` kgf chapter 2, - chitraloka.com | Kannada Movie News, Reviews | Image

kgf chapter 2,

 • ಕೆಜಿಎಫ್ 2 ಆದ ಮೇಲೆ ಗಾಳಿಪಟ 2 ರಿಲೀಸ್..?

  ಕೆಜಿಎಫ್ 2 ಆದ ಮೇಲೆ ಗಾಳಿಪಟ 2 ರಿಲೀಸ್..?

  ಗಾಳಿಪಟದ ನಂತರ ಯೋಗರಾಜ್ ಭಟ್, ಗಣೇಶ್, ದಿಗಂತ್ ಪುನರ್ ಮಿಲನವಾಗಿರೋ ಸಿನಿಮಾ ಗಾಳಿಪಟ 2. ಈ ಗಾಳಿಪಟದಲ್ಲಿ ಇವರ ಜೊತೆ ಲೂಸಿಯಾ ಪವನ್ ಕುಮಾರ್ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್ ನಾಯಕಿಯರಾಗಿರೋ ಚಿತ್ರ ಕೊರೊನಾದಿಂದಾಗಿ ತಡವಾಗುತ್ತಿದೆ. ಈಗ ಅಲ್ಲಿಂದ ಗುಡ್ ನ್ಯೂಸ್ ಹೊರಬಂದಿದ್ದು, ಏಪ್ರಿಲ್ ಕೊನೆಯಲ್ಲಿ ಚಿತ್ರ ರಿಲೀಸ್ ಆಗುವ ಸಾಧ್ಯತೆ ಇದೆ.

  ಏಪ್ರಿಲ್ 14ಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗುತ್ತಿದ್ದು, ಅದು ಮುಗಿದ ಮೇಲೆಯೇ ಚಿತ್ರದ ಬಿಡುಗಡೆಗೆ ಯೋಜಿಸಿದ್ದಾರೆ ನಿರ್ಮಾಪಕ ರಮೇಶ್ ರೆಡ್ಡಿ. ಭಟ್ಟರ ಈ ಚಿತ್ರದಲ್ಲಿ ಅನಂತನಾಗ್ ಕನ್ನಡ ಮೇಷ್ಟರು. ಅರ್ಜುನ್ ಜನ್ಯಾ ಸಂಗೀತವಿದೆ.

 • ಕೆಜಿಎಫ್ 2 ಒಪ್ಪಿದ್ದೇಕೆ..? - ರವೀನಾ ಟಂಡನ್ ಕೊಟ್ಟ ಕಾರಣ ಇದು

  raveena tandon talks about her role in kgf chapter 2

  ಕೆಜಿಎಫ್ ಚಾಪ್ಟರ್ 2, ರವೀನಾ ಟಂಡನ್ ಬಹಳ ವರ್ಷಗಳ ನಂತರ ಕನ್ನಡದಲ್ಲಿ ಅಭಿನಯಿಸುವಂತೆ ಮಾಡಿದ ಸಿನಿಮಾ. 1999ರಲ್ಲಿ ಬಂದಿದ್ದ ಸಿನಿಮಾ ಸೂಪರ್ ಹಿಟ್. ಆ ಚಿತ್ರದಲ್ಲಿ ಕೀರ್ತಿಯಾಗಿ ನಟಿಸಿದ್ದರು ರವೀನಾ ಟಂಡನ್. ಅದಾದ ನಂತರ 20 ವರ್ಷಗಳ ಬಳಿಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ, ಕೆಜಿಎಫ್ ಚಾಪ್ಟರ್ 2 ಮೂಲಕ.

  ನಿರ್ದೇಶಕ ಪ್ರಶಾಂತ್ ನೀಲ್ ನನಗೆ ಮೊದಲು ಕಥೆಯ ಒನ್ ಲೈನ್ ಹೇಳಿದ್ದರು. ನಂತರ ಸ್ಕ್ರಿಪ್ಟ್ ಮತ್ತು ಪಾತ್ರವನ್ನು ವಿವರಿಸಿದ್ದರು. ಆಗಿನ್ನೂ ಕೆಜಿಎಫ್ ಚಾಪ್ಟರ್ 1 ಬಂದಿರಲಿಲ್ಲ. ಅದಾದ ಮೇಲೆ ಕೆಜಿಎಫ್ ನೋಡಿದೆ. ಕಥೆ, ಪಾತ್ರ ಇಷ್ಟವಾಯ್ತು. ಚಿತ್ರದಲ್ಲಿ ನನ್ನದು ಅತ್ಯಂತ ಸ್ಟ್ರಾಂಗ್ ಕ್ಯಾರೆಕ್ಟರ್. ಹೀಗಾಗಿ ಒಪ್ಪಿಕೊಂಡೆ ಎಂದಿದ್ದಾರೆ ರವೀನಾ ಟಂಡನ್.

  1999ರಲ್ಲಿ ಉಪೇಂದ್ರ ಚಿತ್ರ ಬಂದಾಗ ಅದು ಆಗಿನ ಕಾಲಕ್ಕೆ ತುಂಬಾ ಫಾರ್‍ವರ್ಡ್ ಇತ್ತು. ಹಲವು ವರ್ಷಗಳ ಮುಂದಿನ ಆಲೋಚನೆ ಆ ಚಿತ್ರದಲ್ಲಿತ್ತು. ಈಗ ಕೆಜಿಎಫ್ ಕೂಡಾ ಅಷ್ಟೆ ಎಂದಿದ್ದಾರೆ ರವೀನಾ ಟಂಡನ್. ಶೂಟಿಂಗ್ ಶುರುವಾಗಿದೆ.

   

 • ಕೆಜಿಎಫ್ 2 ಕ್ಲೈಮಾಕ್ಸ್ ಸೀನ್ ಬಜೆಟ್ ಎಷ್ಟು..?

  ಕೆಜಿಎಫ್ 2 ಕ್ಲೈಮಾಕ್ಸ್ ಸೀನ್ ಬಜೆಟ್ ಎಷ್ಟು..?

  ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿದ್ದು 2018ರ ಕೊನೆಯಲ್ಲಿ. ನಂತರ 2019ರ ವರ್ಷವಿಡೀ ಸದ್ದು ಮಾಡಿದ ಸಿನಿಮಾ ದುಡಿದದ್ದು 300 ಕೋಟಿಗೂ ಹೆಚ್ಚು. ಕನ್ನಡವೊಂದರಲ್ಲೇ 100 ಕೋಟಿಗೂ ಹೆಚ್ಚು ಸಂಪಾದನೆ ಮಾಡಿದ ಸಿನಿಮಾ ಅದು. ಈಗ ಕೆಜಿಎಫ್ ಚಾಪ್ಟರ್ 2 ಬರ್ತಾ ಇದೆ. ಟೀಸರ್ ಹೊರಬಿದ್ದಿದೆ.

  ತಾರಾಗಣ ಮೊದಲ ಭಾಗಕ್ಕಿಂತಲೂ ಭರ್ಜರಿಯಾಗಿದೆ. ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಎಂಟ್ರಿಯಾಗಿದೆ. ಹೀಗಾಗಿ ಸಹಜವಾಗಿಯೇ ಚಿತ್ರದ ಬಜೆಟ್ ಮತ್ತು ವೇಯ್ಟೇಜ್ ಎರಡೂ ಜಾಸ್ತಿಯಾಗಿದೆ. ಒಂದು ಮೂಲದ ಪ್ರಕಾರ ಕೆಜಿಎಫ್ ಚಾಪ್ಟರ್ 2ಗಾಗಿ ಚಿತ್ರತಂಡ ಖರ್ಚು ಮಾಡಿರೋದು 100 ಕೋಟಿಗೂ ಹೆಚ್ಚು. ವಿಚಿತ್ರ ಮತ್ತು ವಿಶೇಷವೆಂದರೆ ಕೆಜಿಎಫ್ ಚಾಪ್ಟರ್ 1 ಚಿತ್ರೀಕರಣದ ವೇಳೆಯಲ್ಲೇ 2ನೇ ಭಾಗದ ಬಹುತೇಕ ಭಾಗಗಳ ಚಿತ್ರೀಕರಣವಾಗಿತ್ತು. ಹೀಗಿದ್ದರೂ 2ನೇ ಭಾಗದ ಬಾಕಿ ಚಿತ್ರೀಕರಣದ ಬಜೆಟ್ 100 ಕೋಟಿ ದಾಟಿದೆಯಂತೆ.

  ಚಿತ್ರದ ಅತಿ ದೊಡ್ಡ ಖರ್ಚು ಚಿತ್ರದ ಕ್ಲೈಮಾಕ್ಸ್. ಸಂಜಯ್ ದತ್ ಮತ್ತು ಯಶ್ ಮಧ್ಯೆ ನಡೆಯೋ ಅದೊಂದು ಕ್ಲೈಮಾಕ್ಸ್ ದೃಶ್ಯಕ್ಕಾಗಿ 12 ಕೋಟಿ ಖರ್ಚು ಮಾಡಿದ್ದಾರಂತೆ ವಿಜಯ್ ಕಿರಗಂದೂರು. ಪ್ರಶಾಂತ್ ನೀಲ್ ಕಲ್ಪನೆಯಂತೆ ಆ ದೃಶ್ಯ ಅದ್ಭುತವಾಗಿ ಮೂಡಿಬಂದಿದೆಯಂತೆ.

  ಕನ್ನಡದಲ್ಲಿ 12 ಕೋಟಿಯಲ್ಲಿ ಅದ್ಧೂರಿ ಚಿತ್ರವನ್ನೇ ರೆಡಿ ಮಾಡುತ್ತಾರೆ. ಅಂಥಾದ್ದರಲ್ಲಿ ಕನ್ನಡದ ಬಹು ನಿರೀಕ್ಷಿತ ಚಿತ್ರವೊಂದರ ಕ್ಲೈಮಾಕ್ಸ್ ದೃಶ್ಯದ ಚಿತ್ರೀಕರಣಕ್ಕೇ 12 ಕೋಟಿ ಸುರಿದಿದ್ದಾರೆ ಎಂದರೆ.. ಆ ಸೀನ್ ಹೇಗಿರಬೇಕು..

 • ಕೆಜಿಎಫ್ 2 ಟೀಸರ್ ಹೊಸ ದಾಖಲೆ

  ಕೆಜಿಎಫ್ 2 ಟೀಸರ್ ಹೊಸ ದಾಖಲೆ

  ಕೆಜಿಎಫ್ ಮುಟ್ಟಿದ್ದೆಲ್ಲ ದಾಖಲೆಯಾಗುತ್ತಿದೆ. ಅದಕ್ಕೆ ಸಾಕ್ಷಿ ಸರಿಯಾಗಿ 10 ತಿಂಗಳ ಹಿಂದೆ ರಿಲೀಸ್ ಆಗಿದ್ದ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಲೇ ಇದೆ.

  ಈಗ ಟೀಸರ್ ನೋಡಿದವರ ಸಂಖ್ಯೆ ಎರಡೂಕಾಲು ಕೋಟಿ ದಾಟಿದೆ. ಟೀಸರ್‍ಗೆ ಸಿಕ್ಕಿರುವ ಲೈಕ್ಸ್ ಸಂಖ್ಯೆ 90 ಲಕ್ಷ ದಾಟಿದೆ. ಅಂದಹಾಗೆ ಇದು ಕೇವಲ ಹೊಂಬಾಳೆ ಫಿಲ್ಮ್ಸ್‍ನ ಅಧಿಕೃತ ಪೇಜ್‍ನ ಸಂಖ್ಯೆ ಮಾತ್ರ. ಅದನ್ನು ಬಿಟ್ಟು ಬೇರೆ ಕಡೆ ನೋಡಿರುವವರ ಸಂಖ್ಯೆಯನ್ನು ಇಲ್ಲಿ ಲೆಕ್ಕಕ್ಕೇ ತೆಗೆದುಕೊಂಡಿಲ್ಲ.

  ವಿಜಯ್ ಕಿರಗಂದೂರು ನಿರ್ಮಾಣದ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ಮಾಪಕ. ಈ ಚಿತ್ರದ ಮೂಲಕ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಚಿತ್ರ ಏಪ್ರಿಲ್ 14ಕ್ಕೆ ರಿಲೀಸ್ ಆಗುತ್ತಿದೆ.

 • ಕೆಜಿಎಫ್ 2 ಟ್ರೇಲರ್ ಹಬ್ಬದ ಕಂಪ್ಲೀಟ್ ಹೈಲೈಟ್ಸ್

  ಕೆಜಿಎಫ್ 2 ಟ್ರೇಲರ್ ಹಬ್ಬದ ಕಂಪ್ಲೀಟ್ ಹೈಲೈಟ್ಸ್

  ಕೆಜಿಎಫ್ 2 ಟ್ರೇಲರ್ ರಿಲೀಸ್ ಆಯ್ತು. ಅದು ಹಬ್ಬವೇ ಸರಿ. ಕನ್ನಡದ ಒಂದು ಸಿನಿಮಾ ಈ ಮಟ್ಟಿಗೆ ಸಂಚಲನ ಸೃಷ್ಟಿಸಬೇಕು ಅನ್ನೋ ಕನಸು ನನಸಾದ ಕ್ಷಣವದು. ಆ ಒಟ್ಟಾರೆ ಸಂಚಲನವನ್ನು ಕಣ್ಣಲ್ಲಿ ನೋಡೋಕೂ ಹಬ್ಬ. ಕಿವಿಯಲ್ಲಿ ಕೇಳೋಕೆ ಆನಂದ. ಆ ಸಂಭ್ರಮದ ಹೈಲೈಟ್ಸ್ ಇಲ್ಲಿವೆ.

  ಸ್ಟಾರ್ ಆ್ಯಂಕರಿಂಗ್ :

  ಕೆಜಿಎಫ್ ಚಾಪ್ಟರ್ 2 ಕನ್ನಡದ ಸಿನಿಮಾ. ಕಾರ್ಯಕ್ರಮದ ನಿರೂಪಣೆ ಮಾಡಿದ್ದು ಬಾಲಿವುಡ್‍ನ ಸ್ಟಾರ್ ಡೈರೆಕ್ಟರ್, ಪ್ರೊಡ್ಯೂಸರ್ ಕರಣ್ ಜೋಹರ್. ಅನುಶ್ರೀ ಕನ್ನಡ ನಿರೂಪಕಿಯಾಗಿದ್ದರು.

  ಭಾಷೆಗೊಬ್ಬ ರಾಯಭಾರಿ :

  ಕನ್ನಡಕ್ಕೆ ಶಿವಣ್ಣ, ತೆಲುಗಿಗೆ ರಾಮ್ ಚರಣ್ ತೇಜ, ತಮಿಳಿಗೆ ಸೂರ್ಯ, ಮಲಯಾಳಂಗೆ ಪೃಥ್ವಿರಾಜ್ ಹಾಗೂ ಹಿಂದಿ ಟ್ರೇಲರ್ ಬಿಡುಗಡೆಗೆ ಇದ್ದವರು ಫರ್ಹಾನ್ ಅಖ್ತರ್.

  ಮೀಡಿಯಾದವರ ಕಣ್ಣೆಲ್ಲ..

  ದೇಶದ ಬಹುತೇಕ ಪ್ರಮುಖ ಪತ್ರಿಕೆ, ಟಿವಿ ಚಾನೆಲ್ಲುಗಳು ಅಲ್ಲಿದ್ದವು. ಅವುಗಳ ಸಂಖ್ಯೆಯೇ 200ಕ್ಕೂ ಹೆಚ್ಚು.

  ಪುನೀತ್ ನೆನಪು..

  ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಿಯೊಬ್ಬರೂ ನೆನಪಿಸಿಕೊಂಡಿದ್ದು ಪುನೀತ್ ರಾಜಕುಮಾರ್ ಅವರನ್ನು. ನಾನು ಪುನೀತ್ ಸರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರು ನಮ್ಮ ಜೊತೆ ಸದಾ ಇರುತ್ತಾರೆ ಎಂದವರು ಯಶ್. ಸಂಜಯ್ ದತ್ ಟ್ರೇಲರ್ ಬಿಡುಗಡೆಗೂ ಮುನ್ನ ಅಶ್ವಿನಿ ಪುನೀತ್ ಮನೆಗೆ ಹೋಗಿ ಬಂದರು. ಈ ಚಿತ್ರ ಅಪ್ಪುಗೆ ಅರ್ಪಣೆ ಎಂದರು ಪ್ರಶಾಂತ್ ನೀಲ್. ಶಿವಣ್ಣ ಭಾವುಕರಾದರು. ಯಶ್ ನನ್ನ ತಮ್ಮನಿದ್ದಂತೆ ಎಂದರು. ನೀವು ಹಾಗೆಲ್ಲ ಮಾಡಬೇಡಿ ಶಿವಣ್ಣ. ನೀವು ಅತ್ತರೆ ನೋಡೋಕಾಗಲ್ಲ ಎಂದರು ಯಶ್.

  ಕನ್ನಡ ಸಿನಿಮಾ ಎಲ್ಲರ ಹೆಮ್ಮೆ.. :

  ಕನ್ನಡದ ಚಿತ್ರವೊಂದನ್ನು ವಿತರಣೆಗೆ ಪಡೆದಿದ್ದೇ ಭಾಗ್ಯ ಎಂಬಂತೆ ಮಾತನಾಡಿದ್ದು ವಿತರಕರು. ವೇದಿಕೆಯಲ್ಲಿದ್ದ ತಮಿಳು ವಿತರಕ ಎಸ್.ಆರ್. ಪ್ರಭು, ಮಲಯಾಳಂನ ಪೃಥ್ವಿರಾಜ್ ಸುಕುಮಾರನ್, ಹಿಂದಿಯ ಫರಾನ್ ಅಖ್ತರ್.. ಎಲ್ಲರೂ ಈ ಚಿತ್ರದ ಡಿಸ್ಟ್ರಿಬ್ಯೂಷನ್ ನಮ್ಮದು ಎಂದು ಹೆಮ್ಮೆಯಿಂದ ಹೇಳಿಕೊಂಡರು.

  ವೇದಿಕೆಯಲ್ಲಿದ್ದವರೆಲ್ಲ ಸ್ಟಾರ್ಸ್..:

  ಟ್ರೇಲರ್ ರಿಲೀಸ್ ಮಾಡುವಾಗ ಇಡೀ ವೇದಿಕೆಯಲ್ಲಿದ್ದವರು ಸ್ಟಾರ್ಸ್. ಆ ಪಟ್ಟಿಯೇ ಇಷ್ಟುದ್ದ. ಅಷ್ಟೊಂದು ಸ್ಟಾರ್‍ಗಳು ಒಂದೆಡೆ ಸೇರಿ ಮಾತನಾಡಿದ್ದು ಕೆಜಿಎಫ್ ಚಾಪ್ಟರ್ 2 ಟ್ರೇಲರ್ ರಿಲೀಸ್ ಬಗ್ಗೆ. ಸಿನಿಮಾ ಸೃಷ್ಟಿಸುವ ಹೊಸ ಹೊಸ ದಾಖಲೆಗಳ ಬಗ್ಗೆ..

  ಆರ್.ಆರ್.ಆರ್. ಮೀರಿಸಿದ ಶರವೇಗದ ಹಿಟ್ಸ್:

  ಆರ್.ಆರ್.ಆರ್.. ಇತ್ತೀಚೆಗಷ್ಟೇ ರಿಲೀಸ್ ಆಗಿರೋ ಪ್ಯಾನ್ ಇಂಡಿಯಾ ಸಿನಿಮಾ. ಸೂಪರ್ ಹಿಟ್. ಆದರೆ ಆ ಚಿತ್ರವನ್ನೂ ಮೀರಿಸಿದ್ದು ಕೆಜಿಎಫ್. ಆರ್.ಆರ್.ಆರ್. ಟ್ರೇಲರ್ ಬಂದಾಗ ಒಂದು ಮಿಲಿಯನ್ ವೀಕ್ಷಣೆ ಪಡೆಯೋಕೆ 45 ನಿಮಿಷ ಪಡೆದುಕೊಂಡಿತ್ತು. ಅದನ್ನೂ ಮೀರಿಸಿದ ಕೆಜಿಎಫ್ ಟ್ರೇಲರ್ ಕೇವಲ 30 ನಿಮಿಷದಲ್ಲಿ ಒಂದು ಮಿಲಿಯನ್ ವೀಕ್ಷಣೆ ಪಡೆಯಿತು.

  ರವೀನಾ ಟಂಡನ್ ಮಕ್ಕಳಿಗೂ ಯಶ್ ಇಷ್ಟ..

  ಇದನ್ನು ವೇದಿಕೆಯಲ್ಲೇ ಹೆಮ್ಮೆಯಿಂದ ಹೇಳಿಕೊಂಡವರು ರವೀನಾ ಟಂಡನ್. ಕನ್ನಡದ ಒಬ್ಬ ನಟರ ಬಗ್ಗೆ ಹಿಂದಿ ಚಿತ್ರರಂಗದವರು ಓಪನ್ ವೇದಿಕೆಯಲ್ಲಿ ಮೆಚ್ಚಿ ಮಾತನಾಡಿದ್ದರೆ ಡಾ.ರಾಜ್ ನಂತರ ಯಶ್ ಬಗ್ಗೆಯೇ ಇರಬೇಕು.

  ದೇವರಿಗೆ ಪೂಜೆ.. ಈಡುಗಾಯಿ..

  ರಾಜ್ಯದ ಹಲವೆಡೆ ಯಶ್ ಫ್ಯಾನ್ಸ್ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈಡುಗಾಯಿ ಒಡೆದರು. ದೀಢ ನಮಸ್ಕಾರ ಹಾಕಿದರು. ಸಿಹಿ ಹಂಚಿದರು. ಒಂದು ಸಿನಿಮಾ ಟ್ರೇಲರ್ ಈ ಮಟ್ಟಿಗೆ ಸಂಚಲನ ಸೃಷ್ಟಿಸಿದ್ದು ಇದೇ ಮೊದಲು.

  ನಿರ್ಮಾಪಕ, ನಿರ್ದೇಶಕರೇ ಹೀರೋ :

  ಒಂದು ಚಿತ್ರದ ಬಗ್ಗೆ 8 ವರ್ಷ ಕನಸು ಕಂಡ ಪ್ರಶಾಂತ್ ನೀಲ್, ಆ ಅದ್ಧೂರಿತನ ಕೊಟ್ಟ ನಿರ್ಮಾಪಕ ವಿಜಯ್ ಕಿರಗಂದೂರು ಅವರು ರಿಯಲ್ ಹೀರೋಗಳು. ಈ ಮಾತನ್ನು ಯಶ್ ಸೇರಿದಂತೆ ವೇದಿಕೆಯಲ್ಲಿದ್ದವರೆಲ್ಲರೂ ಹೇಳಿದರು. ಒಂದು ಚಿತ್ರಕ್ಕೆ ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ ಎಷ್ಟು ಮುಖ್ಯ ಅನ್ನೋದನ್ನು ಅದು ಪದೇ ಪದೇ ಸಾರಿ ಸಾರಿ ಹೇಳುತ್ತಿತ್ತು.

 • ಕೆಜಿಎಫ್ 2 ನೋಡಿದ ಪಾಂಡ್ಯ ಟೀಮ್

  ಕೆಜಿಎಫ್ 2 ನೋಡಿದ ಪಾಂಡ್ಯ ಟೀಮ್

  ಕೆಜಿಎಫ್ ನಿರ್ಮಾಣ ಸಂಸ್ಥೆ ಹೊಂಬಾಳೆ ಆರ್.ಸಿ.ಬಿ. ಜೊತೆಗೆ ಅಧಿಕೃತ ಒಪ್ಪಂದವನ್ನೇ ಮಾಡಿಕೊಂಡಿದೆ. ಕ್ರೀಡಾ ಸಂಸ್ಥೆಯ ಜೊತೆ ಇಂಥಾದ್ದೊಂದು ಒಪ್ಪಂದ ಹೊಸದು. ಇದರ ಜೊತೆಗೆ ಆರ್.ಸಿ.ಬಿ. ತಂಡದ ಆಟಗಾರರು ಕೆಜಿಎಫ್ 2 ಸಿನಿಮಾವನ್ನು ನೋಡಿ ಖುಷಿ ಪಟ್ಟಿದ್ದಾರೆ. ಅತ್ತ, ಕೆಜಿಎಫ್ ತಂಡದವರು ಆರ್.ಸಿ.ಬಿ ಮ್ಯಾಚ್‍ಗಳನ್ನು ನೋಡಿ ಬೆನ್ನು ತಟ್ಟಿದ್ದಾರೆ. ಇದರ ಜೊತೆಗೆ ಇನ್ನೊಂದು ತಂಡವೂ ಕೆಜಿಎಫ್ 2 ಸಿನಿಮಾವನ್ನು ನೋಡಿ ಖುಷಿಪಟ್ಟಿದೆ. ಸದ್ಯಕ್ಕೆ ಐಪಿಎಲ್‍ನಲ್ಲಿ ಅಬ್ಬರಿಸುತ್ತಿರುವ ನಂ.1 ತಂಡವಾಗಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ಕೆಜಿಎಫ್ 2 ಸಿನಿಮಾವನ್ನು ನೋಡಿದೆ.

  ಆಟಗಾರರು ಬಯೋಬಬಲ್‍ನಲ್ಲಿರೋ ಕಾರಣ ಐಪಿಎಲ್ ಆಡಳಿತ ಮಂಡಳಿಯನ್ನು ಕೇಳಿಕೊಂಡು ವಿಶೇಷ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಬಯೋಬಬಲ್‍ನಲ್ಲಿರೋ ಆಟಗಾರರು ಹಾಗೂ ಅವರ ಪತ್ನಿಯರು ಒಟ್ಟಿಗೇ ಕೆಜಿಎಫ್ 2 ನೋಡಿ ಖುಷಿಪಟ್ಟಿದ್ದಾರೆ.

  ಅತ್ತ ಕೆಜಿಎಫ್ ದಾಖಲೆಗಳನ್ನೆಲ್ಲ ಚಿಂದಿ ಉಡಾಯಿಸುತ್ತಾ ಮುನ್ನುಗ್ಗುತ್ತಿದೆ. ಸದ್ಯಕ್ಕೆ ಕೆಜಿಎಫ್ ದೇಶದ ನಂ.3 ಸಿನಿಮಾ ಆಗಿದೆ, ಲಾಭದ ಲೆಕ್ಕದಲ್ಲಿ.

 • ಕೆಜಿಎಫ್ 2 ಫಸ್ಟ್ ಲುಕ್ ಡಿಸೆಂಬರ್ 21ಕ್ಕೆ : ಆ ದಿನಾಂಕದಲ್ಲೇ ಇದೆ ಒಂದು ವಿಶೇಷ

  kgf chapter 2 first look on dec 21st

  ಕೆಜಿಎಫ್ ಚಾಪ್ಟರ್ 2 ಮತ್ತೊಂದು ಸೆನ್ಸೇಷನ್ ಸುದ್ದಿ ನೀಡಿದೆ. ಜನವರಿ 8ಕ್ಕೆ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ ಎಂಬ ಸುದ್ದಿ ಹೊರಬಿದ್ದಿರುವ ಬೆನ್ನಲ್ಲೇ, ಈಗ ಫಸ್ಟ್ಲುಕ್ ನ್ಯೂಸ್ ಹೊರಬಿಟ್ಟಿದೆ ತಂಡ. ಡಿಸೆಂಬರ್ 21ರ ಶನಿವಾರ ಸಂಜೆ 5 ಗಂಟೆ 45 ನಿಮಿಷಕ್ಕೆ ಸರಿಯಾಗಿ ಚಿತ್ರದ ಫಸ್ಟ್ಲುಕ್ ಹೊರಬೀಳಲಿದೆ.

  ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ಯಶ್, ಶ್ರೀನಿಧಿ ಶೆಟ್ಟಿ ಜೊತೆಗೆ ಈ ಬಾರಿ ಸಂಜಯ್ ದತ್, ರವಿನಾ ಟಂಡನ್ ಕೂಡಾ ಇದ್ದಾರೆ. ಜೊತೆಗೆ ಅನಂತ್ ನಾಗ್, ಮಾಳವಿಕಾ, ಅಚ್ಯುತ್ ಕುಮಾರ್, ಅರ್ಚನಾ ಜೋಯಿಸ್, ವಸಿಷ್ಠ ಸಿಂಹ ಇದ್ದಾರೆ. ಹೊಂಬಾಳೆ ಬ್ಯಾನರ್‌ನ ಕೆಜಿಎಫ್ ಚಾಪ್ಟರ್ 2 2018ರಲ್ಲಿ ದಾಖಲೆ ಬರೆದಿದ್ದ ಕನ್ನಡ ಸಿನಿಮಾ.

  ಎಲ್ಲ ಓಕೆ, ಈ ದಿನಾಂಕದಲ್ಲೇನಿದೆ ಅಂತಾ ವಿಶೇಷ ಅಂತೀರಾ.. 2018ರ ಡಿಸೆಂಬರ್ 21ರಂದೇ ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿತ್ತು. ದಾಖಲೆ ಸೃಷ್ಟಿಸಿತ್ತು. ಅದರ ನೆನಪಿಗಾಗಿ.. ಆ ದಿನವೇ ಫಸ್ಟ್ಲುಕ್ ಹೊರಬಿಡುತ್ತಿದೆ ಕೆಜಿಎಫ್ ಟೀಂ.

 • ಕೆಜಿಎಫ್ 2 ಫೈನಲ್ ಶೂಟಿಂಗ್

  KGF Chapter 2 Final Shooting Starts

  ಕೆಜಿಎಫ್ ಚಾಪ್ಟರ್ 2 ಚಿತ್ರದ ಶೂಟಿಂಗ್ ಇನ್ನೂ ಮುಗಿದಿಲ್ಲ. ಈಗ ತಾನೇ ಅಂತಿಮ ಹಂತದ ಚಿತ್ರೀಕರಣ ಶುರುವಾಗಿದ್ದು, ಹೈದರಾಬಾದ್‍ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಡಿಸೆಂಬರ್ 2ನೇ ವಾರದಲ್ಲಿ ಚಿತ್ರೀಕರಣ ಪೂರ್ಣಗೊಳಿಸುವ ಉತ್ಸಾಹದಲ್ಲಿದೆ ಚಿತ್ರತಂಡ. ಚಿತ್ರೀಕರಣಕ್ಕಾಗಿ ರಾಕಿಭಾಯ್ ಯಶ್ ಹೈದರಾಬಾದ್ ತಲುಪಿದ್ದಾರೆ.

  ಆಗಸ್ಟ್‍ನಲ್ಲಿ ಕೆಜಿಎಫ್ 2 ಶೂಟಿಂಗ್ ಶುರು ಮಾಡಿತ್ತು. ಅನಂತ್ ನಾಗ್ ಜಾಗಕ್ಕೆ ಪ್ರಕಾಶ್ ರೈ ಬಂದಿದ್ದರು. ಇದರ ನಡುವೆ ಸಂಜಯ್ ದತ್, ಕ್ಯಾನ್ಸರ್ ಚಿಕಿತ್ಸೆಗೆಂದು ಆಸ್ಪತ್ರೆ ಸೇರಿದ ಕಾರಣ, ಶೂಟಿಂಗ್ ಮತ್ತೆ ವಿಳಂಬವಾಗಿತ್ತು. ಈಗ ಎಲ್ಲದಕ್ಕೂ ಸಮಯ ಕೂಡಿ ಬಂದಂತಿದ್ದು, ಪ್ರಶಾಂತ್ ನೀಲ್ ಅಂತಿಮ ಹಂತದ ಶೂಟಿಂಗ್‍ಗೆ ಸಜ್ಜಾಗುತ್ತಿದ್ದಾರೆ.

 • ಕೆಜಿಎಫ್ 2 ಬಂದ್ರೆ, ಚಾಪ್ಟರ್ 1 ಸಣ್ಣದು ಎನಿಸುತ್ತೆ - ಯಶ್

  yash speaks about kgf chapter 2

  ಕೆಜಿಎಫ್ ಚಾಪ್ಟರ್ 2 ಏನಾಗಿದೆ..? ಏನಾಗ್ತಾ ಇದೆ..? ಶೂಟಿಂಗ್ ಎಲ್ಲಿಗೆ ಬಂದಿದೆ..? ಏಕೆ ಕೆಜಿಎಫ್ 2 ಬಗ್ಗೆ ಯಾರೂ ಏನನ್ನೂ ಮಾತಾಡ್ತಾ ಇಲ್ಲ..? ಏಕೆ..? ಏನು..? ಎಲ್ಲಿ..? ಹೇಗೆ..? ಯಾವಾಗ..? ಹೀಗೆ ಕೆಜಿಎಫ್ ಟೀಂಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸ್ತಿದ್ದರೂ, ಚಾಪ್ಟರ್ 2 ಟೀಂನವರು ಅಭಿಮಾನಿಗಳ ಎಲ್ಲ ಕುತೂಹಲವನ್ನೂ ತಣಿಸುತ್ತಿಲ್ಲ. ಈಗ ಯಶ್ ಅವರೇ ಮಾತನಾಡಿದ್ದಾರೆ. ಕೆಜಿಎಫ್ ಚಾಪ್ಟರ್ 2 ನಿರೀಕ್ಷೆ ಮತ್ತು ಕೆಜಿಎಫ್ ವೇಳೆ ಎದುರಿಸಿದ ಸವಾಲು ಎರಡಕ್ಕೂ ಉತ್ತರ ಕೊಟ್ಟಿದ್ದಾರೆ.

  ಕೆಜಿಎಫ್ ಚಾಪ್ಟರ್ 2 ತೆರೆಗೆ ಬಂದ್ರೆ, ಚಾಪ್ಟರ್ 1 ತುಂಬಾ ಸಣ್ಣದು ಎನಿಸಿಬಿಡುತ್ತೆ. ಜನರ ನಂಬಿಕೆ, ನಿರೀಕ್ಷೆಗೆ ತಕ್ಕಂತೆ ವಿಜಯ್ ಕಿರಗಂದೂರು, ಪ್ರಶಾಂತ್ ನೀಲ್ ಕೆಲಸ ಮಾಡುತ್ತಿದ್ದಾರೆ. ಒಬ್ಬ ನಟನಾಗಿ ನಾನೇನು ಮಾಡಬೇಕೋ ಮಾಡ್ತಿದ್ದೀನಿ ಎಂದಿದ್ದಾರೆ ಯಶ್.

  ಕೆಜಿಎಫ್ ಮುಗಿಯುವವರೆಗೆ ಬೇರೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಅಲ್ಲಿ ಇಲ್ಲಿ ಬಂದ ಸುದ್ದಿಗಳನ್ನೆಲ್ಲ ನಂಬಬೇಡಿ. ಯಾವುದಾದರೂ ಫೈನಲ್ ಆದರೆ, ನಾನೇ ಬಹಿರಂಗಪಡಿಸುತ್ತೇನೆ. ಚಾಪ್ಟರ್ 2 ಚೆನ್ನಾಗಿ ಬರಬೇಕು ಎನ್ನುವ ಕಾರಣಕ್ಕೆ ನಾನು ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಸಂಪೂರ್ಣವಾಗಿ ಕೆಜಿಎಫ್‍ನಲ್ಲೇ ಮುಳುಗಿದ್ದೇನೆ ಎಂದಿದ್ದಾರೆ ಯಶ್.

 • ಕೆಜಿಎಫ್ 2 ಮತ್ತೆ ಬ್ರೇಕ್

  kgf chapter 2 shooting halts again

  ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಕೊರೊನಾ ಕಾಟ ವಿಪರೀತವಾಗಿದೆ. ಕೋವಿಡ್ 19 ಶುರುವಾದಾಗ 25 ದಿನಗಳ ಶೂಟಿಂಗ್ ಮುಂದೂಡಿತ್ತು ಚಿತ್ರತಂಡ. ಈಗ ಶೂಟಿಂಗ್‍ಗೆ ಅವಕಾಶ ಕೊಟ್ಟ ನಂತರ ಮತ್ತೊಮ್ಮೆ ಬೆಂಗಳೂರಿನ ಮಿನರ್ವ ಮಿಲ್‍ನಲ್ಲಿ ಸೆಟ್ ಹಾಕಿತ್ತು. ಸೆಟ್ ವರ್ಕ್ ಮುಗಿಯುವ ಹೊತ್ತಿಗೆ ಸುತ್ತಮುತ್ತ ಕೋವಿಡ್ 19 ವಿಸ್ಫೋಟವಾಗಿ ಹೋಯ್ತು. ಹೀಗಾಗಿ ಮತ್ತೆ ಚಿತ್ರೀಕರಣವನ್ನು ಮುಂದಕ್ಕೆ ಹಾಕಿದೆ ಚಿತ್ರತಂಡ.

  ಯಶ್, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಕಾಂಬಿನೇಷನ್ನಿನ ಕೆಜಿಎಫ್ ಚಾಪ್ಟರ್ 2, ಈ ವರ್ಷದ ಬಹುನಿರೀಕ್ಷಿತ ಸಿನಿಮಾ. ಅಕ್ಟೋಬರ್‍ನಲ್ಲಿ ರಿಲೀಸ್ ಎಂದು ಘೋಷಿಸಿಕೊಂಡಿದ್ದ ಕೆಜಿಎಫ್ 2ಗೆ ಪದೇ ಪದೇ ವಿಘ್ನಗಳೆದುರಾಗುತ್ತಿವೆ. ಇದು ಹೀಗೆಯೇ ಮುಂದುವರಿದರೆ ಅಕ್ಟೋಬರ್‍ನಲ್ಲಿ ಸಿನಿಮಾ ರಿಲೀಸ್ ಮಾಡುವ ಸಾಧ್ಯತೆ ಕಡಿಮೆ.

   

 • ಕೆಜಿಎಫ್ 2 ರಿಲೀಸ್ ಸಸ್ಪೆನ್ಸ್ : ಯಶ್ ಹೇಳಿದ ಸತ್ಯ

  yash talks about kgf chapter 2 release secrets

  ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಸ್ಯಾಂಡಲ್‍ವುಡ್ ಅಷ್ಟೇ ಅಲ್ಲ, ದೇಶದ ಎಲ್ಲ ಭಾಷೆಯ ಚಿತ್ರರಂಗವೂ ಕಾಯುತ್ತಿವೆ. ಅಷ್ಟರಮಟ್ಟಿಗೆ ಕ್ರೇಜ್ ಹುಟ್ಟಿಸಿತ್ತು ಕೆಜಿಎಫ್. ಈ ಚಿತ್ರ ಯಾವಾಗ ರಿಲೀಸ್ ಆಗುತ್ತೆ ಅನ್ನೋ ಪ್ರಶ್ನೆಗೆ ಖಚಿತ ಉತ್ತರ ಇನ್ನೂ ಸಿಕ್ಕಿಲ್ಲ. ಸದ್ಯಕ್ಕೇನೋ ಚಿತ್ರದ ಅಪ್‍ಡೇಟ್ ಕೊಡೋಕೆ, ಹೊಂಬಾಳೆ ಫಿಲಂಸ್‍ನವರಿಗೆ ನಿರ್ದೇಶಕ ಪ್ರಶಾಂತ್ ನೀಲ್ ಸ್ವಾತಂತ್ರ್ಯ ಕೊಟ್ಟಿದ್ದಾರೆ. ನಿರ್ಮಾಪಕ ಕಾರ್ತಿಕ್ ಗೌಡ ಇದನ್ನು ಖುಷಿಯಾಗಿ ಹೇಳಿಕೊಂಡಿದ್ದರೆ, ಪ್ರಶಾಂತ್ ನೀಲ್ ಹಹ್ಹಹ್ಹಹ್ಹಾ.. ಎಂದು ನಕ್ಕಿದ್ದಾರೆ. ಆದರೆ, ಚಿತ್ರದ ರಿಲೀಸ್ ಯಾವಾಗ ಅನ್ನೋದರ ಬಗ್ಗೆ  ನಟ ಯಶ್ ಮಾತನಾಡಿದ್ದಾರೆ.

  ಸಿನಿಮಾ ರಿಲೀಸ್ ಡೇಟ್ ಇನ್ನೂ ಫಿಕ್ಸ್ ಆಗಿಲ್ಲ. ಏಪ್ರಿಲ್‍ಗಂತೂ ಬರುತ್ತಿಲ್ಲ. ದರ್ಶನ್‍ಗೆ ಪೈಪೋಟಿಯೂ ಇಲ್ಲ ಎಂದಿದ್ದಾರೆ ಯಶ್. ಅಷ್ಟೇ ಅಲ್ಲ, ರಾಜಾಮೌಳಿ ಅವರ ಆರ್‍ಆರ್‍ಆರ್ ಎದುರು ಕೆಜಿಎಫ್ ರಿಲೀಸ್ ಆಗುತ್ತಾ ಅನ್ನೋ ಪ್ರಶ್ನೆಗೂ ನೋ ಎಂದಿದ್ದಾರೆ ಯಶ್.

  ನಾವು ಆರ್‍ಆರ್‍ಆರ್ ಚಿತ್ರತಂಡದವರೊಂದಿಗೆ ಟಚ್‍ನಲ್ಲಿದ್ದೇವೆ. ಎರಡೂ ಚಿತ್ರ ರಿಲೀಸ್ ಮಾಡುತ್ತಿರುವುದು ಅನಿಲ್ ತದಾನಿ. ಹೀಗಾಗಿ ಕ್ಲ್ಯಾಶ್ ಆಗುವ ಸಾಧ್ಯತೆ ಇಲ್ಲ ಎನ್ನುವುದು ಯಶ್ ಮಾತು. ಅಂದಹಾಗೆ.. ಕೆಜಿಎಫ್ ಚಾಪ್ಟರ್ 2ಗೆ 2020ರ ಡಿಸೆಂಬರ್‍ವರೆಗೂ ಕಾಯಬೇಕಾ..? ಒಂದಂತೂ ಪಕ್ಕಾ. ಕೆಜಿಎಫ್ ಚಾಪ್ಟರ್ 2 ಅಟ್ ಎನಿಕಾಸ್ಟ್ ಇದೇ ವರ್ಷ ರಿಲೀಸ್.

 • ಕೆಜಿಎಫ್ 2, ಚಾಪ್ಟರ್ 1ಗಿಂತ ಅದ್ಭುತ : ಡಬ್ಬಿಂಗ್ ಕಲಾವಿದೆ ಅಮಲಾ

  ಕೆಜಿಎಫ್ 2, ಚಾಪ್ಟರ್ 1ಗಿಂತ ಅದ್ಭುತ : ಡಬ್ಬಿಂಗ್ ಕಲಾವಿದೆ ಅಮಲಾ

  ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗೋಕೆ ರೆಡಿಯಾಗಿದೆ. ಬಹುಶಃ ಕೊರೊನಾ ಭೀತಿ ಮುಗಿಯುವವರೆಗೆ ಕೆಜಿಎಫ್ ರಿಲೀಸ್ ಆಗಲ್ಲ. ಇದರ ನಡುವೆ ತೆಲುಗಿನಲ್ಲಿ ಚಾಪ್ಟರ್2 ಡಬ್ಬಿಂಗ್ ಮಾಡಿರುವ ಕಲಾವಿದೆ ಅಮಲಾ, ಚಾಪ್ಟರ್ 1ಗಿಂತ ಚಾಪ್ಟರ್ 2 ಅದ್ಭುತವಾಗಿದೆ. ಕಂಟೆಂಟ್ ಈಸ್ ಕಿಂಗ್ ಎಂದಿದ್ದಾರೆ.

  ರಾಕಿಭಾಯ್ ತಾಯಿಯ ಪಾತ್ರಕ್ಕೆ ತೆಲುಗಿನಲ್ಲಿ ಅಮಲಾ ಡಬ್ ಮಾಡಿದ್ದಾರೆ. 2ನೇ ಭಾಗದಲ್ಲಿ ತಾಯಿ ಮಗನ ಬಾಂಧವ್ಯದ ದೃಶ್ಯಗಳು ಇನ್ನೂ ಚೆನ್ನಾಗಿವೆ. ಭಾವನಾತ್ಮಕ ದೃಶ್ಯಗಳು ಪ್ರೇಕ್ಷಕರಿಗೆ ರೋಮಾಂಚನ ಹುಟ್ಟಿಸುತ್ತವೆ. ಕಲಾವಿದರ ಅಭಿನಯ, ಮೇಕಿಂಗ್, ಸಂಭಾಷಣೆ ಒಂದಕ್ಕಿಂತ ಒಂದು ಚೆನ್ನಾಗಿವೆ ಎಂದಿದ್ದಾರೆ ಅಮಲಾ.

 • ಕೆಜಿಎಫ್ 25 ದಿನ : ಸೃಷ್ಟಿಸಿದ ದಾಖಲೆಗಳೆಷ್ಟು..?

  ಕೆಜಿಎಫ್ 25 ದಿನ : ಸೃಷ್ಟಿಸಿದ ದಾಖಲೆಗಳೆಷ್ಟು..?

  ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರೋ ಕೆಜಿಎಫ್ ಚಾಪ್ಟರ್ 2 ಯಶಸ್ವೀ 25 ದಿನ ಪೂರೈಸಿದೆ. ಬಾಕ್ಸಾಫೀಸ್‍ನ್ನು ಚಿಂದಿ ಉಡಾಯಿಸಿದ ರಾಕಿಭಾಯ್ ಈಗಲೂ ಥಿಯೇಟರುಗಳಲ್ಲಿ ಸಿನಿಮಾ ಪ್ರೇಕ್ಷಕರ ಹಾಟ್ ಫೇವರಿಟ್. ಹಾರ್ಟ್ ಫೇವರಿಟ್. ಪ್ರಶಾಂತ್ ನೀಲ್ ಮಾಡಿರುವ ಮ್ಯಾಜಿಕ್ ಅಂಥಾದ್ದು. ಈ ಹಾದಿಯಲ್ಲಿ ಕೆಜಿಎಫ್ ದಾಖಲೆಗಳ ಮೇಲೆ ದಾಖಲೆಯನ್ನು ಬರೆಯುತ್ತಲೇ ಹೋಗಿದೆ. ಬರೆಯುತ್ತಿದೆ.  

  1. ಕೇವಲ ಕನ್ನಡದಲ್ಲಿ ಕೆಜಿಎಫ್ ಬಿಸಿನೆಸ್ 200 ಕೋಟಿ ಸಮೀಪಕ್ಕೆ ಬಂದಿದೆ. ಇದೇ ವೇಗ ಕಾಯ್ದುಕೊಂಡರೆ ಕನ್ನಡದಲ್ಲಿ 200 ಕೋಟಿ ಬಿಸಿನೆಸ್ ಮಾಡಿದ ಮೊದಲ ಸಿನಿಮಾ ಎಂಬ ದಾಖಲೆ ಬರೆಯಲಿದೆ.

  2. ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳು. ಈ ನಾಲ್ಕೂ ಭಾಷೆಗಳಲ್ಲಿ 100 ಕೋಟಿ ಬಿಸಿನೆಸ್ ಮಾಡಿದ ಮೊದಲ ಸಿನಿಮಾ ಕೆಜಿಎಫ್.

  3. ಹಿಂದಿಯಲ್ಲಿ 400 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದ ಡಬ್ಬಿಂಗ್ ಸಿನಿಮಾಗಳಲ್ಲಿ ನಂ.2 ಕೆಜಿಎಫ್ ಚಾಪ್ಟರ್ 2. ಮೊದಲ ಸ್ಥಾನದಲ್ಲಿ ಈಗಲೂ ಬಾಹುಬಲಿ 2 ಇದೆ.

  4. ತಂಜಾವೂರಿನ ಥಿಯೇಟರ್ ಮಾಲೀಕರೊಬ್ಬರು ಕೆಜಿಎಫ್ ಚಾಪ್ಟರ್ 2ಗೆ ಟ್ವೀಟ್ ಮಾಡಿದ್ದು, ನಮ್ಮ ಥಿಯೇಟರಿನಲ್ಲಿ 20 ವರ್ಷಗಳ ನಂತರ, 25ನೇ ದಿನವೂ ಹೌಸ್‍ಫುಲ್ ಪ್ರದರ್ಶನ ಕಂಡ ಸಿನಿಮಾ ಕೆಜಿಎಫ್ ಎಂದಿದ್ದಾರೆ. 25 ದಿನಗಳ ನಂತರ ಅವರ ಥಿಯೇಟರಿನಲ್ಲಿ ಈ ಹಿಂದೆ ಕೇವಲ ಚಂದ್ರಮುಖಿ ಸಿನಿಮಾ ಹೌಸ್‍ಫುಲ್ ಶೋ ಆಗಿತ್ತಂತೆ.

  5. ತಮಿಳುನಾಡಿನಲ್ಲಿ 100 ಕೋಟಿ ಬಿಸಿನೆಸ್ ಮಾಡಿದ ಮೊದಲ ಕನ್ನಡ ಸಿನಿಮಾ ಕೆಜಿಎಫ್ ಚಾಪ್ಟರ್ 2.

  6. 1100 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದ ದೇಶದ 2ನೇ ಸಿನಿಮಾ ಕೆಜಿಎಫ್ ಚಾಪ್ಟರ್ 2.

  7. ಇದೆಲ್ಲದರ ಜೊತೆಗೆ ಇನ್ನೂ ಒಂದು ವಿಶೇಷ ದಾಖಲೆ ಇದೆ. ಮೊದಲ ಸ್ಥಾನದಲ್ಲಿ ಬಾಹುಬಲಿ 2. 2ನೇ ಸ್ಥಾನದಲ್ಲಿ ಕೆಜಿಎಫ್ 2. ಹಾಗೂ 3ನೇ ಸ್ಥಾನದಲ್ಲಿರೋದು ಆರ್.ಆರ್.ಆರ್. ಮೂರೂ ಡಬ್ಬಿಂಗ್ ಸಿನಿಮಾಗಳೇ ಅನ್ನೋದು ವಿಶೇಷ.

  8. ಕೆಜಿಎಫ್ 2 ಡಬ್ಬಿಂಗ್ ರೈಟ್ಸ್ ಸೇಲ್ ಆಗಿದೆ. ಅಮೇಜಾನ್ ಪ್ರೈಮ್ ಖರೀದಿಸಿದೆ. ಅದೂ ದಾಖಲೆಯ 320 ಕೋಟಿಗೆ ಅನ್ನೋ ಸುದ್ದಿ ಇದೆ. ಅದೂ ದಾಖಲೆಯೇ..

 • ಕೆಜಿಎಫ್ 2ಗೆ ಇನ್ನೊಬ್ಬ ಹೀರೋ ಎಂಟ್ರಿ..!

  rj rohith joins kgf chapter 2 team

  ಇತ್ತೀಚೆಗಷ್ಟೇ ಕೆಜಿಎಫ್ ಚಾಪ್ಟರ್ 2ಗೆ ಅನಂತ್ ನಾಗ್ ಜಾಗಕ್ಕೆ ಪ್ರಕಾಶ್ ರೈ ಎಂಟ್ರಿ ಕೊಟ್ಟು ಸುದ್ದಿಯಾಗಿದ್ದಾರೆ. ಅದು ವಿವಾದವನ್ನೇ ಸೃಷ್ಟಿಸಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರವನ್ನೇ ಬಹಿಷ್ಕರಿಸಿ ಎಂದು ಒಂದು ಕಡೆಯವರು ಅಭಿಯಾನ ಮಾಡುತ್ತಿದ್ದರೆ, ಸಿನಿಮಾವನ್ನು ಸಿನಿಮಾ ಆಗಿ ನೋಡಿ ಎಂದು ಇನ್ನೊಂದು ಕಡೆಯವರು ಬುದ್ದಿವಾದ ಹೇಳುತ್ತಿದ್ದಾರೆ. ಇದೆಲ್ಲದರ ನಡುವೆಯೇ ಕೆಜಿಎಫ್ ಚಾಪ್ಟರ್ 2ಗೆ ಇನ್ನೊಬ್ಬ ನಟ ಎಂಟ್ರಿ ಕೊಟ್ಟಿದ್ದಾರೆ.

  ಹೀಗೆ ಎಂಟ್ರಿ ಕೊಟ್ಟಿರುವ ನಟ ಆರ್‍ಜೆ ರೋಹಿತ್. ಅದೂ ಕೂಡಾ ಕೆಜಿಎಫ್ 2 ನವರು ರಿಲೀಸ್ ಮಾಡಿರೋ ಫೋಟೋಗಳಲ್ಲಿ ದಿಢೀರನೆ ಕಂಡ ಮುಖ ಅದು. ಅದನ್ನು ಟೀಂ ಗುಟ್ಟಾಗಿಯೇ ಇಟ್ಟಿತ್ತು. ಈಗಲೂ ಕೂಡಾ ರೋಹಿತ್ ಅವರ ಪಾತ್ರದ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಅಥವಾ ಕೆಜಿಎಫ್ 2 ಟೀಂ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

 • ಕೆಜಿಎಫ್ 2ಗೆ ಯಶ್ ಎಂಟ್ರಿ ಯಾವಾಗ..?

  yash to start shooting for kgf2 from next week

  ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಶುರುವಾಗಿ ಬಹಳ ದಿನಗಳೇ ಆಗಿವೆ. ಹೀರೋ ಹೊರತುಪಡಿಸಿ, ಉಳಿದ ಭಾಗಗಳ ಚಿತ್ರೀಕರಣ ಬಹುತೇಕ ಮುಗಿಯುವ ಹಂತದಲ್ಲಿದೆ. ಆದರೆ, ಯಶ್ ಇನ್ನೂ ಶೂಟಿಂಗ್ ಸೆಟ್‍ಗೆ ಹಾಜರಾಗಿಲ್ಲ. ಅಫ್‍ಕೋರ್ಸ್, ಅದಕ್ಕೆ ಯಶ್ ಒಬ್ಬರೇ ಕಾರಣರಲ್ಲ.

  ಚಿತ್ರದ ಕೆಲವು ತಾಂತ್ರಿಕ ಕೆಲಸಗಳು ಹಾಗೂ ತುರ್ತು ವೈಯಕ್ತಿಕ ಕೆಲಸಗಳ ಹಿನ್ನೆಲೆಯಲ್ಲಿ ಜೂನ್ 6ಕ್ಕೆ ಬರಬೇಕಿದ್ದ ಯಶ್, ಶೂಟಿಂಗ್ ಟೀಂ ಸೇರೋಕೆ ಸಾಧ್ಯವಾಗಲಿಲ್ಲ. ಈಗ ಕನ್ಫರ್ಮ್ ಆಗಿದೆ. ಜೂನ್ 12ರಿಂದ ಅಂದರೆ, ಇದೇ ಗುರುವಾರದಿಂದ ಯಶ್ ಕೆಜಿಎಫ್ ಚಾಪ್ಟರ್ 2 ತಂಡ ಸೇರಲಿದ್ದಾರೆ.

  ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಈಗಾಗಲೇ 15 ದಿನಗಳ ಚಿತ್ರೀಕರಣವಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ, ಮೊದಲ ಭಾಗದ ಅದ್ಧೂರಿ ಯಶಸ್ಸಿನಿಂದಾಗಿಯೇ ಕುತೂಹಲ ಮೂಡಿಸಿದೆ. 

 • ಕೆಜಿಎಫ್ 2ಗೆ ಸುಧಾರಾಣಿ, ಶೃತಿ ಎಂಟ್ರಿ : ಶೂಟಿಂಗ್ ಇನ್ನೂ ಮುಗಿದಿಲ್ವಾ?

  ಕೆಜಿಎಫ್ 2ಗೆ ಸುಧಾರಾಣಿ, ಶೃತಿ ಎಂಟ್ರಿ : ಶೂಟಿಂಗ್ ಇನ್ನೂ ಮುಗಿದಿಲ್ವಾ?

  ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಹತ್ತಿರ ಬರುತ್ತಿದೆ. ಏಪ್ರಿಲ್ 14ಕ್ಕೆ ರಿಲೀಸ್. ಈ ನಡುವೆ ಚಿತ್ರದ ಶೂಟಿಂಗ್ ಇನ್ನೂ ಮುಗಿದಿಲ್ವಾ ಅನ್ನೋ ಪ್ರಶ್ನೆ ಉದ್ಭವವಾಗಿದೆ. ಮೂಲಗಳ ಪ್ರಕಾರ ಚಿತ್ರದ ಇಂಟ್ರೊಡಕ್ಷನ್ ಸಾಂಗ್ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ತೃಪ್ತಿ ತಂದಿಲ್ಲ.

  ಹೀಗಾಗಿ ಮತ್ತೊಮ್ಮೆ ಚಿತ್ರೀಕರಣಕ್ಕೆ ಮನಸ್ಸು ಮಾಡಿದ್ದಾರೆ ಎಂಬ ಸುದ್ದಿ ಇದೆ. ಪ್ರಶಾಂತ್ ನೀಲ್ ಇರೋದೇ ಹಾಗೆ.. ಉಗ್ರಂ ಚಿತ್ರದ ಚಿತ್ರೀಕರಣ ಮುಗಿದ ಮೇಲೆ ತೃಪ್ತಿಯಾಗದೆ ಇಡೀ ಸಿನಿಮಾವನ್ನು ಮತ್ತೊಮ್ಮೆ ಶೂಟ್ ಮಾಡಿದ್ದರು. ಗೆದ್ದಿದ್ದರೂ ಕೂಡಾ. ಕೆಜಿಎಫ್ ಚಾಪ್ಟರ್ 1ನಲ್ಲೂ ಅಷ್ಟೆ, ಚಿತ್ರದ ರಿಲೀಸ್ ಹತ್ತಿರ ಬಂದಾಗ ಹಿಂದಿ ವರ್ಷನ್‍ಗಾಗಿ ಮೌನಿ ರಾಯ್ ಅವರನ್ನು ಹಾಕಿಕೊಂಡು ಶೂಟ್ ಮಾಡಲಾಗಿತ್ತು. ಕೆಜಿಎಫ್ ಚಾಪ್ಟರ್ 2 ಕೂಡಾ ಇದೇ ಹಾದಿಯಲ್ಲಿದೆ.

  ಇನ್ನು ಚಿತ್ರದ ಡಬ್ಬಿಂಗ್‍ಗೆ ಸುಧಾರಾಣಿ ಮತ್ತು ಶೃತಿ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದಲ್ಲಿ ರವೀನಾ ಟಂಡನ್ ಪಾತ್ರಕ್ಕೆ ಸುಧಾರಾಣಿ ಮತ್ತು ಈಶ್ವರಿ ರಾವ್ ಪಾತ್ರಕ್ಕೆ ಶೃತಿ ಡಬ್ಬಿಂಗ್ ಮಾಡುತ್ತಿದ್ದಾರೆ.

 • ಕೆಜಿಎಫ್ 2ನಲ್ಲಿ ನಾನು ಇಂದಿರಾ ಗಾಂಧಿ ಅಲ್ಲ : ರವೀನಾ ಟಂಡನ್

  ಕೆಜಿಎಫ್ 2ನಲ್ಲಿ ನಾನು ಇಂದಿರಾ ಗಾಂಧಿ ಅಲ್ಲ : ರವೀನಾ ಟಂಡನ್

  ಕೆಜಿಎಫ್ ಚಾಪ್ಟರ್ 2 ಶುರುವಾದ ನಂತರ ಹೊರಬಿದ್ದ ಸ್ಟಿಲ್ಸ್‍ಗಳು ಪ್ರೇಕ್ಷಕರಿಗೆ ಬೇರೆಯದೇ ಕುತೂಹಲ ಹುಟ್ಟಿಸಿದ್ದವು. ಸಂಜಯ್ ದತ್ ಅವರ ಅಧೀರನ ಕಥೆ ಒಂದಾದರೆ, ರಾಕಿಭಾಯ್ ಸ್ಟೋರಿಯೇ ಬೇರೆ. ಇದರ ನಡುವೆ ಕುತೂಹಲದ ಪರ್ವತವನ್ನೇ ಸೃಷ್ಟಿಸಿದ್ದು ರಮಿಕಾ ಸೇನ್ ಪಾತ್ರ.

  ರಮಿಕಾ ಸೇನ್ ಎಂದರೆ ಭಾರತದ ಪ್ರಧಾನಿ. ಈ ಪಾತ್ರದ ಲುಕ್ ಹೊರಬಿದ್ದಾಗ ಎಲ್ಲರಿಗೂ ನೆನಪಾಗಿದ್ದು ಇಂದಿರಾ ಗಾಂಧಿ.

  ಇಂದಿರಾ ಗಾಂಧಿಯವರಿಗೂ ರಮಿಕಾ ಸೇನ್ ಪಾತ್ರಕ್ಕೂ ಯಾವುದೇ ಸಂಬಂಧ ಇಲ್ಲ. ನಾನೂ ಈ ರೀತಿಯ ವಿಶ್ಲೇಷಣೆಗಳನ್ನು ನೋಡಿದ್ದೇನೆ. ಅದು 80ರ ದಶಕದ ಕಥೆ. ಆ ಕಾಲದಲ್ಲಿದ್ದ ಒಬ್ಬ ಪ್ರಧಾನಿಯ ಪಾತ್ರ.  ಅಷ್ಟೆ. ಇಂದಿರಾ ಅವರ ವ್ಯಕ್ತಿತ್ವ, ಪಾತ್ರ, ಹೆಸರು ಯಾವುದಕ್ಕೂ ಇದು ಸಂಬಂಧ ಇಲ್ಲ ಎಂದಿದ್ದಾರೆ ರವೀನಾ ಟಂಡನ್.

  ನಾನು ಮತ್ತು ಸಂಜಯ್ ದತ್ ಒಟ್ಟಿಗೇ ನಟಿಸಲು ಹೋದಾಗ ಇಬ್ಬರಿಗೂ ಒಳ್ಳೆ ಚಾನ್ಸ್ ಸಿಕ್ಕಿತು. ತೆರೆಯ ಮೇಲೆ ಅಬ್ಬರಿಸಿಬಿಡೋಣ ಎಂದುಕೊಂಡಿದ್ದೆವು. ಆದರೆ ಡೈರೆಕ್ಟರ್ ಪ್ರಶಾಂತ್ ನೀಲ್ ಕಥೆಯಲ್ಲಿ ನಮ್ಮಿಬ್ಬರಿಗೆ ಒಟ್ಟಿಗೇ ನಟಿಸುವ ದೃಶ್ಯವೇ ಇರಲಿಲ್ಲ. ನಾವು ಕೇಳಿಕೊಂಡರೂ, ಪ್ರಶಾಂತ್ ಒಪ್ಪಲಿಲ್ಲ ಎಂದಿದ್ದಾರೆ ರವೀನಾ.

 • ಕೆಜಿಎಫ್ 2ನಲ್ಲಿ ನಾನು ಪ್ರಧಾನಿ, ಆದರೆ ಇಂದಿರಾ ಗಾಂಧಿ ಅಲ್ಲ - ರವೀನಾ ಟಂಡನ್

  i am not playing indira gandhi in kgf chapter 2

  ಆಕೆ ಡೆತ್ ವಾರೆಂಟ್ ಕೊಡಲು ಬಂದಿದ್ದಾರೆ ಎಂದು ಪ್ರಶಾಂತ್ ನೀಲ್ ಹೇಳಿದ್ದರೆ, ಕೆಜಿಎಫ್ ಚಾಪ್ಟರ್ 1ನಲ್ಲಿ ಕಾಣಿಸಿದ್ದ ಮಹಿಳೆಯ ಪುಟ್ಟ ದೃಶ್ಯಗಳನ್ನು ಇಂದಿರಾ ಗಾಂಧಿಗೆ ಹೋಲಿಸಿ ಪುಳಕಗೊಂಡಿದ್ದರು ಪ್ರೇಕ್ಷಕರು. ಆದರೆ, ಈ ಎಲ್ಲ ಕುತೂಹಲಗಳ ಮೇಲೊಂದು ದೀಪ ಹಚ್ಚಿ ಸಸ್ಪೆನ್ಸ್‍ನ್ನು ಇನ್ನಷ್ಟು ದೊಡ್ಡದು ಮಾಡಿದ್ದಾರೆ ರವೀನಾ ಟಂಡನ್.

  ನಾನು ಚಿತ್ರದಲ್ಲಿ ಪ್ರಧಾನಮಂತ್ರಿಯ ಪಾತ್ರ ಪೋಷಿಸಿದ್ದೇನೆ. ಅದೊಂದು ಸವಾಲಿನ ಪಾತ್ರ. ಪಾಸಿಟಿವ್ ಮಹಿಳೆಯ ಪಾತ್ರ. ಪ್ರತಿಯೊಬ್ಬರೂ ಇಂದಿರಾ ಗಾಂಧಿ ಇರಬಹುದು ಎಂದು ಭಾವಿಸಿದ್ದಾರೆ. ಅದು ತಪ್ಪು ಪರಿಕಲ್ಪನೆ. ಅದು ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಸಹ ಆಗಿರಬಹುದು ಅಲ್ಲವೇ..

  ಇದು ರವೀನಾ ಪ್ರಶ್ನೆ. ಅಫ್‍ಕೋರ್ಸ್.. ಅದು ಬೆನಜಿರ್ ಬುಟ್ಟೋ ಆಗಿದ್ದರೂ ಆಶ್ಚರ್ಯವಿಲ್ಲ. ಆದರೆ, ಭಾರತಕ್ಕೆ ಇದುವರೆಗೆ ಮಹಿಳಾ ಪ್ರಧಾನಿಯಾಗಿರುವ ಏಕೈಕ ವ್ಯಕ್ತಿ ಇಂದಿರಾ ಗಾಂಧಿ.

  ಸ್ಸೋ.. ರವೀನಾ ಟಂಡನ್ ಅದೇನೇ ಸಸ್ಪೆನ್ಸ್ ಇಟ್ಟರೂ ರಾಕಿ ಭಾಯ್ ಫ್ಯಾನ್ಸ್ ನಾವ್ ಅಂದ್ಕೊಂಡಿರೋ ಸತ್ಯ ಕಣ್ರೋ ಅಂತಾರೆ. ನೋ ಡೌಟ್.

  ಆದರೆ, ಎಲ್ಲ ಕುತೂಹಲ, ಸಸ್ಪೆನ್ಸ್, ನಿರೀಕ್ಷೆಗೂ ಉತ್ತರ ಸಿಕ್ಕೋದು ಅಕ್ಟೋಬರ್ 23ಕ್ಕೆ. ಹೊಂಬಾಳೆ ಪ್ರೊಡಕ್ಷನ್ಸ್‍ನ ಮೆಗಾ ಪ್ರಾಜೆಕ್ಟ್ ಸಿನಿಮಾಗೆ ಅಲ್ಲಿಯವರೆಗೂ ಕಾಯದೇ ವಿಧಿ ಇಲ್ಲ.

 • ಕೆಜಿಎಫ್ 3ಗೆ ಪ್ಲಾನ್ ರೆಡಿ ಆಗಿದ್ಯಾ?

  ಕೆಜಿಎಫ್ 3ಗೆ ಪ್ಲಾನ್ ರೆಡಿ ಆಗಿದ್ಯಾ?

  ಕೆಜಿಎಫ್ ಚಾಪ್ಟರ್ 2 ಸೂಪರ್ ಡ್ಯೂಪರ್ ಬ್ಲಾಕ್ ಬಸ್ಟರ್ ಎನ್ನಿಸಿಕೊಂಡಿರೋವಾಗಲೇ ಚಾಪ್ಟರ್ 3 ಬರೋದು ಪಕ್ಕಾ ಆಯ್ತಾ? ಚಾಪ್ಟರ್ 2 ಕ್ಲೈಮಾಕ್ಸ್‍ನಲ್ಲಿ ಅಂಥಾದ್ದೊಂದು ಸುಳಿವು ಕೊಟ್ಟಿದ್ದಾರೆ ಪ್ರಶಾಂತ್ ನೀಲ್. ಚಾಪ್ಟರ್ 1 ಮತ್ತು ಚಾಪ್ಟರ್ 2 ಎರಡೂ ಸೂಪರ್ ಹಿಟ್ ಎನ್ನಿಸಿಕೊಂಡಿರೋದ್ರಿಂದ.. 3ನೇ ಭಾಗಕ್ಕೆ ಪ್ಲಾನ್ ಮಾಡಿದ್ದರೂ ಮಾಡಿರಬಹುದು.

  ಆದರೆ.. ಈಗಾಗಲೇ ಚಿತ್ರದ ಕೆಲವೊಂದಿಷ್ಟು ಸೀನ್‍ಗಳ ಬಗ್ಗೆ ನೀಲ್ ಮತ್ತು ಯಶ್ ಮಾತನಾಡಿಕೊಂಡಿದ್ದಾರಂತೆ. ಸ್ವತಃ ಯಶ್ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ. ಅಷ್ಟು ಬಿಟ್ಟರೆ ಮತ್ತೇನನ್ನೂ ಹೇಳಿಲ್ಲ. ಪಾರ್ಟ್ 3 ಮಾಡೋಕೆ ಸಾಕಷ್ಟು ಅವಕಾಶ ಇದೆ. ಸ್ಟೋರಿ ಡೆವಲಪ್ ಮಾಡೋಕೂ ಚಾನ್ಸ್‍ಗಳಿವೆ ಎಂದಿರೋ ಯಶ್ ಪಾರ್ಟ್ 3 ಬಂದೇ ಬರುತ್ತೆ ಅನ್ನೋದನ್ನೂ ಹೇಳಿಲ್ಲ. ಪ್ರಶಾಂತ್ ನೀಲ್ ಕೂಡಾ ಈ ಬಗ್ಗೆ ಎಲ್ಲಿಯೂ ಸ್ಪಷ್ಟವಾಗಿ ಬಾಯಿಬಿಟ್ಟಿಲ್ಲ.

  ಕೆಜಿಎಫ್ ನಂತರ ಮುಂದೇನು ಎಂಬ ಬಗ್ಗೆ ಯಶ್ ಓಪನ್ ಆಗಿ ಇದೂವರೆಗೆ ಮಾತನಾಡಿಲ್ಲ. ನರ್ತನ್ ಜೊತೆ ಹೊಸ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಇದೆಯಾದರೂ, ಅದು ಅಧಿಕೃತವಾಗಿಲ್ಲ. ಪ್ರಶಾಂತ್ ನೀಲ್ ಅವರೇನೋ ಸದ್ಯಕ್ಕೆ ಪ್ರಭಾಸ್ ಜೊತೆ ಸಲಾರ್ ಮಾಡುತ್ತಿದ್ದಾರೆ. ಅದಾದ ನಂತರ ಎನ್‍ಟಿಆರ್ ಸಿನಿಮಾ ಇದೆ. ಶ್ರೀಮುರಳಿ ಜೊತೆ ಬಘೀರ ಇದೆ. ಸಲಾರ್ ಮುಗಿದ ನಂತರ ಕೆಜಿಎಫ್ ಚಾಪ್ಟರ್ 3 ಕೈಗೆತ್ತಿಕೊಳ್ತಾರಾ..? ಈಗಲೇ ಏನೂ ಹೇಳೋಕೆ ಆಗಲ್ಲ.

 • ಕೆಜಿಎಫ್ 9ನೇ ದಿನದ ಕಲೆಕ್ಷನ್ ಜರ್ಸಿ ಫಸ್ಟ್ ಡೇಗಿಂತ ಜಾಸ್ತಿ..!

  ಕೆಜಿಎಫ್ 9ನೇ ದಿನದ ಕಲೆಕ್ಷನ್ ಜರ್ಸಿ ಫಸ್ಟ್ ಡೇಗಿಂತ ಜಾಸ್ತಿ..!

  ಎಲ್ಲವೂ ಪ್ಲಾನ್ ಪ್ರಕಾರವೇ ಆಗಿದ್ದರೆ ಕೆಜಿಎಫ್ ಚಾಪ್ಟರ್ 2 ಎದುರು ಹಿಂದಿಯ ಜೆರ್ಸಿ ರಿಲೀಸ್ ಆಗಬೇಕಿತ್ತು. ಶಾಹಿದ್ ಕಪೂರ್ ಹೀರೋ ಆಗಿರೋ ಚಿತ್ರ ಈಗಾಗಲೇ ತೆಲುಗಿನಲ್ಲಿ ರಿಲೀಸ್ ಆಗಿದ್ದ ಚಿತ್ರದ ರೀಮೇಕ್. ಆ ಚಿತ್ರವನ್ನು ಹಿಂದಿಯಲ್ಲಿ ದಿಲ್ ರಾಜು ನಿರ್ಮಿಸಿದ್ದರು. ಕೆಜಿಎಫ್‍ಗೆ ಎದುರಾಗಿ ಬರಬೇಕಿದ್ದ ಸಿನಿಮಾ ಒಂದು ವಾರ ಲೇಟ್ ಆಗಿ ಬಂತು. ಆದರೆ ರಿಸಲ್ಟ್ ಏನಾಗಿದೆ ನೋಡಿ. ಜೆರ್ಸಿ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಬಂದಿದ್ದು ಮೊದಲ ದಿನದ ಜೆರ್ಸಿ ಬಾಕ್ಸಾಫೀಸ್ ಕಲೆಕ್ಷನ್ ಮೂರೂವರೆ ಕೋಟಿಯಾದರೆ, ಕೆಜಿಎಫ್ 9ನೇ ದಿನದ ಕಲೆಕ್ಷನ್ ಸುಮಾರು 10 ಕೋಟಿ. ಶನಿವಾರದ ಜೆರ್ಸಿ ಕಲೆಕ್ಷನ್ ಐದೂವರೆ ಕೋಟಿ ಇದ್ದರೆ, ಕೆಜಿಎಫ್ 10ನೇ ದಿನದ ಕಲೆಕ್ಷನ್ 17.5 ಕೋಟಿ. ಇದು ಕೇವಲ ಹಿಂದಿ ಮಾರ್ಕೆಟ್ ಲೆಕ್ಕ.

  ಈಗಾಗಲೇ ಹಿಂದಿ ಮಾರುಕಟ್ಟೆಯಲ್ಲಿ ಆರ್.ಆರ್.ಆರ್.ನ್ನು ದಾಟಿ ಮುನ್ನುಗ್ಗುತ್ತಿರೋ ಕೆಜಿಎಫ್ ಎದುರು ತಮಿಳಿನ ಬೀಸ್ಟ್ ಶರಣಾಗಿದೆ. ತಮಿಳುನಾಡಿನಲ್ಲೂ ಬಾಕ್ಸಾಫೀಸ್‍ನಲ್ಲಿ ಬೀಸ್ಟ್ ಕಲೆಕ್ಷನ್ ಬ್ರೇಕ್ ಮಾಡಿರೋ ಕೆಜಿಎಫ್, ಕೇರಳದಲ್ಲೂ ಬಾಕ್ಸಾಫೀಸ್ ನಂ.1. ಆಂಧ್ರ, ತೆಲಂಗಾಣದಲ್ಲಿ ಮಾತ್ರ ಆರ್.ಆರ್.ಆರ್. ನಂ.1 ಸ್ಥಾನದಲ್ಲಿದೆ. ಕೆಜಿಎಫ್ ನಂ.2 ಇದೆ. ಹಾಗಂತ ಅದೂ ಪರ್ಮನೆಂಟ್ ಅಲ್ಲ. ಆರ್.ಆರ್.ಆರ್.ನಷ್ಟೇ ಕ್ರೇಜ್ ಇಟ್ಟುಕೊಂಡಿರೋ ಕೆಜಿಎಫ್, ಅಲ್ಲಿಯೂ ದಾಖಲೆ ಮುರಿದರೆ ಆಶ್ಚರ್ಯ ಪಡಬೇಕಿಲ್ಲ.