` registration number, - chitraloka.com | Kannada Movie News, Reviews | Image

registration number,

  • ಯಶ್ BOSS

    yash buys fancy car registration number

    ರಾಕಿಂಗ್ ಸ್ಟಾರ್ ಯಶ್ ಹೊಸ ಕಾರು ಖರೀದಿಸಿದ್ದು ಈಗ ಹಳೇ ಸುದ್ದಿ. ಆ ಹೊಸ ಕಾರಿಗೆ ಬಾಸ್ ಆಗಿರುವ ಯಶ್, ಕಾರ್ ನಂಬರ್‍ನಲ್ಲೂ ಬಾಸ್ ಆಗಿದ್ದಾರೆ. ತಮ್ಮ ಕಾರ್‍ಗೆ ಫ್ಯಾನ್ಸಿ ನಂಬರ್ ಖರೀದಿಸಿದ ಯಶ್, 8055 ನಂಬರ್‍ನ್ನು 1.47 ಲಕ್ಷ ರೂ.ಗೆ ಹರಾಜಿನಲ್ಲಿ ಖರೀದಿಸಿದ್ದಾರೆ. ಶಾಂತಿನಗರದ ಸಾರಿಗೆ ಕಚೇರಿಯಲ್ಲಿ ಕೆಎ05-ಎಂವೈ ಶ್ರೇಣಿಯ ಫ್ಯಾನ್ಸಿ ನಂಬರ್‍ನ್ನು ಖರೀದಿಸಿದ್ದಾರೆ ಯಶ್.

    ಈ ನಂಬರ್‍ನ ವಿಶೇಷತೆ ಏನ್ ಗೊತ್ತಾ..? 8055 ಅನ್ನೋ ನಂಬರ್‍ನ್ನ ನಂಬರ್ ಪ್ಲೇಟ್‍ನಲ್ಲಿ ಬರೆಸಿದ್ರೆ, ನೋಡೋದಕ್ಕೆ ಇಂಗ್ಲಿಷ್‍ನಲ್ಲಿ  BOSS   ಅನ್ನೋ ರೀತಿ ಕಾಣುತ್ತೆ. ಕೆಲವರು ಪ್ರತಿಷ್ಟೆಗಾಗಿ ಈ ರೀತಿಯ ನಂಬರ್ ಪಡೆಯುತ್ತಾರೆ. 

    ಯಶ್, ತಮ್ಮ ಗೆಳೆಯ ರಾಕೇಶ್ ಅವರ ಮೂಲಕ ಈ ನಂಬರ್ ಖರೀದಿ ಮಾಡಿದ್ದಾರೆ. ಎಷ್ಟೇ ಹಣವಾದರೂ ಪರವಾಗಿಲ್ಲ, 8005 ನಂಬರ್ ಬೇಕೇ ಬೇಕು ಎಂದು ಯಶ್ ಹೇಳಿದ್ದರು. ಹೀಗಾಗಿ ಹರಾಜಿನಲ್ಲಿ ಭಾಗವಹಿಸಿ 8055 ( BOSS ) ನಂಬರ್ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ ರಾಕೇಶ್.

Shivarjun Movie Gallery

KFCC 75Years Celebrations and Logo Launch Gallery