` diganth manchale, - chitraloka.com | Kannada Movie News, Reviews | Image

diganth manchale,

 • 25 ಪ್ರೇಮಿಗಳ ಪ್ರೇಮಕಥೆ ನೋಡಿದಿರಾ..?

  katheyondhu shuruvagidhe

  ಕಥೆಯೊಂದು ಶುರುವಾಗಿದೆ ಚಿತ್ರ ವಿದೇಶಗಳಲ್ಲೊಂದು ಸುತ್ತು ಪ್ರಯಾಣ ಮುಗಿಸಿ, ಕರ್ನಾಟಕಕ್ಕೆ ಬಂದಿದೆ. ನಾಳೆ (ಆಗಸ್ಟ್ 2) ಚಿತ್ರದ ಪ್ರೀಮಿಯರ್ ಶೋ ಬೆಂಗಳೂರಿನ ಜಿಟಿ ಮಾಲ್‍ನಲ್ಲಿ ಪ್ರೀಮಿಯರ್ ಶೋ ಇದೆ. ಈ ಪ್ರೀಮಿಯರ್ ಶೋ ಪ್ರೇಮಿಗಳಿಗಾಗಿ ಎಂದು ಷರತ್ತು ಹಾಕಿತ್ತು ಚಿತ್ರತಂಡ. ಸಾವಿರಾರು ಮಂದಿ ಪ್ರೇಮಿಗಳು ತಮ್ಮ ತಮ್ಮ ಲವ್‍ಸ್ಟೋರಿಗಳನ್ನು ವಿಡಿಯೋ ಮಾಡಿ ಕಳಿಸಿದ್ದಾರೆ. ಹಾಗೆ ಕಳುಹಿಸಿದವರಲ್ಲಿ 25 ಪ್ರೇಮಜೋಡಿಯನ್ನು ಚಿತ್ರತಂಡ ಆಯ್ಕೆ ಮಾಡಿದೆ.

  ಅಮೆರಿಕ, ಇಂಗ್ಲೆಂಡ್, ಜರ್ಮನಿ, ಆಸ್ಟ್ರೇಲಿಯ ಸೇರಿದಂತೆ ವಿವಿಧ ದೇಶಗಳಲ್ಲಿ 11 ಪ್ರೀಮಿಯರ್ ಶೋ ಮುಗಿಸಿ ಬಂದಿರುವ ಚಿತ್ರತಂಡ ನಾಳೆ ಬೆಂಗಳೂರಿನಲ್ಲಿ ಪ್ರೀಮಿಯರ್ ಶೋ ಇಟ್ಟುಕೊಂಡಿದೆ. ಹೀಗೆ ವಿಭಿನ್ನ ವಯೋಮಾನದ ಜೋಡಿಗಳನ್ನು ಆಯ್ಕೆ ಮಾಡಿಕೊಳ್ಳೋಕೆ ಕಾರಣ, ಚಿತ್ರದ ಕಥೆ.

  ಚಿತ್ರದಲ್ಲಿ ದಿಗಂತ್, ಪೂಜಾ ದೇವರಿಯಾ, ಅರುಣಾ ಬಾಲರಾಜ್, ಬಾಬು ಹಿರಣ್ಣಯ್ಯ ಸೇರಿದಂತೆ ನಾಲ್ಕು ವಯೋಮಾನದ ಪ್ರೇಮಜೋಡಿಗಳ ಕಥೆಯಿದೆ. ಹೀಗಾಗಿ.. ಇದು ಪ್ರೇಮಿಗಳಿಗಾಗಿ.. ಪ್ರೀತಿಸುವವರಿಗಾಗಿ.. ವಯಸ್ಸು.. ಎಷ್ಟೇ ಇರಲಿ.. ಪ್ರೀತಿ ಮಾಡ್ತಿರೋದು ಮುಖ್ಯ.

 • Katheyondu Shuruvagide' Premiered In England And America

  katheyondhu shuruvagidhe premeierd abroad

  Diganth starrer 'Katheyondu Shuruvagide' is all set to hit the screens on the 03rd of August across Karnataka. Meanwhile, the film has been premiered in England, America, Australia and Germany and the film has got good response from premier shows.

  'Katheyondu Shuruvagide' stars Diganth, Pooja Deveriya, Babu Hirannaiah, Aruna Balaji, Ashwin, Shreya and others in prominent roles. The film is being scripted and directed by Senna Hegde.  The film is  produced by Pushkar and Rakshith Shetty jointly.

  'Katheryondu Shuruvagide' is a travel story featuring three generations prominently. The film revolves around three couples of different age group and background. The film has been shot in Bangalore, Mangalore, Pondicherry and other places.

 • ಐಂದ್ರಿತಾ ರೇ-ದಿಗಂತ್ ಮದುವೆಗೆ ಮುಹೂರ್ತ ಫಿಕ್ಸ್

  aindritha diganths marriage date fixed

  ಐಂದ್ರಿತಾ ರೇ ಮತ್ತು ದಿಗಂತ್ ಸ್ಯಾಂಡಲ್‍ವುಡ್‍ನ ಪ್ರಣಯದ ಪಕ್ಷಿಗಳು ಎನ್ನುವುದು ಗುಟ್ಟೇನಲ್ಲ. ಇತ್ತೀಚೆಗೆ ಅದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದ ಮನಸಾರೆಯ ಜೋಡಿ ಮದುವೆಗೆ ಸಿದ್ಧವಾಗಿದೆ. ಇದೇ ಡಿಸೆಂಬರ್ 11 ಮತ್ತು 12ರಂದು ಐಂದ್ರಿತಾ ಮತ್ತು ದಿಗಂತ್ ಸಪ್ತಪದಿ ತುಳಿಯುತ್ತಿದ್ದಾರೆ.

  ಇತ್ತೀಚೆಗೆ ಎರಡೂ ಮನೆಯವರು ಒಟ್ಟಿಗೇ ಸೇರಿ, ಎರಡೂ ಮನೆಯವರ ಸಮ್ಮುಖದಲ್ಲಿ ಒಂಟಿ ಕಾಲಿನ ಮೇಲೆ ಕುಳಿತು ಐಂದ್ರಿತಾಗೆ ದಿಗಂತ್ ಪ್ರಪೋಸ್ ಮಾಡಿದ್ರಂತೆ. ಅದು ಎಂಗೇಜ್‍ಮೆಂಟ್. ಇನ್ನು ಡಿಸೆಂಬರ್ 11,12ಕ್ಕೆ ಮದುವೆ ಎಂದು ತಿಳಿಸಿದ್ದಾರೆ ಐಂದ್ರಿತಾ.

  ಸದ್ಯಕ್ಕೆ ಬ್ಯಾಚುಲರ್ ಪಟ್ಟ ಕಳೆದುಕೊಳ್ತಿರೋ ದಿಗಂತ್, ತಮ್ಮ ಸ್ನೇಹಿತರ ಗ್ಯಾಂಗ್ ಜೊತೆ ಶ್ರೀಲಂಕಾದಲ್ಲಿ ಬ್ಯಾಚುಲರ್ ಪಾರ್ಟಿ ಮಾಡುತ್ತಿದ್ದಾರಂತೆ. 2009ರಲ್ಲಿ ಮನಸಾರೆ ಚಿತ್ರದಲ್ಲಿ ಪರಿಚಯವಾಯ್ತು. ಪ್ರೀತಿಯೂ ಶುರುವಾಯ್ತು ಎಂದು ಹೇಳಿಕೊಂಡಿರೋ ಐಂದ್ರಿತಾ, ಬರೋಬ್ಬರಿ 9 ವರ್ಷದ ಪ್ರೀತಿಯ ನಂತರ ಮದುವೆಯಾಗುತ್ತಿರುವುದು ಖುಷಿಯ ವಿಚಾರ ಎಂದಿದ್ದಾರೆ.

  ಡಿಸೆಂಬರ್ 11ಕ್ಕೆ ಹರಿಶಿಣ ಶಾಸ್ತ್ರ, 12ಕ್ಕೆ ಮದುವೆ. ಅದೇ ದಿನ ಚಿತ್ರರಂಗದವರ ಜೊತೆ ಒಂದು ಪಾರ್ಟಿ. ಅದಕ್ಕೂ ಮೊದಲು  ಕೆಲವು ಅನಾಥಾಶ್ರಮಗಳಿಗೆ ಭೇಟಿ ನೀಡಿ, ಅವರೊಂದಿಗೆ ಸಂಭ್ರಮ ಹಂಚಿಕೊಳ್ಳುವುದು ಸದ್ಯದ ಪ್ಲಾನ್. ಹೊಸ ಜೋಡಿಗೆ ಶುಭವಾಗಲಿ.

I Love You Movie Gallery

Rightbanner02_butterfly_inside

One Way Movie Gallery