` odeya, - chitraloka.com | Kannada Movie News, Reviews | Image

odeya,

 • Arjun's Music And Harikrishna's Background Score For Darshan's Films

  arjun's musc and harikrishna's back ground score for odeya

  'Challenging Star' Darshan has said through his Twitter account, that Arjun will be composing music for 'Odeya' and 'Robert', while V Harikrishna who is known as the 'Re-recording King' will be doing the background music for both the films.

  V Harikrishna was the permanent music director for Darshan's films once upon a time and their combination was a huge hit. In the past few years, Arjun Janya has been roped in to compose music for 'Chakravarthy' and 'Odeya'. 'Robert' director Tharun Sudhir recently had disclosed that Arjun will be composing the music for his latest film. 

  It is being said that Darshan's fans were upset that V Harikrishna who is a permanent in Darshan's films is slowly making way for Arjun. So, after Darshan's fans expressed their displeasure, Darshan has made an arrangement, where in both Harikrishna and Arjun are being accommodated. While, Arjun will be composing music for 'Odeya' and 'Robert', Harikrishna has been given the responsibility of composing background music for both the films.

 • Darshan's New Film 'Odeya' Launched

  odeya launched

  Darshan's new film 'Odeya' which is a remake of Tamil hit 'Veeram' was launched in Mysore today morning.

  August 16th marks the birthday of Sandesh Nagaraj and the film was launched on the occasion of his birthday. Actor turned politician Ambarish was present and sounded the clap for the film.

  Earlier, the film was titled as 'Wodeyar'. However, due to various reasons, the title was changed and the film is finally titled as 'Odeya'. The film is being directed by M D Sridhar, while A V Krishna Kumar is the cameraman.

 • ಒಡೆಯ ದರ್ಶನ್ ಮತ್ತೆ ಗಜ

  odeya darshan gets gaja name yet again

  ಗಜ, ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾ. ಈಗ ಮತ್ತೊಮ್ಮೆ ಗಜನಾಗುತ್ತಿದ್ದಾರೆ ದರ್ಶನ್. ಅದೂ ಒಡೆಯ ಚಿತ್ರದಲ್ಲಿ. ನಾಲ್ವರು ತಮ್ಮಂದಿರ ಅಣ್ಣನಾಗಿ ನಟಿಸುತ್ತಿರುವ ಒಡೆಯ ಚಿತ್ರದಲ್ಲಿ ದರ್ಶನ್ ಅವರನ್ನು ಎಲ್ಲರೂ ಪ್ರೀತಿಯಿಂದ ಗಜ ಎಂದೇ ಕರೆಯುತ್ತಾರಂತೆ.

   ಅಭಿಮಾನಿಗಳು, ದರ್ಶನ್‍ರನ್ನು ಪ್ರೀತಿಯಿಂದ ಕರೆಯೋ ಹೆಸರುಗಳಲ್ಲಿ ಗಜ ಕೂಡಾ ಒಂದು. ಹೀಗಾಗಿ ದರ್ಶನ್‍ಗೆ ಮತ್ತೊಮ್ಮೆ ಗಜ ನಾಮಬಲ ಸಿಕ್ಕಿದೆ. ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾಗೆ ಎಂ.ಡಿ.ಶ್ರೀಧರ್ ನಿರ್ದೇಶನವಿದೆ.

 • ಒಡೆಯನ ಅದೊಂದು ಲುಕ್ಕಿಗೇ ಚಿತ್ತಾದ್ರು ಫ್ಯಾನ್ಸು

  odeya making video leaked

  ಯಜಮಾನ, ಕುರುಕ್ಷೇತ್ರ ಚಿತ್ರಗಳ ಸತತ ಹಿಟ್ ಕೊಟ್ಟಿರುವ ದರ್ಶನ್, ಮತ್ತೊಂದು ಭರ್ಜರಿ ಸೌಂಡಿಗೆ ರೆಡಿಯಾಗುತ್ತಿದ್ದಾರೆ. ಅದು ಒಡೆಯ ಚಿತ್ರದ ಮೂಲಕ. ವರ್ಷಾಂತ್ಯದಲ್ಲಿ ಸಿನಿಮಾ ರಿಲೀಸ್ ಸಾಧ್ಯತೆ ಇದೆ. ಅದೇನೇ ಶಿಸ್ತು ಪಾಲನೆ ಮಾಡಿದರೂ.. ಒಡೆಯ ಚಿತ್ರದ ಚಿತ್ರೀಕರಣದ ಪುಟ್ಟದೊಂದು ವಿಡಿಯೋ ಅದು  ಹೇಗೋ ಲೀಕ್ ಆಗಿದೆ.

  ಇದು ಆ ವಿಡಿಯೋದಲ್ಲಿರುವ ಚಿತ್ರ. ಮಗುವೊಂದರ ಜೊತೆ ದರ್ಶನ್ ಆಡುತ್ತಿರುವ ವಿಡಿಯೋದ ಫೋಟೋ ಇದು. ಎಂ.ಡಿ.ಶ್ರೀಧರ್ ನಿರ್ದೇಶನದ ಚಿತ್ರಕ್ಕೆ ಸಂದೇಶ್ ನಾಗರಾಜ್ ನಿರ್ಮಾಪಕ. ನೀಟಾಗಿ ಟ್ರಿಮ್ ಮಾಡಿರುವ ಗಡ್ಡ, ವೈಟ್ & ವೈಟ್‍ನಲ್ಲಿ ದರ್ಶನ್ ಕ್ಯೂಟ್ ಆಗಿದ್ದಾರೆ. ಒಡೆಯನ ಎದುರು ರಾಘವಿ ನಾಯಕಿ. ದೇವರಾಜ್ ಇನ್ನೊಂದು ಪ್ರಮುಖ ಪಾತ್ರದಲ್ಲಿದ್ದಾರೆ. 

 • ಒಡೆಯನಿಗೆ ಕೊಡವರ ಚೆಲುವೆ ರಾಘವಿ ತಿಮ್ಮಯ್ಯ ಒಡತಿ

  raghavi thimmaiah to pair opposite darshan for his next film odeya

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾಗೆ ಹೀರೋಯಿನ್ ಕನ್ನಡತಿ ಹಾಗೂ ಕೊಡವರ ಹುಡುಗಿ ಎಂದು ಹೇಳಿದ್ದ ಚಿತ್ರತಂಡ, ಈಗ ಅವರು ಯಾರು ಅನ್ನೋದನ್ನೂ ಬಹಿರಂಗಪಡಿಸಿದೆ. ರಾಘವಿ ತಿಮ್ಮಯ್ಯ ಎಂಬ ಹೆಸರಿನ ಮಾಡೆಲ್ ಒಡೆಯನ ಚೆಲುವೆ.

  ಮೂಲ ಚಿತ್ರದಲ್ಲಿ ತ್ರಿಷಾ ನಿರ್ವಹಿಸಿದ್ದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ರಾಘವಿ ತಿಮ್ಮಯ್ಯ. ಎಂ.ಡಿ. ಶ್ರೀಧರ್ ನಿರ್ದೇಶನದ ಒಡೆಯ ಚಿತ್ರದ ಶೂಟಿಂಗ್ ಬಿರುಸಿನಿಂದ ಸಾಗಿದ್ದು, ಯಜಮಾನ ಚಿತ್ರದ ಬೆನ್ನಲ್ಲೇ ತೆರೆಗೆ ಬರುವ ಸಾಧ್ಯತೆ ಇದೆ.

 • ದರ್ಶನ್ ಒಡತಿ.. ಆ ಕೊಡಗಿನ ಚೆಲುವೆ ಯಾರು..?

  darshan's odeya film shooting resumes

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಕಾಯಕಕ್ಕೆ ಮರಳುತ್ತಿದ್ದಾರೆ. ಆ್ಯಕ್ಸಿಡೆಂಟ್‍ನಲ್ಲಿ ಕೈಗೆ ಪೆಟ್ಟು ಮಾಡಿಕೊಂಡು ಗುಣಮುಖರಾಗಿದ್ದ ದರ್ಶನ್, ಯಜಮಾನ ಚಿತ್ರೀಕರಣಕ್ಕೆ ಸ್ವೀಡನ್‍ಗೆ ಹೋಗಿದ್ದರು. ಅದರ ನಡುವೆಯೇ ಅಪ್ಪಾಜಿ ಅಂಬರೀಷ್ ನಿಧನದಿಂದ ಜರ್ಝರಿತರಾಗಿದ್ದ ದರ್ಶನ್, ಮತ್ತೆ ಕಾಯಕಕ್ಕೆ ಮರಳುತ್ತಿದ್ದಾರೆ. ಡಿಸೆಂಬರ್ 10ರಿಂದ ಒಡೆಯ ಚಿತ್ರದ ಚಿತ್ರೀಕರಣದಲ್ಲಿ ದರ್ಶನ್ ಭಾಗವಹಿಸಲಿದ್ದಾರಂತೆ.

  ಡಿಸೆಂಬರ್ 10ರಿಂದ ಶೂಟಿಂಗ್ ಶುರುವಾದರೆ, ಸತತ 20 ದಿನಗಳ ಕಾಲ ಬೆಂಗಳೂರಿನಲ್ಲೇ ಶೂಟಿಂಗ್ ನಡೆಯಲಿದೆ. ದರ್ಶನ್‍ಗೆ ನಾಯಕಿಯಾಗಿ ಕೊಡಗಿನ ಸುಂದರಿಯ ಆಯ್ಕೆಯಾಗಿದೆಯಂತೆ. ಅವರ ಹೆಸರನ್ನು ಚಿತ್ರತಂಡ ಗುಟ್ಟಾಗಿಯೇ ಇಟ್ಟಿದೆ. ಶೀಘ್ರದಲ್ಲೇ ಅವರ ಹೆಸರು ಹೇಳಲಿದೆ ಚಿತ್ರತಂಡ. ಡಿಸೆಂಬರ್ 10ರಂದೇ ನಾಯಕಿ ಯಾರೆಂಬುದು ಬಹಿರಂಗವಾಗುವ ಸಾಧ್ಯತೆ ಇದೆ.

   

 • ದರ್ಶನ್‍ಗೆ ತಮ್ಮಂದಿರು ಸಿಕ್ಕರು..!

  darshan gets 4 brothers in odeya movie

  ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ತಮ್ಮಂದಿರು ಸಿಕ್ಕಿದ್ದಾರೆ. ದರ್ಶನ್‍ಗೆ ಇರೋದು ಒಬ್ಬ ತಮ್ಮ. ಅವರು ದಿನಕರ್ ತೂಗುದೀಪ್. ಹೊಸಬರು ಯಾರು.. ಎಂದು ತಲೆಗೆ ಹುಳ ಬಿಟ್ಟುಕೊಳ್ಳಬೇಡಿ. ಇದು ಒಡೆಯ ಚಿತ್ರದ ಸುದ್ದಿ.

  ಒಡೆಯ, ತಮಿಳಿನ ವೀರಂ ಚಿತ್ರದ ರೀಮೇಕ್. ಚಿತ್ರದಲ್ಲಿ ಒಡೆಯನಿಗೆ ನಾಲ್ವರು ತಮ್ಮಂದಿರುರುತ್ತಾರೆ. ಆ ನಾಲ್ವರು ತಮ್ಮಂದಿರ ಪಾತ್ರಕ್ಕೆ ಯಶಸ್, ನಿರಂಜನ್, ಪಂಕಜ್ ಹಾಗೂ ಸಮರ್ಥ್ ಆಯ್ಕೆಯಾಗಿದ್ದಾರೆ.

  ಯಶಸ್, ದರ್ಶನ್ ಅವರ ಗೆಳೆಯರ ಬಳಗದಲ್ಲಿರುವವರು. ಪಂಕಜ್, ಎಸ್.ನಾರಾಯಣ್ ಅವರ ಮಗ. ಸಮರ್ಥ್, ಸಂದೇಶ್ ನಾಗರಾಜ್ ಅವರ ತಮ್ಮನ ಮಗ. ಚಿತ್ರಕ್ಕೆ ಇನ್ನೂ ನಾಯಕಿ ಫೈನಲ್ ಆಗಿಲ್ಲ. 

  ದೇವರಾಜ್, ಚಿಕ್ಕಣ್ಣ, ರವಿಶಂಕರ್, ಸಾಧುಕೋಕಿಲ ನಟಿಸುತ್ತಿದ್ದು, ಮೈಸೂರಿನಲ್ಲೇ ಚಿತ್ರದ ಬಹುಪಾಲು ಚಿತ್ರೀಕರಣ ನಡೆಯಲಿದೆ.

 • ದರ್ಶನ್‍ಗೆ ದರ್ಶನ್ ಅವರೇ ಕೊಡ್ತಾರಾ ಫೈಟು..?

  will the month of august be darshan vs darshan

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರುಕ್ಷೇತ್ರ ಸಿನಿಮಾ, ಆಗಸ್ಟ್ 9ಕ್ಕೆ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಆಗ್ತಿದೆ. ಅದೇ ದಿನ ಸುದೀಪ್ ಅಭಿನಯದ ಪೈಲ್ವಾನ್, ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಕೂಡಾ ರಿಲೀಸ್ ಆಗುವ ಸಾಧ್ಯತೆಗಳಿವೆ. ಹೀಗೆ ಆಗಸ್ಟ್ ಸ್ಟಾರ್‍ವಾರ್‍ಗೆ ಸಾಕ್ಷಿಯಾಗಲಿದೆ ಎನ್ನುತ್ತಿರುವಾಗಲೇ, ಅದೇ ತಿಂಗಳು ಇನ್ನೂ ಒಂದು ಸ್ಟಾರ್ ವಾರ್ ಶುರುವಾಗೋ ಸುಳಿವು ಬರ್ತಾ ಇದೆ. 

  ಅಚ್ಚರಿಯೆಂಬಂತೆ ಈ ಸ್ಟಾರ್‍ವಾರ್ ಸುಳಿವು ಬರ್ತಿರೋದು ದರ್ಶನ್ ಅವರ ಇನ್ನೊಂದು ಸಿನಿಮಾದ ಕಡೆಯಿಂದ. ದರ್ಶನ್ ಅಭಿನಯದ ಒಡೆಯ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಇನ್ನೊಂದು ಹಾಡು ಬಾಕಿ ಇದೆ. ಅದನ್ನೂ ಮುಗಿಸಿ, ಆಗಸ್ಟ್ ಕೊನೆಯ ವಾರದಲ್ಲಿ ತೆರೆಗೆ ತರುವ ಆಲೋಚನೆ ಒಡೆಯ ಚಿತ್ರತಂಡಕ್ಕಿದೆ ಎನ್ನಲಾಗಿದೆ. ಹಾಗೇನಾದರೂ ಆದರೆ, ದರ್ಶನ್ ವರ್ಸಸ್ ದರ್ಶನ್ ಫೈಟ್ ನಡೆಯಲಿದೆ ಅನ್ನೋದ್ರಲ್ಲಿ ಡೌಟಿಲ್ಲ.

 • ಮಂಡ್ಯದ ನಡುವೆಯೂ ಒಡೆಯನ ಮರೆತಿಲ್ಲ ದರ್ಶನ್

  darshan did not miss odeya shooting amidst mandya election campaigning

  ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಗೆಲುವಿಗೆ ಟೊಂಕ ಕಟ್ಟಿದ್ದಾರೆ. ಇನ್ನು ಏಪ್ರಿಲ್ 18ರವರೆಗೆ ನಮ್ಮ ಪರೇಡ್ ಮಂಡ್ಯದಲ್ಲಿ ಎಂದಿದ್ದ ದರ್ಶನ್, ಸಿನಿಮಾಗಳಿಗೆ ಬ್ರೇಕ್ ಕೊಡ್ತಾರೆ ಎಂದು ಭಾವಿಸಲಾಗಿತ್ತು. ಹಾಗೇನೂ ಆಗಿಲ್ಲ. ಒಂದು ಕಡೆ ಪ್ರಚಾರ ಮಾಡುತ್ತಲೇ, ಹಳೆಯ ಕಮಿಟ್‍ಮೆಂಟ್ ಆಗಿದ್ದ ಒಡೆಯ ಚಿತ್ರದ ಶೂಟಿಂಗ್‍ನ್ನೂ ಮುಂದುವರಿಸಿದ್ದಾರೆ ದರ್ಶನ್.

  ಮೈಸೂರಿನಲ್ಲಿ ಶೂಟಿಂಗ್ ಮುಗಿಸಿ, ಹೈದರಾಬಾದ್‍ಗೆ ತೆರಳಿರುವ ದರ್ಶನ್, ಸಿನಿಮಾ ತಂಡದ ಜೊತೆಯಲ್ಲಿದ್ದಾರೆ.

  ಎಂ.ಡಿ.ಶ್ರೀಧರ್ ನಿರ್ದೇಶನದ ಚಿತ್ರದಲ್ಲಿ, ಕೊಡಗಿನ ಚೆಲುವೆ ರಾಘವಿ ನಾಯಕಿ. ತಾರಕ್, ಯಜಮಾನ ಚಿತ್ರದಂತೆ, ಈ ಚಿತ್ರದಲ್ಲೂ ದೇವರಾಜ್ ಪ್ರಮುಖ ಪಾತ್ರದಲ್ಲಿದ್ದಾರೆ. ಎಸ್.ನಾರಾಯಣ್ ಪುತ್ರ ಪಂಕಜ್, ದರ್ಶನ್ ತಮ್ಮಂದಿರಲ್ಲಿ ಒಬ್ಬನಾಗಿ ನಟಿಸಿದ್ದಾರೆ. 

 • ರಾಜ್ಯೋತ್ಸವಕ್ಕೆ ಬರ್ತಾನಂತೆ ಒಡೆಯ..!

  odeya may release for karnataka rajyotsava

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಡೆಯನಾಗಿ ಬರುತ್ತಿದ್ದಾರೆ. ಒಡೆಯ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ತಮ್ಮಂದಿರ ಜೊತೆ ಖಡಕ್ ಲುಕ್‍ನಲ್ಲಿ ನಿಂತಿರುವ ದರ್ಶನ್, ಒನ್ಸ್ ಎಗೇಯ್ನ್ ಅಭಿಮಾನಿಗಳ ಹೃದಯಕ್ಕೆ ಲಗ್ಗೆಯಿಟ್ಟಿದ್ದಾರೆ. ಎಂ.ಡಿ.ಶ್ರೀಧರ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ಹಿರಿಯಣ್ಣನ ಪಾತ್ರದಲ್ಲಿದ್ದಾರೆ. ಸಂದೇಶ್ ಬ್ಯಾನರ್‍ನ ಚಿತ್ರವಿದು. ತಮಿಳಿನ ವೀರಂ ಚಿತ್ರದ ರೀಮೇಕ್.

  ದರ್ಶನ್ ಅಭಿನಯದ ಚಿತ್ರವನ್ನು ನವೆಂಬರ್ 1ರಂದು, ರಾಜ್ಯೋತ್ಸವದ ಸ್ಪೆಷಲ್ ಆಗಿದ ತೆರೆಗೆ ತರುವ ಪ್ಲಾನ್‍ನಲ್ಲಿದ್ದಾರೆ ಸಂದೇಶ್ ನಾಗರಾಜ್. ಇದೇ ಮೊದಲ ಬಾರಿಗೆ ಅರ್ಜುನ್ ಜನ್ಯ ದರ್ಶನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಒಡೆಯ ರಿಲೀಸ್ ಆದರೆ ಈ ವರ್ಷ ದರ್ಶನ್ ಅಭಿನಯದ 3 ಚಿತ್ರಗಳು ತೆರೆ ಕಂಡಂತೆ ಆಗಲಿದೆ.

 • ಹರಿಕೃಷ್ಣ-ಅರ್ಜುನ್ ಜನ್ಯ ಇಬ್ಬರನ್ನೂ ಒಂದುಗೂಡಿಸಿದ ದರ್ಶನ್

  v harikrishna and arjun janya combination once again

  ಹರಿಕೃಷ್ಣ, ದರ್ಶನ್ ಚಿತ್ರಗಳ ಖಾಯಂ ಸಂಗೀತ ನಿರ್ದೇಶಕರೆಂದೇ ಹೆಸರಾದವರು. ಏಕೆಂದರೆ ದರ್ಶನ್ ಅವರ ಬಹುತೇಕ ಚಿತ್ರಗಳಲ್ಲಿ ಹರಿಕೃಷ್ಣ ಅವರದ್ದೇ ಮ್ಯೂಸಿಕ್. ಇನ್ನು ಅರ್ಜುನ್ ಜನ್ಯ ಕನ್ನಡದ ಮತ್ತೊಬ್ಬ ಟ್ರೆಂಡ್ ಸೆಟ್ಟರ್ ಮ್ಯೂಸಿಕ್ ಡೈರೆಕ್ಟರ್. ಈಗ ಅವರಿಬ್ಬರೂ ಒಟ್ಟಿಗೇ ಕೆಲಸ ಮಾಡ್ತಿದ್ದಾರೆ. ಆ ಎರಡೂ ಚಿತ್ರಗಳಿಗೆ ದರ್ಶನ್ ಅವರೇ ಹೀರೋ.

  ಹರಿಕೃಷ್ಣ ಮೊದಲು ಸಂಗೀತ ನಿರ್ದೇಶಕರಾಗಿದ್ದು ದರ್ಶನ್ ಬ್ಯಾನರ್ ಚಿತ್ರದ ಮೂಲಕ. ಸಂಗೀತ ನಿರ್ದೇಶಕ ಹರಿಕೃಷ್ಣ ಅವರನ್ನು ನಿರ್ದೇಶಕರನ್ನಾಗಿಸಿದ್ದು ದರ್ಶನ್. ಇನ್ನು ಅರ್ಜುನ್ ಜನ್ಯ ಈ ಹಿಂದೆ ದರ್ಶನ್ ಜೊತೆ ತಾರಕ್, ಚಕ್ರವರ್ತಿ ಚಿತ್ರಗಳಿಗೆ ಹಿಟ್ ಹಾಡು ಕೊಟ್ಟಿದ್ದವರು.

  ದರ್ಶನ್ ಅವರು ಸದ್ಯಕ್ಕೆ ಅಭಿನಯಿಸುತ್ತಿರುವ ಎರಡು ಚಿತ್ರಗಳು ರಾಬರ್ಟ್ ಮತ್ತು ಒಡೆಯ, ಎರಡೂ ಚಿತ್ರಗಳಿಗೆ ಅರ್ಜುನ್ ಜನ್ಯ ಸಂಗೀತವಿದೆ. ಆ ಎರಡು ಚಿತ್ರಗಳ ಹಿನ್ನೆಲೆ ಸಂಗೀತ ಹರಿಕೃಷ್ಣ ಅವರದ್ದು. ಇದನ್ನು ಸ್ವತಃ ದರ್ಶನ್ ಅವರೇ ಅನೌನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲ, ಹರಿಕೃಷ್ಣ ಅವರಿಗೆ ರಿ-ರೆಕಾರ್ಡಿಂಗ್ ಕಿಂಗ್ ಅನ್ನೋ ಬಿರುದನ್ನೂ ಕೊಟ್ಟಿದ್ದಾರೆ.

Ayushmanbhava Movie Gallery

Ellidhe Illitanaka Movie Gallery