ಕೆಡಿ ಚಿತ್ರದ ಚಿತ್ರೀಕರಣ ವೇಳೆ ಅವಘಡ ಸಂಭವಿಸಿದೆ. ಬಾಂಬ್ ಬ್ಲಾಸ್ಟ್ ದೃಶ್ಯದ ಚಿತ್ರೀಕರಣ ವೇಳೆ ನಟ ಸಂಜಯ್ ದತ್ ಅವರು ಗಾಯಗೊಂಡಿದ್ದಾರೆ. ದತ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದುಕೊಂಡ ಸಂಜಯ್ ದತ್ ಮುಂಬೈಗೆ ವಾಪಸ್ ಆಗಿದ್ದಾರೆ. ದತ್ ಅವರ ಮುಖ, ಮೊಣಕೈಗೆ ಗಾಯಗಳಾಗಿವೆ. ಆತಂಕ ಪಡುವ ಅಗತ್ಯವೇನೂ ಇಲ್ಲ. ಗಾಯ ಸೀರಿಯಸ್ ಆಗಿಲ್ಲ. ಆದರೆ ತಾತ್ಕಾಲಿಕವಾಗಿ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ.
ಮಾಗಡಿ ರೋಡ್‍ನಲ್ಲಿ ಹಾಕಿರುವ ಸೆಟ್‍ನಲ್ಲಿ ಸಾಹಸ ನಿರ್ದೇಶಕ ರವಿವರ್ಮ ಸೆಟ್ ಹಾಕಿ ಚಿತ್ರೀಕರಣ ಮಾಡುತ್ತಿದ್ದರು. ಈ ವೇಳೆ ಬಾಂಬ್ ಸ್ಫೋಟದ ದೃಶ್ಯ ಚಿತ್ರೀಕರಣ ವೇಳೆ ಈ ಅಪಘಾತ ಸಂಭವಿಸಿದೆ. 1970ರ ಕಾಲಘಟ್ಟದ ಕಥೆಯಲ್ಲಿ ಸಂಜಯ್ ದತ್ ಪ್ರಮುಖ ವಿಲನ್ ರೋಲ್ ಮಾಡುತ್ತಿದ್ದಾರೆ.
ಘಟನೆಯ ಬಗ್ಗೆ ಸಂಜಯ್ ದತ್ ನಾನು ಗಾಯಗೊಂಡಿದ್ದೇವೆ ಎಂಬ ಸುದ್ದಿ ಹರದಾಡುತ್ತಿದೆ. ಆ ಸುದ್ದಿಗಳು ಸಂಪೂರ್ಣವಾಗಿ ಆಧಾರರಹಿತ, ನನಗೆ ಏನೂ ಆಗಿಲ್ಲ ದೇವರ ದಯೆಯಿಂದ ನಾನು ಆರೋಗ್ಯವಾಗಿದ್ದೇನೆ. ನಾನು ಕೆಡಿ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದೇನೆ, ನನ್ನ ದೃಶ್ಯಗಳನ್ನು ಚಿತ್ರೀಕರಿಸುವಾಗ ಚಿತ್ರತಂಡವು ಹೆಚ್ಚಿನ ಎಚ್ಚರಿಕೆ ವಹಿಸುತ್ತಿದೆ. ನನ್ನ ಆರೋಗ್ಯದ ಬಗ್ಗೆ ಕಾಳಜಿವಹಿಸಿ ವಿಚಾರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
. ಕಾರಿನಲ್ಲಿ ಬಾಂಬ್ ಬ್ಲಾಸ್ಟ್ ನ ದೃಶ್ಯದ ಚಿತ್ರೀಕರಣ ಮಾಡುವಾಗ ಸಂಜಯ್ ದತ್ ಅವರ ಕಣ್ಣಿಗೆ ಗ್ಲಾಸ್ ಸಿಡಿದಿದು ರಕ್ತ ಬಂದಿದೆ. ಕೂಡಲೇ ಪ್ರಥಮ ಚಿಕಿತ್ಸೆ ನೀಡಿ ಸಂಜಯ್ ದತ್ ಶೀಘ್ರವೇ ಮುಂಬೈಗೆ ಸ್ಥಳಾಂತರಿಸಲಾಗಿದ್ದು, ಸಂಜಯ್ ದತ್ ಸದ್ಯಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ಅವಘಡದ ಬಳಿಕ ಶೂಟಿಂಗ್ ಅನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ” ಎಂದಿದ್ದಾರೆ ಕೆಡಿ ಸಿನಿಮಾದ ಸಹ ನಿರ್ಮಾಪಕ ಸುಪ್ರೀತ್.
ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಚಿತ್ರದಲ್ಲಿ ಸಂಜಯ್ ದತ್, ರವಿಚಂದ್ರನ್, ಶಿಲ್ಪಾ ಶೆಟ್ಟಿ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್‍ನವರ ಕೆಡಿ ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ.