ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದ ಸಲಗ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ಸೌಂಡ್ ಮಾಡುತ್ತಿವೆ. ಸಲಗದ ಕ್ರೇಜ್ ಜೋರಾಗಿದೆ. ಹಾಗಂತ ಇದು ಒಂಟಿ ಸಲಗ ಅಲ್ಲ. ಸಲಗ ಬೆನ್ನ ಹಿಂದಿರೋದು ಕೆ.ಪಿ.ಶ್ರೀಕಾಂತ್.
ಈ ಮಧ್ಯೆ ಸಲಗದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ವೇದಿಕೆ ಹೊಸಪೇಟೆಯಲ್ಲಿ ಸಿದ್ಧವಾಗಿದೆ. ಹೊಸಪೇಟೆಯಲ್ಲಿ ಏಪ್ರಿಲ್ 10ರಂದು ಪ್ರೀರಿಲೀಸ್ ಇವೆಂಟ್ ಮಾಡೋ ಯೋಜನೆ ಹಾಕಿಕೊಳ್ಳಲಾಗಿದೆ..
ಕೆಪಿ ಶ್ರೀಕಾಂತ್ ನಿರ್ಮಾಣದ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ.
ದುನಿಯಾ ವಿಜಯ್ ನಾಯಕರಾಗಿ ನಟಿಸಿರುವ ಈ ಸಿನಿಮಾದಲ್ಲಿ ಸಂಜನಾ ಆನಂದ್ ಜೋಡಿಯಾಗಿದ್ದರೆ, ಡಾಲಿ ಧನಂಜಯ್ ಪೊಲೀಸ್ ಆಫೀಸರ್.