ರಚಿತಾ ರಾಮ್... ಈಗ ಹಿಟ್ ಮೇಲೆ ಹಿಟ್ ಕೊಟ್ಟು ಮಿನುಗುತ್ತಿರುವ ತಾರೆ. ಅಯೋಗ್ಯ ಚಿತ್ರ ಹಿಟ್ ಆಗುವುದರೊಂದಿಗೆ ರಚಿತಾ ಲಕ್ಕಿ ಅನ್ನೋದು ಮತ್ತೆ ಪ್ರೂವ್ ಆಗಿದೆ. ಆದರೆ, ಇಲ್ಲೊಂದು ವ್ಯತ್ಯಾಸ ಗಮನಿಸಬೇಕು. ಅಯೋಗ್ಯ ಸಿನಿಮಾದಲ್ಲಿ ರಚಿತಾ, ತುಸು ದಪ್ಪಗಾದಂತೆ ಕಂಡಿದ್ದರು. ಅಷ್ಟೇ ಅಲ್ಲ, ಸೀತಾರಾಮ ಕಲ್ಯಾಣ ಹಾಗೂ ನಟಸಾರ್ವಭೌಮ ಸಿನಿಮಾಗಳಲ್ಲೂ ಅಷ್ಟೆ. ಸಪೂರ ಸುಂದರಿ ರಚಿತಾ, ದುಂಡು ದುಂಡಗೆ ಕಾಣ್ತಾರೆ. ಆದರೆ, ಈಗ ರಚಿತಾ ಕಂಪ್ಲೀಟ್ ಚೇಂಜ್.
ಸ್ವಲ್ಪ ದಪ್ಪಗಾಗಿದ್ದ ರಚಿತಾ, 25 ದಿನಗಳಲ್ಲಿ 7 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ನಾನು ಮೊದಲು ಇದ್ದಿದ್ದೇ ಸಣ್ಣಗೆ. ಅದೇಕೋ ಒಂದ್ಸಲ, ನಾನು ದಪ್ಪಗಾದರೆ ಹೇಗೆ ಕಾಣಬಹುದು ಎನ್ನಿಸಿತು. ಡಯಟ್ ಮತ್ತು ವರ್ಕೌಟ್ ಎರಡನ್ನೂ ಬಿಟ್ಟು, ದಪ್ಪಗಾದರೆ. ಊಟ ಜಾಸ್ತಿ ಆಯ್ತು. ಮೈಕೈ ತುಂಬಿಕೊಂಡು ಚಬ್ಬಿಚಬ್ಬಿಯಾಗಿಬಿಟ್ಟೆ. ಅಯೋಗ್ಯ, ಸೀತಾರಾಮ ಕಲ್ಯಾಣದಲ್ಲಿ ಹಾಗೆಯೇ ನಟಿಸಿದೆ. ಈಗ.. ದಪ್ಪಗಾಗಿದ್ದು ಸಾಕು ಎನ್ನಿಸಿದೆ. ಮತ್ತೆ ಡಯಟ್ ಶುರುವಾಗಿದೆ.
65 ಕೆಜಿಯಿದ್ದ ನಾನು, ಮತ್ತೆ 58ಕ್ಕೆ ಇಳಿದಿದ್ದೇನೆ. ಇದು ಹೊಸ ಪ್ರಾಜೆಕ್ಟ್‍ಗಾಗಿ ನಡೆಸ್ತಾ ಇರೋ ಕಸರತ್ತೇನಲ್ಲ. ನನಗೆ ಅನ್ನಿಸಿದ್ದು ಅಷ್ಟೆ ಎಂದಿದ್ದಾರೆ ರಚಿತಾ. ರಚಿತಾ ಅವರಿಗೆ ಈಗ ಫಿಟ್‍ನೆಸ್ ಟ್ರೈನರ್ ಆಗಿರೋದು 360 ಶ್ರೀನಿವಾಸ್. ರಚಿತ ಆರೋಗ್ಯವಾಗಿದ್ದಾರೆ. ಹೀಗಾಗಿ ಸರಳ ವರ್ಕೌಟ್ ಮಾಡಿದರೆ ಸಾಕು. ಅವರು ತುಂಬಾ ಶ್ರದ್ಧೆಯಿಂದ ವರ್ಕೌಟ್ ಮಾಡಿ ತೂಕ ಇಳಿಸಿಕೊಂಡಿದ್ದಾರೆ ಎಂದು ಕ್ರೆಡಿಟ್ಟನ್ನೆಲ್ಲ ರಚಿತಾ ರಾಮ್ ಶ್ರದ್ಧೆಗೇ ಕೊಟ್ಟುಬಿಟ್ಟಿದ್ದಾರೆ 360 ಶ್ರೀನಿವಾಸ್.