` archana, - chitraloka.com | Kannada Movie News, Reviews | Image

archana,

 • I Love You To Clash With Panchatantra

  i love you to clash with panchatantantra movie

  Two of the big upcoming films, I Love You starring Upendra and directed by R Chandru and Panchatantra directed by Yogaraj Bhat will clash at the box office. Both films will release on February 14. The release date of I Love You was announced last week.

  The audio launch of the film is this week. Meanwhile Panchatantra has finalised on the release date now. The clash of expected films is inevitable in the next few months as there are a huge number of big films lined up for release. This is the first high profile clash of 2019. But audience can expect more such offerings in the weeks to come.

 • ಆ ದಿನಗಳು ಅರ್ಚನಾ ನಿಶ್ಚಿತಾರ್ಥ

  aa dinagalu archana gets engaged

  ಆ ದಿನಗಳು ಖ್ಯಾತಿಯ ಅರ್ಚನಾ ವೇದ ಅಲಿಯಾಸ್ ಅರ್ಚನಾ ಶಾಸ್ತ್ರಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಕನ್ನಡದ ಮಿಂಚು, ಮೇಘ ವರ್ಷಿಣಿ ಹಾಗೂ ಮೈತ್ರಿ ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಅರ್ಚನಾಗೆ ದೊಡ್ಡ ಮಟ್ಟದ ಹೆಸರು, ಖ್ಯಾತಿ ತಂದುಕೊಟ್ಟಿದ್ದ ಚಿತ್ರ ಆ ದಿನಗಳು.

  ಹೆಲ್ತ್ ಕೇರ್ ಕಂಪನಿಯೊಂದರ ವೈಸ್ ಪ್ರೆಸಿಡೆಂಟ್ ಆಗಿ ಅರ್ಚನಾ ಭಾವಿ ಪತಿ ಜಗದೀಶ್. ಅರ್ಚನಾ ಅವರ ದೀರ್ಘ ಕಾಲದ ಪ್ರಿಯಕರ. ಗೆಳೆಯ. ಹಿತೈಷಿ. ಹೈದರಾಬಾದಿನ ರಾಡಿಸನ್ ಹೋಟೆಲ್‍ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನೆರವೇರಿದೆ.

  ಕ್ಲಾಸಿಕಲ್ ಡ್ಯಾನ್ಸರ್ ಆಗಿರುವ ಅರ್ಚನಾ, 2004ರಲ್ಲಿ ತೆಲುಗು ಚಿತ್ರ ನೇನು ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು. ನುವ್ವಸ್ತಾನಂಟೆ ನೇನೊದ್ದಂಟಾನಾ,  ಶ್ರೀರಾಮದಾಸು ಚಿತ್ರದ ಸೀತೆಯ ಪಾತ್ರ ಅರ್ಚನಾ ಅವರಿಗೆ ಹೆಸರು ತಂದುಕೊಟ್ಟಿದ್ದವು.

 • ಕೆಜಿಎಫ್ ಅಮ್ಮ ಈಗ ಹೀರೋಯಿನ್

  kgf fame archana jois turns heroine

  ಕೆಜಿಎಫ್ ಚಿತ್ರದಲ್ಲಿ ಯಶ್ ಪಾತ್ರ ರಾಖಿ ಬಾಯ್ ಅವರಷ್ಟೇ ಗಮನ ಸೆಳೆಯುವುದು ತಾಯಿಯ ಪಾತ್ರ. ಆ ಪಾತ್ರದಲ್ಲಿ ನಟಿಸಿದ ಅರ್ಚನಾ ಜೋಯಿಸ್, ವಯಸ್ಸಿನಲ್ಲಿ ಯಶ್ ಅವರಿಗಿಂತಾ ಚಿಕ್ಕವರು. ಕೆಜಿಎಫ್ ಅಮ್ಮನಾಗಿ ಮಿಂಚು ಹರಿಸಿದ್ದ ಅರ್ಚನಾ, ಈಗ ನಾಯಕಿಯಾಗುತ್ತಿದ್ದಾರೆ.

  ವಿಜಯರಥ ಚಿತ್ರದಲ್ಲಿ ಅರ್ಚನಾ ನಾಯಕಿ. ತಮ್ಮನ್ನು ಈಗ ಎಲ್ಲಿಗೆ ಹೋದರೂ ರಾಕಿ ಭಾಯ್ ಮದರ್ ಅಂತಾ ಗುರುತಿಸ್ತಾರೆ. ಒಬ್ಬ ಕಲಾವಿದೆಯಾಗಿ ಎಲ್ಲ ಪಾತ್ರವನ್ನೂ ಮಾಡಬೇಕು. ಆದರೆ, ಸದ್ಯಕ್ಕೆ ಪೋಷಕ ಪಾತ್ರಗಳಿಗಿಂತ ಲೀಡ್ ರೋಲ್ ಮಾಡುವುದಕ್ಕೆ ಹೆಚ್ಚು ಗಮನ ಹರಿಸುತ್ತೇನೆ ಎನ್ನುತ್ತಾರೆ ಅರ್ಚನಾ ಜೋಯಿಸ್.

 • ಯಶ್ ಅಮ್ಮ... ಯಶ್‍ಗಿಂತ ಚಿಕ್ಕೋರು ಕಣ್ರಿ..!

  interesting story about rocky bhai's mother in kgf

  ಕೆಜಿಎಫ್ ಚಿತ್ರದ ಟ್ರೇಲರ್ ನೋಡಿದವರಿಗೆ ಗಮನ ಸೆಳೆಯೋದು ಅಮ್ಮ. ಆಕೆ ಯಶ್‍ಗೆ ಹೇಳೋ ಡೈಲಾಗ್... ಮೈ ನವಿರೇಳಿಸುವುದು ನಿಜ.

  ನಿನ್ನ ಬೆನ್ನ ಹಿಂದೆ ಸಾವಿರ ಜನ ನಿಂತಿದ್ಧಾರೆ ಅನ್ನೋ ಧೈರ್ಯ ನಿನಗೆ ಇದ್ರೆ, ಬರೀ ಒಂದು ಯುದ್ಧ ಗೆಲ್ಲಬಹುದು. ಅದೇ.. ನೀನು ಮುಂದೆ ನಿಂತಿದ್ದೀಯಾ ಅನ್ನೋ ಧೈರ್ಯ ಸಾವಿರ ಜನಕ್ಕೆ ಬಂದ್ರೆ, ನೀನು ಪ್ರಪಂಚಾನೇ ಗೆಲ್ಲಬಹುದು.

  ಅದು ಕೆಜಿಎಫ್‍ನಲ್ಲಿ ಯಶ್‍ಗೆ ತಾಯಿ ಹೇಳೋ ಮಾತು. ಇಂತಹ ಮಾತನ್ನಾಡಿರುವ, ಯಶ್‍ಗೆ ತಾಯಿಯಾಗಿ ನಟಿಸಿರುವ ನಟಿ ಅರ್ಚನಾ ಜೋಯಿಸ್. ವಿಶೇಷ ಅಂದ್ರೆ, ಆಕೆ ವಯಸ್ಸಿನಲ್ಲಿ ಯಶ್‍ಗಿಂತ ಚಿಕ್ಕವರಂತೆ. ಮಹಾದೇವಿ ಅನ್ನೋ ಸೀರಿಯಲ್‍ನಲ್ಲಿ ತ್ರಿಪುರ ಸುಂದರಿ ದೇವಿಯ ಪಾತ್ರ ಮಾಡಿದ್ದ ಅರ್ಚನಾ, ದುರ್ಗಾ ಧಾರಾವಾಹಿಯಲ್ಲೂ ದೇವಿಯ ಪಾತ್ರದಲ್ಲೇ ನಟಿಸಿದ್ದರು. ನೀಲಿ ಅನ್ನೋ ಸೀರಿಯಲ್‍ನಲ್ಲೂ ಪ್ರಮುಖ ಪಾತ್ರ ಮಾಡಿದ್ದರು. ಇಷ್ಟಿದ್ದರೂ ಅರ್ಚನಾಗೆ ಭರತ ನಾಟ್ಯ ಎಂದರೆ ಪಂಚಪ್ರಾಣ. ಭರತನಾಟ್ಯಕ್ಕಾಗಿ ದೊಡ್ಡ ದೊಡ್ಡ ಅವಕಾಶಗಳನ್ನು ಕೈಚೆಲ್ಲಿರುವ ಅರ್ಚನಾ ಜೋಯಿಸ್, ರಾಷ್ಟ್ರೀಯ ಮಟ್ಟದ ನಾಟ್ಯ ಕಲಾವಿದೆ. ಇವರ ಪತಿ ಶ್ರೇಯಸ್ ಉಡುಪ. ಲವ್ ಮ್ಯಾರೇಜ್.

  ಅರ್ಚನಾ ಅವರಿಗೆ ಶಾರೂಕ್, ಅಮೀರ್ ಖಾನ್, ಯಶ್ ಮತ್ತು ಪ್ರಭಾಸ್ ಎಂದರೆ ತುಂಬಾ ಇಷ್ಟ. ಈಗ ಯಶ್‍ಗೆ ಕೆಜಿಎಫ್‍ನಲ್ಲಿ ಅಮ್ಮನಾಗಿ ನಟಿಸಿ ಗೆದ್ದಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery