` yuvaratna, - chitraloka.com | Kannada Movie News, Reviews | Image

yuvaratna,

 • ಯುವರತ್ನನ ನಾಯಕಿ ರತ್ನ ಇವಳೇನಾ..?

  has sayeesha shaigal been roped in to play lean in yuvaratna

  ಯುವರತ್ನ ಚಿತ್ರಕ್ಕೆ ಇನ್ನೂ ನಾಯಕಿ ಫೈನಲ್ ಆಗಿಲ್ಲ. ಯಾರು.. ಯಾರು.. ಎಂದು ಹುಡುಕಾಟ ನಡೆಯುತ್ತಿರುವಾಗಲೇ ಬಾಲಿವುಡ್ ಚೆಲುವೆ ಸಯೇಷಾ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಸರಸರನೆ ಸರಿದಾಡೋಕೆ ಶುರುವಾಗಿದೆ. ಈ ಸಯೇಶಾರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದು ಬಾಲಿವುಡ್ ಸೂಪರ್ ಸ್ಟಾರ್ ಅಜಯ್ ದೇವಗನ್. ದೇವಗನ್ ಅವರ ಶಿವಾಯ್ ಚಿತ್ರದ ಮೂಲಕ ತೆರೆಗೆ ಬಂದ ಸುಂದರಿ, ತೆಲುಗಿನಲ್ಲಿ ಅಖಿಲ್, ತಮಿಳಿನಲ್ಲಿ ಘಜಿನಿಕಾಂತ್, ಜುಂಗಾ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. 

  ಆದರೆ, ಆಯ್ಕೆ ಫೈನಲ್ ಆಗಿಲ್ಲ ಎನ್ನುತ್ತಿರುವುದು ನಿರ್ದೇಶಕ ಸಂತೋಷ್ ಆನಂದ್‍ರಾಮ್. ಕನ್ನಡದ ಹುಡುಗಿಯೇ ಆದರೆ ಚೆಂದ ಎನ್ನುವುದು ನನ್ನ ಮತ್ತು ಇಡೀ ಚಿತ್ರತಂಡದ ನಿರೀಕ್ಷೆ. ಇನ್ನೂ ಹುಡುಕಾಟದಲ್ಲಿದ್ದೇವೆ. ಯಾವುದೂ ಫೈನಲ್ ಆಗಿಲ್ಲ ಅಂತಾರೆ ಸಂತೋಷ್.

 • ಯುವರತ್ನನ ಪಾಠಶಾಲೆಯಲ್ಲಿ ಗುರು-ಶಿಷ್ಯರ ಸಮಾಗಮ

  ಯುವರತ್ನನ ಪಾಠಶಾಲೆಯಲ್ಲಿ ಗುರು-ಶಿಷ್ಯರ ಸಮಾಗಮ

  ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಚಿತ್ರದ ಪಾಠಶಾಲಾ ಹಾಡು ರಿಲೀಸ್ ಆಗಿದೆ. ಹಾಡಿನ ಬಗ್ಗೆ ಯಾವ ಮಟ್ಟದ ನಿರೀಕ್ಷೆಯಿತ್ತೋ.. ಅದನ್ನೂ ಮೀರಿ ಹಾಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿರೋದು ವಿಶೇಷ. ಹಾಡಿನಲ್ಲಿ ಸ್ಕೂಲು, ಗುರುಗಳ ನಡುವಿನ ಸಂಬಂಧವನ್ನು ಕಟ್ಟಿಕೊಟ್ಟಿರೋದು ನಿರ್ದೇಶಕ ಸಂತೋಷ್ ಆನಂದ ರಾಮ್. ವಿಜಯ ಪ್ರಕಾಶ್ ಧ್ವನಿಯಲ್ಲಿ ಹಾಡಿಗೆ ಬೇರೆಯದೇ ಆದ ಹಿರಿಮೆ ಸಿಕ್ಕಿದೆ.

  ಈ ಹಾಡಿನಲ್ಲಿ ದಿಗ್ಗಜರನ್ನು ಅವರ ಗುರುಗಳ ಜೊತೆ ನೆನಪಿಸಿಕೊಂಡಿರೋದು ವಿಶೇಷ. ಡಾ.ರಾಜ್ ಜೊತೆ ಗುಬ್ಬಿ ವೀರಣ್ಣ, ವಿಷ್ಣು ಜೊತೆ ಪುಟ್ಟಣ್ಣ ಕಣಗಾಲ್, ಸಚಿನ್ ಜೊತೆ ರಮಾಕಾಂತ್ ಅಚ್ರೇಕರ್, ಸ್ವಾಮಿ ವಿವೇಕಾನಂದರ ಜೊತೆ ರಾಮಕೃಷ್ಣ ಪರಮಹಂಸ, ಪಿ.ವಿ.ಸಿಂಧು ಜೊತೆ ಗೋಪಿಚಂದ್, ಉಪೇಂದ್ರ ಜೊತೆ ಕಾಶಿನಾಥ್, ವಿ.ಮನೋಹರ್ ಜೊತೆ ಹಂಸಲೇಖ.. ಹೀಗೆ ಖ್ಯಾತ ಗುರು ಶಿಷ್ಯರನ್ನು ಇಲ್ಲಿ ನೆನಪಿಸಿಕೊಳ್ಳುವಂತೆ ಮಾಡಿದ್ದಾರೆ ಸಂತೋಷ್ ಆನಂದ ರಾಮ್.

  ಈ ಹಾಡಿನ ಲಿರಿಕಲ್ ವಿಡಿಯೋ ನೋಡಿದವರಿಗೆ ಒಂದಂತೂ ಅರ್ಥವಾಗಿದೆ. ಚಿತ್ರದಲ್ಲಿ ಪ್ರಕಾಶ್ ರೈ ಅವರದ್ದು ಗುರುಗಳ ಪಾತ್ರ ಅನ್ನೋ ವಿಷಯ. ವಿಜಯ್ ಕಿರಗಂದೂರು ನಿರ್ಮಾಣದ ಈ ಸಿನಿಮಾ ಏಪ್ರಿಲ್ 1ಕ್ಕೆ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.

 • ಯುವರತ್ನನ ಪ್ರೇಮಗೀತೆಯ ಸಂಭ್ರಮ

  ಯುವರತ್ನನ ಪ್ರೇಮಗೀತೆಯ ಸಂಭ್ರಮ

  ಪವರ್ ಆಫ್ ಯೂಥ್ ಹಾಡಿನ ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದ ಯುವರತ್ನ, ಈಗ ಪ್ರೇಮದ ಮೃದಂಗ ಬಾರಿಸಿದ್ದಾನೆ. ನೀನಾದೆ ನಾ.. ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು, ನಿಧಾನವಾಗಿ ಪ್ರೇಕ್ಷಕರ ಎದೆಗಿಳಿಯುತ್ತಿದೆ.. ಥೇಟು ಪ್ರೀತಿಯಂತೆ..

  ಪುನೀತ್, ಸಂತೋಷ್ ಆನಂದರಾಮ್, ಹೊಂಬಾಳೆ ಫಿಲಂಸ್‍ನ ವಿಜಯ್ ಕಿರಗಂದೂರು ಕಾಂಬಿನೇಷನ್ನಿನ 2ನೇ ಸಿನಿಮಾ ಇದು. ಎಸ್. ತಮನ್ ಸಂಗೀತ ನೀಡಿರುವ ಚಿತ್ರದ ಹಾಡು, ಕನ್ನಡ ಮತ್ತು ತೆಲುಗು 2 ಭಾಷೆಗಳಲ್ಲೂ ರಿಲೀಸ್ ಆಗಿದೆ. ಅರ್ಮಾನ್ ಮಲಿಕ್, ತಮನ್ ಹಾಗೂ ಶ್ರೇಯಾ ಘೋಷಾಲ್ ಹಾಡಿರುವ ಕ್ಲಾಸ್ ಹಾಡಿದು. ಸಾಹಿತ್ಯ ಬರೆದಿರುವುದು ಗೌಸ್ ಪೀರ್. ತೆಲುಗಿನಲ್ಲಿ ಸಾಹಿತ್ಯ ನೀಡಿರುವುದು ರಾಮಜೋಗಯ್ಯ ಶಾಸ್ತ್ರಿ.

 • ಯುವರತ್ನನ ಬೈಕ್ ನಂಬರ್ ಸೀಕ್ರೆಟ್ ಏನ್ ಗೊತ್ತಾ..?

  secret behind yuvaratna's bike number

  ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದ್‍ರಾಮ್, ವಿಜಯ್ ಕಿರಗಂದೂರು ಕಾಂಬಿನೇಷನ್ನಿನ ಸಿನಿಮಾ ಯುವರತ್ನ. ಶೂಟಿಂಗ್ ಜೋರಾಗಿ ನಡೆಯುತ್ತಿದೆ. ಕಾಲೇಜು ಹುಡುಗನ ಗೆಟಪ್ಪಲ್ಲಿ ಪುನೀತ್ ಯಂಗ್ ಆಗಿ ಕಾಣುತ್ತಿದ್ದಾರೆ. ಇದೆಲ್ಲದರ ಜೊತೆಗೆ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆದಿರುವುದು ಪುನೀತ್ ಬೈಕ್ ನಂಬರ್.

  ಬೈಕ್ ನಂಬರ್ : KA 01 PS 0029 

  KA  01 ಎಂದರೆ ಕರ್ನಾಟಕ ನಂ.1 ಸ್ಟಾರ್.

  PS  ಅಂದ್ರೆ ಪವರ್ ಸ್ಟಾರ್ ಅಂತೆ. ಇನ್ನು 0029 ಅಂದ್ರೆ, ಅಪ್ಪು ಅಭಿನಯದ 29ನೇ ಸಿನಿಮಾ. 

  ನಂಬರ್ ಪ್ಲೇಟ್ ಅರ್ಥ ಗೊತ್ತಾಗಿದ್ದೇ ತಡ.. ಅಪ್ಪು ಫ್ಯಾನ್ಸ್ ಓಪನ್ ದ ಬಾಟಲ್..ಟಲ್..ಟಲ್.. ಎನ್ನುತ್ತಿದ್ದಾರೆ. 

 • ಯುವರತ್ನನಿಗೆ 2 ವರ್ಷದ ಸಂಭ್ರಮ..!

  ಯುವರತ್ನನಿಗೆ 2 ವರ್ಷದ ಸಂಭ್ರಮ..!

  ಹೆಡ್ಡಿಂಗ್ ರಾಂಗ್ ಇರಬೇಕು. ದಯವಿಟ್ಟು ಬದಲಿಸಿ..

  .ಅಂತಾ ಹೇಳ್ಬೇಕು ಅಂದ್ಕೊಂಡ್ರಾ..? ನಿಮ್ಮ ಲೆಕ್ಕಾಚಾರ ಕರೆಕ್ಟ್. ಯುವರತ್ನ ರಿಲೀಸ್ ಆಗಿಯೇ ಇಲ್ಲ. ಇನ್ನು 2 ವರ್ಷ ಆಗೋದ್ ಎಲ್ಲಿ.. ಅಲ್ವಾ..? ಆದರೆ 2 ವರ್ಷ ಆಗಿರೋದು ಸತ್ಯ. ರಿಲೀಸ್ ಆಗಿ ಅಲ್ಲ, ಮುಹೂರ್ತ ಆಗಿ.

  ಯುವರತ್ನ ಚಿತ್ರಕ್ಕೆ ಮುಹೂರ್ತ ನೆರವೇರಿದ್ದು 2018ರ ಡಿ.12ರಂದು. ಎಲ್ಲವೂ ಪ್ಲಾನ್ ಪ್ರಕಾರವೇ ಜರುಗಿದ್ದರೆ, 2020ರ ಫಸ್ಟ್ ಹಾಫ್‍ನಲ್ಲಿ ಸಿನಿಮಾ ರಿಲೀಸ್ ಆಗಬೇಕಿತ್ತು. ರಾಜಕುಮಾರ ಸಕ್ಸಸ್ ಕಾಂಬಿನೇಷನ್ ಇದ್ದ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳೂ ಇದ್ದವು. ಆದರೆ.. ಎಲ್ಲವನ್ನೂ ಕೊರೊನಾ ನುಂಗಿ ಹಾಕಿಬಿಟ್ಟಿತು.

  ಪ್ರಾಬ್ಲಮ್ಮೇನೂ ಇಲ್ಲ ಬಿಡಿ. ಲೇಟ್ ಆದರೂ ಲೇಟೆಸ್ಟ್ ಆಗಿ ಬರ್ತಿರೋ ಯುವರತ್ನ, 2021ರಲ್ಲಿ ರಿಲೀಸ್ ಆಗೋದು ಗ್ಯಾರಂಟಿ. ಅದೂ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ. ಪವರ್ ಆಫ್ ಯೂಥ್.. 

 • ಯುವರತ್ನನಿಗೆ ಅದ್ಭುತ ಕಾಣಿಕೆ : ಅಪ್ಪು ಅಭಿಮಾನಿಗಳು ರಿಯಲೀ ಗ್ರೇಟ್..!

  ಯುವರತ್ನನಿಗೆ ಅದ್ಭುತ ಕಾಣಿಕೆ : ಅಪ್ಪು ಅಭಿಮಾನಿಗಳು ರಿಯಲೀ ಗ್ರೇಟ್..!

  ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಇಡೋ ಹೆಜ್ಜೆಯೇ ಬೇರೆ. ಇದು ಅಂಥದ್ದೇ ಕಥೆ. ಇದು ನಡೆದಿರೋದು ಬಳ್ಳಾರಿಯಲ್ಲಿ. ಅಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿರುವ ಮಾರೆಪ್ಪ ಎಂಬ ವ್ಯಕ್ತಿಯ ಕಥೆ ಇದು. ಆತನ ಪಾಲಿಗೆ ಅಪ್ಪು ಫ್ಯಾನ್ಸ್ ಬೆಳಕಾಗಿ ಬಂದಿದ್ದಾರೆ.

  ಆಗಿದ್ದು ಇಷ್ಟೆ, ಮಾರಪ್ಪ ಸಿನಿಮಾ ಬಿಡುಗಡೆ ವೇಳೆ ಹಾಕಿರೋ ಬ್ಯಾನರುಗಳಿರ್ತವಲ್ಲ, ಅವುಗಳನ್ನ ತೆಗೆದುಕೊಂಡು ಹೋಗುತ್ತಿದ್ದರಂತೆ. ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ಬೆನ್ನು ಹತ್ತಿದಾಗ ಗೊತ್ತಾಗಿದ್ದು, ಆತನ ಗುಡಿಸಲು ಮನೆ. ಸೋರುವ ಸೂರು. ಅದನ್ನು ಈ ಬ್ಯಾನರುಗಳಿಂದ ಮುಚ್ಚಿಕೊಳ್ಳೋ ಸರ್ಕಸ್ ಮಾಡುತ್ತಿದ್ದರು ಮಾರಪ್ಪ. ಇದು ಗೊತ್ತಾದದ್ದೇ ತಡ, ಮುತ್ತುರಾಜ್ ಗೆಳೆಯರ ಬಳಗ ಏನಾದರೂ ಮಾಡಬೇಕಲ್ಲ ಎಂದು ಹೊರಟಿತು.

  ಒಂದು ವಿಷಯವನ್ನಿಲ್ಲಿ ಹೇಳಲೇಬೇಕು. ಈ ಮುತ್ತುರಾಜ್ ಗೆಳೆಯರ ಬಳಗದಲ್ಲಿರೋ ಯಾರೊಬ್ಬರೂ ಕೋಟ್ಯಧಿಪತಿಗಳಲ್ಲ. ಇವರೂ ಬಡವರು ಅಥವಾ ಮಧ್ಯಮ ವರ್ಗದವರು. ಆದರೂ..  ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ.. ಮನಸೊಂದಿದ್ದರೆ ಮಾರ್ಗವು ಉಂಟು.. ಎಂದು ಹೊರಟೇಬಿಟ್ಟರು. ಬಳಗದಲ್ಲಿದ್ದ ಎಲ್ಲ 24 ಸದಸ್ಯರೂ ಅಷ್ಟೋ.. ಇಷ್ಟೋ.. ಹಣ ಹೊಂದಿಸಿದರು. ನೋಡ ನೋಡುತ್ತಲೇ ಪುಟ್ಟ ಗಂಟಾಯ್ತು. ಮನೆಯೂ ಸಿದ್ಧವಾಯ್ತು.

  ಯುವರತ್ನ ಬಿಡುಗಡೆ ಹೊತ್ತಿಗೆ ಆ ಅಭಿಮಾನದ ಅರಮೆನಯ ಗೃಹ ಪ್ರವೇಶ ಮಾಡಿದ್ದಾರೆ ಮಾರಪ್ಪ-ಲಕ್ಷ್ಮೀ ದಂಪತಿ.

 • ಯುವರತ್ನನಿಗೆ ಯುವರಾಣಿ ಫೈನಲ್

  sayeesha finalized as heroine for yuvaratna

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ, ಸಂತೋಷ್ ಆನಂದರಾಮ್ ನಿರ್ದೇಶನದ, ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾ ಯುವರತ್ನ. ಈಗಾಗಲೇ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ಚಿತ್ರದ ನಾಯಕಿಯನ್ನು ಫೈನಲ್ ಮಾಡಿದೆ. 

  ಪುನೀತ್‍ಗೆ ಹೀರೋಯಿನ್ ಆಗಿ ಬರುತ್ತಿರುವುದು ಸಯೇಷಾ. ಈಗಾಗಲೇ ತೆಲುಗು, ಹಿಂದಿಯಲ್ಲಿ ನಟಿಸಿರುವ ಸಯೇಷಾ ಪುನೀತ್ ಜೊತೆ ನಟಿಸುತ್ತಿರುವುದಕ್ಕೆ ಥ್ರಿಲ್ ಆಗಿದ್ದೇನೆ. ಶೀಘ್ರದಲ್ಲೇ ಟೀಂ ಸೇರಿಕೊಳ್ಳುತ್ತೇನೆ ಎಂದಿದ್ದಾರೆ. 

  ಉಳಿದಂತೆ.. ಕಥೆ, ಪಾತ್ರದ ಬಗ್ಗೆ ಅವರು ಏನೆಂದರೆ ಏನೂ ಹೇಳಿಲ್ಲ. ಹೇಳುವಂತೆಯೂ ಇಲ್ಲ. ಏಕೆಂದರೆ, ಅದು ನಿರ್ದೇಶಕರ ಕಂಡೀಷನ್ನು.

 • ಯುವರತ್ನನಿಗೆ ರಾಧಿಕಾ ಅಮ್ಮ

  radhika sharath kumara joins yuvaratna team

  ಯುವರತ್ನ ಚಿತ್ರಕ್ಕೆ ಒಬ್ಬೊಬ್ಬರೇ ಸ್ಟಾರ್‍ಗಳ ಎಂಟ್ರಿ ಆಗೋಕೆ ಶುರುವಾಗಿದೆ. ಪುನೀತ್ ರಾಜ್‍ಕುಮಾರ್ ಅಭಿನಯದ ಚಿತ್ರದಲ್ಲಿ ಈ ಬಾರಿ ರಾಧಿಕಾ ಎಂಟ್ರಿ ಕೊಟ್ಟಿದ್ದಾರೆ. ರಾಜಕುಮಾರ ಚಿತ್ರದಲ್ಲಿ ಶರತ್ ಕುಮಾರ್, ಅಪ್ಪುಗೆ ಅಪ್ಪನಾಗಿದ್ದರು. ಈ ಬಾರಿ ಯುವರತ್ನ ಚಿತ್ರದಲ್ಲಿ ಅವರ ಪತ್ನಿ ರಾಧಿಕಾ ಶರತ್ ಕುಮಾರ್ ಅಮ್ಮನಾಗುತ್ತಿದ್ದಾರೆ. 

  ರಾಧಿಕಾಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಈ ಹಿಂದೆ ಸತ್ಯಂ ಶಿವಂ ಸುಂದರಂ, ಜೀವನ ಚಕ್ರ, ಪ್ರಚಂಡ ಕುಳ್ಳ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದವರು. ಹೆಚ್ಚೂ ಕಡಿಮೆ 3 ದಶಕಗಳ ನಂತರ ಮತ್ತೆ ಬಂದಿದ್ದಾರೆ.

  ಸಂತೋಷ್ ಆನಂದ್ ರಾಮ್ ನಿರ್ದೇಶನದ ಚಿತ್ರಕ್ಕೆ ಸಯ್ಯೇಷಾ ನಾಯಕಿಯಾಗಿದ್ದು, ಹೊಂಬಾಳೆ ಬ್ಯಾನರ್ಸ್‍ನಲ್ಲಿ ಸಿನಿಮಾ ತಯಾರಾಗುತ್ತಿದೆ.

 • ಯುವರತ್ನನಿಗೆ ಸಾಹೋ ಪವರ್

  saho stunt master directs yuvaratna

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದ್‍ರಾಮ್, ವಿಜಯ್ ಕಿರಗಂದೂರು ಕಾಂಬಿನೇಷನ್‍ನ ಯುವರತ್ನ ಚಿತ್ರ, ಶೂಟಿಂಗ್ ಹಂತದಲ್ಲೇ ಅಬ್ಬಾ ಎನ್ನಿಸುವಷ್ಟು ಕುತೂಹಲ ಹುಟ್ಟಿಸುತ್ತಿದೆ. ಒಂದರ ಹಿಂದೊಂದು ವಿಶೇಷಗಳನ್ನು ಸೇರಿಸಿಕೊಳ್ತಿರೋ ಯುವರತ್ನ ಚಿತ್ರಕ್ಕೆ ಈಗ ಸಾಹೋ ಪವರ್ ಸಿಕ್ಕಿದೆ.

  ಅರ್ಥಾತ್, ಸಾಹೋ, ಧೀರನ್, ಥೆರಿ, ವಿಶ್ವಾಸಂ.. ಮೊದಲಾದ ಸೂಪರ್ ಹಿಟ್ ಚಿತ್ರಗಳಿಗೆ ಮೈನವಿರೇಳಿಸುವ ಸ್ಟಂಟ್ ಆಯೋಜಿಸಿದ್ದ ಸ್ಟಂಟ್ ಮಾಸ್ಟರ್ ದಿಲೀಪ್ ಸುಬ್ರಹ್ಮಣ್ಯನ್ ಯುವರತ್ನ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡುತ್ತಿದ್ದಾರೆ.

  ಪವರ್ ಸ್ಟಾರ್ ಪವರ್‍ಗೆ ತಕ್ಕಂತೆ ಸಾಹಸ ಸಂಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿರುವ ಸಂತೋಷ್ ಆನಂದ್‍ರಾಮ್, ಅಭಿಮಾನಿಗಳು ಇನ್ನಷ್ಟು ಥ್ರಿಲ್ಲಾಗಿ ಕಾಯುವಂತೆ ಮಾಡಿದ್ದಾರೆ.

 • ಯುವರತ್ನನಿಗೆ ಸಿಕ್ಕ ಬೆಂಬಲ ಹೇಗಿತ್ತು..?

  ಯುವರತ್ನನಿಗೆ ಸಿಕ್ಕ ಬೆಂಬಲ ಹೇಗಿತ್ತು..?

  ಯುವರತ್ನ, ಏಪ್ರಿಲ್ 1ರಂದು ರಿಲೀಸ್ ಆಗಿ ಬ್ಲಾಕ್ ಬಸ್ಟರ್ ಹಾದಿಯಲ್ಲಿದ್ದ ಸಿನಿಮಾ. ಈ ಸಿನಿಮಾಗೆ ಇದ್ದಕ್ಕಿದ್ದಂತೆ 50% ನಿರ್ಬಂಧ ಹೇರಿದ್ದು ರಾಜ್ಯ ಸರ್ಕಾರ. ಪುನೀತ್ ರಾಜ್ಕುಮಾರ್ ಸೇರಿದಂತೆ ಇಡೀ ಚಿತ್ರರಂಗವೇ ಕೈಮುಗಿದು ಕೇಳಿಕೊಂಡಿತು. ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ಕೊಡಿ ಎಂದು ಬೇಡಿಕೊಂಡಿತು. ಈ ಹಾದಿಯಲ್ಲಿ ಯುವರತ್ನ ಚಿತ್ರತಂಡಕ್ಕೆ ಸಿಕ್ಕ ಬೆಂಬಲವಂತೂ ಅಮೋಘವಾಗಿತ್ತು.

  ಕಿಚ್ಚ ಸುದೀಪ್, ಶಿವಣ್ಣ, ಯಶ್, ಜಗ್ಗೇಶ್, ರಕ್ಷಿತ್ ಶೆಟ್ಟಿ, ದುನಿಯಾ ವಿಜಯ್, ಶರಣ್, ರಿಷಬ್ ಶೆಟ್ಟಿ, ಜೋಗಿ ಪ್ರೇಮ್, ದಿನಕರ್ ತೂಗುದೀಪ್, ಪವನ್ ಒಡೆಯರ್, ಎ.ಪಿ.ಅರ್ಜುನ್. ಹೇಮಂತ್ ರಾವ್, ಶೈಲಜಾ ನಾಗ್, ಕೆ.ಪಿ.ಶ್ರೀಕಾಂತ್, ಚೇತನ್ ಕುಮಾರ್, ಸ್ವಪ್ನಾ ಕೃಷ್ಣ, ಪೃಥ್ವಿ ಅಂಬರ್, ವಿ.ನಾಗೇಂದ್ರ ಪ್ರಸಾದ್, ರವಿಶಂಕರ್ ಗೌಡ….. ಹೀಗೆ ಚಿತ್ರತಂಡದ ಸದಸ್ಯರಷ್ಟೇ ಅಲ್ಲದೆ ಇಡೀ ಚಿತ್ರರಂಗದ ಸ್ಟಾರ್ ನಟ, ನಿರ್ದೇಶಕರು ಯುವರತ್ನ ಬೆಂಬಲಕ್ಕೆ ನಿಂತರು.

  ಫಿಲಂ ಚೇಂಬರ್ ಒಗ್ಗಟ್ಟಾಗಿ ನಿಂತು ಸರ್ಕಾರದ ವಿರುದ್ಧ ಗುಡುಗಿತು. ರಾಜ್ಯ ಸರ್ಕಾರವೇ ಯುವರತ್ನ ಚಿತ್ರವನ್ನು ಕೊಂದು ಹಾಕಿತು ಎಂದು ನೇರವಾಗಿಯೇ ಗುಡುಗಿದರು ಸಾ.ರಾ.ಗೋವಿಂದು. ಇದರ ಹಿಂದೆ ಪಿತೂರಿಯೇ ನಡೆಯುತ್ತಿದೆ ಎಂಬ ಅನುಮಾನವನ್ನೂ ಹಲವು ಚೇಂಬರ್ನ ಹಲವು ಸದಸ್ಯರು ಹೇಳಿದರು. ಸಂಜೆಯ ಹೊತ್ತಿಗೆ ಫಿಲಂ ಚೇಂಬರ್ ಸಂಪೂರ್ಣ ಶೇ.100ರಷ್ಟು ಪ್ರೇಕ್ಷಕರ ಭರ್ತಿಗೆ ಅವಕಾಶ ಕೋರಿ ಖುದ್ದು ಯಡಿಯೂರಪ್ಪನವರಿಗೇ ಮನವಿ ಸಲ್ಲಿಸಿತು.ಸರ್ಕಾರವೂ ಈಗ 100% ಪ್ರೇಕ್ಷಕರ ಭರ್ತಿಗೆ ಓಕೆ ಎಂದಿದೆ. ಅದೂ ಕೇವಲ 4 ದಿನ.

  ಇದೆಲ್ಲವೂ ಚಿತ್ರರಂಗದ ಮಾತಾದರೆ, ಅಭಿಮಾನಿ ದೇವರುಗಳ ರಿಯಾಕ್ಷನ್ ಬೇರೆಯೇ ಇತ್ತು. ಅವರು ನೇರವಾಗಿ ಚಿತ್ರಮಂದಿರಕ್ಕೆ ಹೋದರು. ಅಭಿಮಾನಿ ಸಂಘಟನೆ ಸದಸ್ಯರು ಫಿಲಂ ಚೇಂಬರ್ ಎದುರು ಪ್ರತಿಭಟನೆಗಿಳಿದರು. ಚಿತ್ರ ನೋಡಿದ್ದ ಪ್ರೇಕ್ಷಕರೇ ಪುಟ್ಟ ಪುಟ್ಟ ವಿಡಿಯೋ ಮಾಡಿ ಯುವರತ್ನ ಚಿತ್ರವನ್ನು ನೋಡಲು ಮತ್ತೊಬ್ಬರಿಗೆ ಕರೆ ಕೊಟ್ಟರು. ನೋಡ ನೋಡುತ್ತಲೇ ಯುವರತ್ನ ಚಿತ್ರವೀಗ ಕನ್ನಡಿಗರು ನೋಡಲೇಬೇಕಾದ ಚಿತ್ರವಾಗಿ ಹೋಗಿದೆ. ಯುವರತ್ನ ಗೆಲ್ಲಲಿ.

 • ಯುವರಾಣಿಯ ಜೊತೆ ಯುವರತ್ನನ ಫಾರಿನ್ ಟೂರ್

  yuvaratna song sequence shooting in australia and slovenia

  ಯುವರತ್ನ ಚಿತ್ರದ ದೃಶ್ಯಗಳ ಚಿತ್ರೀಕರಣ ಬಹುತೇಕ ಮುಗಿದಿದೆ. ಬಾಕಿ ಉಳಿದಿದ್ದದ್ದು ಹಾಡುಗಳ ಚಿತ್ರೀಕರಣ ಮಾತ್ರ. ಈಗ ಹಾಡುಗಳ ಚಿತ್ರೀಕರಣವೂ ಶುರುವಾಗಿದೆ. ಪುನೀತ್ ರಾಜ್‍ಕುಮಾರ್ ಮತ್ತು ಸಯ್ಯೇಷಾ ವಿದೇಶಕ್ಕೆ ಹೊರಟಿದ್ದಾರೆ. ಯುವರತ್ನ ಟೀಂ ಹೋಗುತ್ತಿರುವುದು ಆಸ್ಟ್ರಿಯಾ ಮತ್ತು ಸ್ಲೊವೇನಿಯಾಗೆ.

  ಸ್ಲೊವೇನಿಯಾ ಮತ್ತು ಆಸ್ಟ್ರಿಯಾ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿರೋದೇ ಅಪರೂಪ. ಇಲ್ಲವೇ ಇಲ್ಲ ಎನ್ನಬಹುದು. ಈ ದೇಶಗಳ ಅದ್ಭುತ ಪ್ರದೇಶಗಳನ್ನು ಸೆರೆಹಿಡಿಯಲು ಹೊರಟಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್.

  ಪುನೀತ್, ಸಂತೋಷ್ ಮತ್ತು ವಿಜಯ್ ಕಿರಗಂದೂರು 2ನೇ ಬಾರಿ ಜೊತೆಯಾಗಿರುವ ಸಿನಿಮಾ ಯುವರತ್ನ ಚಿತ್ರ, 2020ರ ಸೆನ್ಸೇಷನ್ ಚಿತ್ರ. ವೇಯ್ಟಿಂಗ್ ವೇಯ್ಟಿಂಗ್ ವೇಯ್ಟಿಂಗ್..

 • ರಾಯರನ್ನು ನೆನೆದ ಯುವರತ್ನ ಟೀಂ

  ರಾಯರನ್ನು ನೆನೆದ ಯುವರತ್ನ ಟೀಂ

  ಭರ್ಜರಿ ಓಪನಿಂಗ್ ಕಂಡು, ಕಣ್ಣಿಗೆ ಕಾಣದ ತಂತ್ರಗಳಿಗೆ ಅಡೆತಡೆಯನ್ನೂ ಎದುರಿಸಿ, ಅಭಿಮಾನಿ ಮತ್ತು ಅಭಿಮಾನದಿಂದ ಗೆದ್ದು ಬೀಗುತ್ತಿರುವ ಯುವರತ್ನ ಚಿತ್ರತಂಡ ಮಂತ್ರಾಲಯದಲ್ಲಿ ಗುರು ರಾಯರ ಆಶೀರ್ವಾದ ಪಡೆದುಕೊಂಡಿದೆ.

  ಪುನೀತ್ ರಾಜ್‍ಕುಮಾರ್ ಜೊತೆ ನಿರ್ಮಾಪಕರಾದ ಕಾರ್ತಿಕ್ ಗೌಡ, ಡೈರೆಕ್ಟರ್ ನಂದಕಿಶೋರ್ ಹಾಗೂ ನಟ ಜಗ್ಗೇಶ್ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಮಂತ್ರಾಲಯ ಮಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥ ಶ್ರೀಗಳು ಪುನೀತ್ ಅವರಿಗೆ ಆಶೀರ್ವಚನ ನೀಡಿದರು.

 • ವಿಕ್ರಮ ಬೇತಾಳನನ್ನು ನೆನಪಿಸಿದ ಯುವರತ್ನ ಪುನೀತ್

  yuvaratna poster remonds of tales from vikram betal

  ವಿಕ್ರಮ ಬೇತಾಳ ಕಥೆಗಳನ್ನು ಓದಿರುವವರಿಗೆ ತಕ್ಷಣ ಆ ಕಥೆಯ ಚಿತ್ರ ನೆನಪಾದರೂ ಅಚ್ಚರಿಯಿಲ್ಲ. ಬೇತಾಳವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವ ವಿಕ್ರಮನ ಫೋಟೋ ಚಂದಮಾಮ ಮ್ಯಾಗಜಿನ್‍ನ ಆಕರ್ಷಣೆಯಾಗಿತ್ತು. ಈಗ ಸ್ವಲ್ಪ ಅದನ್ನು ನೆನಪಿಸುವ ಪೋಸ್ಟರ್ ಹೊರಬಂದಿದೆ.

  ಅಸ್ಥಿಪಂಜರ ಹೊತ್ತು ನಿಂತಿರುವ ಪುನೀತ್, ಅದರ ಹಿಂದೆ ಡೈನೋಸಾರ್ ಸ್ಕೆಲಟಿನ್. ನೋಡಿದವರ ತಲೆಯಲ್ಲಿ ಹುಳ ಫಿಕ್ಸ್. ಏಕೆಂದರೆ ಯುವರತ್ನ, ಕಾಲೇಜ್ ಬ್ಯಾಕ್‍ಗ್ರೌಂಡ್‍ನಲ್ಲಿ ನಡೆಯುವ ಸ್ಪೋಟ್ರ್ಸ್ ಕಥೆ ಎಂದುಕೊಂಡಿದ್ದವರಿಗೆ ಇದೇನು ಎಂಬ ಪ್ರಶ್ನೆ ಹುಟ್ಟುಹಾಕಿದ್ದರೆ ಅಚ್ಚರಿಯಿಲ್ಲ. ನಿರ್ದೇಶಕ ಸಂತೋಷ್ ಆನಂದರಾಮ್ ನಿರೀಕ್ಷೆಯೂ ಅದೇ ಆಗಿತ್ತೇನೋ.. ಸೋಷಿಯಲ್ ಮೀಡಿಯಾದಲ್ಲಿ ಜನ ಕೇಳುತ್ತಿರುವುದೂ ಇದೇ ಪ್ರಶ್ನೆಯನ್ನು.

  ಎಜುಕೇಷನ್ ಸಿಸ್ಟಂ ಸುತ್ತ ಇರುವ ಕಥೆಯಲ್ಲಿ ಪುನೀತ್ ಹೀರೋ. ರಾಜಕುಮಾರ ನಂತರ ಹೊಂಬಾಳೆ ಫಿಲಂಸ್, ಪುನೀತ್ ಮತ್ತು ನಿರ್ದೇಶಕ ಸಂತೋಷ್ ಆನಂದ್‍ರಾಮ್ ಮತ್ತೊಮ್ಮೆ ಜೊತೆಯಾಗಿರುವ ಯುವರತ್ನ, ಹಲವು ಕಾರಣಗಳಿಗೆ ನಿರೀಕ್ಷೆ ಹುಟ್ಟುಹಾಕಿದೆ.

 • ವಿದ್ಯಾರ್ಥಿ ಪುನೀತ್‍ಗೆ ಪ್ರಕಾಶ್ ರೈ ಪ್ರಿನ್ಸಿಪಾಲ್

  prakash raj joins yuvaratna team

  ಪ್ರಕಾಶ್ ರೈ ಮತ್ತೊಮ್ಮೆ ಪುನೀತ್ ಜೊತೆಯಾಗಿದ್ದಾರೆ. ಅಜಯ್ ಚಿತ್ರದಲ್ಲಿ ವಿಲನ್ ಆಗಿದ್ದ ರೈ, ರಾಜಕುಮಾರ ಚಿತ್ರದಲ್ಲೂ ಖಳನಟನಾಗಿಯೇ ಮಿಂಚಿದ್ದರು. ಈಗ ಯುವರತ್ನ ಚಿತ್ರದಲ್ಲಿ ಪೋಷಕ ನಟ. 

  ಚಿತ್ರದಲ್ಲಿ ಪುನೀತ್ ಕಾಲೇಜು ವಿದ್ಯಾರ್ಥಿಯಾಗಿದ್ದು, ಪ್ರಕಾಶ್ ರೈ ಪ್ರಿನ್ಸಿಪಾಲ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿಗೆ ಚಿತ್ರದ ತಾರಾಗಣದ ತೂಕ ಮತ್ತಷ್ಟು ಹೆಚ್ಚಿದೆ. ಈಗಾಗಲೇ ಚಿತ್ರದಲ್ಲಿ ಧನಂಜಯ್, ರಾಧಿಕಾ ಶರತ್ ಕುಮಾರ್ ಸೇರಿದಂತೆ ಘಟಾನುಘಟಿಗಳೇ ಇದ್ದಾರೆ. ಚಿತ್ರಕ್ಕೆ ಸಾಯೇಷಾ ಸೈಗಲ್ ನಾಯಕಿ. 

  ಸಂತೋಷ್ ಆನಂದ್‍ರಾಮ್ ನಿರ್ದೇಶನದ ರಾಜಕುಮಾರ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ರೈ, ಎಲೆಕ್ಷನ್ ನಂತರ ಸಂತೋಷ್ ಚಿತ್ರದ ಮೂಲಕವೇ ರೀ ಎಂಟ್ರಿ ಕೊಡುತ್ತಿದ್ದಾರೆ.

 • ಸಾಯಿಬಾಬಾ, ಮಹಾಲಕ್ಷ್ಮಿ ಆಶೀರ್ವಾದ ಪಡೆದ ಯುವರತ್ನ

  ಸಾಯಿಬಾಬಾ, ಮಹಾಲಕ್ಷ್ಮಿ ಆಶೀರ್ವಾದ ಪಡೆದ ಯುವರತ್ನ

  ಯುವರತ್ನ ಮೂಲಕ ಸೆನ್ಸೇಷನ್ ಸೃಷ್ಟಿಸಲು ಸಿದ್ಧರಾಗಿರೋ ಪುನೀತ್, ಚಿತ್ರದ ಬಿಡಗಡೆಗೆ ಮುನ್ನ ಶಿರಡಿ ಮತ್ತು ಕೊಲ್ಹಾಪುರ ಯಾತ್ರ ಕೈಗೊಂಡಿದ್ದಾರೆ. ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಸಂತೋಷ್ ಆನಂದರಾಮ್ ಜೊತೆ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.

  ವಿಜಯ್ ಕಿರಗಂದೂರು ಅವರಿಗೆ ಈ ದೇವಸ್ಥಾನಗಳ ಮೇಲೆ ಅಪಾರ ನಂಬಿಕೆ. ಕೆಜಿಎಫ್ ಬಿಡುಗಡೆಗೂ ಮುನ್ನ ಕೂಡ ಇದೇ ರೀತಿ ದೇವರ ಆಶೀರ್ವಾದ ಬೇಡಿದ್ದರು. ಈಗ ಪುನೀತ್, ಸಂತೋಷ್ ಜೊತೆ ಕೊಲ್ಹಾಪುರದ ಮಹಾಲಕ್ಷ್ಮಿ ಮತ್ತು ಶಿರಡಿ ಸಾಯಿಬಾಬಾ ಮಂದಿರಗಳಿಗೆ ಭೇಟಿ ಕೊಟ್ಟು, ಚಿತ್ರದ ಯಶಸ್ಸಿಗೆ ಪ್ರಾರ್ಥಿಸಿದ್ದಾರೆ.