ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಇದೇ ಮೊದಲ ಬಾರಿಗೆ ತಮ್ಮದೇ ಸ್ವಂತ ಬ್ಯಾನರ್ ಮೂಲಕ ಕವಲುದಾರಿ ಸಿನಿಮಾ ನಿರ್ಮಿಸಿದ್ದಾರೆ. ಹೊಸಬರ ಚಿತ್ರಗಳಿಗೆ ಪ್ರೋತ್ಸಾಹ ನೀಡುವುದು ಪುನೀತ್ ಗುಣ. ಹೊಸಬರ ಚಿತ್ರಗಳ ಆಡಿಯೋ ರೈಟ್ಸ್ ಖರೀದಿಸುವುದು, ಅವರ ಚಿತ್ರಗಳಲ್ಲಿ ಹಾಡುವುದು, ಹಿನ್ನೆಲೆ ಧ್ವನಿ ನೀಡುವುದು, ವಿಡಿಯೋ ಮೂಲಕ ಸಿನಿಮಾ ಪ್ರಚಾರ ಮಾಡುವುದು.. ಹೀಗೆ ಹಲವು ರೀತಿಯಲ್ಲಿ ಸಪೋರ್ಟ್ ಮಾಡ್ತಾರೆ. ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್ ನಂತರ, ಇದೀಗ ಪಡ್ಡೆಹುಲಿ ಚಿತ್ರದಲ್ಲಿ ಅತಿಥಿ ನಟರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಆದರಕವಲುದಾರಿಯಲ್ಲಿ ಅವರಿಲ್ಲ. ಏಕೆ..?
ಪುನೀತ್ ನನಗೆ ಪೃಥ್ವಿ ಚಿತ್ರದ ಕಾಲದಿಂದಲೂ ಗೊತ್ತು. ನಾನಾಗ ಅಸಿಸ್ಟೆಂಡ್ ಡೈರೆಕ್ಟರ್. ಪುನೀತ್ ಅವರಿಗೆ ಈ ಕಥೆ ಹೇಳಿದಾಗ, ಅವರು ತಾವೇ ಚಿತ್ರ ನಿರ್ಮಿಸುವ ಉತ್ಸಾಹ ತೋರಿಸಿದರು. ಪುನೀತ್ ಅವರಿಗೆ ಒಂದು ಪಾತ್ರ ಸೃಷ್ಟಿಸುವುದು ಕಷ್ಟವೇನೂ ಆಗಿರಲಿಲ್ಲ. ಆದರೆ, ನನಗೆ ನನ್ನ ಕಥೆಯ ಮೇಲೆ ನಂಬಿಕೆಯಿತ್ತು. ಆ ನಂಬಿಕೆ ಅವರಿಗೂ ಇತ್ತು. ಹೀಗಾಗಿಯೇ, ನಿರ್ಮಾಪಕರಾದರೂ.. ನನ್ನ ಸ್ವಾತಂತ್ರ್ಯಕ್ಕೆ ಅಡ್ಡಿ ಬರಲಿಲ್ಲ ಎಂದಿದ್ದಾರೆ ನಿರ್ದೇಶಕ ಹೇಮಂತ್ ರಾವ್.
ನಿರ್ಮಾಪಕರಾದರೂ, ಪುನೀತ್ ಅವರನ್ನು ಹೇಮಂತ್ ನೋಡಿದ್ದು ಅಪರೂಪವಂತೆ. ನಿರ್ದೇಶಕರಿಗೆ ಒಬ್ಬ ನಿರ್ಮಾಪಕರಾಗಿ ಏನೇನೆಲ್ಲ ಅಗತ್ಯತೆಗಳನ್ನು ಒದಗಿಸಬೇಕೋ.. ಅದರಲ್ಲಿ ಕೊಂಚ ವ್ಯತ್ಯಾಸವೂ ಆಗಲಿಲ್ಲ. ಅವರೊಬ್ಬ ಪ್ರೊಫೆಷನಲ್ ಕಲಾವಿದ ಅಷ್ಟೇ ಅಲ್ಲ, ಪ್ರೊಫೆಷನಲ್ ನಿರ್ಮಾಪಕ ಎಂದಿದ್ದಾರೆ ಹೇಮಂತ್ ರಾವ್.
ಪೊಲಿಟಿಕಲ್ ಕ್ರೈಂ ಥ್ರಿಲ್ಲರ್ ಕಥಾ ಹಂದರ ಇರುವ ಕವಲುದಾರಿಯಲ್ಲಿ ಅನಂತ್‍ನಾಗ್, ರಿಷಿ, ಅಚ್ಯುತ್ ಕುಮಾರ್, ರೋಷನಿ ಪ್ರಕಾಶ್, ಅವಿನಾಶ್, ಸುಮನ್ ರಂಗನಾಥ್ ನಟಿಸಿದ್ದಾರೆ.