` ravichandran, - chitraloka.com | Kannada Movie News, Reviews | Image

ravichandran,

 • `ಆ ದೃಶ್ಯ'ದಲ್ಲಿ ರವಿಚಂದ್ರನ್ ಹೀರೋನಾ..? ವಿಲನ್ನಾ..?

  is ravichandran hero or villain in aa drishya

  ದೃಶ್ಯದಲ್ಲಿ ರವಿಚಂದ್ರನ್ ಹೀರೋ. ಆದರೆ ಕ್ರೆöÊಂ ಮಾಡಿ ಅದನ್ನು ಮುಚ್ಚಿಹಾಕುವ ತಂತ್ರಗಾರ. ಈಗ ಬರ್ತಿರೋದು ಆ ದೃಶ್ಯ. ಈ ಚಿತ್ರದಲ್ಲಿ ರವಿಚಂದ್ರನ್ ನಿವೃತ್ತ ಪೊಲೀಸ್ ಆಫೀಸರ್ ಆಗಿದ್ದಾರೆ. ಕಥೆ ಏನು ಎಂದರೆ ರವಿಚಂದ್ರನ್ ಹೇಳೋದಿಷ್ಟು `ಕಥೆಯ ಸಣ್ಣದೊಂದು ಎಳೆ ಹೇಳಿದರೂ ಥ್ರಿಲ್ ಹೋಗುತ್ತೆ. ಏಕೆಂದರೆ ಇದು ಸಸ್ಪೆನ್ಸ್ ಜಾನರ್ ಸಿನಿಮಾ. ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರ ಹೀರೋನಾ..? ವಿಲನ್ನಾ..? ಸಿನಿಮಾ ನೋಡಿದ್ಮೇಲಷ್ಟೇ ಗೊತ್ತಾಗುತ್ತೆ' ಎಂದಿದ್ದಾರೆ.

  ಶಿವಗಣೇಶ್ ನಿರ್ದೇಶನದ ಚಿತ್ರವಿದು. ಕೆ.ಮಂಜು ನಿರ್ಮಾಣದ ಚಿತ್ರದಲ್ಲಿ ಅರ್ಜುನ್ ಗೌಡ, ಯಶ್ ಶೆಟ್ಟಿ, ಚೈತ್ರಾ ಆಚಾರ್, ಅಚ್ಯುತ್ ಕುಮಾರ್ ಮೊದಲಾದವರು ನಟಿಸಿದ್ದಾರೆ.

 • ಅಂಥಾದ್ದೊಂದು ಟೈಟಲ್ ಕೊಟ್ಟವರೇ ರವಿಚಂದ್ರನ್..!

  ravichandran suggested the titles buckaasura

  ರವಿಚಂದ್ರನ್, ತಮ್ಮ ಚಿತ್ರಗಳಿಗೆ ಆಕರ್ಷಕ ಟೈಟಲ್ ಕೊಡೋದ್ರಲ್ಲಿ ಹೆಸರುವಾಸಿ. ಮನಸ್ಸಿಗೆ ಇಷ್ಟವಾದ ಚೆಂದದ ಹೆಸರುಗಳನ್ನು ಟೈಟಲ್ ಆಗಿ ರಿಜಿಸ್ಟರ್ ಮಾಡಿಸುವ ರವಿಚಂದ್ರನ್ ಹೆಸರಲ್ಲಿ ಅದೆಷ್ಟು ಚೆಂದ ಚೆಂದದ ಟೈಟಲ್‍ಗಳಿವೆಯೋ.. .ಹಾಗೆಂದು ತಾವು ರಿಜಿಸ್ಟರ್ ಮಾಡಿದ ಟೈಟಲ್‍ಗಳನ್ನು ಬೇರೆಯವರು ಕೇಳಿದಾಗ ಬಿಟ್ಟುಕೊಡುವ ಔದಾರ್ಯವೂ ರವಿಚಂದ್ರನ್‍ಗೆ ಇದೆ. ಆದರೆ, ಬಕಾಸುರದ ಕಥೆ ಹಾಗಲ್ಲ.

  ನಿರ್ದೇಶಕ ನವನೀತ್, ಚಿತ್ರದ ಕಥೆ ಹೇಳಿದಾಗ ಬಕಾಸುರ ಎಂದು ಹೆಸರಿಟ್ಟರೆ ಚೆನ್ನಾಗಿರುತ್ತೆ ಎಂದು ಸಲಹೆ ಕೊಟ್ಟಿದ್ದೇ ರವಿಚಂದ್ರನ್ ಅಂತೆ. ಅದು ಲಾಯರ್‍ಗಳ ನಡುವೆಯೇ ನಡೆಯುವ ಕಥೆ. ನಾಯಕ ರೋಹಿತ್ ಮತ್ತು ರವಿಚಂದ್ರನ್, ಇಬ್ಬರದ್ದೂ ನೆಗೆಟಿವ್ ಶೇಡ್ ಇರುವ ಪಾತ್ರ. ಹೀಗಾಗಿಯೇ ಕಥೆ ಕೇಳಿ ಇಷ್ಟವಾದ ನಂತರ ರವಿಚಂದ್ರನ್ ಅವರೇ ಬಕಾಸುರ ಅನ್ನೋ ಟೈಟಲ್ ಇಡುವಂತೆ ಸಲಹೆ ಕೊಟ್ಟರು ಎಂದು ಖುಷಿಯಿಂದ ಹೇಳಿಕೊಳ್ತಾರೆ ನಿರ್ದೇಶಕ ನವನೀತ್.

  ಕಥೆಯಲ್ಲಿ ಬರುವ ಟ್ವಿಸ್ಟ್‍ಗಳು ಪ್ರೇಕ್ಷಕರನ್ನು ಥ್ರಿಲ್ ಆಗಿಸುವುದು ಖಂಡಿತಾ ಅನ್ನೋ ಭರವಸೆ ಕೊಡ್ತಾರೆ ನವನೀತ್. ಕರ್ವ ಚಿತ್ರದಲ್ಲಿ ಕ್ಲೈಮಾಕ್ಸ್‍ನ ಕಟ್ಟಕಡೆಯ ದೃಶ್ಯದವರೆಗೂ ಸಸ್ಪೆನ್ಸ್ ಕಾಯ್ದುಕೊಂಡಿದ್ದ ನವನೀತ್, ಕರ್ವಗಿಂತಲೂ ಥ್ರಿಲ್ ಕೊಡುವ ಅಂಶಗಳು ಈ ಚಿತ್ರದಲ್ಲಿವೆ ಅಂತಾರೆ. ತಡವೇನಿಲ್ಲ.. ನಾಳೆಯೇ ಚಿತ್ರಮಂದಿರಗಳಲ್ಲಿ ಪ್ರತ್ಯಕ್ಷನಾಗಲಿದ್ದಾನೆ ಬಕಾಸುರ.

   

 • ಅಂಬಿಯನ್ನು ನೋಡಿ ರವಿಚಂದ್ರನ್ ಹೇಳಿದ ನೋವಿನ ಮಾತು

  ravichandran's words of misery after seeing ambi

  ಬರಲೇಬಾರದು ಎಂದುಕೊಂಡಿದ್ದೆ. ಅವನನ್ನು ನೋವಿನ ದಿನಗಳಲ್ಲಿ ನೋಡುವುದು ನನಗೆ ಇಷ್ಟವಿರಲಿಲ್ಲ. ಅವನು ನನ್ನ ಹೃದಯದಲ್ಲಿ ಸದಾ ನಗು ನಗುತ್ತಲೇ ಇದ್ದ. ಹಾಗೆಯೇ ಇರಬೇಕಿತ್ತು ಅವನು. ಬರಲೋ ಬೇಡವೊ ಎಂದು ಕೊನೆಯವರೆಗೂ ಯೋಚಿಸಿ ಧೈರ್ಯ ಮಾಡಿ ಬಂದುಬಿಟ್ಟೆ.

  ಇದು ರವಿಚಂದ್ರನ್ ಹೇಳಿದ ಮಾತು. ಅಂಬರೀಷ್ ಚಿತ್ರರಂಗಕ್ಕೆ ಬಂದಿದ್ದು ವೀರಸ್ವಾಮಿ ಬ್ಯಾನರ್ನ ನಾಗರಹಾವು ಮೂಲಕ. ಅಂಬಿಗೆ ರೆಬಲ್ಸ್ಟಾರ್ ಇಮೇಜ್ ತಂದುಕೊಟ್ಟ ಚಕ್ರವ್ಯೂಹ ಚಿತ್ರ ಕೂಡಾ ಅಂಬರೀಷ್ ಬ್ಯಾನರ್ದ್ದೇ. ರವಿಚಂದ್ರನ್ ಒಬ್ಬ ನಿರ್ಮಾಪಕರಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಮೊದಲ ಸಿನಿಮಾ ಚಕ್ರವ್ಯೂಹ. 

  ಚಕ್ರವ್ಯೂಹ ಸಿನಿಮಾದಲ್ಲಿ ಅಂಬಿಗೆ ಸಣ್ಣದೊಂದು ಗಾಯವಾಗಿತ್ತು. ಚಿಕಿತ್ಸೆಗಾಗಿ ಡಾಕ್ಟರ್ ಬಳಿ ಕರೆದುಕೊಂಡು ಹೋದಾಗ, ಇಂಜೆಕ್ಷನ್ ಸೂಜಿ ನೋಡಿ ಚಿಕ್ಕ ಮಗುವಿನಂತೆ ಹೆದರಿದ್ದ. ಅಂಬಿ ಹೆದರುತ್ತಿದ್ದುದೇ ಇಂಜೆಕ್ಷನ್ ಸೂಜಿಗಳಿಗೆ. ಅಂತಹವನು ಕೊನೆಯ ದಿನಗಳಲ್ಲಿ ಡಯಾಲಿಸಿಸ್ ಎಂದು ಇಂಜೆಕ್ಷನ್ ಚುಚ್ಚಿಸಿಕೊಳ್ಳುತ್ತಿದ್ದ. ಅದನ್ನು ನನಗೆ ಕಲ್ಪನೆ ಮಾಡಿಕೊಳ್ಳೋಕೂ ಸಾಧ್ಯವಿರಲಿಲ್ಲ. ಹೀಗಾಗಿಯೇ.. ಅವನನ್ನು ನೋವಿನಲ್ಲಿ ನೋಡೋಕೆ ನನಗೆ ಇಷ್ಟವಾಗಿರಲಿಲ್ಲ.

  ಅವನು ಸಿನಿಮಾದಲ್ಲಿದ್ದಾಗ ಆತ್ಮೀಯನಾಗಿದ್ದ. ರಾಜಕೀಯ ಸೇರಿದ ಮೇಲೆ ನಾನೇ ದೂರ ಸರಿದಿದ್ದೆ. ಗೆಳೆತನ ಮಾತ್ರ ಹಾಗೆಯೇ ಇತ್ತು. ನನಗೆ ರಾಜಕೀಯ ಅರ್ಥವಾಗಲ್ಲ. ಇದರ ಹೊರತಾಗಿ ಎಲ್ಲಿಯೇ ಸಿಕ್ಕರೂ, ಪ್ರೀತಿಯಿಂದ ಮಾತನಾಡಿಸುತ್ತಿದ್ದ. ನನ್ನ ಹುಟ್ಟುಹಬ್ಬಕ್ಕೆ ಒಂದು ದಿನ ಮೊದಲು ಅವನ ಹುಟ್ಟುಹಬ್ಬ. ಇನ್ನು ಮೇಲೆ ಪ್ರತಿ ಹುಟ್ಟುಹಬ್ಬಕ್ಕೂ ಅವನು ನೆನಪಾಗುತ್ತಲೇ ಇರುತ್ತಾನೆ ಎಂದಿದ್ದಾರೆ ಕ್ರೇಜಿಸ್ಟಾರ್.

  ರವಿಚಂದ್ರನ್ ಅಂಬರೀಷ್ ಜೊತೆ ಖದೀಮ ಕಳ್ಳರು ಚಿತ್ರದ ಮೂಲಕ ತೆರೆಗೆ ಕಾಲಿಟ್ಟವರು. ಚಕ್ರವ್ಯೂಹದಲ್ಲೂ ಪುಟ್ಟ ಪಾತ್ರದಲ್ಲಿ ನಟಿಸಿದ್ದರು. ಬ್ರಹ್ಮ ವಿಷ್ಣು ಮಹೇಶ್ವರ, ರಾಮಣ್ಣ ಶಾಮಣ್ಣ ಜೊತೆಯಾಗಿ ನಟಿಸಿದ್ದ ಚಿತ್ರಗಳು. ಪ್ರೇಮಲೋಕದಲ್ಲಿ ಪುಟ್ಟ ಪಾತ್ರದಲ್ಲಿ ನಟಿಸಿದ್ದರು. 

 • ಅಪ್ಪನ ಹಾಡಿನ ಮೂಲಕ ಕ್ರೇಝ್ ಸೃಷ್ಟಿಸಿದ ಕ್ರೇಜೀಸ್ಟಾರ್ ಪುತ್ರ

  yaare neenu roja hoove remixed song

  ಯಾರೆ ನೀನು.. ರೋಜಾ ಹೂವೇ.. ಯಾರೆ ನೀನು.. ಮಲ್ಲಿಗೆ ಹೂವೆ.. ಅದು ರವಿಚಂದ್ರನ್ ಅಭಿನಯದ ನಾನು ನನ್ನ ಹೆಂಡ್ತಿ ಚಿತ್ರದ ಸೂಪರ್ ಹಿಟ್ ಹಾಡು. ಆ ಹಾಡಿನ ನಂತರ, ಆ ಕಾಲದ ಹುಡುಗಿಯರ ಹೃದಯದಲ್ಲಿ ರವಿಚಂದ್ರನ್ ಪ್ರೇಮಲೋಕ ಕಟ್ಟಿದ್ದು ಸುಳ್ಳಲ್ಲ. ಈಗ ಅವರ ಮಗನ ಸರದಿ. ರವಿಚಂದ್ರನ್ ಪುತ್ರ ಮನೋರಂಜನ್ ನಟಿಸಿರುವ ಮೊದಲ ಚಿತ್ರ ಸಾಹೇಬದಲ್ಲಿ ಯಾರೆ ನೀನು ರೋಜಾ ಹೂವೆ ಹಾಡನ್ನು ಬಳಸಿಕೊಳ್ಳಲಾಗಿದೆ.

  ಆ ಹಾಡನ್ನು ರೀಮಿಕ್ಸ್ ಮಾಡಿ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಓಲ್ಡ್ ಚಿತ್ರದಲ್ಲಿ ರೋಜಾ ಹೂವುಗಳ ಜೊತೆ ರವಿಚಂದ್ರನ್ ಕುಣಿದಿದ್ದರಲ್ಲ.. ಅದಕ್ಕಿಂತ ಅದ್ಭುತವಾಗಿ ಹೆಜ್ಜೆ ಹಾಕಿದ್ದಾರೆ ರವಿ ಪುತ್ರ ಮನೋರಂಜನ್. ಜೊತೆಯಲ್ಲಿ ರೋಜಾ ಹೂವುಗಳಿವೆ. ಹಾಡು ಕ್ರೇಜ್ ಸೃಷ್ಟಿಸಿಬಿಟ್ಟಿದೆ.

   

 • ಅಪ್ಪನನ್ನೂ ಮೀರಿಸಿದ ಮಗ..!

  celebs appreciates manoranjan

  ಮನೋರಂಜನ್ ರವಿಚಂದ್ರನ್ ಅಭಿನಯದ ಎರಡನೇ ಚಿತ್ರ ಬೃಹಸ್ಪತಿ ತೆರೆಗೆ ಬರಲು ಸಿದ್ಧವಾಗಿದೆ. ಹೊಸ ಪ್ರತಿಭೆಗಳಿಗಿರುವ ಕೆಲವೊಂದು ರಿಲ್ಯಾಕ್ಸ್‍ಗಳು ಸ್ಟಾರ್ ಪುತ್ರರಿಗೆ ಇರುವುದಿಲ್ಲ. ಅದರಲ್ಲೂ ರವಿಚಂದ್ರನ್ ಮಗ ಎನ್ನುವ ಪರ್ವತ ತೂಕವನ್ನು ಹೊರುವುದು ಅಷ್ಟು ಸುಲಭವೂ ಅಲ್ಲ. ಆದರೆ, ಅಂಥಾದ್ದೊಂದು ಭಾರವನ್ನು ಹೊತ್ತು ಗೆದ್ದಿರುವುದೇ ಮನೋರಂಜನ್ ಸಾಧನೆ.

  ರವಿಚಂದ್ರನ್ ಅವರ ಆಪ್ತಮಿತ್ರರಲ್ಲೊಬ್ಬರಾದ ರಾಕ್‍ಲೈನ್ ವೆಂಕಟೇಶ್, ಈಗ ಅವರ ಮಗನ ಎರಡನೇ ಚಿತ್ರದ ನಿರ್ಮಾಪಕರು. ನಂದಕಿಶೋರ್ ನಿರ್ದೇಶನದ ಚಿತ್ರದಲ್ಲಿ ಮನೋರಂಜನ್ ಅದ್ಭುತ ಅಭಿನಯ ನೀಡಿದ್ದಾರಂತೆ. 

  ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ದೃಶ್ಯವೊಂದನ್ನು ಮನೋರಂಜನ್ ವೇದಿಕೆ ಮೇಲೆ ಪ್ರದರ್ಶಿಸಿದಾಗ, ನೆರೆದಿದ್ದವರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದರು. ಏಕೆಂದರೆ, ಮನೋರಂಜನ್ ಒಂದೇ ಉಸಿರಿನಲ್ಲಿ ಸುಮಾರು 2 ಪುಟಗಳ ಡೈಲಾಗ್‍ನ್ನು ಸ್ವಲ್ಪವೂ ತಡವರಿಸದೆ ಭಾವಾಭಿನಯದ ಮೂಲಕ ವ್ಯಕ್ತಪಡಿಸಿದ್ದರು. ಒಂದು ಡ್ಯಾನ್ಸ್ ಪರ್‍ಫಾರ್ಮೆನ್ಸ್ ಕೂಡಾ ಕೊಟ್ಟಿದ್ದರು.

  ಮನೋರಂಜನ್ ಅವರ ಈ ಪ್ರತಿಭೆ, ವೇದಿಕೆಯಲ್ಲಿದ್ದ ನಿರ್ಮಾಪಕ ಮುನಿರತ್ನ ಅವರನ್ನು ಎಷ್ಟರ ಮಟ್ಟಿಗೆ ಪ್ರಭಾವಿಸಿತು ಎಂದರೆ, ವೇದಿಕೆಯಲ್ಲಿಯೇ ನಿಮ್ಮ ಅಪ್ಪನಿಗಿಂತ ಚೆನ್ನಾಗಿ ಡ್ಯಾನ್ಸ್ ಮಾಡ್ತೀಯ ಎಂದು ವೇದಿಕೆಯಲ್ಲೇ ಹೊಗಳಿದರು. ಆ ಸಮಾರಂಭಕ್ಕೆ ರವಿಚಂದ್ರನ್ ಬಂದಿರಲಿಲ್ಲ. ಹೀಗಾಗಿ, ನಿಮ್ಮ ಅಪ್ಪ ಇವತ್ತು ಎದುರಿನಲ್ಲಿದ್ದರೆ, ಅವರ ಎದುರೇ ಈ ಮಾತು ಹೇಳುತ್ತಿದ್ದೆ ಎಂದರು ಮುನಿರತ್ನ. 

  ಹೀಗೆ ಚಿತ್ರರಂಗದವರ ಪ್ರೋತ್ಸಾಹ ಪಡೆದಿರುವ ಮನೋರಂಜನ್ ಈಗ ಕನ್ನಡಿಗರ ಮೆಚ್ಚುಗೆ ಗಳಿಸಬೇಕಿದೆ. ಅಪ್ಪನಿಗೆ ಅಭಿಮಾನದ ಆಶೀರ್ವಾದ ಮಾಡಿರುವ ಕನ್ನಡಿಗರು, ಮಗನನ್ನೂ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾರೆ ಎಂಬ ನಿರೀಕ್ಷೆಯೂ ಇದೆ. 2017ರ ಜನವರಿಗೆ ಬೃಹಸ್ಪತಿ ರಿಲೀಸ್ ಆಗುತ್ತಿದೆ.

 • ಆ ದೃಶ್ಯ ನೋಡಿದ ಮನೋರಂಜನ್ ಅಪ್ಪನಿಗೆ ಕೊಟ್ಟ ಲವ್ಲೀ ಸರ್ಟಿಫಿಕೇಟ್

  manoranjan praises his father's acting in aa drishya

  ಆ ದೃಶ್ಯ, ಥಿಯೇಟರುಗಳಲ್ಲಿ ಸೈಲೆಂಟ್ ಸದ್ದು ಮಾಡ್ತಿದೆ. ಕಾರಣ ಇಷ್ಟೆ, ಚಿತ್ರ ನೋಡಲು ಶುರುವಾದ ನಂತರ ಪ್ರೇಕ್ಷಕರು ಕೊನೆಯ ಕ್ಷಣದವರೆಗೂ ಸೈಲೆಂಟ್ ಆಗಿರಬೇಕು. ಅಷ್ಟು ಥ್ರಿಲ್ ಕೊಡುತ್ತಿದೆ ಸಸ್ಪೆನ್ಸ್ ಸಿನಿಮಾ ಆ ದೃಶ್ಯ. ಕ್ಷಣ ಕ್ಷಣಕ್ಕೂ ತಿರುವುಗಳಿರುವ.. ಬರುವ ಪುಟ್ಟ ಪುಟ್ಟ ಪಾತ್ರಗಳೂ ಕಥೆಯೊಳಗೆ ಅನಿವಾರ್ಯ ಎನಿಸುವ ರೀತಿಯಲ್ಲಿ ಮೂಡಿ ಬಂದಿರುವ ಸ್ಕಿçÃನ್ ಪ್ಲೇ ವಂಡರ್‌ಫುಲ್. ಈ ಸಿನಿಮಾ ನೋಡಿದ ರವಿಚಂದ್ರನ್ ಪುತ್ರ ಮನೋರಂಜನ್‌ಗೆ ಅಪ್ಪನಿಗೆ ಒಂದು ಲವ್ಲೀ ಸರ್ಟಿಫಿಕೇಟ್ ಕೊಟ್ಟಿದ್ದಾರೆ.

  ``ಅಪ್ಪ ಇಷ್ಟು ಯಂಗ್ ಆಗಿ ಕಾಣಿಸಿದ್ರೆ ನಾವೆಲ್ಲಿ ಹೋಗೋದು.. ಅಪ್ಪ ಸಖತ್ ಆಗಿ ಅಭಿನಯಿಸಿದ್ದಾರೆ. ಫಸ್ಟ್ ಹಾಫ್‌ನಲ್ಲಿ ನಾವು ಗೆಸ್ ಮಾಡಿದ್ದೇ ಬೇರೆ. ಅಲ್ಲಿ ಆಗಿದ್ದೇ ಬೇರೆ. ಸಿನಿಮಾ ಸಖತ್ ಸಸ್ಪೆನ್ಸ್ ಆಗಿದೆ' ಎಂದಿದ್ದಾರೆ.

  ಶಿವಗಣೇಶ್ ನಿರ್ದೇಶನದ ಆ ದೃಶ್ಯದಲ್ಲಿ ಹೀರೋಯಿನ್ ಇಲ್ಲ. ಹಾಡಿಲ್ಲ. ರೊಮ್ಯಾನ್ಸ್ ಇಲ್ಲ. ದ್ರಾಕ್ಷಿ, ಸೇಬುಗಳೂ ಇಲ್ಲ. ಜಸ್ಟ್ ರವಿಚಂದ್ರನ್ ಆ್ಯಕ್ಷನ್ ಅಷ್ಟೆ.. ಪ್ರೇಕ್ಷಕ ಥ್ರಿಲ್..

 • ಆ ದೃಶ್ಯ.. ಸಿಕ್ಕಾಪಟ್ಟೆ ಚಿಕ್ಕೋರಾದ್ರು ಕ್ರೇಜಿ ಸ್ಟಾರ್

  aa drishya image

  ಕುರುಕ್ಷೇತ್ರದ ಕೃಷ್ಣನಾಗಿ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿರುವ ರವಿಚಂದ್ರನ್, ಈಗ ಇನ್ನೂ 30 ವರ್ಷ ಚಿಕ್ಕೋರಾಗಿಬಿಟ್ಟಿದ್ದಾರೆ. ಆ ದೃಶ್ಯ ಚಿತ್ರದಲ್ಲಿ. ರವಿಚಂದ್ರನ್‍ಗೆ ದೃಶ್ಯ ಸಿನಿಮಾ ಹೊಸ ಇಮೇಜ್ ತಂದುಕೊಟ್ಟಿತ್ತು. ಈಗ ಆ ದೃಶ್ಯದಲ್ಲಿ ರವಿಚಂದ್ರನ್ ಲುಕ್ಕಿನಲ್ಲೇ ಹೊಸ ಇಮೇಜ್ ಇದೆ.

  ಇದು ಶಿವಗಣೇಶ್ ನಿರ್ದೇಶನದ ಸಿನಿಮಾ. ತ್ರಾಟಕ, ಜಿಗರ್‍ಥಂಡ ಚಿತ್ರಗಳ ಮೂಲಕ ಗಮನ ಸೆಳೆದಿದ್ದ ಶಿವಗಣೇಶ್ ಈ ಬಾರಿ ರೀಮೇಕ್ ಸಿನಿಮಾ ಮಾಡಿದ್ದಾರೆ. ತಮಿಳಿನ ಧ್ರುವಂಗಳ್ 16 ಚಿತ್ರದ ರೀಮೇಕ್ ಇದು.

  ಕೆ.ಮಂಜು ನಿರ್ಮಾಣದ ಚಿತ್ರದಲ್ಲಿ ರವಿಚಂದ್ರನ್ ಜೊತೆಗೆ ಅಚ್ಯುತ್ ಕುಮಾರ್, ರಮೇಶ್ ಭಟ್, ಚೈತ್ರಾ ಆಚಾರ್, ಅಜಿತ್ ಜಯರಾಜ್, ನಿಸರ್ಗ, ಗಿರೀಶ್, ರಕ್ಷಿತ್, ಯಶ್ ಶೆಟ್ಟಿ ಮೊದಲಾದವರು ನಟಿಸಿದ್ದಾರೆ. ಗೌತಮ್ ಶ್ರೀವಾತ್ಸವ ಸಂಗೀತವಿದೆ.

 • ಆ ದೃಶ್ಯಕ್ಕೆ ಪ್ರೇಕ್ಷಕರೇ ಪ್ರಚಾರ ರಾಯಭಾರಿಗಳು..!

  just like drishya, aa drishya impressions audience

  ಕ್ರೇಜಿ ಸ್ಟಾರ್ ರವಿಚಂದ್ರನ್ ಆ ದೃಶ್ಯದಲ್ಲೂ ಗೆದ್ದಿದ್ದಾರೆ. ಸಿನಿಮಾ ೨ನೇ ವಾರಕ್ಕೆ ಕಾಲಿಡುತ್ತಿದೆ. ವಿಶೇಷವೆಂದರೆ ಸಿನಿಮಾಗೆ ಭರ್ಜರಿ ಎನ್ನುವಂತಾ ಓಪನಿಂಗ್ ಸಿಗಲಿಲ್ಲ. ಆದರೆ.. ೨ನೇ ದಿನದಿಂದ ನಿಧಾನವಾಗಿ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿದ್ದು, ವಾರದ ಕೊನೆಯ ಹೊತ್ತಿಗೆ ಹೌಸ್‌ಫುಲ್ ಆಗೋಕೆ ಶುರುವಾಗಿದೆ.

  ದೃಶ್ಯ ಚಿತ್ರಕ್ಕೂ ಹೀಗೆಯೇ ಆಗಿತ್ತು. ದೃಶ್ಯ ಚಿತ್ರದ ಸಕ್ಸಸ್ ಶುರುವಾಗಿದ್ದೇ ೨ನೇ ವಾರದ ನಂತರ. ಮೌತ್ ಪಬ್ಲಿಸಿಟಿಯಿಂದಾಗಿ ಜನ ಥಿಯೇಟರಿಗೆ ಬರೋಕೆ ಶುರು ಮಾಡಿದರು. ನೋಡ ನೋಡುತ್ತಲೇ ಸೂಪರ್ ಹಿಟ್ ಆಯ್ತು. ಈಗ ಆ ದೃಶ್ಯಕ್ಕೂ ಅದೇ ರೀತಿ ಆಗುತ್ತಿದೆ. ಜನ ನಿಧಾನವಾಗಿ ಬರುತ್ತಿದ್ದಾರೆ ಎಂಬ ಖುಷಿಯಲ್ಲಿದ್ದಾರೆ ರವಿಚಂದ್ರನ್.

  ಶಿವಗಣೇಶ್ ನಿರ್ದೇಶನದ ಚಿತ್ರಕ್ಕೆ ಕೆ.ಮಂಜು ನಿರ್ಮಾಪಕ. ೧೫೦ಕ್ಕೂ ಹೆಚ್ಚು ಸೆಂಟರುಗಳಲ್ಲಿ ರಿಲೀಸ್ ಆಗುತ್ತಿರುವ ಚಿತ್ರದಲ್ಲಿರೋದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್. ಚಿತ್ರ ನಿಧಾನವಾಗಿ ಹಿಟ್ ಆಗುತ್ತಿದೆ ಎನ್ನುವುದು ನಿರ್ಮಾಪಕರಿಗೂ ಖುಷಿ ಕೊಡುತ್ತಿರೋ ಸಂಗತಿ. ಅಂದಹಾಗೆ ಈ ಚಿತ್ರವನ್ನು ನಿರ್ಮಾಪಕರಿಗಿಂತ ಹೆಚ್ಚು ಪಬ್ಲಿಸಿಟಿ ಮಾಡುತ್ತಿರುವುದು ಚಿತ್ರ ನೋಡಿದ

 • ಆಪ್ತಮಿತ್ರದಂತೆ ಹಿಟ್ ಆಗುತ್ತೆ ಆಯುಷ್ಮಾನ್ ಭವ - ರವಿಚಂದ್ರನ್ ಭವಿಷ್ಯ

  ravichandran predicts ayushmanbhava success

  ಆಪ್ತಮಿತ್ರ, ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಸಿನಿಮಾ. ದ್ವಾರಕೀಶ್ ಚಿತ್ರದಲ್ಲಿ ಅತಿ ದೊಡ್ಡ ದಾಖಲೆ ಬರೆದ, ವಿಷ್ಣು ವೃತ್ತಿ ಜೀವನಕ್ಕೆ ಮತ್ತೊಂದು ಮೈಲಿಗಲ್ಲಾದ ಸಿನಿಮಾ. ಅದು ಮಲಯಾಳಂನ ಮಣಿಚಿತ್ರತ್ತಾಳ್ ಚಿತ್ರದ ರೀಮೇಕ್. ನಿರ್ದೇಶಕ ಪಿ.ವಾಸು ಇದೇ ಚಿತ್ರವನ್ನು ತಮಿಳಿನಲ್ಲೂ ನಿರ್ದೇಶಿಸಿದರು. ನಿರ್ಮಾಪಕ ದ್ವಾರಕೀಶ್ ಅವರಿಗೆ 18 ಚಿತ್ರಗಳ ಸತತ ಸೋಲಿನ ನಂತರ ಗೆಲುವು ಕೊಟ್ಟ ಸಿನಿಮಾ ಆಪ್ತಮಿತ್ರ. ತಮಿಳಿನಲ್ಲಿ ಇದೇ ಚಿತ್ರದ ರೀಮೇಕ್ ಚಂದ್ರಮುಖಿ, ಸೂಪರ್ ಸ್ಟಾರ್ ರಜಿನಿಕಾಂತ್ ಅವರಿಗೂ ಲೈಫ್ ಕೊಟ್ಟಿತು. ಈಗ ಈ ಚಿತ್ರದ ಇನ್ನೊಂದು ಗುಟ್ಟು ಹೊರಬಿದ್ದಿದೆ.

  ಆಪ್ತಮಿತ್ರ ಚಿತ್ರವನ್ನು ರವಿಚಂದ್ರನ್ ಮಾಡಬೇಕಿತ್ತಂತೆ. ಈ ವಿಷಯವನ್ನು ಸ್ವತಃ ರವಿಚಂದ್ರನ್ ಅವರೇ ಹೇಳಿರುವುದು ವಿಶೇಷ. ಆಯುಷ್ಮಾನ್ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿರುವ ರವಿಚಂದ್ರನ್ ಆಪ್ತಮಿತ್ರ ಚಿತ್ರವನ್ನು ನಾನು ಮಾಡಬೇಕಿತ್ತು. ಕಥೆ ಇಷ್ಟವಾಗಿತ್ತು. ನಾನು ಹೆಜ್ಜೆ ಹಾಕುವ ಹೊತ್ತಿಗೆ ಅಲ್ಲಾಗಲೇ ಯೋಗೇಶ್ ಇದ್ರು. ನೀನೇ ಮಾಡು ಎಂದೆ. ಆಗಲೇ ಅವರಿಗೆ ಒಂದು ಮಾತು ಹೇಳಿದ್ದೆ. ಈ ಸಿನಿಮಾ ಗೆದ್ದೇ ಗೆಲ್ಲುತ್ತೆ. ನೋಡ್ತಿರು ಎಂದಿದ್ದೆ ಎಂದಿದ್ದಾರೆ ರವಿಚಂದ್ರನ್.

  ವಿಶೇಷ ಅಷ್ಟಕ್ಕೇ ಮುಗಿದಿಲ್ಲ. ಆಯುಷ್ಮಾನ್ ಭವ ಕೂಡಾ ಆಪ್ತಮಿತ್ರದಂತೆಯೇ ಹಿಟ್ ಆಗಲಿದೆ. ಏಕೆಂದರೆ ಸಿನಿಮಾ ಮಾಡಿದವರ ಮುಖದಲ್ಲಿ ಸಂಭ್ರಮವಿದೆ. ಚಿತ್ರದಲ್ಲಿ ಏನೋ ಒಂದು ವಿಶೇಷ ಕಾಣಿಸ್ತಿದೆ. ಇದೆಲ್ಲ ಇದ್ದಾಗ ಗೆಲುವಿಗೆ ಕಷ್ಟವಿಲ್ಲ. ಇದು ಕೂಡಾ ಆಪ್ತಮಿತ್ರದಂತೆಯೇ ಗೆಲುವು ಕಾಣಲಿದೆ ಎಂದಿದ್ದಾರೆ ರವಿಚಂದ್ರನ್.

  ಅಂದಹಾಗೆ ರವಿಚಂದ್ರನ್ ಜ್ಯೋತಿಷಿಯಲ್ಲ. ಆದರೆ, ಇದುವರೆಗೆ ರವಿಚಂದ್ರನ್ ಹಿಟ್ ಆಗಲಿದೆ ಎಂದು ಹೇಳಿದ ಸಿನಿಮಾಗಳು ಸೋತ ಉದಾಹರಣೆ ಇಲ್ಲ. ಶಿವಣ್ಣ, ರಚಿತಾರಾಮ್, ಅನಂತ್ ನಾಗ್, ಸುಹಾಸಿನಿ, ನಿಧಿ ಸುಬ್ಬಯ್ಯ ನಟಿಸಿರುವ ಪಿ.ವಾಸು ನಿರ್ದೇಶನದ ಸಿನಿಮಾ ಮತ್ತೊಂದು ಆಪ್ತಮಿತ್ರ ಆಗುತ್ತಾ..? ನವೆಂಬರ್ 1ಕ್ಕೆ ಚಿತ್ರಮಂದಿರಕ್ಕೆ ಬರುತ್ತಿದೆ ಆಯುಷ್ಮಾನ್ ಭವ. 

 • ಈ ಹೀರೋಯಿನ್ ಓಡಿ ಚಿನ್ನ ಗೆಲ್ಲಬೇಕಿತ್ತು. ಆದರೆ..

  buckaasura heroine's interesting story

  ಈಕೆ ರಾಷ್ಟ್ರಮಟ್ಟದ ಅಥ್ಲೆಟ್ ಆಗಿದ್ದ ಹುಡುಗಿ. 4ನೇ ಕ್ಲಾಸ್‍ನಲ್ಲಿದ್ದಾಗಲೇ ಆಟದ ಅಂಗಳಕ್ಕಿಳಿದ ಹುಡುಗಿ ಓಡುತ್ತಲೇ ಇದ್ದರು. ಪ್ರತಿದಿನ ತರಬೇತಿ ಪಡೆಯುತ್ತಿದ್ದ ಹುಡುಗಿ, ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಅಥ್ಲೆಟ್. 100 ಮೀ. ಸ್ಪರ್ಧೆಯಲ್ಲಿ ಪದಕಗಳನ್ನೂ ಗೆದ್ದಿದ್ದ ಕ್ರೀಡಾಪಟು. ಆದರೆ ಕಾಲೇಜಿನಲ್ಲಿ, ತರಬೇತಿ ಪಡೆಯುತ್ತಿದ್ದ ವೇಳೆ ಬಿದ್ದು ಗಾಯಮಾಡಿಕೊಂಡರು. ಅದು ಎಷ್ಟು ತೀವ್ರವಾಗಿತ್ತೆಂದರೆ ಪರೀಕ್ಷಿಸಿದ ಡಾಕ್ಟರ್, ರನ್ನಿಂಗ್ ರೇಸ್‍ನ್ನು ಬಿಟ್ಟುಬಿಡುವಂತೆ ಸೂಚಿಸಿದರು. ಬೇರೆ ಮಾರ್ಗವೇ ಇರಲಿಲ್ಲ. ಹಾಗೆ ಚಿಕ್ಕ ವಯಸ್ಸಿನಿಂದ ಇಟ್ಟುಕೊಂಡಿದ್ದ ಕನಸನ್ನು ಬಿಟ್ಟುಕೊಟ್ಟ ಆಕೆ, ನಂತರ ಬಂದಿದ್ದು ಚಿತ್ರರಂಗಕ್ಕೆ. ಇದು ಬಕಾಸುರ ಚಿತ್ರದ ನಾಯಕಿ ಕಾವ್ಯಾಗೌಡ ಕಥೆ.

  ಪತ್ರಿಕೆಗಳಲ್ಲಿ ನನ್ನ ಫೋಟೋ ಬರಬೇಕು ಎಂಬ ಆಸೆ ನನಗೂ ಇತ್ತು. ಆದರೆ, ಸಿನಿಮಾ ರಂಗದಲ್ಲಿ ಅಲ್ಲ. ಕ್ರೀಡೆಯಲ್ಲಿ ಪದಕ ಗೆದ್ದು, ಸುದ್ದಿಯಾಗಬೇಕು ಎಂಬ ಆಸೆಯಿತ್ತು. ಚಿಕ್ಕವಯಸ್ಸಿನಿಂದಲೂ ನಾನಿಟ್ಟುಕೊಂಡಿದ್ದ ಕನಸದು. ಆದರೆ, ಒಂದು ಅಪಘಾತ ಕ್ರೀಡಾ ಕ್ಷೇತ್ರವನ್ನು ತೊರೆಯುವಂತೆ ಮಾಡಿತು. ಈಗ ಬಣ್ಣದ ಲೋಕದಲ್ಲಿದ್ದೇನೆ ಎನ್ನುತ್ತಾರೆ ಕಾವ್ಯಾ ಗೌಡ.

  ಬಕಾಸುರ ಚಿತ್ರಕ್ಕೂ ಮುಂಚೆ ಕಾವ್ಯಾಗೆ ಖ್ಯಾತಿ ತಂದುಕೊಟ್ಟಿದ್ದು ಗಾಂಧಾರಿ ಮತ್ತ ಕಾದಂಬರಿ ಧಾರಾವಾಹಿಗಳು. ವ್ಯಾಸಂಗ ಮಾಡುತ್ತಲೇ ಧಾರಾವಾಹಿಗಳಲ್ಲೂ ಕಾಣಿಸಿಕೊಂಡ ಕಾವ್ಯಾಗೌಡ, ಎಂಬಿಎಯನ್ನೂ ಮುಗಿಸಿದ್ದಾರೆ.

  ಚಿತ್ರದ ಸ್ಕ್ರಿಪ್ಟ್‍ನ್ನು ನವನೀತ್ ಕೊಟ್ಟಾಗ ನಿಜಕ್ಕೂ ಥ್ರಿಲ್ ಆದೆ. ಇದು ಕರ್ವ ಚಿತ್ರಕ್ಕೆ ಕೆಲಸ ಮಾಡಿದ್ದ ಅದೇ ತಂಡ. ಇನ್ನು ಸಿನಿಮಾದಲ್ಲಿ ರವಿ ಸರ್ ಜೊತೆಗೆ ನನಗೆ ದೃಶ್ಯಗಳಿಲ್ಲ. ಆದರೆ, ಸೆಟ್‍ನಲ್ಲಿದ್ದಾಗ ಅವರು ನನಗೆ ಹಲವಾರು ಸಲಹೆ ಸೂಚನೆ ಕೊಟ್ಟಿದ್ದಾರೆ. ಅವರ ಜೊತೆ ಇದ್ದದ್ದೇ ನನಗೊಂದು ಖುಷಿಯ ವಿಚಾರ ಎಂದು ಹೇಳಿಕೊಂಡಿದ್ದಾರೆ ಕಾವ್ಯಾ.

   

 • ಉಪ್ಪಿ-ರವಿಚಂದ್ರನ್ ಕಾಂಬಿನೇಷನ್ ಬಲುಪು ರೀಮೇಕ್..?

  upendra raivhsndran in balapu movie

  ಉಪೇಂದ್ರ ಮತ್ತು ರವಿಚಂದ್ರನ್ ಒಟ್ಟಾಗಿ ನಟಿಸುತ್ತಿರುವ ಚಿತ್ರವನ್ನು ಓಂಪ್ರಕಾಶ್ ರಾವ್ ನಿರ್ದೇಶಿಸಲಿದ್ದಾರೆ ಎನ್ನುವ ಸುದ್ದಿಯ ಜೊತೆ ಜೊತೆಗೇ ಅದು ತೆಲುಗಿನ ಬಲುಪು ಚಿತ್ರದ ರೀಮೇಕ್ ಎಂಬ ಸುದ್ದಿ ಕೇಳಿ ಬರೋಕೆ ಶುರುವಾಗಿದೆ. ತೆಲುಗಿನಲ್ಲಿ ರವಿತೇಜ ಹಾಗೂ ಪ್ರಕಾಶ್ ರೈ ನಟಿಸಿದ್ದರು. ಪ್ರಕಾಶ್ ರೈ ಪಾತ್ರದಲ್ಲಿ ರವಿಚಂದ್ರನ್, ರವಿತೇಜ ರೋಲ್‍ನಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ ಎನ್ನಲಾಗಿದೆ. ಶಾನ್ವಿ ಶ್ರೀವಾಸ್ತವ್ ರವಿಚಂದ್ರನ್ ಮಗಳಾಗಿ ನಟಿಸಲಿದ್ದಾರೆ.

  ಶಾನ್ವಿ ಶ್ರೀವಾಸ್ತವ್ ಅವರನ್ನು ಕನ್ನಡಕ್ಕೆ ಕರೆತಂದವರೇ ಓಂ ಪ್ರಕಾಶ್ ರಾವ್. ಚಂದ್ರಲೇಖ ಚಿತ್ರದ ಮೂಲಕ. ಈಗ ಮತ್ತೊಮ್ಮೆ ಓಂಪ್ರಕಾಶ್ ಜೊತೆಯಾಗಿದ್ದಾರೆ. ಪಾತ್ರ ಚಿಕ್ಕದಾದರೂ, ಅಭಿಯನಕ್ಕೆ ಸ್ಕೋಪ್ ಇದೆ. ಉಪೇಂದ್ರ ಮತ್ತು ರವಿಚಂದ್ರನ್ ಜೊತೆ ನಟಿಸೋ ಅವಕಾಶ ಬೇರೆ. ಹಾಗಾಗಿ ಒಪ್ಪಿಕೊಂಡೆ ಎಂದು ಹೇಳಿದ್ದಾರೆ ಶಾನ್ವಿ.

 • ಎನ್‍ಟಿಆರ್ ರೀತಿ ಕಾಣ್ತಾವ್ರಂತೆ ರವಿಚಂದ್ರನ್..!

  crazy star's new look

  ಕ್ರೇಜಿಸ್ಟಾರ್ ರವಿಚಂದ್ರನ್, ಕುರುಕ್ಷೇತ್ರ ಚಿತ್ರದಲ್ಲಿ ಶ್ರೀಕೃಷ್ಣನಾಗಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ರವಿಚಂದ್ರನ್ ಅವರನ್ನು ಇಷ್ಟು ವರ್ಷಗಳಲ್ಲಿ ಮೀಸೆ ಇಲ್ಲದೆ ನೋಡಿದವರೇ ಇಲ್ಲ. ಮೀಸೆಯನ್ನು ತೆಗೆಯಲು ಕಷ್ಟವಾಗುತ್ತಿದೆ ಎಂದು ಹೇಳಿಕೊಂಡಿದ್ದ ರವಿಚಂದ್ರನ್, ಸವಾಲಿನ ಪಾತ್ರ ಎಂಬ ಕಾರಣಕ್ಕೆ ಓಕೆ ಎಂದಿದ್ದರು. ಮೀಸೆಯನ್ನಷ್ಟೇ ಅಲ್ಲ, ಎದೆಯ ಮೇಲಿನ ಕೂದಲನ್ನೂ ಶೇವ್ ಮಾಡಿದ್ದಾರಂತೆ.

  ರವಿಚಂದ್ರನ್ ಅವರ ಶ್ರೀಕೃಷ್ಣನ ಲುಕ್ ಹೇಗಿದೆ ಅನ್ನೋದನ್ನು ಗುಟ್ಟಾಗಿಡಲಾಗಿದೆ. ಒಂದೇ ಒಂದು ಫೋಟೋ ಕೂಡಾ ಲೀಕ್ ಆಗದಂತೆ ದಿಗ್ಬಂಧನ ಹಾಕಲಾಗಿದೆ. ಇದರ ಮಧ್ಯೆ ಹೊರಗೆ ಕಾಣಿಸಿರೋದು ಇದೊಂದೇ ಫೋಟೋ. ಮೀಸೆಯಿಲ್ಲದ ರವಿಚಂದ್ರನ್ ಅವರದ್ದು.

  ಶ್ರೀಕೃಷ್ಣನ ಗೆಟಪ್‍ನಲ್ಲಿ ರವಿಚಂದ್ರನ್, ಪೌರಾಣಿಕ ಚಿತ್ರಗಳಲ್ಲಿನ  ಎನ್‍ಟಿಆರ್, ಎಂಜಿಆರ್ ರೀತಿ ಕಾಣಿಸುತ್ತಿದ್ದಾರೆ ಅನ್ನೋದು ಕಾಂಪ್ಲಿಮೆಂಟು. ಡೈಲಾಗುಗಳನ್ನು ಹೇಳುವಾಗ ಕಷ್ಟವೇನೂ ಆಗಿಲ್ಲವಂತೆ. ನಾನೂ ಕೂಡಾ ಬರೆಯುತ್ತಿದ್ದೇನೆ. ಹೀಗಾಗಿ ಕಷ್ಟವೇನೂ ಆಗಿಲ್ಲ ಎಂದಿದ್ದಾರೆ ರವಿಚಂದ್ರನ್. 

  ಹಾಗಿದ್ದರೆ, ಶ್ರೀಕೃಷ್ಣ ರವಿಚಂದ್ರನ್ ಹೇಗಿದ್ದಾರೆ..? ಅಭಿಮಾನಿಗಳು ಕುತೂಹಲದಿಂದ ಕಾಯುತ್ತಲೇ ಇದ್ದಾರೆ. ಶ್ರೀಕೃಷ್ಣನ ದರ್ಶನ ಯಾವಾಗ..?

 • ಎಲ್ಲ ಸರಿ.. ಬಕಾಸುರ ಯಾರು..?

  who is buckaasura

  ಬಕಾಸುರ.. ಮಹಾಭಾರತದಲ್ಲಿ ಭೀಮನಿಂದ ಕೊಲ್ಲಲ್ಪಡುವ ರಾಕ್ಷಸನ ಹೆಸರು. ಅಂತಾದ್ದೊಂದು ಹೆಸರಿನ ಸಿನಿಮಾದಲ್ಲಿ ರವಿಚಂದ್ರನ್ ಇದ್ದಾರೆ. ನೆಗೆಟಿವ್ ಶೇಡ್ ಅಂತೆ. ಇನ್ನು ರೋಹಿತ್ ಕೂಡಾ ಇದ್ದಾರೆ. ಅವರು ಕೂಡಾ ಹೀರೋ. ಈ ಇಬ್ಬರಲ್ಲಿ ಬಕಾಸುರ ಯಾರು..? ಈ ಪ್ರಶ್ನೆಯನ್ನು ಚಿತ್ರತಂಡದ ಯಾರಿಗೇ ಕೇಳಿದರೂ ಅವರು ಕೊಡೋ ಉತ್ತರ ಒಂದೇ. ಸಿನಿಮಾ ನೋಡಿ ಅನ್ನೋದು.

  ಚಿತ್ರದ ನಾಯಕಿ ಕಾವ್ಯ ಗೌಡ ಇದಕ್ಕೆ ಹೊರತಲ್ಲ. ಚಿತ್ರದಲ್ಲಿ ಕಾವ್ಯ ಅವರದ್ದೂ ಲಾಯರ್ ಪಾತ್ರ. ರೋಹಿತ್‍ಗೆ ಅಸಿಸ್ಟೆಂಟ್. ವಾದ ಮಾಡುವ ದೃಶ್ಯಗಳು ಕಡಿಮೆ. ಆದರೆ, ನನ್ನ ಪಾತ್ರಕ್ಕೊಂದು ಹೈಲೈಟ್ ಇದೆ. ನನ್ನನ್ನು ಈಗ ಎಲ್ಲರೂ ದೃಷ್ಟಿ, ದೀಪ್ತಿ (ಕಾವ್ಯ ಅಭಿನಯಿಸಿರುವ ಧಾರಾವಾಹಿ ಪಾತ್ರಗಳು) ಅಂತಾ ಕರೀತಾರೆ. ಆದರೆ, ಸಿನಿಮಾ ರಿಲೀಸ್ ಆದ ಮೇಲೆ ಎಲ್ಲರೂ ನನ್ನನ್ನು ಬಕಾಸುರ ಕಾವ್ಯ ಅಂತಾರೆ. ಅಷ್ಟು ಕಾನ್ಫಿಡೆನ್ಸ್ ನನಗಿದೆ ಅಂತಾರೆ ಕಾವ್ಯ.

 • ಏ.5ಕ್ಕೆ ಹ್ಯಾಟ್ರಿಕ್ ಹೀರೋ V/s ಕ್ರೇಜಿ ಸ್ಟಾರ್

  kavacha dasharatha will release on same day

  ಬಹುದಿನಗಳ ನಿರೀಕ್ಷೆಯ ನಂತರ ಕನ್ನಡದ ಇಬ್ಬರು ಸ್ಟಾರ್‍ಗಳ ಸಿನಿಮಾಗಳು ರಿಲೀಸ್ ಆಗುತ್ತಿವೆ. ಶಿವಣ್ಣ ಅಂಧನಾಗಿ ನಟಿಸಿರುವ ಕವಚ ಮತ್ತು ರವಿಚಂದ್ರನ್ ಲಾಯರ್ ಆಗಿ ನಟಿಸಿರುವ ದಶರಥ ಏಪ್ರಿಲ್ 5ಕ್ಕೆ ರಿಲೀಸ್ ಆಗುತ್ತಿವೆ. ಅಲ್ಲಿಗೆ, ಕನ್ನಡದಲ್ಲಿ ಬಹುದಿನಗಳ ಬಳಿಕ ಇಬ್ಬರು ಸ್ಟಾರ್‍ಗಳ ಚಿತ್ರಗಳು ಮುಖಾಮುಖಿಯಾಗಲಿವೆ.

  17 ವರ್ಷಗಳ ಹಿಂದೆ ಅಂದರೆ 2002ರಲ್ಲಿ ಶಿವರಾಜ್‍ಕುಮಾರ್ ಮತ್ತು ರವಿಚಂದ್ರನ್ ಜೋಡಿಯ ಕೋದಂಡರಾಮ ತೆರೆ ಕಂಡಿತ್ತು. ಈಗ ಒಂದೇ ದಿನ ಇಬ್ಬರ ಚಿತ್ರಗಳು ತೆರೆ ಕಾಣುತ್ತಿವೆ. ಕವಚ ಚಿತ್ರಕ್ಕೆ ಜಿವಿಆರ್ ವಾಸು ನಿರ್ದೇಶನವಿದ್ದರೆ, ದಶರಥನಿಗೆ ಎಂ.ಎಸ್.ರಮೇಶ್ ನಿರ್ದೇಶನವಿದೆ. ಎರಡು ವರ್ಷಗಳ ಹಿಂದೆ ಸೆಟ್ಟೇರಿದ್ದ ಚಿತ್ರಗಳು, ಒಂದೇ ದಿನ ಬಿಡುಗಡೆಯಾಗುತ್ತಿರುವುದೇ ವಿಶೇಷ.

 • ಐತಿಹಾಸಿಕ ಚಿತ್ರದಲ್ಲಿ ರವಿಚಂದ್ರನ್ : ಜಟ್ಟ ಗಿರಿರಾಜ್ ಜೊತೆ ಸಿನಿಮಾ

  ravichandran to act in historical film

  ರವಿಚಂದ್ರನ್ ಅಂದ್ರೆ ರೊಮ್ಯಾನ್ಸ್ & ಎಂಟರ್‍ಟೈನ್‍ಮೆಂಟ್. ಮನರಂಜನಾತ್ಮಕ ಶೈಲಿಗೇ ಒಗ್ಗಿ ಹೋಗಿರುವ ರವಿಚಂದ್ರನ್, ರೂಲ್ಸ್ ಬ್ರೇಕ್ ಮಾಡಿದ್ದು ಅಪರೂಪ. ಹಾಗೆ ಬ್ರೇಕ್ ಮಾಡಿದ ಚಿತ್ರಗಳೆಂದರೆ ದೃಶ್ಯ ಮತ್ತು ಕುರುಕ್ಷೇತ್ರ. ಎರಡೂ ಗೆದ್ದಿವೆ. ಹೀಗಾಗಿಯೇ ಏನೋ.. ಈ ಬಾರಿ ಐತಿಹಾಸಿಕ ಕಥೆಯತ್ತ ಒಲವು ತೋರಿದ್ದಾರೆ ರವಿಚಂದ್ರನ್.

  ರವಿಚಂದ್ರನ್‍ಗೆ ಐತಿಹಾಸಿಕ ಹಿನ್ನೆಲೆಯ ಕಥೆ ಹೇಳಿರುವುದು ಜಟ್ಟ ಗಿರಿರಾಜ್. ಜಟ್ಟ, ಮೈತ್ರಿ, ಅಮರಾವತಿ, ಅದ್ವೈತ.. ಹೀಗೆ ರವಿಚಂದ್ರನ್ ಟ್ರ್ಯಾಕ್‍ಗೆ ವಿರುದ್ಧ ದಿಕ್ಕಿನಲ್ಲಿ ಸೂಕ್ಷ್ಮ ಸಂವೇದಿ ಚಿತ್ರಗಳನ್ನು ಮಾಡಿ ಗೆದ್ದವರು ಜಟ್ಟ ಗಿರಿರಾಜ್.

  1857ರ ಸ್ವಾತಂತ್ರ್ಯ ಸಂಗ್ರಾಮ ಕಾಲದ ಕಥೆ ಇದು. ತುಂಬಾ ರಿಸರ್ಚ್ ಮಾಡಿ ಕಥೆ ಸಿದ್ಧ ಮಾಡಿದ್ದೇನೆ. ರವಿಚಂದ್ರನ್ ಅವರಿಗೆ ಕಥೆ ಹೇಳಿದ್ದೇನೆ. ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎಂದಿದ್ದಾರೆ ಗಿರಿರಾಜ್. ರವಿಚಂದ್ರನ್ ಓಕೆ ಎಂದರೆ, ಅದು ರವಿಚಂದ್ರನ್ ವೃತ್ತಿ ಜೀವನದ ಮೊತ್ತ ಮೊದಲ ಐತಿಹಾಸಿಕ ಸಿನಿಮಾ ಆಗಲಿದೆ.

 • ಕಿಚ್ಚನಿಗೆ ಕ್ರೇಜಿಸ್ಟಾರ್ ಕೊಟ್ಟ ಅಚ್ಚರಿ..!

  crazy star's surprise to kiccha sudeep

  ಸರ್‍ಪ್ರೈಸ್ ಕೊಡೋದ್ರಲ್ಲಿ ಕಿಚ್ಚ ಸುದೀಪ್ ಫೇಮಸ್ಸು. ಈ ಸರ್‍ಪ್ರೈಸ್ ಸ್ಟಾರ್‍ಗೆ ಸರ್‍ಪ್ರೈಸ್ ಕೊಟ್ಟಿರೋದು ಕ್ರೇಜಿಸ್ಟಾರ್ ರವಿಚಂದ್ರನ್. ಹೈದರಾಬಾದ್‍ನಲ್ಲಿ ಕೋಟಿಗೊಬ್ಬ 3 ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಇದ್ದಕ್ಕಿದ್ದಂತೆ ಸೆಟ್‍ಗೆ ಭೇಟಿ ಕೊಟ್ಟು ಕಿಚ್ಚನನ್ನು ಅಚ್ಚರಿಗೆ ಕೆಡವಿದ್ದಾರೆ ರವಿಚಂದ್ರನ್.

  ಆ ಸರ್‍ಪ್ರೈಸ್‍ನಲ್ಲಿ ರವಿಚಂದ್ರನ್ ಗೆಟಪ್ ಕೂಡಾ ಅಚ್ಚರಿಯೇ. ಇದುವರೆಗೆ ರವಿಚಂದ್ರನ್ ಕ್ಲೀನ್ ಶೇವ್ ಹಾಗೂ ಗಡ್ಡಧಾರಿಯಾಗಿ ನಟಿಸಿದ್ದಾರೆ. ಇದೇ ವಾರ ರಿಲೀಸ್ ಆಗುತ್ತಿರುವ ದಶರಥದಲ್ಲೂ ಅವರು ಗಡ್ಡಧಾರಿಯೇ. ಆದರೆ, ಈ ಲುಕ್‍ನಲ್ಲಿ ರವಿಚಂದ್ರನ್ ಗಡ್ಡ ಕಂಪ್ಲೀಟ್ ಡಿಫರೆಂಟ್. ಈ ಲುಕ್ ಸುದೀಪ್ ಅವರಿಗಷ್ಟೇ ಅಲ್ಲ, ರವಿಚಂದ್ರನ್‍ರ ಪ್ರತಿ ಅಭಿಮಾನಿಗೂ ಅಚ್ಚರಿ.

  ರವಿಚಂದ್ರನ್ ಕೊಟ್ಟಿರೋದು ಸರ್‍ಪ್ರೈಸ್ ವಿಸಿಟ್. ಆದರೆ ಅಭಿಮಾನಿಗಳ ನಿರೀಕ್ಷೆಯೇ ಬೇರೆ. ಮಾಣಿಕ್ಯ, ಅಪೂರ್ವ, ಮತ್ತು ಹೆಬ್ಬುಲಿಯಲ್ಲಿ ಒಂದಾಗಿದ್ದ ಸುದೀಪ್ ಮತ್ತು ರವಿಚಂದ್ರನ್ ಜೋಡಿ, ಕೋಟಿಗೊಬ್ಬ 3ಯಲ್ಲೂ ಒಟ್ಟಾಗ್ತಾರಾ ಎನ್ನುವ ನಿರೀಕ್ಷೆ. ಹಾಗೇನಾದರೂ ಆದರೆ.. ಅದೂ ಒಂದು ಸರ್‍ಪ್ರೈಸ್..!!!

 • ಕೀಚಕ ರವಿಚಂದ್ರನ್

  ravichandran is now keechaka

  ಪ್ರೇಮಲೋಕದ ರಣಧೀರ, ಅಣ್ಣಯ್ಯ, ಪುಟ್ನಂಜ, ಸಿಪಾಯಿ, ಕಲಾವಿದ, ರಾಮಾಚಾರಿ, ಅಂಜದಗಂಡು.. ಇಂತಹ ಟೈಟಲ್ಲುಗಳ ಸಿನಿಮಾಗಳಲ್ಲಿ ನಟಿಸಿದ್ದ ಕ್ರೇಜಿಸ್ಟಾರ್ ರವಿಚಂದ್ರನ್, ಕೀಚಕನಾಗುತ್ತಿದ್ದಾರೆ. ರವಿಚಂದ್ರನ್ ನಟಿಸುತ್ತಿರುವ ಹೊಸ ಸಿನಿಮಾ ಕೀಚಕ.

  ಕೀಚಕನಿಗೆ ಜೋಡಿಯಾಗಿರೋದು ಅಪೂರ್ವ. ಯಾರು ಈ ಅಪೂರ್ವ ಎಂದು ತಲೆಕೆಡಿಸಿಕೊಳ್ಳಬೇಡಿ. ರವಿಚಂದ್ರನ್ ನಿರ್ದೇಶನದ ಅಪೂರ್ವ ಸಿನಿಮಾ ನೆನಪಿಸಿಕೊಳ್ಳಿ. ಅದೇ ಅಪೂರ್ವ ಮತ್ತೊಮ್ಮೆ ರವಿಚಂರನ್‍ಗೆ ಜೊತೆಯಾಗುತ್ತಿದ್ದಾರೆ.

  ಇದು ತಮಿಳಿನ ಧ್ರುವಂಗಲ್ ಪದಿನಾರು ಚಿತ್ರದ ರೀಮೇಕ್. ಅದು ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್. ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಶಿವರಾಜ್. ಈ ಹಿಂದೆ ತಮಿಳಿನಲ್ಲಿ ಉಪೇಂದ್ರ ಅವರ ಎ ಚಿತ್ರವನ್ನು ರೀಮೇಕ್ ಮಾಡಿದ್ದ ನಿರ್ದೇಶಕ. ಈಗ ಕನ್ನಡದಲ್ಲಿ ನಿರ್ದೇಶನಕ್ಕಿಳಿದಿದ್ದಾರೆ.

  ಚಿತ್ರಕ್ಕೆ ಪಕ್ಕಾ ದೇಸೀ ಸೊಗಡಿನ ಡೈಲಾಗು ಹೆಣೆಯುತ್ತಿರುವುದು ಮಳವಳ್ಳಿ ಸಾಯಿಕೃಷ್ಣ. ಅಂದಹಾಗೆ ಇಂಥಾದ್ದೊಂದು ಟೈಟಲ್ಲು ಕೊಟ್ಟಿದ್ದು ಬೇರ್ಯಾರೂ ಅಲ್ಲ, ಸ್ವತಃ ರವಿಚಂದ್ರನ್ ಅಂತೆ. ಸಿನಿಮಾವನ್ನು ಕೆ.ಮಂಜು ಮಾಡುತ್ತಿದ್ದಾರೆ ಅನ್ನೋ ಸುದ್ದಿಯಿದೆ.

 • ಕೃಷ್ಣ ರವಿಚಂದ್ರನ್‍ಗೆ ಶ್ರೀನಿವಾಸಪ್ರಭು ಡಬ್ಬಿಂಗ್

  srinivasa prabhu to dub for ravichandran's krithsna role

  ಕ್ರೇಜಿ ಸ್ಟಾರ್ ರವಿಚಂದ್ರನ್ ಅವರದ್ದು ವಿಶಿಷ್ಟವಾದ ಧ್ವನಿ. ಇಂದಿಗೂ ರವಿಚಂದ್ರನ್ ಅವರನ್ನು ಮಿಮಿಕ್ರಿ ಮಾಡುವವರು, ಪ್ರೇಮಲೋಕ, ರಣಧೀರ, ಅಂಜದಗಂಡು ಮೊದಲಾದ ಚಿತ್ರಗಳಲ್ಲಿನ ಧ್ವನಿಯನ್ನೇ ಅನುಸರಿಸ್ತಾರೆ. ಆದರೆ, ಸ್ವಾರಸ್ಯವೇನೂ ಗೊತ್ತೇ.. ಅದು ರವಿಚಂದ್ರನ್ ಧ್ವನಿಯಲ್ಲ. ಆರಂಭದ ದಿನಗಳಲ್ಲಿ ರವಿಚಂದ್ರನ್ ತಮ್ಮ ಪಾತ್ರಗಳಿಗೆ ಶ್ರೀನಿವಾಸಪ್ರಭು ಅವರಿಂದ ಡಬ್ ಮಾಡಿಸ್ತಾ ಇದ್ರು. ಈಗ ಮತ್ತೊಮ್ಮೆ ರವಿಚಂದ್ರನ್‍ಗೆ ಕಂಠವಾಗಲು ಬಂದಿದ್ದಾರೆ ಶ್ರೀನಿವಾಸಪ್ರಭು.

  ಕುರುಕ್ಷೇತ್ರ ಚಿತ್ರದಲ್ಲಿ ಶ್ರೀಕೃಷ್ಣನ ಪಾತ್ರ ಮಾಡಿರುವ ರವಿಚಂದ್ರನ್‍ಗೆ ಶ್ರೀನಿವಾಸಪ್ರಭು ಅವರೇ ಧ್ವನಿ ಕೊಡಲಿದ್ದಾರೆ. ಕನ್ನಡದ ಮೇಲೆ ಅದ್ಭುತ ಹಿಡಿತ ಹೊಂದಿರುವ, ರಂಗಭೂಮಿಯ ನಂಟೂ ಇರುವ ಶ್ರೀನಿವಾಸ್‍ಪ್ರಭು ಅವರಿಗೆ ಪೌರಾಣಿಕ ಚಿತ್ರದ ಡೈಲಾಗ್ ಹೇಳುವುದು ನೀರು ಕುಡಿದಷ್ಟೇ ಸುಲಭ.

  ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಕುರುಕ್ಷೇತ್ರ ಕೆಲವೇ ದಿನಗಳಲ್ಲಿ ಡಬ್ಬಿಂಗ್ ಮುಗಿಸಿ, ಆಡಿಯೋ ಲಾಂಚ್ ಮಾಡೋಕೆ ಸಿದ್ಧವಾಗುತ್ತಿದೆ. ದರ್ಶನ್ ಅಭಿನಯದ 50ನೇ ಸಿನಿಮಾ ಅಷ್ಟೇ ಅಲ್ಲ, ಹೆಚ್ಚೂ ಕಡಿಮೆ ಅರ್ಧಕ್ಕರ್ಧ ಕನ್ನಡ ಚಿತ್ರರಂಗವೇ ಪಾಲ್ಗೊಂಡಿರುವ ಸಿನಿಮಾ ಕುರುಕ್ಷೇತ್ರ.

 • ಕೆಲವರು ತಗೊಂಡ್ರು. ನಂಗೆ ಕೊಟ್ರು : ಗೌರವ ಡಾಕ್ಟರೇಟ್ ಪದವಿಗೆ ರವಿಚಂದ್ರನ್ ಹೇಳಿದ್ದು ಇಷ್ಟು

  ravichandran 's reaction on doctorate

  ಆ ದೃಶ್ಯ ರಿಲೀಸ್ ಹೊತ್ತಲ್ಲಿ ರವಿಚಂದ್ರನ್ ಖುಷಿ ಖುಷಿಯಾಗಿದ್ದಾರೆ. ಕಾರಣ ಇಷ್ಟೆ.. ಅವರೀಗ ಬರೀ ರವಿಚಂದ್ರನ್ ಅಲ್ಲ. ಡಾ. ರವಿಚಂದ್ರನ್. ಈ ಕುರಿತು ಮಾತನಾಡಿದ ರವಿಚಂದ್ರನ್ ಅಕ್ಟೋಬರ್ ೧೮ ನನಗೆ ತುಂಬಾ ವಿಶೇಷವಾದ ದಿನ. ನನ್ನ ಮಗಳ ಹುಟ್ಟುಹಬ್ಬ. ಅವಳ ಹುಟ್ಟುಹಬ್ಬದ ಸಂಭ್ರಮದಲ್ಲಿರುವಾಗಲೇ ನನಗೆ ಯುನಿವರ್ಸಿಟಿಯವರು ಗೌರವ ಡಾಕ್ಟರೇಟ್ ಕೊಡುತ್ತಿದ್ದೇವೆ ಎಂದು ಕರೆ ಮಾಡಿ ತಿಳಿಸಿದರು. ಅದಾದ ಮೇಲೆ ಚಿತ್ರರಂಗದ ಹಲವರು ಇಡೀ ದಿನ ಮೆಸೇಜ್ ಮಾಡಿದರು. ಯು ಡಿಸರ್ವ್ ಇಟ್ ಎಂದರು. ಇನ್ನೂ ಕೆಲವರು ಲೇಟ್ ಆಯ್ತು, ಯಾವಾಗಲೋ ಬರಬೇಕಿತ್ತು ಎಂದರು.

  ನಾನು ಹೇಳಿದ್ದು ಇಷ್ಟೆ, ಅದು ಯಾವಾಗ ಬರಬೇಕೋ ಅವಾಗಲೇ ಬರಬೇಕು. ಅದು ಕಿತ್ತುಕೊಂಡು ತೆಗೆದುಕೊಳ್ಳೋ ವಸ್ತುವಲ್ಲ. ಕೆಲವರು ತಗೊಂಡ್ರು, ನನಗೆ ಕೊಟ್ರು. ಅಷ್ಟೇ ವ್ಯತ್ಯಾಸ. ಎಷ್ಟೋ ಜನ ನನಗೆ ಗೌರವ ಡಾಕ್ಟರೇಟ್ ಕೊಡಿಸ್ತೀನಿ ಎಂದು ಬಂದಿದ್ದರು. ಅದು ಬಂದಾಗ ಬರಲಿ ಎಂದು ಅವರನ್ನು ದೂರ ಕಳಿಸಿದ್ದೆ ಎಂದಿದ್ದಾರೆ ರವಿಚಂದ್ರನ್.

  ಈ ಗೌರವ ಡಾಕ್ಟರೇಟ್ ಕೊಟ್ಟಿರುವುದು ರವಿಚಂದ್ರನ್ ಅನ್ನೋ ವ್ಯಕ್ತಿಗಲ್ಲ, ಮಾಡಿರುವ ಕೆಲಸಕ್ಕೆ. ಇದು ಗೌರವ, ಜವಾಬ್ದಾರಿ ಎರಡನ್ನೂ ಹೆಚ್ಚಿಸಿದೆ ಎಂದಿದ್ದಾರೆ.

 • ಕ್ಯಾಮೆರಾ ಬೇಡ, ಟಿವಿ ಲೈವ್ ಬೇಡ, ಮಗಳನ್ನು ಹರಸಿ ಹೋಗಿ - ಮಾಧ್ಯಮಗಳಿಗೆ ರವಿಚಂದ್ರನ್ ಮನವಿ

  ravichandran requests no camera and coverage for daughter's marriage

  ದಯವಿಟ್ಟು ಪ್ರತಿಯೊಬ್ಬರೂ ಕುಟುಂಬ ಸಮೇತರಾಗಿ ಮದುವೆಗೆ ಬನ್ನಿ. ಹೂಗುಚ್ಛ ಬೇಡ. ಕ್ಯಾಮೆರಾ ಕೂಡಾ ಬೇಡ. ನಿಮ್ಮ ಫೋಟೋಗಳನ್ನು ನಿಮಗೆ ತಲುಪಿಸುವ ಹೊಣೆ ನನ್ನದು. ಪತ್ರಕರ್ತರೂ ಅಷ್ಟೆ, ದಯವಿಟ್ಟು ಮದುವೆಗೆ ಬನ್ನಿ. ನನ್ನ ಮಗಳನ್ನು ಹರಸಿ. ಆದರೆ, ಕ್ಯಾಮೆರಾ ಬೇಡ. ವಿಡಿಯೋ ಬೇಡ. ಟಿವಿಯಲ್ಲಿ ನೇರಪ್ರಸಾರವೂ ಬೇಡ. ಇದು ಅಪ್ಪಟ ನನ್ನ ಮನೆಯ, ಮಗಳ ಖಾಸಗಿ ಕಾರ್ಯಕ್ರಮ. ನಿಮಗೆ ಬೇಕಾದ ವಿಡಿಯೋ ಫುಟೇಜ್ ನಾನೇ ತಲುಪಿಸುತ್ತೇನೆ.

  ಇಂಥಾದ್ದೊಂದು ಮನವಿ ಮಾಡಿರುವುದು ಕ್ರೇಜಿ ಸ್ಟಾರ್ ವಿ.ರವಿಚಂದ್ರನ್. ನನ್ನ ಮಗಳ ಮದುವೆಗೆ ನಿಮ್ಮೆಲ್ಲರ ಆಶೀರ್ವಾದವೂ ಬೇಕು ಎನ್ನುವ ರವಿಚಂದ್ರನ್, ಮದುವೆಗೆ ಬಂದು ಎಲ್ಲರೊಂದಿಗೆ ಬೆರೆತು, ನಕ್ಕು ನಲಿಯಿರಿ. ಟಿವಿ ನೇರಪ್ರಸಾರ ಎಂದರೆ, ಬಂಧು, ಸಂಬಂಧಿಕರು ಎಲ್ಲರನ್ನೂ ಸೈಡಿಗೆ ತಳ್ಳಿ, ಸ್ಟಾರ್‍ಗಳನ್ನೇ ತೋರಿಸುತ್ತಾರೆ. ಅದೆಲ್ಲ ಬೇಡ. ಖುಷಿ ಖುಷಿಯಾಗಿ ಕಳೆಯೋಣ ಎಂದಿದ್ದಾರೆ ರವಿಚಂದ್ರನ್.

  ನಾನು ಕೂಡಾ ಮಾಧ್ಯಮಗಳಿಂದಲೇ ಬೆಳೆದವನು. ನಿಮಗೆ ಬೇಕಾದ ವಿಡಿಯೋ ನಾನು ಕೊಡುತ್ತೇನೆ. ನನಗೆ ಬೇಕಾದ ಖಾಸಗಿತನವನ್ನು ನನಗೆ ಕೊಡಿ ಎನ್ನುವುದು ರವಿಚಂದ್ರನ್ ಮನವಿ. 

  ಈ ಮನವಿಯನ್ನು ಎಲ್ಲ ಟಿವಿ ಚಾನೆಲ್‍ಗಳೂ ಮಾನ್ಯ ಮಾಡಿದರೆ, ರವಿಚಂದ್ರನ್ ಮಗಳ ಮದುವೆಯ ನೇರಪ್ರಸಾರ ನೋಡುವ ಅವಕಾಶ ಕನ್ನಡಿಗರಿಗೆ ಇರುವುದಿಲ್ಲ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery