` baby shower, - chitraloka.com | Kannada Movie News, Reviews | Image

baby shower,

  • ಸೀಮಂತೋತ್ಸವದಲ್ಲಿ ಅಮೂಲ್ಯ..!

    amulya attends baby shower function

    ನಟಿ ಅಮೂಲ್ಯ ಸೀಮಂತ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಹಾಗಂತ ಅವರು ತಾಯಿಯಾಗುತ್ತಿದ್ದಾರೆ ಎಂದುಕೊಳ್ಳಬೇಡಿ. ಇದು ಅವರ 3ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮದ ಗಳಿಗೆಯನ್ನು ಅವರು ಸಂಭ್ರಮಿಸಿದ ರೀತಿ.

    ಕೋವಿಡ್ 19 ಹೋರಾಟ ಶುರುವಾದಾಗಿನಿಂದ ಕಾರ್ಮಿಕರಿಗೆ ಕಿಟ್ ವಿತರಣೆ, ಮಾಸ್ಕ್ ವಿತರಣೆ ಸೇರಿದಂತೆ ಪತಿ ಜಗದೀಶ್ ಜೊತೆ ಸಂಪೂರ್ಣ ಬ್ಯುಸಿಯಾಗಿರುವ ಅಮೂಲ್ಯ, ಈಗ ತಮ್ಮ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿರುವುದ ಸಾರ್ವಜನಿಕ ಆಸ್ಪತ್ರೆಯೊಂದ ಗರ್ಭಿಣಿಯರ ಜೊತೆ.

    ರಾಜರಾಜೇಶ್ವರಿ ನಗರದ ಬಂಗಾರಪ್ಪ ನಗರದಲ್ಲಿರೋ ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ನ್ಯೂಟ್ರಿಷನ್ ಕಿಟ್ ವಿತರಿಸಿ, ಸೀಮಂತದ ಕಾಣಿಕೆ ನೀಡಿ ಮದುವೆ ವಾರ್ಷಿಕೋತ್ಸವ ಆಚರಿಸಿದ್ದಾರೆ. 

  • ಅಣ್ಣನ ಆಸೆಯಂತೆ ಅತ್ತಿಗೆಯ ಬೇಬಿ ಶವರ್ ನೆರವೇರಿಸಿದ ಧ್ರುವ

    Meghana Raj's Baby Shower Held

    ನಟಿ ಮೇಘನಾ ರಾಜ್ ಅವರು ಗರ್ಭಿಣಿ. ಪತಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿರುವ ನೋವಿನಲ್ಲಿರುವ ಮೇಘನಾ ಅವರನ್ನು ಸಂತಸ, ಸಂಭ್ರಮದಲ್ಲಿಡಲು ಎರಡೂ ಕುಟುಂಬಗಳು ಪಣತೊಟ್ಟಿವೆ. ತುಂಬು ಗರ್ಭಿಣಿ ಮೇಘನಾ ರಾಜ್ ಅವರಿಗೆ ಮೊನ್ನೆ ಮೊನ್ನೆಯಷ್ಟೇ ಸುಂದರ್ ರಾಜ್,ಪ್ರಮೀಳಾ ಜೋಷಾಯ್ ಮನೆಯಲ್ಲಿ ಸೀಮಂತ ಕಾರ್ಯಕ್ರಮ ನೆರವೇರಿತ್ತು. ಈಗ ಸರ್ಜಾ ಮನೆಯಲ್ಲಿ ಬೇಬಿ ಶವರ್ ಕಾರ್ಯಕ್ರಮ ನಡೆದಿದೆ.

    ಎರಡೂ ಕಾರ್ಯಕ್ರಮಗಳಲ್ಲಿ ಎರಡೂ ಮನೆಯವರು ಹಾಜರಿದ್ದು, ಮೇಘನಾ ಅವರ ಸೀಮಂತದ ಸಂಭ್ರಮ ಹೆಚ್ಚಿಸಿದರು. ಈ ಕಾರ್ಯಕ್ರಮ ನಡೆದಿದ್ದು ಖಾಸಗಿ ಹೋಟೆಲ್‍ವೊಂದರಲ್ಲಿ. ಬೇಬಿ ಶವರ್ ಹೇಗೆ ಮಾಡಬೇಕು ಎಂದು ಚಿರು ಕನಸು ಕಂಡಿದ್ದರೋ, ಅದರಂತೆಯೆ ಅತ್ತಿಗೆಯ ಬೇಬಿ ಶವರ್ ನಡೆಸಿಕೊಟ್ಟಿದ್ದಾರೆ ಧ್ರುವ. ಅಣ್ಣನ ಕನಸನ್ನು ಈಡೇರಿಸಿದ ನೆಮ್ಮದಿಯ ನಡುವೆಯೂ ಧ್ರುವ ಸರ್ಜಾ ಕಣ್ಣು ಒದ್ದೆಯಾಗಿತ್ತು. ನೋವನ್ನು ಮರೆತು ನಗು ಹಂಚುತ್ತಿದ್ದರು ಮೇಘನಾ.

  • ಗೆಳತಿಯರಿಂದಲೇ ರಾಧಿಕಾ ಪಂಡಿತ್ ಸೀಮಂತ

    radhika pandit'a baby shower

    ನಟಿ ರಾಧಿಕಾ ಪಂಡಿತ್ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೊದಲ ಮಗು ಐರಾಳ ತೊದಲು ಮಾತು ಕೇಳುವ ಹೊತ್ತಿನಲ್ಲಾಗಲೇ 2ನೇ ಮಗುವಿಗಾಗಿ ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ರಾಧಿಕಾ ಪಂಡಿತ್ ಸೀಮಂತವೂ ಆಗಿದೆ.

    ವೆಸ್ಟರ್ನ್ ಶೈಲಿಯಲ್ಲಿ ರಾಧಿಕಾರ ಸೀಮಂತ ಮಾಡಿರುವುದು ಗೆಳತಿಯರು. ಫೇರಿಟೇಲ್ ನೆನಪಿಸುವ ಶೈಲಿಯಲ್ಲಿ ರಾಧಿಕಾ ಪಂಡಿತ್ ಅವರ ಸೀಮಂತ ಮಾಡಿ ಸಂಭ್ರಮಿಸಿದ್ದಾರೆ. ಮನೆಯವರು ಮಾಡುವುದು ಬೇರೆ.. ಅಣ್ಣನೋ.. ಅಕ್ಕನೋ.. ತಂಗಿಯರೋ ಮಾಡುವುದು ಬೇರೆ.. ಇದು ಹಾಗಲ್ಲ. ರಾಧಿಕಾ ಪಂಡಿತ್ ತಮ್ಮ ಗೆಳತಿಯರನ್ನು ಪ್ರೀತಿಸುವ ಪರಿ ಹೇಗಿದೆ ಎಂಬುದಕ್ಕೆ ಈ ಸೀಮಂತವೇ ಉದಾಹರಣೆ.

  • ಪ್ರೇರಣಾ ಸರ್ಜಾಗೆ ಸೀಮಂತೋತ್ಸವ

    ಪ್ರೇರಣಾ ಸರ್ಜಾಗೆ ಸೀಮಂತೋತ್ಸವ

    ಧ್ರುವ ಸರ್ಜಾ ಅಪ್ಪನಾಗುತ್ತಿದ್ದಾರೆ. ಇತ್ತೀಚೆಗೆ ಪ್ರೇರಣಾ ಅವರ ಬೇಬಿ ಬಂಪ್ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದ ಧ್ರುವ, ತಮ್ಮ ಕುಟುಂಬಕ್ಕೆ ಹೊಸ ಸದಸ್ಯ ಬರುತ್ತಿದ್ದಾನೆ ಎನ್ನುವುದನ್ನು ಸಾರಿದ್ದರು. ಈಗ ಪ್ರೇರಣಾ ಸರ್ಜಾ ಅವರ ಸೀಮಂತ ಶಾಸ್ತ್ರವನ್ನೂ ಮುಗಿಸಿದ್ದಾರೆ.

    ಸರ್ಜಾ ಕುಟುಂಬದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಶುಭ ಕಾರ್ಯವಿದು. ಸಾಲು ಸಾಲು ನೋವುಗಳಲ್ಲೇ ಮುಳುಗಿದ್ದ ಕುಟುಂಬದಲ್ಲಿ ಪ್ರೇರಣಾ-ಧ್ರುವ ದಂಪತಿಯ ಮಡಿಲಲ್ಲಿ ಅರಳುತ್ತಿರುವ ಕೂಸು ಹೊಸ ಸಂಭ್ರಮ ತರಲಿದೆ.

  • ಮದುವೆಯಾದ ಆ ದಿನವೇ ಬರಲಿದೆ ಪುಟ್ಟ ಕಂದ..!

    radhika pandit's baby shower at taj west end hotel

    ರಾಧಿಕಾ ಪಂಡಿತ್ ಮತ್ತು ಯಶ್ ದಂಪತಿ ಮದುವೆಯಾಗಿದ್ದು ಡಿಸೆಂಬರ್ 9ರಂದು. 2 ವರ್ಷಗಳ ಹಿಂದೆ. ಅದೇ ದಿನ.. ಡಿಸೆಂಬರ್ 9ರಂದೇ ಮನೆಗೆ ಪುಟ್ಟ ಕಂದ ಬರಲಿದೆ. ಅದೇ ದಿನ ವೈದ್ಯರು ಡೇಟ್ಸ್ ಕೊಟ್ಟಿದ್ದಾರಂತೆ. 

    ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ರಾಧಿಕಾ ಪಂಡಿತ್‍ಗೆ ಸಂಭ್ರಮದ ಸೀಮಂತ ಮಾಡಿದ್ದಾರೆ ಮೊಗ್ಗಿನ ಮನಸಿನ ಚೆಲುವ ಯಶ್. ಸೀಮಂತಕ್ಕಾಗಿಯೇ ಅರುಣ್ ಸಾಗರ್ ವಿಶೇಷ ಮಂಟಪ ಕಟ್ಟಿದ್ದರೆ, ಹಸಿರು ಚಪ್ಪರದ ನಡುವೆ ರಾಧಿಕಾ ಪಂಡಿತ್‍ಗೆ ಚಿತ್ರರಂಗದ ಕುಟುಂಬದ ಗಣ್ಯರು ಆಗಮಿಸಿ ಶುಭ ಹಾರೈಸಿದರು.

    ಡಿಸೆಂಬರ್ 9ಕ್ಕೆ ಮದುವೆಯಾಗಿ 2 ವರ್ಷ. ಅದೇ ದಿನ ಪುಟ್ಟ ಕಂದನ ಆಗಮನ.. ಅದಾದ ಕೆಲವೇ ದಿನಗಳಲ್ಲಿ ಯಶ್ ವೃತ್ತಿ ಜೀವನದ ಮೌಂಟ್ ಎವರೆಸ್ಟ್ ಕೆಜಿಎಫ್ ರಿಲೀಸ್. ಡಿಸೆಂಬರ್ ಯಶ್ ಪಾಲಿಗೆ ಅದೃಷ್ಟದ ತಿಂಗಳಾಗಲಿ.