ಚಾಲೆಂಜಿAಗ್ ಸ್ಟಾರ್ ದರ್ಶನ್, ರಾಕ್ಲೈನ್ ವೆಂಕಟೇಶ್ ಮತ್ತು ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನೇತೃತ್ವದಲ್ಲಿ ಗಂಡುಗಲಿ ಮದಕರಿ ನಾಯಕ ಸಿನಿಮಾ ಸೆಟ್ಟೇರುತ್ತಿದೆ. ನಾಳೆಯೇ ಮುಹೂರ್ತ. ಅದಕ್ಕಾಗಿ ಭಾರಿ ಸಿದ್ಧತೆಯನ್ನೇ ಮಾಡಿಕೊಂಡಿದ್ದಾರೆ ಸಿಂಗ್ ಬಾಬು. ಅದರ ಜೊತೆಯಲ್ಲೇ ಮದಕರಿ ನಾಯಕ ಮತ್ತು ವಿಷ್ಣುವರ್ಧನ್ ಕಥೆ ಬಿಚ್ಚಿಟ್ಟಿದ್ದಾರೆ ಸಿಂಗ್ ಬಾಬು.
ಮದಕರಿ ನಾಯಕ ನನ್ನನ್ನು ಅತ್ಯಂತ ಆಕರ್ಷಿಸಿದ್ದ ಐತಿಹಾಸಿಕ ಪಾತ್ರ. ಅದರಲ್ಲೂ ದುರ್ಗಾಸ್ತಮಾನ ಕಾದಂಬರಿ ಓದಿದ ಮೇಲೆ ಭಾರಿ ಇಷ್ಟವಾಗಿದ್ದ. ಅದನ್ನು ಸಿನಿಮಾ ಮಾಡಬೇಕು ಎಂದು ತ.ರಾ.ಸು. ಅವರಿಂದ ಕಾದಂಬರಿಯನ್ನು ಸಿನಿಮಾ ಮಾಡುವ ಹಕ್ಕು ಪಡೆದುಕೊಂಡಿದ್ದೆ. ಸಿವಿಎಲ್ ಶಾಸ್ತಿç ನಿರ್ಮಾಪಕರಾಗಲು ಒಪ್ಪಿದ್ದರು. ವಿಷ್ಣುವರ್ಧನ್ ಅವರು ತಯಾರಿಯನ್ನೂ ನಡೆಸಿದ್ದರು. ಆಗ ಪತ್ರಿಕೆಗಳಿಗೆ ಎರಡು ಪುಟಗಳ ಜಾಹೀರಾತನ್ನೂ ನೀಡಿದ್ದೆವು. ಆದರೆ, ಚಿತ್ರಕ್ಕೆ ತಯಾರಿ ಶುರುವಾದಾಗ ಮದಕರಿ ನಾಯಕನಿಗಾಗಿ ಹೊಂದಿಸಬೇಕಿದ್ದ ಆನೆ, ಕುದುರೆ, ಜನಸಮೂಹದ ಬಗ್ಗೆ ಆತಂಕ ಶುರುವಾಯ್ತು. ಈಗ ಇರುವಂತೆ ಆಗ ಗ್ರಾಫಿಕ್ಸ್ ಇರಲಿಲ್ಲ. ಆ ಬಜೆಟ್ ಕನ್ನಡದ ಮಾರುಕಟ್ಟೆಗಿಂತ ದೊಡ್ಡದಿತ್ತು. ಹೀಗಾಗಿ ಕೈಬಿಟ್ಟೆವು' ಎಂದಿದ್ದಾರೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು.
ಮದಕರಿ ನಾಯಕನ ಪ್ರಾಜೆಕ್ಟ್ ಕೈ ಬಿಟ್ಟಾಗ ವಿಷ್ಣುವರ್ಧನ್ ಬಹಳ ಬೇಸರ ಮಾಡಿಕೊಂಡಿದ್ದರAತೆ. ಹಾಗೆ ದೂರವಾಗಿದ್ದ ಸಬ್ಜೆಕ್ಟ್ ಮತ್ತೆ ನನ್ನನ್ನು ಹುಡುಕಿಕೊಂಡು ಬಂತು ಎಂದು ಖುಷಿಯಾಗಿರುವ ಸಿಂಗ್ ಬಾಬು, ಚಿತ್ರವನ್ನು ಅದ್ಭುತವಾಗಿ ತೆರೆಗೆ ತರುತ್ತೇನೆ. ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಯಿಂದ ಹೇಳಿಕೊಳ್ಳುವ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ.
ಅಂದಹಾಗೆ 45 ವರ್ಷಗಳ ವೃತ್ತಿ ಜೀವನದಲ್ಲಿ ಸಿಂಗ್ ಬಾಬು ಅವರಿಗೆ ಇದು ಮೊದಲ ಐತಿಹಾಸಿಕ ಸಿನಿಮಾ.