ಲಂಡನ್‍ನಲ್ಲಿ ಲಂಬೋದರ, ಸಿಂಪಲ್ ಸುನಿ ಬಳಿ ಸಹನಿರ್ದೇಶಕರಾಗಿದ್ದ ರಾಜ್ ಸೂರ್ಯ ನಿರ್ದೇಶನದ ಮೊದಲ ಸಿನಿಮಾ. ಐoಟಿಜoಟಿ sಛಿಡಿeeಟಿs ಬ್ಯಾನರ್‍ನಲ್ಲಿ ಲಂಡನ್‍ನಲ್ಲಿರುವ ಭಾರತೀಯರೆಲ್ಲ ಸೇರಿ ನಿರ್ಮಿಸಿರುವ ಚಿತ್ರವಿದು.
ಸ್ವಿನ್‍ಡನ್ ಸಂತು, ಶೃತಿ ಪ್ರಕಾಶ್, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ಸಾಧು ಕೋಕಿಲ, ರಘು ರಾಮನಕೊಪ್ಪ ನಟಿಸಿರುವ ಚಿತ್ರ ಲಂಡನ್‍ನಲ್ಲಿ ಲಂಬೋದರ.
ಹೊಸಬರ ಚಿತ್ರವಾದರೂ, ಸ್ಪೆಷಲ್ಲಾಗಿಯೇ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿರುವ ಲಂಬೋದರನ ಟೀಸರ್‍ಗೆ 5 ಲಕ್ಷ ವ್ಯೂ ಸಿಕ್ಕಿದೆ. ಕಿಚ್ಚ ಸುದೀಪ್ ಕೂಡಾ ನೋಡಿ, ಮೆಚ್ಚಿರುವ ಲಂಡನ್‍ನಲ್ಲಿ ಲಂಬೋದರ ಚಿತ್ರದ ಟೀಸರ್ ಪ್ರೇಕ್ಷಕರಿಗೂ ಇಷ್ಟವಾಗಿದೆ.
ಪ್ರಣವಣ್ ಸಂಗೀತ ನಿರ್ದೇಶನದ ಹಾಡುಗಳು ಫೆಬ್ರವರಿ 22ರಂದು ರಿಲೀಸ್ ಆಗುತ್ತಿವೆ.