` bharaate, - chitraloka.com | Kannada Movie News, Reviews | Image

bharaate,

 • 'Bharaate' First Schedule In Rajasthan

  bharaate first schedule shooting in rajasthan

  Murali's new film being 'Bharaate' directed by 'Bahaddur' Chethan is all set to be launched soon. The first schedule of the film will be held in Rajasthan for 21 days.

  Chethan Kumar himself has scripted the film apart from directing it. Supreeth who had distributed many films including 'Bharjari' is the producer. Srileela is the heroine of the film.

  One of the highlights of the film is, nine actors who are known for their negative roles will be acting in the film. Arjun Janya is the music director, while Bhuvan Gowda is the cameraman.

 • ಕಬ್ಬಿನ ಜಲ್ಲೆಯ ಜ್ವಾಲೆಯಲ್ಲಿ ಶ್ರೀಮುರಳಿ ಫೈಟಿಂಗ್ ಭರಾಟೆ..

  bharaate fighting scene complete

  ರಾಜ್ಯ ಸರ್ಕಾರವನ್ನು ಕಬ್ಬಿನ ಜಲ್ಲೆಯ ಬೆಂಕಿ ಸುಡುತ್ತಿದೆ. ಸಕ್ಕರೆ ರಾಜಕೀಯಕ್ಕೆ ರೈತರು ಕಣ್ಣೀರಿಡುತ್ತಿದ್ದಾರೆ. ಕಬ್ಬು ಬೆಳೆಗಾರರು ಆಕ್ರೋಶಗೊಂಡಿದ್ದಾರೆ. ಈ ನಡುವೆಯೇ ಮಂಡ್ಯದ ಶುಗರ್ ಫ್ಯಾಕ್ಟರಿಯಲ್ಲಿ 70 ಖಳರೊಂದಿಗೆ ಶ್ರೀಮುರಳಿ ಫೈಟ್ ಮಾಡಿದ್ದಾರೆ. ಹಾಗಂತ.. ರೈತರ ಪ್ರತಿಭಟನೆಗೂ, ಶ್ರೀಮುರಳಿಗೂ ಸಂಬಂಧವೇನಿಲ್ಲ. ಇದು ಭರಾಟೆ ಚಿತ್ರದ ಫೈಟಿಂಗ್ ಸೀನ್ ಚಿತ್ರೀಕರಣ.

  ಮಂಡ್ಯದ ಶುಗರ್ ಫ್ಯಾಕ್ಟರಿಯಲ್ಲಿ 70ಕ್ಕೂ ಹೆಚ್ಚು ಖಳರೊಂದಿಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಹೊಡೆದಾಡಿದ್ದಾರೆ. ಇದೊಂದು ಸಾಹಸ ದೃಶ್ಯದ ಚಿತ್ರೀಕರಣಕ್ಕೇ 60 ಲಕ್ಷ ರೂ. ಖರ್ಚಾಗಿದೆಯಂತೆ. ಬಹದ್ದೂರ್ ಚೇತನ್ ನಿರ್ದೇಶನದ ಚಿತ್ರಕ್ಕೆ ರವಿವರ್ಮ ಸಾಹಸ ನಿರ್ದೇಶಕ. ಇದರೊಂದಿಗೆ ಭರಾಟೆ 2ನೇ ಹಂತದ ಚಿತ್ರೀಕರಣ ಮುಗಿಸಿದೆ. ಚಿತ್ರವನ್ನು ಏಪ್ರಿಲ್‍ನಲ್ಲಿ ತೆರೆಗೆ ತರುವ ಪ್ಲಾನ್‍ನಲ್ಲಿದೆ ಭರಾಟೆ ಟೀಂ. ಸುಪ್ರೀತ್ ನಿರ್ಮಾಣದ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿ.

 • ಜಸ್ಟ್ ಒಂದು ಫೈಟ್.. ಒಂದೂವರೆ ಕೋಟಿ ಬಜೆಟ್

  bharaate high budget fight scene

  ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಚೇತನ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ನಿರ್ಮಾಪಕ ಸುಪ್ರೀತ್ ಧಾರಾಳವಾಗಿ ಖರ್ಚು ಮಾಡುತ್ತಿದ್ದಾರೆ. ಎಷ್ಟರಮಟ್ಟಿಗೆಂದರೆ, ಚಿತ್ರದ ಒಂದು ಫೈಟ್ ಸೀನ್‍ಗಾಗಿ ಒಂದು ಕೋಟಿ 60 ಲಕ್ಷ ಬಜೆಟ್ ತೆಗೆದಿಟ್ಟಿದ್ದಾರೆ ಸುಪ್ರೀತ್.

  ಆ ಸೀನ್‍ಗಾಗಿ 10ರಿಂದ 15 ಅಡಿ ಎತ್ತರದ ದುರ್ಗಾಮಾತೆಯ ಪ್ರತಿಮೆಗಳನ್ನು ನಿರ್ಮಿಸಲಾಗಿದ್ದು, ಸೆಟ್ ಹಾಕಲಾಗಿದೆ. 85ಕ್ಕೂ ಹೆಚ್ಚು ಫೈಟರ್‍ಗಳು, 120 ಬಾಡಿ ಬಿಲ್ಡರ್‍ಗಳು, 400 ಜನ ಜೂನಿಯರ್ ಆರ್ಟಿಸ್ಟ್‍ಗಳಿರುವ ಸಾಹಸ ದೃಶ್ಯದ ಚಿತ್ರೀಕರಣ ಬರೋಬ್ಬರಿ 8 ದಿನ ನಡೆಯಲಿದೆ. ಸಾಹಸ ನಿರ್ದೇಶಕ ರವಿವರ್ಮ ಈ ಅದ್ಧೂರಿ ಫೈಟ್ ಸಂಯೋಜಿಸಿದ್ದಾರೆ.

  ಶ್ರೀಮುರಳಿ, ಶ್ರೀಲೀಲ, ಸಾಯಿ ಕುಮಾರ್, ರವಿಶಂಕರ್, ಅಯ್ಯಪ್ಪ ನಟಿಸಿರುವ ಚಿತ್ರವಂತೂ ಅದ್ಧೂರಿಯಾಗಿ ಮೂಡಿ ಬರುತ್ತಿದೆ.

 • ಜೋಧ್‍ಪುರದಲ್ಲಿ ಆಟೋದಲ್ಲೇ ಶ್ರೀಮುರಳಿ ಭರಾಟೆ

  bharaate team bushy shooting in rajasthan

  ಭರಾಟೆ. ಶ್ರೀಮುರಳಿ, ಶ್ರೀಲೀಲಾ ಅಭಿನಯದ ಚಿತ್ರಕ್ಕೆ ಬಹದ್ದೂರ್ ಚೇತನ್ ನಿರ್ದೇಶನವಿದೆ. ಚಿತ್ರದ ಚಿತ್ರೀಕರಣ ರಾಜಸ್ಥಾನದ ಜೋಧ್‍ಪುರದಲ್ಲಿ ನಡೆಯುತ್ತಿದೆ. ಇಡೀ ಚಿತ್ರತಂಡ ಜೋಧ್‍ಪುರ್‍ನಲ್ಲಿಯೇ ಬೀಡುಬಿಟ್ಟಿದೆ. 

  ಇದರ ಮಧ್ಯೆ ಶ್ರೀಮುರಳಿ ಸೇರಿದಂತೆ ಇಡೀ ಚಿತ್ರತಂಡ ಓಡಾಟಕ್ಕೆ ನೆಚ್ಚಿಕೊಂಡಿರುವುದು ಆಟೋ ರಿಕ್ಷಾಗಳನ್ನ. ಜೋಧ್‍ಪುರದಲ್ಲಿ ಕಾರುಗಳ ಸಂಖ್ಯೆ ಕಡಿಮೆ. ಹೀಗಾಗಿ ಒಂದಿಷ್ಟು ಆಟೋಗಳನ್ನು ಬುಕ್ ಮಾಡಿಕೊಂಡು ಇಡೀ ಚಿತ್ರತಂಡ ಆಟೋಗಳಲ್ಲಿಯೇ ಓಡಾಡುತ್ತಿದೆ.

  ಜೈಪುರದ ಬಿಸಿಲಿಗೆ ಹೊಂದಿಕೊಳ್ಳೋದು, ಬೆಂಗಳೂರಿನಿಂದ ಬಂದವರಿಗೆ ಸುಲಭದ ಮಾತಲ್ಲ. ಅಷ್ಟೊಂದು ಬಿಸಿಲು. ಆದರೂ ಚಿತ್ರೀಕರಣದ ಮಧ್ಯೆ ಬಿಸಿಲಿನತ್ತ ಗಮನ ಕೊಡೋಕೂ ಪುರುಸೊತ್ತಿಲ್ಲದಂತಾಗಿ ಹೋಗಿದೆ ಎಂದು ಹೇಳಿಕೊಂಡಿದ್ದಾರೆ ಶ್ರೀಮುರಳಿ.

 • ನನ್ನ ಹೊಟ್ಟೆ ಉರಿಯುವಂತೆ ಭರಾಟೆ ಹಿಟ್ ಆಗಬೇಕು - ದರ್ಶನ್ ಹಾರೈಕೆ

  darshan wishes sri murali in different way

  `ಸಾಮಾನ್ಯವಾಗಿ ನಾನು ಯಾರ ಚಿತ್ರವನ್ನು ನೋಡಿದರೂ ಹೊಟ್ಟೆ ಉರಿದುಕೊಳ್ಳಲ್ಲ. ಆದರೆ, ಉಗ್ರಂ ನೋಡಿದಾಗ ಹೊಟ್ಟೆ ಉರಿದಿತ್ತು. ಅದನ್ನು ಶ್ರೀಮುರಳಿಗೆ ಫೋನ್ ಮಾಡಿ ಹೇಳಿಕೊಂಡಿದ್ದಾರೆ. ಭರಾಟೆ ಚಿತ್ರವೂ ಅಷ್ಟೇ.. ನಾನು ಹೊಟ್ಟೆ ಉರಿದುಕೊಳ್ಳುವಷ್ಟು ಹಿಟ್ ಆಗಲಿ' ಭರಾಟೆ ಚಿತ್ರದ ಟ್ರೇಲರ್ ರಿಲೀಸ್ ವೇಳೆ ಚಾಲೆಂಜಿಂಗ್ ಸ್ಟಾರ್ ಇಂಥಾದ್ದೊಂದು ಮಾತು ಹೇಳಿದ್ದಾರೆ.

  ಇಂಥಾದ್ದೊಂದು ವಿಶೇಷ ಹಾರೈಕೆ ಮಾಡಿದ ದರ್ಶನ್, ಭರಾಟೆ ಚಿತ್ರದ ನಿರ್ದೇಶಕ ಚೇತನ್‍ರನ್ನು ಹೊಗಳಿದ್ದಾರೆ. ಚೇತನ್‍ರದ್ದು ಮಾತು ಕಡಿಮೆ, ಕೆಲಸ ಜಾಸ್ತಿ. ಅವರ ಸಿನಿಮಾಗಳೆಲ್ಲವೂ ಹಿಟ್ ಆಗಿವೆ. ಭರಾಟೆಯೂ ಸೂಪರ್ ಹಿಟ್ ಆಗಲಿ ಎಂದು ಹಾರೈಸಿದ್ದಾರೆ ದರ್ಶನ್.

  ಇನ್ನು ಮದಗಜ ಟೈಟಲ್ ವಿವಾದ ಕುರಿತಂತೆ ಮಾತನಾಡಿದ ದರ್ಶನ್, ಯಾರು ಮಾಡಿದರೂ ಅದು ಕನ್ನಡ ಸಿನಿಮಾ ತಾನೇ. ಇವರೇ ಮಾಡಬೇಕು ಅಂತಾ ಏನೂ ಇಲ್ಲ. ಚಿತ್ರರಂಗ ಇರೋದೇ ಹಾಗೆ ಎಂದಿದ್ದಾರೆ.

 • ರೋರಿಂಗ್ ಸ್ಟಾರ್ ಭರಾಟೆಗೆ ಚಾಲೆಂಜಿಂಗ್ ಸ್ಟಾರ್ ಪವರ್

  bharate teaser launched by darshan

  ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ಟೀಸರ್ ರಿಲೀಸ್ ಆಗಿದೆ. ಟೀಸರ್ ಬಿಡುಗಡೆ ಧಮಾಕದ ಸಂಭ್ರಮವನ್ನು ಡಬಲ್ ಮಾಡಿರೋದು ದರ್ಶನ್. ಶ್ರೀಮುರಳಿಗಾಗಿ, ತಮಗಾಗಿ ರಿಜಿಸ್ಟರ್ ಮಾಡಿಸಿದ್ದ ಮದಗಜ ಟೈಟಲ್‍ನ್ನೇ ಗಿಫ್ಟ್ ಆಗಿ ಕೊಟ್ಟ ದರ್ಶನ್, ಭರಾಟೆ ಟೀಸರ್‍ನ್ನೂ ಬಿಡುಗಡೆ ಮಾಡಿ ಸಂಭ್ರಮಿಸಿದ್ದಾರೆ. 

  ಎಲ್ಲರೂ ಜೀವಿಸುತ್ತಾರೆ, ಕೆಲವರು ಮಾತ್ರ ಅಮರರಾಗುತ್ತಾರೆ ಎಂದು ಅಂಬರೀಷ್ ಅವರಿಗೆ ಶ್ರದ್ಧಾಂಜಲಿ ಹೇಳಿಯೇ ಟೀಸರ್ ಬಿಟ್ಟಿದೆ ಭರಾಟೆ ಟೀಂ. ಮಫ್ತಿ ನಂತರ ಶ್ರೀಮುರಳಿ ಅಭಿನಯಿಸುತ್ತಿರುವ ಸಿನಿಮಾ ಭರಾಟೆ. ಭರ್ಜರಿ ನಂತರ ಚೇತನ್ ಕುಮಾರ್ ನಿರ್ದೇಶಿಸುತ್ತಿರುವ ಸಿನಿಮಾ ಭರಾಟೆ. ಸುಪ್ರಿತ್ ನಿರ್ಮಾಣದ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿ. ಮುಂದಿನ ವರ್ಷ ಬೇಸಗೆ ರಜದ ಹೊತ್ತಿಗೆ ಥಿಯೇಟರುಗಳಲ್ಲಿ ಭರಾಟೆಯ ಸದ್ದು ಮೊಳಗಲಿದೆ.

 • ಶೂಟಿಂಗ್ ಸಮಯದಲ್ಲೇ.. ಭರ್ಜರಿ ಭರಾಟೆ

  high demand for bharaate movie right

  ಭರಾಟೆ. ರೋರಿಂಗ್ ಸ್ಟಾರ್ ಶ್ರೀಮುರಳಿ, ಚೇತನ್ ಕುಮಾರ್ ಕಾಂಬಿನೇಷನ್‍ನ ಸಿನಿಮಾ. ಸಿನಿಮಾದ ಶೂಟಿಂಗ್ ಬಿರುಸಾಗಿ ನಡೆಯುತ್ತಿರುವಾಗಲೇ ಚಿತ್ರಕ್ಕೆ ಪರಭಾಷೆಗಳಿಂದ ಡಿಮ್ಯಾಂಡ್ ಶುರುವಾಗಿದೆ. ಶ್ರೀಮುರಳಿ ಚಿತ್ರಕ್ಕೆ ಹಿಂದಿಯಲ್ಲಿ ಒಳ್ಳೆಯ ಡಿಮ್ಯಾಂಡ್ ಇದೆ. ಆದರೆ, ಈ ಬಾರಿ ಹಿಂದಿಯಷ್ಟೇ ಅಲ್ಲ, ಭೋಜ್‍ಪುರಿ (ಬಿಹಾರದ ಭಾಷೆ)ಯಲ್ಲೂ ಡಿಮ್ಯಾಂಡ್ ಶುರುವಾಗಿದೆ. ಹಿಂದಿ, ಭೋಜ್‍ಪುರಿ ಜೊತೆಗೆ ಉತ್ತರ ಭಾರತದ ಹಲವು ಭಾಷೆಗಳಲ್ಲೂ ಡಬ್ಬಿಂಗ್ ರೈಟ್ಸ್‍ಗೆ ಮಾತುಕತೆ ನಡೆಯುತ್ತಿದೆ. ಜೊತೆಗೆ ನೆಟ್‍ಫ್ಲಿಕ್ಸ್, ಆಮೆಜಾನ್‍ನವರೂ ಸಿನಿಮಾ ಖರೀದಿಗೆ ತುದಿಗಾಲಲ್ಲಿ ನಿಂತಿದ್ದಾರೆ.

  ಸದ್ಯಕ್ಕೆ ಎಲ್ಲವೂ ಮಾತುಕತೆ ಹಂತದಲ್ಲಿದೆ. ಡಿಮ್ಯಾಂಡ್ ನೋಡಿ ಖುಷಿಯಾಗುತ್ತಿದೆ. ಶೀಘ್ರದಲ್ಲೇ ಎಲ್ಲವೂ ಫೈನಲ್ ಆಗಲಿದೆ ಎಂದಿದ್ದಾರೆ ಚೇತನ್. ನವೆಂಬರ್ 1ರಂದು ಚಿತ್ರದ ಟೀಸರ್ ಹೊರಬೀಳಲಿದೆ.

 • ಶ್ರೀಮುರಳಿ ಎದುರಿಗೆ ತ್ರಿಮೂರ್ತಿ ಬ್ರದರ್ಸ್ ವಿಲನ್ನುಗಳು..!

  srimurali will fight with tirmurthi brothers on

  ಭರಾಟೆ. ಶ್ರೀಮುರಳಿ ಅಭಿನಯದ ಸಿನಿಮಾ. ಬಹದ್ದೂರ್ ಚೇತನ್ ನಿರ್ದೇಶನದ ಸಿನಿಮಾ. ಮಫ್ತಿ ನಂತರ ಶ್ರೀಮುರಳಿ ಅಭಿನಯಿಸುತ್ತಿರುವ ಚಿತ್ರ. ಈಗಾಗಲೇ ಶೇ.50ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇದೇ ತಿಂಗಳು 11ನೇ ತಾರೀಕಿನಿಂದ ಕೊನೆಯ ಹಂತದ ಚಿತ್ರೀಕರಣಕ್ಕೆ ಮುಂದಾಗಿದೆ. ಈ ಹಂತದಲ್ಲಿಯೇ ಚಿತ್ರತಂಡಕ್ಕೆ ತ್ರಿಮೂರ್ತಿ ವಿಲನ್ ಸೋದರರು ಎಂಟ್ರಿಯಾಗುತ್ತಿದ್ದಾರೆ.

  ಅವರು ಬೇರಿನ್ಯಾರೂ ಅಲ್ಲ. ಸಾಯಿಕುಮಾರ್.. ರವಿಶಂಕರ್ ಮತ್ತು ಅಯ್ಯಪ್ಪ. ಚಿತ್ರದ ಕಥೆ ಮತ್ತು ಪಾತ್ರಗಳನ್ನು ಕೇಳಿ ಈಗಾಗಲೇ ರವಿಶಂಕರ್ ಮತ್ತು ಅಯ್ಯಪ್ಪ ಯೆಸ್ ಎಂದಿದ್ದಾರೆ. ಬಾಕಿ ಇರುವುದು ಸಾಯಿಕುಮಾರ್. 

  ಚಿತ್ರದ ಕಥೆ ಕೇಳಿ ಸಾಯಿಕುಮಾರ್ ಥ್ರಿಲ್ಲಾಗಿದ್ದಾರೆ. ಸೋದರರ ಜೊತೆ ನಟಿಸುವ ವಿಷಯಕ್ಕೂ ಎಕ್ಸೈಟ್ ಆಗಿದ್ದಾರೆ. ಆದರೆ ಡೇಟ್ಸ್ ಪ್ರಾಬ್ಲಂ ಹಿನ್ನೆಲೆಯಲ್ಲಿ ಇನ್ನೂ ಖಚಿತಪಡಿಸಿಲ್ಲ. ಡೇಟ್ಸ್ ಹೊಂದಿಸಿಕೊಂಡ ನಂತರ ಅವರು ಓಕೆ ಎನ್ನುವ ಚಾನ್ಸ್ ಇದೆ ಎಂದಿದ್ದಾರೆ ನಿರ್ದೇಶಕ ಚೇತನ್ ಕುಮಾರ್.

 • ಶ್ರೀಮುರಳಿ ಭರಾಟೆಗೆ ಅಗ್ನಿ ಕಿಕ್ಕು..!

  saikumar joins srimurali's bharate

  ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದಲ್ಲಿ ಸಾಯಿ ಬ್ರದರ್ಸ್ ಒಂದಾಗುತ್ತಿದ್ದಾರೆ ಎಂಬ ಸುದ್ದಿ ಗೊತ್ತಿರೋದೆ. ಆದರೆ, ಸಾಯಿಕುಮಾರ್ ಡೇಟ್ಸ್ ಹೊಂದಿಸಿಕೊಳ್ಳಲು ಸಮಯ ಕೇಳಿದ್ದಾರೆ ಎನ್ನಲಾಗಿತ್ತು. ಈಗ ಸಾಯಿಕುಮಾರ್ ಡೇಟ್ಸ್ ಹೊಂದಾಣಿಕೆ ಮಾಡಿಕೊಂಡು ಭರಾಟೆಯ ಬಿಸಿ ಹೆಚ್ಚಿಸಿದ್ದಾರೆ.

  ಭರಾಟೆ ಚಿತ್ರದಲ್ಲಿ ಸಾಯಿಕುಮಾರ್ ಸೋದರರಾದ ರವಿಶಂಕರ್ ಹಾಗೂ ಅಯ್ಯಪ್ಪ ಕೂಡಾ ನಟಿಸುತ್ತಿದ್ದಾರೆ. ಸು ಪ್ರೀತ್ ನಿರ್ಮಾಣದ ಭರಾಟೆ ಚಿತ್ರಕ್ಕೆ ಶ್ರೀಲೀಲ ನಾಯಕಿ. ಚೇತನ್ ನಿರ್ದೇಶನದ ಭರಾಟೆ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

Chemistry Of Kariyappa Movie Gallery

BellBottom Movie Gallery