` tharun sudhir, - chitraloka.com | Kannada Movie News, Reviews | Image

tharun sudhir,

 • ಜಮೀರ್ ಪುತ್ರನ 2ನೇ ಚಿತ್ರಕ್ಕೆ ತರುಣ್ ಸುಧೀರ್ ?

  ಜಮೀರ್ ಪುತ್ರನ 2ನೇ ಚಿತ್ರಕ್ಕೆ ತರುಣ್ ಸುಧೀರ್ ?

  ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ ಅವರ ಪುತ್ರ ಝೈದ್ ಖಾನ್ ಅಭಿನಯದ ಬನಾರಸ್ ಚಿತ್ರ ರಿಲೀಸ್ ಆಗೋಕೆ ಸಿದ್ಧವಾಗಿದೆ. ಜಯತೀರ್ಥ ನಿರ್ದೇಶನದ ಚಿತ್ರವಾದ್ದರಿಂದ ಭಾರಿ ನಿರೀಕ್ಷೆಯೂ ಇದೆ. ಝೈದ್ ಖಾನ್, ಸೋನಲ್ ಮಂಥೆರೋ ಅಭಿನಯಿಸಿರೋ ಚಿತ್ರದಲ್ಲಿರೋದು ಕಾಶಿ ಹಿನ್ನೆಲೆಯಲ್ಲಿ ಬರೋ ಚೆಂದದ ಲವ್ ಸ್ಟೋರಿ. ಈ ಚಿತ್ರ ರಿಲೀಸ್ ಆಗೋಕೆ ಮೊದಲೇ 2ನೇ ಚಿತ್ರಕ್ಕೆ ಸಿದ್ಧವಾಗಿದ್ಧಾರೆ ಝೈದ್ ಖಾನ್.

  ತರುಣ್ ಸುಧೀರ್ ನಿರ್ದೇಶನದಲ್ಲಿ ಝೈದ್ ಖಾನ್ ಅವರ 2ನೇ ಸಿನಿಮಾ ಶುರುವಾಗಲಿದೆ. ಕಥೆ ಓಕೆ ಆಗಿದ್ದು, ಬನಾರಸ್ ರಿಲೀಸ್ ಹೊತ್ತಿಗೆ ತರುಣ್ ಜೊತೆ 2ನೇ ಸಿನಿಮಾ ಅನೌನ್ಸ್ ಆಗುವ ಸಾಧ್ಯತೆ ಇದೆ.ನ

 • ಜೈ ಶ್ರೀರಾಮ್ ರಾಬರ್ಟ್ ಜಪ

  roberrt chants jai shri ram mantra

  ರಾಬರ್ಟ್‍ಗೂ ರಾಮನಿಗೂ ಎತ್ತಣೆಂದೆತ್ತಣ ಸಂಬಂಧ ಎನ್ನುವ ಹಾಗೆಯೇ ಇಲ್ಲ. ಏಕೆಂದರೆ ನಾವು ಹೇಳ್ತಿರೋದು ದರ್ಶನ್ ರಾಬರ್ಟ್ ಬಗ್ಗೆ. ಇತ್ತೀಚೆಗಷ್ಟೇ ಬಾ ಬಾ ಬಾ ರೆಡಿ ಆಡಿಯೋ ರಿಲೀಸ್ ಮಾಡಿದ್ದ ರಾಬರ್ಟ್ ಟೀಂ, ಈಗ ಶ್ರೀರಾಮನ ಜಪ ಮಾಡುತ್ತಿದೆ. ಇದೇ ಹೋಳಿ ಹಬ್ಬಕ್ಕೆ ರಾಬರ್ಟ್ ಚಿತ್ರದ ಜೈ ಶ್ರೀರಾಮ್ ಲಿರಿಕಲ್ ವಿಡಿಯೋ ರಿಲೀಸ್ ಆಗಲಿದೆ.

  ಮಾರ್ಚ್ 9ರಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಜೈ ಶ್ರೀರಾಮ್ ಹಾಡು ರಿಲೀಸ್ ಆಗಲಿದೆ. ನಿರ್ದೇಶಕ ತರುಣ್ ಸುಧೀರ್ ಅವರಂತೂ ಇದು ನನ್ನ ಹೃದಯಕ್ಕೆ ಹತ್ತಿರವಾದ ಗೀತೆ. ಇದನ್ನು ಕೇಳುತ್ತಿದ್ದರೆ ಅಗಾಧ ಶಕ್ತಿ ದೊರೆತಂತೆ ಭಾಸವಾಗುತ್ತೆ ಎಂದಿದ್ದಾರೆ.

  ದರ್ಶನ್‍ಗೆ ಹನುಮನ ವೇಷ ಹಾಕಿಸಿದ್ದ ತರುಣ್, ಜೈ ಶ್ರೀರಾಮ್ ಹಾಡನ್ನು ಯಾವ ರೀತಿ ಪ್ರೆಸೆಂಟ್ ಮಾಡಿದ್ದಾರೆ ನೋಡಬೇಕು. ಅರ್ಜುನ್ ಜನ್ಯ ಸಂಗೀತದ ರಾಬರ್ಟ್ ಚಿತ್ರದ ಒಂದು ಹಾಡು ಈಗಾಗಲೇ ಸಂಚಲನ ಸೃಷ್ಟಿಸಿದೆ. ಹೀಗಿರುವಾಗಲೇ ಜೈ ಶ್ರೀರಾಮ್ ಎನ್ನುತ್ತಾ ಹೋಳಿಗೆ ಬರುತ್ತಿದ್ದಾನೆ ರಾಬರ್ಟ್. ಜೈ ಶ್ರೀರಾಮ್.

 • ಡಿ ಅಂದ್ರೆ ಡಿ ಡಿ ಡಿ ಡಿ ಬಾಸ್ ಫ್ಯಾನ್ಸ್ ಬಾ ಬಾ ಬಾ ರೆಡಿ.. ರೆಡಿ..

  roberrt;s first single ba ba ba na ready

  ಹಡಗು ಹಿಡಿದು ಪಡೆಯೆ ಬರಲಿ..

  ಹೊಸಕಿ ಬಿಡುವೆ ಕಾಲಡಿ.. ಡಿಡಿಡಿ..

  ಗುಡುಗು ಸಿಡಿಲು ಜೊತೆಗೆ ಬರಲಿ..

  ಕೆಡವಿ ಹೊಡೆಯೋ ಗಾರುಡಿ.. ಡಿಡಿಡಿ..

  ಮೀಸೆ ತಿರುವದೆ ಪೊಗರು ಅದುಮಿಡಿ..

  ಅಹಂಕಾರ ಅನುವುದ ಮೊದಲು ಹೊರಗಿಡಿ..

  ಕಾಲು ಕೆರೆದರೆ ಎಲುಬು ಪುಡಿ ಪುಡಿ..

  ಚಾರ್ಜು ಮಾಡೋ ಪವರಿದೆ.. ಇವನು ಎವರೆಡಿ..

  ಬಾ ಬಾ ಬಾ ನಾನ್ ರೆಡಿ...

  ಹಾಡಿನ ತುಂಬಾ ಡಿ.. ಡಿ..ಡಿ.. ಹಾಡು ರಿಲೀಸ್ ಮಾಡೋಕೂ ಮುನ್ನ ತರುಣ್ ಸುಧೀರ್ ಒಂದು ಟ್ವೀಟ್ ಮಾಡಿದ್ದರು. ಡಿ ಅನ್ನೋದು ಹಲವರಿಗೆ ಅಕ್ಷರವೇ ಇರಬಹುದು ಆದರೆ ಡಿ ಬಾಸ್ ಅಭಿಮಾನಿಗಳಿಗೆ ಅದೊಂದು ಎಮೋಷನ್ ಎಂದಿದ್ದರು. ಅದಕ್ಕೆ ತಕ್ಕಂತೆ ಡಿ ಬಾಸ್‍ಗೆ ಹಬ್ಬದೂಟ ಕೊಟ್ಟಿದ್ದಾರೆ ತರುಣ್ ಸುಧೀರ್.

  ರಾಬರ್ಟ್ ಚಿತ್ರದ ಮೊದಲ ಲಿರಿಕಲ್ ಸಾಂಗ್ ಇದು. 3 ನಿಮಿಷದ ಹಾಡಿಗೆ ಸಾಹಿತ್ಯ ಬರೆದಿರೋದು ನಾಗೇಂದ್ರ ಪ್ರಸಾದ್. ಪ್ರತಿ ಸಾಲೂ ಕೊನೆಯಾಗೋದು ಡಿ ಯಿಂದ ಅನ್ನೋದ್ರಲ್ಲೇ ನಾಗೇಂದ್ರ ಪ್ರಸಾದ್ ಟಚ್ ಇದೆ. ವ್ಯಾಸರಾಜ್ ಘೋಸಲೆ ಹಾಡಿರುವ ಹಾಡಿಗೆ ಮ್ಯೂಸಿಕ್ಕು ಅರ್ಜುನ್ ಜನ್ಯ ಅವರದ್ದು.

  ವ್ಯಾಸರಾಯ ಜೊತೆಗೆ ಸಂತೋಷ್ ವೆಂಕಿ, ಅನಿರುದ್ಧ ಶಾಸ್ತ್ರಿ, ಸುಪ್ರೀತ್ ಫಾಲ್ಗುಣ ಮತ್ತು ನಿಖಿಲ್ ಪಾರ್ಥ ಸಾರಥಿ ಕೂಡಾ ಹಾಡಿದ್ದಾರೆ. ದರ್ಶನ್ ಸ್ಪೆಷಲ್ ಲುಕ್ಕುಗಳ ಸ್ಟಿಲ್‍ಗಳು ವ್ಹಾವ್ ಎನ್ನುವಂತಿದೆ. ಉಮಾಪತಿ ನಿರ್ಮಾಣದ ರಾಬರ್ಟ್ ಏಪ್ರಿಲ್ 9ರಂದು ತೆರೆ ಮೇಲೆ ರಾರಾಜಿಸಲಿದೆ.

 • ಡಿ.21ಕ್ಕೆ ಲಡ್ಡು ಬಂದು ಬಾಯಿಗ್ ಬೀಳುತ್ತೆ..!

  Sharan And Tharun Sudhir To Join Hands Again

  ಡಿಸೆಂಬರ್ 21ಕ್ಕೆ ಅಭಿಮಾನಿಗಳ ಪಾಲಿಗೆ ಲಡ್ಡು ಬಂದು ಬಾಯಿಗೆ ಬೀಳುತ್ತೆ. ಲಡ್ಡು ಬಂದು ಬಾಯಿಗ್ ಬಿತ್ತಾ ಜಾಹೀರಾತು ಕಲ್ಪನೆ ಮಾಡಿಕೊಂಡು ಏನೇನೋ ಕನಸು ಕಾಣಬೇಡಿ. ಡಿಸೆಂಬರ್ 21ಕ್ಕೆ ಲಡ್ಡು ಸಿನಿಮಾ ಹೌಸ್, ತಮ್ಮ ಹೊಸ ಚಿತ್ರದ ಟೈಟಲ್‍ನ್ನು ತೋರಿಸುತ್ತೆ, ಅಷ್ಟೆ.

  ಕಾಮಿಡಿ ಅಧ್ಯಕ್ಷ ಶರಣ್, ನಿರ್ದೇಶಕ ತರುಣ್ ಸುಧೀರ್ ಇಬ್ಬರೂ ಸೇರಿ ನಿರ್ಮಿಸುತ್ತಿರೋ ಹೊಸ ಚಿತ್ರ ಇದು. ಒಂದು ದೊಡ್ಡ ವಿಜಲ್ ಮತ್ತದರ ಮೇಲೆ ಮೇಡ್ ಇನ್ ಕರ್ನಾಟಕ 1995 ಎಂದು ಬರೆಯಲಾಗಿದೆ. ಶರಣ್ ಇರೋದ್ರಿಂದ ಕಾಮಿಡಿ ಬೇಸ್ಡ್ ಸಬ್ಜೆಕ್ಟ್ ಇರಬಹುದು ಎಂದು ಊಹಿಸಿಕೊಳ್ಳಬಹುದು. ಆದರೆ, ಶರಣ್ ಆಗಲೀ, ತರುಣ್ ಸುಧೀರ್ ಆಗಲೀ.. ಪ್ರಯೋಗಗಳಿಗೆ ಒಡ್ಡಿಕೊಳ್ಳುವವರು. ಹೀಗಾಗಿ.. ಡಿ.21ರಂದು ರಿಲೀಸ್ ಆಗೋ ಟೈಟಲ್ ನೋಡುವವರೆಗೂ ಲಡ್ಡು ಟೇಸ್ಟ್ ಬಗ್ಗೆ ಕುತೂಹಲ ಮಾತ್ರ ಇಟ್ಟುಕೊಳ್ಳಿ.

 • ಡೈಲಾಗುಗಳನ್ನು ಲಿಂಕ್ ಮಾಡಿಕೊಳ್ಳಬೇಡಿ : ದರ್ಶನ್

  ಡೈಲಾಗುಗಳನ್ನು ಲಿಂಕ್ ಮಾಡಿಕೊಳ್ಳಬೇಡಿ : ದರ್ಶನ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ರಿಲೀಸ್ ಆಗೋಕೂ ಮೊದಲೇ ಈ ಒಂದು ಮಾತು ಹೇಳಿಬಿಟ್ಟಿದ್ದಾರೆ. ಅವರು ಈ ಮಾತು ಹೇಳೋಕೆ ಕಾರಣ ಇತ್ತೀಚಿನ ಘಟನೆ ಮತ್ತು ಅನುಭವಗಳು. ಒಬ್ಬ ಸ್ಟಾರ್ ಸಿನಿಮಾ ರಿಲೀಸ್ ಆದ್ರೆ ಸಾಕು, ಆ ಚಿತ್ರದ ಡೈಲಾಗುಗಳನ್ನು ಅವರವರ ಪರ್ಸನಲ್ ಲೈಫಿಗೆ ಕನೆಕ್ಟ್ ಮಾಡಿಕೊಂಡು ಗದ್ದಲ ಮಾಡೋವ್ರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿಯೇ ದರ್ಶನ್ ಒಂದು ಸ್ಪಷ್ಟನೆ ಕೊಟ್ಟುಬಿಟ್ಟಿದ್ದಾರೆ.

  ನಾನು ಈ ಚಿತ್ರದ ಪ್ರತಿ ಡೈಲಾಗ್ನ್ನು ಮುತುವರ್ಜಿ ವಹಿಸಿಯೇ ಮಾಡಿದ್ಧೇನೆ. ಸಂಭಾಷಣೆ ಬರೆದಿರುವ ಕೆ.ಎಲ್.ರಾಜಶೇಖರ್ ಜೊತೆ ಕುಳಿತಿದ್ದೇನೆ. ಚಿತ್ರದಲ್ಲಿರೋ ಯಾವುದೇ ಸಂಭಾಷಣೆಯನ್ನು ಇನ್ಯಾವುದೋ ಹೀರೋ ಅಥವಾ ಮತ್ತೊಬ್ಬರಿಗೆ ನೋವಾಗುವಂತೆ ಮಾಡಿಲ್ಲ. ಚಿತ್ರದ ಕಥೆ ಮತ್ತು ಪಾತ್ರಕ್ಕೆ ಇರೋ ಡೈಲಾಗ್ಸ್. ಅವುಗಳನ್ನು ನಿಮಗೆ ತೋಚಿದಂತೆ ಕಲ್ಪಿಸಿಕೊಂಡು ವಿವಾದ ಮಾಡಬೇಡಿ. ನಾನು ಸಿನಿಮಾ ನೋಡುವುದು ಮತ್ತು ಬೇರೆಯವರ ಸಿನಿಮಾಗಳ ಅಪ್ಡೇಟ್ ತೆಗೆದುಕೊಳ್ಳೋದು ಕಡಿಮೆ. ಇನ್ನು ಸಂಭಾಷಣೆಯಲ್ಲಿ ಫ್ರೆಶ್ನೆಸ್ ಇರಬೇಕು ಎಂದಷ್ಟೇ ಬಯಸಿ ತಿದ್ದಿ ತೀಡಿದ್ದೇವೆ. ಅಷ್ಟೆ ಎಂದು ಕ್ಲಿಯರ್ ಆಗಿ ಹೇಳಿದ್ಧಾರೆ ದರ್ಶನ್.

  ತರುಣ್ ಸುಧೀರ್ ನಿರ್ದೇಶನದ ಉಮಾಪತಿ ನಿರ್ಮಾಣದ ಸಿನಿಮಾ ರಾಬರ್ಟ್ ಇದೇ ವಾರ ರಿಲೀಸ್. ರಿಲೀಸ್ ಮಾಡುವ ಮುನ್ನವೇ ವಿವಾದ ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಿದ್ಧಾರೆ ದರ್ಶನ್.

 • ದಚ್ಚುಗೆ ಜಗಪತಿ ಬಾಬು ವಿಲನ್

  jagapathi babu in darshan's robert

  ದರ್ಶನ್ ಅಭಿನಯದ ರಾಬರ್ಟ್ ಚಿತ್ರಕ್ಕೆ ವಿಲನ್ ಯಾರು..? ಉತ್ತರ ಸಿಕ್ಕಿದೆ. ಸದ್ಯಕ್ಕೆ ಸೌಥ್ ಇಂಡಿಯಾ ಸಿನಿಮಾಗಳಲ್ಲಿ ಸೆನ್ಸೇಷನಲ್ ವಿಲನ್ ಆಗಿರುವ ಜಗಪತಿ ಬಾಬು, ರಾಬರ್ಟ್ ಚಿತ್ರದ ಖಳನಾಯಕ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರ, ಅದ್ಧೂರಿಯಾಗಿರಲಿದೆ ಎನ್ನುವುದರ ಮೊದಲ ಸುಳಿವು ಇದು.

  ಜಗಪತಿ ಬಾಬು, ಕನ್ನಡಿಗರಿಗೆ ಹೊಸಬರೇನಲ್ಲ. ಈಗಾಗಲೇ ಸುದೀಪ್, ನಿಖಿಲ್ ಚಿತ್ರಗಳಲ್ಲಿ ನಟಿಸಿದ್ದವರೇ. ಇಷ್ಟೆಲ್ಲ ಆದ ಮೇಲೂ ಅದೊಂದು ಪ್ರಶ್ನೆ ಹಾಗೆಯೇ ಇದೆ. ಜಗಪತಿ ಬಾಬು, ಈ ಚಿತ್ರದಲ್ಲಿ ಖಳನಾಯಕರೋ.. ಪೋಷಕ ನಟರೋ.. ಉಮಾಪತಿ ನಿರ್ಮಾಣದ ಸಿನಿಮಾದ ಕುತೂಹಲ ಹೆಚ್ಚಿಸುತ್ತಿರುವುದಂತೂ ಸತ್ಯ. ಅಂದಹಾಗೆ.. ಹೀರೋಯಿನ್ ಯಾರು ಅನ್ನೋದನ್ನ ರಾಬರ್ಟ್ ಟೀಂ ಇನ್ನೂ ಹೇಳಿಲ್ಲ.

 • ದರ್ಶನ್ ತೆಲುಗು ಟೀಸರ್ ರಿಲೀಸ್

  ದರ್ಶನ್ ತೆಲುಗು ಟೀಸರ್ ರಿಲೀಸ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ತೆಲುಗು ಟೀಸರ್ ರಿಲೀಸ್ ಆಗಿದೆ. ರಾಬರ್ಟ್ ಬಿಡುಗಡೆಗೆ ಎದುರಾಗಿದ್ದ ಎಲ್ಲ ಅಡೆತಡೆಗಳೂ ತೆರವಾಗಿದ್ದು, ಮಾರ್ಚ್ 11ರಂದು ರಾಬರ್ಟ್ ತೆಲುಗು ಡಬ್ಬಿಂಗ್ ವರ್ಷನ್, ಆಂಧ್ರ ಮತ್ತು ತೆಲಂಗಾಣದಲ್ಲಿ ರಿಲೀಸ್ ಆಗಲಿದೆ.

  ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ರಾಬರ್ಟ್ ಟೀಸರ್ ಹವಾ ಎಬ್ಬಿಸಿಬಿಡ್ತು. ಉಮಾಪತಿ ನಿರ್ಮಾಣದ ರಾಬರ್ಟ್ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನವಿದೆ. ವಿನೋದ್ ಪ್ರಭಾಕರ್, ಆಶಾ ಭಟ್, ಸೋನಲ್ ಮಂಥೆರೋ ನಟಿಸಿರುವ ಚಿತ್ರ ಈ ವರ್ಷದ ಬಹುನಿರೀಕ್ಷಿತ ಸಿನಿಮಾ.

 • ದರ್ಶನ್ ರೆಕಾರ್ಡ್ BREAK ಮಾಡಿದ ದರ್ಶನ್..!

  ದರ್ಶನ್ ರೆಕಾರ್ಡ್ BREAK ಮಾಡಿದ ದರ್ಶನ್..!

  ದಾಖಲೆ ಇರುವುದೇ ಮುರಿಯೋಕೆ ಅನ್ನೋದು ಈ ಬಾರಿಯೂ ಸುಳ್ಳಾಗಿಲ್ಲ. ಒನ್ಸ್ ಎಗೇನ್ ದರ್ಶನ್ ಸಿನಿಮಾ ಬಾಕ್ಸಾಫೀಸ್ನಲ್ಲಿ ದಾಖಲೆ ಬರೆಯೋಕೆ ಶುರು ಮಾಡಿದೆ. ಈ ಬಾರಿ ದರ್ಶನ್ ಸಿನಿಮಾ ದಾಖಲೆಯನ್ನು ದರ್ಶನ್ ಸಿನಿಮಾನೇ ಬ್ರೇಕ್ ಮಾಡಿದೆ ಅನ್ನೋದು ಸ್ಪೆಷಲ್.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತರುಣ್ ಕಿಶೋರ್ ಸುದೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಫಸ್ಟ್ ಡೇ ಕಂಪ್ಲೀಟ್ ಹೌಸ್ಫುಲ್ ಶೋ ಕಂಡಿದೆ. ರಾಬರ್ಟ್ ರಾಜ್ಯದಲ್ಲಿಯೇ 600 ಕ್ಕೂ ಹೆಚ್ಚು ಕಡೆ ರಿಲೀಸ್ ಆಗಿತ್ತು. ಆಂದ್ರ ತೆಲಂಗಾಣ, ದೆಹಲಿ, ಮುಂಬೈ, ಗೋವಾ ಎಲ್ಲ ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿರೋ ಸಿನಿಮಾ, ಮೊದಲ ದಿನವೇ 17 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ರಾಜ್ಯ ಒಂದರಲ್ಲಿಯೇ ಬರೋಬ್ಬರಿ 17.5 ಕೋಟಿ ಗಳಿಸಿದೆ ರಾಬರ್ಟ್ ಸಿನಿಮಾ. ಆಂಧ್ರ ಹಾಗೂ ತೆಲಂಗಾಣದಲ್ಲಿ 3.12 ಕೋಟಿ ಗಳಿಕೆ ಮಾಡಿ ಜಯಭೇರಿ ಮೊಳಗಿಸಿದೆ.

  ಎರಡನೇ ದಿನವೂ ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಈ ಅಬ್ಬರ ಇನ್ನೂ ಕಂಟಿನ್ಯೂ ಆಗೋ ಎಲ್ಲ ಸೂಚನೆಗಳೂ ಇವೆ.

  ಬಿಕೆಟಿ ಏರಿಯಾದಲ್ಲಿ 7 ಕೋಟಿ ಗಳಿಸಿದ್ದರೆ, ಮೈಸೂರು, ಮಂಡ್ಯ ಮತ್ತು ಹಾಸನದಲ್ಲಿ ರಾಬರ್ಟ್ 2 ಕೋಟಿ ರೂ. ಬಾಚಿಕೊಂಡಿದ್ರೆ, ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ 2.24 ಕೋಟಿ ರೂ. ಗಳಿಸಿದೆ. ಶಿವಮೊಗ್ಗ 1ಕೋಟಿ ರೂ., ಹೈದರಾಬಾದ್ ಕರ್ನಾಟಕ 3 ಕೋಟಿ ರೂ., ಬಾಂಬೆ ಕರ್ನಾಟಕದಲ್ಲಿ 2 ಕೋಟಿ ರೂ ಕಲೆಕ್ಷನ್ ಆಗಿದೆ. ಕರ್ನಾಟಕದಲ್ಲಿ ರಾಬರ್ಟ್ ಗಳಿಸಿದ್ದು, ಒಟ್ಟು 17.24 ಕೋಟಿ ರೂಪಾಯಿ. ಅಂದಹಾಗೆ ಇದು ಫಸ್ಟ್

 • ದರ್ಶನ್ ಹುಟ್ಟುಹಬ್ಬಕ್ಕೆ ರಾಬರ್ಟ್ ಕಾಣಿಕೆ

  roberrt team gifts teaser for darshan't birthday

  ದರ್ಶನ್ ಹುಟ್ಟುಹಬ್ಬ ಎಂದಿನಂತೆ ಈ ಬಾರಿಯೂ ಸಮಾಜಸೇವೆಯ ಕೆಲಸಗಳೊಂದಿಗೆ ನಡೆಯಲಿದೆ. ಅಭಿಮಾನಿಗಳು ದರ್ಶನ್ ಮನೆಗೆ ಆಗಮಿಸಿ ಶುಭ ಕೋರುತ್ತಾರೆ. ಕೇಕ್ ಚೆಲ್ಲಾಡುವುದಿಲ್ಲ. ಪಟಾಕಿ ಸಿಡಿಯುವುದಿಲ್ಲ. ಹಾರಾಟ.. ಕೂಗಾಟ.. ಇರುವುದಿಲ್ಲ. ಬದಲಿಗೆ ಅಭಿಮಾನಿಗಳು ಧವಸಧಾನ್ಯ ಸಂಗ್ರಹಿಸಿ ಅನಾಥಾಶ್ರಮ, ಮಠ, ವೃದ್ಧಾಶ್ರಮಗಳಿಗೆ ತಲುಪಿಸುವ ಕೈಂಕರ್ಯ ಮಾಡುತ್ತಾರೆ. ಇದೆಲ್ಲದರ ಜೊತೆಗೆ ರಾಬರ್ಟ್ ಚಿತ್ರತಂಡ ಒಂದು ಉಡುಗೊರೆ ಕೊಡುತ್ತಿದೆ. ರಾಬರ್ಟ್ ಟೀಸರ್ ರಿಲೀಸ್ ಮಾಡುತ್ತಿದೆ.

  ಈಗಾಗಲೇ ಚಿತ್ರೀಕರಣ ಮುಗಿಸಿರುವ ರಾಬರ್ಟ್ ಚಿತ್ರತಂಡ, ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಫೆ.16ರ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಟೀಸರ್ ರಿಲೀಸ್ ಆಗಲಿದೆ.

  ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ಉಮಾಪತಿ ದರ್ಶನ್ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಸೆಲಬ್ರೇಟ್ ಮಾಡಲು ಪ್ಲಾನ್ ಮಾಡಿದ್ದಾರೆ.

 • ನೀರಿನೊಳಗೆ ದರ್ಶನ್ ಸಾಹಸ

  darshan to perform underwater stunts for robert movie

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂಡರ್ ವಾಟರ್ ಸಾಹಸ ಮಾಡಿದ್ದಾರೆ. ಅದು ರಾಬರ್ಟ್ ಚಿತ್ರಕ್ಕಾಗಿ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ಸುಮಾರು 4 ನಿಮಿಷದ ಅಂಡರ್ ವಾಟರ್ ಸೀನ್ ಇದೆಯಂತೆ. ಆ ಸೀನ್‍ನ್ನು ಹಲಸೂರು ಬಳಿಯ ಸ್ವಿಮ್ಮಿಂಗ್‍ಪೂಲ್‍ನಲ್ಲಿ ಚಿತ್ರೀಕರಿಸಲಾಗಿದೆ. ಮುಂಬೈನಿಂದ ಬಂದಿದ್ದ ಎಕ್ಸ್‍ಪರ್ಟ್‍ಗಳ ತಂಡ ಶೂಟಿಂಗ್ ಮುಗಿಸಿಕೊಟ್ಟಿದೆ.

  ನಟ, ನಿರ್ದೇಶಕ ಮಾಸ್ಟರ್ ಕಿಶನ್ (ಈಗ ದೊಡ್ಡವರಾಗಿದ್ದಾರೆ) ಈ ದೃಶ್ಯದ ಚಿತ್ರೀಕರಣಕ್ಕೆ ಸಹಾಯ ಮಾಡಿದ್ದಾರಂತೆ. ಟೀನೇಜ್ ಚಿತ್ರದಲ್ಲಿ ಅಂಡರ್‍ವಾಟರ್ ಸಾಹಸ ಮಾಡಿದ್ದ ಕಿಶನ್‍ಗೆ ಸ್ಕೂಬಾ ಡೈವಿಂಗ್ ಕೂಡಾ ಬರುತ್ತೆ. ಹೀಗಾಗಿ ಸಹಾಯವಾಯ್ತು ಎಂದಿರುವ ಕಿಶನ್, ದರ್ಶನ್ ಅವರ ಕೋಆಪರೇಟಿವ್ ಗುಣಕ್ಕೆ ಮಾರು ಹೋಗಿದ್ದಾರೆ. ಸರಿಯಾಗಿ ಬರದೇ ಇದ್ದರೆ ಮತ್ತೆ ಶೂಟ್ ಮಾಡೋಣ ಎನ್ನತ್ತಿದ್ದ ದರ್ಶನ್, ನನಗಂತೂ ತುಂಬಾ ಪ್ರೋತ್ಸಾಹ ನೀಡಿದರು. ಅವರ ಜೊತೆ ಕೆಲಸ ಮಾಡಿದ್ದು ಖುಷಿ ತಂದಿದೆ ಎಂದಿದ್ದಾರೆ ಕಿಶನ್.

  ಅಂಡರ್ ವಾಟರ್ ಶೂಟಿಂಗ್ ಒಂದು ವಿಭಿನ್ನ ಅನುಭವ. ಚಿತ್ರದಲ್ಲಿ ಈ ದೃಶ್ಯಕ್ಕೆ ತುಂಬಾ ಪ್ರಾಮುಖ್ಯತೆ ಇದೆ ಎಂದಿದ್ದಾರೆ ತರುಣ್. ಚಿತ್ರಕ್ಕೆ ಪಂಜಾಬಿ ಮೂಲದ ಹುಡುಗಿ ಮೆಹ್ರೀನ್ ನಾಯಕಿ ಎನ್ನಲಾಗಿದ್ದು, ಜಗಪತಿ ಬಾಬು ವಿಲನ್ ಆಗಿ ನಟಿಸುತ್ತಿದ್ದಾರೆ.

 • ಫಿಲಂಫೇರ್ ಪ್ರಶಸ್ತಿಯೂ, ಸುಧೀರ್ ನೋವಿನ ಕಥೆಯೂ..

  tharun sudhir shares heartfelt story after winning filmfare

  ಮೊನ್ನೆ ಮೊನ್ನೆಯಷ್ಟೇ ತರುಣ್ ಸುಧೀರ್ ತಮ್ಮ ಚೌಕ ಚಿತ್ರಕ್ಕೆ ಫಿಲಂಫೇರ್ ಪ್ರಶಸ್ತಿ ಪಡೆದು ಸಂಭ್ರಮಿಸಿದ್ದರು. ಫಾದರ್ಸ್ ಡೇ ದಿನವೇ ಪಡೆದ ಆ ಪ್ರಶಸ್ತಿಯನ್ನೂ ತಮ್ಮ ತಂದೆಗೇ ಅರ್ಪಿಸಿದ್ದ ತರುಣ್ ಸುಧೀರ್, ಒಂದು ನೋವಿನ ಕಥೆಯನ್ನೂ ಬಿಚ್ಚಿಟ್ಟಿದ್ದಾರೆ. 

  ಸುಧೀರ್ ಎಂದರೆ ತಕ್ಷಣ ನೆನಪಾಗುವುದು ಅವರ ಪ್ರಖ್ಯಾತ ಸಿಂಧೂರ ಲಕ್ಷ್ಮಣ ನಾಟಕ. ಸಿಂಧೂರ ಲಕ್ಷ್ಮಣನ ಪಾತ್ರದ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಸುಧೀರ್, 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಸುಧೀರ್ ಮಾಡಿ ಮಡಿದವರು, ಬಂಧಮುಕ್ತ, ಬೀಸಿದ ಬಲೆ.. ಮೊದಲಾದ ಚಿತ್ರಗಳಿಗೆ ಪ್ರಶಸ್ತಿಗಳೂ ಬಂದಿದ್ದವು. ಆದರೆ, ಸುಧೀರ್‍ಗೆ ಬಂದಿರಲಿಲ್ಲ. ಜನಮೆಚ್ಚುಗೆಯೇ ಅವರು ಗಳಿಸಿದ್ದ ಅತಿದೊಡ್ಡ ಪ್ರಶಸ್ತಿಯಾಗಿತ್ತು. ಏನೇ ಜನಮೆಚ್ಚುಗೆಯಿದ್ದರೂ, ನನಗೊಂದು ಪ್ರಶಸ್ತಿ ಬರಲಿಲ್ಲ ಎಂಬ ಕೊರಗು ಇದ್ದೇ ಇತ್ತು. ಆ ಕೊರಗು ಈಗ ನೀಗಿದಂತಾಗಿದೆ.

  ಇದು ನಮ್ಮ ಕುಟುಂಬಕ್ಕೆ ಸಿಕ್ಕಿರುವ ಮೊದಲ ಪ್ರಶಸ್ತಿಎಂದು ಸಂಭ್ರಮ ಹಂಚಿಕೊಂಡಿದ್ದಾರೆ ತರುಣ್ ಸುಧೀರ್. ಅಪ್ಪಾ ದಿಸ್ ಈಸ್ ಫಾರ್ ಯೂ ಎಂದಿರುವ ತರುಣ್ ಸುಧೀರ್, ತಂದೆಗೆ ಅಷ್ಟು ವರ್ಷ ಕಲಾಸೇವೆಯಲ್ಲಿಯೂ ಒಂದೇ ಒಂದು ಪ್ರಶಸ್ತಿ ದೊರೆತಿರಲಿಲ್ಲ ಎಂಬ ಕಥೆಯನ್ನೂ ಹೇಳಿಕೊಂಡಿದ್ದಾರೆ. ಅವರಷ್ಟೇ ಅಲ್ಲ, ತರುಣ್ ಅವರ ಸೋದರ ನಂದಕಿಶೋರ್ ಕೂಡಾ ಬೆನ್ನು ಬೆನ್ನಿಗೆ ಹಿಟ್ ಚಿತ್ರಗಳನ್ನು ಕೊಟ್ಟಿದ್ದರೂ ಅವರಿಗೂ ಪ್ರಶಸ್ತಿ ಸಿಕ್ಕಿಲ್ಲ. ಹೀಗಾಗಿ ಈ ಫಿಲಂಫೇರ್ ಅವಾರ್ಡ್, ಸುಧೀರ್ ಕುಟುಂಬಕ್ಕೆ ಮೊತ್ತಮೊದಲ ಪ್ರಶಸ್ತಿ.

 • ರಾ ರಾ ರಾ ನಾನ್ ರೆಡಿ

  ರಾ ರಾ ರಾ ನಾನ್ ರೆಡಿ

  ರಾಬರ್ಟ್ ಚಿತ್ರದ ಸೂಪರ್ ಹಿಟ್ ಸಾಂಗ್ ಬಾಬಾಬಾ ನಾನ್ ರೆಡಿ. ದರ್ಶನ್ ಅಭಿಮಾನಿಗಳಿಗಂತೂ ಇದು ಹುಚ್ಚೇ ಹಿಡಿಸಿರುವ ಹಾಡು. ಇದೇ ಹಾಡು ಈಗ ರಾರಾರಾ ನಾ ರೆಡಿ ಆಗಿದೆ, ತೆಲುಗಿನಲ್ಲಿ. ಮಾರ್ಚ್ 11ಕ್ಕೆ ರಿಲೀಸ್ ಆಗುತ್ತಿರೋ ಚಿತ್ರದ ಪ್ರಮೋಷನ್ ಶುರುವಾಗಿದ್ದು, ತೆಲುಗು ಆಡಿಯನ್ಸ್‍ಗಾಗಿ ತೆಲುಗು ವರ್ಷನ್ ಸಾಂಗ್ ರಿಲೀಸ್ ಮಾಡಿದ್ದಾನೆ ರಾಬರ್ಟ್.

  ಉಮಾಪತಿ ನಿರ್ಮಾಣದ ರಾಬರ್ಟ್ ಚಿತ್ರಕ್ಕೆ ನಂದಕಿಶೋರ್ ನಿರ್ದೇಶಕ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ವಿನೋದ್ ಪ್ರಭಾಕರ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಕನ್ನಡದ ಜೊತೆ ಜೊತೆಗೆ ಈ ಬಾರಿ ತೆಲುಗು ಮಾರ್ಕೆಟ್ಟಿಗೂ ಏಕಕಾಲಕ್ಕೆ ಲಗ್ಗೆಯಿಡುತ್ತಿದ್ದಾರೆ ದರ್ಶನ್.

 • ರಾಬರ್ಟ್ 100 ಕೋಟಿ

  ರಾಬರ್ಟ್ 100 ಕೋಟಿ

  ಯುವರತ್ನ ರಿಲೀಸ್ ಆಗಿರುವ ಹೊತ್ತಿನಲ್ಲೇ ಸ್ಯಾಂಡಲ್‍ವುಡ್‍ಗೆ ಇನ್ನೊಂದು ಗುಡ್ ನ್ಯೂಸ್. 3 ವಾರದ ಹಿಂದೆ ರಿಲೀಸ್ ಆಗಿದ್ದ ರಾಬರ್ಟ್, ಬಾಕ್ಸಾಫೀಸ್‍ನಲ್ಲಿ 100 ಕೋಟಿ ಗಳಿಕೆ ಮಾಡಿದೆ. 20 ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿದೆ ರಾಬರ್ಟ್.

  ಈ ಹಿಂದೆ ಕೆಜಿಎಫ್, ಕುರುಕ್ಷೇತ್ರ ಚಿತ್ರಗಳ ಕಲೆಕ್ಷನ್ 100 ಕೋಟಿ ದಾಟಿತ್ತಾದರೂ, ಎಲ್ಲ ಭಾಷೆಗಳ ಒಟ್ಟು ಕಲೆಕ್ಷನ್ ಎನ್ನಲಾಗಿತ್ತು. ಆದರೀಗ ರಾಬರ್ಟ್, ಕನ್ನಡವೊಂದರಲ್ಲೇ 100 ಕೋಟಿ ದಾಟಿದೆಯಂತೆ. ಚಿತ್ರತಂಡ ಇದನ್ನು ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲವಾದರೂ, ಪೋಸ್ಟರುಗಳಂತೂ ಓಡಾಡುತ್ತಿವೆ.

  ಬಿಕೆಟಿಯಲ್ಲಿ 30 ಕೋಟಿ, ಮೈಸೂರು ಭಾಗದಿಂದ 24 ಕೋಟಿ, ದಾವಣಗೆರೆ, ಚಿತ್ರದುರ್ಗದಿಂದ 15 ಕೋಟಿ, ಶಿವಮೊಗ್ಗದಿಂದ 9 ಕೋಟಿ, ಹೈದರಾಬಾದ್ ಕರ್ನಾಟಕದಿಂದ 13 ಕೋಟಿ, ಮುಂಬೈ ಕರ್ನಾಟಕದಿಂದ 9 ಕೋಟಿ ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ.

  ಹೌದಾ.. ಉಮಾಪತಿಯವರೇ ಉತ್ತರ ಹೇಳಬೇಕು. ಆದರೀಗ ಉಮಾಪತಿ ಫುಲ್ ಜೋಶ್‍ನಲ್ಲಿದ್ದಾರೆ. ಬಾಕ್ಸಾಫೀಸ್ ವಿಚಾರದಲ್ಲಿ ಮಾತ್ರ, ಸದ್ಯಕ್ಕೆ ಸೈಲೆಂಟು.

 • ರಾಬರ್ಟ್ ಚಿತ್ರದ ಕಥೆ ಥೀಮ್ ಪೋಸ್ಟರ್‍ನಲ್ಲೇ ಇದೆ. ಗೊತ್ತಾಯ್ತಾ..? 

  robert theme poster hints at story

  ದರ್ಶನ್ ಅಭಿನಯದ ಥೀಮ್ ಪೋಸ್ಟರ್ ಹೊರಬಿದ್ದಿದೆ. ಸದಾ ಶಾರ್ಟ್ ಹೇರ್‍ಕಟ್‍ನಲ್ಲಿರುತ್ತಿದ್ದ ದರ್ಶನ್, ಈ ಚಿತ್ರದಲ್ಲಿ ಉದ್ದ ಕೂದಲು ಬಿಟ್ಟಿದ್ದಾರೆ. ಫೇಸ್ ಗೆಟಪ್ ಬದಲಾಗಿದೆಯಾ..? ಯಾರಿಗ್ಗೊತ್ತು... ತರುಣ್ ಸುಧೀರ್ ದರ್ಶನ್ ಮುಖವನ್ನೇ ತೋರಿಸಿಲ್ಲ.

  ಪೋಸ್ಟರ್‍ನಲ್ಲಿ ಕೆ3 19, ಡಿ 8055 ಬೈಕ್‍ನಲ್ಲಿ ದರ್ಶನ್ ಕುಳಿತಿರುವ ಚಿತ್ರವದು. ಕೆಎ 19, ಮಂಗಳೂರಿನ ರಿಜಿಸ್ಟ್ರೇಷನ್ ನಂಬರ್. ಡಿ 8055 ಅಂದ್ರೆ ಡಿ ಬಾಸ್ ಎಂದರ್ಥ.

  ಉಮಾಪತಿ ನಿರ್ಮಾಣದ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಹೀರೋಯಿನ್ ಇನ್ನೂ ಅಂತಿಮವಾಗಿಲ್ಲ.

  ಚಿತ್ರದ ಕಥೆ ಏನು..? ದರ್ಶನ್ ಪಾತ್ರ ಏನಿರಬಹುದು..? ಇವುಗಳ ಬಗ್ಗೆ ಥೀಮ್ ಪೋಸ್ಟರ್‍ನಲ್ಲಿ ಸುಳಿವು ಕೊಟ್ಟಿದ್ದಾರಂತೆ ನಿರ್ದೇಶಕರು. ನಿಮಗೇನಾದ್ರೂ ಗೊತ್ತಾಯ್ತಾ..?

 • ರಾಬರ್ಟ್ ಚಿತ್ರದ ಸೆಟ್‍ನಲ್ಲಿ ರ್ಯಾಂಕ್ ಸ್ಟೂಡೆಂಟ್ಸ್ ಫಾರ್ಮುಲಾ

  robert movie adapts rank student concept

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಸೆಟ್‍ನಲ್ಲಿ ಎಸ್‍ಎಸ್‍ಎಲ್‍ಸಿ, ಪಿಯು, ಯುಪಿಎಸ್‍ಸಿ ರ್ಯಾಂಕ್ ಸ್ಟೂಡೆಂಟ್‍ಗಳ ಫಾರ್ಮುಲಾ ಅಳವಡಿಸಿಕೊಳ್ಳಲಾಗ್ತಿದೆ. ಇಷ್ಟಕ್ಕೂ ಏನದು ರ್ಯಾಂಕ್ ಸ್ಟೂಡೆಂಟ್ಸ್ ಫಾರ್ಮುಲಾ ಅಂದ್ಕೊಂಡ್ರಾ..?

  ನೀವೇ ನೋಡಿ.. ಇತ್ತೀಚೆಗೆ ಹಾಗೆ ರ್ಯಾಂಕ್ ಬಂದ ವಿದ್ಯಾರ್ಥಿಗಳೆಲ್ಲ ಹೇಳಿರೋದು ಬಹುತೇಕ ಒಂದೇ ವಿಷಯ. ಅವರು ಫೋನ್, ವಾಟ್ಸಪ್, ಫೇಸ್‍ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾದಿಂದ ದೂರವಿದ್ದು ಓದಿದವರು. ಹಲವರ ಈ ಯಶಸ್ಸಿನ ಗುಟ್ಟನ್ನೇ ತನ್ನ ಸೆಟ್ಟಲ್ಲಿ ಅಳವಡಿಸಿಕೊಳ್ಳೋಕೆ ಮುಂದಾಗಿದ್ದಾರೆ ನಿರ್ದೇಶಕ ತರುಣ್ ಸುಧೀರ್.

  ಅವರ ಈ ನಿರ್ಧಾರಕ್ಕೆ ಕಾರಣ ಇಷ್ಟೆ, ಸಿನಿಮಾ ಚೆನ್ನಾಗಿ ಬರಬೇಕು, ಕೆಲಸಗಳು ಬೇಗ ಬೇಗ ಸರಾಗವಾಗಿ ಆಗಬೇಕು, ಮಧ್ಯೆ ಮಧ್ಯೆ ಡೈವರ್ಷನ್‍ಗಳು ಇರಬಾರದು. ಇದ್ಯಾವುದೂ ಆಗಬಾರದು ಎಂದರೆ, ಸೆಟ್ಟಿನಲ್ಲಿದ್ದವರ ಬಳಿ ಮೊಬೈಲ್ ಇರಬಾರದು. ಅಷ್ಟೇ ಅಲ್ಲ, ಹೀಗೆ ಮಾಡುವುದರಿಂದ ಚಿತ್ರದ ಶೂಟಿಂಗ್ ಸ್ಥಳದ ಫೋಟೋ, ವಿಡಿಯೋ ಲೀಕ್ ಆಗುವುದನ್ನೂ ತಪ್ಪಿಸಬಹುದು. ಹೀಗೆ ಹಲವು ಲೆಕ್ಕಾಚಾರ ಹಾಕಿಕೊಂಡೇ ನಿರ್ಧಾರಕ್ಕೆ ಬಂದಿದ್ದಾರೆ ತರುಣ್. ನಿರ್ದೇಶಕರೇ ಸಮಯದ ಉಳಿತಾಯಕ್ಕೆ, ಕೆಲಸದ ವೇಗಕ್ಕೆ ಇಷ್ಟೊಂದು ಮುತುವರ್ಜಿ ವಹಿಸುತ್ತಿರುವಾಗ ನಿರ್ಮಾಪಕರು ಖುಷಿಯಾಗದೇ ಇರ್ತಾರಾ..? ಪ್ರೊಡ್ಯೂಸರ್ ಉಮಾಪತಿ ಫುಲ್ ಹ್ಯಾಪಿ.

 • ರಾಬರ್ಟ್ ಚೆಲುವೆ ಆಶಾ ಭಟ್ : ಯಾರಿವಳು..?

  asha bhatt is the heroine for roberrt

  ದರ್ಶನ್ ಅಭಿನಯದ ರಾಬರ್ಟ್ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿರುವಾಗಲೇ ಚಿತ್ರದ ಹೀರೋಯಿನ್ ಯಾರು ಎಂಬ ಕುತೂಹಲಕ್ಕೆ ಉತ್ತರ ಕೊಟ್ಟಿದ್ದಾರೆ ನಿರ್ದೇಶಕ ತರುಣ್ ಸುಧೀರ್. ಪೋಸ್ಟರ್‍ಗಳ ಮೂಲಕವೇ ಕುತೂಹಲ ಹುಟ್ಟಿಸಿರುವ ಚಿತ್ರವಿದು. ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ತಾರೆಯರು ನಾಯಕಿಯಾಗುತ್ತಾರೆ ಎಂಬ ಸುದ್ದಿಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದ ತರುಣ್, ಅಪ್ಪಟ ಕನ್ನಡದ ಹುಡುಗಿಯನ್ನೇ ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. ಆಶಾಭಟ್, ದರ್ಶನ್ ಎದುರು ನಟಿಸಲಿರುವ ನಾಯಕಿ.

  ಆಶಾಭಟ್, ಬಣ್ಣದ ಲೋಕಕ್ಕೆ ಹೊಸಬರೇನಲ್ಲ. ಹಿಂದಿಯಲ್ಲಿ ಜಂಗ್ಲಿ ಅನ್ನೋ ಸಿನಿಮಾಗೆ ನಾಯಕಿಯಾಗಿದ್ದವರು. ಇನ್ನು ಆಶಾಭಟ್, ಭದ್ರಾವತಿಯ ಹುಡುಗಿ. 2014ರಲ್ಲಿ ಮಿಸ್ ಸೂಪರ್ ನ್ಯಾಷನಲ್ ಪಟ್ಟ ಗೆದ್ದಿದ್ದ ಚೆಲುವೆ. ಈ ಚಿತ್ರದ ಮೂಲಕ ಕನ್ನಡದ ಹುಡುಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

  ಚಿತ್ರದ ನಾಯಕಿ ಆಶಾ ಭಟ್‍ಗೆ ರಾಬರ್ಟ್ ಕುಟುಂಬಕ್ಕೆ ಸ್ವಾಗತ ಎಂದು ವೆಲ್‍ಕಂ ಹೇಳಿದ್ದಾರೆ ತರುಣ್ ಸುಧೀರ್. ಉಮಾಪತಿ ಚಿತ್ರದ ನಿರ್ಮಾಪಕ.

 • ರಾಬರ್ಟ್ ಟೀಂಗೆ ಆಶಾ ಭಟ್ ಬಂದಿದ್ದು ಹೇಗೆ..?

  ರಾಬರ್ಟ್ ಟೀಂಗೆ ಆಶಾ ಭಟ್ ಬಂದಿದ್ದು ಹೇಗೆ..?

  ಆಶಾ ಭಟ್, ಮಿಸ್ ಸುಪ್ರಾ ಇಂಟರ್‍ನ್ಯಾಷನಲ್ ಅವಾರ್ಡ್ ವಿಜೇತೆ. ಅಪ್ಪಟ ಕನ್ನಡತಿಯೇ ಆದರೂ ಮಾಡೆಲಿಂಗ್ ವೃತ್ತಿಯಲ್ಲಿ ತೊಡಗಿದ ಮೇಲೆ ಮುಂಬೈನಲ್ಲೇ ಸೆಟಲ್ ಆಗಿದ್ದವರು. ಕೆಲವು ಜಾಹೀರಾತುಗಳಲ್ಲಿ ನಟಿಸಿದ್ದ ಆಶಾ ಭಟ್ ತರುಣ್ ಸುಧೀರ್ ಕಣ್ಣಿಗೆ ಬಿದ್ದಿದ್ದು ಹೇಗೆ..?

  ನಾನು ಮುಂಬೈನಲ್ಲೇ ಇದ್ದೆ. ಮಾಡೆಲಿಂಗ್ ಮಾಡುತ್ತಿದ್ದ ಕಾರಣ, ಬಾಲಿವುಡ್ ಆಫರ್‍ಗಳು ಬರೋಕೆ ಶುರುವಾಯ್ತು. ಆಗ ಸಿಕ್ಕ ಆಫರ್ ಹಿಂದಿಯ ಜಂಗ್ಲಿ ಸಿನಿಮಾ. ವಿದ್ಯುತ್ ಜಮ್ವಾಲ್ ಎದುರು ನಟಿಸಿದ್ದೆ. ಅದನ್ನು ನೋಡಿ ತರುಣ್ ಸುಧೀರ್ ನನ್ನನ್ನು ಕಾಂಟ್ಯಾಕ್ಟ್ ಮಾಡಿದರು. ನನಗೂ ಕ್ಯಾರೆಕ್ಟರ್, ಕಥೆ ಮತ್ತು ಟೀಂ ಇಷ್ಟವಾಯ್ತು. ಒಪ್ಪಿಕೊಂಡೆ ಎಂದಿದ್ದಾರೆ ಆಶಾ ಭಟ್.

  ಆಶಾ ಭಟ್, ಅವರ ಆಕ್ಟಿಂಗ್ ಸ್ಕಿಲ್ ಮತ್ತು ಕಾನ್ಫಿಡೆನ್ಸ್ ರಾಬರ್ಟ್ ಚಿತ್ರಕ್ಕೆ ಆಕೆಯನ್ನು ಓಕೆ ಮಾಡಲು ಕಾರಣವಂತೆ. ತರುಣ್ ಸುಧೀರ್‍ಗೂ ಇದು ದೊಡ್ಡ ಚಾಲೆಂಜ್. ದರ್ಶನ್, ವಿನೋದ್ ಪ್ರಭಾಕರ್, ದೇವರಾಜ್, ಜಗಪತಿ ಬಾಬು, ರವಿಶಂಕರ್‍ರಂತಹ ದಿಗ್ಗಜರನ್ನು ಹ್ಯಾಂಡಲ್ ಮಾಡೋದು ಸುಲಭದ ವಿಷಯ ಅಲ್ಲ. ನಿರ್ಮಾಪಕ ಉಮಾಪತಿಯವರಂತೂ ದೊಡ್ಡ ಚಾಲೆಂಜ್‍ನ್ನೇ ತೆಗೆದುಕೊಂಡಿದ್ದಾರೆ. ಅವರೆಲ್ಲರ ಶ್ರಮಕ್ಕೆ ಮಾರ್ಚ್ 11ರಂದು ಪ್ರೇಕ್ಷಕರ ರೆಸ್ಪಾನ್ಸ್‍ನಲ್ಲಿ ಬೆಲೆ ಸಿಗಲಿದೆ.

 • ರಾಬರ್ಟ್ ರಂಜಾನ್ ಗೆಟಪ್

  roberrt's ramadhan special poster creates senston

  ಪ್ರತಿ ಹಬ್ಬಕ್ಕೂ ಒಂದೊಂದು ಸ್ಪೆಷಲ್ ಟ್ರೀಟ್‍ಮೆಂಟ್ ಕೊಡುತ್ತಲೇ ಬಂದ ರಾಬರ್ಟ್, ರಂಜಾನ್ ಹಬ್ಬಕ್ಕೆ ವಿಶೇಷ ಪೋಸ್ಟರ್ ಜೊತೆ ಕಿಕ್ ಕೊಟ್ಟಿದ್ದಾನೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ತರುಣ್ ಸುಧೀರ್ ಮತ್ತು ಉಮಾಪತಿ ಕಾಂಬಿನೇಷನ್ನಿನ ಚಿತ್ರ ರಾಬರ್ಟ್. ಕೊರೊನಾ ಇಲ್ಲದೇ ಹೋಗಿದ್ದರೆ ಇಷ್ಟು ಹೊತ್ತಿಗೆ ಚಿತ್ರಮಂದಿರಗಳಲ್ಲಿ ದೂಳೆಬ್ಬಿಸಬೇಕಿದ್ದ ಸಿನಿಮಾ ಲಾಕ್ ಡೌನ್ ಮುಕ್ತಿಗೆ ಕಾಯುತ್ತಿದೆ.

  ಪೋಸ್ಟರ್ ರಿಲೀಸ್ ಮಾಡಿರುವ ದರ್ಶನ್, ಎಲ್ಲರ ಜೀವನ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಈ ಚಿತ್ರ ನಿಮ್ಮ ಮಡಿಲು ಸೇರಲಿದೆ. ಮನೆಯಲ್ಲೇ ಇರಿ, ಮನೆಯಲ್ಲಿರುವವರಿಗೆ ಜಾಗೃತವಾಗಿರಿ ಎಂದು ಸಂದೇಶ ನೀಡಿದ್ದಾರೆ.

 • ರಾಬರ್ಟ್ ರಿಲೀಸ್ ಆಗೋಕೂ ಮೊದಲೇ ಸೂಪರ್ ಹಿಟ್

  even before the movie release roberrt is super hit

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇರುವ ಇನ್ನೊಂದು ಬಿರುದೇ ಬಾಕ್ಸಾಫೀಸ್ ಸುಲ್ತಾನ. ಅದು ರಾಬರ್ಟ್ ಚಿತ್ರದಲ್ಲಿ ಮತ್ತೊಮ್ಮೆ ಸಾಬೀತಾಗುವ ಸೂಚನೆಗಳಿವೆ. ಏಕೆಂದರೆ ರಾಬರ್ಟ್ ಚಿತ್ರ ರಿಲೀಸ್ ಆಗುವುದಕ್ಕೂ ಮೊದಲೇ 50 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸಂಚಲನ ಸೃಷ್ಟಿಸಿದೆ.

  ಉಮಾಪತಿ ನಿರ್ಮಾಣದ ರಾಬರ್ಟ್ ಚಿತ್ರದ ಡಿಸ್ಟ್ರಿಬ್ಯೂಷನ್ ಹಕ್ಕುಗಳು 35 ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದೆಯಂತೆ. ಚಿತ್ರದ ಆಡಿಯೋ, ಸ್ಯಾಟಲೈಟ್, ಡಬ್ಬಿಂಗ್ ರೈಟ್ಸ್ ಎಲ್ಲವನ್ನೂ ಲೆಕ್ಕ ಹಾಕಿದರೆ ಬಿಸಿನೆಸ್ ಮೊತ್ತ 50 ಕೋಟಿಗೂ ಹೆಚ್ಚು.

  ದರ್ಶನ್ ಅವರಿಗೆ ಇದೇ ಮೊದಲ ಬಾರಿಗೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿನೋದ್ ಪ್ರಭಾಕರ್ ಇನ್ನೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆಶಾ ಭಟ್, ಸೋನಲ್ ಮಂಥೆರೋ ಕೂಡಾ ಪ್ರಧಾನ ಪಾತ್ರಗಳಲ್ಲಿರೋ ಚಿತ್ರ ಏಪ್ರಿಲ್ 9ರಂದು ರಿಲೀಸ್ ಆಗಲಿದೆ.

   

 • ರಾಬರ್ಟ್ ವಿಜಯಯಾತ್ರೆಗೆ ಕೊರೊನಾ ಬ್ರೇಕ್

  ರಾಬರ್ಟ್ ವಿಜಯಯಾತ್ರೆಗೆ ಕೊರೊನಾ ಬ್ರೇಕ್

  ಎಲ್ಲವೂ ಪ್ಲಾನ್ ಪ್ರಕಾರವೇ ಆಗಿದ್ದರೆ, ಇಂದಿನಿಂದ ರಾಬರ್ಟ್ ವಿಜಯಯಾತ್ರೆ ಶುರುವಾಗಬೇಕಿತ್ತು. ಬಾಕ್ಸಾಫೀಸ್‍ನಲ್ಲಿ ದೂಳೆಬ್ಬಿಸಿರುವ ರಾಬರ್ಟ್ ವಿಜಯಯಾತ್ರೆಗೆ ಎಲ್ಲ ತಯಾರಿಯನ್ನೂ ಮಾಡಿಕೊಂಡಿದ್ದ ಚಿತ್ರತಂಡ, ಕಡೆಯ ಗಳಿಗೆಯಲ್ಲಿ ವಿಜಯಯಾತ್ರೆಯನ್ನು ರದ್ದು ಮಾಡಿದೆ.

  ಹೆಚ್ಚು ಜನ ಸೇರಬಾರದು, ಕೊರೊನಾ ಹೆಚ್ಚುತ್ತಿದೆ. ದಯವಿಟ್ಟು ಜಾಗ್ರತೆಯಿಂದಿರಿ ಎಂಬ ಸರ್ಕಾರದ ಮನವಿಯೇ ಈ ವಿಜಯಯಾತ್ರೆ ನಿಲ್ಲಲು ಕಾರಣ. ಕೊರೊನಾ 2ನೇ ಅಲೆಯ ತೀವ್ರತೆ ಕಡಿಮೆಯಾದ ಮೇಲೆ ವಿಜಯಯಾತ್ರೆ ಮಾಡೋಣ ಎಂದು ಹೇಳಿದ್ದಾರೆ ದರ್ಶನ್. ಯಾವಾಗ ಮಾಡಿದರೇನು.. ದರ್ಶನ್ ಎಂಟ್ರಿ ಕೊಟ್ಟ ಕ್ಷಣ.. ಜಾತ್ರೆ ಶುರು. ವೇಯ್ಟಿಂಗ್ ಎನ್ನುತ್ತಿದ್ದಾರೆ ಡಿ ಫ್ಯಾನ್ಸ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery