` thotapuri, - chitraloka.com | Kannada Movie News, Reviews | Image

thotapuri,

  • ತೋತಾಪುರಿ.. ತೊಟ್ ಕೀಳ್ಬೇಕಷ್ಟೆ..

    neerdose combo back with thotapuri

    ತೋತಾಪುರಿ.. ಇದು ಹೊಸ ಸಿನಿಮಾದ ಹೆಸರು. ತೊಟ್ ಕೀಳ್ಬೇಕಷ್ಟೆ ಅನ್ನೋದು ಚಿತ್ರದ ಟ್ಯಾಗ್‍ಲೈನ್. ಸಿದ್ಲಿಂಗು, ನೀರ್‍ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶಕ. ನವರಸ ನಾಯಕ ಜಗ್ಗೇಶ್ ನಾಯಕ. ಶಿವಲಿಂಗ ಸುರೇಶ್ ನಿರ್ಮಾಣದ ಚಿತ್ರದಲ್ಲಿ ಜಗ್ಗೇಶ್ ಅಡುಗೆ ಭಟ್ಟನಾಗಿದ್ದಾರೆ.

    ನೀರ್‍ದೋಸೆ ನಂತರ ಜಗ್ಗೇಶ್-ವಿಜಯ್ ಪ್ರಸಾದ್ ಜೋಡಿ ಮುಂದಿನ ಸಿನಿಮಾ ಹೇಗಿರುತ್ತೆ ಅನ್ನೋ ಕುತೂಹಲ ನನಗೂ ಇತ್ತು. ಚಿತ್ರದ ಟೈಟಲ್ ಮತ್ತು ಕಥೆ ಕೇಳಿದ ಮೇಲೆ ಖುಷಿಯಾಗಿ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದೆ ಅಂತಾರೆ ಸುರೇಶ್. ಚಿತ್ರಕ್ಕೆ ಅನೂಪ್ ಸೀಳೀನ್ ಸಂಗೀತವಿದೆ.

  • ತೋತಾಪುರಿ.. ತೊಟ್ಟು ಕೀಳ್ಬೇಕು.. ತೊಟ್ಟು ಕಿತ್ತಾಯ್ತು..!

    jaggesh's thotapuri willbe in 2 parts

    ತೋತಾಪುರಿ, ಕನ್ನಡ ಚಿತ್ರರಂಗದ ಹಿಟ್ ಕಾಂಬಿನೇಷನ್ ಮತ್ತೊಮ್ಮೆ ಒಂದಾಗಿರುವ ಚಿತ್ರ. ನೀರ್‍ದೋಸೆ ನಂತರ ನಿರ್ದೇಶಕ ವಿಜಯ್ ಪ್ರಸಾದ್, ನಟ ಜಗ್ಗೇಶ್, ದತ್ತಣ್ಣ, ಸುಮನ್ ರಂಗನಾಥ್ ನಟಿಸುತ್ತಿರುವ ಸಿನಿಮಾ. ಡಾಲಿ ಧನಂಜಯ್, ಆದಿತಿ ಪ್ರಭುದೇವ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಟ್ಯಾಗ್‍ಲೈನ್ ತೊಟ್ಟು ಕೀಳ್ಬೇಕು.. ತೊಟ್ಟು ಕಿತ್ತಾಯ್ತು.

    ಅರೆರೆ.. ಒಂದ್ ಚಿತ್ರಕ್ಕೆ ಎರಡು ಟ್ಯಾಗ್‍ಲೈನ್ ಯಾಕೆ ಅಂತೀರಾ..? ಈಗ ಪ್ಲಾನ್ ಬದಲಾಗಿದೆ. ಚಿತ್ರವನ್ನು 2 ಭಾಗಗಳಲ್ಲಿ ತೆರೆಗೆ ತರುವ ಪ್ಲಾನ್ ಮಾಡಲಾಗಿದೆ. ಮೊದಲ ಭಾಗದ ಟ್ಯಾಗ್‍ಲೈನ್ ತೋತಾಪುರಿ, ತೊಟ್ಟು ಕೀಳ್ಬೇಕು. ಎರಡನೇ ಭಾಗಕ್ಕೆ ತೋತಾಪುರಿ, ತೊಟ್ಟು ಕಿತ್ತಾಯ್ತು.

    ಬಾಹುಬಲಿ, ಕೆಜಿಎಫ್ ಮಾದರಿಯಲ್ಲಿ ಎರಡು ಭಾಗದಲ್ಲಿ ಬರುತ್ತಿರುವ ಚಿತ್ರಕ್ಕೆ ಈಗಾಗಲೇ 90 ದಿನಗಳ ಚಿತ್ರೀಕರಣ ಮುಗಿದಿದೆ. ಇನ್ನೂ 60 ದಿನಗಳ ಶೂಟಿಂಗ್ ಬ್ಯಾಲೆನ್ಸ್ ಇದೆ.

  • ತೋತಾಪುರಿಗೆ ಬಜಾರ್ ಹುಡುಗಿ

    aditi prabhudeva in thotapuri

    ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ನಾಯಕಿ ಆದಿತಿ ಪ್ರಭುದೇವ್, ಜಗ್ಗೇಶ್-ವಿಜಯ್ ಪ್ರಸಾದ್ ಜೋಡಿಯ ತೋತಾಪುರಿ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಬಜಾರ್ ರಿಲೀಸ್‍ಗೂ ಮೊದಲೇ ಮತ್ತೊಂದು ದೊಡ್ಡ ಅವಕಾಶ ಆದಿತಿಯನ್ನು ಹುಡುಕಿಕೊಂಡು ಬಂದಿದೆ. ದುನಿಯಾ ವಿಜಯ್ ಜೊತೆ ಕುಸ್ತಿಯಲ್ಲಿ ನಾಯಕಿಯಾಗಿರುವ ಆದಿತಿ, ತೋತಾಪುರಿಗೂ ಬಣ್ಣ ತುಂಬಲಿದ್ದಾರೆ.

    ಸಿನಿಮಾ ನಾಯಕಿಗಾಗಿ ನಡೆದ ಅಡಿಷನ್‍ನಲ್ಲಿ ಕಾವ್ಯಾ ಶೆಟ್ಟಿ ಮತ್ತು ಆದಿತಿ ಪ್ರಭುದೇವ್ ಅಂತಿಮ ಸುತ್ತಿನಲ್ಲಿದ್ದರು. ಶುದ್ಧವಾದ ಭಾಷೆ ಮತ್ತು ಅಭಿನಯದ ಆಧಾರದ ಮೇಲೆ ಆದಿತಿ ಆಯ್ಕೆಯಾಗಲಿದ್ದಾರೆ ಎಂದಿದ್ದಾರೆ ನಿರ್ದೇಶಕ ವಿಜಯ್ ಪ್ರಸಾದ್.

    ತೋತಾಪುರಿಯಲ್ಲಿ ಆದಿತಿ, ಶಕೀಲಾ ಬಾನು ಎಂಬ ಸಂಪ್ರದಾಯಸ್ಥ ಮುಸ್ಲಿಂ ಹುಡುಗಿಯಾಗಿ ನಟಿಸಲಿದ್ದಾರೆ. ಉಡಾಳ ನಾಯಕನ ಪರಿಚಯವಾದ ಮೇಲೆ ಸಂಪೂರ್ಣ ಚೇಂಜ್ ಆಗುವ ಹುಡುಗಿಯಾಗಿ ನಟಿಸುತ್ತಿದ್ದಾರೆ. 

  • ನವರಸ ನಾಯಕನ ಜೊತೆ ಡಾಲಿ

    dhananjay shares screen with jaggesh in thotapuri

    ವಿಜಯ್ ಪ್ರಸಾದ್ ನಿರ್ದೇಶನದ ತೋತಾಪುರಿ ಚಿತ್ರದಲ್ಲಿ ಹೀರೋ ಆಗಿರುವುದು ನವರಸ ನಾಯಕ ಜಗ್ಗೇಶ್. ಸಿದ್ಲಿಂಗು, ನೀರ್‍ದೋಸೆ ನಿರ್ದೇಶಿಸಿದ್ದ ವಿಜಯ್ ಪ್ರಸಾದ್, ಮತ್ತೊಮ್ಮೆ ಜಗ್ಗೇಶ್ ಅವರ ನಾಯಕತ್ವದಲ್ಲೇ ಚಿತ್ರ ಕೈಗೆತ್ತಿಕೊಂಡಿದ್ದಾರೆ. ವಿಜಯ್ ಪ್ರಸಾದ್ ಅವರ ಫೇವರಿಟ್ ಸುಮನ್ ರಂಗನಾಥ್ ಚಿತ್ರಕ್ಕೆ ನಾಯಕಿ. ಇದೆಲ್ಲದರ ಜೊತೆಗೆ ಡಾಲಿ ಧನಂಜಯ್ ಕೂಡಾ ಇದ್ದಾರೆ.

    ತೋತಾಪುರಿ ಕಥೆ ಕೇಳಿದೆ. ಇಷ್ಟವಾಯಿತು. ವಿಜಯ್ ಪ್ರಸಾದ್ ಅವರ ಸಿದ್ಲಿಂಗು, ನೀರ್‍ದೋಸೆ ಸಿನಿಮಾ ನೋಡಿದ್ದೆ. ಇಷ್ಟವಾಗಿದ್ದವು. ಜೊತೆಗೆ ಜಗ್ಗೇಶ್ ಅವರೊಂದಿಗೆ ನಟಿಸುವ ಅವಕಾಶ. ಹೀಗಾಗಿ ಚಿತ್ರವನ್ನು ಮರುಮಾತಿಲ್ಲದೆ ಒಪ್ಪಿಕೊಂಡೆ ಅಂತಾರೆ ಧನಂಜಯ್.

    ಶೂಟಿಂಗ್ ಬಿರುಸಾಗಿ ನಡೆಯುತ್ತಿದ್ದು, ಧನಂಜಯ್ ಶೀಘ್ರದಲ್ಲೇ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

#

I Love You Movie Gallery

Rightbanner02_butterfly_inside

Yaana Movie Gallery