` metoo movement, - chitraloka.com | Kannada Movie News, Reviews | Image

metoo movement,

  • ಚೇತನ್‍ಗೆ ಪ್ರಚಾರದ ಹುಚ್ಚು - ಫೈರ್‍ನಿಂದ ಪ್ರಿಯಾಂಕಾ ಉಪೇಂದ್ರ ನಿರ್ಗಮನ

    chethan is crazy for publicity 0 priyanka upendra

    ಮೀಟೂ ಅಭಿಯಾನ ಹಲವು ಸ್ಟಾರ್‍ಗಳನ್ನು ಮಾಧ್ಯಮಗಳ ಕಟಕಟೆಯಲ್ಲಿ ನಿಲ್ಲಿಸಿದ್ದರೆ, ಮೀಟೂ ಅಭಿಯಾನಕ್ಕೆ ಆಸರೆ ಎನಿಸಿದ್ದ ಫೈರ್ ಸಂಸ್ಥೆಯೇ ಬಿರುಕುಬಿಟ್ಟಿದೆ. ಫೈರ್ ಸಂಸ್ಥೆಯಿಂದ ಪ್ರಿಯಾಂಕ ಉಪೇಂದ್ರ ನಿರ್ಗಮಿಸಿದ್ದಾರೆ. ಅರ್ಜುನ್ ಸರ್ಜಾ ವಿರುದ್ಧ ಆರೋಪಿಸಿದ್ದ ಶೃತಿ ಹರಿಹರನ್ ಜೊತೆಗೆ ನಿಂತಿದ್ದದ್ದು, ಇದೇ ಫೈರ್ ಸಂಸ್ಥೆ. ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಪ್ರಿಯಾಂಕಾ ಉಪೇಂದ್ರ. ಈಗ ತಾವೇ ಸ್ಥಾಪಿಸಿದ್ದ ಸಂಸ್ಥೆಯಿಂದ ಹೊರನಡೆದಿದ್ದಾರೆ ಪ್ರಿಯಾಂಕಾ ಉಪೇಂದ್ರ. ಅವರ ನಿರ್ಗಮನಕ್ಕೆ ಕಾರಣ, ದಾರಿ ತಪ್ಪುತ್ತಿರುವ ಮೀಟೂ ಅಭಿಯಾನ ಮತ್ತು ಸಂಸ್ಥೆಯ ಸದಸ್ಯನಾಗಿರುವ ನಟ ಚೇತನ್‍ರ ಆತುರ, ಅತಿರೇಕದ ವರ್ತನೆ.

    ಹೆಣ್ಣು ಮಕ್ಕಳ ನೋವಿಗೆ ದನಿಯಾಗುತ್ತಿದ್ದ ಫೈರ್‍ನಲ್ಲಿ ಪ್ರಿಯಾಂಕ 2 ವರ್ಷಗಳಿಂದ ಅಧ್ಯಕ್ಷೆಯಾಗಿದ್ದರು. ಈಗ..

    ಪ್ರಿಯಾಂಕಾ ಉಪೇಂದ್ರ, ನಟ ಚೇತನ್ ಸಂಸ್ಥೆಯ ದಾರಿ ತಪ್ಪಿಸುತ್ತಿದ್ದಾರೆ. ಅವರಿಗೆ ಸಮಸ್ಯೆ ಬಗೆಹರಿಯುವುದಕ್ಕಿಂತ, ಮಾಧ್ಯಮಗಳು, ಸೋಷಿಯಲ್ ಮೀಡಿಯಾಗಳ ಎದುರು ಹೋಗಿ ಪ್ರಚಾರ ಗಿಟ್ಟಿಸುವುದೇ ಮುಖ್ಯವಾಗಿದೆ ಎಂದಿದ್ದಾರೆ. ಪ್ರಿಯಾಂಕಾ ಅಷ್ಟೇ ಅಲ್ಲ, ಸಂಸ್ಥೆಯಿಂದ ವೀಣಾ ಸುಂದರ್ ಕೂಡಾ ಹೊರಬಂದಿದ್ದಾರೆ.

    ಚಿತ್ರರಂಗ ಒಂದು ಮನೆಯಿದ್ದಂತೆ. ಮನೆಯಲ್ಲಿ ಏನಾದರೂ ಗಲಾಟೆ ಆದಾಗ ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತೇವೋ.. ಅಥವಾ ಹಿರಿಯರ ಜೊತೆ ಕುಳಿತು ಬಗೆಹರಿಸಿಕೊಳ್ಳುತ್ತೇವೋ.. ಚಿತ್ರರಂಗ ಒಂದು ಫ್ಯಾಮಿಲಿ ಅನ್ನೋದನ್ನ ಮೀಟೂ ಅಥವಾ ಫೈರ್ ಸಂಸ್ಥೆಯನ್ನು ದಾರಿ ತಪ್ಪಿಸುತ್ತಿರುವವರೇ ಹೇಳಬೇಕು ಎಂದಿದ್ದಾರೆ ಪ್ರಿಯಾಂಕಾ ಉಪೇಂದ್ರ.

    ಚಿತ್ರರಂಗದಲ್ಲಿ ತೊಂದರೆಗೊಳಗಾದ ಹೆಣ್ಣು ಮಕ್ಕಳಿಗೆ ಧೈರ್ಯ ಹೇಳುವುದು, ಕಾನೂನು ನೆರವು ನೀಡುವುದು ಹಾಗೂ ಸಮಸ್ಯೆ ಬಗೆಹರಿಸುವುದು ನಮ್ಮ ಉದ್ದೇಶವಾಗಿತ್ತು. ಹಿರಿಯರನ್ನು ಒಳಗೊಂಡೇ ಫೈರ್ ಸಂಸ್ಥೆ ರೂಪಿಸಿದ್ದೆವು. ಅಲ್ಲಿಯೂ ಸಮಸ್ಯೆ ಬಗೆಹರಿಯದೇ ಹೋದಾಗ ಕಾನೂನಿನ ಮೊರೆ ಹೋಗುವುದು ನಮ್ಮ ಉದ್ದೇಶವಾಗಿತ್ತು. ಆದರೆ, ಸಂಸ್ಥೆಗೆ ಸೇರಿದ ಚೇತನ್‍ಗೆ ಬೇರೆಯದೇ ಉದ್ದೇಶಗಳಿದ್ದವು. ಪ್ರತಿಯೊಂದನ್ನೂ ಸುದ್ದಿ ಮಾಡುವ, ದೊಡ್ಡದಾಗಿ ಮಾತನಾಡುವ, ಎಲ್ಲದಕ್ಕೂ ಮೀಡಿಯಾಗಳ ಮುಂದೆ ಹೋಗುವ ಹುಚ್ಚು. ಸೂಕ್ಷ್ಮ ವಿಚಾರಗಳನ್ನು ಬೀದಿಯಲ್ಲಿ ಮಾತನಾಡಬಾರದು ಎಂಬ ಸೂಕ್ಷ್ಮತೆಯೇ ಅವರಿಗೆ ಇಲ್ಲ ಎಂದಿದ್ದಾರೆ ಪ್ರಿಯಾಂಕಾ ಉಪೇಂದ್ರ.

    ಪ್ರತಿಯೊಂದನ್ನೂ ದೊಡ್ಡ ದನಿಯಲ್ಲೇ ಮಾತನಾಡುವ ಚೇತನ್, ಅಂಬರೀಶ್ ಅವರ ಎದುರೂ ಕೂಗಾಡಿದ್ದರಂತೆ. ಆಗ ಪ್ರಿಯಾಂಕಾ ಉಪೇಂದ್ರ ಬುದ್ದಿ ಹೇಳಿದ್ದರಂತೆ. ಅಷ್ಟೇ ಅಲ್ಲ, ವಾಣಿಜ್ಯ ಮಂಡಳಿಗೆ ಕೊಡುವ ದೂರುಗಳನ್ನು ನಮಗೇ ಕೊಡಿ ಎನ್ನುತ್ತಿದ್ದಾರೆ ಚೇತನ್. ಏನು ಅದರ ಅರ್ಥ..? ನಿಮಗಿಂತ ನಾವೇ ದೊಡ್ಡವರು ಎಂದು ಹೇಳಿದಂತೆ ಅಲ್ಲವಾ ಅದು..? ಇದು ಪ್ರಿಯಾಂಕಾ ಉಪೇಂದ್ರ ಪ್ರಶ್ನೆ.

    ಈಗಿನ ಶೃತಿ ಹರಿಹರನ್ ವಿವಾದವನ್ನು ಪ್ರಸ್ತಾಪಿಸಿರುವ ಪ್ರಿಯಾಂಕಾ, ಗಲಾಟೆಯಾಯಿತು. ಸುದ್ದಿಯಾಯಿತು. ವಿವಾದವಾಯಿತು. ಏನೂ ಆಗದೇ ಹೋದಾಗ.. ನೊಂದವರ ಧ್ವನಿಯನ್ನೇ ಅನುಮಾನದಿಂದ ನೋಡುವಂತಾಗುತ್ತೆ. ಅಷ್ಟೇ ಎಂದಿದ್ದಾರೆ.

  • ಡೈರೆಕ್ಟರ್ ಗುರು ಗ್ರಹಚಾರ ಬಿಡಿಸಿದ ಗುರು ಪತ್ನಿ

    guruprasad's wife aarathi talks on her husband's comments

    ಮೀಟೂ ವಿರೋಧಿಸಿ ಮಾತನಾಡುತ್ತಾ, ನಟಿ ಸಂಗೀತಾ ಭಟ್‍ರನ್ನು ಟೀಕಿಸಿದ್ದ ನಿರ್ದೇಶಕ ಗುರುಪ್ರಸಾದ್ ವಿರುದ್ಧ ಅವರ ಪತ್ನಿ ಆರತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೀಟೂ ಆರೋಪ ಮಾಡುವ ಮೂಲಕ, ಈ ನಟಿಯರು ತಾವು ಪತಿವ್ರತೆಯರು, ಸತಿ ಸಾವಿತ್ರಿಯರು ಎಂದು ತೋರಿಸಿಕೊಳ್ಳೋಕೆ ಹೊರಟಿದ್ದಾರೆ ಎಂದು ನಿರ್ದೇಶಕ ಗುರು ಟೀಕಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಗುರು ಪ್ರಸಾದ್ ಪತ್ನಿ ಆರತಿ `ನಾನು ಗುರುಪ್ರಸಾದ್ ಪತ್ನಿ ಅಲ್ಲ. 3 ವರ್ಷಗಳ ಹಿಂದೆಯೇ ನಾವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಅರ್ಧ ರಾತ್ರಿಯಲ್ಲಿ ನನ್ನನ್ನು ನನ್ನ ಮಗನೊಂದಿಗೆ ಹೊರಹಾಕಿದ್ದ ಗುರುಪ್ರಸಾದ್‍ಗೆ, ಇನ್ನೊಬ್ಬರಿಗೆ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡುವ ನೈತಿಕತೆ ಇದೆಯೇ..'' ಎಂದು ಪ್ರಶ್ನಿಸಿದ್ದಾರೆ. 

    ಮೀಟೂ ಕುರಿತು ನನಗೆ ಹೆಚ್ಚು ಗೊತ್ತಿಲ್ಲ. ಆದರೆ, ಒಬ್ಬ ಮಹಿಳೆ ಬಹಿರಂಗವಾಗಿ ಹೊರಬಂದು ನನಗೆ ತೊಂದರೆಯಾಗಿದೆ ಎಂದು ಹೇಳಿಕೊಳ್ಳೋದು ಸುಲಭದ ಮಾತಲ್ಲ. ಬೇರೊಬ್ಬರ ಖಾಸಗಿ ಜೀವನದ ಬಗ್ಗೆ ಮಾತನಾಡುವವರು ಮೊದಲು ತಮ್ಮ ಖಾಸಗಿ ಜೀವನ ಹೇಗಿದೆ ಎಂದು ನೋಡಿಕೊಳ್ಳಲಿ ಎಂದಿದ್ದಾರೆ ಆರತಿ.

  • ತಿಥಿ ಬರಹಗಾರನ ಮೇಲೂ ಮೀಟೂ ಬಾಂಬ್..!

    thithi story writer ere gowda image

    ಮೀಟೂ ಅಭಿಯಾನ ದಿನೇ ದಿನೇ ಒಬ್ಬೊಬ್ಬರನ್ನೇ ಸುಳಿಗೆ ಎಳೆದುಕೊಳ್ಳುತ್ತಿದೆ. ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್, ರವಿ ಶ್ರೀವತ್ಸ ವಿರುದ್ಧ ಸಂಜನಾ ಗರ್ಲಾನಿ ಸೇರಿದಂತೆ ಹಲವರು `ನನಗೂ ಕಿರುಕುಳವಾಗಿತ್ತು' ಎಂದು ಹೇಳಿಕೊಳ್ಳುತ್ತಿರುವಾಗ, ತಿಥಿ ಚಿತ್ರದ ಬರಹಗಾರ, ಬಳೆ ಕೆಂಪ ನಿರ್ದೇಶಕರೂ ಆಗಿರುವ ಈರೇಗೌಡರ ಮೇಲೆ ಮೀಟೂ ಆರೋಪ ಕೇಳಿ ಬಂದಿದೆ.

    ಈರೇಗೌಡ, ಬ್ಯಾಡರಹಳ್ಳಿಯಲ್ಲಿರೋ ತಮ್ಮ ಗೆಳೆಯನ ಮನೆಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದರು. ಆ ಮನೆಯಲ್ಲಿದ್ದಾಗ ನನ್ನ ದೇಹದ ಮೇಲೆ ಬಲವಂತವಾಗಿ ಕೈ ಆಡಿಸಿದ್ದರು. ನನ್ನೆದುರೇ, ಹಸ್ತಮೈಥುನ ಮಾಡಿಕೊಂಡಿದ್ದರು. ನನ್ನ ದೇಹದ ಮೇಲೆ ವೀರ್ಯ ಚೆಲ್ಲಿದ್ದರು ಎಂದೆಲ್ಲ ಬರೆದುಕೊಂಡಿದ್ದಾರೆ. 

    ಈರೇಗೌಡ, ತಿಥಿ ಚಿತ್ರದ ಕತೆಗಾರ. ಬಳೆ ಕೆಂಪ ಚಿತ್ರದ ನಿರ್ದೇಶಕ. ಅವರ ವಿರುದ್ಧ ಅನಾಮಿಕೆಯೊಬ್ಬರು ಸಿಡಿಸಿದ ಈ ಮೀಟೂ ಬಾಂಬ್‍ನಿಂದಾಗಿ ಅವರ ನಿರ್ದೇಶನದ ಬಳೆಕೆಂಪ ಚಿತ್ರ ಇಂಟರ್‍ನ್ಯಾಷನಲ್ ಫಿಲಂ ಫೆಸ್ಟಿವಲ್‍ನಿಂದ ಹೊರಬಿದ್ದಿದೆ. ನವೆಂಬರ್ 1ರಿಂದ ನವೆಂಬರ್ 4ರವರೆಗೆ ಧರ್ಮಶಾಲಾದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದ್ದು, ಆ ಉತ್ಸವದಲ್ಲಿ ಬಳೆ ಕೆಂಪ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಈಗ ಮೀಟೂ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಚಿತ್ರವನ್ನು ಚಿತ್ರೋತ್ಸವದಿಂದ ಹೊರಗಿಡಲಾಗಿದೆ.

    ಅನಾಮಿಕೆಯೊಬ್ಬರ ಈ ಪತ್ರವನ್ನು ಶೃತಿ ಹರಿಹರನ್ ಶೇರ್ ಮಾಡಿದ್ದು, ಟೈಮ್ಸ್ ಆಫ್ ಈರೇಗೌಡ ಎಂದು ಬರೆದುಕೊಂಡಿದ್ದಾರೆ.

  • ಮೀಟೂ ಏಟು - ಶಿವಣ್ಣ ಹೇಳಿದ್ದೇನು..?

    shivanna's first reaction on me too

    ಸ್ಯಾಂಡಲ್‍ವುಡ್‍ನಲ್ಲಿ ಸುನಾಮಿ ಎಬ್ಬಿಸಿರುವ ಮೀಟೂ ಅಭಿಯಾನದ ಬಗ್ಗೆ ಹಿರಿಯ ನಟ ಶಿವರಾಜ್‍ಕುಮಾರ್ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮೀಟೂ ಆರೋಪಗಳು ಅವರವರ ವೈಯಕ್ತಿಕ ಅಭಿಪ್ರಾಯ. ಆರೋಪಗಳ ಬಗ್ಗೆ ನಾನು ಮಾತನಾಡಲ್ಲ. ಯಾರ ಭಾವನೆಗಳನ್ನೂ ಕೆಡಿಸೋಕೆ ಇಷ್ಟಪಡಲ್ಲ ಎಂದಿದ್ದಾರೆ ಶಿವಣ್ಣ.

    ಆದರೆ, ಈ ವಿವಾದಗಳನ್ನು ಫಿಲಂ ಚೇಂಬರ್‍ನಲ್ಲಿ ಕುಳಿತು ಬಗೆಹರಿಸಿಕೊಳ್ಳಬಹುದಿತ್ತು. ಇಷ್ಟೆಲ್ಲ ವಿವಾದ ಆಗಬೇಕಿರಲಿಲ್ಲ. ಸರಿ ತಪ್ಪುಗಳನ್ನು ಮಾಧ್ಯಮದವರೂ ವಿಶ್ಲೇಷಣೆ ಮಾಡಬೇಕು ಎಂದಿದ್ದಾರೆ ಶಿವರಾಜ್‍ಕುಮಾರ್.

  • ಮೀಟೂ ಕೇಸ್ - ಅರ್ಜುನ್ ಸರ್ಜಾ ಪರ ಹೀಗಿತ್ತು ಬಿ.ವಿ.ಆಚಾರ್ಯ ವಾದ

    arjun sarja image

    ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮಾಡಿರುವ ಲೈಂಗಿಕ ಕಿರುಕುಳದ ಆರೋಪ, ಈಗ ಕೋರ್ಟ್‍ನಲ್ಲಿದೆ. ಇದೊಂದು ಸುಳ್ಳು ಆರೋಪ. ಹೀಗಾಗಿ ಎಫ್‍ಐಆರ್ ರದ್ದು ಮಾಡಬೇಕು ಎಂದು ಅರ್ಜುನ್ ಸರ್ಜಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣದ ವಿಚಾರಣೆ ಆರಂಭಿಸಿರುವ ನ್ಯಾಯಾಲಯ, ವಿಚಾರಣೆಗೇನೂ ತಡೆ ಕೊಟ್ಟಿಲ್ಲ. ಆದರೆ, ನವೆಂಬರ್ 14ರವರೆಗೆ ಸರ್ಜಾರನ್ನು ಬಂಧಿಸದಂತೆ ಪೊಲೀಸರಿಗೆ ಸೂಚನೆ ಕೊಟ್ಟಿದೆ. ಈ ವಿಚಾರಣೆ ವೇಳೆ ದೇಶದ ಪ್ರಖ್ಯಾತ ವಕೀಲರಲ್ಲಿ ಒಬ್ಬರಾದ ಬಿ.ವಿ.ಆಚಾರ್ಯ, ಹೈಕೋರ್ಟ್‍ನಲ್ಲಿ ಮಂಡಿಸಿದ ವಾದ ಹೀಗಿತ್ತು.

    ಇಡೀ ಪ್ರಕರಣ ಅಕ್ಟೋಬರ್ 20ರಿಂದ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕುವುದರಿಂದ ಶುರುವಾಯ್ತು. ಅರ್ಜುನ್ ಸರ್ಜಾಗೆ ವಯಸ್ಸಿಗೆ ಬಂದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದೊಡ್ಡ ಮಗಳಿಗೆ ಶೃತಿಯವರಷ್ಟೇ ವಯಸ್ಸು. ಅಜುನ್, ದಕ್ಷಿಣ ಭಾರತದ ಖ್ಯಾತ. ಹಲವು ಭಾಷೆಗಳಲ್ಲಿ ನಟಿಸಿರುವ ಸರ್ಜಾ ವಿರುದ್ಧ ಯಾವುದೇ ಕಪ್ಪು ಚುಕ್ಕೆ ಇಲ್ಲ. ಮೀಟೂ ಅಭಿಯಾನ ಕ್ಯಾತೆ ತೆಗೆಯುವ ಅಭಿಯಾನವಾಗಿದೆ. ವಿಸ್ಮಯ ಚಿತ್ರದಲ್ಲಿ ಅವರಿಬ್ಬರೂ ಗಂಡ ಹೆಂಡತಿಯ ಪಾತ್ರ ಮಾಡಿದ್ದಾರೆ. ಪಾತ್ರಕ್ಕೆ ತಕ್ಕಂತೆ ತಬ್ಬಿಕೊಳ್ಳುವ ದೃಶ್ಯಗಳಲ್ಲಿ ನಟಿಸಿದ್ದಾರೆ. ಗಂಡ ಹೆಂಡತಿ ಪಾತ್ರಧಾರಿಗಳು ಪರಸ್ಪರ ದೇಹ ಸ್ಪರ್ಶಿಸದೇ ನಟಿಸಲು ಹೇಗೆ ಸಾಧ್ಯ..? ಹಿಂದೆ ಟಚ್ ಮಾಡಿದ್ದಾರೆ ಎನ್ನುತ್ತಿರುವ ಶೃತಿ ಆಗ ಏನು ಮಾಡ್ತಾ ಇದ್ರು. ನಿರ್ದೇಶಕರು ಈ ದೃಶ್ಯಗಳ ಬಗ್ಗೆ ಮೊದಲೇ ಹೇಳಿರುತ್ತಾರೆ. ನಿರ್ದೇಶಕರು ದೃಶ್ಯ ಸರಿಯಾಗಿ ಬರುವವರೆಗೂ ರಿಹರ್ಸಲ್ ಮಾಡಿಸುತ್ತಾರೆ. ಶೂಟಿಂಗ್‍ನಲ್ಲಿ ಅರ್ಜುನ್ ಸರ್ಜಾ ಕೈಗಳು ಅಕ್ಕಪಕ್ಕದಲ್ಲಿ ಚಲಿಸಿದವು ಎನ್ನುತ್ತಾರೆ. ಆ ಶೂಟಿಂಗ್ ನಡೆಯುವಾಗ 50ರಿಂದ 60 ಜನ ಇರುತ್ತಾರೆ. ಅಷ್ಟೂ ಜನರ ಎದುರು ಲೈಂಗಿಕ ಕಿರುಕುಳ ಕೊಡೋಕೆ ಸಾಧ್ಯವೇ..? ಕಿರುಕುಳ ಆಗಿದ್ದರೆ ಅಂದೇ ಹೇಳಬಹುದಿತ್ತು. ತಬ್ಬಿಕೊಳ್ಳುವ ಉರುಳಾಡುವ ದೃಶ್ಯಗಳಲ್ಲಿ ಕೈಗಳು ದೇಹಕ್ಕೆ ಟಚ್ ಆಗೋದು ಸಹಜ. ಸಹಜ ನಟನೆಗೆ ಅಲ್ಲಿಬೇಡಿಕೆ ಇರುತ್ತೆ. 

    ಹೆಣ್ಣಿನ ಮೇಲಿನ ದೌರ್ಜನ್ಯವನ್ನು ನಾನೂ ಖಂಡಿಸುತ್ತೇನೆ. ಆದರೆ, ಇಲ್ಲಿ ಕಾನೂನು ದುರ್ಬಳಕೆ ಆಗಿದೆ. ಕುಪ್ಪಸವನ್ನು ಮುಟ್ಟಿದ್ದರು ಎನ್ನುವ ಶೃತಿ ಆರೋಪವಿದೆಯಲ್ಲ, ಅದು ಕಾನೂನು ಪಂಡಿತರಿಂದ ಕೇಸ್‍ನ್ನು ಸ್ಟ್ರಾಂಗ್ ಮಾಡಲು ಸೇರಿಸಿರುವ ಆರೋಪ. 

    ಸಾರ್ವಜನಿಕ ಸ್ಥಳದಲ್ಲಿ ಕಿರುಕುಳ ಆಗಿದ್ದರೆ, ಆಗಲೇ ಸುದ್ದಿ ಹೊರಬರುತ್ತಿತ್ತು. ಎಫ್‍ಐಆರ್‍ನಲ್ಲಿ 354, 354ಎ, 506, 509 ಸೆಕ್ಷನ್‍ಗಳನ್ನು ಹಾಕಲಾಗಿದೆ. ಅಂದ್ರೆ, ದೂರಿನಲ್ಲೇ ಸೆಕ್ಷನ್‍ಗಳನ್ನೂ ಉಲ್ಲೇಖಿಸಿದ್ದಾರೆ. ಇದರಿಂದಲೇ ಇದೊಂದು ಸರ್ಜಾರನ್ನು ಕಾನೂನಿನಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ ಎನ್ನುವುದಕ್ಕೆ ಸಾಕ್ಷಿ.

    ಚಿತ್ರೀಕರಣ ಹೊರತುಪಡಿಸಿ, ಸರ್ಜಾ.. ಶೃತಿ ಅವರನ್ನು ಹೊರಗೆ ಭೇಟಿ ಮಾಡಿಯೇ ಇಲ್ಲ. ಚಿತ್ರದಲ್ಲಿ ಹತ್ತು ಹಲವಾರು ದೃಶ್ಯಗಳಿವೆ. ದೃಶ್ಯವೊಂದರಲ್ಲಿ ಶೃತಿಯೇ ಸರ್ಜಾಗೆ ಮುತ್ತು ಕೊಡುವ ಸನ್ನಿವೇಶ ಇದೆ. ಇಷ್ಟೆಲ್ಲ ಮುಜುಗರ ಇರುವವರು ನಟಿಸೋಕೆ ಯಾಕೆ ಒಪ್ಪಿಕೊಳ್ಳಬೇಕಿತ್ತು? 

    ಸಿನಿಮಾ ರಿಹರ್ಸಲ್ ವೇಳೆ ಇದೆಲ್ಲ ನಡೆದಿದೆ ಅಂತಾರೆ. ರಿಹರ್ಸಲ್‍ನಲ್ಲಿ ನಡೆಯೋದು ದೃಶ್ಯಗಳ ತಯಾರಿ. ಅದನ್ನು ಲೈಂಗಿಕ ಕಿರುಕುಳ ಎಂದು ಕರೆಯುವುದು ಹೇಗೆ..? ಹೀಗೆ ಬಿ.ವಿ. ಆಚಾರ್ಯ ಹೈಕೋರ್ಟ್‍ನಲ್ಲಿ ವಾದ ಮಂಡಿಸಿದ್ದಾರೆ.

    ತನಿಖೆಗೆ ತಡೆಯಾಜ್ಞೆ ನೀಡದ ಹೈಕೋರ್ಟ್, ತನಿಖೆಗೆ ಸಹಕರಿಸಿ ಎಂದು ಅರ್ಜುನ್ ಸರ್ಜಾಗೆ ಸೂಚಿಸಿದೆ. ನವೆಂಬರ್ 14ರಂದು ಮುಂದಿನ ವಿಚಾರಣೆಗೆ ದಿನ ನಿಗದಿ ಮಾಡಿದೆ. ಅದುವರೆಗೂ ಸರ್ಜಾರನ್ನು ಬಂಧಿಸಬೇಡಿ ಎಂದು ಪೊಲೀಸರಿಗೂ ಸೂಚನೆ ಕೊಟ್ಟಿದೆ. 

  • ಮೀಟೂ ಸ್ಟಾರ್ ಶೃತಿ ಕೈಲೀಗ ಒಂದ್ ಸಿನಿಮಾನೂ ಇಲ್ಲ..!

    sruthi hariharan has no movies in hand

    ಅರ್ಜುನ್ ಸರ್ಜಾ ಮೇಲೆ ಮೀಟೂ ಬಾಂಬ್ ಸಿಡಿಸಿದ ಶೃತಿ ಹರಿಹರನ್ ಕೈಲೀಗ ಒಂದು ಸಿನಿಮಾನೂ ಇಲ್ಲ. ನೃತ್ಯಗಾರ್ತಿಯಾಗಿದ್ದ ಶೃತಿ, ಲೂಸಿಯಾ ಮೂಲಕ ನಾಯಕಿಯಾದ್ರು. ಅದಾದ ಮೇಲೆ ನಾಯಕಿಯಾಗಿ, ಅತಿಥಿ ನಟಿಯಾಗಿ, ಡ್ಯಾನ್ಸರ್ ಆಗಿ ಒಟ್ಟು 18 ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂರ್ನಾಲ್ಕು ಚಿತ್ರಗಳು ಹಿಟ್ ಆಗಿವೆ. ಒಂದು ರಾಜ್ಯೋತ್ಸವ ಪ್ರಶಸ್ತಿಯೂ ಸಿಕ್ಕಿದೆ. ಇಷ್ಟೆಲ್ಲ ಇದ್ದರೂ, ಶೃತಿ ಕೈಲೀಗ ಒಂದೇ ಒಂದು ಸಿನಿಮಾನೂ ಇಲ್ಲ.

    ಅವರು ನಟಿಸಿದ್ದ ನಾತಿಚರಾಮಿ ಚಿತ್ರ ರಿಲೀಸ್‍ಗೆ ರೆಡಿಯಾಗಿದೆ. ಟಿಸ್ಲಾ ಚಿತ್ರ ಶೂಟಿಂಗ್ ಮುಗಿಸಿದೆ. ಒಪ್ಪಿಕೊಳ್ಳಬೇಕಿದ್ದ, ಮಾತುಕತೆ ಹಂತದಲ್ಲಿದ್ದ ದಾರಿ ತಪ್ಪಿಸು ದೇವರೇ ಚಿತ್ರ ತಂಡ ಶೃತಿ ಹರಿಹರನ್ ಅವರನ್ನು ಚಿತ್ರದಿಂದ ಕೈಬಿಟ್ಟಿದೆಯಂತೆ. ಅದಕ್ಕೆ ಡೇಟ್ಸ್ ಪ್ರಾಬ್ಲಂ ಕಾರಣ ಎನ್ನುತ್ತಿದೆ ಚಿತ್ರತಂಡ.

    ಮೀಟೂ ಮುಗಿದ ನಂತರ ಶೃತಿ ಅಮೆರಿಕಕ್ಕೆ ತೆರಳಲಿದ್ದಾರಂತೆ. ಅಲ್ಲಿ ಯಾವುದೋ ಕೋರ್ಸು ಮಾಡಲಿದ್ದಾರಂತೆ. ಯಾವ ಕೋರ್ಸು ಎನ್ನುವುದಕ್ಕೆ ಉತ್ತರ ಲಭ್ಯವಿಲ್ಲ.

  • ಯಾರು ಚೇತನ್..? ಅವನಿಗೇನು ನೈತಿಕತೆ ಇದೆ..? - ಸಾ.ರಾ.ಗೋವಿಂದು

    sa ra govindu blasts chethan

    ಶೃತಿ ಮತ್ತು ಅರ್ಜುನ್ ಸರ್ಜಾ ನಡುವಿನ ಮೀಟೂ ವಿವಾದದ ಪ್ರಕರಣದಲ್ಲಿ ಹಿರಿಯ ನಿರ್ಮಾಪಕ, ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಅರ್ಜುನ್ ಸರ್ಜಾ ಪರ ನಿಂತಿದ್ದರು. ಶೃತಿ ಹರಿಹರನ್‍ರನ್ನು ತರಾಟೆಗೆ ತೆಗೆದುಕೊಂಡಿದ್ದರು. 

    ಈ ವಿಷಯದ ಬಗ್ಗೆ ಮಾತನಾಡಿದ್ದ ಆ ದಿನಗಳು ಚೇತನ್, ಸಾ.ರಾ.ಗೋವಿಂದು ಒಬ್ಬ ಮಹಿಳಾ ವಿರೋಧಿ. ಸಮಾನತೆಯ ವಿರೋಧಿ.. ಎಂದಿದ್ದರು. ಚೇತನ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಾ.ರಾ.ಗೋವಿಂದು ಕಬ್ಬನ್ ಪಾರ್ಕ್ ಪೊಲೀಸರು ಈ ಚೇತನ್‍ನನ್ನು ಅರೆಸ್ಟ್ ಮಾಡಿದ್ದರು. ಯಾಕೆ

  • ಶೃತಿ ಬೆಂಬಲಕ್ಕೆ ಪ್ರಕಾಶ್ ರೈ

    prakash raj stands by sruthi hariharan

    ಶೃತಿ ಹರಿಹರನ್ ಬೆಂಬಲಕ್ಕೆ ನಟ ಪ್ರಕಾಶ್ ರೈ ನಿಂತಿದ್ದಾರೆ. ಶೃತಿ ಹರಿಹರನ್ ಅವರ ನೋವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಅರ್ಜುನ್ ಸರ್ಜಾ ದೊಡ್ಡತನ ಮೆರೆದು ಕ್ಷಮೆ ಕೇಳುವುದು ಒಳ್ಳೆಯದು. ಅದು ದೊಡ್ಡತನದ ಲಕ್ಷಣ ಎಂದಿದ್ದಾರೆ ಪ್ರಕಾಶ್ ರೈ.

    ಶೃತಿ ಹರಿಹರನ್ ವಿಚಾರ ಕುರಿತಂತೆ ಪ್ರಕಾಶ್ ರೈ, ಅರಿತೋ ಅರಿಯದೆಯೋ.. ನಾವು ಗಂಡಸರು ಹೆಣ್ಣು ಮಕ್ಕಳ ಬೇಕು ಬೇಡಗಳ ಬಗ್ಗೆ ಸೂಕ್ಷ್ಮತೆ ಕಳೆದುಕೊಂಡಿದ್ದೇವೆ. ಈ ಮೀಟೂ ಅಭಿಯಾನ ಮುಂದಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ಅವಮಾನ.. ದೌರ್ಜನ್ಯಗಳಿಗೆ ಅಂತ್ಯ ಹಾಡಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ ಪ್ರಕಾಶ್ ರೈ.

  • ಶೃತಿ ಮೀಟೂ ಏಟಿಗೆ ಐಶ್ವರ್ಯಾ ಸರ್ಜಾ ತಿರುಗೇಟು

    aishwarya sarja questions sruthi hariharan

    ಅರ್ಜುನ್ ಸರ್ಜಾ ಕಿರುಕುಳ ನೀಡಿದ್ದ ಎಂಬ ಶೃತಿ ಹರಿಹರನ್ ಆರೋಪಕ್ಕೆ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಸರ್ಜಾ ತಿರುಗೇಟು ಕೊಟ್ಟಿದ್ದಾರೆ. ನನ್ನ ತಂದೆ ಏನೆಂದು ನನಗೆ ಗೊತ್ತಿದೆ. ಅವರು ಹೆಣ್ಣು ಮಕ್ಕಳಿಗೆ ಎಷ್ಟು ಗೌರವ ಕೊಡುತ್ತಾರೆ ಅನ್ನೋದು ನನಗೆ ಗೊತ್ತು ಎಂದಿದ್ದಾರೆ ಐಶ್ವರ್ಯ. 

    ಹೀಗೆ ಹೇಳುವ ಐಶ್ವರ್ಯ ಶೃತಿಗೆ ಕೆಲವೊಂದು ಪ್ರಶ್ನೆ ಕೇಳಿದ್ದಾರೆ. ಘಟನೆ ಆದ ದಿನ ಶೃತಿ ಮಾತನಾಡಿಲ್ಲ. ಪ್ರತಿಭಟಿಸಿಯೂ ಇಲ್ಲ. ದೂರನ್ನೂ ಕೊಟ್ಟಿಲ್ಲ. ಅಲ್ಲದೆ ಚಿತ್ರದ ಪ್ರೀಮಿಯರ್ ಶೋನಲ್ಲಿ ನನಗೆ ಸಿಕ್ಕಾಗ ಶೃತಿ ಐಶ್ವರ್ಯ ಬಳಿ ``ನಿಮ್ಮ ತಂದೆ ಲೆಜೆಂಡ್. ಸೂಪರ್ ಸ್ಟಾರ್. ಅವರ ಜೊತೆ ಇನ್ನೂ ಹೆಚ್ಚು ಸಿನಿಮಾ ಮಾಡಬೇಕು'' ಎಂದು ಹೇಳಿಕೊಂಡಿದ್ದರು. ಅಷ್ಟೆಲ್ಲ ಕೆಟ್ಟ ಅನುಭವವಾಗಿದ್ದರೆ, ನನ್ನ ಬಳಿ ಆ ರೀತಿ ಏಕೆ ಹೇಳಬೇಕಿತ್ತು..? ಇದು ಐಶ್ವರ್ಯ ಸರ್ಜಾ ಕೇಳುತ್ತಿರುವ ಪ್ರಶ್ನೆ. ಅಷ್ಟೆ ಅಲ್ಲ, ಅದೇ ಚಿತ್ರದ ಸುದ್ದಿಗೋಷ್ಟಿಯಲ್ಲಿ ಅರ್ಜುನ್ ಸರ್ಜಾ ಅವರ ಜೊತೆ ಇನ್ನಷ್ಟು ಸಿನಿಮಾ ಮಾಡಬೇಕು ಎನ್ನುವುದು ನನ್ನ ಆಸೆ ಎಂದು ಹೇಳಿಕೊಂಡಿದ್ದ ಶೃತಿ ಹರಿಹರನ್ ಮಾತುಗಳೂ ಕೂಡಾ ಈಗ ಶೃತಿಯ ವಾದವನ್ನು ಒಪ್ಪದೇ ಇರುವವರ ಪ್ರಶ್ನೆಗೆ ಕಾರಣವಾಗಿವೆ.

  • ಶೃತಿಗೆ ತಲೆ ಕೆಟ್ಟಿದೆಯಾ..? - ಸಾ.ರಾ.ಗೋವಿಂದು ಪ್ರಶ್ನೆ

    sa ra govindu says sruthi hariharan must be abnormal

    ಶೃತಿ ಹರಿಹರನ್, ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಆರೋಪಕ್ಕೆ ಸರ್ಜಾ ಅವರ ಕುಟುಂಬವಷ್ಟೇ ಅಲ್ಲ, ಚಿತ್ರರಂಗದ ಹಿರಿಯರೂ ಸಿಟ್ಟಾಗಿದ್ದಾರೆ. ಚಿತ್ರರಂಗದ ಹಿರಿಯ ನಿರ್ಮಾಪಕ, ಫಿಲಂ ಚೇಂಬರ್ ಮಾಜಿ ಅಧ್ಯಕ್ಷರೂ ಆಗಿರುವ ಸಾ.ರಾ.ಗೋವಿಂದು ಶೃತಿ ವಿರುದ್ಧ ಕಿಡಿಕಾರಿದ್ದಾರೆ.

    ಶೃತಿ ಹರಿಹರನ್‍ಗೆ ತಲೆ ಕೆಟ್ಟಿದ್ದರೆ ಹುಚ್ಚಾಸ್ಪತ್ರೆ ಸೇರಿಕೊಳ್ಳಲಿ. ಇಲ್ಲದಿದ್ದರೆ ನಾವೇ ಆಸ್ಪತ್ರೆಗೆ ಸೇರಿಸೋ ವ್ಯವಸ್ಥೆ ಮಾಡುತ್ತೇವೆ. ಅರ್ಜುನ್ ಸರ್ಜಾ ಆ ರೀತಿ ಇದ್ದಿದ್ದರೆ, ಅವರು ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ಆಗುತ್ತಿರಲಿಲ್ಲ. ಅರ್ಜುನ್ ಸರ್ಜಾ ಎಂತಹವರು, ಅವರ ವ್ಯಕ್ತಿತ್ವ ಎಂಥದ್ದು ಎನ್ನುವುದು ನನಗೂ ಗೊತ್ತು. ಶೃತಿ ಈಗ್ಯಾಕೆ ಹೀಗೆ ಹೇಳುತ್ತಿದ್ದಾರೆ. ಆಗಲೇ ಏಕೆ ಪ್ರತಿಭಟಿಸಲಿಲ್ಲ. ಶೃತಿಗೆ ಸಿನಿಮಾಗಳು ಸಿಗುತ್ತಿಲ್ಲ. ಹೀಗಾಗಿಯೇ ಅಸ್ಥಿತ್ವಕ್ಕಾಗಿ ಈ ರೀತಿ ಹೇಳುತ್ತಿದ್ಧಾರೆ ಎಂದಿದ್ದಾರೆ ಸಾ.ರಾ.ಗೋವಿಂದು.

  • ಸಂಗೀತಾ ಭಟ್ ಬೆಂಬಲಕ್ಕೆ ಪತಿ ಸುದರ್ಶನ್

    sangeetha bhat's stands by her

    ಸಂಗೀತಾ ಭಟ್ ಅವರ ಮೀಟೂ ಆರೋಪ ಕುರಿತಂತೆ ಮಾತನಾಡಿದ್ದ ನಿರ್ದೇಶಕ ಗುರು ಪ್ರಸಾದ್ ವಿರುದ್ಧ, ಸಂಗೀತಾ ಭಟ್ ಅವರ ಪತಿ ಸುದರ್ಶನ್ ಸಿಟ್ಟಾಗಿದ್ದಾರೆ. ನನ್ನ ಪತ್ನಿ ಸಂಗೀತಾ ಭಟ್, ಮೀಟೂ ಆರೋಪ ಮಾಡಿದ್ದು, ನೋವು ಹೇಳಿಕೊಳ್ಳುವುದಕ್ಕೇ ಹೊರತು ಬೇರೆ ಯಾವ ಕಾರಣಕ್ಕೂ ಅಲ್ಲ. ಚಿತ್ರರಂಗದಲ್ಲಿ ಯಾರದ್ದೋ ಹೆಸರು ಹೇಳಿ ಲಾಭ ಮಾಡಿಕೊಳ್ಳುವ ಉದ್ದೇಶವೂ ನಮಗಿಲ್ಲ. ಅವರು ತಮಗಾದ ಕೆಟ್ಟ ಅನುಭವ ಹೇಳಿಕೊಂಡಿದ್ದಾರೆ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಳ್ಳೋದ್ಯಾಕೆ ಎಂದಿದ್ದಾರೆ ಸುದರ್ಶನ್.

    ಸಂಗೀತಾ ಭಟ್ ಅವರು ಮೀಟೂ ಆರೋಪ ಮಾಡಿದ ಮೇಲೆ ಅವರೊಂದಿಗೆ ಕೆಟ್ಟದಾಗಿ ವರ್ತಿಸಿದ್ದ ಇಬ್ಬರು ಮೇಯ್ಲ್ ಮೂಲಕ ಕ್ಷಮೆ ಕೇಳಿದ್ದಾರಂತೆ. ನಮ್ಮ ಉದ್ದೇಶ ಇನ್ನೊಂದು ಕುಟುಂಬದ ನೆಮ್ಮದಿ ಹಾಳು ಮಾಡುವುದಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಇಂತಹ ಕಿರುಕುಳ ನಿಲ್ಲಬೇಕು. ಅಷ್ಟೆ. ಹೀಗಾಗಿಯೇ ಸಂಗೀತಾ ಯಾರ ಹೆಸರನ್ನೂ ಹೇಳಿಲ್ಲ. ನಮಗೆ ಗುರುಪ್ರಸಾದ್ ಸರ್ಟಿಫಿಕೇಟ್ ಅಗತ್ಯವೂ ಇಲ್ಲ ಎಂದಿದ್ದಾರೆ ಸುದರ್ಶನ್. 

  • ಸಂತ್ರಸ್ತೆಯ ಪರವೇ ನಿಂತ ರಘು ದೀಕ್ಷಿತ್ ಪತ್ನಿ ಮಯೂರಿ..!

    raghu dixit's wife mayuri

    me ಣoo ಬಿರುಗಾಳಿಯಲ್ಲಿ ಬೆತ್ತಲಾದ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಈ ಕುರಿತು ರಘು ದೀಕ್ಷಿತ್ ಕ್ಷಮೆ ಕೇಳಿದ್ದಾರೆ. ಸುದ್ದಿ ಹೊರಬಿದ್ದ ನಂತರ ರಘು ದೀಕ್ಷಿತ್ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಈ ಹಿಂದೆ ಜಮ್ಮು ಕಾಶ್ಮೀರದ  ಅತ್ಯಾಚಾರ ಪ್ರಕರಣವೊಂದರಲ್ಲಿ ಪ್ರಧಾನಿ ಮೋದಿಯವರೇ.. ಈಗಲಾದರೂ ಮಾತನಾಡಿ ಎಂದು ಅಭಿಯಾನ ನಡೆಸಿದ್ದವರಲ್ಲಿ ರಘು ದೀಕ್ಷಿತ್ ಕೂಡಾ ಇದ್ದರು. ಅ ಪ್ರಕರಣವನ್ನು ನೆನಪಿಸಿ ರಘು ದೀಕ್ಷಿತ್‍ರನ್ನು ಟೀಕಿಸಲಾಗುತ್ತಿದೆ. ಹೀಗಿರುವಾಗಲೇ, ರಘು ದೀಕ್ಷಿತ್‍ರಿಂದ ಕಿರುಕುಳಕ್ಕೊಳಗಾದೆ ಎಂದು ಹೇಳಿದ್ದ ಸಂತ್ರಸ್ತೆಯ ಪರ ರಘು ದೀಕ್ಷಿತ್ ಪತ್ನಿ ಮಯೂರಿ ಉಪಾಧ್ಯ ಅವರೇ ನಿಂತಿದ್ದಾರೆ.

    ನಾನು ಒಬ್ಬ ಪತ್ನಿಯಾಗುವ ಮುಂಚೆ ಹೆಣ್ಣು. ಹೆಣ್ಣಿನ ಗೌರವ, ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಅದನ್ನು ಪ್ರತಿಭಟಿಸುವುದು ನನ್ನ ಕರ್ತವ್ಯ. ಆ ಯುವತಿ ಹಾಗೂ ನಿರ್ದಿಷ್ಟ ಘಟನೆಯ ಬಗ್ಗೆ ನನಗೆ ಗೊತ್ತಿಲ್ಲ. ಇಂತಹ ಪ್ರಕರಣಗಳಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಶಿಕ್ಷೆಯಾಗಬೇಕು ಎಂದಿದ್ದಾರೆ ಮಯೂರಿ.

    ಈ ಪ್ರಕರಣದಲ್ಲಿ ನಾವು ಡೈವೋರ್ಸ್ ತೆಗೆದುಕೊಳ್ಳುತ್ತಿರುವುದನ್ನು ತರುವ ಅಗತ್ಯವಿಲ್ಲ ಎಂದು ಕೂಡಾ ಹೇಳಿದ್ದಾರೆ. ಆತ್ಮಗೌರವ, ಆತ್ಮಾಭಿಮಾನ ಸೆಲಬ್ರಟಿಗಳಿಗಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನಿಗೂ ತಮ್ಮದೇ ಆದ ಆತ್ಮಗೌರವ, ಆತ್ಮಾಭಿಮಾನ ಇದ್ದೇ ಇರುತ್ತೆ. ಸತ್ಯ ಸಂಗತಿ ಹೊರಬರಲಿ ಎಂದಿದ್ದಾರೆ ಮಯೂರಿ ಉಪಾಧ್ಯಾ.

    ಮಯೂರಿ ಉಪಾಧ್ಯ ಕೂಡಾ ಸೆಲೆಬ್ರಿಟಿಯೇ. ಅಂತಾರಾಷ್ಟ್ರೀಯ ಖ್ಯಾತಿ ನೃತ್ಯ ಕಲಾವಿದೆ. ವಿಶ್ವಸಂಸ್ಥೆಯಲ್ಲೂ ಕೂಡಾ ಹಲವು ಬಾರಿ ನೃತ್ಯ ಪ್ರದರ್ಶನ ನೀಡಿರುವ ಖ್ಯಾತಿ ಅವರದ್ದು. ಕಿರುತೆರೆ ಶೋಗಳಲ್ಲಿ ಜಡ್ಜ್ ಆಗಿರುವ ಮಯೂರಿ, 50ಕ್ಕೂ ಹೆಚ್ಚು ದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ.

  • ಸಾಕ್ಷಿ ಇದೆ.. ಕೋರ್ಟ್‍ನಲ್ಲಿ ತೋರಿಸ್ತೇನೆ - ಶೃತಿ ಹರಿಹರನ್

    sruthi hariharan says she has proof

    ಅರ್ಜುನ್ ಸರ್ಜಾ ವಿರುದ್ಧ ಕಿರುಕುಳದ ಆರೋಪ ಮಾಡಿರುವ ಶೃತಿ ಹರಿಹರನ್, ಅರ್ಜುನ್ ಸರ್ಜಾ ವಿರುದ್ಧದ ಆರೋಪಕ್ಕೆ ಸಾಕ್ಷಿಗಳನ್ನೂ ಇಟ್ಟುಕೊಂಡಿದ್ದಾರಂತೆ. ಸುದ್ದಿಗೋಷ್ಟಿಯಲ್ಲಿ ಅರ್ಜುನ್ ಸರ್ಜಾ ಅವರ ಹೆಸರನ್ನೇ ಹೇಳೋಕೆ ಕಾರಣಗಳೂ ಇವೆ ಎಂದ ಶೃತಿ, ಅದನ್ನು ನಾನು ಕೋರ್ಟ್‍ನಲ್ಲೇ ಹೇಳುತ್ತೇನೆ. ಇಲ್ಲಿ ಬಹಿರಂಗಪಡಿಸುವುದಿಲ್ಲ ಎಂದಿದ್ದಾರೆ.

    ಹಾಗಂತ ಅರ್ಜುನ್ ಸರ್ಜಾ, ಶೃತಿಗೆ ಯಾವುದೇ ಮೆಸೇಜ್ ಅಥವಾ ವಾಟ್ಸಪ್ ಮಾಡಿಲ್ಲ. ಅಂತಹ ಮೆಸೇಜ್‍ಗಳಿಲ್ಲ. ಆದರೆ, ಸಾಕ್ಷಿಗಳಿವೆ. ಅವುಗಳನ್ನು ಸಮಯ ಬಂದಾಗ ಕೋರ್ಟಿನಲ್ಲೇ ತೋರಿಸುತ್ತೇನೆ ಎಂದಿದ್ದಾರೆ ಶೃತಿ ಹರಿಹರನ್.

    ಶೃತಿ ಹರಿಹರನ್ ಅವರ ಜೊತೆ ಫೈರ್ ಸಂಘಟನೆಯ ಚೇತನ್, ಕವಿತಾ ಲಂಕೇಶ್ ಸೇರಿದಂತೆ ಹಲವು ಸದಸ್ಯರಿದ್ದರು. ನಾನು ಸುದೀಪ್, ದರ್ಶನ್‍ರಂತಹ ದೊಡ್ಡ ಸ್ಟಾರ್‍ಗಳ ಜೊತೆಯಲ್ಲೂ ನಟಿಸಿದ್ದೇನೆ. ನನಗೆ ಅವರ ಜೊತೆ ಇಂತಹ ಕೆಟ್ಟ ಅನುಭವಗಳಾಗಿಲ್ಲ ಎನ್ನುವುದು ಶೃತಿ ಹರಿಹರನ್ ಮಾತು.

  • ಸೈಬರ್ ಕ್ರೈಂಗೆ ದೂರು - ಶೃತಿ ಆರೋಪಿ ನಂ.1 

    arjun sarja files complaint against sruthi hariharan

    ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಶೃತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ವಿರುದ್ಧ ಅವಹೇಳನಕಾರಿ ಬರಹ ಪ್ರಕಟಿಸಿದ್ದಕ್ಕಾಗಿ ದೂರು ನೀಡಿದ್ದಾರೆ. ಬೆಂಗಳೂರು ಸಿಟಿ ಕಮಿಷನರ್ ಕಚೇರಿಯಲ್ಲಿ ಅರ್ಜುನ್ ಸರ್ಜಾ ಅವರ ಶ್ರೀರಾಂ ಫಿಲಂ ಇಂಟರ್‍ನ್ಯಾಷನಲ್ ಸಂಸ್ಥೆಯ ಮ್ಯಾನೇಜರ್ ಶಿವಾರ್ಜುನ್, ಕಮಿಷನರ್ ಸುನಿಲ್ ಕುಮಾರ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.

    ದೂರಿನಲ್ಲಿ ಶೃತಿ ಹರಿಹರನ್ ಅವರನ್ನು ಆರೋಪಿ ನಂ.1 ಎಂದು ನಮೂದಿಸಲಾಗಿದೆ. ಇನ್ನಿಬ್ಬರು ಆರೋಪಿಗಳನ್ನು ಅಪರಿಚಿತರು ಎಂದು ನಮೂದಿಸಲಾಗಿದೆ. 

  • ಹೆಣ್ಮಕ್ಕಳೇ ಕ್ಷಮೆ ಕೇಳಬೇಕಾ..? - ಶೃತಿ ಹರಿಹರನ್

    no apologies says sruthi hariharan

    ನನ್ನ ನೋವು ಏನು..? ಆರೋಪ ಏನು..? ಅನ್ನೋದನ್ನ ಇವತ್ತಿನ ವಾಣಿಜ್ಯ ಮಂಡಳಿ ಸಭೆಯಲ್ಲಿ ಹೇಳಿಕೊಂಡಿದ್ದೇನೆ. ಅರ್ಜುನ್ ಸರ್ಜಾ ನನ್ನ ವಿರುದ್ಧ ಒಂದಲ್ಲ, 2 ಕೇಸ್ ಹಾಕಿದ್ದಾರೆ. ನಾನೂ ಕೂಡಾ ಕೋರ್ಟ್‍ಗೇ ಹೋಗುತ್ತೇನೆ ಎಂದಿದ್ದಾರೆ ಶೃತಿ ಹರಿಹರನ್.

    ಪ್ರತಿ ಬಾರಿಯೂ, ನೋವನ್ನೂ ಅನುಭವಿಸಿ ನಾವೇ.. ಹೆಣ್ಣು ಮಕ್ಕಳೇ ಕ್ಷಮೆ ಕೇಳಬೇಕಾ ಎಂದರು ಶೃತಿ ಹರಿಹರನ್. ವಾಣಿಜ್ಯ ಮಂಡಳಿ ಬಗ್ಗೆ ನನಗೆ ಗೌರವ ಇದೆ. ಹಾಗಾಗಿಯೇ ಅಂಬರೀಷ್ ಸರ್ ನೇತೃತ್ವದ ಸಭೆಗೆ ಬಂದಿದ್ದೇನೆ ಎಂದರು ಶೃತಿ.

    ವಾಣಿಜ್ಯ ಮಂಡಳಿ ಮೇಲೆ ಅಷ್ಟೊಂದು ಗೌರವ ಇದ್ದವರು, ಸೋಷಿಯಲ್ ಮೀಡಿಯಾಗೆ ಹೋಗುವುದಕ್ಕೆ ಮೊದಲೇ ವಾಣಿಜ್ಯ ಮಂಡಳಿ ಎದುರು ಸಮಸ್ಯೆ ಹೇಳಿಕೊಳ್ಳಬೇಕಿತ್ತಲ್ಲವೇ.. ಎಂದು ಪ್ರಶ್ನಿಸಿದರು ಪತ್ರಕರ್ತರು. ಶೃತಿ ದಢಕ್ಕನೆ ಎದ್ದು ಹೋದರು.

  • ಹೋರಾಟದ ನಟಿಯರ ಹೊಂದಾಣಿಕೆಯನ್ನೂ ನೋಡಿದ್ದೇನೆ - ಮೀಟೂಗೆ ಹರ್ಷಿಕಾ ಪೂಣಚ್ಚ ಶಾಕ್

    Harshika Ponnacha Image

    ಮೀಟೂ ಅಭಿಯಾನ, ಬಿರುಗಾಳಿ, ಸುಂಟರಗಾಳಿ, ಚಂಡಮಾರುತ, ಅಗ್ನಿಸ್ಫೋಟ, ಜ್ವಾಲಾಮುಖಿಯಾಗಿ ಸುಡುತ್ತಿರುವಾಗಲೇ, ಹರ್ಷಿಕಾ ಪೂಣಚ್ಚ, ಮೀಟೂ ಅಭಿಯಾನದಲ್ಲಿ ತೊಡಗಿರುವವರೆಲ್ಲ ಬೆಚ್ಚಿ ಬೀಳುವಂತಾ ಶಾಕ್ ಕೊಟ್ಟಿದ್ದಾರೆ. ಹೋರಾಟದ ನಟಿಯರ ಹೊಂದಾಣಿಕೆಯನ್ನೂ ನೋಡಿದ್ದೇನೆ ಎಂದಿರುವ ಹರ್ಷಿಕಾ ಪೂಣಚ್ಚ, ಪ್ರಸಿದ್ಧಿಗಾಗಿ ನಡೆಯುತ್ತಿರುವ ಮೀಟೂ ಹೋರಾಟವನ್ನು ಖಂಡಿಸಿದ್ದಾರೆ.

    ಅನೇಕ ಹೋರಾಟಗಾರ್ತಿ ನಟಿಯರು ತಮಗೆ ಅಗತ್ಯವಿದ್ದಾಗ ದುಡ್ಡಿಗಾಗಿ, ಒಳ್ಳೆಯ ಚಾನ್ಸ್‍ಗಾಗಿ, ಅದ್ಧೂರಿ ಜೀವನಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುತ್ತಾರೆ. ಪ್ರಸಿದ್ಧಿ ಹಾಗೂ ಎಲ್ಲ ಅನುಕೂಲಗಳನ್ನೂ ಪಡೆಯುತ್ತಾರೆ. ಎಲ್ಲ ಮುಗಿದ ಮೇಲೆ ಯಾರ ಜೊತೆ ಒಂದು ಕಾಲದಲ್ಲಿ ಚೆನ್ನಾಗಿದ್ದರೋ, ಅವರ ವಿರುದ್ಧವೇ ಆರೋಪ ಮಾಡುತ್ತಾರೆ ಎಂದಿರುವ ಹರ್ಷಿಕಾ ಪೂಣಚ್ಚ, ಇದು ಹೋರಾಟದ ವಿಧಾನವಲ್ಲ ಎಂದಿದ್ದಾರೆ.

    ಹಾಗೆಂದು ಚಿತ್ರರಂಗ ಸಜ್ಜನರಷ್ಟೇ ಇರುವ ಕ್ಷೇತ್ರವೇನೂ ಅಲ್ಲ. ಅಲ್ಲಿಯೂ ಅಂತಹವರಿದ್ದಾರೆ. ನನಗೂ ಅಂತಹ ಅನುಭವಗಳಾಗಿವೆ. ಅವುಗಳನ್ನು ತಿರಸ್ಕರಿಸಿ ಬಂದಿದ್ದೇನೆ. ಅದರಿಂದಾಗಿ ಸೂಪರ್‍ಸ್ಟಾರ್‍ಗಳ ಜೊತೆ ನಟಿಸುವ ಅವಕಾಶಗಳೂ ತಪ್ಪಿವೆ. ಆದರೆ, ನಾನು ಹ್ಯಾಪಿಯಾಗಿದ್ದೇನೆ. ನಾನೇನು ಅನ್ನೋದು ಚಿತ್ರರಂಗದವರಿಗೂ ಗೊತ್ತಿದೆ. ಕೆಲವು ಪುರುಷರು ಕೆಟ್ಟವರಾಗಿರುತ್ತಾರೆ. ಬಲವಂತ ಮಾಡುತ್ತಾರೆ. ಹಾಗಂತ ಯಾರೂ ಅತ್ಯಾಚಾರ ಮಾಡೋದಿಲ್ಲ. ಮೃಗಗಳಂತೆ ವರ್ತಿಸುವುದಿಲ್ಲ. ಧೈರ್ಯವಾಗಿ ನೋ ಎಂದು ಹೇಳಿ ಹೊರಬನ್ನಿ. ಆ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಎರಡೂ ಕೈ ಸೇರಿದರೇನೇ ಚಪ್ಪಾಳೆ ಎಂದಿದ್ದಾರೆ ಹರ್ಷಿಕಾ ಪೂಣಚ್ಚ.

    ಯಾವುದೇ ಚಿತ್ರರಂಗದಲ್ಲಿ ಸೂಪರ್‍ಸ್ಟಾರ್ ನಟಿಯರು ಇಂತಹ ಮೀಟೂ ಆರೋಪ ಮಾಡುತ್ತಿಲ್ಲ ಎಂದು ಕೂಡಾ ನೆನಪಿಸಿದ್ದಾರೆ.