅವರಿಬ್ಬರೂ ಮದುವೆಯಾಗಿದ್ದಾರೆ. ಖುಷಿಯಾಗಿದ್ದಾರೆ. ಆದರೆ.. ಆ ಮದುವೆಯವರೆಗೆ ಸಾಗಿ ಬಂದ ಅವರಿಬ್ಬರ ಪ್ರೀತಿ ರಣರೋಚಕವಾಗಿದೆ. ಅದನ್ನು ಪ್ರೇಮ್ ಇನ್ನೊಂದಿಷ್ಟು ರೋಚಕವಾಗಿ ತೆರೆಗೆ ತರುತ್ತಿದ್ದಾರೆ.

  ಎಂದಿನಂತೆ ಪ್ರೇಮ್ ನಿರ್ದೇಶನದ ಚಿತ್ರವಾದ್ದರಿಂದ ಮ್ಯೂಸಿಕ್ ಬೊಂಬಾಟ್. ಅರ್ಜುನ್ ಜನ್ಯಾ ಮತ್ತೊಮ್ಮೆ ಸೆನ್ಸೇಷನ್ ಸೃಷ್ಟಿಸುವ ಸುಳಿವು ಕೊಟ್ಟಿದ್ದಾರೆ. ಸದ್ಯಕ್ಕೆ ಆ ಪ್ರೇಮಿಗಳು ಯಾರು..? ಎಲ್ಲಿದ್ದಾರೆ..? ಈ ಯಾವ ವಿಷಯವನ್ನೂ ಪ್ರೇಮ್ ಹೇಳಿಲ್ಲ. ವೇಯ್ಟ್ ಮಾಡಬೇಕು. ನೋಡಬೇಕು. ಅಷ್ಟೆ.

 • ಲಿಪ್ ಲಾಕ್.. ಸ್ಮೋಕಿಂಗ್.. ಏಕ್ ಲವ್ ಯಾ ಟೀಸರ್ ಸೆನ್ಸೇಷನ್

  ek love ya teaser sensation

  ಚಿತ್ರರಸಿಕರು ಕಾಯುತ್ತಿದ್ದ ಜೋಗಿ ಪ್ರೇಮ್ ಅವರ ಏಕ್ ಲವ್ ಯಾ ಟೀಸರ್, ನಿರೀಕ್ಷೆಯಂತೆಯೇ ಸಂಚಲನ ಸೃಷ್ಟಿಸಿದೆ. ಟೀಸರ್ ಶುರುವಾಗುವುದೇ ಹೀರೋ ರಾಣಾ ಜೊತೆ ರಚಿತಾ ರಾಮ್ ಸಿಗರೇಟ್ ಹಚ್ಚಿಕೊಳ್ಳೋದ್ರಿಂದ. ಮೊದಲ ಫ್ರೇಮ್ನಲ್ಲೇ ಬೆಚ್ಚಿ ಬೀಳಿಸೋ ಪ್ರೇಮ್, ಭಗ್ನ ಪ್ರೇಮಿಯೊಬ್ಬನ ಹತಾಶೆಯನ್ನು ಹೇಳಿಸುತ್ತಾರೆ.

  ಮೇಲ್ನೋಟಕ್ಕೆ ಇದೊಂದು ತ್ರಿಕೋನ ಪ್ರೇಮ ಕಥೆ ಇರಬಹುದು ಎನ್ನಿಸಿದರೂ.. ಪ್ರೇಮ್ ಮತ್ತೇನೋ ಇದೆ ಎನ್ನುವ ಕುತೂಹಲವನ್ನಂತೂ ಸೃಷ್ಟಿಸುತ್ತಾರೆ. ಎಕ್ಸ್ ಕ್ಯೂಸ್ ಮಿ ನಂತರ ಪ್ರೇಮ್ ಹೇಳುತ್ತಿರುವ ಫಸ್ಟ್ ಲವ್ ಸ್ಟೋರಿ ಇದು.

  ರಕ್ಷಿತಾ ಅವರ ಸೋದರ ರಾಣಾ ಆರಂಗ್ರೇಟಂ ಚಿತ್ರ ಏಕ್ ಲವ್ ಯಾ. ರಕ್ಷಿತಾ ಪ್ರೇಮ್ ಅವರೇ ನಿರ್ಮಾಪಕಿ. ರಾಣಾ ಜೊತೆ ರೀಷ್ಮಾ ಮತ್ತು ರಚಿತಾ ಇಬ್ಬರೂ ಇದ್ದಾರೆ. ಕೊನೆಯಲ್ಲಿ ಲಿಪ್ ಲಾಕ್ ತೋರಿಸಿ ಮೈ ಬೆಚ್ಚಗಾಗಿಸ್ತಾರೆ ಪ್ರೇಮ್. ಅರ್ಜುನ್ ಜನ್ಯಾ ಮತ್ತೊಂದು ಮ್ಯೂಸಿಕಲ್ ಹಿಟ್ ಕೊಡುವ ಸಿಗ್ನಲ್ ಕೊಟ್ಟಿದ್ದಾರೆ.

 • ಸಂಕ್ರಾಂತಿಗೆ ರಕ್ಷಿತಾ ಪ್ರೇಮ್ ತಮ್ಮನ ಸಿನಿಮಾ

  ಸಂಕ್ರಾಂತಿಗೆ ರಕ್ಷಿತಾ ಪ್ರೇಮ್ ತಮ್ಮನ ಸಿನಿಮಾ

  ಜೋಗಿ ಪ್ರೇಮ್ ನಿರ್ದೇಶನದ ಹೊಸ ಲವ್ ಸ್ಟೋರಿ ಏಕ್ ಲವ್ ಯಾ. ಇದು ರಕ್ಷಿತಾ ಪ್ರೇಮ್ ಸೋದರ ರಾಣಾ ಅಭಿನಯದ ಮೊದಲ ಸಿನಿಮಾ. ಎಕ್ಸ್ ಕ್ಯೂಸ್ ಮಿ ನಂತರ ಪ್ರೇಮ್ ಡೈರೆಕ್ಟ್ ಮಾಡಿರೋ ಅಪ್ಪಟ ಲವ್ ಸ್ಟೋರಿ. ರಕ್ಷಿತಾ ಪ್ರೇಮ್ ತಮ್ಮನ ಚಿತ್ರದ ಹಾಡುಗಳು ಈಗಾಗಲೇ ಪ್ರೇಮಿಗಳ ಎದೆಯಲ್ಲಿ ಗುಂಯ್ಗುಟ್ಟುತ್ತಿವೆ. ಚಿತ್ರಕ್ಕೀಗ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಸಂಕ್ರಾಂತಿಗೆ ಅರ್ಥಾತ್ ಜನವರಿ 14ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

  ರಾಣಾ ಎದುರು ರಚಿತಾ ರಾಮ್ ಮತ್ತು ರೀಷ್ಮಾ ನಾಣಯ್ಯ ನಾಯಕಿಯರು. ರಚಿತಾ ರಾಮ್ ಇದೇ ಮೊದಲ ಬಾರಿಗೆ ಲಿಪ್ ಲಾಕ್ ಮಾಡಿರೋ ಚಿತ್ರದಲ್ಲಿ ರಕ್ಷಿತಾ ಕೂಡಾ ಹೆಜ್ಜೆ ಹಾಕಿದ್ದಾರೆ. ಒಟ್ಟಿನಲ್ಲಿ ಸಲಗ, ಕೋಟಿಗೊಬ್ಬ-3ಯಿಂದ ಶುರುವಾದ ಸಿನಿಮಾ ಹಬ್ಬ.. ಸಂಕ್ರಾಂತಿಗೆ ಇನ್ನೊಂದು ಮಜಲು ತಲುಪಲಿದೆ.