` abishek ambareesh, - chitraloka.com | Kannada Movie News, Reviews | Image

abishek ambareesh,

 • ಅಭಿಷೇಕ್ ಅಂಬರೀಷ್ ಎದುರು ಸ್ಪರ್ಧಿಸ್ತಾರಾ ನಿಖಿಲ್ ಕುಮಾರಸ್ವಾಮಿ..?

  will it be abishek ambareesh vs nikhil gowda this elections

  ಜೆಡಿಎಸ್‍ನ ವರಿಷ್ಠರು ಟಿಕೆಟ್ ಕೊಟ್ಟರೆ, ಮಂಡ್ಯದಿಂದ ಸ್ಪರ್ಧಿಸೋಕೆ ನಾನ್ ರೆಡಿ. ಸೀತಾರಾಮ ಕಲ್ಯಾಣ ಚಿತ್ರದ ಬಿಡುಗಡೆ ಸಂಭ್ರಮದಲ್ಲಿರೋ ನಿಖಿಲ್, ರಾಜಕೀಯದ ಇಂಗಿತವನ್ನೂ ಹೊರಹಾಕಿದ್ದಾರೆ. ಅಷ್ಟೇ ಅಲ್ಲ, ಅಕಸ್ಮಾತ್ ಮಂಡ್ಯದಲ್ಲಿ ಅಭಿಷೇಕ್ ಅಂಬರೀಷ್ ಎದುರು ಸ್ಪರ್ಧಿಸಬೇಕು ಎಂದರೆ ಅದಕ್ಕೂ ಸಿದ್ಧ ಎಂದಿದ್ದಾರೆ ನಿಖಿಲ್.

  ನನ್ನ ಮತ್ತು ಅಭಿ ನಡುವೆ ಇಂದಿಗೂ ಅತ್ಯುತ್ತಮ ಸ್ನೇಹವಿದೆ. ನಾವಿಬ್ಬರೂ ಗುಡ್ ಫ್ರೆಂಡ್ಸ್. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

  ನಾನು ರಾಜಕೀಯ ಫ್ಯಾಮಿಲಿಯಿಂದ ಬಂದವನು. ರಾಜಕೀಯಕ್ಕೆ ಹೋಗುವುದು ಸುಲಭವಿದ್ದರೂ, ಅಲೆಗಳ ವಿರುದ್ಧ ಈಜಲೆಂದು ಸಿನಿಮಾಗೆ ಬಂದಿದ್ದೇನೆ. ಸಿನಿಮಾದಲ್ಲಿ ಗೆಲ್ಲುತ್ತೇನೆ. ಸೀತಾರಾಮ ಕಲ್ಯಾಣ ಚಿತ್ರದ ಮೇಲೆ ವಿಶ್ವಾಸವಿದೆ ಎಂದಿದ್ದಾರೆ ನಿಖಿಲ್.

 • ಅಭಿಷೇಕ್ ಅಂಬರೀಷ್ ಚಿತ್ರ ಸೆನ್ಸಾರ್ ಪಾಸ್

  amar censored u/a

  ಅಭಿಷೇಕ್ ಅಂಬರೀಷ್ ಅಭಿನಯದ ಮೊದಲ ಸಿನಿಮಾ ಅಮರ್ ಚಿತ್ರ ಸೆನ್ಸಾರ್ ಪಾಸ್ ಆಗಿದೆ. ಅಂಬರೀಷ್ ಪುತ್ರನ ಮೊತ್ತ ಮೊದಲ ಸಿನಿಮಾ ಇದು. ಅಂಬಿ ಅಭಿಮಾನಿಗಳು ಕಾತುರದಿಂದ ಕಾಯ್ತಿರೋ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. 

  ನಾಗಶೇಖರ್ ನಿರ್ದೇಶನದ ಅಮರ್ ಚಿತ್ರದಲ್ಲಿ ಅಭಿಷೇಕ್ ಜೊತೆ ದರ್ಶನ್ ಕೂಡಾ ಅತಿಥಿ ನಟರಾಗಿ ಕಾಣಿಸಿಕೊಂಡಿದ್ದಾರೆ. ನಿರೂಪ್ ಭಂಡಾರಿ, ರಚಿತಾ ರಾಮ್ ಕೂಡಾ ಪುಟ್ಟ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. ಬಸಣ್ಣಿ ಬಾ.. ಹಾಡಿನ ಖ್ಯಾತಿಯ ತಾನ್ಯಾ ಹೋಪ್ ಚಿತ್ರಕ್ಕೆ ಹೀರೋಯಿನ್. 

  ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರವನ್ನು ಮೇ ತಿಂಗಳಲ್ಲಿ ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿದೆ. 

 • ಅಭಿಷೇಕ್ ಅಂಬರೀಷ್ ಜೊತೆ ಡಿಂಪಲ್ ಕ್ವೀನ್

  ಅಭಿಷೇಕ್ ಅಂಬರೀಷ್ ಜೊತೆ ಡಿಂಪಲ್ ಕ್ವೀನ್

  ಅಭಿಷೇಕ್ ಅಂಬರೀಷ್ ಮೊದಲ ಚಿತ್ರದಲ್ಲಿ ಚೆಂದದ ಹಾಡಿಗೆ ಹೆಜ್ಜೆ ಹಾಕಿದ್ದ ರಚಿತಾ ರಾಮ್, ಈಗ ಅಭಿಗೆ ಹೀರೋಯಿನ್ ಆಗುತ್ತಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ನಲ್ಲಿ ರಚಿತಾ ರಾಮ್ ಹೀರೋಯಿನ್. ಅಮರ್ ಚಿತ್ರದಲ್ಲಿ ಲವರ್ ಬಾಯ್ ಆಗಿದ್ದ ಅಭಿಷೇಕ್, ಇಲ್ಲಿ ರಗಡ್ ಬಾಯ್ ಆಗಿದ್ದಾರೆ.

  ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನೊಬ್ಬ ಹೀರೋಯಿನ್ ಆಗಿ ಕೃಷ್ಣ ತುಳಸಿ ಧಾರಾವಾಹಿ ಖ್ಯಾತಿಯ ಪ್ರಿಯಾಂಕಾ ಕುಮಾರ್ ನಟಿಸುತ್ತಿದ್ದಾರೆ.

  ಸುಧೀರ್ ಕೆ.ಎಂ.ನಿರ್ಮಾಣದ ಸಿನಿಮಾ, ಫಸ್ಟ್ ಲುಕ್ನಿಂದಲೇ ಗಮನ ಸೆಳೆದಿದೆ. ದುನಿಯಾ ಸೂರಿ-ಅಭಿಷೇಕ್ ಅಂಬರೀಷ್-ರಚಿತಾ ರಾಮ್ ಕಾಂಬಿನೇಷನ್ ಸೆನ್ಸೇಷನ್ ಸೃಷ್ಟಿಸಿದೆ.

 • ಅಭಿಷೇಕ್ ಅಂಬರೀಷ್ ದುನಿಯಾ ಸೂರಿ ಕಾಂಬಿನೇಷನ್ ಫಿಕ್ಸ್

  abishek ambareesh's next film titled bad manners

  ಅಮರ್ ಚಿತ್ರದ ನಂತರ ಅಭಿಷೇಕ್ ಅಂಬರೀಷ್ ಹೊಸ ಚಿತ್ರದಲ್ಲಿ ನಟಿಸ್ತಾರೆ ಅನ್ನೋದು ಹೊಸ ಸುದ್ದಿಯೇನಲ್ಲ. ಆದರೆ ಈಗ ಇದು ಪಕ್ಕಾ ಸುದ್ದಿ. ಈ ಬಾರಿ ಅಭಿಷೇಕ್ ಅಂಬರೀಷ್ ಸೆನ್ಸೇಷನ್ ಸೃಷ್ಟಿಸೋಕೆ ಹೊರಟಿದ್ದಾರೆ. ಅಮರ್ ಚಿತ್ರದಲ್ಲಿ ರೊಮ್ಯಾಂಟಿಕ್ ಹೀರೋ ಆಗಿದ್ದ ಅಭಿಯನ್ನು ರಗಡ್ ಲುಕ್‍ಗೆ ತರಲು ರೆಡಿಯಾಗಿರೋದು ದುನಿಯಾ ಸೂರಿ.

  ಬ್ಯಾಡ್ ಮ್ಯಾನರ್ಸ್ ಅನ್ನೋದು ಚಿತ್ರದ ಟೈಟಲ್. ಚಿತ್ರದ ನಿರ್ಮಾಪಕ ಕೆ.ಎಂ. ಸುಧೀರ್. ಸೂರಿ ಚಿತ್ರಗಳು ರಾ ಇರ್ತವೆ. ಹೀರೋಯಿಸಂನ್ನೂ ವಿಜೃಂಭಿಸುವ ಸೂರಿ, ಸದ್ಯಕ್ಕೆ ಕಾಗೆ ಬಂಗಾರ ಚಿತ್ರವನ್ನು ಪಕ್ಕಕ್ಕಿಟ್ಟು ಬ್ಯಾಡ್ ಮ್ಯಾನರ್ಸ್ ಕೈಗೆತ್ತಿಕೊಂಡಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಜವಾಬ್ದಾರಿ ಹೊತ್ತಿದ್ದಾರೆ. ಅಂಬಿ ಹುಟ್ಟುಹಬ್ಬಕ್ಕೆ ಸಿನಿಮಾ ಸೆಟ್ಟೇರೋದು ಪಕ್ಕಾ.

 • ಅಭಿಷೇಕ್ ಅಂಬರೀಷ್.. ಏನಿದು ರೆಬಲ್ ಲುಕ್..?

  abishek ambareesh's new rugged look

  ಅಭಿಷೇಕ್ ಅಂಬರೀಷ್ ತಮ್ಮ ಇನ್‍ಸ್ಟಾಗ್ರಾಮ್ ಅಕೌಂಟ್‍ನಲ್ಲಿ ಒಂದು ಫೋಟೋ ಹಾಕಿದ್ದಾರೆ. ತಿರುವಿದ ಮೀಸೆ, ಮುಖದ ತುಂಬಾ ಗಡ್ಡ, ಬೆಂಕಿಯುಗುಳುವ ಕಣ್ಣು.. ಒಟ್ಟಿನಲ್ಲಿ ರಗಡ್ ಲುಕ್‍ನಲ್ಲಿಯೇ ರಗಡ್ ಲುಕ್. ಇದು ಹೊಸ ಚಿತ್ರದ ಲುಕ್ ಇರಬಹುದಾ..?

  ಅಭಿಷೇಕ್ ಯೆಸ್ ಅನ್ನಲ್ಲ.. ನೋ ಅನ್ನಲ್ಲ.. ನೋಡ್ತಾ ಇರಿ, ಕಾಯ್ತಾ ಇರಿ.. ಎಲ್ಲರಿಗೂ ಕುತೂಹಲ ಬರಲಿ ಅಂತಾನೇ ಅಲ್ವಾ ಹೀಗೆಲ್ಲ ಮಾಡೋದು ಎಂದಿದ್ದಾರೆ ಅಭಿಷೇಕ್.

  ನಿಖಿಲ್ ಕುಮಾರಸ್ವಾಮಿ, ಗೆಳೆಯನ ಹೊಸ ಪ್ರಾಜೆಕ್ಟ್‍ಗೆ ಶುಭ ಕೋರಿದ್ದಾರೆ.

  ಆದರೆ.. ಇದುವರೆಗೆ ಅಭಿಷೇಕ್ ಅಂಬರೀಷ್ ಅವರ ಹೊಸ ಚಿತ್ರ ಯಾವುದು..? ನಿರ್ಮಾಪಕ ಯಾರು..? ನಿರ್ದೇಶಕ ಯಾರು..? ಎಲ್ಲವೂ ಸಸ್ಪೆನ್ಸ್.

 • ಅಮರ್ ಚಿತ್ರದಲ್ಲಿ ದರ್ಶನ್ ನಟಿಸುತ್ತಿದ್ದಾರಾ..?

  darshan in guest role for abishek ambi's amar

  ರೆಬಲ್‍ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ಮೊದಲ ಸಿನಿಮಾ ಅಮರ್. ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ನಾಗಶೇಖರ್. ಬೈಕ್ ರೇಸ್ ಹಿನ್ನೆಲೆಯ ಲವ್ ಸ್ಟೋರಿಯಲ್ಲಿ ಈಗ ಹೊಸ ಅತಿಥಿ.. ಅಲ್ಲಲ್ಲ ಸಾರಥಿಯ ಆಗಮನವಾಗಿದೆಯಂತೆ.

  ಅಪ್ಪಾಜಿ ಮಗನ ಮೊದಲ ಸಿನಿಮಾದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಅತಿಥಿ ನಟನಾಗಿ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. 

  ಆದರೆ, ದರ್ಶನ್ ಪಾತ್ರ ಏನು..? ಸಿನಿಮಾದಲ್ಲಿ ಎಷ್ಟು ಹೊತ್ತು ಇರುತ್ತಾರೆ ಎಂಬ ಸುದ್ದಿ ಸದ್ಯಕ್ಕೆ ಸೀಕ್ರೆಟ್.

  ಅಂದಹಾಗೆ ಕನ್ನಡದಲ್ಲಿ ಅತೀ ಹೆಚ್ಚು ಚಿತ್ರಗಳಲ್ಲಿ ಅತಿಥಿ ನಟನಾಗಿ ನಟಿಸಿರುವ ಹೆಗ್ಗಳಿಕೆ ಅಂಬರೀಶ್ ಅವರದ್ದು. ಶಂಕರ್‍ನಾಗ್, ಪ್ರಭಾಕರ್, ಜಗ್ಗೇಶ್, ದೇವರಾಜ್ ಸೇರಿದಂತೆ ಹಲವು ಹೊಸಬರ ಚಿತ್ರಗಳಲ್ಲಿ ಅತಿಥಿ ನಟನಾಗಿ ನಟಿಸಿ ಪ್ರೋತ್ಸಾಹಿಸಿದ್ದವರು ಅಂಬರೀಶ್. 

 • ಅಮ್ಮ ಇನ್ನೊಬ್ಬರಿಗೆ ಅಮ್ಮನಾಗಿ ನಟಿಸುವುದು ಇಷ್ಟವಿಲ್ಲ - ಅಭಿಷೇಕ್ ಅಂಬರೀಷ್

  abishek talks about his mother, debut movie and ambareesh

  ಅಭಿಷೇಕ್ ಅಂಬರೀಷ್ ಅಭಿನಯದ ಮೊದಲ ಚಿತ್ರ ಅಮರ್ ರಿಲೀಸ್‍ಗೆ ಹತ್ತಿರವಾಗಿದೆ. ಹೀಗಿರುವಾಗಲೇ ತಮ್ಮ ಮೊದಲ ಚಿತ್ರದ ಬಗ್ಗೆ ಮಾತನಾಡಿರುವ ಅಭಿಷೇಕ್, ಅಪ್ಪ ಹೇಳಿಕೊಟ್ಟ ನಟನೆಯ ಗುಟ್ಟು ಬಿಚ್ಚಿಟ್ಟಿದ್ದಾರೆ.

  `ನಿನ್ನ ಮೇಲೆ ದೊಡ್ಡ ಕ್ಯಾಮೆರಾ ಫೋಕಸ್ ಆಗಿದೆ. ನೂರಾರು ಜನ ನಿಂತು ನೋಡುತ್ತಿದ್ದಾರೆ ಎನ್ನುವುದನ್ನು ಮನಸ್ಸಿನಿಂದ ಆಚೆ ಹಾಕಿಬಿಡು. ಅದು ಭಯ ಹುಟ್ಟಿಸುತ್ತೆ. ನಿನ್ನೊಳಗಿನ ನಟ ಭಯಪಟ್ಟರೆ ನಟನೆ ಕಷ್ಟ. ಅದನ್ನು ಮನಸ್ಸಿನಿಂದ ತೆಗೆದುಹಾಕಿ ನಟಿಸುತ್ತಾ ಹೋಗು' ಎಂದಿದ್ದರಂತೆ ಅಂಬಿ. 

  ನಾಗಶೇಖರ್ ನಿರ್ದೇಶನದ ಚಿತ್ರದಲ್ಲಿ ಅಭಿಷೇಕ್ ಜೊತೆ ತಾನ್ಯಾ ಹೋಪ್ ನಾಯಕಿಯಾಗಿ ನಟಿಸಿದ್ದಾರೆ. ಇದೊಂದು ಯೂತ್‍ಫುಲ್ ಲವ್ ಸ್ಟೋರಿ ಎಂದಿರುವ ಅಭಿಷೇಕ್, ಅಪ್ಪ, ಅಮ್ಮನ ಸಿನಿಮಾಗಳನ್ನು ನೋಡುತ್ತಲೇ ನಟನೆಯತ್ತ ಸೆಳೆತ ಶುರುವಾಯಿತು ಎಂದಿದ್ದಾರೆ.

  ಅಮ್ಮನ ಹಲವು ಚಿತ್ರಗಳನ್ನು ನೋಡಿರುವ ಅಭಿಷೇಕ್‍ಗೆ, ಅಮ್ಮ ಬೇರೆ ಕಲಾವಿದರಿಗೆ ತಾಯಿಯಾಗಿ ನಟಿಸುವುದು ಇಷ್ಟವಾಗುವುದಿಲ್ಲವಂತೆ. ಅವರು ನನ್ನ ಚಿತ್ರದಲ್ಲಿ ನಟಿಸಬೇಕು, ಅಮ್ಮನಾಗಿಯೇ ನಟಿಸಬೇಕು ಎಂಬ ಆಸೆಯೂ ಅಭಿಷೇಕ್ ಅವರಿಗೆ ಇದೆ.

 • ಚಾನ್ಸೇ ಇಲ್ಲ.. ಹೀರೋ ತರಾ ಅಲ್ಲ.. ಹೀರೋನೇ..

  abishek ambareesh's mega mass entry

  ಇವನ್ಯಾರ್ ಗುರು.. ಒಳ್ಳೆ ಹೀರೋ ತರಾ ಪೋಸ್ ಕೊಡ್ತಾವ್ನೆ.. ಅಂತಾನೆ ವಿಲನ್ನು.ಹೀರೋ ತರಾನೇ.. ಚಾನ್ಸೇ ಇಲ್ಲ.. ಹೀರೋನೇ ಅಂತಾ ಅಬ್ಬರಿಸ್ತಾನೆ ಹೀರೋ. ಹೀಗೆ ಅಬ್ಬರಿಸುತ್ತಲೇ ಎಂಟ್ರಿ ಕೊಟ್ಟಿದ್ದಾರೆ ಯಂಗ್ ರೆಬಲ್ ಸ್ಟಾರ್  ಅಭಿಷೇಕ್ ಅಂಬರೀಷ್. ಅಮರ್ ಚಿತ್ರದ ಟೀಸರ್‍ನ ಹೈಲೈಟ್ ಇದು.

  ಗೆಳೆಯನ ಅಗಲಿಕೆಯ ನೋವನ್ನು ತಮ್ಮದೇ ಮಾತುಗಳಲ್ಲಿ ಹೇಳಿಕೊಂಡಿರುವ ನಿರ್ಮಾಪಕ ಸಂದೇಶ್ ನಾಗರಾಜ್, ಇಡೀ ಚಿತ್ರವನ್ನೇ ಅಂಬಿಗೆ ಅರ್ಪಿಸಿದ್ದಾರೆ. ಟೀಸರ್‍ನಲ್ಲಿ ಅಬ್ಬರಿಸಿ ಬೊಬ್ಬರಿಯುವುದು ಅಭಿಷೇಕ್ ಅಂಬರೀಷ್. ಬೈಕ್ ಸ್ಟಂಟ್ ಅಬ್ಬಾ ಎನಿಸುತ್ತೆ. 

  ಒನ್ಸ್ ಎಗೇಯ್ನ್.. ಈ ಹೊಸ ಹೀರೋನನ್ನು ಟೀಸರ್‍ನಲ್ಲಿ ಪರಿಚಯಿಸೋದು.. ಚಿಕ್ಕಣ್ಣ. 

  ನಿರ್ದೇಶಕ ನಾಗಶೇಖರ್, ಟೀಸರ್‍ನಲ್ಲಿಯೇ ಹಬ್ಬದೂಟದ ಸುಳಿವು ಕೊಟ್ಟಿದ್ದಾರೆ. ಅಭಿಷೇಕ್ ಟೀಸರ್‍ಗೆ ಸ್ಯಾಂಡಲ್‍ವುಡ್‍ನ ಬಹುತೇಕ ಎಲ್ಲ ಸ್ಟಾರ್‍ಗಳೂ ಮೆಚ್ಚುಗೆ ಸೂಚಿಸಿದ್ದಾರೆ. ಹೊಸ ಹೀರೋಗೆ ಸ್ವಾಗತ ಕೊರಿದ್ದಾರೆ.

 • ದರ್ಶನ್.. ಅಭಿಷೇಕ್ ಅಂಬರೀಶ್ ಅಣ್ಣ..!

  darshan acts as aboshek's brother in amar

  ಅಂಬರೀಶ್ ಪುತ್ರ ಅಭಿಷೇಕ್ ಗ್ರ್ಯಾಂಡ್ ಎಂಟ್ರಿ ಕೊಡುತ್ತಿರುವ  ಅಮರ್ ಚಿತ್ರದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ ದರ್ಶನ್, ಅಭಿಷೇಕ್‍ಗೆ ಅಣ್ಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದರ್ಶನ್ ಚಿತ್ರದಲ್ಲಿ ಮಲ್ಟಿಮಿಲಿಯನೇರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಆತ್ಮವಿಶ್ವಾಸ ಕಳೆದುಕೊಂಡಿರುವ ಅಭಿಷೇಕ್‍ಗೆ ಜೀವನೋತ್ಸಾಹ ತುಂಬುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ದರ್ಶನ್ ಅತಿಥಿ ನಟನಾಗಿ ಕಾಣಿಸಿಕೊಳ್ಳುವುದು ಅಪರೂಪ. ಅರಸು ಚಿತ್ರದಲ್ಲಿ ಪುನೀತ್ ಗೆಳೆಯನಾಗಿ ಕಾಣಿಸಿಕೊಂಡಿದ್ದ ದರ್ಶನ್, ನಂತರ ಚೌಕ ಚಿತ್ರದಲ್ಲಿ ರಾಬರ್ಟ್ ಆಗಿ ನಟಿಸಿದ್ದರು. ಪ್ರಜ್ವಲ್ ದೇವರಾಜ್ ಅವರ ಇನ್ಸ್‍ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿರುವ ದರ್ಶನ್, ಅಮರ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿಯೇ ನಟಿಸಲಿದ್ದಾರೆ. 

  ಅಂಬರೀಶ್ ಮೇಲಿನ ಪ್ರೀತಿಗೆ ದರ್ಶನ್ ನೀಡಿರುವ ಗೌರವ ಇದು. ಸಿನಿಮಾ ಶುರುವಾದಾಗಲೇ ಚಿತ್ರರಂಗದ ಹಲವರು ಚಿತ್ರದಲ್ಲಿ ಗೆಸ್ಟ್ ರೋಲ್‍ನಲ್ಲಿ ನಟಿಸಿ ಪ್ರೋತ್ಸಾಹಿಸುವ ಮಾತನ್ನಾಡಿದ್ದರು. ದರ್ಶನ್ ಪ್ರೀತಿಗೆ ನಾನು ಋಣಿ ಎಂದಿದ್ದಾರೆ ನಿರ್ಮಾಪಕ ಸಂದೇಶ್ ನಾಗರಾಜ್. 

 • ನಾನೂ ಅತ್ತರೆ ಅಪ್ಪ ಬೈತಾರೆ - ಅಭಿಷೇಕ್ ಅಂಬರೀಷ್

  abhishek ambareesh steals fans hearts again

  ನಾನು ಅಳ್ತಾ ಇಲ್ಲ. ನಾನು ಅಳೋದಿಲ್ಲ. ನಾನೇನಾದರೂ ಅತ್ತರೆ.. ಮೇಲಿರೋ ಅಪ್ಪ ನನಗೆ ಬೈತಾರೆ. ಅಭಿಷೇಕ್ ಅಂಬರೀಷ್ ಆ ಮಾತು ಹೇಳುವಾಗ, ಅಂಬಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರೂ ಭಾವುಕರಾಗಿದ್ದರು. ಫಿಲಂ ಚೇಂಬರ್ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅಭಿಷೇಕ್, ತಂದೆಯೊಂದಿಗೆ ಕಳೆದ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.

  `ನಾನು ಚಿಕ್ಕ ಹುಡುಗನಾಗಿದ್ದಾಗ ಸಿಂಗಾಪುರ್‍ಗೆ ಹೋಗಿದ್ವಿ. ಅಪ್ಪನಿಗೆ ಗೆಳೆಯರ ಬಳಗವಿತ್ತು. ರೂಮ್‍ನಲ್ಲಿ ಅಪ್ಪ ಗೆಳೆಯರೊಂದಿಗೆ ಇರುತ್ತಿದ್ದರು. ಅಮ್ಮನಿಗೆ ಹೊರಗೆ ಓಡಾಡುವ ಆಸೆ. ಒಂದು ದಿನ ಬೆಳಗ್ಗೆ ಶಾಪಿಂಗ್‍ಗೆ ಹೋಗುತ್ತಿದ್ದೇನೆ, ಬೇಗ ಬರುತ್ತೇನೆ ಎಂದು ಟಿವಿ ಮೇಲೆ ಪೇಪರ್ ಅಂಟಿಸಿಟ್ಟು ಹೋಗಿಬಿಟ್ಟರು. ಎದ್ದು ನೋಡಿದಾಗ ಅಮ್ಮ ಇಲ್ಲ. ಅಪ್ಪನೂ ನೋಡ್ತಿದ್ದಾರೆ. ನನಗೋ ಹೆದರಿಕೆ. ಅಳೋಕೆ ಶುರು ಮಾಡಿದೆ.

  ಅಪ್ಪ ಏನು ಅಂದ್ರು. ಟಾಯ್ಲೆಟ್‍ಗೆ ಹೋಗಬೇಕು ಅಂದೆ. ಅದು ನನ್ನನ್ನು ಅಪ್ಪ ಮೊದಲಿಗೆ ಹಾಗೆಲ್ಲ ನೋಡಿಕೊಂಡ ದಿನ. ಆಯ್ತು. ಸ್ವಲ್ಪ ಹೊತ್ತಿಗೆ ಮತ್ತೆ ಅಳೋಕೆ ಶುರು ಮಾಡಿದೆ. ಏನು ಅಂದ್ರು. ಹಲ್ಲುಜ್ಜಬೇಕು ಅಂದೆ. ಹಲ್ಲುಜ್ಜಿಸಿದ್ರು. ಅದಾದ ಸ್ವಲ್ಪ ಹೊತ್ತಿಗೆ ಮತ್ತೆ ಅಳೋಕೆ ಶುರು ಮಾಡ್ದೆ. ಏನು ಅಂದ್ರು. ಕಿರುಬೆರಳು ಎತ್ತಿ ತೋರಿಸಿದೆ. ಟಾಯ್ಲೆಟ್ ಮೇಲೆ ನಿಲ್ಲಿಸಿ, ಏನಾದರೂ ಮಾಡ್ಕೋ ಅಂದ್ರು. 

  ಅಷ್ಟೆಲ್ಲ ಆಗುವ ಹೊತ್ತಿಗೆ ಅಮ್ಮ ಬಂದ್ರು. ಇವನನ್ನ ನನ್ನ ಜೊತೆ ಬಿಟ್ಟು ಎಲ್ಲಿ ಹೋಗಿದ್ದೆ ಅಂತಾ ಅಮ್ಮನ ಮೇಲೆ ರೇಗಿದ್ರು...'' ಹೀಗೆ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು ಅಭಿ.

 • ಪ್ರೇಮಿಗಳ ದಿನಕ್ಕೆ ಅಭಿಷೇಕ್ ಅಂಬರೀಷ್ ಚಿತ್ರದ ಟೀಸರ್

  abishek ambareesh's amar teaser out

  ಅಭಿಷೇಕ್ ಅಂಬರೀಷ್ ಪಾದಾರ್ಪಣೆ ಮಾಡುತ್ತಿರುವ ಸಿನಿಮಾ ಅಮರ್. ಚಿತ್ರದ ಚಿತ್ರೀಕರಣ ಶುರುವಾಗಿದೆ. ಅಂತಿಮ ಹಂತದಲ್ಲಿದೆ. ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ತುಸು ವಿಳಂಬವಾಗಿದ್ದು ಬಿಟ್ಟರೆ, ಚಿತ್ರದ ಮೇಕಿಂಗ್ ಬಿರುಸಾಗಿ ನಡೆಯುತ್ತಿದೆ. ಈಗ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತವಿಟ್ಟಿದ್ದಾರೆ ಚಿತ್ರದ ನಿರ್ದೇಶಕ ನಾಗಶೇಖರ್.

  ಪ್ರೇಮಿಗಳ ದಿನಕ್ಕೆ ಅಮರ್ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ತಾನ್ಯಾಹೋಪ್ ಚಿತ್ರದ ನಾಯಕಿ. ಚಿತ್ರದ ಹಾಡುಗಳ ಚಿತ್ರೀಕರಣಕ್ಕೆ ಫಾರಿನ್ ಲೊಕೇಷನ್‍ಗಳನ್ನು ನೋಡಿಕೊಂಡು ಬಂದಿರೋ ಚಿತ್ರತಂಡ, ಶೀಘ್ರದಲ್ಲೇ ವಿದೇಶಕ್ಕೆ ತೆರಳಲಿದೆ.

 • ಭೂಗತ ಜಗತ್ತಿನಲ್ಲಿ ಅಭಿಷೇಕ್ ಅಂಬರೀಷ್

  abishek amavareesh as underworld don in his next film

  ಅಮರ್ ಚಿತ್ರದಲ್ಲಿ ಲವ್ವರ್ ಬಾಯ್ ಆಗಿ, ಪ್ರೇಮ ವಿರಹಿಯಾಗಿ ಗಮನ ಸೆಳೆದ ಅಭಿಷೇಕ್ ಅಂಬರೀಷ್ ಈಗ 2ನೇ ಚಿತ್ರದಲ್ಲಿ ಭೂಗತ ದೊರೆಯಾಗುತ್ತಿದ್ದಾರೆ. ಇದು ಪಕ್ಕಾ ಆ್ಯಕ್ಷನ್ ಮೂವಿ. ಪ್ರಶಾಂತ್ ರಾಜ್ ನಿರ್ದೇಶನದಲ್ಲಿ ಈ ಚಿತ್ರ ರೆಡಿಯಾಗಲಿದೆ.

  ಡ್ರಗ್ಸ್ ಮತ್ತು ಮಾನವ ಕಳ್ಳಸಾಗಣೆಯ ಕಥೆ ಚಿತ್ರದಲ್ಲಿದೆ. ಜರ್ಮನಿ, ಇಟಲಿ, ಸ್ವಿಟ್ಜರ್ಲೆಂಡ್, ಅಬುದಾಭಿ, ಮಲೇಷ್ಯಾಗಳಲ್ಲಿ ಶೂಟಿಂಗ್ ನಡೆಯಲಿದೆ ಎಂದು ಮಾಹಿತಿ ನೀಡಿರುವ ನಿರ್ದೇಶಕ ಪ್ರಶಾಂತ್ ರಾಜ್, ಸದ್ಯಕ್ಕೆ ಚೆನ್ನೆöÊನಲ್ಲಿದ್ದಾರೆ. ಟೆಕ್ನಿಷಿಯನ್ನುಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. 

 • ಮುನಿರತ್ನ ಚಿತ್ರದಲ್ಲಿ ಅಣ್ಣ ತಮ್ಮ ಫಿಕ್ಸ್

  darshan abishek ambareesh in muniratna's next

  ಅಣ್ಣ ದರ್ಶನ್ ಮತ್ತು ತಮ್ಮ ಅಭಿಷೇಕ್ ಅಂಬರೀಷ್ ಒಂದೇ ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಅಭಿಷೇಕ್ ಅಭಿನಯದ ಮೊದಲ ಚಿತ್ರದಲ್ಲಿಯೇ ಅತಿಥಿ ನಟನಾಗಿ ಬಂದು ತಮ್ಮನಿಗೆ ಶುಭ ಕೋರಿದ್ದ ದರ್ಶನ್, ಮತ್ತೊಮ್ಮೆ ಅಭಿಷೇಕ್ ಜೊತೆ ನಟಿಸಲಿದ್ದಾರೆ. ಆ ಚಿತ್ರಕ್ಕೆ ನಿರ್ಮಾಪಕ ಮುನಿರತ್ನ.

  ವಿಂಗ್ ಕಮಾಂಡರ್ ಅಭಿನಂದನ್ ಆಗಿ ದರ್ಶನ್ ನಟಿಸಲಿರುವ ಚಿತ್ರವದು. ಆ ಚಿತ್ರದಲ್ಲಿ ಅಭಿಷೇಕ್ ಕೂಡಾ ಇರುತ್ತಾರೆ. ಕಥೆಯ ಎಳೆ ಫೈನಲ್ ಆಗಿದ್ದು, ಕೆಲವೇ ದಿನಗಳಲ್ಲಿ ಚಿತ್ರ ಶುರುವಾಗಲಿದೆ. ಚಿತ್ರದ ಟೈಟಲ್ ವಿಂಗ್ ಕಮಾಂಡರ್ ಅಭಿನಂದನ್. ಕುರುಕ್ಷೇತ್ರ 100ನೇ ದಿನದ ಸಂಭ್ರಮದಲ್ಲಿ ಮುನಿರತ್ನ ಈ ವಿಷಯ ಹೇಳಿಕೊಂಡಿದ್ದಾರೆ.

 • ಮೇ END.. ಅಂಬರೀಷ್ ಫ್ಯಾಮಿಲಿ ವಾರ

  may month will be ambareesh family week

  ಮೇ 29, ಅಂಬರೀಷ್ ಹುಟ್ಟುಹಬ್ಬ. ಆ ದಿನ ಅಂಬರೀಷ್‍ರನ್ನು ಸ್ಟಾರ್ ಮಾಡಿದ ಸಿನಿಮಾ ಅಂತ ಮರುಬಿಡುಗಡೆ.

  ಮೇ 24, ಸುಮಲತಾ ಅಂಬರೀಷ್ ಅಭಿನಯದ ಡಾಟರ್ ಆಫ್ ಪಾರ್ವತಮ್ಮ ಬಿಡುಗಡೆ. 

  ಮೇ 31, ಅಭಿಷೇಕ್ ಅಂಬರೀಷ್ ಅಭಿನಯದ ಮೊದಲ ಸಿನಿಮಾ ಅಮರ್ ಬಿಡುಗಡೆ. ಅಫ್‍ಕೋರ್ಸ್, ಅದೇ ಚಿತ್ರದಲ್ಲಿ ದರ್ಶನ್ ಕೂಡಾ ಅತಿಥಿ ನಟ. ತಮ್ಮನಿಗಾಗಿ.

  ಅಂಬರೀಷ್ ಇಲ್ಲದೇ ಆಚರಿಸಲಾಗುತ್ತಿರುವ ಮೊದಲ ಹುಟ್ಟುಹಬ್ಬಕ್ಕೆ ಅವರ ಇಡೀ ಕುಟುಂಬವೇ ತೆರೆಯ ಮೇಲೆ ರಾರಾಜಿಸಲಿದೆ. ಹೀಗಾಗಿ ಮೇ ತಿಂಗಳ ಕೊನೆಯ ವಾರವನ್ನು ಅಂಬರೀಷ್ ಫ್ಯಾಮಿಲಿ ವೀಕ್ ಎನ್ನಬಹುದು.

 • ಮೊದಲ ಚಿತ್ರದಲ್ಲೇ ಅಭಿಗೆ ನರಕ ತೋರಿಸಿದ್ದಾರಂತೆ ನಾಗಶೇಖರ್

  director nagashekar praises aishek ambareesh

  ಯಜಮಾನನ ಜೊತೆ ಜೊತೆಯಲ್ಲೇ ಅಮರ್ ಚಿತ್ರದ ಟ್ರೇಲರ್ ಕೂಡಾ ಬಿಡುಗಡೆಯಾಗಿದೆ. ಅಭಿಷೇಕ್ ಅಂಬರೀಷ್ ಮೊದಲ ಅಭಿನಯದ ಅಮರ್ ಚಿತ್ರಕ್ಕೆ ಡೈರೆಕ್ಟರ್ ಆಗುವ ಅದೃಷ್ಟ ಪಡೆದ ನಾಗಶೇಖರ್, ಮೊದಲ ಚಿತ್ರದಲ್ಲಿಯೇ ಅಭಿಷೇಕ್ ಅವರಿಗೆ ನರಕ ತೋರಿಸಿಬಿಟ್ಟಿದ್ದೇನೆ ಎಂದಿದ್ದಾರೆ. ಹಾಗಂತ ಏನೇನೋ ಅಂದ್ಕೋಬೇಡಿ.. ಅಷ್ಟು ಕಷ್ಟ ಕೊಟ್ಟಿದ್ದೇನೆ. ಅಭಿಷೇಕ್ ಅದಷ್ಟೂ ಕಷ್ಟಗಳನ್ನೂ ಇಷ್ಟಪಟ್ಟು ಮಾಡಿದ್ದಾರೆ ಎಂದಿದ್ದಾರೆ ನಾಗಶೇಖರ್.

  ಅಮರ್ ಚಿತ್ರದ ಚಿತ್ರೀಕರಣ 20 ದಿನ ಮಡಿಕೇರಿಯಲ್ಲಿ ಆಗಿದೆ. ಅದೂ ಕೊಡಗು ಪ್ರವಾಹಕ್ಕೆ ಮುನ್ನ. ಅಂದರೆ ಪ್ರವಾಹಕ್ಕೆ ಮುನ್ನ ಕೊಡಗು ಹೇಗಿತ್ತು ಅನ್ನೋದು ಅಮರ್ ಚಿತ್ರದಲ್ಲಿ ತಿಳಿಯಲಿದೆ. ಹೆಚ್ಚೂ ಕಡಿಮೆ ಒಂದು ತಿಂಗಳು ಅಭಿಷೇಕ್ ಮತ್ತು ತಾನ್ಯಾ ಹೋಪ್ ರಿಯಲ್ ಮಳೆಯಲ್ಲಿ ನೆನೆದುಕೊಂಡೇ ನಟಿಸಿದ್ದಾರೆ. ಅದು ಅವರ ಬದ್ಧತೆಗೆ ಸಾಕ್ಷಿ ಎಂದಿದ್ದಾರೆ ನಾಗಶೇಖರ್. ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರ, ಅಂಬರೀಷ್ ಪುತ್ರನ ಮೊದಲ ಸಿನಿಮಾ ಎನ್ನುವ ಕಾರಣಕ್ಕೇ ಆಕಾಶದೆತ್ತರದಷ್ಟು ನಿರೀಕ್ಷೆ ಹುಟ್ಟಿಸಿದೆ.

 • ಯುಗಾದಿಗೆ ಅಮರ್ ಒಲವಿನ ಉಡುಗೊರೆ

  amar song for yugadi

  ಅತ್ತ ಮಂಡ್ಯದಲ್ಲಿ ಬ್ಯುಸಿಯಾಗಿದ್ದರೂ, ಇತ್ತ ಸಿನಿಮಾ ಕೆಲಸಗಳು ನಿರಂತರವಾಗಿ ಚಾಲ್ತಿಯಲ್ಲಿವೆ. ಅಭಿಷೇಕ್ ಅಂಬರೀಷ್ ಅಭಿನಯದ ಮೊದಲ ಸಿನಿಮಾ ಅಮರ್ ಚಿತ್ರದ ಒಂದು ಹಾಡನ್ನು ಯುಗಾದಿಗೆ ರಿಲೀಸ್ ಮಾಡುತ್ತಿದೆ ಚಿತ್ರತಂಡ. ಈಗಾಗಲೇ ಟೀಸರ್ ಮೂಲಕ ಹವಾ ಸೃಷ್ಟಿಸಿರುವ ಅಮರ್ ಸಿನಿಮಾ ಟೀಂ, ಯುಗಾದಿಗೆ ಹೊಸ ಹಾಡನ್ನು ರಿಲೀಸ್ ಮಾಡುತ್ತಿದೆ. ಸಿನಿಮಾದಲ್ಲಿ ಒಲವಿನ ಉಡುಗೊರೆ ಟೈಟಲ್ ಸಾಂಗ್‍ನ್ನು ಬಳಸಿಕೊಳ್ಳಲಾಗಿದೆಯಂತೆ. ಆ ಹಾಡನ್ನೇ ಬಿಡ್ತಾರಾ..? ಗೊತ್ತಿಲ್ಲ. ಅದು ಸಂಚಿತ್ ಹೆಗ್ಡೆ ಹಾಡಿರುವ ಹಾಡು ಎನ್ನುವುದಂತೂ ಪಕ್ಕಾ.

  ಅಭಿಷೇಕ್ ಜೊತೆ ತಾನ್ಯಾ ಹೋಪ್ ನಾಯಕಿಯಾಗಿದ್ದಾರೆ. ದರ್ಶನ್, ರಚಿತಾ ರಾಮ್, ನಿರೂಪ್ ಭಂಡಾರಿ ಪುಟ್ಟ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೇವರಾಜ್, ಚಿಕ್ಕಣ್ಣ, ಸಾಧುಕೋಕಿಲ ನಟಿಸಿರುವ ಸಿನಿಮಾದ ಹಾಡು ಆನಂದ್ ಆಡಿಯೋದಿಂದ ರಿಲೀಸ್ ಆಗುತ್ತಿದೆ. 20 ವರ್ಷದ ಸಂಭ್ರಮದಲ್ಲಿರೋ ಆನಂದ್ ಆಡಿಯೋಗೆ ಈ ಯುಗಾದಿ ತುಂಬಾ ಸ್ಪೆಷಲ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery