ಯುವರತ್ನ ಟೀಸರ್ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ. ಆಯುಧಪೂಜೆಯ ದಿನ ಸಂಜೆ 5.30ಕ್ಕೆ ಟೀಸರ್ ರಿಲೀಸ್. ಆ ದಿನ ಹೊಂಬಾಳೆ ಫಿಲ್ಮ್ಸ್ ಯೂ ಟ್ಯೂಬ್ ಚಾನೆಲ್ನಲ್ಲಿ ನೀವು ಟೀಸರ್ ನೋಡಬಹುದು. ಆದರೆ, ಅದಕ್ಕಿಂತಲೂ ಕಿಕ್ಕೇರಿಸುವ ಸುದ್ದಿಯಿದೆ. ಪೈಲ್ವಾನ್ ಜೊತೆಯಲ್ಲಿ ಯುವರತ್ನ ಬರಲಿದ್ದಾನೆ.
ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಸಂತೋಷ್ ಚಿತ್ರಮಂದಿರದಲ್ಲಿ ಮಾಡಲು ಉದ್ದೇಶಿಸಿದೆ ಯುವರತ್ನ ಟೀಂ. ಸಂತೋಷ್ ಚಿತ್ರಮಂದಿರದಲ್ಲಿ ಈಗ ಪ್ರದರ್ಶನವಾಗುತ್ತಿರುವುದು ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ. ಆ ದಿನ ಪೈಲ್ವಾನ್ ಶೋ ಶುರುವಾಗುವ ಮುನ್ನ ಯುವರತ್ನ ಟೀಸರ್ ಅಲ್ಲಿಯೇ ರಿಲೀಸ್ ಆಗಲಿದೆ.
ಯುವರತ್ನ, ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ರಾಜಕುಮಾರ ಚಿತ್ರದ ನಂತರ ಪುನೀತ್, ಸಂತೋಷ್ ಮತ್ತು ವಿಜಯ್ ಕಿರಗಂದೂರು ಮತ್ತೊಮ್ಮೆ ಜೊತೆಯಾಗಿರುವ ಚಿತ್ರವಿದು.
ಶಿಕ್ಷಣ ಮಾಫಿಯಾ ಕಥೆ ಇರುವ ಚಿತ್ರದಲ್ಲಿ ಪುನೀತ್ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ.
ಅಪ್ಪುಗೆ ನಾಯಕಿಯಾಗಿ ಸಯೇಷಾ ಇದ್ದರೆ, ಪ್ರಕಾಶ್ ರೈ, ಸೋನು ಗೌಡ, ಡಾಲಿ ಧನಂಜಯ್, ರಾಧಿಕಾ ಶರತ್ ಕುಮಾರ್, ಅರು ಗೌಡ, ವಸಿಷ್ಠ ಮೊದಲಾದ ದೊಡ್ಡ ದೊಡ್ಡ ಕಲಾವಿದರ ಸೈನ್ಯವೇ ಚಿತ್ರದಲ್ಲಿದೆ.