ನಿನ್ನಯನ.. ನಿನ್ನನಯನ.. ಎರಡು ಪದಗಳ ನಡುವೆ ಒಂದು ಚಿಕ್ಕ ಸ್ಪೇಸ್ ಕೊಡದೇ ಹೋದರೆ, ಅದು ಕೊಡುವ ಅರ್ಥವೇ ಬೇರೆ. ನಿನ್ನಮನ.. ನಿನ್ನ ಮನ.. ಪದವೂ ಅಷ್ಟೆ.. ಅದೊಂದು ಸಣ್ಣ ಅತೀ ಸಣ್ಣ ಪ್ರಯೋಗ. ಪದಗಳ ಜೊತೆ ಆಡಿದ ಆಟ. ಅದೇಕೋ ಏನೋ.. ಅದು ಪ್ರೇಕ್ಷಕರಿಗೆ ಯದ್ವಾತದ್ವಾ ಇಷ್ಟವಾಗಿಬಿಟ್ಟಿದೆ.
ಸ್ವಾರ್ಥರತ್ನ ಚಿತ್ರದ ಈ ಹಾಡು ಈಗ ವೈರಲ್. ಚಿತ್ರ ರಿಲೀಸ್ ಆಗುತ್ತಿರುವ ಹೊತ್ತಿನಲ್ಲಿ ವೈರಲ್ ಆಗಿರುವ ಈ ಹಾಡು ಅತಿದೊಡ್ಡ ಮೌತ್‍ಪಬ್ಲಿಸಿಟಿ ಎಂದರೆ ತಪ್ಪಲ್ಲ.
ಕಿರುತೆರೆ ನಟ ಆದರ್ಶ್ ನಾಯಕರಾಗಿ, ಇಶಿತಾ ವರ್ಷ ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕೆ ನಿರ್ದೇಶಕ ಅಶ್ವಿನ್. ಒಂದು ಪಕ್ಕಾ ಮಾಸ್ ಎಂಟರ್‍ಟೈನರ್ ಚಿತ್ರತಂಡ ಹೇಳಿಕೊಂಡಿದೆ.