ಶ್ರೀರಾಮ ಎಂದರೆ ಡಾ.ರಾಜ್.. ಕೃಷ್ಣ ಎಂದರೂ ಡಾ.ರಾಜ್.. ವೆಂಕಟೇಶ್ವರ, ರಾಘವೇಂದ್ರ ಸ್ವಾಮಿ, ಭಬ್ರುವಾಹನ, ಮಯೂರ, ಶ್ರೀಕೃಷ್ಣದೇವರಾಯ, ಕನಕದಾಸ, ಕಾಳಿದಾಸ, ಹಿರಣ್ಯಕಶಿಪು.... ಹೀಗೆ ಪೌರಾಣಿಕ, ಐತಿಹಾಸಿಕ ಪಾತ್ರಗಳನ್ನು ನೆನಪಿಸಿಕೊಂಡಾಗಲೆಲ್ಲ ಕಣ್ಣ ಮುಂದೆ ರಾಜ್ ಬರುತ್ತಾರೆ. ಆದರೆ.. ದುರ್ಯೋಧನ..
ದುರ್ಯೋಧನ ಎಂದರೆ ಕನ್ನಡಿಗರ ಕಣ್ಣ ಮುಂದೆ ಅನುಮಾನವೇ ಇಲ್ಲದಂತೆ ದರ್ಶನ್ ಬರುತ್ತಾರೆ. ದರ್ಶನ್ಗೆ ಅಂಥಾದ್ದೊಂದು ಸರ್ಟಿಫಿಕೇಟ್ ಕೊಟ್ಟಿರುವುದು ಬೇರಾರೂ ಅಲ್ಲ, ಕುರುಕ್ಷೇತ್ರದ ಶ್ರೀಕೃಷ್ಣ, ಕ್ರೇಜಿ ಸ್ಟಾರ್ ರವಿಚಂದ್ರನ್.
ಕುರುಕ್ಷೇತ್ರದ ಸೆಟ್ನಲ್ಲಿ ಮೇಕಪ್ಪಿನಲ್ಲಿ ದರ್ಶನ್ ಅವರನ್ನು ನೋಡಿದ ದರ್ಶನ್, ಲೋ..ಮಗನೇ.. ನಿನ್ನ ಬಿಟ್ಟರೆ ಇನ್ನೊಬ್ಬ ದುರ್ಯೋಧನ ಕರ್ನಾಟಕಕ್ಕೆ ಇಲ್ಲ ಎಂದಿದ್ದರಂತೆ. ಕನ್ನಡಿಗರು ದುರ್ಯೋಧನನನ್ನು ನೋಡಿಲ್ಲ. ದರ್ಶನ್ರನ್ನು ನೋಡಿದೆ. ಅವನನ್ನ ನೋಡಿದ ಮೇಲೆ ಇನ್ನೊಂದು ಹೋಲಿಕೆ ಕಾಣಿಸಲಿಲ್ಲ ಎಂದಿದ್ದಾರೆ ರವಿಚಂದ್ರನ್.
ಅಲ್ಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಒಂದು ಅತಿದೊಡ್ಡ ಸರ್ಟಿಫಿಕೇಟ್ ಸಿಕ್ಕಂತಾಗಿದೆ. ಏಕೆಂದರೆ ರವಿಚಂದ್ರನ್ ಹೊಗಳುವುದು ಅಂದ್ರೆ ಸುಮ್ಮನೆ ಮಾತಲ್ಲ. ಅಷ್ಟು ಸಲೀಸಾಗಿ ಯಾರನ್ನೂ ಹೊಗಳದ ರವಿಚಂದ್ರನ್, ದರ್ಶನ್ರನ್ನು ಹೊಗಳಿದ್ದಾರೆ ಎಂದರೆ, ದರ್ಶನ್ ಅಬ್ಬರಿಸಿದ್ದಾರೆ ಎಂದೇ ಅರ್ಥ.