` lahari audio, - chitraloka.com | Kannada Movie News, Reviews | Image

lahari audio,

 • Lahari files Criminal Case against Radio City

  lahari velu image

  Lahari Audio has filed a civil and criminal case against top FM station Radio City in a court in Bengaluru. The company has claimed that in the last three years the station has not paid dues for playing its songs.

  Moreover Lahari is being forced to pay service tax to the government even though it is not  getting the payments from the audio company. The case was filed two weeks ago and is expected to come up for hearing again this month.

 • ಕಿರಿಕ್ ಪಾರ್ಟಿ ಕೇಸ್ ಮುಗಿದಿಲ್ಲ. ಅವರು ಗೆದ್ದೂ ಇಲ್ಲ - ಲಹರಿ

  lahari audio company rejects rakshit shetty's claims

  ಕಿರಿಕ್ ಪಾರ್ಟಿ ಚಿತ್ರದ ಹೂ ಆರ್ ಯೂ ಸಾಂಗ್ ವಿವಾದ ಮುಗಿದ ಅಧ್ಯಾಯ ಎಂದೇ ಅಂದುಕೊಂಡಿದ್ದವರಿಗೆ ಶಾಕ್ ಸಿಕ್ಕಿದೆ. ರಕ್ಷಿತ್ ಶೆಟ್ಟಿ, ಪರಂವಾ ಸ್ಟುಡಿಯೋ ಮತ್ತು ಅಜನೀಶ್ ಲೋಕನಾಥ್‍ಗೆ ಜಾಮೀನು ರಹಿತ ವಾರೆಂಟ್ ಜಾರಿಯಾದ ನಂತರ ಎಲ್ಲರೂ ಶಾಕ್‍ನಲ್ಲಿದ್ದಾರೆ. ಇದೊಂದು ಕಿಡಿಗೇಡಿಗಳ ಕೃತ್ಯ. ಆ ಕೇಸ್‍ನ್ನು ನಾವು ಆಗಲೇ ಗೆದ್ದಿದ್ದೇವೆ. ಮುಗಿದು ಹೋದ ಕೇಸಿಗೆ ಹೊಸ ವಾರೆಂಟ್, ನೋಟಿಸ್, ಸಮನ್ಸ್ ಎಲ್ಲಿಂದ ಬರೋಕೆ ಸಾಧ್ಯ ಎಂದಿದ್ದಾರೆ. ಅಷ್ಟೇ ಅಲ್ಲ, ಆ ಕೇಸ್ ಇತ್ಯರ್ಥವಾದ ನಂತರವೇ ನಾವು ಕಿರಿಕ್ ಪಾರ್ಟಿ ಗೆಲುವನ್ನು ಸಂಭ್ರಮಿಸಿದೆವು. ಸಿನಿಮಾ ರಿಲೀಸ್‍ಗೆ ಮುನ್ನ ತಡೆ ನೀಡಲಾಗಿತ್ತು. ಹಾಡನ್ನು ತೆಗೆಯಲಾಗಿತ್ತು. ನಂತರ ಆ ಹಾಡನ್ನು ಕೋರ್ಟಿನಲ್ಲಿ ಗೆದ್ದು ಸೇರ್ಪಡೆ ಮಾಡಿದೆವು. ನಂತರವೇ ಕಿರಿಕ್ ಪಾರ್ಟಿ ಗೆಲುವನ್ನು ಸಂಭ್ರಮಿಸಿದೆವು ಎಂದಿದ್ದಾರೆ ರಕ್ಷಿತ್ ಶೆಟ್ಟಿ.

  ಆದರೆ, ಈ ವಿಷಯಕ್ಕೆ ಲಹರಿ ಸಂಸ್ಥೆ ಪರ ವಕೀಲ ಯೋವಿನಿ ರಾಜೇಶ್ ಹೇಳೋದೇ ಬೇರೆ. ` ಅವರೆಲ್ಲಿ ಕೇಸ್ ಗೆದ್ದಿದ್ದಾರೆ. 2016ರಲ್ಲಿ ನಾವು ಕೇಸ್ ಹಾಕಿದಾಗ ಪರಂವಾ ಸ್ಟುಡಿಯೋಸ್‍ನವರು ನಾವು ಕೇಸ್‍ನ್ನು ವಾದಿಸುತ್ತೇವೆ ಎಂದರು. ನಂತರ ನ್ಯಾಯಾಲಯದಲ್ಲಿ 10 ಲಕ್ಷ ಡೆಪಾಸಿಟ್ ಇಟ್ಟು ಸಿನಿಮಾ ರಿಲೀಸ್ ಮಾಡಿದರು. ನಾವು ನಮ್ಮ ಹಕ್ಕು ಪ್ರತಿಪಾದಿಸಿದ್ದೇವೆ. ಕೇಸು ಗೆದ್ದಿದ್ದೇವೆ ಎನ್ನುವವರು ದಾಖಲೆ ತೋರಿಸಲಿ. ಇದು ಕ್ರಿಮಿನಲ್ ಅಪರಾಧ. ಅವರು ಫೆ.20ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಬರಲಿಲ್ಲ. ಹೀಗಾಗಿ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಮಗೆ ಆಗಿರುವ ನಷ್ಟಕ್ಕೆ ಪರಿಹಾರ ಕೇಳಿರುವ ನಮ್ಮ ವಾದ ಸರಿಯಾಗಿದೆ' ಎಂದಿದ್ದಾರೆ.

 • ರವಿಚಂದ್ರನ್ ಸಿನಿಮಾ ವಿರುದ್ಧ 1 ರೂ. ಮಾನನಷ್ಟ ಮೊಕದ್ದಮೆ

  daasharatha faces defamtion charges

  ರವಿಚಂದ್ರನ್ ಅಭಿನಯದ ದಶರಥ ಇನ್ನೇನು ರಿಲೀಸ್ ಆಗಲಿದೆ ಎಂದು ಕಾದು ಕುಳಿತಿದ್ದವರಿಗೆ ಶಾಕಿಂಗ್ ನ್ಯೂಸ್. ದಶರಥ ಚಿತ್ರದ ಒಂದು ಹಾಡು ಈಗ ವಿವಾದಕ್ಕೊಳಗಾಗಿದೆ. ಕರಿಕೋಟು ಹಾಕೊರೆಲ್ಲ.. ಕೇಸು ಗೆಲ್ಲೋದಿಲ್ಲ.. ಕೇಸು ಗೆದ್ದೋರೆಲ್ಲ.. ಹರಿಶ್ಚಂದ್ರರಲ್ಲ.. ಎಂಬ ಹಾಡು ಈಗ ವಿವಾದದ ಕೇಂದ್ರಬಿಂದು.

  ಇದೇ ಹಾಡಿನ ಸಾಹಿತ್ಯದ ವಿರುದ್ಧ ಈಗ ಬೆಂಗಳೂರಿನ ವಕೀಲ ಗಡಿಲಿಂಗಪ್ಪ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. 1 ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

  ಚಿತ್ರದ ಗೀತರಚನೆಕಾರ, ಗಾಯಕ, ನಿರ್ದೇಶಕ, ಸಂಗೀತ ನಿರ್ದೇಶಕ , ಲಹರಿ ಆಡಿಯೋ ಸಂಸ್ಥೆ ಹಾಗೂ ನಿರ್ಮಾಪಕರ ವಿರುದ್ಧ ಕೇಸ್ ಹಾಕಿದ್ದಾರೆ. ಯುದ್ಧಕಾಂಡ ಚಿತ್ರದ ನಂತರ ರವಿಚಂದ್ರನ್ ವಕೀಲರಾಗಿ ಕಾಣಿಸಿಕೊಳ್ತಿರೋ ಚಿತ್ರಕ್ಕೆ ಎಂ.ಎಸ್.ರಮೇಶ್ ನಿರ್ದೇಶಕ. ಅಕ್ಷಯ್ ಎಂಬುವವರು ಚಿತ್ರದ ನಿರ್ಮಾಪಕರು. 

 • ರಾಬರ್ಟ್ ಆಡಿಯೋ. ದಾಖಲೆ ಸೃಷ್ಟಿಸಿದ ಅನಂದ ಆಡಿಯೋ

  lahari music creates record with robert audio rights

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಶೂಟಿಂಗ್ ಹಂತದಲ್ಲೇ ನಿರೀಕ್ಷೆ ಹುಟ್ಟಿಸಿದೆ. ತರುಣ್ ಸುಧೀರ್ ನಿರ್ದೇಶನದ ಚಿತ್ರಕ್ಕೆ ಉಮಾಪತಿ ನಿರ್ಮಾಪಕರು. ದರ್ಶನ್ ಜೊತೆ ವಿನೋದ್ ಪ್ರಭಾಕರ್, ಜಗಪತಿ ಬಾಬು ಕೂಡಾ ನಟಿಸುತ್ತಿದ್ದಾರೆ. ಆಶಾ ಭಟ್, ಚಿತ್ರದ ನಾಯಕಿ. ದರ್ಶನ್ ಚಿತ್ರಗಳು ಇರೋದೇ ದಾಖಲೆ ಸೃಷ್ಟಿಸೋಕೆ ಎನ್ನುವಂತೆ ರಾಬರ್ಟ್ ಚಿತ್ರವೂ ಬರೆದಿದೆ.

  ರಾಬರ್ಟ್ ಚಿತ್ರದ ಆಡಿಯೋ ಹಕ್ಕುಗಳನ್ನು ಅನಂದ ಆಡಿಯೋ ಸಂಸ್ಥೆ ಖರೀದಿಸಿದೆ. ದಾಖಲೆ ಮೊತ್ತಕ್ಕೆ ಖರೀದಿಸಿದ್ದಾರೆ ಎನ್ನಲಾಗಿದೆ. ಆದರೆ, ಆ ಮೊತ್ತ ಎಷ್ಟು ಎನ್ನುವುದನ್ನು ಅನಂದ ಆಡಿಯೋ ಹೇಳಿಲ್ಲ. 

 • ಲಹರಿ V/s ಕಿರಿಕ್ ಪಾರ್ಟಿ : ಕೇಸ್ ಹಿಸ್ಟರಿ ಇದು

  ಲಹರಿ V/s ಕಿರಿಕ್ ಪಾರ್ಟಿ : ಕೇಸ್ ಹಿಸ್ಟರಿ ಇದು

  2016ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದ ಕಿರಿಕ್ ಪಾರ್ಟಿ ಚಿತ್ರದ ಟೀಂಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಕಾಪಿರೈಟ್ ವಿಚಾರರದಲ್ಲಿ ಶುರುವಾದ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಕಿರಿಕ್ ಪಾರ್ಟಿ ಚಿತ್ರದಲ್ಲಿ ಬಳಕೆಯಾದ

  ಹೇ ಹೂ ಆರ್ ಯೂ ಹಾಡಿನಲ್ಲಿ ಬಳಸಿದ್ದ ಒಂದು ಮ್ಯೂಸಿಕ್ ಬಿಟ್, ಶಾಂತಿ ಕ್ರಾಂತಿ ಚಿತ್ರದ ಮಧ್ಯರಾತ್ರೀಲಿ ಹೈವೇ ರಸ್ತೇಲಿ.. ಚಿತ್ರದ ಬಿಟ್ನ್ನು ಹೋಲುತ್ತಿದೆ. ಇದು ಕಾಪಿರೈಟ್ ಉಲ್ಲಂಘನೆ ಎಂದು ಲಹರಿ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು. ಕ್ರಿಮಿನಲ್ ಕೇಸ್ ಹಾಕಿತ್ತು.

  ಕಾಪಿರೈಟ್ಸ್ ಆಕ್ಟ್ 63a, 63b ಅನ್ವಯ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ 9ನೇ ಎಸಿಎಂಎಂ ಕೋರ್ಟ್‌ ಚಿತ್ರತಂಡದ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಮೇ 27ಕ್ಕೆ ಅಥವಾ ಅದಕ್ಕೂ ಮುನ್ನ ಚಿತ್ರತಂಡವನ್ನು ಅಂದರೆ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಅಜನೀಶ್ ಲೋಕನಾಥ್ ಮೊದಲಾದವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಲಯ ಅದೇಶಿಸಿದೆ. ಇಲ್ಲಿಯವರೆಗೆ 8 ಬಾರಿ ಜಾಮೀನು ರಹಿತ ವಾರೆಂಟ್ ಜಾರಿಯಾಗಿದ್ದರೂ, ಚಿತ್ರತಂಡ ಸರಿಯಾಗಿ ಸ್ಪಂದಿಸಿಲ್ಲ ಎನ್ನುವುದೇ ಈ ಜಾಮೀನು ರಹಿತ ವಾರೆಂಟ್ಗೆ ಕಾರಣ.

  ಈ ಹಿಂದೆ ಅರೆಸ್ಟ್ ವಾರೆಂಟ್ ಜಾರಿಯಾದಾಗ ರಕ್ಷಿತ್ ಶೆಟ್ಟಿ ಇದು ಹೊಸ ಕೇಸ್. ಈ ಕೇಸ್ನ ನೋಟಿಸ್ ಕೂಡಾ ನಮಗೆ ತಲುಪಿಲ್ಲ. ಮೊದಲ ಬಾರಿ ಕೇಸ್ ಹಾಕಿದಾಗ ಕೋರ್ಟ್ ಕೇಸ್ ಮುಗಿಯುವವರೆಗೆ ನಾವು ಸಿನಿಮಾದಲ್ಲಿ ಹಾಡನ್ನು ತೋರಿಸಿಯೇ ಇರಲಿಲ್ಲ. ಆದರೆ, 2016ರ ಅಕ್ಟೋಬರ್ನಲ್ಲಿ ಕೇಸ್ ಗೆದ್ದ ಬಳಿಕ ಹಾಡನ್ನು ರಿಲೀಸ್ ಮಾಡಿದ್ದೆವು. ಚಿತ್ರಕ್ಕೆ ತೊಂದರೆಯಾಗದಿರಲಿ ಎಂಬ ಏಕೈಕ ಕಾರಣಕ್ಕೆ, ಲಹರಿ ಸಂಸ್ಥೆಗೆ ನಾವು 20 ಲಕ್ಷ ಕೊಟ್ಟು ಆ ಕೇಸ್ ಬಗೆಹರಿಸಿಕೊಂಡಿದ್ದೇವೆ. ಇದು ಲಹರಿ ಸಂಸ್ಥೆಯ ಕುತಂತ್ರ ಎಂದಿದ್ದರು ರಕ್ಷಿತ್ ಶೆಟ್ಟಿ.

  ಸಿನಿಮಾ ರಿಲೀಸ್ಗೆ ಇದ್ದ ತಡೆಯನ್ನು ಅವರು ನಿವಾರಿಸಿಕೊಂಡಿದ್ದರೇ ಹೊರತು, ಕೇಸ್ ಗೆದ್ದಿರಲಿಲ್ಲ. ಪ್ರಕರಣ ಇತ್ಯರ್ಥವೂ ಆಗಿರಲಿಲ್ಲ. ಕೇಸ್ ಇನ್ನೂ ಕೋರ್ಟಿನಲ್ಲೇ ಇದೆ ಎಂದಿದ್ದರು ಲಹರಿ ವೇಲು.

  ಪ್ರಕರಣ ಇನ್ನೂ ಮುಗಿದಿಲ್ಲ ಎನ್ನುವುದು ಈಗ ಗೊತ್ತಾಗಿದೆ. ಅರೆಸ್ಟ್ ಆಗುತ್ತಾರೋ.. ಇಲ್ಲವೋ.. ಹೇಳೋಕೆ ಸಾಧ್ಯವಿಲ್ಲ. ಇದು ನ್ಯಾಯಾಲಯದ ವಿಷಯ. ವಿವಾದವಂತೂ ಜೀವಂತವಾಗಿದೆ.

 • ಲಹರಿಗೆ ವಜ್ರ ಕಿರೀಟ

  ಲಹರಿಗೆ ವಜ್ರ ಕಿರೀಟ

  ಕನ್ನಡದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿರುವ ಲಹರಿ ಮ್ಯೂಸಿಕ್, ಈಗ ಇನ್ನೂ ಒಂದು ದಾಖಲೆಯನ್ನು ತನ್ನ ಮುಡಿಗೇರಿಸಿಕಕೊಂಡಿದೆ. ವಜ್ರ ಕಿರೀಟ.

  ಇದು ಸಾಧ್ಯವಾಗಿರೋದು ಯೂಟ್ಯೂಬ್‍ನಲ್ಲಿ. ಲಹರಿ ಮ್ಯೂಸಿಕ್ಕಿಗೆ ಈದ ಯೂಟ್ಯೂಬ್‍ನಲ್ಲಿ 1.18 ಕೋಟಿಗೂ ಹೆಚ್ಚು ಚಂದಾದಾರರಿದ್ದಾರೆ. ಅರ್ಥಾತ್ ಸಬ್‍ಸ್ಕ್ರೈಬರ್ಸ್ ಇದ್ದಾರೆ. ಅದು ಒಂದು ದಾಖಲೆ. ಇಷ್ಟು ಸಂಖ್ಯೆಯ ಚಂದಾದಾರರಿರುವ ಇನ್ನೊಂದು ಮ್ಯೂಸಿಕ್ ಸಂಸ್ಥೆ ದಕ್ಷಿಣ ಭಾರತದಲ್ಲೇ ಇಲ್ಲ. ಇದನ್ನು ಯೂಟ್ಯೂಬ್ ಸಂಸ್ಥೆ ಗುರುತಿಸಿ, ಡೈಮಂಡ್ ಅವಾರ್ಡ್ ನೀಡಿ ಗೌರವಿಸಿದೆ.

  ಇದು ನಮ್ಮದಲ್ಲ. ಸಮಸ್ತ ಕನ್ನಡಿಗರ ಗೆಲುವು. ಒಂದು ಪುಟ್ಟ ಸಂಸ್ಥೆಯಾಗಿ ಬಂದ ನಮ್ಮನ್ನು 6 ಕೋಟಿ ಕನ್ನಡಿಗರು ಬೆಳೆಸಿದರು. ದೊಡ್ಡಮಟ್ಟಕ್ಕೆ ಕೊಂಡೊಯ್ದರು. ಆ ಪ್ರೀತಿಯಿಂದಾಗಿ ಸಂಸ್ಥೆ ಇಂದು ಈ ಮಟ್ಟಕ್ಕೆ ಬೆಳೆದಿದೆ.  ಈ ಗೌರವ ಕನ್ನಡಿಗರಿಗೆ ಅರ್ಪಣೆ ಎಂದಿದ್ದಾರೆ ಲಹರಿ ವೇಲು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery