` raghuram dp, - chitraloka.com | Kannada Movie News, Reviews | Image

raghuram dp,

  • Missing Boy Review: Chitraloka Rating 3.5/5*

    missinf boy movie review

    Director Raghuram who was missing in action since his last venture, is back with a realistic subject this is time. Inspired by a real life incident of a man who came back to India with a purpose, ‘Missing Boy’ depicts the emotional journey of an NRI settled in Europe, who takes on journey in search of his biological parents.

    It is the tale which sets the movie apart from the regular commercial potboiler. While the content strikes the chord with the audience, the making and the performances of Gurunandan, Rangayana Raghu along with Ravi Shankar who steal the show as the journey continues with high hope on reaching desired destination.

    The first few minutes of sequences are set in Europe and the director has made good use of the locations, making it look beautiful on the big screen. It takes off when Gurunandan, the protagonist starts recollecting his childhood memories before he was lost in a train and eventually lands up in an orphanage in Bengaluru. However, unclear visuals haunts him before his father finally reveals giving him a clear picture of his past, that he is their adopted son! The next one and half an hour's is about his search for his parents back in Karnataka.

    Considering that it is the story which is the main hero of the film, the rest of it revolves around the central character. Keeping it close to reality, the film stays true to the core issue of a son who is desperately looking out for his parents. Rangayana Raghu along with Ravi Shankar gives the much needed boost to the ongoing search. In between, the maker has packed in the real values of life which one strives for.

    Do not miss this missing boy as the real climax will certainly leave you in tears.

  • Nani share 'Missing Boy' trailer

    nani share misiing boy trailer

    The trailer of Gurunandan's new film 'Missing Boy' was released by Sudeep recently. The trailer is getting appreciation not only from celebrities here, but also from actors from other film industry.

    Telugu actors Nani and Samantha who have very much liked the trailer of the film has shared the trailer in their twitter accounts. Both the actors have wished the team of 'Missing Boy' a huge success.

    'Missing Boy' has been censored with 'U' certificate and the film is all set to hit the screens on the 22nd of March. The film is directed by Raghuram and he has written the screenplay of the film based on a true incident narrated by a police officer.  The film stars Gurunandan, Archana Jayakrishnan, Rangayana Raghu, Ravishankar Gowda, Bhagirathi Bai Kadam and others.

  • ಕ್ಯೂಆರ್ ಕೋಡ್‍ನಲ್ಲಿ ಮಿಸ್ಸಿಂಗ್ ಬಾಯ್

    missing boy in qr code

    ಕ್ಯೂಆರ್ ಕೋಡ್ ಎಂದರೆ ಏನು..? ಈಗಿನ ಕಾಲದ ನೆಟ್ ಪ್ರವೀಣರಿಗೆ ಅದನ್ನು ಬಿಡಿಸಿ ಹೇಳಬೇಕಾದ ಅಗತ್ಯವೇನಿಲ್ಲ. ನೀವು ಪೇಟಿಎಂನಲ್ಲೋ.. ಭೀಮ್ ಆ್ಯಪ್‍ನಲ್ಲೋ ಹಣ ಟ್ರಾನ್ಸ್‍ಫರ್ ಮಾಡಬೇಕೆಂದರೆ, ಆ ಅಕೌಂಟ್‍ನ ಪುಟ್ಟದೊಂದು ಕೊಲಾಜ್ ಮಾದರಿಯ ಚಿತ್ರವನ್ನು ಸ್ಕ್ಯಾನ್ ಮಾಡುತ್ತೀರಿ ತಾನೇ.. ಅದನ್ನು ಕ್ಯೂಆರ್ ಕೋಡ್ ಅಂತಾರೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ, ಅದಕ್ಕೆ ಸಂಬಂಧಪಟ್ಟ ಖಾತೆ ಕಾಣಿಸಿಕೊಳ್ಳುತ್ತಲ್ಲ..

    ಹಾಗೆಯೇ.. ಮಿಸ್ಸಿಂಗ್ ಬಾಯ್ ಚಿತ್ರತಂಡದವರೂ ಒಂದು ಕೋಡ್ ಮಾಡಿದ್ದಾರೆ. ಈ ಕ್ಯೂಆರ್ ಕೋಡ್‍ನ್ನು ಸ್ಕ್ಯಾನ್ ಮಾಡಿದರೆ ಸಾಕು, ಚಿತ್ರದ ಎಲ್ಲ ವಿವರಗಳೂ, ಮಾಹಿತಿಗಳೂ, ಫೋಟೋಗಳೂ, ವಿಡಿಯೋಗಳು ಎಲ್ಲವೂ ಒಟ್ಟಿಗೇ ಸಿಗುತ್ತವೆ. ಸೋಷಿಯಲ್ ನೆಟ್‍ವರ್ಕುಗಳಲ್ಲಿ ಈ ಕ್ಯೂಆರ್ ಕೋಡ್ ಸಿಗುತ್ತಿದೆ.

    ಫಸ್ಟ್ ರ್ಯಾಂಕ್ ರಾಜು ಗುರುನಂದನ್ ಅಭಿನಯದ ಮಿಸ್ಸಿಂಗ್ ಬಾಯ್ ಸಿನಿಮಾ, ಚಿಕ್ಕಂದಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು ಎಲ್ಲೋ ಬೆಳೆದು ದೊಡ್ಡವರಾದವರು.. ಹೆತ್ತವರನ್ನು ಹುಡುಕಿಕೊಂಡು ಬರುವ ಕಥೆ ಹೊಂದಿದೆ. ರಘುರಾಮ್ ನಿರ್ದೇಶನದ ಸಿನಿಮಾ ಮುಂದಿನ ವಾರ ತೆರೆಗೆ ಬರುತ್ತಿದೆ.

  • ತಾಯಿ ಕಳೆದುಕೊಂಡವರು, ಅಮ್ಮನನ್ನು ಹುಡುಕುವ ಕಥೆ ಮಿಸ್ಸಿಂಗ್ ಬಾಯ್

    missing boy is based on real life inciden

    ಯಾವುದೋ ಕಾರಣಕ್ಕಾಗಿ, ತಾಯಿಯನ್ನು ಕಳೆದುಕೊಳ್ಳೋ ಮಕ್ಕಳು. 30 ವರ್ಷ ಕಳೆದ ಮೇಲೆ ತಾಯಿಯನ್ನು ಹುಡುಕಿಕೊಂಡು ಬರುವ ಮಗ. ಇದು ಹುಬ್ಬಳ್ಳಿಯಲ್ಲಿ ನಡೆದಿದ್ದ ರಿಯಲ್ ಸ್ಟೋರಿ. ಅಂಥಾದ್ದೊಂದು ಪ್ರಕರಣವನ್ನು ಕೇವಲ ಮಾನವೀಯತೆ ಮೇಲೆ ಹುಡುಕಿಕೊಟ್ಟಿದ್ದ ಪೊಲೀಸ್ ಅಧಿಕಾರಿಯ ಹೆಸರು ಲವಕುಮಾರ್. ಅದೇ ರಿಯಲ್ ಕಥೆಯನ್ನು ಮಿಸ್ಸಿಂಗ್ ಬಾಯ್ ಎಂದು ಸಿನಿಮಾ ಮಾಡಿದ್ದಾರೆ ನಿದೇಶಕ ರಘುರಾಮ್.

    ಗುರುನಂದನ್ ತಾಯಿಯನ್ನು ಹುಡುಕುವ ಮಗನಾಗಿ ನಟಿಸಿದ್ದಾರೆ. ರಿಯಲ್ ಕಥೆಯಲ್ಲಿ ಹೇಗೆ.. ಕಥೆಯ ಜಾಡು ಸಾಗುತ್ತದೋ.. ಅದೇ ಜಾಡಿನಲ್ಲಿ ಚಿತ್ರಕಥೆ ಕಟ್ಟಿದ್ದಾರೆ ರಘುರಾಮ್. ಎಲ್ಲಿಯೂ ಇದು ವಾಸ್ತವಕ್ಕೆ ದೂರ ಎನಿಇಸುವುದಿಲ್ಲ ಎಂದು ಭರವಸೆ ಕೊಡ್ತಾರೆ ರಘುರಾಮ್

  • ತಾಯಿನೇ ಎಲ್ಲ.. ಬದಲಾಗೋದಿಲ್ಲ.. ಮಿಸ್ಸಿಂಗ್ ಬಾಯ್ ಜೋಗಿ ಹಾಡು

    missing boy film gets jogi song

    ಜೋಗಿ ಚಿತ್ರದ ಸೂಪರ್ ಹಿಟ್ ಹಾಡು ಬೇಡುವೆನು ವರವನ್ನು ಕೊಡು ತಾಯಿ ಜನ್ಮವನು ಕಡೆತನಕ ಮರೆಯಲ್ಲ ಜೋಗಿ.. ಆ ಹಾಡು ಹಿಟ್ ಅಷ್ಟೇ ಅಲ್ಲ, ನೋಡುಗರ ಕಣ್ಣಾಲಿಗಳನ್ನು ಒದ್ದೆ ಮಾಡುವ ಶಕ್ತಿ ಆ ಹಾಡು ಮತ್ತು ಸಾಹಿತ್ಯಕ್ಕಿದೆ. ಹಾಡಿನ ಆ ತುಣುಕನ್ನು ಮಿಸ್ಸಿಂಗ್ ಬಾಯ್ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ತಂದೆ-ತಾಯಿಯಿದ್ದರೂ ಅನಾಥನಾಗುವ ಹುಡುಗ, ದೊಡ್ಡವನಾದ ಮೇಲೆ ಹಳೆಯ ನೆನಪುಗಳನ್ನು ಬೆನ್ನತ್ತಿಕೊಂಡು ಹೆತ್ತವರನ್ನು ಹುಡುಕುವುದೇ ಚಿತ್ರದ ಕತೆ. 

    ಚಿತ್ರದ ಕಥೆಗೆ ಹೇಳಿ ಮಾಡಿಸಿದಂತಿರುವ ಹಾಡನ್ನು ನಿರ್ದೇಶಕ ರಘುರಾಮ್ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಚಿತ್ರದ ತೀವ್ರತೆಯನ್ನು ಈ ಹಾಡು ಇನ್ನಷ್ಟು ಹೆಚ್ಚಿಸುತ್ತೆ. ಚಿತ್ರದ ಬಗ್ಗೆ ಅಪಾರ ಮೆಚ್ಚುಗೆಯ ಮಾತು ಕೇಳಿಬರುತ್ತಿವೆ. ಈ ಮಾತುಗಳು ರಘುರಾಮ್, ಕೊಲ್ಲ ಪ್ರವೀಣ್ ಅವರಿಗಷ್ಟೇ ಅಲ್ಲ, ಕಿಚ್ಚ ಸುದೀಪ್, ನಿರ್ದೇಶಕ ಸಂತೋಷ್ ಆನಂದ್‍ರಾಮ್, ಕಾರ್ತಿಕ್ ಗೌಡ ಮೊದಲಾದವರಿಗೆಲ್ಲ ಖುಷಿ ಕೊಟ್ಟಿದೆ.

  • ಮಿಸ್ಸಿಂಗ್ ಬಾಯ್ ಚಿತ್ರಕ್ಕೆ ಸಿದ್ದರಾಮಯ್ಯ ಶುಭಾಶಯ

    siddaramaiah wishes best wishes to missing boy team

    ಮಿಸ್ಸಿಂಗ್ ಬಾಯ್ ಚಿತ್ರ, ನಿಧಾನವಾಗಿ ಚಿತ್ರರಸಿಕರವನ್ನು ಆವರಿಸಿಕೊಳ್ಳುತ್ತಿದೆ. ನೈಜ ಘಟನೆ ಆಧರಿತ ಕಥೆ ಹೊಂದಿರುವ ಮಿಸ್ಸಿಂಗ್ ಬಾಯ್ ಸಿನಿಮಾ, ಕಿಚ್ಚ ಸುದೀಪ್, ನಾನಿ, ಶಿವಣ್ಣ ಮೊದಲಾದವರ ಗಮನ ಸೆಳೆದಿದೆ. ಈಗ ರಾಜಕಾರಣಿಗಳ ಮೆಚ್ಚುಗೆಗೂ ಪಾತ್ರವಾಗಿದೆ.

    ಚುನಾವಣೆಯ ಬಿಡುವಿಲ್ಲದ ಶೆಡ್ಯೂಲ್ ನಡುವೆ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ ಸಿದ್ದರಾಮಯ್ಯ. ಯಾವುದೇ ಚಿತ್ರ, ಸಮಾಜಕ್ಕೆ ಒಳ್ಳೆ ಸಂದೇಶ ನೀಡಬೇಕು. ಮಿಸ್ಸಿಂಗ್ ಬಾಯ್ ಚಿತ್ರಕ್ಕೆ ಶುಭವಾಗಲಿ ಎಂದಿದ್ದಾರೆ.

    ಸಿದ್ದು ಒಬ್ಬರೇ ಅಲ್ಲ, ಉಪಮುಖ್ಯಮಂತ್ರಿ ಪರಮೇಶ್ವರ್ ಕೂಡಾ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ರಘುರಾಮ್ ನಿರ್ದೇಶನದ ಚಿತ್ರದಲ್ಲಿ ಗುರುನಂದನ್, ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೇ 22ಕ್ಕೆ ಚಿತ್ರ ರಿಲೀಸ್ ಆಗುತ್ತಿದೆ.

  • ಮಿಸ್ಸಿಂಗ್ ಬಾಯ್ ನಿರ್ಮಾಪಕರ ಇಂಟ್ರೆಸ್ಟಿಂಗ್ ಕಹಾನಿ

    missing boy producer happy with the movie

    ಮಿಸ್ಸಿಂಗ್ ಬಾಯ್ ಚಿತ್ರದ ನಿರ್ದೇಶಕ ರಘುರಾಮ್. ನಾಯಕ ಗುರುನಂದನ್. ನಾಯಕಿ ಅರ್ಚನಾ. ರಂಗಾಯಣ ರಘು ಅತ್ಯಂತ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹರಿಕೃಷ್ಣ ಮ್ಯೂಸಿಕ್ಕಿದೆ. ನೈಜ ಘಟನೆ ಆಧಾರಿತ ಚಿತ್ರದ ನಿರ್ಮಾಪಕ ಕೊಲ್ಲ ಪ್ರವೀಣ್.

    ಕೊಲ್ಲ ಪ್ರವೀಣ್ ಈ ಮೊದಲು ಕನ್ನಡದಲ್ಲಿ ಎರಡು ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ. ಸುದೀಪ್ ಅಭಿನಯದ ಮಾಣಿಕ್ಯ ಹಾಗೂ ಪುನೀತ್ ಅಭಿನಯದ ಪವರ್ ಸಿನಿಮಾ. ಗೋಲಿಸೋಡ ಎಂಬ ಪ್ರಯೋಗಾತ್ಮಕ ಚಿತ್ರವನ್ನೂ ನಿರ್ಮಿಸಿರುವ ಕೊಲ್ಲ ಪ್ರವೀಣ್, ಈ ಚಿತ್ರವನ್ನು ನಿರ್ಮಿಸಿದ್ದರ ಹಿಂದೆಯೂ ಒಂದು ಕಾರಣ ಇದೆ.

    ಕಥೆ ಕೇಳಿದಾಗ ನನಗೆ ಇಷ್ಟವಾಗಿದ್ದು, ಚಿತ್ರದ ಭಾವನಾತ್ಮಕ ಸನ್ನಿವೇಶಗಳು. ರಘುರಾಮ್ ನನಗೆ ಹೇಗೆ ಕಥೆ ಹೇಳಿದ್ದರೋ, ಅದೇ ರೀತಿ ಚಿತ್ರ ಮಾಡಿಕೊಟ್ಟಿದ್ದಾರೆ. ಚಿತ್ರವನ್ನು ಒಬ್ಬ ಸಾಮಾನ್ಯ ಪ್ರೇಕ್ಷಕನಂತೆ ನೋಡಿದಾಗ ನನಗೆ ಬಹಳ ಇಷ್ಟವಾಯಿತು. ಖಂಡಿತಾ ಈ ಚಿತ್ರ ಜನ ಮೆಚ್ಚುಗೆ ಗಳಿಸುತ್ತೆ ಎಂದಿದ್ದಾರೆ ಪ್ರವೀಣ್.