` kcc 2, - chitraloka.com | Kannada Movie News, Reviews | Image

kcc 2,

 • ಇದು ಸೆಹ್ವಾಗ್ ಕೋಟೆ ಕಣೋ.. 

  sehwag speaks kannada

  ಇದು ನನ್ನೂರು. ಚಿನ್ನಸ್ವಾಮಿ ಸ್ಟೇಡಿಯಂಗಿಳಿದು ಬ್ಯಾಟ್ ಹಿಡಿದ್ರೆ, ಫೋರ್, ಸಿಕ್ಸ್ ಸುರಿಮಳೆ ಆಗುತ್ತೆ. ಇದು ಸೆಹ್ವಾಗ್ ಕೋಟೆ ಕಣೋ..

  ಆರ್ಮುಗಂ ಸ್ಟೈಲಲ್ಲಿ ಸೆಹ್ವಾಗ್ ಅಬ್ಬರಿಸುತ್ತಿದ್ದರೆ, ಕೆಸಿಸಿ ಸುದ್ದಿಗೋಷ್ಟಿಯಲ್ಲಿದ್ದರ ಮುಖದಲ್ಲೆಲ್ಲ ನಗುವೋ ನಗು. ಕೆಸಿಸಿ ಟೂರ್ನಿಯಲ್ಲಿ ಈ ಬಾರಿ ಕನ್ನಡ ಸಿನಿಮಾ ನಟರೊಂದಿಗೆ ಸೆಹ್ವಾಗ್ ಕೂಡಾ ಪಾಲ್ಗೊಳ್ಳುತ್ತಿದ್ದಾರೆ.

  ನಾನು ಕನ್ನಡ ಸಿನಿಮಾ ನೋಡಿಲ್ಲ. ಆದರೆ ಸುದೀಪ್ ಅಭಿನಯದ ಮಕ್ಕಿ (ಈಗ ಚಿತ್ರದ ಹಿಂದಿ ವರ್ಷನ್) ನೋಡಿದ್ದೇನೆ. ಅದುವರೆಗೆ ಸುದೀಪ್ ಒಬ್ಬ ಸೂಪರ್ ಸ್ಟಾರ್ ಎನ್ನುವುದೇ ನನಗೆ ಗೊತ್ತಿರಲಿಲ್ಲ. ಅದಾದ ಮೇಲೆ ಪರಿಚಯವಾಯ್ತು. ಈಗ ಇಲ್ಲಿಗೆ ತಂದಿಟ್ಟಿದೆ. ಕನ್ನಡ ಕಲಿತುಕೊಳ್ಳುವ ಆಸಕ್ತಿಯೂ ಇದೆ ಎಂದರು ಸೆಹ್ವಾಗ್. ಭಾಷೆ ಕಲಿಯುವ ವಿಚಾರದಲ್ಲಿ ಸೆಹ್ವಾಗ್‍ಗೆ ಮೊದಲಿನಿಂದಲೂ ಆಸಕ್ತಿ ಇರುವುದು ಗುಟ್ಟಿನ ವಿಷಯವೇನಲ್ಲ.

  ದ್ರಾವಿಡ್, ಕುಂಬ್ಳೆಯವರಿಂದ ಕನ್ನಡದ ಪರಿಚಯವಿದೆ. ಅವರು ಕನ್ನಡದಲ್ಲಿ ಮಾತನಾಡಿಕೊಳ್ಳೋದನ್ನು ಕೇಳಿದ್ದೇನೆ. ಸ್ವಲ್ಪ ಸ್ವಲ್ಪ ಅರ್ಥವಾಗುತ್ತೆ. ಮಾತನಾಡೋದು ಕಷ್ಟ ಎಂದು ಕನ್ನಡದ ಕಥೆ ಹೇಳಿಕೊಂಡರು ಸೆಹ್ವಾಗ್.

  ಮುಂದೊಂದು ದಿನ ನಾನು ಕನ್ನಡ ಸಿನಿಮಾ ನಿರ್ಮಿಸಿದರೂ ಅಚ್ಚರಿಯಿಲ್ಲ ಎಂದಿದ್ದಾರೆ ಸೆಹ್ವಾಗ್. 

 • ಕನ್ನಡ ಚಿತ್ರರಂಗದ ಕ್ರಿಕೆಟ್‍ಗೆ ದಿಗ್ಗಜರ ಎಂಟ್ರಿ

  kcc 2 pressmeet

  ವೀರೇಂದ್ರ ಸೆಹ್ವಾಗ್, ತಿಲಕರತ್ನೆ ದಿಲ್ಷಾನ್, ಹರ್ಷಲ್ ಗಿಬ್ಸ್, ಒವೈಸ್ ಷಾ, ಗಿಲ್‍ಕ್ರಿಸ್ಟ್, ಲ್ಯಾನ್ಸ್ ಕ್ಲೂಸ್ನರ್.. ಅವರೊಂದಿಗೆ ವೇದಿಕೆಯಲ್ಲಿ ಸಿನಿಮಾ ನಟರು. ಕರ್ನಾಟಕ ಚಲನಚಿತ್ರ ಕಪ್ ಟಿ20 ಲೀಗ್‍ನ 2ನೇ ಆವೃತ್ತಿಯ ಕ್ಷಣಗಳು ಆರಂಭವಾಗಿದ್ದು ಹೀಗೆ. ಈ ಬಾರಿಯ ಲೀಗ್‍ಗೆ ಅಂತಾರಾಷ್ಟ್ರೀಯ ಖ್ಯಾತಿಯ ಕ್ರಿಕೆಟಿಗರು ಬಂದಿರುವುದು ವಿಶೇಷ. ಚಿನ್ನಸ್ವಾಮಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ಸಂಭ್ರಮ ಹಂಚಿಕೊಂಡಿದ್ದು ನಟ ಸುದೀಪ್.

  ಇತಿಹಾಸ ಸೃಷ್ಟಿಸುತ್ತೇವೆ ಎಂದು ಹೊರಟವರು ಇತಿಹಾಸ ಸೃಷ್ಟಿಸುವುದಿಲ್ಲ. ನಾನು ಸುಮ್ಮನೆ ಆರಂಭಿಸಿದೆ. ಈಗ ಎಲ್ಲವೂ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಈ ಲೀಗ್ ಯಶಸ್ಸಿಗೆ ಪ್ರತಿಯೊಬ್ಬರ ಬೆಂಬಲ, ಪ್ರೋತ್ಸಾಹ ಇದೆ. ಶಿವರಾಜ್‍ಕುಮಾರ್ ಅಂತೂ ಸಂಪೂರ್ಣ ಸಪೋರ್ಟ್ ಮಾಡುತ್ತಿದ್ದಾರೆ. ಪುನೀತ್, ಉಪೇಂದ್ರ, ಯಶ್, ಗಣೇಶ್ ಎಲ್ಲರ ಸಹಕಾರವೂ ಇದೆ. ಈ ಮೂಲಕ ಕೆಸಿಸಿ(ಕರ್ನಾಟಕ ಚಲನಚಿತ್ರ ಕಪ್)ಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಬೇಕು. ಈ ಟೂರ್ನಿಗೆ ದಿಗ್ಗಜ ಕ್ರಿಕೆಟಿಗರನ್ನು ಆಹ್ವಾನಿಸಿದರೆ ಹೇಗೆ ಎನ್ನುವ ಆಲೋಚನೆ ಬಂತು. ಕೇಳಿದೊಡನೆ ಎಲ್ಲರೂ ಒಪ್ಪಿಕೊಂಡರು ಎಂದು ಹೇಳಿಕೊಂಡವರು ಸುದೀಪ್.

  ನಮಸ್ಕಾರ ಬೆಂಗಳೂರು ಎಂದು ಕನ್ನಡದಲ್ಲಿಯೇ ಮಾತು ಆರಂಭಿಸಿದ ಸೆಹ್ವಾಗ್, ಕನ್ನಡ ಚಿತ್ರರಂಗದ ಕುರಿತು ಸಾಕಷ್ಟು ಕೇಳಿದ್ದೇನೆ. ನನ್ನ ಮಕ್ಕಳೂ ಅಷ್ಟೆ, ದಕ್ಷಿಣ ಭಾರತದ ಸಿನಿಮಾಗಳನ್ನೇ ಹೆಚ್ಚು ನೋಡುತ್ತಾರೆ ಎಂದರು.

  ಸಿನಿಮಾ ನಟರ ಜೊತೆ ಕ್ರಿಕೆಟ್ ಆಡುವುದು ವಿಶೇಷ ಅನುಭವ. ಈ ಹಿಂದೆ ಬಾಲಿವುಡ್ ನಟರೊಂದಿಗೆ ಒಂದು ಮ್ಯಾಚ್ ಆಡಿದ್ದೆ. ಈಗ ಕೆಸಿಸಿ ಲೀಗ್‍ನಲ್ಲಿ ಆಡಲಿದ್ದೇನೆ ಎಂದು ಸಂತಸ ಹಂಚಿಕೊಂಡವರು ವೀರು.

 • ಕೆಸಿಸಿ : ಅಪ್ಪು, ಶಿವಣ್ಣ, ಯಶ್ V/S ಕಿಚ್ಚ, ಉಪ್ಪಿ, ಗಣೇಶ್

  kcc tournament will commence on sep

  ಕೆಸಿಸಿ ಟೂರ್ನಮೆಂಟ್ ಅಂದ್ರೆ ಕರ್ನಾಟಕ ಚಲನಚಿತ್ರ ಕಪ್ ಟೂರ್ನಿಯ 2ನೇ ಸೀಸನ್ ಶುರುವಾಗಿದೆ. ಈ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟಿಗರೂ ಪಾಲ್ಗೊಳ್ಳುತ್ತಿರುವ ಟೂರ್ನಿಯಲ್ಲಿ ಎ ಮತ್ತು ಬಿ ತಂಡಗಳಿವೆ. ಎ ಗುಂಪಿನಲ್ಲಿ ಶಿವರಾಜ್‍ಕುಮಾರ್ ಅವರ ವಿಜಯನಗರ ಪೇಟ್ರಿಯಾಟ್ಸ್, ಪುನೀತ್ ರಾಜ್‍ಕುಮಾರ್ ಅವರ ಗಂಗಾ ವಾರಿಯರ್ಸ್ ಹಾUಗೂ ಯಶ್ ಅವರ ರಾಷ್ಟ್ರಕೂಟ ಪ್ಯಾಂಥರ್ಸ್ ಎ ಗುಂಪಿನಲ್ಲಿವೆ.

  ಬಿ ಗುಂಪಿನಲ್ಲಿ ಸುದೀಪ್ ಅವರ ಕದಂಬ ಲಯನ್ಸ್, ಉಪೇಂದ್ರ ಅವರ ಹೊಯ್ಸಳ ಈಗಲ್ಸ್ ಹಾಗೂ ಗಣೇಶ್ ಅವರ ಒಡೆಯರ್ ಚಾರ್ಜರ್ಸ್ ತಂಡಗಳು ಸೆಣಸಲಿವೆ.

  ಕಳೆದ ಸೀಸನ್‍ನಲ್ಲಿ ಶಿವಣ್ಣ ನೇತೃತ್ವದ ಟೀಂ ಚಾಂಪಿಯನ್ ಆಗಿತ್ತು. ಈ ಬಾರಿ ಉಪ್ಪಿ ಹಾಗೂ ಗಣೇಶ್ ಟೀಂಗಳು ಹೊಸ ಎಂಟ್ರಿ. ಪ್ರತಿ ಗುಂಪಿನಲ್ಲಿ ಅಗ್ರ ಸ್ಥಾನ ಗಳಿಸಿದ ತಂಡ ಫೈನಲ್ ಪ್ರವೇಶಿಸಲಿದೆ. ಸೆಪ್ಟೆಂಬರ್ 8ರಂದು ಟೂರ್ನಿ ಶುರುವಾಗಲಿದೆ.

 • ಕೆಸಿಸಿ ಕಪ್ - ಗಣೇಶ್ ಟೀಂ ಚಾಂಪಿಯನ್

  ganesh's team ins kcc2

  ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ ಒಡೆಯರ್ ಚಾರ್ಜರ್ಸ್ ತಂಡ, ಈ ಬಾರಿಯ ಕೆಸಿಸಿ (ಕರ್ನಾಟಕ ಚಲನಚಿತ್ರ ಕಪ್) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್‍ನಲ್ಲಿ ಯಶ್ ನಾಯಕತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡದ ವಿರುದ್ಧ 6 ವಿಕೆಟ್‍ಗಳ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಒಡೆಯರ್ಸ್ ತಂಡ, 123 ರನ್‍ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ್ದ ಗಣೇಶ್ ಟೀಂ, 10 ಓವರ್‍ಗೆ 4 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿ ಗೆಲುವಿನ ನಗೆ ಬೀರಿತು.

  ಒಡೆಯರ್ ತಂಡದ ಪರ ತಿಲಕರತ್ನೆ ದಿಲ್ಷಾನ್ 68 (31 ಎಸೆತ) ರನ್‍ಗಳಿಸಿದರಷ್ಟೇ ಅಲ್ಲ, ಬೌಲಿಂಗ್‍ನಲ್ಲೂ ಮಿಂಚಿ ಕೇವಲ 1 ರನ್ ನೀಡಿ, 3 ವಿಕೆಟ್ ಕಬಳಿಸಿದರು. ಇದರ ಜೊತೆ ಮ್ಯಾಚ್‍ನ್ನು ಕೊನೆಯ ಗೆಲ್ಲಿಸಿದ್ದು ರಿತೇಶ್ ಭಟ್ಕಳ್. ಕೊನೆಯ ಎಸೆತದಲ್ಲಿ ಗೆಲುವಿಗೆ 2 ರನ್ ಬೇಕಿದ್ದಾಗ, ಸಿಕ್ಸರ್ ಸಿಡಿಸಿದ ರಿತೇಶ್, ಗಣೇಶ್ ಅವರ ಒಡೆಯರ್ ಚಾರ್ಜರ್ಸ್‍ಗೆ ಗೆಲುವು ದೊರಕಿಸಿಕೊಟ್ಟರು.

  ರಾಷ್ಟ್ರಕೂಟ ಪ್ಯಾಂಥರ್ಸ್ ಪರ ಒವೈಸ್ ಶಾ 41 (11 ಎಸೆತ) ಗಳಿಸಿ ಮಿಂಚಿದರು.

 • ಕೆಸಿಸಿ ಕಪ್ ಟೂರ್ನಿ. ಸೋಮವಾರದಿಂದ ಟಿಕೆಟ್ ಸಿಗುತ್ತೆ

  cc 2 turnament tickets available

  ಕಿಚ್ಚ ಸುದೀಪ್ ಬಹಳ ಅಸ್ಥೆ ವಹಿಸಿ ಆರಂಭಿಸಿದ ಕ್ರಿಕೆಟ್ ಟೂರ್ನಿ ಇದು. ಚಿತ್ರರಂಗದ ಸ್ಟಾರ್‍ಗಳನ್ನೆಲ್ಲ ಒಗ್ಗೂಡಿಸಿ ನಡೆಯುತ್ತಿರುವ ಈ ಕ್ರಿಕೆಟ್ ಟೂರ್ನಮೆಂಟ್, ಈ ಬಾರಿ ಅದ್ಧೂರಿಯಾಗಿದೆ. ಈ ಟೂರ್ನಿಗೆ ಸೆಹ್ವಾಗ್, ಗಿಬ್ಸ್‍ರಂತಹ ಅಂತಾರಾಷ್ಟ್ರೀಯ ಕ್ರಿಕೆಟ್ ತಾರೆಗಳೂ ಮೆರುಗು ತುಂಬುತ್ತಿದ್ದಾರೆ. ಸೆಪ್ಟೆಂಬರ್ 8ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅದ್ಧೂರಿ ಚಾಲನೆ ಸಿಗಲಿದೆ. ತಮಿಳು, ತೆಲುಗು ಚಿತ್ರರಂಗದವರು ಕೂಡಾ ಸೇರಿದಂತೆ ಹಲವು ಗಣ್ಯಾತಿಗಣ್ಯರು ಆ ದಿನ ಟೂರ್ನಿಗೆ ಮೆರುಗು ತುಂಬಲಿದ್ದಾರೆ.

  ಮ್ಯಾಚ್ ನೋಡಲು ಬಯಸುವವರಿಗೆ ಸೋಮವಾರದಿಂದಲೇ ಟಿಕೆಟ್ ಹಂಚಿಕೆ ಶುರುವಾಗಲಿದೆ. ಎರಡೂ ದಿನಕ್ಕೆ 50-500 ರೂ. ಟಿಕೆಟ್ ರೇಟ್ ಇರುತ್ತೆ. ಕಲರ್ಸ್ ಸೂಪರ್ಸ್‍ನಲ್ಲಿ ಲೈವ್ ಕೂಡಾ ಇರುತ್ತೆ. 5ನೇ ತಾರೀಕಿನಿಂದ ಎಲ್ಲ ಅಂತಾರಾಷ್ಟ್ರೀಯ ಆಟಗಾರರು ಚಿನ್ನಸ್ವಾಮಿಯಲ್ಲಿ ಚಿತ್ರತಾರೆಯರೊಂದಿಗೆ ಅಭ್ಯಾಸ ನಡೆಸಲಿದ್ದಾರೆ.

  ಇದು ಆರಂಭವಾಗಿದ್ದು ನನ್ನಿಂದಲೇ ಆದರೂ, ಈಗಿನ ಯಶಸ್ಸಿಗೆ ಇಡೀ ಚಿತ್ರರಂಗದ ಬೆಂಬಲ ಕಾರಣ ಎಂದಿದ್ದಾರೆ ಕಿಚ್ಚ ಸುದೀಪ್. ಸುದ್ದಿಗೋಷ್ಟಿಯಲ್ಲಿದ್ದ ಶಿವರಾಜ್‍ಕುಮಾರ್, ಸುದೀಪ್ ಮೇಲೆ ನಮಗೆ ಕಾನ್ಫಿಡೆನ್ಸ್ ಇದೆ. ಅವರು ಎಲ್ಲಿಗೆ ಕರೆದರೂ ಹೋಗುತ್ತೇನೆ ಎಂದರು. 

  ಕೆಸಿಸಿ ಉದ್ಘಾಟನೆಗೆ ರಾಜಕಾರಣಿಗಳು, ಇಡೀ ಕನ್ನಡ ಚಿತ್ರರಂಗ ಕೂಡಾ ಆಗಮಿಸುತ್ತಿದೆ. ಆ ದಿನ ಕಲಾವಿದರು ಕೊಡಗು ಸಂತ್ರಸ್ತರ ಸಹಾಯಕ್ಕಾಗಿ ದೇಣಿಗೆಯನ್ನೂ ನೀಡಲಿದ್ದಾರೆ.

 • ಸುದೀಪ್ ಕ್ರಿಕೆಟ್ ಟೂರ್ನಿಗೆ ಅಂ.ರಾ. ಕ್ರಿಕೆಟಿಗರು..!

  sudeep brings international star players

  ಕನ್ನಡ ಚಲನಚಿತ್ರ ಕಪ್ ಸೀಸನ್ 2 ಶುರುವಾಗುತ್ತಿದೆ. ಇಂದು ಸೀಸನ್ 2ನ ತಂಡಗಳಲ್ಲಿ ಆಡುವ ಆಟಗಾರರ ಹೆಸರು ಪ್ರಕಟವಾಗಲಿದೆ. ಈ ಬಾರಿಯ ಸ್ಪೆಷಲ್ ಏನ್ ಗೊತ್ತಾ..? ಟೂರ್ನಿಗೆ ಅಂತಾರಾಷ್ಟ್ರೀಯ ಕ್ರಿಕೆಟಿಗರು ಬರುತ್ತಿದ್ದಾರೆ. ವೀರೇಂದ್ರ ಸೆಹ್ವಾಗ್, ಲ್ಯಾನ್ಸ್ ಕ್ಲುಸ್ನರ್, ಹರ್ಷಲ್ ಗಿಬ್ಸ್, ತಿಲಕರತ್ನೆ ದಿಲ್ಷಾನ್, ಆ್ಯಡಮ್ ಗಿಲ್‍ಕ್ರಿಸ್ಟ್, ಒವೈಸ್ ಶಾ ಕೆಸಿಸಿಯಲ್ಲಿ ಆಡಲಿದ್ದಾರೆ.

  ಶಿವರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್, ಸುದೀಪ್, ಉಪೇಂದ್ರ, ಗಣೇಶ್ ಹಾಗೂ ಯಶ್ ನೇತೃತ್ವದಲ್ಲಿ 6 ತಂಡಗಳು ಆಡುತ್ತಿವೆ. ಒಂದೊಂದು ತಂಡಕ್ಕೆ ಒಬ್ಬೊಬ್ಬ ಅಂತಾರಾಷ್ಟ್ರೀಯ ಕ್ರಿಕೆಟಿಗರು ಸೇರಿಕೊಳ್ಳಲಿದ್ದಾರೆ. ಈ ಬಾರಿಯ ಎಲ್ಲ ಪಂದ್ಯಗಳೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆಯಲಿರುವುದು ವಿಶೇಷ.

#

Adi Lakshmi Purana Movie Gallery

Rightbanner02_butterfly_inside

Yaana Movie Gallery