` bheemasena nalamaharaja, - chitraloka.com | Kannada Movie News, Reviews | Image

bheemasena nalamaharaja,

 • ಗಾಯಕಿಯಾದಳು ನಳಮಹರಾಜನ ನಾಯಕಿ

  arohi narayan sings two songs for bheemasena nalmaharaja

  ಆರೋಹಿ ನಾರಾಯಣ್. ದೃಶ್ಯ ಚಿತ್ರದಲ್ಲಿ ರವಿಚಂದ್ರನ್ ಮಗಳ ಪಾತ್ರದಲ್ಲಿ ನಟಿಸಿ ಗಮನ ಸೆಳೆದ ಹುಡುಗಿ. ಈಗ ಭೀಮಸೇನ ನಳಮಹರಾಜ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಸಂಪ್ರದಾಯಸ್ಥ ಕುಟುಂಬದಲ್ಲಿರೋ ರೆಬಲ್ ಗುಣವುಳ್ಳ ನಾಯಕಿಯಾಗಿ ನಟಿಸುತ್ತಿದ್ದಾರೆ ಆರೋಹಿ ನಾರಾಯಣ್. ಮಕ್ಕಳ ಮೇಲೆ ವಿಪರೀತ ನಿರ್ಬಂಧ ಹೇರಿದರೆ, ಅವರು ಹೇಗೆ ಬ್ಲಾಸ್ಟ್ ಆಗುತ್ತಾರೆ ಅನ್ನೋದನ್ನ ನನ್ನ ಪಾತ್ರದ ಮೂಲಕ ಹೇಳಿದ್ದಾರೆ ಎಂದಿದ್ದಾರೆ ಆರೋಹಿ. ಆದರೆ, ವಿಷಯ ಅದಲ್ಲ, ನಾಯಕಿ ಆರೋಹಿ, ಗಾಯಕಿಯೂ ಆಗಿದ್ದಾರೆ.

  ಭೀಮಸೇನ ನಳಮಹರಾಜ ಚಿತ್ರದ ಎರಡು ಹಾಡುಗಳನ್ನು ಸ್ವತಃ ಆರೋಹಿ ನಾರಾಯಣ್ ಹಾಡಿದ್ದಾರೆ. ಅವರು ಒಳ್ಳೆಯ ಗಾಯಕಿ. ಒಳ್ಳೆಯ ಅವಕಾಶ ಸಿಕ್ಕರೆ, ಅವರು ಟಾಪ್ ಸಿಂಗರ್ ಆಗುತ್ತಾರೆ ಎಂದು ಮೆಚ್ಚುಗೆಯ ಸರ್ಟಿಫಿಕೇಟ್ ಕೊಟ್ಟಿದ್ದಾರೆ ನಿರ್ದೇಶಕ ಕಾರ್ತಿಕ್ ಸರಗೂರು.

  ಅರವಿಂದ್ ಅಯ್ಯರ್ ನಾಯಕರಾಗಿರುವ ಚಿತ್ರ ಭೀಮಸೇನ ನಳಮಹರಾಜ. ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರದಲ್ಲಿ ಆರೋಹಿ ನಾರಾಯಣ್ ಜೊತೆಗೆ ಪ್ರಿಯಾಂಕ ತಿಮ್ಮೇಶ್ ಕೂಡಾ ನಾಯಕಿಯಾಗಿ ನಟಿಸಿದ್ದಾರೆ.

 • ನಳ ನಳಮಹಾರಾಜನ ದಮಯಂತಿ ಹೇಳಿದ ಕಥೆ

  arohi narayan in bheemasena nalamaharaja

  ಆರೋಹಿ ನಾರಾಯಣ್. ದೃಶ್ಯ ಚಿತ್ರದಲ್ಲಿ ರವಿಚಂದ್ರನ್ ಮಗಳಾಗಿ ನಟಿಸಿದ್ದ ಮುದ್ದು ಹುಡುಗಿ. ಹೆಚ್ಚೂ ಕಮ್ಮಿ 3 ವರ್ಷಗಳ ನಂತರ ಮತ್ತೊಮ್ಮೆ ತೆರೆಗೆ ಬರುತ್ತಿದ್ದಾರೆ. 2 ವರ್ಷದ ಬ್ರೇಕ್, ಒಂದು ಸರ್ಜರಿಯಿಂದಾಗಿ ಚಿತ್ರರಂಗದಿಂದ ದೂರವಿದ್ದೆ ಎನ್ನವ ಆರೋಹಿ, ಭೀಮಸೇನ ನಳಮಹಾರಾಜ ಚಿತ್ರದ ನಾಯಕಿ.

  ಅಪೂರ್ವದಲ್ಲಿ ಅಪ್ಪನ ಮುದ್ದಿನ ಮಗಳಾಗಿ, ಹೆದರುವ ಹುಡುಗಿಯಾಗಿ ನಟಿಸಿದ್ದ ಅಪೂರ್ವಗೆ, ನಳಮಹಾರಾಜನಲ್ಲಿ.. ಟಾಮ್ ಬಾಯ್ ಗರ್ಲ್ ಪಾತ್ರ. ಬ್ರಾಹ್ಮಣರ ಹುಡುಗಿ, ಟಿಪಿಕಲ್ ಸೂತ್ರಗಳ ಆಚೆ ನಿಂತು ಬದುಕುವ ಧೈರ್ಯವಂತ ಹುಡುಗಿಯ ಪಾತ್ರ. ಹೀಗಾಗಿ ನನಗೂ ಇದು ಚಾಲೆಂಜ್. ನಿಜ ಜೀವನದಲ್ಲಿ ಅಪ್ಪಟ ಸಸ್ಯಾಹಾರಿಯಾದ ನಾನು, ಸಿನಿಮಾದಲ್ಲಿ ನಾನ್‍ವೆಜ್ ತಿನ್ನುವ ದೃಶ್ಯದಲ್ಲೂ ನಟಿಸಿದ್ದೇನೆ ಎಂದು ಹೇಳಿಕೊಳ್ತಾರೆ ಆರೋಹಿ.

  ಆರೋಹಿಗೆ ಇಷ್ಟವಾಗಿರೋದು ಪ್ರೊಡಕ್ಷನ್ ಹೌಸ್‍ನಲ್ಲಿ ಅವರನ್ನು ನೋಡಿಕೊಳ್ಳುತ್ತಿರುವ ಚಿತ್ರತಂಡದವರ ವರ್ತನೆ. ಹೆಣ್ಣು ಮಕ್ಕಳನ್ನು ಯಾವ ರೀತಿ ಗೌರವಿಸಬೇಕು, ಹೇಗೆ ನೋಡಿಕೊಳ್ಳಬೇಕು ಎಂದು ನನಗೆ ತೋರಿಸಿಕೊಟ್ಟ ಸಿನಿಮಾ ಇದು. ಒಂದು ದಿನವೂ ನನಗೆ ಕಿರಿಕಿರಿಯಾಗಲಿಲ್ಲ ಎಂದು ಖುಷಿಯಾಗಿ ಹೇಳಿಕೊಳ್ತಾರೆ ಆರೋಹಿ. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ, ಹೇಮಂತ್ ರಾವ್, ನಿರ್ದೇಶಕ ಕಾರ್ತಿಕ್ ಸರಗೂರು.. ಅವರ ಕನಸಿನ ಸಿನಿಮಾ ಇದು. ಹೀಗಾಗಿ ನನಗೂ ನಿರೀಕ್ಷೆ ಇದೆ ಎಂದು ಕನಸು ಬಿಚ್ಚಿಡ್ತಾರೆ ಆರೋಹಿ.

 • ನೀರೊಳಗೆ ಭೀಮಸೇನ ನಳಮಹಾರಾಜನ ಕ್ಲೈಮಾಕ್ಸ್

  under water climax shooting for bheemasena nalamaharaj

  ಭೀಮಸೇನ ನಳಮಹಾರಾಜನ ಕ್ಲೈಮಾಕ್ಸ್ ದೃಶ್ಯಗಳ ಚಿತ್ರೀಕರಣ ಮುಕ್ತಾಯವಾಗಿದೆ. ಆ ದೃಶ್ಯಗಳನ್ನು ಅಂಡರ್‍ವಾಟರ್‍ನಲ್ಲಿ ಶೂಟ್ ಮಾಡಿರೋದೇ ವಿಭಿನ್ನತೆ. ಸಾಮಾನ್ಯವಾಗಿ ನೀರಿನೊಳಗೆ ಈಜುವ  ಸೀನ್‍ಗಳನ್ನಷ್ಟೇ ಶೂಟ್ ಮಾಡ್ತಾರೆ. ಆದರೆ, ಭೀಮಸೇನನ ಕಥೆ ಹಾಗಲ್ಲ, ನೀರಿನೊಳಗೆ ಕಲಾವಿದರಿಂದ ಆಕ್ಟಿಂಗ್‍ನ್ನೂ ಮಾಡಿಸಲಾಗಿದೆ.

  `ನೀರಿನಲ್ಲಿರೋದಷ್ಟೇ ಅಲ್ಲ, ನೀರಿನೊಳಗೆ ನಟಿಸಲೂಬೇಕಿತ್ತು. ಕಣ್ಣು, ಮುಖಭಾವ, ಕೈಸನ್ನೆಗಳಲ್ಲಿ ನಟಿಸಬೇಕಿತ್ತು. ಅವು ಸ್ಪಷ್ಟವಾಗಿ ಕಾಣೋಕೆ ಬೇರೆ ವ್ಯವಸ್ಥೆ ಮಾಡಲಾಗಿತ್ತು. ಇದು ನನಗಂತೂ ಚಾಲೆಂಜಿಂಗ್' ಇದು ಪ್ರಿಯಾಂಕಾ ತಿಮ್ಮೇಶ್ ಹೇಳಿಕೊಂಡಿರುವ ಅನುಭವ.

  ಅರವಿಂದ್ ಅಯ್ಯರ್ ಮತ್ತು ಪ್ರಿಯಾಂಕಾ ತಿಮ್ಮೇಶ್ ನೀರಿನೊಳಗೆ ಅನುಭವವಾಗಲಿ ಎಂದು ಶೂಟಿಂಗ್ ಇರುವಾಗ ಬೆಳಗ್ಗೆಯೇ ನೀರಿಗೆ ಬಿದ್ದುಬಿಡ್ತಿದ್ರಂತೆ. ಚಿಕ್ಕವಳಿದ್ದಾಗಲೇ ಕಲಿತಿದ್ದ ಸ್ವಿಮ್ಮಿಂಗ್ ಹಾಗೂ ಯೋಗ ಶೂಟಿಂಗ್ ವೇಳೆ ತುಂಬಾ ಉಪಯೋಗಕ್ಕೆ ಬಂತು ಎಂದು ಹೇಳಿಕೊಂಡಿದ್ದಾರೆ ಪ್ರಿಯಾಂಕ.

 • ಭೀಮಸೇನನ ಅಡುಗೆ ರೆಡಿ

  bheemasena nalamaharaja ready for release

  ಭೀಮಸೇನ ನಳಮಹಾರಾಜ ಅಡುಗೆ ರೆಡಿ ಮಾಡಿಟ್ಟಿದ್ದಾನೆ. ಡೈನಿಂಗ್ ಟೇಬಲ್‍ಗೆ ಬರೋಕೆ ಸಿದ್ಧವಾಗಿದೆ. ಹೊಟ್ಟೆ ಹಸಿದಿರುವವರು ತಿನ್ನೋಕೆ ರೆಡಿಯಾಗಿದ್ದಾರೆ. ಅದಕ್ಕೂ ಮುನ್ನ, ಊಟದ ಸ್ಪೆಷಲ್ ಏನು ಅನ್ನೋದನ್ನ ಭೀಮಸೇನ ನಳಮಹಾರಾಜನ ತಂಡ ಹೇಳಿಕೊಂಡಿದೆ.

  ಭೀಮಸೇನ ನಳಮಹಾರಾಜ, ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ಹೇಮಂತ್ ರಾವ್ ನಿರ್ಮಾಣದ ಸಿನಿಮಾ. ಕಾರ್ತಿಕ್ ಸರಗೂರು ನಿರ್ದೇಶಿಸಿರುವ ಸಿನಿಮಾ. ಚಿತ್ರೀಕರಣ ಮುಗಿಸಿ, ತೆರೆಗೆ ಬರಲು ರೆಡಿಯಾಗಿರುವ ಚಿತ್ರಕ್ಕೆ ಅರವಿಂದ್ ಅಯ್ಯರ್ ನಾಯಕ. ಆರೋಹಿ ನಾರಾಯಣ್ ಮತ್ತು ಪ್ರಿಯಾಂಕ್ ತಿಮ್ಮೇಶ್ ನಾಯಕಿಯರು. 

  ಭೀಮಸೇನ ನಳಮಹಾರಾಜ, ತಿನ್ನುವವರು ಮತ್ತು ಬೇಯಿಸುವವರ ನಡುವಿನ ಕಥೆಯಂತೆ. ಒಬ್ಬ ಅಡುಗೆಭಟ್ಟ, ತನ್ನ ಕುಟುಂಬ ರಕ್ಷಿಸಿಕೊಳ್ಳಲು ಯಾವ ಹಂತಕ್ಕೆ ಹೋಗುತ್ತಾನೆ ಎನ್ನುವುದೇ ಚಿತ್ರದ ಕಥೆ. ಉಪ್ಪು, ಹುಳಿ, ಖಾರ, ಸಿಹಿ ಮತ್ತು ಒಗರನ್ನು ಹದವಾಗಿ ಬೆರೆಸಿರುವ ಚಿತ್ರ ಎಂದು ಹೇಳಿಕೊಳ್ತಾರೆ ನಿರ್ದೇಶಕ ಕಾರ್ತಿಕ್.

  ನಮ್ಮ ಟೀಂನಿಂದ ಒಳ್ಳೆಯ ಸಿನಿಮಾಗಳು ಬರಬೇಕು. ಈ ಚಿತ್ರಕ್ಕೆ ನಿರ್ದೇಶಕರೇ ಕಂಟೆಂಟ್ ಅನ್ನೋ ಭರವಸೆಯ ಮಾತು ಬರೋದು ರಕ್ಷಿತ್ ಶೆಟ್ಟಿ ಅವರಿಂದ.

  ಇದು ನಾನು, ರಕ್ಷಿತ್ ಹಾಗೂ ಹೇಮಂತ್ ಕಾಂಬಿನೇಷನ್‍ನ 3ನೇ ಸಿನಿಮಾ. ಕಥೆ ಮೇಲೆ ಭರವಸೆ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಗೆಲ್ಲುವ ಭರವಸೆ ಇದೆ ಅಂತಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.

  ಪಾಕ ಪ್ರವೀಣ, ಭೀಮಸೇನ ನಳಮಹಾರಾಜ ಅರವಿಂದ್ ಅಯ್ಯರ್‍ಗೆ ಚಿತ್ರದಲ್ಲಿ ಅಂಡರ್‍ವಾಟರ್‍ನಲ್ಲಿ ಚಿತ್ರೀಕರಿಸಿದ್ದು ಮರೆಯಲಾಗದ ಅನುಭವವಂತೆ.

Ayushmanbhava Movie Gallery

Ellidhe Illitanaka Movie Gallery