ಈಗ, ಸುದೀಪ್ ವೃತ್ತಿ ಜೀವನದ ಮೈಲುಗಲ್ಲು. ರಾಜಮೌಳಿ ನಿರ್ದೇಶನದ ಈಗ ಜಗತ್ತಿನಾದ್ಯಂತ ಸುದ್ದಿ ಮಾಡಿತ್ತು. ಸುದೀಪ್, ಇಡೀ ಭಾರತದಲ್ಲಿ ಸ್ಟಾರ್ ಆದರು. ಆ ಚಿತ್ರದಲ್ಲಿ ಸುದೀಪ್ ಪ್ರತಿನಾಯಕನ ಪಾತ್ರ ಮಾಡಿ ಮಿಂಚಿದ್ದರು. ಈಗ ಚಿತ್ರದಲ್ಲಿ ಸುದೀಪ್ ವಿಲನ್ ಆದರೆ, ಈಗ ಆಗಿದ್ದುದು ನಾನಿ.ಅವರಿಬ್ಬರೂ ಈಗ 7 ವರ್ಷಗಳ ನಂತರ ಮತ್ತೊಮ್ಮೆ ಮುಖಾಮುಖಿಯಾಗುತ್ತಿದ್ದಾರೆ.
ಪೈಲ್ವಾನ್ ಬಿಡುಗಡೆ ಸಮಯದಲ್ಲೇ ನಾನಿ ನಟಿಸಿರುವ ಗ್ಯಾಂಗ್ ಲೀಡರ್ ರಿಲೀಸ್ ಆಗುತ್ತಿದೆ. ಪೈಲ್ವಾನ್ ತೆಲುಗಿನಲ್ಲೂ ಬರುತ್ತಿರುವುದರಿಂದ ಬಾಕ್ಸಾಫೀಸಿನಲ್ಲಿ ಸುದೀಪ್ ಪೈಲ್ವಾನ್ ಮತ್ತು ನಾನಿಯ ಗ್ಯಾಂಗ್ ಲೀಡರ್ ಸ್ಪರ್ಧಿಸಲೇಬೇಕು. ಸುದೀಪ್ ಅವರಂತೆಯೇ ನಾನಿಗೂ ತೆಲುಗಿನಲ್ಲಿ ದೊಡ್ಡ ಮಾರ್ಕೆಟ್ ಇದೆ. ಒನ್ಸ್ ಎಗೇಯ್ನ್ ಈಗ ಕೃಪೆ.
ಈ ಮುಖಾಮುಖಿಯಲ್ಲಿ ಯಾರು ಗೆಲ್ತಾರೆ..? ಪೈಲ್ವಾನ್ ಗೆಲ್ಲಲಿ ಎನ್ನುವುದು ಕಿಚ್ಚನ ಅಭಿಮಾನಿಗಳ ಆಸೆ. ಅದಕ್ಕೆ ತಕ್ಕಂತೆ ನಿರ್ದೇಶಕ ಕೃಷ್ಣ, ಚಿತ್ರದ ಟ್ರೇಲರ್, ಹಾಡುಗಳ ಮೂಲಕ ದೊಡ್ಡ ಸೆನ್ಸೇಷನ್ ಸೃಷ್ಟಿಸಿದ್ದಾರೆ. ನಿರ್ಮಾಪಕಿ ಸ್ವಪ್ನಾ ಕೃಷ್ಣ ಚಿತ್ರವನ್ನು ಅದ್ಭುತವಾಗಿ ಪ್ರಮೋಟ್ ಮಾಡಿದ್ದಾರೆ. ಇದೆಲ್ಲದರ ಜೊತೆಗೆ ಸುದೀಪ್ಗೆ ರಾಜಮೌಳಿ ಹಾರೈಕೆಯೂ ಇದೆ. ಪೈಲ್ವಾನ್ ಗೆಲ್ಲಲಿ.