` salaga, - chitraloka.com | Kannada Movie News, Reviews | Image

salaga,

 • ಕಡಲೆಕಾಯಿ ಪರಿಷೆ ಮುಗಿದಿಲ್ಲ..

  salaga kadalekai parashe in basavangudi

  ಬಸವನಗುಡಿಯ ಸುಪ್ರಸಿದ್ಧ ಕಡಲೆಕಾಯಿ ಪರಿಷೆ ಮುಗಿದು ವಾರವಾಯಿತು. ಆದರೆ... ಸಲಗ ಚಿತ್ರತಂಡ ಇನ್ನೂ ಪರಿಷೆ ಮುಗಿಸಿಲ್ಲ.ಕಡಲೆಕಾಯಿ ಪರಿಷೆಯಲ್ಲಿ ಸಲಗದ ಕ್ಲೆöÊಮಾಕ್ಸ್ ಚಿತ್ರೀಕರಣಕ್ಕೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿತ್ತು. ಅದಕ್ಕಾಗಿ ಪರಿಷೆಯ ವೇಳೆ ರಾತ್ರಿಯಲ್ಲಿ ಅಲ್ಲಲ್ಲಿ ಕ್ಯಾಮೆರಾ ಫಿಕ್ಸ್ ಮಾಡಲಾಗಿತ್ತು. ಎಲ್ಲ ಕಲಾವಿದರನ್ನೂ ಒಗ್ಗೂಡಿಸಿತ್ತು. ಎತ್ತರದಲ್ಲಿ 6 ಕ್ಯಾಮೆರಾಗಳನ್ನಿಟ್ಟು, ಜನರಿಗೆ ಗೊತ್ತಾಗದಂತೆ ಕ್ಲೆöÊಮಾಕ್ಸ್ ಶೂಟಿಂಗ್ ನಡೆದಿತ್ತು. ಅಂದುಕೊAಡAತೆಯೇ ಎಲ್ಲವೂ ಆಯಿತಾದರೂ, ಮಧ್ಯೆ ಕೈ ಕೊಟ್ಟಿದ್ದು ಮಳೆ ಮತ್ತು ಹವಾಮಾನ. ಇದರಿಂದಾಗಿ ಕೆಲವು ಪೋರ್ಷನ್ಸ್ ಹಾಗೆಯೇ ಉಳಿದಿವೆ.

  ಹೀಗಾಗಿ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಬಸವನಗುಡಿಯಲ್ಲಿಯೇ ವಿಶೇಷ ಸೆಟ್ ಹಾಕಿಸಲಿದ್ದಾರೆ. ಮತ್ತೊಮ್ಮೆ ಕಡಲೆಕಾಯಿ ಪರಿಷೆ ಮಾಡಲಿದ್ದಾರೆ. ಆ ಸೆಟ್‌ನಲ್ಲಿ ಶೂಟಿಂಗ್ ಮಾಡಲಿದ್ದಾರೆ.

  ಸಲಗ, ದುನಿಯಾ ವಿಜಿ ನಿರ್ದೇಶಿಸುತ್ತಿರುವ ಮೊದಲ ಸಿನಿಮಾ. ಅವರೇ ನಾಯಕರಾಗಿರುವ ಚಿತ್ರಕ್ಕೆ ಸಂಜನಾ ಆನಂದ್ ನಾಯಕಿ. ಡಾಲಿ ಧನಂಜಯ್ ಇನ್ನೊಂದು ಪ್ರಮುಖ ಪಾತ್ರದಲ್ಲಿದ್ದಾರೆ.

 • ಕಮಿಷನರ್ ಅಚ್ಯುತ ಕುಮಾರ್

  achyuth kumar plays commisnoe i salaga

  ಬೆಂಗಳುರು ಕಮಿಷನರ್ ಚೇಂಜ್ ಆಗಿದ್ದಾರೆ. ಕೇವಲ 47 ದಿನಗಳ ಹಿಂದೆ ಬೆಂಗಳೂರು ಕಮಿಷನರ್ ಆಗಿದ್ದ ಅಲೋಕ್ ಕುಮಾರ್ ಟ್ರಾನ್ಸ್‍ಫರ್ ಆಗಿ ಅವರ ಜಾಗಕ್ಕೆ ಭಾಸ್ಕರ್ ರಾವ್ ಬಂದಿದ್ದಾರೆ. ಇದು ವೊರಿಜಿನಲ್ ಕಮಿಷನರ್ ಕಥೆ. ಆದರೆ, ನಾವು ಹೇಳ್ತಿರೋದು ಸಿನಿಮಾ ಕಮಿಷನರ್ ಕಥೆ. ಅದೂ ಸಲಗ ಚಿತ್ರದ್ದು.

  ದುನಿಯಾ ವಿಜಯ್ ನಟಿಸಿ, ನಿರ್ದೇಶಿಸುತ್ತಿರುವ ಸಲಗ ಚಿತ್ರದಲ್ಲಿ ಅಚ್ಯುತ್ ಕುಮಾರ್ ಪೊಲೀಸ್ ಕಮಿಷನರ್. ಮೊನ್ನೆ ಮೊನ್ನೆಯಷ್ಟೇ ಬೆಲ್‍ಬಾಟಂನಲ್ಲಿ ಕಾನ್‍ಸ್ಟೇಬಲ್ ಆಗಿದ್ದ ಅಚ್ಯುತ್ ಕುಮಾರ್‍ಗೆ ಸಲಗ ಚಿತ್ರದಲ್ಲಿ ಏಕಾಏಕಿ ಪ್ರಮೋಷನ್ ಕೊಟ್ಟಿದ್ದಾರೆ ದುನಿಯಾ ವಿಜಯ್. ಡಾಲಿ ಧನಂಜಯ್ ಖಡಕ್ ಆಫೀಸರ್ ಆಗಿದ್ದಾರೆ.

  ನನ್ನ ಚಿತ್ರದ ಪಾತ್ರಕ್ಕೆ ಖಡಕ್ ಎನ್ನಿಸುವಂತ ನಟ ಬೇಕಿತ್ತು. ಅಚ್ಯುತ್ ಕುಮಾರ್ ಅವರು ಈ ಪಾತ್ರ ಮಾಡ್ತಿರೋದ್ರಿಂದ ಈ ಪಾತ್ರದ ತೂಕ ಹೆಚ್ಚುತ್ತೆ ಅನ್ನೋ ವಿಶ್ವಾಸ ದುನಿಯಾ ವಿಜಯ್ ಅವರದ್ದು.

  ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರಕ್ಕೆ ಸಂಜನಾ ನಾಯಕಿ. ಚರಣ್ ರಾಜ್ ಸಂಗೀತ ನಿರ್ದೇಶನವಿದ್ದು, ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ.

 • ಕಿಚ್ಚನ ಹಾದಿಯಲ್ಲಿ ದುನಿಯಾ ವಿಜಯ್

  duniya vijay turns director with salaga

  ದುನಿಯಾ ಚಿತ್ರದ ಮೂಲಕ ಹೀರೋ ಆದ, ಸ್ಟಾರ್ ಆದ ನಟ ದುನಿಯಾ ವಿಜಯ್, ಅದಕ್ಕೂ ಮುನ್ನ ಸಣ್ಣ ಸಣ್ಣ ರೋಲ್‍ಗಳಲ್ಲಿ ನಟಿಸಿದ್ದವರು. ಪೋಷಕ, ಖಳ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದವರು. ಸ್ಟಾರ್ ಆದ ಮೇಲೆ ನಿರ್ಮಾಪಕರೂ ಆಗಿದ್ದ ವಿಜಿ, ಈಗ ನಿರ್ದೇಶಕರಾಗುತ್ತಿದ್ದಾರೆ. ಅಲ್ಲಿಗೆ ಹೀರೋ ಆದ ಮೇಲೆ ನಿರ್ದೇಶಕರಾದ ಸುದೀಪ್, ವಿಜಯ್ ರಾಘವೇಂದ್ರ, ಗಣೇಶ್ ಸಾಲಿಗೆ ಸೇರುತ್ತಿದ್ದಾರೆ ದುನಿಯಾ ವಿಜಯ್.

  ಇತ್ತೀಚೆಗೆ ವಿಜಿ ಸಲಗ ಚಿತ್ರ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತಲ್ಲ. ಆ ಚಿತ್ರಕ್ಕೆ ವಿಜಿ ಅವರದ್ದೇ ಕಥೆಯಿತ್ತು. ಈಗ ಅವರಿಗೇ ನಿರ್ದೇಶಕರ ಪಟ್ಟ ಕೊಟ್ಟಿದ್ದಾರೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್. ಟಗರು ಚಿತ್ರದ ಬಹುತೇಕ ತಂತ್ರಜ್ಞರು, ಕಲಾವಿದರನ್ನು ಸಲಗ ಚಿತ್ರದಲ್ಲಿ ನೋಡಬಹುದು. 

  ಮೊದಲ ನಿರ್ದೇಶನದ ಚಿತ್ರವಾದ್ದರಿಂದ ವಿಜಿ, ಶಿವಣ್ಣನ ಮನೆಗೆ ತೆರಳಿ, ಡಾ.ರಾಜ್ ಭಾವಚಿತ್ರದ ಸಮ್ಮುಖದಲ್ಲಿ ಶಿವಣ್ಣನ ಆಶೀರ್ವಾದ ಪಡೆದುಕೊಂಡಿದ್ದಾರೆ. ಜೂನ್ 6ರಂದು ಚಿತ್ರದ ಮುಹೂರ್ತ ಇಟ್ಟುಕೊಳ್ಳಲಾಗಿದೆ.

 • ಡಾಲಿ ಧನಂಜಯ್`ರ ಈ ವರ್ಷದ 3ನೇ ಸಿನಿಮಾ ಏ.15ಕ್ಕೆ

  ಡಾಲಿ ಧನಂಜಯ್`ರ ಈ ವರ್ಷದ 3ನೇ ಸಿನಿಮಾ ಏ.15ಕ್ಕೆ

  ಹೌದು, ಇದು ಡಾಲಿ ಧನಂಜಯ್ ಅವರಿಗೆ ಈ ವರ್ಷದ 3ನೇ ಸಿನಿಮಾ. ಇದೇ ಏಪ್ರಿಲ್ 15ಕ್ಕೆ ದುನಿಯಾ ವಿಜಯ್ ನಿರ್ದೇಶನದ ಸಲಗ ರಿಲೀಸ್ ಆಗುತ್ತಿದೆ. ಆ ಚಿತ್ರದಲ್ಲಿ ಡಾಲಿ, ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ. ಇದು ರಿಲೀಸ್ ಆದರೆ, ಡಾಲಿಗೆ ಈ ವರ್ಷದ 3ನೇ ಸಿನಿಮಾ ಆಗಲಿದೆ.. ಸಲಗ.

  ಈ ವರ್ಷ ಅವರು ನಟಿಸಿದ್ದ ಪೊಗರು ಚಿತ್ರ ಮೊದಲು ತೆರೆ ಕಂಡಿತ್ತು. ಆದರೆ, ಚಿತ್ರದಲ್ಲಿ ಡಾಲಿ ಪಾತ್ರಕ್ಕೆ ಸಿಕ್ಕಾಪಟ್ಟೆ ಕತ್ತರಿ ಬಿದ್ದಿತ್ತೋ.. ಏನೋ.. ಅಭಿಮಾನಿಗಳಿಗೂ ಇಷ್ಟವಾಗಲಿಲ್ಲ.

  ಇನ್ನು ವರ್ಷದ 2ನೇ ಸಿನಿಮಾ ಯುವರತ್ನ. ಪುನೀತ್ ಹೀರೋ ಆಗಿರೋ ಸಿನಿಮಾ ಪ್ರಚಾರ ಬಿರುಸಾಗಿದೆ. ಪುನೀತ್, ತಾವೇ ಹೀರೋ ಆಗಿದ್ದರೂ ಪ್ರಚಾರದ ಪ್ರತಿ ಹಂತದಲ್ಲೂ ಡಾಲಿ ಧನಂಜಯ್ ಅವರನ್ನು ಜೊತೆಗಿಟ್ಟುಕೊಂಡೇ ಹೋಗುತ್ತಿದ್ದಾರೆ. ಅದು ಏಪ್ರಿಲ್ 1ಕ್ಕೆ ರಿಲೀಸ್ ಆದರೆ, ಏಪ್ರಿಲ್ 15ಕ್ಕೆ 3ನೇ ಸಿನಿಮಾ ಸಲಗ.

 • ದುನಿಯಾ ವಿಜಿ ಈಗ ಸಲಗ

  duniya vijay's new movie is salaga

  ನಿರ್ಮಾಪಕರು ಅವರೇ.. ದುನಿಯಾ ವಿಜಯ್. ನಿರ್ದೇಶಕರು ಅವರೇ.. ರಾಘು ಶಿವಮೊಗ್ಗ. ಸಿನಿಮಾ.. ಕುಸ್ತಿ ಅಲ್ಲ.. ಸಲಗ. ದುನಿಯಾ ವಿಜಯ್ ಈಗ ಸಲಗನಾಗುತ್ತಿದ್ದಾರೆ.

  ಚೂರಿಕಟ್ಟೆ ಚಿತ್ರದ ಮೂಲಕ ಗಮನ ಸೆಳೆದ ರಾಘು ಶಿವಮೊಗ್ಗ ಅವರೇ, ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಫೆಬ್ರವರಿಯಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಲಿದೆ. 

  ಕನ್ನಡದಲ್ಲಿ ಸಲಗ ಎಂದರೆ ತಕ್ಷಣ ನೆನಪಾಗುವುದು ಅಂಬರೀಷ್ ಅಭಿನಯದ ಒಂಟಿ ಸಲಗ ಸಿನಿಮಾ. ಈಗ ದುನಿಯಾ ವಿಜಯ್ ಸಲಗ ಹೆಸರಲ್ಲಿ ಬರುತ್ತಿದ್ದಾರೆ.

   

 • ದುನಿಯಾ ವಿಜಿ ಸಲಗಕ್ಕೆ ಟಗರು ಪವರ್

  shivanna supports duniya viji's salaga

  ದುನಿಯಾ ವಿಜಿ ನಿರ್ದೇಶನದ ಮೊದಲ ಸಿನಿಮಾ ಸಲಗ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರದಲ್ಲಿ ಹೆಚ್ಚೂ ಕಡಿಮೆ ಟಗರು ಟೀಂ ಕೆಲಸ ಮಾಡುತ್ತಿದೆ. ಡಾಲಿ ಧನಂಜಯ್, ಸಂಜನಾ ಆನಂದ್ ನಟಿಸಿರುವ ಚಿತ್ರಕ್ಕೆ ಚರಣ್ ರಾಜ್ ಸಂಗೀತವಿದೆ. ಈಗ ಈ ಚಿತ್ರಕ್ಕೆ ಟಗರು ಪವರ್ ಸಿಕ್ಕಿದೆ.

  ಜನವರಿ 5ರಂದು ಸಲಗ ಆಡಿಯೋ ರಿಲೀಸ್ ಇದ್ದು, ಆಡಿಯೋ ಬಿಡುಗಡೆ ಮಾಡುವುದು ಶಿವರಾಜ್ ಕುಮಾರ್. ಅವರೇ ಮುಖ್ಯ ಅತಿಥಿ. ವಿಜಿ ಚಿತ್ರ ರಿಲೀಸ್ ಆಗದೇ 2 ವರ್ಷಗಳಾಗಿವೆ. ಹೀಗಾಗಿ ಸಲಗದ ಮೇಲೆ ಭಾರಿ ನಿರೀಕ್ಷೆಯಿದೆ.

 • ದುನಿಯಾ ವಿಜಿಗೆ ಕಿಚ್ಚನ ಹಾರೈಕೆ

  sudeep congragulates duniya vijay

  ನಟ ದುನಿಯಾ ವಿಜಯ್, ನಿರ್ದೇಶಕರಾಗಲು ಹೊರಟಿರುವುದನ್ನು ನಟ ಸುದೀಪ್ ಸ್ವಾಗತಿಸಿದ್ದಾರೆ. ಸುದೀಪ್ ಅಭಿನಯದ ರಂಗ ಎಸ್‍ಎಸ್‍ಎಲ್‍ಸಿ ಚಿತ್ರದಲ್ಲಿ ದುನಿಯಾ ವಿಜಿ, ವಿಲನ್ ಆಗಿ ನಟಿಸಿದ್ದವರು. ಅದಾದ ಮೇಲೆ ವಿಜಿ, ಹೀರೋ ಆಗಿ, ಸ್ಟಾರ್ ಆದರು. ಈಗ ಡೈರೆಕ್ಟರ್ ಆಗುತ್ತಿದ್ದಾರೆ.

  ವಿಜಿ ನಿರ್ದೇಶಕರಾಗುತ್ತಿರುವುದನ್ನು ಚಿತ್ರಲೋಕ ವೆಬ್‍ಸೈಟ್‍ನಲ್ಲಿ ನೋಡಿ ತಿಳಿದ ಸುದೀಪ್, ಅದನ್ನೇ ರೀ ಟ್ವೀಟ್ ಮಾಡಿದ್ದಾರೆ. ಶುಭ ಹಾರೈಸುವುದರ ಜೊತೆಗೆ, ನಮ್ಮನ್ನು ನಾವೇ ಹುಡುಕಿಕೊಳ್ಳುವ ಈ ಸಾಹಸ ನಿಜಕ್ಕೂ ಬೇರೆಯದೇ ಅನುಭವ. ನಿರ್ದೇಶಕರಾಗಲು ಹೊರಟಿರುವ ದುನಿಯಾ ವಿಜಯ್‍ಗೆ ಶುಭವಾಗಲಿ. ನಿಮ್ಮ ಪ್ರತಿ ಹೆಜ್ಜೆಯನ್ನೂ ಆನಂದಿಸಿ ಎಂದು ಶುಭ ಕೋರಿದ್ದಾರೆ ಸುದೀಪ್.

 • ದುನಿಯಾ ವಿಜಿಯ ಸಲಗಕ್ಕೆ ಪುನೀತ್ ಪವರ್

  Duniya Vijay, Puneeth Rajkumar Image

  ದುನಿಯಾ ವಿಜಯ್ ನಿರ್ದೇಶನದ ಮೊದಲ ಸಿನಿಮಾ ಸಲಗ ಚಿತ್ರಕ್ಕೀಗ ಪವರ್ ಸ್ಟಾರ್ ಪುನೀತ್ ಪವರ್ ಸಿಕ್ಕಿದೆ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಸಲಗ ಚಿತ್ರದ ಫಸ್ಟ್ ಲುಕ್‍ನ್ನು ಪುನೀತ್ ರಿಲೀಸ್ ಮಾಡಿ ಶುಭ ಕೋರಿದ್ದಾರೆ. ದುನಿಯಾ ವಿಜಯ್ ಮೊದಲ ನಿರ್ದೇಶನದ ಚಿತ್ರಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ ಪುನೀತ್.

  ನಮಗೆಲ್ಲ ಪುನೀತ್ ಸ್ಫೂರ್ತಿ. ಮೊದಲಿನಿಂದಲೂ ಅವರ ಡೆಡಿಕೇಷನ್ ನೋಡುತ್ತಲೇ ಬಂದಿದ್ದೇನೆ. ಈಗ ಅವರ ಹಾರೈಕೆ ಸಿಕ್ಕಿರುವುದು ಖುಷಿ ತಂದಿದೆ ಎಂದಿದ್ದಾರೆ ದುನಿಯಾ ವಿಜಯ್.

 • ದುನಿಯಾ ವಿಜಿಯ ಸಲಗದಲ್ಲಿ ಹೊಸಬರ ಕಾರುಬಾರು

  duniya vijay gives chance to new comers

  ಸಲಗ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಸಂಜನಾ ಆನಂದ್ ಹೊಸ ಪ್ರತಿಭೆಯೇನೂ ಅಲ್ಲ. ಆದರೆ, ಚಿತ್ರರಂಗದಲ್ಲಿ ಈಗಷ್ಟೇ ಬೆಳೆಯುತ್ತಿರುವ ಕಲಾವಿದೆ. ಹಾಗೆ ನೋಡಿದ್ರೆ ನಿರ್ದೇಶಕರಾಗಿ ಸ್ವತಃ ದುನಿಯಾ ವಿಜಯ್ ಹೊಸಬರೇ. ಸ್ಟಂಟ್ ಕಲಾವಿದನಾಗಿ ಚಿತ್ರರಂಗಕ್ಕೆ ಬಂದು, ಸಣ್ಣ ಪುಟ್ಟ ಸೈಡ್ ರೋಲುಗಳಲ್ಲಿ ನಟಿಸುತ್ತಾ  ಹೀರೋ ಆಗಿ ಬೆಳೆದಿರುವ ವಿಜಿಗೆ ತಮ್ಮ ಆರಂಭದ ದಿನಗಳ ಪಡಿಪಾಟಲುಗಳ ಕಾರಣವೋ ಏನೋ.. ಹೊಸಬರ ಮೇಲೆ ಪ್ರೀತಿ ಜಾಸ್ತಿ. ಅದು ಸಲಗ ಚಿತ್ರದಲ್ಲಿ ಎದ್ದು ಕಾಣುತ್ತಿದೆ.

  ಈ ಚಿತ್ರದಲ್ಲಿ ಸಿದ್ದಿ ಜನಾಂಗದ ಗೀತಾ ಸಿದ್ದಿ, ಮಾಲಾ ಸಿದ್ದಿ ಎಂಬ ರಂಗಕಲಾವಿದರು ಧ್ವನಿ ಕೊಟ್ಟಿದ್ದಾರಂತೆ. ಕೆಂಡ, ಭಲೇ ಭಾಸ್ಕರ್, ಚೊತ್ತೆ, ಚಿನ್ನು ಎಂಬ ಪಾತ್ರಗಳಲ್ಲಿ ನಟಿಸಿರುವುದೆಲ್ಲ ಹೊಸ ಕಲಾವಿದರು. ಪುನೀತ್, ಇಂದ್ರಕುಮಾರ್, ಚನ್ನಕೇಶವ, ಉಷಾ ರವಿಶಂಕರ್, ಶ್ರೀಧರ್, ವಿಲಾಸ್ ನಾಯಕ್, ಲೋಕಲ್ ಆರ್ಕೆಸ್ಟ್ರಾದಲ್ಲಿ ಹಾಡುವ ಒಬ್ಬ ಸಿಂಗರ್ ಸೇರಿದಂತೆ ಬಹುತೇಕರು ಹೊಸಬರಿದ್ದಾರೆ.

  ಹೊಸಬರಿಗೆ ಹಸಿವು ಜಾಸ್ತಿ. ಅಭಿನಯದಲ್ಲಿ ಫ್ರೆಶ್‍ನೆಸ್ ಇರುತ್ತೆ. ಜೊತೆಗೆ ಸೀನಿಯರ್ ಕಲಾವಿದರನ್ನು ಹಾಕಿಕೊಂಡರೆ ಅವರನ್ನು ನೋಡಿಯೇ ಇಡೀ ಪಾತ್ರ ಹೀಗೆಯೇ ಇರುತ್ತೆ ಎಂದು ನಿರ್ಧರಿಸುವಷ್ಟು ಪ್ರೇಕ್ಷಕರು ಅಪ್‍ಡೇಟ್ ಇದ್ದಾರೆ. ಜೊತೆಗೆ ನಾನೂ ಹೊಸಬನಾಗಿಯೇ ಚಿತ್ರರಂಗಕ್ಕೆ ಬಂದವನು. ಈಗ ಹೊಸದಾಗಿ ಡೈರೆಕ್ಟರ್ ಆಗುತ್ತಿದ್ದೇನೆ. ಒಂದಷ್ಟು ಹೊಸಬರಿಗೆ ಚಾನ್ಸ್ ಕೊಡೋಣ ಎಂದುಕೊಂಡೆ, ಕೊಟ್ಟೆ. ಇದು ಹೀರೋ ಕಂ ಡೈರೆಕ್ಟರ್ ದುನಿಯಾ ವಿಜಯ್ ಮಾತು. ಕೆ.ಪಿ.ಶ್ರೀಕಾಂತ್ ಟಗರು ನಂತರ ನಿರ್ಮಿಸುತ್ತಿರುವ ಚಿತ್ರವಿದು. ಕೊರೋನಾ ಕಾಟ ಇಲ್ಲದಿದ್ದರೆ ಇಷ್ಟೊತ್ತಿಗೆ ಥಿಯೇಟರುಗಳಲ್ಲಿರುತ್ತಿತ್ತು. ಈಗ ಮುಂದಕ್ಕೆ ಹೋಗಿದೆ.

 • ನನ್ನ ಅದೃಷ್ಟ.. ಅಪ್ಪು ನನ್ನ ತಮ್ಮನಾದ - ಶಿವಣ್ಣ

  puneeth rajkumar, shivarajkumar, kp sreekanth image

  ಅಪ್ಪು ಎಂದರೆ ನನಗೆ ತುಂಬಾ ಇಷ್ಟ. ಅಣ್ಣನಾಗಿ ಹೊಗಳುತ್ತೇನೆ ಅನ್ನೋದಕ್ಕಿಂತ ಅಭಿಮಾನಿಯಾಗಿ ಹೊಗಳುತ್ತೇನೆ. ಪುನೀತ್‍ನನ್ನು ಚಿಕ್ಕಂದಿನಿಂದ ನೋಡಿದ್ದೇನೆ. ಅವನ ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ ಹಾಡು ಕೇಳಿ ಎಮೋಷನಲ್ ಆಗಿದ್ದೇನೆ. ಅಪ್ಪು ನನ್ನ ತಮ್ಮನಾಗಿದ್ದು ನನ್ನ ಅದೃಷ್ಟ.

  ಇಂಥಾದ್ದೊಂದು ಮಾತು ಹೇಳಿದ್ದು ಸ್ವತಃ ಶಿವಣ್ಣ. ಸಲಗ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮದ ವೇದಿಕೆಯಲ್ಲಿ ಶಿವಣ್ಣ ಅತಿಥಿಯಾಗಿದ್ದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಉಪೇಂದ್ರ ಜೊತೆಗೆ ಪುನೀತ್ ಕೂಡಾ ಅತಿಥಿಯಾಗಿದ್ದರು. ಅಣ್ಣ ತಮ್ಮ ಇಬ್ಬರೂ ಒಂದೇ ಚಿತ್ರದ ಪ್ರಚಾರಕ್ಕೆ ಬರೋದು ಅಪರೂಪ. ಆ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಿತ್ತು ಸಲಗ ಚಿತ್ರದ ಈವೆಂಟ್. ವೇದಿಕೆಯಲ್ಲಿದ್ದ ಎಲ್ಲರ ಕುರಿತು ಮಾತನಾಡುತ್ತಿದ್ದ ಶಿವಣ್ಣ, ತಮ್ಮನ ಬಗ್ಗೆ ಮಾತನಾಡುವಾಗ ಎಮೋಷನಲ್ ಆದರು.

  ಅಪ್ಪು ರಾಯಲ್ ಆಗಿಯೇ ಹುಟ್ಟಿದ. ರಾಯಲ್ ಆಗಿಯೇ ಬೆಳೆದ. ರಾಯಲ್ ಆಗಿಯೇ ಇರ್ತಾನೆ ಅನ್ನೋ ಮೂಲಕ ಪುನೀತ್ ರಾಜ್‍ಕುಮಾರ್ ಬಗ್ಗೆ ಎದೆಯುಬ್ಬಿಸಿ ಮಾತನಾಡಿದರು.

  ಇದೇ ವೇಳೆ ಮಾತನಾಡಿದ ಪುನೀತ್ ಸಲಗ ಚಿತ್ರವನ್ನು ದುನಿಯಾ ವಿಜಯ್ ನಿರ್ದೇಶನ ಮಾಡಿರೋದು ನನಗೆ ಉತ್ಸಾಹ ತಂದಿದೆ. ಸಲಗ ಸಿನಿಮಾ ನೋಡ್ತೇನೆ. ನನಗೆ ಶಿವಣ್ಣನ ಚಿತ್ರಕ್ಕೆ ನಿರ್ದೇಶನ ಮಾಡಬೇಕು ಅನ್ನೋದು ಕನಸು. ಖಂಡಿತಾ ನೀವೆಲ್ಲ ಮೆಚ್ಚಿಕೊಳ್ಳುವಂಥಾ ಸಿನಿಮಾ ಮಾಡ್ತೇನೆ. ಸೀಟಿನ ತುದಿಯಲ್ಲಿ ಕುಳಿತು ನೋಡಬೇಕು, ಅಂತಾ ಸಿನಿಮಾ ಮಾಡ್ತೇನೆ ಎಂದರು ಪುನೀತ್.

  ಅಷ್ಟೇ ವೇದಿಕೆ ಮೇಲೆ ಓಂ ಚಿತ್ರದ ಐ ಲವ್ ಯೂ ಸೀನ್‍ಗೆ ಶಿವಣ್ಣಗೆ ಆ್ಯಕ್ಷನ್ ಕಟ್ ಹೇಳಿದರು.

 • ನಾಡಹಬ್ಬಕ್ಕೆ ಸಲಗ, ಕೋಟಿಗೊಬ್ಬ 3 : ಅ.29ಕ್ಕೆ ಭಜರಂಗಿ 2

  ನಾಡಹಬ್ಬಕ್ಕೆ ಸಲಗ, ಕೋಟಿಗೊಬ್ಬ 3 : ಅ.29ಕ್ಕೆ ಭಜರಂಗಿ 2

  ಕೊರೊನಾ ಭೀತಿ ದೂರವಾಗಿ, ಶೇ.100ರಷ್ಟು ಪ್ರೇಕ್ಷಕರ ಭರ್ತಿಗೆ ಅವಕಾಶ ಕೊಟ್ಟ ಬೆನ್ನಲ್ಲೇ ಚಿತ್ರರಂಗ ಚುರುಕಾಗಿದೆ. ಅಕ್ಟೋಬರ್ 1ರಿಂದಲೇ 100% ಪ್ರೇಕ್ಷಕರಿಗೆ ಅವಕಾಶ ಸಿಕ್ಕರೂ, ಅಕ್ಟೋಬರ್ 14ರಿಂದ ಸ್ಟಾರ್ ಚಿತ್ರಗಳು ಎಂಟ್ರಿ ಕೊಡಲಿವೆ.

  ಅಕ್ಟೋಬರ್ 14ಕ್ಕೆ ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದ ಸಲಗ ಹಾಗೂ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಒಟ್ಟಿಗೇ ರಿಲೀಸ್ ಆಗಲಿವೆ. ಶಿವಣ್ಣ ಅಭಿನಯದ ಭಜರಂಗಿ 2, ತಿಂಗಳ ಕೊನೆಗೆ ಅಕ್ಟೋಬರ್ 29ಕ್ಕೆ ಬರಲಿದೆ. ಅಕ್ಟೋಬರ್ 8ಕ್ಕೆ ಧನ್ಯಾ ರಾಮ್‍ಕುಮಾರ್ ಅಭಿನಯದ ಮೊದಲ ಸಿನಿಮಾ ನಿನ್ನಾ ಸನಿಹಕೆ ರಿಲೀಸ್ ಆಗುತ್ತಿದೆ.

  ಸಲಗ ಮತ್ತು ಕೋಟಿಗೊಬ್ಬ 3 ಒಟ್ಟಿಗೇ ಬಂದರೆ ಸಮಸ್ಯೆಯಾಗುವುದಿಲ್ಲವೇ? ಥಿಯೇಟರ್ ಸಮಸ್ಯೆ ಎದುರಾಗುವುದಿಲ್ಲವೇ? ಸುದೀಪ್ ಮತ್ತು ದುನಿಯಾ ವಿಜಿ ಫ್ಯಾನ್ಸ್ ಮಧ್ಯೆ ಜಟಾಪಟಿ ಆಗುವುದಿಲ್ಲವೇ? ಇಂತಹ ಎಲ್ಲ ಪ್ರಶ್ನೆಗಳಿಗೆ ಉತ್ತರವೂ ಸಿಕ್ಕಿದೆ.

  ಸುದೀಪ್ ಮೊದಲಿನಿಂದಲೂ ನಮಗೆ ಸಪೋರ್ಟಿವ್ ಆಗಿದ್ದಾರೆ. ಮೊದಲು ನಮ್ಮ ಸಿನಿಮಾ ರಿಲೀಸ್ ಆಗಬೇಕಿತ್ತು. ಸೂರಪ್ಪ ಬಾಬು ಅದೇಕೆ ಪ್ಲಾನ್ ಬ್ರೇಕ್ ಮಾಡಿದರೋ ಗೊತ್ತಿಲ್ಲ. ನಾವಂತೂ ಅಕ್ಟೋಬರ್ 14ಕ್ಕೆ ಬರೋದು ಪಕ್ಕಾ ಎಂದಿದ್ದಾರೆ ಸಲಗ ನಿರ್ಮಾಪಕ ಕೆ.ಪಿ.ಶ್ರೀಕಾಂತ್.

  ಸುದೀಪ್ ದೊಡ್ಡ ವ್ಯಕ್ತಿ. ದೊಡ್ಡತನ ಇರುವವರು. ಒಂದೇ ದಿನ ಸಿನಿಮಾ ರಿಲೀಸ್ ಆದರೆ ಅದೇನೂ ದೊಡ್ಡ ಸಮಸ್ಯೆ ಅಲ್ಲ. ಸ್ಟಾರ್ ವಾರ್ ಬೇಡ. ಸುದೀಪ್ ಮೊದಲಿನಿಂದಲೂ ನಮಗೆ ಸಪೋರ್ಟ್ ಮಾಡುತ್ತಲೇ ಬಂದಿದ್ದಾರೆ ಎಂದಿದ್ದಾರೆ ಸಲಗ ಚಿತ್ರದ ನಾಯಕ ಮತ್ತು ನಿರ್ದೇಶಕ ದುನಿಯಾ ವಿಜಿ.

  ಅತ್ತ ಕಿಚ್ಚ ಸುದೀಪ್ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಮತ್ತು ದುನಿಯಾ ವಿಜಯ್ ಅವರಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.

 • ಮಂಗಳೂರು ಮೀನು ಮಾರುಕಟ್ಟೆಯಲ್ಲಿ ಸಲಗ

  salaga team shooting in mangalore

  ದುನಿಯಾ ವಿಜಯ್ ನಿರ್ದೇಶನದ ಚೊಚ್ಚ ಸಿನಿಮಾ ಸಲಗ ಚಿತ್ರತಂಡ ಕರಾವಳಿಯ ಮೀನು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಭೂಗತ ಲೋಕದಲ್ಲಿ ಮಂಗಳೂರಿಗೆ ಬೇರೆಯದೇ ಚರಿತ್ರೆ ಇದೆ. ಹೀಗಾಗಿ ವಿಜಿ, ತಮ್ಮ ನಿರ್ದೇಶನದ ಸಲಗ ಚಿತ್ರದಲ್ಲಿ ಮಂಗಳೂರಿನಲ್ಲಿ ಕೂಡಾ ಚಿತ್ರೀಕರಣ ಇಟ್ಟುಕೊಂಡಿದ್ದಾರೆ. ಮಂಗಳೂರಿನ ಮೀನು ಮಾರುಕಟ್ಟೆ ಸೇರಿದಂತೆ ಕರಾವಳಿಯಲ್ಲಿ ಶಾಟ್ಸ್ ತೆಗೆದಿದ್ದಾರೆ.

  ಸಲಗದಲ್ಲಿ ನೀವು ಬೇರೆಯದೇ ಆದ ಭೂಗತ ಜಗತ್ತಿನ ಕಥೆ ನೋಡಲಿದ್ದೀರಿ. ಮಂಗಳೂರಿನ ಲೋಕಲ್ ಕಲಾವಿದರನ್ನೇ ಇಟ್ಟುಕೊಂಡು ಚಿತ್ರೀಕರಣ ಮಾಡಿದ್ದೇವೆ. ಸಾವಿರಾರು ಮಂದಿ ಇರೋ ಮೀನು ಮಾರುಕಟ್ಟೆಯಲ್ಲಿ ಚಿತ್ರೀಕರಣ ಸಲೀಸಾಗಿ ನಡೆಯಿತು. ಕಾರಣ, ಜನರ ಸಪೋರ್ಟು ಎನ್ನುತ್ತಾರೆ ವಿಜಿ.

  ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರದಲ್ಲಿ ದುನಿಯಾ ವಿಜಿ ಹೀರೋ ಕಮ್ ಡೈರೆಕ್ಟರ್. ಡಾಲಿ ಧನಂಜಯ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದು, ಸಂಜನಾ ಆನಂದ್ ನಾಯಕಿ.

 • ಮಧ್ಯರಾತ್ರಿ ರಿಲೀಸ್ ಆಗಲಿದೆ ಸಲಗ ಟೀಸರ್

  salaga second teaser on jan 19th mid night

  ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಿಸಿರುವ ಚಿತ್ರ ಸಲಗ. ಟಗರು ನಂತರ ಕೆ.ಪಿ.ಶ್ರೀಕಾಂತ್ ನಿರ್ಮಿಸಿರುವ ಚಿತ್ರ ಸಲಗ. ಟಗರು ಚಿತ್ರದ ತಂತ್ರಜ್ಞರೇ ಬಹುತೇಕ ಕೂಡಿಕೊಂಡು ರೂಪಿಸಿರುವ ಚಿತ್ರ ಸಲಗ. ದುನಿಯಾ ವಿಜಯ್, ಧನಂಜಯ್ ಒಟ್ಟಿಗೇ ನಟಿಸಿರುವ ಚಿತ್ರ ಸಲಗ. ಈಗ ಆ ಚಿತ್ರದ ಟೀಸರ್ ರಿಲೀಸ್ ಸಮಯ. ಅದು ನಡೆಯುವುದು ಜನವರಿ 19ರ ಮಧ್ಯರಾತ್ರಿ.

  ಹೌದು, ಜನವರಿ 20 ದುನಿಯಾ ವಿಜಯ್ ಬರ್ತ್ ಡೇ. ಹೀಗಾಗಿ ಜನವರಿ 19ರ ಮಧ್ಯರಾತ್ರಿ ತಮ್ಮ ಮನೆಯೆದುರೇ ಅಭಿಮಾನಿಗಳ ಸಮ್ಮುಖದಲ್ಲಿ ಟೀಸರ್ ರಿಲೀಸ್ ಮಾಡುತ್ತಿದ್ದಾರೆ ದುನಿಯಾ ವಿಜಿ. ಆ ಸಂಭ್ರಮಕ್ಕೆ ವಿಜಿಗೆ ಜೊತೆಯಾಗಲಿರುವುದು ರಿಯಲ್ ಸ್ಟಾರ್ ಉಪೇಂದ್ರ.

  ಮಧ್ಯರಾತ್ರಿ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಬರುವುದಾಗಿ ಉಪೇಂದ್ರ ಒಪ್ಪಿಕೊಂಡಿದ್ದೇ ನಮ್ಮ ಸಂಭ್ರಮ ಹೆಚ್ಚಿಸಿದೆ ಎನ್ನುತ್ತಾರೆ ವಿಜಿ. 

 • ಮಳೆ.. ಚಳಿಯಲ್ಲಿ.. ಸಲಗ ವಿಜಯ್, ಸಂಜನಾ ರೊಮ್ಯಾನ್ಸ್

  romantic song shot in rain for salaga

  ಸುರಿಯುತ್ತಲೇ ಇರುವ ಮಳೆ.. ಮೈ ಮರಗಟ್ಟಿಸುವ ಚಳಿ.. ಇವೆಲ್ಲದರ ಮಧ್ಯೆಯೇ ದುನಿಯಾ ವಿಜಯ್ ಮತ್ತು ಸಂಜನಾ ಆನಂದ್ ಪ್ರೀತಿ, ಪ್ರಣಯದಲ್ಲಿ ತೊಡಗಿದ್ದಾರೆ. ಸಕಲೇಶಪುರ, ಮುಳ್ಳಯ್ಯನಗಿರಿಯಲ್ಲಿ ವಿಜಿ ಮತ್ತು ಸಂಜನಾ ಮಳೆಯೇ.. ಮಳೆಯೇ.. ಅಂಬೆಗಾಲಿಡುತ್ತಾ ಸುರಿಯೇ ಎಂದು ಹಾಡಿ ಕುಣಿಯುತ್ತಿದ್ದಾರೆ.

  ಕೋವಿಡ್ ರಿಲ್ಯಾಕ್ಸ್ ಕೊಟ್ಟ ಬೆನ್ನಲ್ಲೇ ಸಲಗ ಚಿತ್ರೀಕರಣ ಶುರುವಾಗಿದ್ದು, ವಿಜಯ್ ಮತ್ತು ಸಂಜನಾ ಆನಂದ್ ಅವರ ಪ್ರಣಯಗೀತೆ ಇದು. ಕೆಪಿ ಶ್ರೀಕಾಂತ್ ನಿರ್ಮಾಣದ ಸಿನಿಮಾ ಸಲಗ. ಚಿತ್ರದಲ್ಲಿ ಡಾಲಿ ಧನಂಜಯ್ ಇನ್ಸ್‍ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿರೋದು ವಿಶೇಷ.

 • ಮಾಲೂರಿನಲ್ಲಿ ಸಲಗ ಕಪ್

  ಮಾಲೂರಿನಲ್ಲಿ ಸಲಗ ಕಪ್

  ಸಲಗ ಚಿತ್ರತಂಡ ಸಿನಿಮಾ ರಿಲೀಸ್ ಆಗೋಕೂ ಮುನ್ನ ಕ್ರಿಕೆಟ್ ಟೂರ್ನಿ ನಡೆಸೋದಾಗಿ ಹೇಳಿತ್ತು. ಅದು ಕೋಲಾರದ ಮಾಲೂರಿನಿಂದ ಶುರುವಾಗಿಬಿಟ್ಟಿದೆ. ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿರೋ ಸಿನಿಮಾ ಸಲಗ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರ ಈಗಾಗಲೇ ಟ್ರೇಲರ್, ಹಾಡುಗಳಿಂದ ಗಮನ ಸೆಳೆಯುತ್ತಿದೆ.

  ದುನಿಯಾ ವಿಜಿ ಈ ಚಿತ್ರಕ್ಕೆ ಹೀರೋ ಅಷ್ಟೇ ಅಲ್ಲ, ಡೈರೆಕ್ಟರ್ ಕೂಡಾ ಹೌದು. ಅಭಿಮಾನಿಗಳ ಜೊತೆ ಸಲಗ ಟೀಂ ಕೂಡಾ ಒಂದು ಟೀಂ ಇರುತ್ತೆ. ಅವರೆಲ್ಲರ ಜೊತೆ ಕ್ರಿಕೆಟ್ ಆಡುತ್ತೆ. ಗೆದ್ದವರಿಗೆ ಬಹುಮಾನವೂ ಇರುತ್ತೆ. ಮಾಲೂರಿನಲ್ಲಂತೂ ಅಭಿಮಾನಿಗಳು ಚಿತ್ರತಂಡವನ್ನು ಮುತ್ತಿಕೊಂಡರು. ಡಾ.ರಾಜ್, ವಿಷ್ಣು ಪ್ರತಿಮೆಗಳಿಗೆ ಹಾರ ಹಾಕಿ ಕ್ರಿಕೆಟ್ ಯಾತ್ರೆ ಶುರು ಮಾಡಿದ್ದಾರೆ ದುನಿಯಾ ವಿಜಿ ಮತ್ತು ಶ್ರೀಕಾಂತ್.

  ವಿಜಿ ಜೊತೆ ಡಾಲಿ ಧನಂಜಯ್, ಸಂಜನಾ ಆನಂದ್ ಕೂಡಾ ನಟಿಸಿರುವ ಚಿತ್ರವನ್ನು ನಿರ್ಮಿಸಿರೋದು ಕೆ.ಪಿ.ಶ್ರೀಕಾಂತ್.  ಗೀತಾ ಶಿವರಾಜ್ ಕುಮಾರ್ ಅವರು ಅರ್ಪಿಸಿರುವ ಚಿತ್ರವಿದು.

 • ಯುವರತ್ನ’ನಿಗೆ All The Best ಎಂದ ಸಲಗ

  ಯುವರತ್ನ’ನಿಗೆ All The Best ಎಂದ ಸಲಗ

  ಇದೇ ಏಪ್ರಿಲ್ 1ಕ್ಕೆ ರಿಲೀಸ್ ಆಗುತ್ತಿರುವ ಯುವರತ್ನ ಚಿತ್ರ ಸೂಪರ್ ಹಿಟ್ ಆಗಲಿ ಎಂದು ಹಾರೈಸಿದ್ದಾರೆ ನಟ ದುನಿಯಾ ವಿಜಯ್. ಯುವರತ್ನ ನಂತರ ಕ್ಯೂನಲ್ಲಿರೋ ಸಿನಿಮಾ ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿ, ನಟಿಸಿರುವ ಸಲಗ. ಯುವರತ್ನ ಚಿತ್ರದ ಬಗ್ಗೆ ಖುಷಿ ಪಡೋಕೆ ದುನಿಯಾ ವಿಜಯ್ ಅವರಿಗೆ ಹಲವು ಕಾರಣಗಳಿವೆ.

  ಪುನೀತ್ ಸಿನಿಮಾ ಎಂದರೆ ಫ್ಯಾಮಿಲಿ ಓರಿಯಂಟೆಡ್ ಇರುತ್ತವೆ. ಇದು ಜನರನ್ನು ಖಂಡಿತಾ ಥಿಯೇಟರಿಗೆ ಜನರನ್ನು ಕರೆದುಕೊಂಡು ಬರಲಿದೆ. ಇನ್ನು ಗೆಳೆಯ ಸಂತೋಷ್ ಆನಂದರಾಮ್ ಈ ಹಿಂದೆ ರಾಜಕುಮಾರದಂತಾ ಸಕ್ಸಸ್ ಕೊಟ್ಟವರು. ಜೊತೆಗೆ ನನ್ನ ಪ್ರೀತಿಯ ಡಾಲಿ ಇಲ್ಲೂ ಅದ್ಭುತ ನಟನೆ ಮುಂದುವರೆಸಿದ್ದಾನೆ. ಆಲ್ ದಿ ಬೆಸ್ಟ್ ಯುವರತ್ನ ಟೀಂ ಎಂದಿದ್ದಾರೆ ದುನಿಯಾ ವಿಜಯ್.

  ಯುವರತ್ನ ಚಿತ್ರ ಥಿಯೇಟರಿಗೆ ಬರುವ ಹೊತ್ತಿಗೆ ದುನಿಯಾ ವಿಜಯ್ ತಮ್ಮ ಸಲಗ ಚಿತ್ರದ ಪ್ರಚಾರದ ವೇಗವನ್ನು ಹೆಚ್ಚಿಸಲಿದ್ದಾರೆ. ಕೋವಿಡ್ ಬಿಕ್ಕಟ್ಟಿನ ನಂತರ ಚಿತ್ರರಂಗದ ದೊಡ್ಡ ದೊಡ್ಡ ನಟರ ಚಿತ್ರಗಳು ಕನಿಷ್ಠ 2 ವಾರದ ಗ್ಯಾಪ್ ನೋಡಿಕೊಂಡು ಚಿತ್ರಗಳನ್ನು ರಿಲೀಸ್ ಮಾಡುತ್ತಿದ್ದು, ಮುಂದಿನ ಸರದಿ ಕೆ.ಪಿ.ಶ್ರೀಕಾಂತ್ ನಿರ್ಮಾಣದ ಸಲಗ ಚಿತ್ರದ್ದಾಗಿದೆ.

 • ವರಮಹಾಲಕ್ಷ್ಮಿ ಹಬ್ಬಕ್ಕೆ ಸಲಗ ರಿಲೀಸ್ ಇಲ್ಲ

  ವರಮಹಾಲಕ್ಷ್ಮಿ ಹಬ್ಬಕ್ಕೆ ಸಲಗ ರಿಲೀಸ್ ಇಲ್ಲ

  ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಎನ್ನಲಾಗಿದ್ದ ಸಲಗ ಚಿತ್ರ, ಮತ್ತೆ ಬಿಡುಗಡೆಯನ್ನು ಮುಂದಕ್ಕೆ ಹಾಕಿದೆ. ಕಾರಣ ಇಷ್ಟೆ, ಚಿತ್ರಮಂದಿರಗಳಿಗೆ ಶೇ.100ರಷ್ಟು ಅವಕಾಶ ನೀಡದೇ ಇರುವುದು. ಶೇ.50ರ ಅನುಮತಿಯೇನೋ ಇದೆ, ಆದರೆ, ಅದನ್ನೂ ಯಾವ ಕ್ಷಣದಲ್ಲಿ ಸರ್ಕಾರ ವಾಪಸ್ ಎನ್ನುತ್ತದೋ ಗೊತ್ತಿಲ್ಲ. ಯುವರತ್ನ ಚಿತ್ರಕ್ಕಾದ ಗತಿ, ನಿರ್ಮಾಪಕರ ಕಣ್ಮುಂದೆಯೇ ಇದೆ.

  ಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡುತ್ತಿಲ್ಲ. ಶೇ.50ರಷ್ಟು ಅವಕಾಶವಿದ್ದರೂ, ಶೇ.100ರಷ್ಟು ಪ್ರೇಕ್ಷಕರಿಗೆ ಅನುಮತಿ ಕೊಡುವವರೆಗೆ ಕಾದು ನೋಡುತ್ತೇವೆ. ಶೇ.100ರಷ್ಟು ಅನುಮತಿಗೆ ಸೆಪ್ಟೆಂಬರ್ 2ರವರೆಗೂ ಕಾಯುವಂತೆ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಟಾಸ್ಕ್‍ಪೋರ್ಸ್ ಸಲಹೆಗಳ ಪ್ರಕಾರವೇ ನಡೆದುಕೊಳ್ಳುವ ಬಗ್ಗೆ ಕೂಡಾ ಸಿಎಂ ತಿಳಿಸಿದ್ದಾರೆ. ಹೀಗಾಗಿ, ಶೇ.100ರಷ್ಟು ಆಕ್ಯುಪೆನ್ಸಿಗೆ ಅವಕಾಶ ಸಿಕ್ಕ ನಂತರವೇ ಸಿನಿಮಾ ಬಿಡುಗಡೆ ಎಂದಿದ್ದಾರೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್.

  ಅಲ್ಲಿಗೆ, ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ಒಂದಿಷ್ಟು ಕಲರವ, ಸಡಗರ ಶುರುವಾಗಬಹುದು ಎಂಬ ನಿರೀಕ್ಷೆಗೆ ಕಲ್ಲು ಬಿದ್ದಿದೆ.

 • ವರಮಹಾಲಕ್ಷ್ಮಿಗೆ ಸಲಗ

  ವರಮಹಾಲಕ್ಷ್ಮಿಗೆ ಸಲಗ

  2ನೇ ಲಾಕ್ ಡೌನ್ ಮುಗಿದ ನಂತರ ಮೊದಲು ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು ಭಜರಂಗಿ 2. ಆದರೆ, ಅದಕ್ಕೂ ಮೊದಲೇ ತೆರೆಗೆ ಬರೋಕೆ ರೆಡಿಯಾಗಿದೆ ಸಲಗ. ಆಗಸ್ಟ್ 21ರಂದು ವರಮಹಾಲಕ್ಷ್ಮಿ ಹಬ್ಬವಿದ್ದು ಆ ದಿನವೇ ಸಲಗ ರಿಲೀಸ್ ಆಗಲಿದೆ.

  ಸಲಗ, ದುನಿಯಾ ವಿಜಯ್ ನಿರ್ದೇಶಿಸಿರುವ ಮೊದಲ ಸಿನಿಮಾ. ಅವರೇ ಹೀರೋ. ಹೀರೋಯಿನ್ ಆಗಿ ಸಂಜನಾ ಆನಂದ್ ಇದ್ದರೆ, ಮತ್ತೊಂದು ಪ್ರಧಾನ ಪಾತ್ರದಲ್ಲಿ ಡಾಲಿ ಧನಂಜಯ್ ನಟಿಸಿದ್ದಾರೆ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರದಲ್ಲಿ ಚರಣ್ ರಾಜ್ ಕೂಡಾ ನಟಿಸಿದ್ದಾರೆ. ಹಬ್ಬಕ್ಕೆ ಒಂದೆರಡು ದಿನ ಮೊದಲೇ ಚಿತ್ರ ರಿಲೀಸ್ ಆದರೂ ಆಶ್ಚರ್ಯವಿಲ್ಲ. ಚಿತ್ರತಂಡ ರಿಲೀಸ್ ಡೇಟ್‍ನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.

 • ವರಲಕ್ಷ್ಮಿ ಹಬ್ಬಕ್ಕೆ ಮಾವ-ಅಳಿಯನೇ ಫೈಟ್ ಮಾಡ್ತಾರಾ?

  ವರಲಕ್ಷ್ಮಿ ಹಬ್ಬಕ್ಕೆ ಮಾವ-ಅಳಿಯನೇ ಫೈಟ್ ಮಾಡ್ತಾರಾ?

  ಲಾಕ್ ಡೌನ್ ಫ್ರೀಯಾಗಿ, ಎಲ್ಲವೂ ಓಪನ್ ಆದ ನಂತರ ರಿಲೀಸ್ ಆಗುತ್ತಿರುವ ದೊಡ್ಡ ಚಿತ್ರ ಸಲಗ. ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರ ರಿಲೀಸ್ ಎಂದು ಹೇಳಿಕೊಂಡಿರುವ ಹೊತ್ತಲ್ಲೇ, ಇತ್ತ ಲೂಸ್ ಮಾದ ಖ್ಯಾತಿಯ  ಯೋಗಿಯ ಚಿತ್ರವೂ ಅದೇ ಹಬ್ಬಕ್ಕೆ ರಿಲೀಸ್ ಎನ್ನಲಾಗುತ್ತಿದೆ. ಯೋಗಿ ಅಭಿನಯದ ಲಂಕೆ ಚಿತ್ರವೂ ಹಬ್ಬದ ದಿನವೇ ರಿಲೀಸ್ ಎನ್ನುತ್ತಿದೆ.

  ವಿಜಯ್ ಮತ್ತು ಯೋಗಿ ಇಬ್ಬರೂ ಮಾವ ಮತ್ತು ಅಳಿಯ. ದುನಿಯಾ ಚಿತ್ರಕ್ಕೆ ನಿರ್ಮಾಪಕರಾಗಿದ್ದುದು ಯೋಗಿ ಫ್ಯಾಮಿಲಿ. ವಿಜಯ್ ಆ ಚಿತ್ರದಿಂದ ದುನಿಯಾ ವಿಜಯ್ ಆದರೆ, ಅದೇ ಚಿತ್ರದಲ್ಲಿನ ಲೂಸ್ ಮಾದ ಪಾತ್ರದ ಹೆಸರು, ಯೋಗಿಯ ಹಿಂದೆ ಅಂಟಿಕೊಳ್ತು. ಈಗ ಅವರಿಬ್ಬರೂ ನಟಿಸಿರುವ ಚಿತ್ರಗಳು ಒಂದೇ ದಿನ ರಿಲೀಸ್ ಆಗುವ ಚಾನ್ಸ್ ಹೆಚ್ಚಾಗಿದೆ.

 • ಶಾಕಿಂಗ್ : ಸಲಗ, ಕೋಟಿಗೊಬ್ಬ 3.. ಇಬ್ಬರನ್ನೂ ಬೆಚ್ಚಿಬೀಳಿಸಿದ್ರು..!

  ಶಾಕಿಂಗ್ : ಸಲಗ, ಕೋಟಿಗೊಬ್ಬ 3.. ಇಬ್ಬರನ್ನೂ ಬೆಚ್ಚಿಬೀಳಿಸಿದ್ರು..!

  ಏನಿದು ಶಾಕಿಂಗ್.. ಕೋಟಿಗೊಬ್ಬ 3ಗೆ ರಿಲೀಸ್ ದಿನವೇ ಚಿತ್ರರಂಗದ ಒಂದಷ್ಟು ನಿರ್ಮಾಪಕರು, ವಿತರಕರು ಶಾಕ್ ಕೊಟ್ಟಿದ್ರು. ಸಲಗ ಚಿತ್ರಕ್ಕೆ ಜೈ ಕರ್ನಾಟಕ ಸಂಘಟನೆಯವರು ಶಾಕ್ ಕೊಡೋ ಹಾದಿಯಲ್ಲಿದ್ದಾರೆ. ಆದರೆ ಇವರೆಲ್ಲರಿಗಿಂತ ದೊಡ್ಡದಾಗಿ ಶಾಕ್ ಕೊಟ್ಟಿರೋದು ಪೈರಸಿ ಕ್ರಿಮಿನಲ್ಸ್.

  ತಮಿಳ್ ರಾಕರ್ಸ್ ಮಾದರಿಯಲ್ಲೇ ಕನ್ನಡ ರಾಕರ್ಸ್ ಹೆಸರಿನಲ್ಲಿ ಪೈರಸಿ ಮಾಡಿ ಇಂಟರ್‍ನೆಟ್ಟಿಗೆ ಬಿಟ್ಟಿದ್ದಾರೆ ಪೈರಸಿ ಕ್ರಿಮಿನಲ್ಸ್. ಅಷ್ಟೇ ಅಲ್ಲ.. ಟೆಲಿಗ್ರಾಂ ಮೂಲಕ ಎಲ್ಲರಿಗೂ ಲಿಂಕ್ ತಲುಪಿಸುತ್ತಿದ್ದಾರೆ. ಎರಡೂ ಚಿತ್ರಗಳ ಲಿಂಕ್ ಹಾಕಿದ್ದಾರೆ.

  ಸುದೀಪ್ ಅಭಿನಯದ ಕೋಟಿಗೊಬ್ಬ 3, ಸೂರಪ್ಪ ಬಾಬುಗೆ ನಿರ್ಣಾಯಕ ಸಿನಿಮಾ. ಏನೇನೋ ಕಷ್ಟಪಟ್ಟು ಮಾಡಿರುವ ಸಿನಿಮಾ ಇದು. ಚಿತ್ರ ಈಗಾಗಲೇ ಗೆಲುವಿನ ಹಾದಿಯಲ್ಲಿದೆ. ಹೀಗಾದರೆ.. ಆ ಗೆಲುವಿನ ಸವಿ ಸವಿಯೋದು ಕಷ್ಟ.

  ಅತ್ತ ಕೆ.ಪಿ.ಶ್ರೀಕಾಂತ್ ನಿರ್ಮಾಣದ ಸಲಗ ಕೂಡಾ ಅಷ್ಟೆ.. ಚಿತ್ರಕ್ಕೆ ವಂಡರ್‍ಫುಲ್ ರೆಸ್ಪಾನ್ಸ್ ಸಿಕ್ಕಿದೆ. ದುನಿಯಾ ವಿಜಯ್ ನಿರ್ದೇಶನದ ಫಸ್ಟ್ ಮೂವಿ. ನಿರ್ಮಾಪಕರೇನೋ ಈಗಾಗಲೇ ಸೇಫ್ ಆಗಿದ್ದಾರೆ. ಆದರೆ.. ವಿತರಕರು..?