ಸ್ನೇಹಿತ ಅನಿಲ್ ಭಾರದ್ವಾಜ್ ಒಂದು ವರ್ಷದ ಹಿಂದೆ ಬೆಂಗಳೂರಿನಲ್ಲಿ ಸುವರ್ಣ ನ್ಯೂಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಈಗ ಅಮೇರಿಕಾದಲ್ಲಿದ್ದಾರೆ. ಇತ್ತೀಚೆಗೆ ಅಮೆರಿಕಾದಲ್ಲಿ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರ ತೆರೆ ಕಂಡಿತು. ಕಳದ ವಾರ ಅನಿಲ್ ಮತ್ತು ನಾನು ಸುಮಾರು 2 ಗಂಟೆ ಪೂನ್ ನಲ್ಲಿ ವಿಡಿಯೋ ಚಾಟಿಂಗ್ ಮಾಡಿದೆವು. ಆ ಸಮಯದಲ್ಲಿ ಅನಿಲ್ ಗೆ ಅಲ್ಲಿಗೆ ಬರುವ ಕನ್ನಡ ಸಿನಿಮಾಗಳ ಬಗ್ಗೆ ಲೇಖನ ಬರೆದುಕೊಡುವಂತೆ ವಿನಂತಿಸಿದೆ. ಕೂಡಲೆ ರೆಡಿಯಾದ ಅನಿಲ್ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರ ನೋಡಿ ಲೇಖನ ಬರೆದು ಕಳುಹಿಸಿದ್ದಾರೆ. ಅವರಿಗೆ ಚಿತ್ರಲೋಕ ಕಡೆಯಿಂದ Thanks
ಕೆ.ಎಂ. ವೀರೇಶ್
ಬೆಂಗಳೂರಲ್ಲೋ ಮೈಸೂರಲ್ಲೋ ಅಥವಾ ಹುಬ್ಬಳ್ಳಿಯಲ್ಲೋ ಆದರೆ ಹೊಸ ಸಿನಿಮಾ ಬಿಡುಗಡೆ ಆಗೋ ವಿಷಯ ಅಷ್ಟು ರಸವತ್ತಾಗಿರ್ತಾ ಇರಲಿಲ್ಲ. ಆದರೆ ಈ `ಶೋ' ನಡೆದಿದ್ದು ದೂರದ ಅಮೆರಿಕಾದಲ್ಲಿ. ಅದು ಸಹ ಭಾರತ ಎಂಬ ದೇಶದಲ್ಲಿ ಹಿಂದಿ ಎಂಬ ಭಾಷೆ ಒಂದನ್ನೇ ಜನ ಮಾತನಾಡೋದು ಎಂದು ತಿಳಿದುಕೊಂಡಿರೋ ಅಮೆರಿಕನ್ನರ ನಾಡಲ್ಲಿ ಕನ್ನಡ ಎಂಬೊಂದು ಪ್ರಾದೇಶಿಕ ಪ್ರಾಚೀನ ಭಾಷೆಯೊಂದಿದೆ, ಆ ಭಾಷೆಯಲ್ಲೂ ಸಾವಿರಾರು ಕನ್ನಡ ಸಿನಿಮಾಗಳು ತಯಾರಾಗುತ್ತಿವೆ ಮತ್ತು ಈ ಸಿನಿಮಾಗಳನ್ನು ನೋಡಲು ವಿಶ್ವಾದ್ಯಂತ ಹರಡಿಕೊಂಡಿರುವ ಕನ್ನಡಿಗರು ತುದಿಗಾಲಲ್ಲಿ ನಿಂತಿರುತ್ತಾರೆ ಎಂಬ ವಿಚಾರ ಅಮೆರಿಕನ್ನರಿಗಿರಲಿ ಹೆಚ್ಚು ಕನ್ನಡಿಗರಿಗೂ ಗೊತ್ತಿರಲಿಕ್ಕಿಲ್ಲ. ಈ ಅಮೆರಿಕ ದೇಶವೇ ಹಾಗೆ. ಇದು ವಲಸಿಗರ ದೇಶ. ಈ ದೇಶದಲ್ಲಿ ಇಂಗ್ಲೀಷ್ ಮಾತ್ರವಲ್ಲದೇ ಜಗತ್ತಿನ ನಾನಾ ಭಾಗಗಳ ನೂರಾರು ಭಾಷೆಗಳನ್ನು ಮಾತನಾಡುವ ಜನ ಇರ್ತಾರೆ. ಈ ಜನ ಆಗಾಗ ಅವರವರ ದೇಶದ ಅವರವರ ಭಾಗದ ಭಾಷೆಯ ಸಿನಿಮಾಗಳನ್ನು ಅಮೆರಿಕ ದೇಶದಲ್ಲಿ ತಾವಿರುವ ಊರಿಗೆ ತರಿಸಿಕೊಂಡು, ಟಾಕೀಸೊಂದರಲ್ಲಿ ಆ ಚಿತ್ರದ ಪ್ರದರ್ಶನ ಏರ್ಪಡಿಸಿಕೊಂಡು, ಅವರವರೇ ನೋಡಿ ಸಂತಸ ಪಡುತ್ತಾರೆ. ಅನೇಕರು ಗಮನಿಸಿರಬಹುದು. ಕೆಲವೊಮ್ಮೆ ಹೊಸ ಕನ್ನಡ ಸಿನಿಮಾ ಬಗ್ಗೆ ಪ್ರಚಾರ ನೀಡುವಾಗ `ಏಕಕಾಲಕ್ಕೆ 125 ದೇಶಗಳಲ್ಲಿ ತೆರೆಕಾಣುತ್ತಿರುವ ಕನ್ನಡ ಚಿತ್ರ..!' ಎಂಬ ಟ್ಯಾಗ್ಲೈಗನ್ ಇರುತ್ತೆ. ಇದರರ್ಥ ಆ 125 ದೇಶಗಳಲ್ಲಿ ಕನ್ನಡಿಗರೂ ಇದ್ದು ಅವರಿಗಾಗಿ ಈ ಸಿನಿಮಾ ಅಲ್ಲಿಯೂ ಬಿಡುಗಡೆ ಆಗುತ್ತಿದೆ ಎಂದು ಅನೇಕರಿಗೆ ಗೊತ್ತಿರುವುದಿಲ್ಲ. ಬದಲಿಗೆ ಆ ದೇಶದ ಜನ ಸಹ ನಮ್ಮ ಕನ್ನಡ ಸಿನಿಮಾ ಮೆಚ್ಚಿಕೊಂಡು ಥೇಟರ್ಗೆಗ ಬರ್ತಾರೆ ಅಂದುಕೊಂಡರೆ ಅದು ನಿಮ್ಮ ತಪ್ಪಲ್ಲ ಬಿಡಿ.
ಹೊಸದೊಂದು ಕನ್ನಡ ಸಿನಿಮಾ ತೆರೆ ಕಾಣುವ ಸಂದರ್ಭದಲ್ಲಿ ಅದರ ಪ್ರಚಾರಕ್ಕೆಂದೇ ಭಾರತದಲ್ಲಿ ನಾನಾ ಮಾದರಿಯ ಮಾಧ್ಯಮಗಳು ಲಭ್ಯ. ಎಲ್ಲದಕ್ಕೂ ಮೊದಲು ಸಿನಿಮಾ `ಶೂಟ್' ಆಗಲಿ-ಬಿಡಲಿ ಅದಕ್ಕೊಂದು ಹೆಸರು ಇಡುವ ಮುಂಚೆಯೇ `ಪ್ರೊಡಕ್ಷನ್ ನಂ 1,2,3...ಇತ್ಯಾದಿ' ಎಂಬ ಹೆಸರಿನೊಂದಿಗೆ ಪತ್ರಿಕೆಗಳಲ್ಲಿ ಅದಾಗಲೇ ಪುಟಗಟ್ಟಲೇ ಜಾಹೀರಾತು ಆರಂಭವಾಗಿರುತ್ತದೆ. ಆ ನಂತರ ಸಿನಿಮಾ ಶೂಟ್ ಆದಲ್ಲಿ ಸೆನ್ಸಾರ್ಗೂಿ ಮುಂಚಿತವಾಗಿಯೇ ಎಲ್ಲಾ ಟಿವಿ ಚಾನೆಲ್ಗಹಳಲ್ಲಿ ಟ್ರೈಲರ್ಗರಳು ಓಡೋಕೆ ಶುರುವಾಗುತ್ತವೆ. ಸುದೈವವಶಾತ್ ಇತ್ತೀಚೆಗೆ ಟ್ರೈಲರ್ಗ್ಳಿಗೂ ಸೆನ್ಸಾರ್ ಮಾಡಿಸಿ ಅದನ್ನು ಬಿಡುಗಡೆ ಮಾಡೋ ಪರಿಪಾಠ ರೂಢಿಯಲ್ಲಿದೆ. ಇನ್ನು ಸಿನಿಮಾ ತೆರೆ ಕಾಣಲಿದೆ ಎನ್ನುವಾಗ ನಾಯಕ ನಟ ಮತ್ತು ನಟಿ, ಮುಖ್ಯವಾಗಿ ನಿರ್ಮಾಪಕ ಮತ್ತು ನಿರ್ದೇಶಕರ ಸಂದರ್ಶನಗಳು ಟವಿ ಚಾನೆಲ್ಗಾಳಲ್ಲಿ ಗಂಟೆಗಟ್ಟಲೆ ಪ್ರಸಾರವಾಗುತ್ತವೆ. ಸಂದರ್ಶನದುದ್ದಕ್ಕೂ `ಬನ್ನಿ ಥೇಟರ್ಗೆರ ನಮ್ಮ ಸಿನಿಮಾ ನೋಡೋಕೆ. ಇದು ತುಂಬಾ ಡೀಫರೆಂಟ್ ಆಗಿರೋ ಸ್ಟೋರಿ. ಸ್ಟಾರ್ಟಿಂಗ್ ಮಿಸ್ ಆದ್ರೆ ಥ್ರಿಲ್ ಹೋಗುತ್ತೆ...' ಎಂದೆಲ್ಲಾ ಹೇಳಿಕೊಂಡು ಅಸಂಖ್ಯಾರ ಟಿವಿಗಳ ಮುಂದೆ ಕೂತಿರುವವರನ್ನು ಟಾಕೀಸಿನತ್ತ ಸೆಳೆಯಲು ನಟನಟಿಯರು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ಇತ್ತ ಸಿನಿಮಾ ರಿಲೀಸ್ ಆಗಿದೆ ಎಂದು `ಮಾಸ್'ಗೆ ತಿಳಿಸಲು ಊರು ತುಂಬಾ ಕಂಡಕಂಡ ಗೋಡೆಗಳಿಗೆ ಉದ್ದುದ್ದ ಪೋಸ್ಟರ್ಗತಳನ್ನು ಹಚ್ಚಲಾಗುತ್ತದೆ. ಫ್ಲೈ ಓವರ್ ಕಂಬಗಳು, ಬಿಬಿಎಂಪಿ ಶೌಚಾಲಯಗಳು, ನಾನಾ ಸರ್ಕಲ್ಗಳಳ ಸುತ್ತಲಿನ ಜಾಹೀರಾತು ಫಲಕಗಳು ಹೀಗೆ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರ ದೃಷ್ಟಿ ಎಲ್ಲೆಲ್ಲಿ ಹೋಗಲು ಸಾಧ್ಯವೋ ಅಲ್ಲೆಲ್ಲಾ ಸಿನಿಮಾಗಳ ಪೋಸ್ಟರ್ಗಫಳು ರಾರಾಜಿಸುತ್ತವೆ. ಆಟೋ ಹಿಂಬದಿ, ಜೋಡು ರಸ್ತೆಗಳಿದ್ದಲ್ಲಿ ಅದಕ್ಕಿರುವ ರಸ್ತೆ ವಿಭಜಕಗಳಿಗೆ ಅಳವಡಿಸಲಾಗಿರುವ ಬೀದಿದೀಪದ ಕಂಬಗಳಿಗೂ ನಾಲ್ಕೈದು ಅಡಿಯ ಸಿನಿಮಾ ಬ್ಯಾನರ್ಗಹಳನ್ನು ಕಟ್ಟಿ ನೇತು ಹಾಕಲಾಗಿರುತ್ತದೆ. ಇಷ್ಟೆಲ್ಲಾ ಸಾಲದೆಂಬಂತೆ, ಸಿನಿಮಾ ಟ್ರೈಲರ್ಗಾಳನ್ನು ಯು ಟ್ಯೂಬಿನಲ್ಲಿ, ಫೇಸ್ಬುದಕ್ಕಿನಲ್ಲಿ, ಟ್ವಿಟರ್ನಪಲ್ಲಿ, ನಾನಾ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಲಾಗುತ್ತದೆ. ಇತ್ತೀಚಿನ ಕೆಲವು ವರ್ಷಗಳಿಂದ ಬಾಲಿವುಡ್ ಮಂದಿಗೆ ಮತ್ತೊಂದು ಮಾದರಿಯ ಪ್ರಚಾರದ ಹುಚ್ಚು ಶುರುವಾಗಿದೆ. ದೇಶದ ಎಲ್ಲಾ ರಾಜ್ಯಗಳ ರಾಜಧಾನಿಗಳು ಮತ್ತು ಅದರ ನಂತರದ ಮಹಾನಗರಗಳ ಮಾಲ್ಗಯಳನ್ನು ಸುತ್ತಿ ಸುತ್ತಿ ತಮ್ಮ ಸಿನಿಮಾ ಬಗ್ಗೆ ಪ್ರಚಾರ ಮಾಡುವುದು. ಹಿಂದೆಲ್ಲಾ ಸಿನಿಮಾ ನಿರ್ಮಾಪಕರು ಚಿತ್ರ ನಿರ್ಮಾಣಕ್ಕೆ ಮಾತ್ರ ಹಣ ಹಾಕುತ್ತಿದ್ದರು. ಆದರೆ ಇದೀಗ ಸಿನಿಮಾ ಪ್ರಚಾರಕ್ಕೆಂದೇ ಬಜೆಟ್ನಿಲ್ಲಿ ಅರ್ಧದಷ್ಟು ಹಣವನ್ನು ಎತ್ತಿಡುವ ಸ್ಥಿತಿ ಎದುರಾಗಿದೆ. ಆದರೆ ಸಿನಿಮಾ ಚೆನ್ನಾಗಿದ್ದರೆ ಈ ಎಲ್ಲಾ ಕಸರತ್ತುಗಳು ಮಾಡಿದ್ದಕ್ಕೂ ಸಾರ್ಥಕ.

ಆದರೆ ಅಮೆರಿಕದಲ್ಲಿನ ಚಿತ್ರಣ ತುಸು ವಿಭಿನ್ನ. ಇಲ್ಲಿ ಎಲ್ಲಂದರಲ್ಲಿ ಪೋಸ್ಟರ್ಗುಳನ್ನು ಹಚ್ಚಿದಲ್ಲಿ ಜೈಲು ಗ್ಯಾರೆಂಟಿ. ಆಟೋರಿಕ್ಷಾ ಅಂದರೇನು ಎಂದು ತಿಳಿಯದ ಈ ದೇಶದ ಜನತೆಯ ನಡುವೆ ಪೋಸ್ಟರ್ ಹಚ್ಚಿಕೊಂಡು ಊರಿಡಿ ಆಟೋ ಸುತ್ತುವುದು ಕನಸಿನ ಮಾತು. ಅಂದ ಮಾತ್ರಕ್ಕೆ ಇಲ್ಲಿ ಪ್ರಚಾರದ ಭರಾಟೆ ಇಲ್ಲ ಎಂದೇನಲ್ಲ. ಅಮೆರಿಕದಲ್ಲೂ ಸಿನಿಮಾ ನಿರ್ಮಾಣ ಮಾಡುವ ಹಂತದಲ್ಲೇ ಬಜೆಟ್ನಳ ಸಿಂಹಪಾಲನ್ನು ಪ್ರಚಾರಕ್ಕೆಂದು ಎತ್ತಿಡಲಾಗುತ್ತದೆ. ಭಾರತದಲ್ಲಿದ್ದಂತೆ ಇಲ್ಲಿಯೂ ಪ್ರಚಾರದ ಜವಾಬ್ದಾರಿಯನ್ನು ನಿರ್ಮಾಪಕರು ಅಥವಾ ವಿತರಕರೇ ನೋಡಿಕೊಳ್ಳುತ್ತಾರೆ. ಇಲ್ಲಿಯೂ ಥೇಟರ್ಗದಳಲ್ಲಿ, ಟಿವಿ ಚಾನೆಲ್ಗ್ಳಲ್ಲಿ, ಇಂಟರ್ನೆರಟ್ನರ ನಾನಾ ವೆಬ್ಸೈೇಟ್ ಮತ್ತು ಸೋಷಿಯಲ್ ಮಿಡಿಯಾಗಳಲ್ಲಿ ಸಿನಿಮಾ ಬಗ್ಗೆ ಪ್ರಚಾರ ನೀಡಲಾಗುತ್ತದೆ. ಮುಖ್ಯರಸ್ತೆಗಳಲ್ಲಿ ಅಲ್ಲಲ್ಲಿ ದೊಡ್ಡದೊಡ್ಡ ಡಿಸ್ಪ್ಲೇ ಬೋರ್ಡ್ಗುಳಿದ್ದು ಅದರಲ್ಲಿ ಮಾತ್ರ ಸಿನಿಮಾಗಳ ಬಗ್ಗೆ ಜಾಹೀರಾತು ನೀಡಲಾಗಿರುತ್ತದೆ. ವೃತ್ತಪತ್ರಿಕೆಗಳು, ವೆಬ್ಸೈಿಟ್ಗಲಳು ಮತ್ತು ಸೋಷಿಯಲ್ ಮಿಡಿಯಾಗಳಲ್ಲಿ ಸಿನಿಮಾ ಬಗ್ಗೆ ಉತ್ತಮ ಅಭಿರುಚಿಯ ರಿವ್ಯೂ ಬಂದಲ್ಲಿ ಮಾತ್ರ ಜನ ಥೇಟರ್ನೆತ್ತ ಹೆಜ್ಜೆ ಹಾಕುತ್ತಾರೆ. ಇದೀಗ ಭಾರತದಲ್ಲೂ ಚಾಲ್ತಿಯಲ್ಲಿರುವಂತೆ ಆನ್ಲೈಚನ್ನಂಲ್ಲಿ ಮುಂಚಿತವಾಗಿಯೇ ಟಿಕೆಟ್ಗ್ಳನ್ನು ಕಾಯ್ದಿರಿಸಿಕೊಂಡಿರುತ್ತಾರೆ ಸಿನಿರಸಿಕರು. ಬಹುತೇಕ ಹಾಲಿವುಡ್ ಸಿನಿಮಾಗಳು ಯ್ಯಾಕ್ಷನ್, ಥ್ರಿಲ್ಲರ್ ಮತ್ತು ಸಸ್ಪೆನ್ಸ್ನಿಂ ದಲೇ ಕೂಡಿರುವ ಹಿನ್ನೆಲೆಯಲ್ಲಿ ಇಲ್ಲಿ ಸಿನಿಮಾಗಳು ತ್ರೀಡಿಯಲ್ಲೇ ತಯಾರಾಗಿರುತ್ತವೆ. ಈ ಮಾದರಿಯ ಸಿನಿಮಾಗಳನ್ನು ನೋಡಲು ಥೇಟರ್ಗದಳಲ್ಲಿ ವಿಶೇಷ ತ್ರೀಡಿ ಕನ್ನಡಕಗಳ ವ್ಯವಸ್ಥೆ ಮಾಡಿರುತ್ತಾರೆ. ಪ್ರೇಕ್ಷಕರು ಥೇಟರ್ನ ಲ್ಲಿ ಆಸೀನರಾದ ನಂತರ ಇನ್ನೇನು ಸಿನಿಮಾ ಶುರುವಾಗುತ್ತದೆ ಎನ್ನುವುದಕ್ಕೂ ಮುನ್ನ ಥೇಟರ್ನತ ಮೇಲ್ವಿಚಾರಕರು ಮೈಕ್ ಹಿಡಿದು ಪರದೆಯ ಮುಂದೆ ಬಂದು ನಿಂತು ಎಲ್ಲರಿಗೂ ವಿಷ್ ಮಾಡಿ, ಸಿನಿಮಾ ಬಗ್ಗೆ ಎರಡು ಉತ್ತಮ ಮಾತುಗಳನ್ನಾಡುತ್ತಾರೆ. ಅಕಸ್ಮಾತ್ ಪ್ರೇಕ್ಷಕರಿಗೆ ಅನಿರೀಕ್ಷಿತವಾಗಿ ಏನಾದರೂ ತೊಂದರೆ ಉಂಟಾದಲ್ಲಿ ಹಿಂದೆ ಇಬ್ಬರು ಸಹಾಯಕರು ನಿಂತಿದ್ದಾರೆಂದೂ ತರ್ತು ಸಂದರ್ಭದಲ್ಲಿ ಅವರು ನಿಮ್ಮ ಸಹಾಯಕ್ಕೆ ಬರುತ್ತಾರೆಂದು ತಿಳಿಸಿ ಹೊರಟುಹೋಗುತ್ತಾರೆ. ಇದಾದ ನಂತರ ಒಂದಷ್ಟು ಟ್ರೈಲರ್ಗಿಳು, ಆ ನಂತರ ಸಿನಿಮಾ ಶುರುವಾಗುತ್ತದೆ. ಆದರೆ ನೆನಪಿರಲಿ ಅಮೆರಿಕದಲ್ಲಿ ಸಿನಿಮಾಗಳಿಗೆ ಇಂಟರ್ವೆದಲ್ ಇರುವುದೇ ಇಲ್ಲ! ಒಮ್ಮೆಲೆ ಸಿನಿಮಾ ಮುಗಿದ ನಂತವೇ ಎಲ್ಲರೂ ಟಾಯ್ಲೆಟ್ ಕಡೆ ಓಡುವುದು ಇಲ್ಲಿ ಸಾಮಾನ್ಯ. ಆದರೆ ಸಿನಿಮಾ ಮುಗಿಯುತ್ತಿದ್ದಂತೆ ಕಾರ್ ಪಾರ್ಕಿಂಗ್ ಕಡೆ ಜನ ಓಡುವುದಿಲ್ಲ. ಅದು ಇಲ್ಲಿನ ಸಂಪ್ರದಾಯವೂ ಅಲ್ಲ. ಕ್ಲೈಮ್ಯಾಕ್ಸ್ನಮ ನಂತರ ಆ ಸಿನಿಮಾ ತಯಾರಿಸಲು ಶ್ರಮಿಸಿದ ಎಲ್ಲರ ಹೆಸರುಗಳು ಪರದೆಯಲ್ಲಿ ಬಂದು ಹೋದ ಮೇಲೆಯೇ ಥೇಟರ್ನಾ ಎಲ್ಲ ಲೈಟ್ಗಕಳು ಆನ್ ಆಗುತ್ತವೆ. ಅಲ್ಲಿಯವರೆಗೂ ಪ್ರೇಕ್ಷಕರು ಸಮಾಧಾನದಿಂದ ಕೂತಿದ್ದು, ಸಿನಿಮಾ ಚೆನ್ನಾಗಿರಲಿ ಬಿಡಲಿ ಎಲ್ಲರೂ ಒಮ್ಮೆ ಎದ್ದು ನಿಂತು ಜೋರಾಗಿ ಚಪ್ಪಾಳೆ ತಟ್ಟಿ ಆ ನಂತರವೇ ಥೇಟರ್ನಿಂ ದ ಹೊರ ನಡೆಯುತ್ತಾರೆ.! ಅದು ಸಹ ಹೊರಬಾಗಿಲಿಗೆ ಹತ್ತರವಿರುವ ಸಾಲಿನಲ್ಲಿ ಕೂತಿರುವ ಪ್ರೇಕ್ಷಕರು ಮೊದಲು ಹೊರನಡೆದ ನಂತರವೇ ಹಿಂದಿನ ಸಾಲಿನವರು ಮುಂದೆ ಬರುತ್ತಾರೆ. ನೂಕುನುಗ್ಗಲು ಇಲ್ಲಿ ಇಲ್ಲವೇ ಇಲ್ಲ.
ಇಂಥಹ ಸಂದರ್ಭದಲ್ಲಿ ಅಪರೂಪಕ್ಕೊಮ್ಮೆ ಅಮೆರಿಕದಲ್ಲಿ ತಾವಿರುವ ಊರಿಗೆ ಕನ್ನಡ ಸಿನಿಮಾ ಬಂದರೆ ಕನ್ನಡಿಗರ ಸಂಭ್ರಮ ತಡೆಯೋರುಂಟೇ. ಸಾಮಾನ್ಯವಾಗಿ ಕನ್ನಡ ಚಿತ್ರಗಳು ಅಮೆರಿಕದಲ್ಲಿ ತೆರೆ ಕಾಣುವುದು ಕನ್ನಡ ಸಂಘಗಳ ಮೂಲಕ. ಇಲ್ಲಿನ 50 ರಾಜ್ಯಗಳಲ್ಲೂ ಒಂದೊಂದು ಕನ್ನಡ ಸಂಘವಿದೆ. ಪ್ರತಿರಾಜ್ಯದಲ್ಲೂ ಕನ್ನಡಕ್ಕೆ ಸಂಬಂಧಿಸಿದ ಏನೇ ಚಟುವಟಿಕೆಗಳು ನಡೆದರೂ ಅದು ಈ ಸಂಘದ ಮೂಲಕವೇ ನಡೆಯುತ್ತದೆ. ಕರ್ನಾಟಕದಿಂದ ಕಲಾವಿದರನ್ನು ಅಮೆರಿಕಗೆ ಕರೆಸಿಕೊಳ್ಳುವುದು, ನಾನಾ ಕಾರ್ಯಕ್ರಮಗಳನ್ನು ಆಯೋಜಿಸುವುದು ಇದೇ ಸಂಘಗಳೇ. ಬೆಂಗಳೂರಿನಲ್ಲಿರುವ ನಿರ್ಮಾಪಕರು, ವಿತರಕರು ಇನ್ನಿತರೆ ಸಿನಿಮಾ ಮೂಲದವರೊಂದಿಗೆ ಉತ್ತಮ ಸಂಪರ್ಕವುಳ್ಳ ಕೆಲ ಅಮೆರಿಕನ್ನಡಿಗರು ಆಗಾಗ ಸಂಘದ ಮೂಲಕ ಇಲ್ಲಿನ ತೆರೆಗೆ ಕನ್ನಡ ಸಿನಿಮಾಗಳು ಪ್ರದರ್ಶನವಾಗುವಂತೆ ಏರ್ಪಾಟು ಮಾಡುತ್ತಾರೆ. ಇಲ್ಲಿ ಕನ್ನಡ ಸಿನಿಮಾ ತೆರೆ ಕಾಣುವುದು `ಬಹುಮುಖ್ಯ ಈವೆಂಟ್'. ಕರ್ನಾಟಕದಲ್ಲಾದರೆ ದಿನಂಪ್ರತಿ ನಾನಾ ಊರುಗಳಲ್ಲಿ ಪುನಿತ್, ಸುದೀಪ್, ಯಶ್ ಇನ್ನಿತರೆ ನಟರ ಸಿನಿಮಾಗಳು ಓಡುತ್ತಲೇ ಇರುತ್ತದೆ. ಆದರೆ ಅಮೆರಿಕದಲ್ಲಿ ಹಾಗಲ್ಲ. ಇಲ್ಲಿ ವಾರಗಟ್ಟಲೆ ಕನ್ನಡ ಸಿನಿಮಾ ಓಡೋದು ತುಂಬಾ ಕಡಿಮೆ. ಇಲ್ಲೇನಿದ್ದರೂ ದಿನಗಳ ಬದಲಿಗೆ ಶೋಗಳ ಲೆಕ್ಕ. ಕರ್ನಾಟಕದಲ್ಲಿ ತುಂಬಾ ದಿನಗಳು ಓಡಿದ ಸಿನಿಮಾ ಆದ್ರೆ ಇಲ್ಲಿ 3 ಅಥವಾ 4 ಶೋಗಳಿಗಾಗಿ ಥೇಟರ್ ಬುಕ್ ಆಗಿರುತ್ತೆ. ಇಲ್ಲಾಂದ್ರೆ ಸಾಮಾನ್ಯವಾಗಿ ಎಲ್ಲಾ ಕನ್ನಡ ಸಿನಿಮಾಗಳು ಓಡೋದು ಒಂದೋ ಅಥವಾ ಎರಡು ಶೋ ಮಾತ್ರ.

ಅಂದಹಾಗೆ ಅಮೆರಿಕದಲ್ಲಿ ಸಿನಿಮಾ ತೆರೆ ಕಾಣುವ ಬಗ್ಗೆ ಇಷ್ಟೆಲ್ಲಾ ವಿಚಾರಗಳನ್ನು ಚರ್ಚಿಸಲು ಮುಖ್ಯ ಕಾರಣ `ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'. ಹೌದು, ಇತ್ತೀಚೆಗೆ ಅಮೆರಿಕದ ಅರಿಜೋನ ರಾಜ್ಯದ ರಾಜಧಾನಿ ಫೀನಿಕ್ಸ್ ನಗರದಲ್ಲಿ ಈ ಸಿನಿಮಾದ ಒಂದು ಶೋ (ರಾತ್ರಿ 9.30ರ ಸೆಕೆಂಟ್ ಶೋ) ಏರ್ಪಡಿಸಲಾಗಿತ್ತು. ಕಮ್ಯೂನಿಟಿ ವೆಬ್ಸೈೀಟ್ಗ್ಳ ಮೂಲಕ 2-3 ವಾರಗಳ ಮುಂಚಿತವಾಗಿಯೇ ಕನ್ನಡಿಗರಿಗೆ ಈ ವಿಷಯ ತಿಳಿಯುವಂತೆ ಮಾಡಲಾಗಿತ್ತು. ರಾತ್ರಿ ಶೋ ಆದ್ದರಿಂದ ಪ್ರೇಕ್ಷಕರೆಲ್ಲರೂ ಊಟ ಮಾಡಿಕೊಂಡೇ ಥೇಟರ್ನನತ್ತ ಬಂದಹಾಗಿತ್ತು. ಎಂದಿನಂತೆ ಬಹುತೇಕ ಪ್ರೇಕ್ಷಕರು ಆನ್ಲೈಂನ್ನಲಲ್ಲೇ ಟಿಕೆಟ್ ಬುಕ್ ಮಾಡಿಕೊಂಡಿದ್ದರು ಅನಿಸುತ್ತೆ. ಕಾರಣ ಸಾಲಿಲ್ಲಿದ್ದವರೆಲ್ಲರೂ ಡಾಲರ್ ನೋಟಿನ ಬದಲಾಗಿ ಕೈಯಲ್ಲಿ ಐಫೋನ್ ಹಿಡಿದು ನಿಂತಿದ್ದು, ಕೌಂಟರ್ನತಲ್ಲಿದ್ದ ಮಹಿಳೆಗೆ ತಮಗೆ ಬಂದಿದ್ದ ಕನ್ಫರ್ಮೇಷನ್ ಇ-ಮೈಲ್ನ್ನು ಓಪನ್ ಮಾಡಿ ತೋರಿಸುತ್ತಾ ಥೇಟರ್ ಒಳಗೆ ಹೋಗುತ್ತಿದ್ದರು. ಮೇಲ್ನೋಟಕ್ಕೆ ಇದು ಕನ್ನಡ ಸಿನಿಮಾ ಪ್ರದರ್ಶನ ಆಗಿರಬಹುದು. ಆದರೆ ಕನ್ನಡಿಗರು ಅಪರೂಪಕ್ಕೊಮ್ಮೆ ಭೇಟಿ ಆಗೋದೆ ಇಂಥಹ ಸಂದರ್ಭಗಳಲ್ಲಿ. ಆದ್ದರಿಂದ ಈ ಸಂದರ್ಭವನ್ನೇ ಬಳಸಿಕೊಂಡು ಸಿನಿಮಾ ಶುರು ಆಗುವುದಕ್ಕೂ ಒಂದಲ್ಲಾ ಒಂದು ವಿಚಾರದ ಬಗ್ಗೆ ಹರಟುತ್ತಲೇ ಇರುತ್ತಾರೆ. `ಹೌ ವಾಸ್ ಇಂಡಿಯಾ?' ವಾಕ್ಯವೊಂದು ತೂರಿಬರುತ್ತದೆ. ಇತ್ತ ಕಡೆಯಿಂದ `ಇಟ್ಸ್ ಓಕೆ, ವಿಲ್ ಸಿ ವಾಟ್ ಮೋದಿ ಕೆನ್ ಡು' ಎಂದರೆ, ಮತ್ತೊಬ್ಬರು `ಮೈ ಗಾಡ್ ಜಯನಗರ್ ಹ್ಯಾಸ್ ಬಿಕಮ್ ವೊರ್ಸ್ ದೆನ್ ಎವರ್ ವಿತ್ ಹೆಲ್ ಟ್ರಾಫಿಕ್' ಎಂದು ನೊಂದುಕೊಳ್ಳುತ್ತಾರೆ. ಮತ್ತೆ ಇತ್ತ `ಥ್ರೀ ಫಂಕ್ಷನ್ಸ್... ಟು ಟ್ರಿಪ್ಸ್ ಟು ಟೆಂಪಲ್ಸ್, ಓಹ್ ದಿಸ್ ಟೈಂ ಇಂಡಿಯಾ ಟ್ರಿಪ್ ವಾಸ್ ಹೆಕ್ಟಿಕ್' ಎಂಬ ಉದಾಸೀನದ ಮಾತು. ಈ ಸಂಭಾಷಣೆ ಮುಂದುವರಿದಿರುವಾಗಲೇ ಅತ್ತ ತೆರೆಯ ಮೇಲೆ ಸಿಂಹ ಘರ್ಜನೆಯೊಂದಿಗೆ `ಯಶ್' ತೆರೆ ಮೇಲೆ ಬರುತ್ತಿದ್ದಂತೆ ಎಲ್ಲರೂ ಮೌನ. ಈ ಮೌನ ಕೆಲ ನಿಮಿಷಗಳಿಗೆ ಮಾತ್ರ. ಸಿನಿಮಾ ಆರಂಭವಾಗುತ್ತಿದ್ದಂತೆ ಕಾಮೆಂಟ್ಗದಳ ಸುರಿಮೆಳೆ. ಹುಡುಗಿಯ ಬಗ್ಗೆ ನಾಯಕನಟ `ಯಶ್' ಒಂದು ಡೈಲಾಗ್ ಹೊಡೆದ ತಕ್ಷಣ, ಅದುವರೆಗೂ ಇಂಗ್ಲೀಷ್ ಮಾತನಾಡುತ್ತಿದ್ದ ಗಂಡಸರು ಹೆಂಗಸರು ಆ ಭಾಷೆ ಮರೆತು ಕನ್ನಡದಲ್ಲೇ `ಹೌದು ಕಣೋ ನೀನ್ ಸರಿಯಾಗ್ ಹೇಳ್ದೇ' ಎಂದು ಕಾಮೆಂಟ್ ಮಾಡಿದರು. ಇನ್ನೂ ಕೆಲವರು `ಕೇಳಿಸ್ಕೊಳ್ರಪ್ಪಾ. ಈ ಕಾಲದ್ ಹುಡುಗೀರ್ಗೂ ಇದು ಅನ್ವಯಿಸುತ್ತೆ' ಎಂದರು. ಸಿನಿಮಾ ಮುಂದುವರಿದು ಅಮೆರಿಕಾದ ವರನ ಪಾತ್ರದಲ್ಲಿ ನಟ ಧ್ಯಾನ್ ಎಂಟ್ರಿ ಕೊಟ್ಟಾಗ ಎಲ್ಲರೂ ನಕ್ಕಿದ್ದೇ ನಕ್ಕಿದ್ದು. `ಏನ್ ಅಮೆರಿಕ ಅಂದ್ರೆ ಈ ಮಟ್ಟಕ್ಕೆ ಏರಿಸೋದಾ...ಡೈರೆಕ್ಟರೂ...' ಅಂತ ಕೆಲವರ ಕಾಮೆಂಟು. ಇನ್ನು ನಾಯಕ ನಟಿ, ನಟ ಸೇರಿದಂತೆ ನಾಲ್ಕು ಜನ ಡಿನ್ನರ್ ಪಾರ್ಟಿಗೆಂದು ಹೋಟೆಲ್ನ್ಲ್ಲಿ ಕೂತಿದ್ದಾಗ, ನಟ ಧ್ಯಾನ್ಗೆಾ ಬಾಸ್ನಿಂನದ ಕರೆ ಬಂದು ಊಟದ ನಡುವೆ ಎದ್ದು ಹೋಗುತ್ತಾರೆ. ಆಗ `ತಿಳ್ಕೊಳ್ರಪ್ಪಾ...ಅಮೆರಿಕ ವರ ಅಂದ್ರೆ ಇದೇ ಹಣೆಬರಹ. ಯಾವಾಗ್ಲೂ ಕೆಲಸ' ಅಂತ ವಯಸ್ಸಾದ ಆಂಟಿಯೊಬ್ಬರು ಕಾಮೆಂಟ್ ಪಾಸ್ ಮಾಡಿದ್ರು. ಇದಕ್ಕೆ ಥೇಟರ್ನ ಲ್ಲಿದ್ದವರೆಲ್ಲಾ ನಕ್ಕಿದ್ದೇ ನಕ್ಕಿದ್ದು. ಇದು ಇನ್ನೂ ಸಖತ್ತಾಗಿದೆ. ತಂದೆಗಾಗಿ ನಾಯಕ ನಟ ಯಶ್ ನಡುರಾತ್ರಿ ಫ್ಲೈಓವರ್ ಮೇಲೆ ಕುಣಿದಾಗ `ಅಲ್ನೋಡಿ.. ಅಲ್ನೋಡಿ.. ಇದು ಕೆಂಗೇರಿ ಫ್ಲೈ ಓವರ್ ಅಲ್ವಾ' ಅಂತ ಎಲ್ಲರೂ ಉದ್ಗಾರ ತೆಗೆದರು. ಇತ್ತ ಕಾಲೇಜು ಸೀನ್ ಬಂದಾಗಲೆಲ್ಲಾ `ಇದ್ಯಾವ ಕಾಲೇಜಪ್ಪಾ ಬೆಂಗ್ಳೂರಲ್ಲಿ?' ಎಂಬ ಕಾಮೆಂಟು. ಎಲ್ಲದಕ್ಕೂ ಮುಕುಟವಿಟ್ಟಂತೆ ರಜನಿಕಾಂತ್ ಸ್ಟೈಲಿನಲ್ಲಿ ಸಾಧುಕೋಕಿಲ ಸ್ಕ್ರೀನ್ ಮೇಲೆ ಬರುತ್ತಿದ್ದಂತೆ ಮತ್ತೆ ಎಲ್ಲರೂ ಹೋ ಎಂದು ಕೂಗಿದ್ದೇ ಕೂಗಿದ್ದು. ಹೀಗೆ ಎರಡೂವರೆ ಗಂಟೆಗಳ ಕಾಲ ಕನ್ನಡಿಗರೆಲ್ಲರೂ ತಾವಿರುವುದು ಅಮೆರಿಕದಲ್ಲಿ ಎಂಬುದನ್ನೇ ಮರೆತುಹೋದಂತಿತ್ತು. ಈಗಿರೋದೇ ನಿಜವಾದ ಕ್ಲೈಮ್ಯಾಕ್ಸ್..! ಸಿನಿಮಾ ಮುಗಿಸಿಕೊಂಡು ಎಲ್ಲರೂ ಮೈ ಮುರಿಯುತ್ತಾ ಹೊರಬಂದು ನಿಂತ ಮೇಲೆ ಆಯೋಜಕರನ್ನು ಕೇಳಿದ್ದು...`ಸೋ ವಿಚ್ ವಿಲ್ ಬಿ ದ ನೆಕ್ಸ್ಟ್ ಮೂವಿ...?'
ಅನಿಲ್ ಭಾರದ್ವಾಜ್
ಫೀನಿಕ್ಸ್. ಅರಿಜೋನ. ಯುಎಸ್ಎಾ.