` yuva rajkumar, - chitraloka.com | Kannada Movie News, Reviews | Image

yuva rajkumar,

 • ಪ್ರೇಮಿಗಳ ದಿನಕ್ಕೆ ಯುವರತ್ನ

  yuvaratna shooting to start on valentine's day

  ರಾಜಕುಮಾರ ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ಯುವರತ್ನ ಚಿತ್ರದ ಶೂಟಿಂಗ್, ಫೆಬ್ರವರಿ 14ರಿಂದ ಶುರುವಾಗುತ್ತಿದೆ. ಚಿತ್ರದ ಭರ್ಜರಿ ಆ್ಯಕ್ಷನ್ ಸೀನ್‍ಗಳೊಂದಿಗೇ ಚಿತ್ರೀಕರಣ ಆರಂಭವಾಗುತ್ತಿರುವುದು ವಿಶೇಷ. 

  ರಾಜಕುಮಾರ ನಂತರ, ಸಂತೋಷ್ ಆನಂದ್‍ರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರವಿದು. ಹೊಂಬಾಳೆ ಪ್ರೊಡಕ್ಷನ್ಸ್‍ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾವನ್ನು ದಸರಾ ವೇಳೆಗೆ ತೆರೆಗೆ ತರುವುದಾಗಿ ಚಿತ್ರತಂಡ ಈಗಾಗಲೇ ಘೋಷಿಸಿದೆ.

 • ರಾಜ್ ಮೊಮ್ಮಗನ ನಿಶ್ಚಿತಾರ್ಥ

  dr rajkumar's grandson engaged

  ಡಾ.ರಾಜ್ ಕುಮಾರ್ ಅವರ ಮೊಮ್ಮಗ, ರಾಘವೇಂದ್ರ ರಾಜ್‍ಕುಮಾರ್ ಅವರ ಮಗ ಯುವ ರಾಜ್‍ಕುಮಾರ್ ಅವರ ನಿಶ್ಚಿತಾರ್ಥ ಮೈಸೂರಿನಲ್ಲಿ ಮೈಸೂರಿನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಮೈಸೂರಿನ ಯುವತಿ ಶ್ರೀದೇವಿ ಭೈರಪ್ಪ ಮತ್ತು ಯುವರಾಜ್‍ಕುಮಾರ್ ಉಂಗುರ ಬದಲಿಸಿಕೊಂಡಿದ್ದಾರೆ.

  ವಿನಯ್ ರಾಜ್‍ಕುಮಾರ್ ಅವರ ರನ್ ಆ್ಯಂಟನಿ ಸಿನಿಮಾದ ಪ್ರಚಾರದಲ್ಲಿ ಕೆಲಸ ಮಾಡಿದ್ದ ಶ್ರೀದೇವಿಗೆ, ಆ ವೇಳೆ ಯುವರಾಜ್‍ಕುಮಾರ್ ಗೆಳೆತನವಾಗಿತ್ತು. ಗೆಳೆತನ ಪ್ರೀತಿಗೆ ತಿರುಗಿತ್ತು. ಯುವನ ಜೊತೆ ರಾಜ್ ಸಿವಿಲ್ ಸರ್ವಿಸ್ (ಐಎಎಸ್ ಓದಲು ಬಯಸುವ ಬಡ ಪ್ರತಿಭಾವಂತರಿಗೆ ಉಚಿತ ಮಾರ್ಗದರ್ಶನ, ನೆರವು ನೀಡುತ್ತಿರುವ ಸಂಸ್ಥೆ) ನೋಡಿಕೊಳ್ಳುತ್ತಿದ್ದಾರೆ ಶ್ರೀದೇವಿ. ಈಗ ಇಬ್ಬರ ಪ್ರೀತಿಗೆ ಹಿರಿಯರ ಆಶೀರ್ವಾದವೂ ಸಿಕ್ಕು, ಸಪ್ತಪದಿ ತುಳಿಯಲು ಸಿದ್ಧವಾಗಿದೆ ಯುವಜೋಡಿ.

  ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಸೇರಿದಂತೆ, ರಾಜ್ ಮನೆತನದ ಸದಸ್ಯರೆಲ್ಲ ಹಾಜರಿದ್ದು, ಯುವ ಜೋಡಿಗೆ ಹರಸಿ ಹಾರೈಸಿದರು. ರೆಬಲ್‍ಸ್ಟಾರ್ ಅಂಬರೀಷ್, ಸುಮಲತಾ, ರಾಕ್‍ಲೈನ್ ವೆಂಕಟೇಶ್, ಶ್ರೀಮುರಳಿ ಸೇರಿದಂತೆ ಕುಟುಂಬದ ಆಪ್ತರು ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿದ್ದರು. ಮದುವೆ ಶೀಘ್ರದಲ್ಲೇ ನೆರವೇರಲಿದೆ.

 • ಶಿವಣ್ಣ+ಅಪ್ಪು ಡ್ಯಾನ್ಸ್ = ಯುವರಾಜ್ ಕುಮಾರ್ ಡ್ಯಾನ್ಸ್ 

  yuvarajkumar dance mesmerizes everyone

  ಕನ್ನಡದ ನಂ.1 ಡ್ಯಾನ್ಸರ್ ಯಾರು ಅನ್ನೋ ಪ್ರಶ್ನೆಗೆ ಉತ್ತರ ಕೆಲವು ವರ್ಷಗಳ ಹಿಂದೆ ಶಿವಣ್ಣನ ಹೆಸರಲ್ಲಿತ್ತು. ಈಗ ಅದು ಅಪ್ಪು ಹೆಸರಲ್ಲಿದೆ. ಮುಂದಿನ ದಿನಗಳಲ್ಲಿ ಆ ಪಟ್ಟ ಯುವರಾಜ್ ಕುಮಾರ್ ಹೆಸರಿಗೆ ಹೋಗುತ್ತಾ..? ಅಂಥಾದ್ದೊಂದು ಅದ್ಭುತ ಸ್ಟೆಪ್ಪುಗಳ ಮೂಲಕ ಗಮನ ಸೆಳೆದಿದ್ದಾರೆ ಯುವರಾಜ್ ಕುಮಾರ್.

  ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಧಮ್ ಪವರೇ ಹಾಡಿಗೆ ಹೆಜ್ಜೆ ಹಾಕಿದ ಯುವರಾಜ್ ಕುಮಾರ್, ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಮಗನ ಒಂದೊಂದು ಸ್ಟೆಪ್ಪನ್ನೂ ರಾಘವೇಂದ್ರ ರಾಜ್‍ಕುಮಾರ್ ದಂಪತಿ, ಭಾವುಕರಾಗಿ ನೋಡುತ್ತಿದ್ದರೆ, ಚಿಕ್ಕಪ್ಪ ಪುನೀತ್ ರಾಜ್‍ಕುಮಾರ್ ಹುರಿದುಂಬಿಸುತ್ತಿದ್ದರು. 

  ನಮ್ಮನ್ನು ಹರಸಿದಂತೆ ಯುವರಾಜನನ್ನೂ ಹರಸಿ ಎಂದು ಮನವಿ ಮಾಡಿದರು ಪುನೀತ್ ರಾಜ್‍ಕುಮಾರ್. 

Ayushmanbhava Movie Gallery

Ellidhe Illitanaka Movie Gallery