ಮೈಯ್ಯೆಲ್ಲ ಕಪ್ಪು ಕಪ್ಪು.. ಕಣ್ಣಲ್ಲೇನೋ ಬಯ.. ಕೆದರಿದ ಕೂದಲು.. ನೋಡಿದ್ರೆ, ಇದು ಡಿಂಪಲ್ ಕ್ವೀನ್ ರಚಿತಾನಾ ಎನ್ನಬೇಕು..? ಹಾಗಿದೆ ಲುಕ್ಕು. ಇದು ಏಪ್ರಿಲ್ ಡಿಸೋಜಾ ಚಿತ್ರದಲ್ಲಿ ರಚಿತಾ ರಾಮ್ ಕಾಣಿಸಿಕೊಳ್ಳುತ್ತಿರುವ ಅವತಾರ. ನಾಯಕಿ ಪ್ರಧಾನ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ ಎಂದು ರಚಿತಾ ಹೇಳಿಕೊಂಡಿದ್ದು ನೆನಪಿದೆ ತಾನೇ.. ಆ ಚಿತ್ರವೇ ಇದು, ಏಪ್ರಿಲ್ ಡಿಸೋಜಾ.
ಇದು ಸಸ್ಪೆನ್ಸ್ ಥ್ರಿಲ್ಲರ್. ಚಿತ್ರದಲ್ಲಿ ರಚಿತಾ ಪಾತ್ರ, ಏಪ್ರಿಲ್‍ನಲ್ಲಿ 2ನೇ ಬಾರಿಗೆ ಬದುಕುವ ಚಾನ್ಸ್ ಪಡೆಯುತ್ತೆ. ಹಾಗಾದರೆ, ಅವರು ಸತ್ತು ಹೋಗಿರ್ತಾರಾ..? ಸುಮ್ ಸುಮ್ನೆ ಪ್ರಶ್ನೆ ಕೇಳ್ಬೇಡಿ ಮತ್ತೆ. ಅದೇ ಸಿನಿಮಾ ಸಸ್ಪೆನ್ಸ್. ಏಪ್ರಿಲ್ ಅಂದ್ರೆ, ವಸಂತ ಮಾಸದ 2ನೇ ತಿಂಗಳು. ಹೀಗಾಗಿ ಚಿತ್ರ ಮತ್ತು ಪಾತ್ರಕ್ಕೆ ಏಪ್ರಿಲ್ ಡಿಸೋಜಾ ಎಂದು ಹೆಸರಿಟ್ಟಿದ್ದೇವೆ. ಡಿಸೋಜ ಎನ್ನುವುದು ಪುರುಷನ ಹೆಸರಲ್ಲವಾ..? ಪ್ರಶ್ನೆಗೆ ಉತ್ತರ ಈಗಲ್ಲ.
ಇದು ಸತ್ಯ ರಾಯುಲು ಎಂಬುವವರು ನಿರ್ದೇಶಿಸುತ್ತಿರುವ ಸಿನಿಮಾ. ಯಾವತ್ತೋ ರೀಡರ್ಸ್ ಡೈಜೆಸ್ಟ್‍ನಲ್ಲಿ ಓದಿದ್ದ ಕಥೆ, ಈಗ ಸಿನಿಮಾ ರೂಪಕ್ಕಿಳಿದಿದೆ. ಚಿತ್ರದ ನಿರ್ಮಾಪಕರು ನಾರಾಯಣ್ ಬಾಬು.
Related Articles :-
Rachita Ram's next Film is 'April'