` kgf chapter 2, - chitraloka.com | Kannada Movie News, Reviews | Image

kgf chapter 2,

 • ಯಶ್ ಹೇಳಿದ ಕೊಡೆ ಮತ್ತು ಬಾಲಕನ ಸ್ಟೋರಿ

  ಯಶ್ ಹೇಳಿದ ಕೊಡೆ ಮತ್ತು ಬಾಲಕನ ಸ್ಟೋರಿ

  ಯಶ್ ಕಥೆ ಹೇಳೋದ್ರಲ್ಲಿ ಎತ್ತಿದ ಕೈ. ಅಷ್ಟು ಓದಿರೋ ಯಶ್‍ಗೆ ಕಥೆಗಳು ಬಾಯಲ್ಲಿವೆ. ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗುವಾಗ ಚೀನಾದ ಒಂದು ವಿಶೇಷ ಬಿದಿರಿನ ಕಥೆ ಹೇಳಿದ್ದರು ಯಶ್. ಆ ಬಿದಿರು ಬಿತ್ತನೆ ಮಾಡಿದ ನಂತರ ಸುಮಾರು 3 ವರ್ಷ ಮೊಳಕೆ ಕೂಡಾ ಕಾಣಿಸಲ್ಲ. ಆದರೆ 3 ವರ್ಷ ಕಳೆದ ನಂತರ ದಿಢೀರನೆ ಕೇವಲ ಮೂರ್ನಾಲ್ಕು ತಿಂಗಳಲ್ಲಿ 6 ರಿಂದ 12 ಅಡಿಗಳಷ್ಟು ಎತ್ತರಕ್ಕೆ ಬೆಳೆಯುತ್ತೆ. ಆ ಮೂರು ವರ್ಷ ಆ ಬೀಜ.. ಇಷ್ಟು ಎತ್ತರ ಬೆಳೆಯೋಕೆ ಬೇಕಾದ ಬೇರುಗಳನ್ನು ಭೂಮಿಯ ಒಳಗೆ ಇಳಿಸಿರುತ್ತೆ ಎಂದಿದ್ದರು ಯಶ್. ಕೆಜಿಎಫ್‍ಗೆ ಏಕೆ ಅಷ್ಟು ವರ್ಷ ತೆಗೆದಿಟ್ಟಿರಿ ಅನ್ನೋ ಪ್ರಶ್ನೆಗೆ ಯಶ್ ಕೊಟ್ಟಿದ್ದ ಉತ್ತರ ಅದು.

  ಈಗ ಕೆಜಿಎಫ್ ಗೆದ್ದಾಗಿದೆ. ಅದಕ್ಕೂ ಯಶ್ ಒಂದು ಚೆಂದದ ಕಥೆ ಹೇಳಿದ್ದಾರೆ.

  ಒಂದೂರಲ್ಲಿ ಬರ ಬಂದು ಎಲ್ಲರನ್ನೂ ಕಂಗಾಲು ಮಾಡಿತು. ಮಳೆ ಬಂದರೆ ಎಲ್ಲವೂ ಸರಿ ಹೋಗುತ್ತಿತ್ತು. ಆಗ ಊರಿನ ಜನರೆಲ್ಲ ಸೇರಿ ಒಟ್ಟಾಗಿ ದೇವರನ್ನು ಪ್ರಾರ್ಥನೆ ಮಾಡಲು ನಿರ್ಧರಿಸಿದರು. ಹಾಗೆ ಪ್ರಾರ್ಥಿಸಿದರೆ ಮಳೆ ಬರುತ್ತೆ ಅನ್ನೋದು ನಂಬಿಕೆ. ಆ ನಂಬಿಕೆಯೊಂದಿಗೆ ಹಲವರು ಬಂದರು. ಆದರೆ ಒಬ್ಬ ಹುಡುಗ ಮಾತ್ರ ಕೊಡೆ ಹಿಡಿದು ಬಂದಿದ್ದ. ಅವನನ್ನು ಕೆಲವರು ಆಡಿಕೊಂಡರು. ಓವರ್ ಕಾನ್ಫಿಡೆನ್ಸ್ ಎಂದರು. ಆದರೆ ಆ ಹುಡುಗನಲ್ಲಿದ್ದದ್ದು ನಂಬಿಕೆ ಮಾತ್ರ. ನಾನೂ ಆ ಹುಡುಗನಂತೆ. ಆ ನಂಬಿಕೆಗೆ ನೀವು ಪ್ರೀತಿಯ ಮಳೆ ಸುರಿಸಿದ್ದೀರಿ. ಇಡೀ ಕೆಜಿಎಫ್ ಟೀಂ ಪರವಾಗಿ ನಿಮಗೆ ನನ್ನ ಕೃತಜ್ಞತೆಗಳು. ನಮ್ಮ ಪ್ರಯತ್ನಕ್ಕೆ ಸಾರ್ಥಕತೆ ತುಂಬಿದ್ದೀರಿ. ನಿಮ್ಮ ಹೃದಯವೇ ನಮ್ಮ ಟೆರಿಟರಿ ಎಂದಿದ್ದಾರೆ ಯಶ್.

  ಕೆಜಿಎಫ್ ರಿಲೀಸ್ ನಂತರ ಕುಟುಂಬದೊಂದಿಗೆ ವಿದೇಶಕ್ಕೆ ತೆರಳಿರುವ ಯಶ್ ಪತ್ನಿ ರಾಧಿಕಾ ಹಾಗೂ ಮಕ್ಕಳೊಂದಿಗೆ ರಿಲ್ಯಾಕ್ಸ್ ಆಗುತ್ತಿದ್ದಾರೆ.

 • ಯಶ್`ರಿಂದ ಉಡುಪಿಯ ಕೃಷ್ಣ, ಕಟೀಲು ದುರ್ಗಾಪರಮೇಶ್ವರಿ ದರ್ಶನ

  ಯಶ್`ರಿಂದ ಉಡುಪಿಯ ಕೃಷ್ಣ, ಕಟೀಲು ದುರ್ಗಾಪರಮೇಶ್ವರಿ ದರ್ಶನ

  ನಟ ಯಶ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರ ದೇಗುಲ ದರ್ಶನ ಮುಂದುವರೆದಿದೆ. ಇಬ್ಬರೂ ಕಟೀಲು ದುರ್ಗಾಪರಮೇಶ್ವರಿ ಹಾಗೂ ಉಡುಪಿಯ ಶ್ರೀಕೃಷ್ಣ ದರ್ಶನ ಪಡೆದಿದ್ದಾರೆ.

  ಯಶ್ ಮತ್ತು ವಿಜಯ್ ಕಿರಗಂದೂರು ಕಾಂಬಿನೇಷನ್`ನ ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೆ ಸಿದ್ಧವಾಗಿದೆ. ಏಪ್ರಿಲ್ 14ರಂದು ಸಿನಿಮಾ ರಿಲೀಸ್ ಆಗಲಿದ್ದು, ಬಿಡುಗಡೆಗೆ ಮುನ್ನ ದೇವರ ಆಶೀರ್ವಾದ ಪಡೆಯುವುದು ವಿಜಯ್ ಅವರ ಪದ್ಧತಿ. ಆ ಪದ್ಧತಿಯೇ ಇಡೀ ಚಿತ್ರತಂಡ ದೇಗುಲ ಯಾತ್ರೆ ಕೈಗೊಳ್ಳುತ್ತದೆ. ಇದಿನ್ನೂ ಆರಂಭ.. ದೇಗುಲ ಯಾತ್ರೆ ಮುಗಿಸಿದ ನಂತರವೇ ಚಿತ್ರದ ಪ್ರಚಾರ ಆರಂಭಿಸಲಿದೆ ಕೆಜಿಎಫ್ ಟೀಂ.

 • ಯಶ್, ವಿಜಯ್ ಕಿರಗಂದೂರು ದೇಗುಲ ದರ್ಶನ

  ಯಶ್, ವಿಜಯ್ ಕಿರಗಂದೂರು ದೇಗುಲ ದರ್ಶನ

  ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಮುನ್ನ ಯಶ್ ಮತ್ತು ವಿಜಯ್ ಕಿರಗಂದೂರು ದೇಗುಲ ದರ್ಶನ ಮಾಡುತ್ತಿದ್ದಾರೆ. ಧರ್ಮಸ್ಥಳ ಮಂಜುನಾಥ ಸ್ವಾಮಿ, ಕುಕ್ಕೆ ಸುಬ್ರಹ್ಮಣ್ಯ ದೇಗುಲ ಮತ್ತು ಉಜಿರೆಯ ಸೂರ್ಯ ಮಂದಿರಕ್ಕೆ ಭೇಟಿ ನೀಡಿದ್ದಾರೆ.

  ಧರ್ಮಸ್ಥಳದಲ್ಲಿ ಪೂಜೆ ಮುಗಿಸಿದ ಯಶ್ ಮತ್ತು ವಿಜಯ್ ಕಿರಗಂದೂರು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೊಂದಿಗೆ ಮಾತುಕತೆ ನಡೆಸಿದರು. ಚಿತ್ರದ ಬಗ್ಗೆ ಮಾಹಿತಿ ಪಡೆದುಕೊಂಡ ಹೆಗ್ಗಡೆಯವರು ಕುಟುಂಬದವರು, ಮಕ್ಕಳ ಬಗ್ಗೆಯೂ ತಿಳಿದುಕೊಂಡರು.

  ಇಷ್ಟು ಶ್ರಮ ಪಟ್ಟಿದ್ದೇವೆ. ಅದರ ಜೊತೆ ದೇವರ ಅನುಗ್ರಹವೂ ಬೇಕು. ಹೀಗಾಗಿ ಬಂದಿದ್ದೇವೆ. ಚಿತ್ರದ ಟಿಕೆಟ್ ಓಪನ್ ಆಗಿದೆ ಎಂದರು ಯಶ್.

  ಬುಕ್ಕಿಂಗ್ ಓಪನ್ ಆಗಿದ್ದು, ಬೆಂಗಳೂರಿನಲ್ಲಿ ಗರಿಷ್ಠ ಬೆಲೆ 2000 ರೂ. ಇದೆ. ಒಂದು ಲೆಕ್ಕದ ಪ್ರಕಾರ ಪ್ರಶಾಂತ್ ನೀಲ್ ನಿರ್ದೇಶನದ ಕೆಜೆಎಫ್ ಚಾಪ್ಟರ್ 2, ಆರ್.ಆರ್.ಆರ್. ಗಳಿಸಿದ್ದ ಮೊದಲ ದಿನದ ದಾಖಲೆಯನ್ನು ಮುರಿಯುವ ನಿರೀಕ್ಷೆ ಇದೆ.

 • ರಮಿಕಾ ಸೇನ್ ಡಬ್ಬಿಂಗ್ ಕಂಪ್ಲೀಟ್

  ರಮಿಕಾ ಸೇನ್ ಡಬ್ಬಿಂಗ್ ಕಂಪ್ಲೀಟ್

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್: ಚಾಪ್ಟರ್ 2 ಚಿತ್ರದ ಪೋಸ್ಟ್ ಪ್ರೊಡಕ್ಷನ್ ಬಿರುಸಿನಿಂದ ಸಾಗುತ್ತಿದೆ. ಇತ್ತೀಚೆಗಷ್ಟೇ ನಾಯಕಿ ನಟಿ ಶ್ರೀನಿಧಿ ಶೆಟ್ಟಿ ಡಬ್ಬಿಂಗ್ ಮುಗಿಸಿದ್ದರು. ಈಗ ರಮಿಕಾ ಸೇನ್ ಪಾತ್ರದಲ್ಲಿ ಕಾಣಿಸಿಕೊಂಡಿರೋ ರವೀನಾ ಟಂಡನ್ ತಮ್ಮ ಪಾತ್ರದ ಡಬ್ಬಿಂಗ್ ಮುಗಿಸಿದ್ದಾರೆ.

  ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್  ಚಾಪ್ಟರ್ 1 ಭರ್ಜರಿ ಸಕ್ಸಸ್ ಕಂಡಿದ್ದ ಹಿನ್ನೆಲೆಯಲ್ಲಿ ಕೆಜಿಎಫ್: ಚಾಪ್ಟರ್ 2’ ಮೇಲೆ ಭಾರ ನಿರೀಕ್ಷೆ ಇದೆ. ಇದೇ ಏಪ್ರಿಲ್ 14 ರಂದು ಸಿನಿಮಾ ರಿಲೀಸ್ ಆಗಲಿದೆ. ಇದು ಕನ್ನಡದಲ್ಲಿ ರವೀನಾ ಟಂಡನ್ ನಟಿಸಿರೋ 2ನೇ ಸಿನಿಮಾ. ಮೊದಲನೇ ಸಿನಿಮಾ ಉಪೇಂದ್ರ ಕೂಡಾ ಹಲವು ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಈಗ ಕೆಜಿಎಫ್ ಚಾಪ್ಟರ್ 2 ಕೂಡಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ರಿಲೀಸ್ ಆಗುತ್ತಿದೆ.

  ಯಶ್ ಜೊತೆ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರೈ ಸೇರಿದಂತೆ ಘಟಾನುಘಟಿ ಕಲಾವಿದರ ತಂಡವೇ ಚಿತ್ರದಲ್ಲಿದ್ದು, 2023ರ ಭಾರೀ ನಿರೀಕ್ಷೆಯ ಚಿತ್ರ ಕೆಜಿಎಫ್ ಆಗಿದೆ.

 • ರಾಕಿ ಭಾಯ್ಗೆ ಅಮೀರ್ ಭಾಯ್ ಚಾಲೆಂಜ್

  ರಾಕಿ ಭಾಯ್ಗೆ ಅಮೀರ್ ಭಾಯ್ ಚಾಲೆಂಜ್

  ಕೆಜಿಎಫ್ ಚಾಪ್ಟರ್ 2. 2021ರಲ್ಲೇ ರಿಲೀಸ್ ಆಗಬೇಕಿದ್ದ ಸಿನಿಮಾ. ಇಡೀ ದೇಶದ ಬಹುನಿರೀಕ್ಷಿತ ಚಿತ್ರಗಳಲ್ಲಿ ಕೆಜಿಎಫ್ ಚಾಪ್ಟರ್ ನಂ.1 ಸ್ಥಾನದಲ್ಲಿದೆ. ಯಶ್, ಸಂಜಯ್ ದತ್, ರವೀನಾ ಟಂಡನ್ ನಟಿಸಿರುವ ಕೆಜಿಎಫ್, 2022ರ ಏಪ್ರಿಲ್ 14ರಂದು ರಿಲೀಸ್ ಆಗುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ಹೊಂಬಾಳೆ ಬ್ಯಾನರಿನ ಚಿತ್ರಕ್ಕೆ ಈ ಬಾರಿ ಚಾಲೆಂಜ್ ಹಾಕಿರೋದು ಅಮೀರ್ ಖಾನ್.

  ಅದೇ ದಿನ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ರಿಲೀಸ್ ಆಗುತ್ತಿದೆ. ಫಾರೆಸ್ಟ್ ಗಂಪ್ ಅನ್ನೋ ಇಂಗ್ಲಿಷ್ ಸಿನಿಮಾದ ಸ್ಫೂರ್ತಿಯಲ್ಲಿ ಬರುತ್ತಿರೋ ಲಾಲ್ ಸಿಂಗ್ ಚಡ್ಡಾಗೆ ಅಮೀರ್ ಖಾನ್ ಹೀರೋ ಮತ್ತು ನಿರ್ಮಾಪಕ. ಕರೀನಾ ಕಪೂರ್ ಆ ಚಿತ್ರದ ನಾಯಕಿ. ಇದೇ ಚಿತ್ರದ ಮೂಲಕ ತೆಲುಗಿನ ನಾಗಚೈತನ್ಯ ಬಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರವನ್ನು ಏಪ್ರಿಲ್ 14ರಂದೇ ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿದೆ.

  ಅಂದಹಾಗೆ ಕೆಜಿಎಫ್ ಚಾಪ್ಟರ್ 1 ರಿಲೀಸ್ ಆದಾಗ, ಶಾರೂಕ್ ಖಾನ್ ಅಭಿನಯದ ಝೀರೋ ರಿಲೀಸ್ ಆಗಿತ್ತು. ಕೆಜಿಎಫ್ ಎದುರು ಪಲ್ಟಿ ಹೊಡೆದಿತ್ತು. ಈಗ ಅಮೀರ್ ಖಾನ್ ಸಿನಿಮಾ. ರಿಸಲ್ಟ್ ನೋಡೋಕೆ ಇನ್ನೂ 5 ತಿಂಗಳು ಕಾಯಬೇಕು.

 • ರಾಕಿ ಭಾಯ್‍ಗೆ ಡೆತ್ ವಾರೆಂಟ್ ಕೊಡಲು ರವೀನಾ ಎಂಟ್ರಿ

  raveen tandon joins kgf chapter 2 team

  ಮಸ್ತ್ ಮಸ್ತ್ ಹುಡುಗಿ ರವೀನಾ ಟಂಡನ್ ಈಗ ಸೀನಿಯರ್ ನಟಿ. ಅವರೀಗ ಕೆಜಿಎಫ್ ಟೀಂಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಪಾತ್ರದ ಕೆಲಸವೇ ರಾಕಿ ಭಾಯ್‍ಗೆ ಡೆತ್ ವಾರೆಂಟ್ ಕೊಡೋದು.

  20 ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಬರುತ್ತಿರುವ ರವೀನಾ, ಕೆಜಿಎಫ್ ಚಾಪ್ಟರ್ 2ನಲ್ಲಿ ಪ್ರಧಾನಿಯ ಪಾತ್ರ ಮಾಡಿದ್ದಾರೆ. ದೇಶದ ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರಾಗಿದ್ದ ಕಾರಣ, ರವೀನಾ ಪಾತ್ರದಲ್ಲಿ ಇಂದಿರಾ ಛಾಯೆಯೂ ಇದೆ.

  ರವೀನಾ ಟಂಡನ್, ಇಲ್ಲಿ ರಮಿಕಾ ಸೇನ್ ಹೆಸರಿನ ಪಾತ್ರ ಮಾಡುತ್ತಿದ್ದು, ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಸ್ವಾಗತ ಕೋರಿದ್ದಾರೆ.

  ಯಶ್, ಸಂಜಯ್ ದತ್, ಅನಂತ ನಾಗ್, ಶ್ರೀನಿಧಿ ಶೆಟ್ಟಿ ಅಭಿನಯದ ಕೆಜಿಎಫ್ ಚಾಪ್ಟರ್ 2ಗೆ ವಿಜಯ್ ಕಿರಗಂದೂರು ನಿರ್ಮಾಪಕ. 2020ರ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಆಗಿರುವ ಕೆಜಿಎಫ್ ಚಾಪ್ಟರ್ 2 ಜೂನ್ ಅಥವಾ ಜುಲೈನಲ್ಲಿ ರಿಲೀಸ್ ಆಗುವ ನಿರೀಕ್ಷೆ ಇದೆ.

 • ರಿಲೀಸ್ ಆಗಬೇಕಿದ್ದ ದಿನವೇ ಕೆಜಿಎಫ್ 2 ಬರೆದ ದಾಖಲೆ

  ರಿಲೀಸ್ ಆಗಬೇಕಿದ್ದ ದಿನವೇ ಕೆಜಿಎಫ್ 2 ಬರೆದ ದಾಖಲೆ

  ಬಹುತೇಕರಿಗೆ ನೆನಪಿದೆಯೋ.. ಇಲ್ಲವೋ ಗೊತ್ತಿಲ್ಲ. ಜುಲೈ 16. ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಬೇಕಿದ್ದ ದಿನ. ಕೋವಿಡ್, ಲಾಕ್ ಡೌನ್ ಕಾಟ ಇಲ್ಲದೇ ಹೋಗಿದ್ದರೆ.. ಇಷ್ಟೊತ್ತಿಗೆ ಬಾಕ್ಸಾಫೀಸಿನಲ್ಲಿ ದಾಖಲೆ ಬರೆಯುತ್ತಿತ್ತು ಕೆಜಿಎಫ್ ಚಾಪ್ಟರ್ 2. ಆದರೆ.. ಹಾಗಾಗಲಿಲ್ಲ. ಆದರೇನಂತೆ.. ಚಿತ್ರದ ಟ್ರೇಲರ್ ಇನ್ನೊಂದು ದಾಖಲೆ ಬರೆದಿದೆ.

  ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೇಲರ್‍ನ್ನು ಯೂಟ್ಯೂಬ್‍ನಲ್ಲಿ ನೋಡಿದವರ ಸಂಖ್ಯೆ 200 ಮಿಲಿಯನ್. ಅಂದರೆ 20 ಕೋಟಿ ವೀಕ್ಷಣೆ. ಹಿಂದಿಯೂ ಸೇರಿದಂತೆ ಯಾವ ಚಿತ್ರದ ಟ್ರೇಲರ್ ಕೂಡಾ ಈ ಮಟ್ಟಿನ ವೀಕ್ಷಣೆ ಪಡೆದಿಲ್ಲ ಎಂಬುದು ನೆನಪಿನಲ್ಲಿರಲಿ. ಅಷ್ಟೇ  ಅಲ್ಲ.. ಈ ದಾಖಲೆ ಅರ್ಥಾತ್ 20 ಕೋಟಿ ವೀಕ್ಷಣೆಯ ದಾಖಲೆ ಹೊಂಬಾಳೆ ಫಿಲಮ್ಸ್‍ನ ಅಧಿಕೃತ ಯೂಟ್ಯೂಬ್ ಪೇಜ್‍ನಲ್ಲಿ ಮಾತ್ರ. ಉಳಿದಂತೆ ಅದನ್ನು ಕಾಪಿ ಮಾಡಿ.. ಮಿಕ್ಸ್ ಮಾಡಿ.. ಸ್ಕೂಪ್ ಮಾಡಿ.. ಸ್ಪೂಫ್ ಮಾಡಿ.. ರಿವ್ಯೂ ಮಾಡಿ.. ಡಿಸೈನ್ ಡಿಸೈನ್ ಆಗಿ ಪ್ರಸಾರವಾಗಿರುವ ವಿಡಿಯೋಗಳೂ ಲಕ್ಷ ಲಕ್ಷ ವ್ಯೂವ್ಸ್ ಪಡೆದಿವೆ. ಅವುಗಳ ಲೆಕ್ಕ ಈ 20 ಕೋಟಿ ವೀಕ್ಷಕರ ವ್ಯಾಪ್ತಿಯಲ್ಲಿ ಬರಲಿಲ್ಲ. ಇದು ಕೇವಲ ಹೊಂಬಾಳೆ ಯೂಟ್ಯೂಬ್ ಚಾನೆಲ್ಲಿನ ಅಧಿಕೃತ ಲೆಕ್ಕ. ಈ ದಾಖಲೆ ಚಿತ್ರವನ್ನು ರಿಲೀಸ್ ಮಾಡೋದಾಗಿ ಘೋಷಿಸಿದ್ದ ದಿನವೇ ಆಗಿರೋದು ವಿಶೇಷ.

  ವಿಜಯ್ ಕಿರಗಂದೂರು-ಪ್ರಶಾಂತ್ ನೀಲ್-ಯಶ್-ರವೀನಾ ಟಂಡನ್-ಸಂಜಯ್ ದತ್-ಪ್ರಕಾಶ್ ರೈ-ಶ್ರೀನಿಧಿ ಶೆಟ್ಟಿ ಕಾಂಬಿನೇಷನ್‍ನ ಭರ್ಜರಿ ಚಿತ್ರವಿದು. ಯಾವಾಗ ರಿಲೀಸ್ ಆನ್ನೋದು ಗೊತ್ತಿರುವುದು ಕೆಲವೇ ಕೆಲವರಿಗೆ ಮಾತ್ರ. ಸದ್ಯಕ್ಕಂತೂ ಇಲ್ಲ.

 • ವಿವಾದ : ಅನಂತ್ ನಾಗ್ ಜಾಗಕ್ಕೆ ಪ್ರಕಾಶ್ ರೈ

  prakash raj replaces ananth nag in kgf chapter 2

  ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೀಗ ಇನ್ನೊಂದು ವಿವಾದ ಸುತ್ತಿಕೊಂಡಿದೆ. ಕೆಲವು ತಿಂಗಳ ಹಿಂದೆ ಕೆಜಿಎಫ್ 2ನಿಂದ ಅನಂತ್ ನಾಗ್ ಹೊರನಡೆದಿದ್ದಾರೆ ಎಂಬ ಸುದ್ದಿಯಿತ್ತು. ಈಗ ಅದು ಹೆಚ್ಚೂ ಕಡಿಮೆ ಅಧಿಕೃತವಾಗಿದೆ. ಅನಂತ್ ನಾಗ್ ನಟಿಸಿದ್ದ ಪಾತ್ರಕ್ಕೆ ಪ್ರಕಾಶ್ ರೈ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ.

  ಅನಂತ್ ನಾಗ್ ಪಾತ್ರವೂ ಇರುತ್ತೆ, ಪ್ರಕಾಶ್ ರೈ ಪಾತ್ರ ಹೊಸದು ಎಂದು ಚಿತ್ರತಂಡ ಹೇಳುತ್ತಿದೆಯಾದರೂ, ಅನಂತ್ ನಾಗ್ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ. ನಾನು ಕೆಜಿಎಫ್ ಚಾಪ್ಟರ್ 2ನಲ್ಲಿ ನಟಿಸುತ್ತಿಲ್ಲ ಎಂದು. ಹೀಗಾಗಿ ಗೊಂದಲಗಳ ನಡುವೆಯೇ ಒಂದು ಸ್ಪಷ್ಟನೆ ಸಿಕ್ಕಿದೆ. ಕೆಜಿಎಫ್ ಚಾಪ್ಟರ್ 2ನಲ್ಲಿ ಅನಂತ್ ನಾಗ್ ಇರಲ್ಲ.

  ಇದರ ಜೊತೆಗೆ ಪ್ರಕಾಶ್ ರೈ ಎಂಟ್ರಿ ಕೊಟ್ಟ ಬೆನ್ನಲ್ಲೇ ಬಲಪಂತೀಯರು ಕೆಜಿಎಫ್ ಚಾಪ್ಟರ್ 2 ವಿರುದ್ಧ ಅಭಿಯಾನವನ್ನೇ ಆರಂಭಿಸಿದ್ದಾರೆ. ಎಡಪಂತೀಯ ವಿಚಾರಧಾರೆಯ ಪ್ರಕಾಶ್ ರೈ, ಮೋದಿ ಮತ್ತು ಬಿಜೆಪಿಯ ಪ್ರಬಲ ವಿರೋಧಿ. ಇದರಿಂದ ಮೋದಿ ಮತ್ತು ಬಿಜೆಪಿ ಪರವಾದಿಗಳ ಕೆಂಗಣ್ಣಿಗೆ ಗುರಿಯಾಗಿರೋ ಪ್ರಕಾಶ್ ರೈ ಮೇಲಿನ ಸಿಟ್ಟು, ಈಗ ಕೆಜಿಎಫ್ ಚಾಪ್ಟರ್ 2 ವಿರುದ್ಧ ತಿರುಗುತ್ತಿದೆ. ವಿಶೇಷವೆಂದರೆ ಪ್ರಕಾಶ್ ರೈ ಎದುರು ನಟಿಸುತ್ತಿರೋದು ವಿಚಾರಧಾರೆಯಲ್ಲಿ ರೈಗೆ ತದ್ವಿರುದ್ಧ ದಿಕ್ಕಿನಲ್ಲಿರುವ ಮಾಳವಿಕಾ ಅವಿನಾಶ್.

  ಒಟ್ಟಿನಲ್ಲಿ ಈ ವಿವಾದವನ್ನು ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು, ಸಹ ನಿರ್ಮಾಪಕ ಕಾರ್ತಿಕ್ ಗೌಡ, ನಾಯಕ ನಟ ಯಶ್.. ಇವರೆಲ್ಲ ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಹಲವಂತೂ ಇದೆ.

 • ಶಾಕಿಂಗ್ ಅಧೀರ.. ವೈಕ್ಸಿಂಗ್ ಅಧೀರ.. ಅರೆರೆ.. ಅಧೀರ ಇಷ್ಟೊಂದು ಕ್ರೂರಿನಾ..?

  adheera's look creates craze

  ಸಂಜಯ್ ದತ್ ಹುಟ್ಟುಹಬ್ಬಕ್ಕೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಸಂಜಯ್ ದತ್ ಲುಕ್ ರಿವೀಲ್ ಆಗಿದೆ. ಲುಕ್ ನೋಡಿದರೇನೇ ಭಯ ಹುಟ್ಟಿಸುವಂತಿದೆ. ಈ ಭಯಾನಕ ಲುಕ್ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದರೆ, ಪಾತ್ರ ಇಷ್ಟೊಂದು ಕ್ರೂರವಾಗಿರುತ್ತಾ ಅನ್ನೋ ಪ್ರಶ್ನೆಯನ್ನೂ ಹುಟ್ಟು ಹಾಕಿದೆ.

  ಇನ್ನೂ ಈ ಪಾತ್ರದ ಲುಕ್‍ಗೆ ಪ್ರೇರಣೆಯಾಗಿರೋದು ಹಾಲಿವುಡ್ ಧಾರಾವಾಹಿ ವೈಕ್ಸಿಂಗ್ಸ್ ಸಿರೀಸ್‍ನ ರಾಗ್ನರ್ ಲಾಥ್‍ಬ್ರಾಕ್ ಅವರ ಪಾತ್ರ. ರಾಕಿ ಭಾಯ್ ಎದುರು ಹೊಡೆದಾಡಲು ಸಿದ್ಧವಾಗಿರುವ ಅಧೀರನ ಲುಕ್‍ನಲ್ಲೇ ಪ್ರಶಾಂತ್ ನೀಲ್ ಗೆದ್ದಿದ್ದಾರೆ. ಗೆಟ್ ರೆಡಿ ಟು ಕೆಜಿಎಫ್ ಚಾಪ್ಟರ್ 2.

 • ಸಂಜಯ್ ದತ್ ಪಾತ್ರದ ಶೂಟಿಂಗ್ ಮುಗಿದಿದೆಯಾ..?

  sanjay dutt's health condition worries kgf team

  ಸ್ಯಾಂಡಲ್‍ವುಡ್‍ಗೆ ಇದೇ ಮೊದಲ ಬಾರಿಗೆ ಎಂಟ್ರಿ ಕೊಟ್ಟಿರುವ ಸಂಜಯ್ ದತ್, ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್ 2ನಲ್ಲಿ ಅಧೀರನ ಪಾತ್ರದಲ್ಲಿ ನಟಿಸಿದ್ದಾರೆ. ಕೊರೊನಾ ಸಂಕಷ್ಟದಿಂದಾಗಿ ಬ್ರೇಕ್ ತೆಗೆದುಕೊಂಡಿರುವ ಕೆಜಿಎಫ್ ಟೀಂಗೆ ಈಗ ಎಲ್ಲರೂ ಕೇಳ್ತಿರೋ ಪ್ರಶ್ನೆ.. ಸಂಜಯ್ ದತ್ ಪಾತ್ರದ ಶೂಟಿಂಗ್ ಮುಗಿದಿದೆಯಾ ಅನ್ನೋದು.

  ಸಂಜಯ್ ದತ್ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಎಂದು ಗೊತ್ತಾಗಿದ್ದೇ ತಡ, ಅಭಿಮಾನಿಗಳು ಆತಂಕಗೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚಿತ್ರತಂಡ, ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದೆ. ಒಂದೆರಡು ಸೀನ್ ಬಾಕಿಯಿದೆ. ಸಂಜಯ್ ದತ್ ಬೇಗ ಗುಣಮುಖರಾಗಲಿದ್ದು, ಅವರ ಪಾತ್ರಕ್ಕೆ ಅವರೇ ಡಬ್ಬಿಂಗ್ ಮಾಡಲಿದ್ದಾರೆ ಎಂದೂ ಹೇಳಿದೆ.

  ಸಂಜಯ್ ದತ್ ಬೇಗ ಗುಣಮುಖರಾಗಲಿ.

 • ಸರ್ರನೆ ಬಂದ ತೂಫಾನ್ ವೇಗಕ್ಕೆ ರೆಕಾರ್ಡುಗಳು ಚಿಂದಿಚಿಂದಿ

  ಸರ್ರನೆ ಬಂದ ತೂಫಾನ್ ವೇಗಕ್ಕೆ ರೆಕಾರ್ಡುಗಳು ಚಿಂದಿಚಿಂದಿ

  ಕೆಜಿಎಫ್ ಚಿತ್ರದ ಹವಾ ಇರೋದೇ ಹಾಗೆ. ಕೆಜಿಎಫ್ ಚಾಪ್ಟರ್ 2 ರಿಲೀಸ್ ಯಾವಾಗ ಎಂದು ಕಾಯುತ್ತಿರೋ ಅಭಿಮಾನಿಗಳು ಚಿತ್ರದ ಬಗ್ಗೆ ಸಣ್ಣದೊಂದು ಸುದ್ದಿ, ತುಣುಕು ಸಿಕ್ಕರೂ ಥ್ರಿಲ್ಲಾಗುತ್ತಾರೆ. ಅಂತಾದ್ದರಲ್ಲಿ 21ನೇ ತಾರೀಕು ಕೆಜಿಎಫ್ ಚಾಪ್ಟರ್ 2, ತೂಫಾನ್ ಸಾಂಗ್‍ನ ಲಿರಿಕಲ್ ವಿಡಿಯೋ ಬಿಟ್ಟು ಊಟದ ಮೊದಲ ಉಪ್ಪಿನಕಾಯಿ ಕೊಟ್ಟಿದೆ. ದಾಖಲೆಗಳು ಉಡೀಸ್ ಆಗುತ್ತಿವೆ.

  ಒಂದೇ ದಿನದಲ್ಲಿ ಕೆಜಿಎಫ್ ಚಾಪ್ಟರ್ 2ನ ತೂಫಾನ್ ಹಾಡು 10 ಮಿಲಿಯನ್‍ಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರವಿದು. ಚಿತ್ರದ ಪ್ರಚಾರವೂ ಭರ್ಜರಿಯಾಗಿಯೇ ಶುರುವಾಗಿದೆ. ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ನಟಿಸಿರೋ ಚಿತ್ರಕ್ಕೆ ವಿಜಯ್ ಕಿರಗಂದೂರು ನಿರ್ಮಾಪಕ. ಅಂದಹಾಗೆ ಇನ್ನೂ ಒಂದು ಸ್ಪೆಷಲ್ ನ್ಯೂಸ್. ಮಾರ್ಚ್ 27ಕ್ಕೆ ಕೆಜಿಎಫ್ ಟ್ರೇಲರ್ ರಿಲೀಸ್ ಆಗಲಿದೆಯಂತೆ.

 • ಸ್ಟಾರ್ಸ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

  ಸ್ಟಾರ್ಸ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

  ಕೊರೊನಾ ಲಾಕ್‍ಡೌನ್ ಮುಗಿದು, ಥಿಯೇಟರುಗಳೆಲ್ಲ ಓಪನ್ ಆದರೂ ಸರ್ಕಾರದ ನಿರ್ಬಂಧ ಮಾತ್ರ ರಿಲ್ಯಾಕ್ಸ್ ಆಗಿಲ್ಲ. ಹೀಗಿರುವಾಗಲೇ ಥಿಯೇಟರಿಗೆ ಬರುವ ನಿರ್ಧಾರ ಮಾಡಿ ಗೆದ್ದಿದೆ ತಮಿಳಿನ ಮಾಸ್ಟರ್. ವಿಜಯ್ ಅಭಿನಯದ ಮಾಸ್ಟರ್ 50% ಸೀಟುಗಳ ನಿರ್ಬಂಧದ ನಡುವೆಯೇ ಮೊದಲ 40 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದರ ಅರ್ಥ ಇಷ್ಟೆ, ಪ್ರೇಕ್ಷಕರು ಸ್ಟಾರ್ ಚಿತ್ರಗಳಿಗೆ ಕಾಯುತ್ತಿದ್ದಾರೆ. ಸದ್ಯಕ್ಕೆ ಪ್ರೇಕ್ಷಕರಿಗೆ ನೊಣ ಹೊಡೆಯುತ್ತಿರುವ ಥಿಯೇಟರುಗಳು ತುಂಬೋಕೆ ಶುರುವಾಗೋದು ಸ್ಟಾರ್ ಚಿತ್ರಗಳ ಎಂಟ್ರಿ ನಂತರಾನೇ. ಸ್ಸೋ.. ಸ್ಟಾರ್ ಚಿತ್ರಗಳಿಗೆ ರಿಲೀಸ್ ಡೇಟ್ ಫಿಕ್ಸ್ ಆಗುತ್ತಿವೆ.

  ಮೊದಲ ಸ್ಟಾರ್ ಸಿನಿಮಾ ಆಗಿ ರಿಲೀಸ್ ಆಗಲಿರುವ ಚಿತ್ರ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ ಪೊಗರು. ಇದು ಫೆಬ್ರವರಿ 5ರಂದು ರಿಲೀಸ್ ಆಗುತ್ತಿದೆ. ಆದರೂ ಅದೇಕೋ ಏನೋ.. ನಿರ್ಮಾಪಕ ಬಿ.ಕೆ. ಗಂಗಾಧರ್ ರಿಲೀಸ್ ಡೇಟ್‍ನ್ನು ಅಧಿಕೃತವಾಗಿ ಘೋಷಿಸುತ್ತಿಲ್ಲ.

  ನಂತರ ಬರಲಿರೋ ಚಿತ್ರ ಸಲಗ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರಕ್ಕೆ ಮೊದಲ ಬಾರಿಗೆ ದುನಿಯಾ ವಿಜಯ್ ಡೈರೆಕ್ಷನ್ ಮಾಡಿದ್ದಾರೆ. ಈ ಸಿನಿಮಾ ದುನಿಯಾ ಸೆಂಟಿಮೆಂಟ್ ಕಾರಣಕ್ಕೆ ಫೆ.23ರಂದು ರಿಲೀಸ್ ಮಾಡ್ತಾರೆ ಅನ್ನೋ ಲೆಕ್ಕಾಚಾರವಿದೆ. ಅಂದಹಾಗೆ, ಈ ಡೇಟ್ ಕೂಡಾ ಅಫಿಷಿಯಲ್ ಅಲ್ಲ.

  ಅಫಿಷಿಯಲ್ ಆಗಿ ಘೋಷಿಸಿಕೊಂಡಿರೋದು ದರ್ಶನ್ ಅಭಿನಯದ ರಾಬರ್ಟ್, ಮಾರ್ಚ್ 11ಕ್ಕೆ ರಿಲೀಸ್. ಪುನೀತ್ ಅಭಿನಯದ ಯುವರತ್ನ ಏಪ್ರಿಲ್ 1ಕ್ಕೆ ರಿಲೀಸ್. ಸುದೀಪ್ ಅಭಿನಯದ ಕೋಟಿಗೊಬ್ಬ 3, ಏಪ್ರಿಲ್ 23ಕ್ಕೆ ರಿಲೀಸ್.

  ಆಗಸ್ಟ್ ನಂತರ ಶಿವಣ್ಣ ಅಭಿನಯದ ಭಜರಂಗಿ 2, ಯಶ್ ಅಭಿನಯದ ಕೆಜಿಎಫ್ 2, ಸುದೀಪ್ ಅಭಿನಯದ ಪ್ಯಾಂಟಮ್, ರಕ್ಷಿತ್ ಶೆಟ್ಟಿ ನಟಿಸಿರುವ 777 ಚಾರ್ಲಿ, ಗಣೇಶ್-ಭಟ್ಟರ ಕಾಂಬಿನೇಷನ್ನಿನ ಗಾಳಿಪಟ 2, ಚಿತ್ರಗಳಿವೆ.

 • ಹಾಲಿವುಡ್ ಪ್ರಮೋಷನ್ನಿಗೂ ಕೆಜಿಎಫ್ ಡೈಲಾಗ್

  ಹಾಲಿವುಡ್ ಪ್ರಮೋಷನ್ನಿಗೂ ಕೆಜಿಎಫ್ ಡೈಲಾಗ್

  ಕೆಜಿಎಫ್ 2ನಿಂದ ಹೊರಬಂದಿರೋದು ಇದುವರೆಗೆ ಒಂದೇ ಒಂದು ಟೀಸರ್. ಅದರಲ್ಲೂ ಒಂದು ಡೈಲಾಗ್ ಇಲ್ಲ. ಇರೋದು ಒಂದೆರಡು ಸ್ಲೋಗನ್ ರೀತಿಯ ಬರಹಗಳಷ್ಟೇ.. ಆದರೆ, ಅವೇ ಈಗ ಹಾಲಿವುಡ್ ಲೆವೆಲ್ಲಿನಲ್ಲಿ ಸದ್ದು ಮಾಡುತ್ತಿವೆ. ಚಾಪ್ಟರ್ 2ನ ಒಂದು ಬರಹ ಈಗ ಹಾಲಿವುಡ್ ಪ್ರಮೋಷನ್ನಿಗೆ ಬಳಕೆಯಾಗುತ್ತಿದೆ.

  ಹಾಲಿವುಡ್‍ನಲ್ಲಿ ಈಗ ಗಾಡ್ಜಿಲ್ಲ ವರ್ಸಸ್ ಕಿಂಗ್ ಕಾಂಗ್ ಸಿನಿಮಾ ಬರುತ್ತಿರೋದು ಗೊತ್ತಿದೆಯಷ್ಟೆ, ಆ ಚಿತ್ರದ ಅಫಿಷಿಯಲ್ ಪೇಜ್‍ನಲ್ಲಿ ಕೆಜಿಎಫ್ ಚಾಪ್ಟರ್ 2 ಟೀಸರ್‍ನಲ್ಲಿ ಕಾಣಿಸಿಕೊಂಡಿದ್ದ ಎ ಪ್ರಾಮಿಸ್ ವಾಸ್ ಮೇಡ್.. ಅಂಡ್ ಇಟ್ ವಾಸ್ ಕೆಪ್ಟ್.. ಅನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ.

  ಒಮ್ಮೆ ಆಣೆ ಮಾಡಿದರೆ ಅಥವಾ ವಚನ ನೀಡಿದರೆ ಅದನ್ನು ಉಳಿಸಿಕೊಳ್ಳುತ್ತೇವೆ ಅನ್ನೋದು ಇದರ ಅರ್ಥ. ಅನುಮಾನವೇನೂ ಇಲ್ಲ. ಪ್ರಶಾಂತ್ ನೀಲ್ ಪ್ರಾಮಿಸ್‍ನ್ನು ಉಳಿಸಿಕೊಳ್ತಾರೆ ಅಂತಾ ನಾವು ನಂಬಬಹುದು.

 • ಹಿಂದಿಯಲ್ಲಿ 300 ಕೋಟಿ : ನಂ.7 ಸ್ಥಾನಕ್ಕೇರಿದ ಕೆಜಿಎಫ್

  ಹಿಂದಿಯಲ್ಲಿ 300 ಕೋಟಿ : ನಂ.7 ಸ್ಥಾನಕ್ಕೇರಿದ ಕೆಜಿಎಫ್

  ಕೆಜಿಎಫ್ ಚಾಪ್ಟರ್ 2 ದಾಖಲೆಗಳನ್ನು ಬರೆಯುತ್ತಿದೆ. ಈ ವಾರಾಂತ್ಯಕ್ಕೆ ಎಲ್ಲ ಭಾಷೆಗಳ ಒಟ್ಟಾರೆ ಕಲೆಕ್ಷನ್ ಸಾವಿರ ಕೋಟಿ ಮುಟ್ಟುವ ಅಥವಾ ದಾಟುವ ಎಲ್ಲ ಸಾಧ್ಯತೆಗಳೂ ಇವೆ. ಇದರ ನಡುವೆ ಹಿಂದಿಯಲ್ಲಿಯೇ ವಿಶೇಷ ದಾಖಲೆ ಬರೆದಿದೆ ಕೆಜಿಎಫ್. ಭಾನುವಾರ 300 ಕೋಟಿಯ ಗಡಿ ದಾಟಿದೆ. ಈ ದಾಖಲೆ ಬರೆದ ಒಟ್ಟಾರೆ 10ನೇ ಸಿನಿಮಾ ಕೆಜಿಎಫ್ ಚಾಪ್ಟರ್ 2.

  ಈ ಮೊದಲು ಪಿಕೆ, ಭಜರಂಗಿ ಭಾಯಿಜಾನ್, ಸುಲ್ತಾನ್, ದಂಗಲ್, ಟೈಗರ್ ಜಿಂದಾ ಹೈ, ಪದ್ಮಾವತ್, ಸಂಜು, ವಾರ್ ಹಾಗೂ ಬಾಹುಬಲಿ 2 ಚಿತ್ರಗಳು ಈ ದಾಖಲೆ ಬರೆದಿದ್ದವು. ಇವುಗಳಲ್ಲಿ ಇಂಡಿಯನ್ ಮಾರ್ಕೆಟ್‍ನಲ್ಲಿ ಹಿಂದಿಯಲ್ಲಿಯೇ 500 ಕೋಟಿ ಗಳಿಸಿದ್ದ ಸಿನಿಮಾ ಬಾಹುಬಲಿ 2 ಮಾತ್ರ. ಈಗ 300 ಕೋಟಿ ಕ್ಲಬ್ ಸೇರಿರುವ ಕೆಜಿಎಫ್ ಚಾಪ್ಟರ್ 2 ಮುನ್ನುಗ್ಗುತ್ತಿರುವ ವೇಗ ನೋಡಿದರೆ ಅದು 500 ಕೋಟಿ ಕಲೆಕ್ಷನ್ ದಾಟಿದರೂ ಆಶ್ಚರ್ಯವಿಲ್ಲ.

  ಅಂದಹಾಗೆ ಕೆಜಿಎಫ್ ಚಾಪ್ಟರ್ 2 ಹಿಂದಿಯಲ್ಲಿ ಕೇವಲ 11 ದಿನದಲ್ಲಿ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ದಾಖಲೆ ಬರೆದಿದೆ. ಸದ್ಯಕ್ಕೆ ಕೆಜಿಎಫ್ ಚಾಪ್ಟರ್ 2ಗೀಗ ಒಟ್ಟಾರೆ ಜೀವಮಾನದ ಕಲೆಕ್ಷನ್ ಟಾಪ್ 10 ಸಿನಿಮಾಗಳ ಲಿಸ್ಟಿನಲ್ಲಿ 7ನೇ ಸ್ಥಾನವಿದೆ. ನಂ. 1 ಸ್ಥಾನಕ್ಕೇರುವುದು ಕಷ್ಟವಾಗಲಾರದು.

  ಕೇರಳದಲ್ಲಿ.. 11 ದಿನದಲ್ಲಿ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಕೇರಳದಲ್ಲಿ ಆ್ಯಕ್ಷನ್ ಮಾಸ್ ಸಿನಿಮಾಗಳು ಕ್ಲಿಕ್ ಆಗುವುದು ಅಪರೂಪದಲ್ಲಿ ಅಪರೂಪ. ಹೀಗಾಗಿ.. ಅದೂ ಒಂದು ದಾಖಲೆಯೇ.

 • ಹೊಗಳಿದ ಬೇರೆ ಭಾಷೆಯವರ ಜೊತೆ ಕನ್ನಡತನ ಬಿಡದ ಯಶ್

  ಹೊಗಳಿದ ಬೇರೆ ಭಾಷೆಯವರ ಜೊತೆ ಕನ್ನಡತನ ಬಿಡದ ಯಶ್

  ಯಶ್ ಎಲ್ಲಿಯೇ ಹೋಗಲಿ.. ಕನ್ನಡವನ್ನು ಬಿಟ್ಟುಕೊಟ್ಟವರಲ್ಲ. ಬಿಟ್ಟುಕೊಟ್ಟೂ ಇಲ್ಲ. ಹಾಗಂತ ಹಾರಾಡುವುದೂ ಇಲ್ಲ. ಘೋಷಣೆಯನ್ನೂ ಮೊಳಗಿಸಲ್ಲ. ಟೀಕಿಸಿದವರ ಜೊತೆ ಮನಸ್ಸುಗಳೂ ಮುರಿಯದಂತೆ.. ಅವರೇ ಮುಂದೆ ಮಾತನಾಡುವಾಗ ಎಚ್ಚರಿಕೆಯಿಂದ ಇರುವ ರೀತಿ ತಣ್ಣನೆಯ ಧ್ವನಿಯಲ್ಲೇ ಕನ್ನಡತನ ಸಾರುತ್ತಿದ್ದಾರೆ.

  ಹಿಂದಿಯಲ್ಲಿ ಕೆಜಿಎಫ್ ಪ್ರಚಾರ ಕಾರ್ಯಕ್ರಮದಲ್ಲಿ ಆಂಕರ್ ಒಬ್ಬರು ಯಶ್ ಎದುರು ಒಂದು ಪ್ರಶ್ನೆ ಇಟ್ಟಿದ್ದರು. ನೀವು ಮುಂದೆ ಬಾಲಿವುಡ್‍ಗೆ ಬರುತ್ತೀರಾ? ಹಿಂದಿ ಸಿನಿಮಾಗಳನ್ನಷ್ಟೇ ಮಾಡ್ತೀರಾ? ಅನ್ನೋ ಪ್ರಶ್ನೆಗೆ ಯಶ್ ಕೊಟ್ಟಿದ್ದ ಉತ್ತರವೇನು ಗೊತ್ತೇ?

  ನಾನು ಮುಂದೆಯೂ ಕನ್ನಡದಲ್ಲೇ ಸಿನಿಮಾ ಮಾಡ್ತೇನೆ. ಆ ಸಿನಿಮಾಗಳನ್ನೇ ಹಿಂದಿಗೂ ತರುತ್ತೇನೆ ಎಂದಿದ್ದರು.

  ಆಂಧ್ರದಲ್ಲಿ ವಿತರಕ ದಿಲ್ ರಾಜು ಕನ್ನಡ ಸಿನಿಮಾಗಳ ಬಜೆಟ್ ಮತ್ತು ಕಲೆಕ್ಷನ್ ಬಗ್ಗೆ ಕೇವಲವೇನೋ ಅನ್ನೋ ರೀತಿಯಲ್ಲಿ ಮಾತನಾಡಿದಾಗಲೂ ಅಷ್ಟೆ. ಕನ್ನಡ ಚಿತ್ರಗಳ ಬಜೆಟ್ ಮತ್ತು ಕಲೆಕ್ಷನ್ ಕುರಿತು ಪುಟ್ಟ ಭಾಷಣವನ್ನೇ ಮಾಡಿದ್ದ ಯಶ್ ವೇದಿಕೆಯಲ್ಲೇ ಕನ್ನಡ ಯಾರಿಗೂ.. ಯಾವುದಕ್ಕೂ ಕಡಿಮೆ ಇಲ್ಲ ಎಂದು ಸಾರಿದ್ದರು.

  ನಾನು ಬೇರೆ ಭಾಷೆಗಳನ್ನು ಕಲಿಯುವ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಕನ್ನಡದಷ್ಟು ಸುಲಲಿತವಾಗಿ ಬೇರೆ ಭಾಷೆಗಳು ಬರಲ್ಲ ಎಂದು ಹೇಳಿದ್ದ ಯಶ್ ಈಗ ಅಲ್ಲು ಅರ್ಜುನ್ ಅವರಿಗೆ ಧನ್ಯವಾದ ಹೇಳುವಾಗಲೂ ಕನ್ನಡತನ ಬಿಟ್ಟುಕೊಟ್ಟಿಲ್ಲ. ಅಲ್ಲು ಅರ್ಜುನ್ ಯಶ್ ಅವರಿಗೆ ವಿಶ್ ಮಾಡುತ್ತಾ ಯಶ್`ಗಾರು' ಎಂದು ಬಳಸಿದ್ದರು. ಗಾರು ಅನ್ನೋದು ತೆಲುಗಿನಲ್ಲಿ ಗೌರವ ಸೂಚಕ ಬಹುವಚನ ಪದ. ಅದಕ್ಕೆ ಅಲ್ಲು ಅರ್ಜುನ್ ಗಾರು ಎಂದು ಉತ್ತರ ಕೊಟ್ಟಿದ್ದರೆ ತೆಲುಗರೂ ಖುಷಿಯಾಗುತ್ತಿದ್ದರು. ಅದರೆ.. ಅಲ್ಲಿ ಪ್ರತಿಕ್ರಿಯೆ ಕೊಡುವಾಗ ಅಲ್ಲು ಅರ್ಜುನ್ `ಅವರೇ' ಎಂದು ಬಳಸಿರೋ ಯಶ್ ತಣ್ಣನೆಯ ಧ್ವನಿಯಲ್ಲೇ ಕನ್ನಡತನ ಸಾರಿದ್ದಾರೆ.

  ಅಂದ ಹಾಗೆ ಇದು ಹೆಮ್ಮೆ ಎಂದೋ... ನೋಡು ನಮ್ ಹುಡ್ಗ ಹೆಂಗೆ ಎಂದೋ ಎದೆಯುಬ್ಬಿಸಿ ಹೇಳಿ ಇನ್ನೊಬ್ಬರನ್ನು ಕೆಣಕುವ ರೀತಿಯೂ ಅಲ್ಲ. ಕೆಣಕಿ ಕೌಂಟರ್ ಕೊಟ್ಟರೆ ಕನ್ನಡ ಬೆಳೆಯಲ್ಲ. ಬೆಳೆಯಬೇಕಿರೋದು ಹೀಗೆ.. ಪ್ರೀತಿಯಿಂದ.. ಸ್ನೇಹದಿಂದ..