` madakari nayaka, - chitraloka.com | Kannada Movie News, Reviews | Image

madakari nayaka,

 • Caste Will Never Be Part Of Creative Thoughts: Kiccha Sudeep

  caste will never be part of creative thoughts

  Following widespread reactions to Sri Prasannaand Swamiji of Valmiki Guru Peeta's statement that he will object to anyone other than Kiccha Sudeep portraying the role of Madakari Nayaka on big screen, the actor himself has come forward making few things clear on the matter. 

  Abhinaya Chakravarthy Kiccha Sudeep in a statement released through his twitter account says, “Caste hasn’t been a part of ‘Creative’ thoughts and it never will be. I respect Swamiji as well Rockline Venkatesh, and the people connected and the media. This for me isn’t a topic at all, as I have made my stand clear in my previous letter in concern to the same”.

  He further adds saying, “Rockline sir is doing what he wants and wishes to do. I’m planning to move ahead with what I wish and dream to do. Swamiji has put forward his opinion. Matter should rest there. A continuous debate on this is unwanted. With due respect to everyone, their emotions and sentiments, let this matter dilute as its heading nowhere”. 

  He goes on to say that in the end, it is the public for whom we are making this film. “Let both the films do justice to the Legend’s life, and I feel that it should be the respect we should be showing towards the legendary warrior than spending time on these debates.”

  Before wrapping up his views, he continues saying that there are better things and topics in connection to a common man's life and his problems that needs attention than this. 

  “If the same energy and effort goes into that, life will get much better for all. My lines are just words of concern towards a common man's problem in life and surely isn’t to offend anyone,” he signs off.

  Later, the actor has also urged his well wishers and his fans to stop debating on the matter, saying that let cinema be cinema and let everyone have faith in cinema. “Cinema by itself is a beautiful religion bringing everyone under one roof,” as he wishes Rockling and his team on his project.

 • ಒಬ್ಬ ವ್ಯಕ್ತಿ.. ಎರಡು ಸಿನಿಮಾ.. ಇದೇ ಮೊದಲಲ್ಲ..!

  one name.. two films is not new in industry

  ಚಿತ್ರದುರ್ಗದ ಏಳು ಸುತ್ತಿನ ಕೋಟೆಯ ಒಡೆಯ ಮದಕರಿ ನಾಯಕ, ಕನ್ನಡ ಚರಿತ್ರಕಾರರಿಗೆ ವಿಶೇಷ ಪುರುಷ. ಕೆಚ್ಚೆದೆಯ ನಾಯಕನ ಕುರಿತು ಎರಡು ಸಿನಿಮಾಗಳು ಬರುವುದು ಈಗ ಖಚಿತವಾಗಿದೆ. ದರ್ಶನ್ ಹಾಗೂ ಸುದೀಪ್ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಮದಕರಿ ನಾಯಕನಾಗಲಿದ್ದಾರೆ. ಇದು ಕನ್ನಡ ಚಿತ್ರರಂಗಕ್ಕೆ ಹೊಸದೇನಲ್ಲ.

  kaviratna_kaalidasa_mahakav.jpgಕಾಳಿದಾಸನ ಕಥೆ ಗೊತ್ತಿದೆಯಲ್ಲವೇ.. ಈ ಕಾಳಿದಾಸನ ಕುರಿತು ಕನ್ನಡದಲ್ಲಿ ಎರಡು ಸಿನಿಮಾ ಬಂದಿವೆ. ಮೊದಲನೆಯದು ಮಹಾಕವಿ ಕಾಳಿದಾಸ. ಅದು ಹೊನ್ನಪ್ಪ ಭಾಗವತರ್ ಸಿನಿಮಾ. ಮತ್ತೊಂದು ಕವಿರತ್ನ ಕಾಳಿದಾಸ. ಅದು ಡಾ.ರಾಜ್‍ಕುಮಾರ್ ಸಿನಿಮಾ.

  ಬಸವೇಶ್ವರರ ಕುರಿತೂ ಎರಡು ಸಿನಿಮಾ ಬಂದಿವೆ. ಮೊದಲನೆಯದು ಜಗಜ್ಯೋತಿ ಬಸವೇಶ್ವರ. ಆ ಚಿತ್ರದಲ್ಲಿ ಬಸವಣ್ಣನಾಗಿದ್ದವರು ಹೊನ್ನಪ್ಪ ಭಾಗವತರ್. ಇನ್ನೊಂದು ಕ್ರಾಂತಿಯೋಗಿ ಬಸವಣ್ಣ. ಆ ಚಿತ್ರದಲ್ಲಿ ಬಸವಣ್ಣನಾಗಿದ್ದವರು ಅಶೋಕ್.

  ಹಾಗೆಯೇ ರಾಘವೇಂದ್ರ ಸ್ವಾಮಿಗಳ ಕುರಿತೂ ಎರಡು ಸಿನಿಮಾ ಬಂದಿವೆ. ಮೊದಲನೆಯದು ಮಂತ್ರಾಲಯ ಮಹಾತ್ಮೆ. ಆ ಚಿತ್ರದಲ್ಲಿ ರಾಘವೇಂದ್ರ ಸ್ವಾಮಿ ಪಾತ್ರಕ್ಕೆ ಜೀವ ತುಂಬಿದ್ದವರು ಡಾ.ರಾಜ್. ಮತ್ತೊಮ್ಮೆ ಅದೇ ಕಥೆಯನ್ನಿಟ್ಟುಕೊಂಡು ರಾಘವೇಂದ್ರ ವೈಭವ ಚಿತ್ರ ತೆರೆಕಂಡಿತ್ತು. ಆಗ ರಾಯರಾಗಿದ್ದವರು ಶ್ರೀನಾಥ್.

  ಹಿಂದಿಯಲ್ಲಿ ಭಗತ್ ಸಿಂಗ್ ಕುರಿತಂತೆ ಶಹೀದ್ ಭಗತ್ ಸಿಂಗ್ ಹಾಗೂ ದಿ ಲೆಜೆಂಡ್ ಆಫ್ ಭಗತ್ ಸಿಂಗ್ ಚಿತ್ರಗಳು ಏಕಕಾಲದಲ್ಲಿ ತೆರೆ ಕಂಡಿದ್ದವು. ಕನ್ನಡದಲ್ಲೀಗ ಮದಕರಿ ನಾಯಕನ ಸರದಿ.

 • ದರ್ಶನ್ ಗಾಗಿ ದುರ್ಗದ ಹುಲಿ ಕೈಬಿಟ್ಟ ಕಿಚ್ಚ

  sudeep drops madakari movie nayaka project

  ಕಿಚ್ಚ ಸುದೀಪ್ ದುರ್ಗದ ಹುಲಿ ಚಿತ್ರವನ್ನು ಕೈಬಿಟ್ಟಿದ್ದಾರೆ. ಮದಕರಿ ನಾಯಕನ ಕುರಿತು ಚಿತ್ರ ಮಾಡುವ ಯೋಜನೆಯನ್ನು ಕೈಬಿಟ್ಟು, ವಿವಾದಕ್ಕೆ ತೆರೆ ಎಳೆದಿದ್ದಾರೆ. ದುರ್ಗದ ಹುಲಿ ಕೈಬಿಡುವುದಾಗಿ ಹೇಳಿರುವ ಸುದೀಪ್, ನಮ್ಮವರಿಗಾಗಿ.. ನಮ್ಮವರ ಖುಷಿಗಾಗಿ ತ್ಯಾಗ ಮಾಡುವುದೇ ಒಳ್ಳೆಯದು ಎಂಬ ಸಂದೇಶ ರವಾನಿಸಿದ್ದಾರೆ.

  ಇತ್ತೀಚೆಗೆ ಸುದೀಪ್ ಅವರನ್ನು ಭೇಟಿ ಮಾಡಿದ್ದ ರಾಕ್‍ಲೈನ್ ವೆಂಕಟೇಶ್ ಅವರಿಗೆ ಸುದೀಪ್ `ನೀವು ನಮ್ಮ ಚಿತ್ರರಂಗದ ನಿರ್ಮಾಪಕರು. ದರ್ಶನ್ ಕೂಡಾ ನಮ್ಮ ಚಿತ್ರರಂಗದ ಹೀರೋ. ನಾನೂ ನಿಮ್ಮವನೇ. ಒಂದೊಳ್ಳೆ ಕಥೆಗಾಗಿ ನಾನು.. ನೀವು ಮುನಿಸಿಕೊಳ್ಳುವುದು ಬೇಡ. ಖುಷಿಯಾಗಿ ವೀರ ಮದಕರಿ ಚಿತ್ರ ಮಾಡಿ'' ಎಂದು ಹೇಳಿದ್ದಾರಂತೆ.

 • ದರ್ಶನ್ ಮದಕರಿಗೆ ರಮ್ಯಾ ನಾಯಕಿ..!

  will eamya return with darshan's madakari

  ರಾಜಕಾರಣಕ್ಕೆ ಹೋಗಿ, ಸಂಸದೆಯಾಗಿ, ಕಾಂಗ್ರೆಸ್‍ನಲ್ಲಿ ರಾಷ್ಟ್ರೀಯ ಮಟ್ಟದ ನಾಯಕಿಯಾಗಿ ಗುರುತಿಸಿಕೊಂಡ ಮೇಲೆ ಮಾಜಿ ನಟಿಯೇ ಆಗಿಹೋಗಿದ್ದ ರಮ್ಯಾ, ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ ಅನ್ನೋ ಸುದ್ದಿ ಜೋರಾಗಿಯೇ ಸದ್ದು ಮಾಡುತ್ತಿದೆ.

  ಈ ಸುದ್ದಿ ನಿಜವೇ ಆಗಿಬಿಟ್ಟರೆ, ದತ್ತ ಚಿತ್ರದಲ್ಲಿ ದರ್ಶನ್‍ಗೆ ಜೋಡಿಯಾಗಿದ್ದ ರಮ್ಯಾ, 12 ವರ್ಷಗಳ ನಂತರ ಮತ್ತೊಮ್ಮೆ ಚಾಲೆಂಜಿಂಗ್ ಸ್ಟಾರ್‍ಗೆ ನಾಯಕಿಯಾಗುತ್ತಾರೆ. ರಾಕ್‍ಲೈನ್ ಪ್ರೊಡಕ್ಷನ್ಸ್‍ನಲ್ಲಿ ಬೊಂಬಾಟ್ ಚಿತ್ರದ ನಾಯಕಿಯಾಗಿದ್ದ ರಮ್ಯಾ, ರಾಕ್‍ಲೈನ್ ಅವರ ಬೀಗರಾದ ಮುನಿರತ್ನ ಅವರ ಕಠಾರಿವೀರ ಸುರುಸುಂದರಾಂಗಿ ಚಿತ್ರದಲ್ಲಿ ಸುರಸುಂದರಿಯಾಗಿ ಕಾಣಿಸಿಕೊಂಡಿದ್ದರು. ಮುನಿರತ್ನ ಕಾಂಗ್ರೆಸ್ ಶಾಸಕರು.  ದರ್ಶನ್ ಅಭಿನಯದ ಗಂಡುಗಲಿ ಮದಕರಿ ನಾಯಕ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ. ಹೀಗಾಗಿ ರಮ್ಯಾ ಮತ್ತೆ ಬಂದರೂ ಅಚ್ಚರಿಯಿಲ್ಲ.

  ರಮ್ಯಾ ಅಭಿನಯದಲ್ಲಿ ಬಿಡುಗಡೆಯಾದ ಕೊನೆಯ ಸಿನಿಮಾ ನಾಗರಹಾವು. ಆ ಚಿತ್ರದಲ್ಲಿ ನಾಗಕನ್ನಿಕೆಯಾಗಿ ಕಾಣಿಸಿಕೊಂಡಿದ್ದ ರಮ್ಯಾ, ಮದಕರಿ ನಾಯಕಿಯಾಗ್ತಾರಾ..? ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

 • ದರ್ಶನ್ ಮದಕರಿಯಾದರೆ ಕಾನೂನು ಹೋರಾಟ - ವಾಲ್ಮೀಕಿ ಸ್ವಾಮೀಜಿ

  madakri issue turns into cast fight

  ಮದಕರಿ ನಾಯಕ ಸಿನಿಮಾ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದಲ್ಲಿ, ದರ್ಶನ್ ಮದಕರಿ ನಾಯಕನ ಪಾತ್ರ ಮಾಡಲಿದ್ದಾರೆ ಎನ್ನುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಸುದೀಪ್ ಕೂಡಾ ವೀರ ಮದಕರಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಇನ್ನೊಂದು ಸುದ್ದಿ. ಇವೆರಡರ ನಡುವೆ ಚಿತ್ರದ ವಿವಾದಕ್ಕೆ ಜಾತಿಯ ಬಣ್ಣವೂ ಅಂಟಿಕೊಂಡಿದೆ. ವಾಲ್ಮೀಕಿ ಸಮುದಾಯದ ಸ್ವಾಮೀಜಿ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

  ನಮ್ಮ ಸಮುದಾಯದ ನಾಯಕ ಮದಕರಿ ನಾಯಕನ ಪಾತ್ರವನ್ನು ಕಿಚ್ಚ ಸುದೀಪ್ ಅವರೇ ಮಾಡಬೇಕು. ಅವರ ಬದಲಿಗೆ ಆ ಪಾತ್ರವನ್ನು ದರ್ಶನ್ ಮಾಡುತ್ತಾರೆ ಎನ್ನುವುದಾದರೆ ಅದಕ್ಕೆ ನಮ್ಮ ಸಮ್ಮತಿ ಇಲ್ಲ. ನಾವು ಕಾನೂನು ಹೋರಾಟಕ್ಕೂ ಸಿದ್ಧ ಎಂದಿದ್ದಾರೆ ವಾಲ್ಮೀಕಿ ಸಮುದಾಯದ ಪ್ರಸನ್ನಾನಂದಪುರಿ ಸ್ವಾಮೀಜಿ.

  ಸುದೀಪ್ ಅವರು ವಾಲ್ಮೀಕಿ ಸಮುದಾಯದವರು. 2010ರಲ್ಲಿಯೇ ಮದಕರಿ ನಾಯಕನ ಪಾತ್ರ ಮಾಡುವುದಾಗಿ ನನಗೆ ಭರವಸೆ ನೀಡಿದ್ದರು. ಆ ಪಾತ್ರವನ್ನು ಸುದೀಪ್ ಅವರೇ ಮಾಡಬೇಕು. ಬೇರೆಯವರು ಆ ಪಾತ್ರ ಮಾಡಿದರೆ ಕಾನೂನು ಹಾಗೂ ಸಾಂಘಿಕ ಹೋರಾಟಕ್ಕೆ ಸಿದ್ಧ ಎಂದು ಘೋಷಿಸಿದ್ದಾರೆ ಪ್ರಸನ್ನಾನಂದ ಪುರಿ ಸ್ವಾಮೀಜಿ.

 • ದರ್ಶನ್ ಹುಟ್ಟುಹಬ್ಬಕ್ಕೆ ಗಂಡುಗಲಿ ಮದಕರಿ ನಾಯಕ ಶುರು..?

  will darshan's madakari nayaka strat on his birthday?

  ಸಂಕ್ರಾಂತಿ ಹಬ್ಬಕ್ಕೇ ಆರಂಭವಾಗಬೇಕಿದ್ದ ಗಂಡುಗಲಿ ಮದಕರಿ ನಾಯಕ ಚಿತ್ರದ ಸ್ಕ್ರಿಪ್ಟ್ ಪೂಜೆ, ಮುಹೂರ್ತ ಈಗ ದರ್ಶನ್ ಹುಟ್ಟುಹಬ್ಬದ ದಿನ ನಡೆಯುವ ಸಾಧ್ಯತೆ ಇದೆ. ಫೆಬ್ರವರಿ 16ರಂದು ಚಿತ್ರಕ್ಕೆ ಮುಹೂರ್ತವಾಗುವ ಸಾಧ್ಯತೆಗಳಿವೆ.

  ಚಿತ್ರಕ್ಕೆ ಬೇಕಾದ ಎಲ್ಲ ತಯಾರಿ ಮಾಡಿಕೊಂಡಿರುವ ಚಿತ್ರತಂಡ, ಈಗ ಚಿತ್ರದ ಸ್ಕ್ರಿಪ್ಟ್‍ನ್ನು 7ನೇ ಬಾರಿಗೆ ತಿದ್ದುತ್ತಿದೆ. ಶೂಟಿಂಗ್ ಶುರುವಾಗುವ ಮುನ್ನವೇ ಚಿತ್ರದ ಸ್ಕ್ರಿಪ್ಟ್‍ನ್ನು ಚೆಂದವಾಗಿಸಿಕೊಳ್ಳಬೇಕು ಅನ್ನೋದು ಚಿತ್ರತಂಡದ ಆಸೆ. ಸಣ್ಣ ಸಣ್ಣ ಓರೆಕೋರೆಗಳನ್ನೂ ರಿಪೇರಿ ಮಾಡುತ್ತಿದೆ ತಂಡ.

  ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಚಿತ್ರಕ್ಕಾಗಿ ಮಂಬೈ, ಹೈದರಾಬಾದ್ ಸುತ್ತುತ್ತಿದ್ದಾರೆ. ಬಾಜೀರಾವ್ ಮಸ್ತಾನಿ ಸೆಟ್ ನೋಡಿದ್ದಾರೆ. ರಾಮೋಜಿ ಫಿಲಂ ಸಿಟಿಯಲ್ಲಿ ಸುತ್ತಿದ್ದಾರೆ. ಅರಮನೆ ಸೆಟ್‍ಗಳನ್ನು ನೋಡುತ್ತಿದ್ದಾರೆ. 

  ರಾಕ್‍ಲೈನ್ ವೆಂಕಟೇಶ್ ಕನಸಿನ ಚಿತ್ರವಾಗಿರೋ ಗಂಡುಗಲಿ ಮದಕರಿ ನಾಯಕ ಸಿನಿಮಾ, ಎಲ್ಲವೂ ಅಂದುಕೊಂಡಂತೆ ಆದರೆ ಫೆಬ್ರವರಿ 16ರಂದು ಮುಹೂರ್ತ ಕಾಣಲಿದೆ. ಸದ್ಯಕ್ಕೆ ರಾಕ್‍ಲೈನ್, ನಟಸಾರ್ವಭೌಮ ಚಿತ್ರದ ಬಿಡುಗಡೆಯಲ್ಲಿ ಬ್ಯುಸಿ.

 • ನಾನೂ ಮದಕರಿ ಸಿನಿಮಾ ಮಾಡುತ್ತೇನೆ - ಸುದೀಪ್

  i will also make a film on makadakar nayaka says sudeep

  ಕನ್ನಡದಲ್ಲಿ ಚಿತ್ರದುರ್ಗದ ಮದಕರಿ ನಾಯಕನ ಕುರಿತು ಎರಡು ಸಿನಿಮಾ ಬರುವುದು ಈಗ ಖಚಿತವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಹಾಕಿಕೊಂಡು, ರಾಕ್‍ಲೈನ್ ವೆಂಕಟೇಶ್ ಗಂಡುಗಲಿ ಮದಕರಿ ನಾಯಕ ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದ ಬೆನ್ನಲ್ಲೇ ಸುದೀಪ್ ಅವರೇ ಮದಕರಿ ನಾಯಕ ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳು ದುಂಬಾಲು ಬಿದ್ದಿದ್ದರು. ಈ ಕುರಿತು ಸುದೀಪ್ ಸುದೀರ್ಘ ಪತ್ರವನ್ನೇ ಬರೆದಿದ್ದಾರೆ. ತಾವು ಮದಕರಿ ನಾಯಕನ ಸಿನಿಮಾ ಮಾಡುತ್ತಿರುವುದು ನಿಜ ಎಂದಿದ್ದಾರೆ.

  ಮದಕರಿ ನಾಯಕನ ಕುರಿತು ರಿಸರ್ಚ್ ಕೆಲಸಕ್ಕೆ ಈಗಾಗಲೇ ಹಣವನ್ನೂ ಖರ್ಚು ಮಾಡಿರುವ ಸುದೀಪ್, ಒಂದು ತಂಡವನ್ನೇ ಆ ಕೆಲಸಕ್ಕೆ ಹಚ್ಚಿದ್ದಾರೆ. ಆ ತಂಡ ಸುಮಾರು ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದೆ. ಸ್ಕ್ರಿಪ್ಟ್ ಕೆಲಸವೂ ನಡೆಯುತ್ತಿದೆ. ಮದಕರಿ ನಾಯಕನ ಕುರಿತು ಸಿನಿಮಾ ಮಾಡುವುದು ನನ್ನ ಕನಸು ಎಂದಿರುವ ಸುದೀಪ್, ರಾಕ್‍ಲೈನ್ ವೆಂಕಟೇಶ್ ಅವರ ನಿರ್ಮಾಣದ ಗಂಡುಗಲಿ ಮದಕರಿ ನಾಯಕ ಚಿತ್ರಕ್ಕೂ ಶುಭ ಹಾರೈಸಿದ್ದಾರೆ.

  ನನ್ನ ತಂಡದ ಕನಸನ್ನು ಭಗ್ನ ಮಾಡಲು ನಾನು ಬಯಸುವುದಿಲ್ಲ. ಅದರ ಬದಲಿಗೆ ಮಾಡಿ ಮಡಿಯುವುದೇ ಮೇಲು. ನಾನೂ ಒಬ್ಬ ಮದಕರಿ ಎಂದಿದ್ದಾರೆ ಸುದೀಪ್.

  ಅಲ್ಲಿಗೆ ಕನ್ನಡದಲ್ಲಿ ಒಬ್ಬ ಐತಿಹಾಸಿಕ ವ್ಯಕ್ತಿಯ ಕುರಿತಂತೆ ಎರಡು ಸಿನಿಮಾ ಬರಲಿದೆ ಎನ್ನುವುದು ಖಚಿತವಾಗಿದೆ. ಯಾರು ಮೊದಲು ಮದಕರಿ ನಾಯಕನಾಗುತ್ತಾರೆ ಎನ್ನುವುದಷ್ಟೇ ಸದ್ಯದ ಕುತೂಹಲ.

  Related Articles :-

  ಒಬ್ಬ ವ್ಯಕ್ತಿ.. ಎರಡು ಸಿನಿಮಾ.. ಇದೇ ಮೊದಲಲ್ಲ..!

  My Opinion on the Biopic on Veera Madhakari - Sudeep

 • ಮದಕರಿ ಜಾತಿ ವಿವಾದ - ಕಲಾ ದೇವಿಗೇಕೆ ಜಾತಿ..?

  caste ism is non sense to film industry

  ಚಿತ್ರದುರ್ಗದ ಕೋಟೆಯನ್ನು ನೋಡಲು ಹೋಗುವವರು ಮದಕರಿ ನಾಯಕನ ಜಾತಿ ನೋಡಿ ಹೋಗ್ತಾರಾ..? ಓಬವ್ವನ ಕಥೆ ಕೇಳಿ ಹೆಮ್ಮೆ ಪಟ್ಟುಕೊಂಡವರಿಗೆ ಆಕೆಯ ಜಾತಿ ಯಾವುದೆಂದು ಗೊತ್ತಾ..? ಅನಗತ್ಯವಾಗಿದ್ದ ವಿವಾದವೊಂದನ್ನು ಸೃಷ್ಟಿಸಿದ ವಾಲ್ಮೀಕಿ ಸ್ವಾಮೀಜಿ, ಪದೇ ಪದೇ ವಿವಾದದ ಬೆಂಕಿ ಹಚ್ಚುತ್ತಲೇ ಹೋಗಿಬಿಟ್ಟರು. ಕಲಾದೇವಿಗೊಂದು ಜಾತಿಯ ಕಳಂಕ ಅಂಟಿಸಿಬಿಟ್ಟರು.

  ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಹೇಳಿದ್ದೂ ಇದನ್ನೇ. ಎಲ್ಲವನ್ನೂ ಜಾತಿ ನೋಡಿಕೊಂಡು ಮಾಡಿದ್ದರೆ, ಡಾ.ರಾಜ್ ಒಂದೇ ಒಂದು ಐತಿಹಾಸಿಕ ಪಾತ್ರವನ್ನೂ ಮಾಡುವಂತಿರಲಿಲ್ಲ. ಕನಕದಾಸ ಎನ್ನಿ, ಪುರಂದರದಾಸ ಎನ್ನಿ, ಶ್ರೀಕೃಷ್ಣ ದೇವರಾಯ ಎನ್ನಿ, ಮಯೂರ ಎನ್ನಿ, ಬಭ್ರುವಾಹನ ಎನ್ನಿ, ಭಕ್ತ ಕುಂಬಾರ ಎನ್ನಿ, ಭಕ್ತ ಚೇತ ಎನ್ನಿ, ಸರ್ವಜ್ಞಮೂರ್ತಿ ಎನ್ನಿ, ರಾಘವೇಂದ್ರ ಸ್ವಾಮಿ ಎನ್ನಿ, ರಣಧೀರ ಕಂಠೀರವ ಎನ್ನಿ.. ಕಣ್ಣ ಮುಂದೆ ಬರುವುದು ಡಾ.ರಾಜ್‍ಕುಮಾರ್. ರಾಜಕೀಯದಲ್ಲಿ ಜಾತಿಯಿಲ್ಲದೆ ಏನೂ ನಡೆಯಲ್ಲ. ಜಾತ್ಯತೀ ಪಕ್ಷ ಎಂದು ಕರೆಸಿಕೊಳ್ಳುವವರೂ ಜಾತಿ ರಾಜಕೀಯವನ್ನೇ ಮಾಡೋದು. ಅದು ದೇಶದ ಜನರಿಗೆಲ್ಲ ಗೊತ್ತಿರುವ ಬಹಿರಂಗ ಗುಟ್ಟು. ಆದರೆ, ಚಿತ್ರರಂಗದಲ್ಲಿ ಜಾತಿ ಇರಲಿಲ್ಲ. 

  ಒಬ್ಬ ಕಲಾವಿದನನ್ನು ಆತನ ಶ್ರೇಷ್ಟತೆಯಿಂದಲೇ ಗೌರವಿಸುತ್ತಿದ್ದರು. ಗೌರವಿಸುತ್ತಿದ್ದಾರೆ. ಕನ್ನಡದಲ್ಲಿ ಕೆಲವು ಹಿರಿಯ ನಿರ್ದೇಶಕರು, ಕಲಾವಿದರಿಗೆ.. ಕಣ್ಣಿಗೆ ಕಂಡ ತಕ್ಷಣ ಕಾಲು ಮುಟ್ಟಿ ನಮಸ್ಕರಿಸುತ್ತಾರೆ ಚಿತ್ರರಂಗದ ಕಿರಿಯರು. ಅಲ್ಲಿ ಜಾತಿ ನೋಡುವುದಿಲ್ಲ. ಕಾಣುವುದು ಕಲಾ ಸರಸ್ವತಿ. ಡಾ.ರಾಜ್, ವಿಷ್ಣು, ಪುಟ್ಟಣ್ಣನಂತಹವರಿಗೆ ಆ ಗೌರವ ಸಿಗುತ್ತಿತ್ತು. ಈಗಲೂ.. ಅಂಬಿ, ರವಿಚಂದ್ರನ್, ಶಿವಣ್ಣ, ಭಾರ್ಗವ, ಭಗವಾನ್.. ರಂತಹ ಹಿರಿಯರಿಗೆ ನಮಸ್ಕರಿಸುವಾಗ.. ಅವರ ಜಾತಿ ಯಾವುದೆಂದು ನಮ್ಕಸರಿಸುವವರು ನೆನಪಿಸಿಕೊಳ್ಳಲ್ಲ. ಇಷ್ಟಕ್ಕೂ ಅವರಿಗೆ ಆ ಗೌರವ ಸಿಕ್ಕಿದ್ದೇ ಕಲಾದೇವಿ ಒಲಿದ ಮೇಲೆ. ಕಲಾದೇವಿ ಒಲಿಯುವುದೇ ಜಾತಿಯ ಅರಿವು ಸತ್ತ ಮೇಲೆ. 

  ಜಗ್ಗೇಶ್ ಹೇಳಿದ ಮಾತಿನಲ್ಲಿ ಅರ್ಥವಿದೆ ಎನಿಸುವುದು ಆಗಲೇ. ಕಲೆಗೆ ಜಾತಿ ಎಲ್ಲಿಯದು..? ಇಷ್ಟಕ್ಕೂ ಮದಕರಿ ನಾಯಕನನ್ನು ಒಬ್ಬ ಜಾತಿಯ ನಾಯಕ ಎಂದು ಸೀಮಿತಗೊಳಿಸುವುದೇ ನಮಗೆ ನಾವು ಮಾಡಿಕೊಳ್ಳುವ ಅವಮಾನ. ಈಗ ಈ ಸ್ವಾಮೀಜಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ.. ಆ ಪಾತ್ರದಲ್ಲಿ ನಟಿಸುವ ಕಲಾವಿದನ ಜಾತಿಯನ್ನೂ ಎತ್ತಿಬಿಟ್ಟಿದ್ದಾರೆ.

  ಒಬ್ಬ ಸ್ವಾಮೀಜಿಯ ಅತಿರೇಕದಿಂದ ಒಬ್ಬ ಕಲಾವಿದನ ಜಾತಿ ಗೊತ್ತಾಗುವಂತಾಯ್ತೇ ಹೊರತು, ಮತ್ತೇನಲ್ಲ. ಸುದೀಪ್‍ರನ್ನು ಕನ್ನಡಿಗರು ಪ್ರೀತಿಸುವುದು ಆತ ಒಬ್ಬ ಕಲಾವಿದ. ಕನ್ನಡದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಳಗಲು ಪ್ರಯತ್ನಿಸುತ್ತಿರುವ ಸಾಹಸಿ ಎಂಬ ಕಾರಣಕ್ಕೆ. ಜಾತಿ ಕಟ್ಟಿಕೊಂಡು ಆಗಬೇಕಾದ್ದೇನು..? ದರ್ಶನ್ ಜಾತಿಯೂ ಎಷ್ಟೋ ಜನರಿಗೆ ಗೊತ್ತಿಲ್ಲ. ಗೊತ್ತಾಗುವ ಅಗತ್ಯವೂ ಇಲ್ಲ. ಕಲಾವಿದರ ಜಾತಿ ಕಟ್ಟಿಕೊಂಡು ನಮಗೇನಾಗಬೇಕು..? 

  ಇಷ್ಟಕ್ಕೂ ಮದಕರಿ ನಾಯಕನ ಎರಡು ಸಿನಿಮಾ ಬರುತ್ತವಾ..? ಬರಲಿ ಬಿಡಿ. ನಮ್ಮ ಮದಕರಿ ನಾಯಕನ ಇತಿಹಾಸ ಮನೆ ಮನೆಗೂ ತಲುಪಲಿ. ಅದಕ್ಕೆ ಹೆಮ್ಮೆ ಪಡೋಣ.

  ಕೆ.ಎಂ.ವೀರೇಶ್

  ಸಂಪಾದಕರು

  ಚಿತ್ರಲೋಕ.ಕಾಮ್

 • ಮದಕರಿ ನಾಯಕನಾಗುತ್ತಾರಾ ದರ್ಶನ್..?

  will darshan act as madakari nayaka

  ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಹೊಸ ಹೆಸರು ತಂದುಕೊಟ್ಟ ಸಿನಿಮಾ ಸಂಗೊಳ್ಳಿ ರಾಯಣ್ಣ. ಅದಾದ ಮೇಲೆ ಪೌರಾಣಿಕ, ಐತಿಹಾಸಿಕ ಚಿತ್ರಗಳಿಗೆ ನಾನು ಯಾವಾಗ ಬೇಕಾದರೂ ಸಿದ್ಧ ಎಂದು ಸಾರಿದ್ದ ದರ್ಶನ್‍ಗೆ, ಮದಕರಿ ನಾಯಕನಾಗುವ ಆಸೆಯಾಗಿದೆಯಂತೆ. ಆ ಆಸೆಗೆ ನೀರೆರೆಯುತ್ತಿರುವುದು ರಾಕ್‍ಲೈನ್ ವೆಂಕಟೇಶ್. ಅಂದರೆ, ನಿರ್ಮಾಪಕರಾಗುತ್ತಿರುವುದು ಅವರೇ.

  ದರ್ಶನ್ ಅವರನ್ನು ಮದಕರಿ ನಾಯಕನಾಗಿ ಚಿತ್ರಿಸಿಕೊಂಡು ಕಥೆ ಬರೆಯುತ್ತಿರುವುದು ಬಿ.ಎಲ್.ವೇಣು. ಚಿತ್ರದುರ್ಗದ ಕುರಿತು ಈಗಾಗಲೇ ಬಹಳಷ್ಟು ಸಾಹಿತ್ಯ ಸೃಷ್ಟಿಸಿರುವ ಬಿ.ಎಲ್.ವೇಣು, ಪಾತ್ರ, ಚಿತ್ರಕಥೆ ಹೊಸೆಯುತ್ತಿದ್ದಾರೆ. ನಿರ್ದೇಶಕರು ಯಾರು ಅನ್ನೋದು ಇನ್ನೂ ಪ್ರಶ್ನೆಯಾಗಿಯೇ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ, ಮುಂದಿನ ವರ್ಷ ದರ್ಶನ್ ಮದಕರಿ ನಾಯಕನಾಗಿ ಮಿಂಚಲಿದ್ದಾರೆ.

 • ಸಂಕ್ರಾಂತಿಗೆ ಶುರುವಾಗಲಿದೆ ಗಂಡುಗಲಿ ಮದಕರಿ ನಾಯಕ 

  darshan;s madkari nayaka to launch on sankaranthi

  ಗಂಡುಗಲಿ ಮದಕರಿ ನಾಯಕನಾಗಿ ದರ್ಶನ್ ನಟಿಸಲು ಒಪ್ಪಿದ್ದು, ಕಥೆ, ಚಿತ್ರಕಥೆ ಸಿದ್ಧವಾಗುತ್ತಿದೆ. ಕಥೆಗಾರ ಬಿ.ಎಲ್. ವೇಣು, ತಮ್ಮದೇ ಗಂಡುಗಲಿ ಮದಕರಿ ನಾಯಕ ಕಾದಂಬರಿಯನ್ನು ಚಿತ್ರಕಥೆಯಾಗಿಸುತ್ತಿದ್ದಾರೆ. ನಿರ್ದೇಶಕರು ಯಾರು ಎಂಬ ಸಸ್ಪೆನ್ಸ್‍ಗೂ ಈಗ ಉತ್ತರ ಸಿಕ್ಕಿದೆ. ಚಿತ್ರದ ನಿರ್ದೇಶನದ ಹೊಣೆ ಹೊತ್ತಿರುವುದು ಎಸ್.ವಿ. ರಾಜೇಂದ್ರ ಸಿಂಗ್ ಬಾಬು.

  1983ರಲ್ಲಿ ಬಿ.ಎಲ್. ವೇಣು ಗಂಡುಗಲಿ ಮದಕರಿ ನಾಯಕ ಅನ್ನೋ ಕಾದಂಬರಿ ಬರೆದಿದ್ದರು. ತರಾಸು ಅವರ ದುರ್ಗಾಸ್ತಮಾನ ಬಿಟ್ಟರೆ, ಗಂಡುಗಲಿ ಮದಕರಿ ನಾಯಕ ಕಾದಂಬರಿಯೇ ಜನಪ್ರಿಯ. ಈ ಹಿಂದೆ ದುರ್ಗಾಸ್ತಮಾನ ಕೃತಿಯನ್ನು ಸಿನಿಮಾ ಮಾಡುವುದಾಗಿ ಹಲವರು ಆಸೆ ತೋಡಿಕೊಂಡಿದ್ದರು. ಆದರೆ, ಸಾಧ್ಯವಾಗಿರಲಿಲ್ಲ. ಈಗ ಅ ಕನಸನ್ನು ಈಡೇರಿಸಲು ಪಣ ತೊಟ್ಟು ಹೊರಟಿದ್ದಾರೆ ರಾಕ್‍ಲೈನ್ ವೆಂಕಟೇಶ್. ಜನವರಿ 15ಕ್ಕೆ ಮದಕರಿ ನಾಯಕ ಸಿನಿಮಾ ಲಾಂಚ್ ಆಗಲಿದೆ.

  `ಗಂಡುಗಲಿ ಮದಕರಿ ನಾಯಕ ಸಿನಿಮಾ ನನ್ನ ಕನಸು. ಸ್ಕ್ರಿಪ್ಟ್ ಅದ್ಭುತವಾಗಿ ಮೂಡಿ ಬರುತ್ತಿದೆ. ವೇಣು ತುಂಬಾ ಚೆನ್ನಾಗಿ ಸ್ಕ್ರಿಪ್ಟ್ ಮಾಡುತ್ತಿದ್ದಾರೆ. ನಾನು ಸುಮಾರು 2 ವರ್ಷಗಳ ಹಿಂದೆಯೇ ರಾಜೇಂದ್ರ ಸಿಂಗ್ ಬಾಬು ಅವರಿಗೆ ಈ ಪ್ರಾಜೆಕ್ಟ್ ಬಗ್ಗೆ ಹೇಳಿದ್ದೆ. ಅವರು ಇಂತಹ ಐತಿಹಾಸಿಕ ಸಿನಿಮಾಗೆ ಬೆಸ್ಟ್ ಆಯ್ಕೆ' ಇದು ರಾಕ್‍ಲೈನ್ ಮಾತು.

  ಚಿತ್ರದುರ್ಗದ ಸರದಾರ ಮದಕರಿ ನಾಯಕನನ್ನೇ ಹೀರೋ ಆಗಿಸಿ ಇದುವರೆಗೆ ಸಿನಿಮಾ ಬಂದಿಲ್ಲ. ಕಲ್ಲರಳಿ ಹೂವಾಗಿ ಚಿತ್ರದಲ್ಲಿ ಚಿತ್ರದುರ್ಗದ ಕಥೆಯಿದ್ದರೂ, ಮದಕರಿ ನಾಯಕ ಪ್ರಮುಖ ಪಾತ್ರವಾಗಿರಲಿಲ್ಲ. ಆ ಸಿನಿಮಾದಲ್ಲಿ ಅಂಬರೀಷ್ ಮದಕರಿ ನಾಯಕನಾಗಿದ್ದರು. ಈಗ.. ದರ್ಶನ್ ಮದಕರಿಯಾಗುತ್ತಿದ್ದಾರೆ.

  Related Articles :-

  Darshan's New Film Titled Gandugali Madakari Nayaka

 • ಸುದೀಪ್ ಮದಕರಿಗೆ ವಾಲ್ಮೀಕಿ ಸ್ವಾಮೀಜಿ ಬೆಂಬಲ

  sudeep's madakari gets valmiki swamy support

  ಚಿತ್ರದುರ್ಗದ ವೀರ ಮದಕರಿ ನಾಯಕ ಸಿನಿಮಾವನ್ನು ಯಾರು ಮಾಡಬೇಕು..? ದರ್ಶನ್ ಮಾಡಬೇಕಾ..? ಸುದೀಪ್ ಮಾಡಬೇಕಾ..? ಈ ಬಗ್ಗೆ ಎರಡೂ ಕಡೆ ಸ್ಪಷ್ಟ ನಿರ್ಧಾರಗಳು ಹೊರಬಿದ್ದಿದ್ದರೂ, ಚರ್ಚೆಗಳು ಮುಂದುವರಿದಿವೆ. ಹೀಗಿರುವಾಗಲೇ ಕಿಚ್ಚ ಸುದೀಪ್ ಅವರೇ ಮದಕರಿ ನಾಯಕ ಪಾತ್ರ ಮಾಡಬೇಕು ಎಂದಿದ್ದಾರೆ ವಾಲ್ಮೀಕಿ ಸಮುದಾಯದ ಸ್ವಾಮೀಜಿ ಪ್ರಸನ್ನಾನಂದ  ಸ್ವಾಮೀಜಿ.

  ಮದಕರಿ ನಾಯಕನ ಪಾತ್ರ ಮಾಡುವವರು ಅತ್ಯುತ್ತಮ ಕಲಾವಿದರಾಗಿರಬೇಕು. ಅವರ ಮುಖದಲ್ಲೊಂದು ಗಾಂಭೀರ್ಯ ಇರಬೇಕು. ಕಲಾವಂತಿಕೆ ಇರಬೇಕು. ಅದೆಲ್ಲವೂ ಸುದೀಪ್ ಅವರಲ್ಲಿದೆ. ಹೀಗಾಗಿ ಐದಾರು ವರ್ಷದ ಹಿಂದೆಯೇ ಸುದೀಪ್ ಅವರಿಗೆ ಮದಕರಿ ನಾಯಕನ ಪಾತ್ರ ಮಾಡುವಂತೆ ಹೇಳಿದ್ದೆ. ಅವರು ಸುಮಾರು ಒಂದೂವರೆ ವರ್ಷದಿಂದ ಈ ಕುರಿತು ಕೆಲಸ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ ಪ್ರಸನ್ನಾನಂದ ಸ್ವಾಮೀಜಿ.

  ಜೊತೆಗೆ ಸುದೀಪ್ ನಮ್ಮ ಸಮುದಾಯದವರು ಎಂಬ ಪ್ರೀತಿಯೂ ಇದೆ. ಹೀಗಾಗಿ ಅವರೇ ಈ ಸಿನಿಮಾ ಮಾಡಬೇಕು ಅನ್ನೋದು ನಮ್ಮ ಆಸೆ. ಇದನ್ನು ಮೀರಿ ದರ್ಶನ್ ಮದಕರಿ ನಾಯಕನ ಸಿನಿಮಾ ಮಾಡುತ್ತೇನೆನೆಂದು ಹೊರಟರೆ, ಮುಂದೇನು ಮಾಡಬೇಕೆಂದು ಸಮುದಾಯದ ಮುಖಂಡರ ಜೊತೆ ಚರ್ಚಿಸಿ ತಿಳಿಸುತ್ತೇವೆ ಎಂದಿದ್ದಾರೆ ಸ್ವಾಮೀಜಿ.

Shivarjun Movie Gallery

KFCC 75Years Celebrations and Logo Launch Gallery