ರವಿಚಂದ್ರನ್ರನ್ನು ಕ್ರೇಜಿಸ್ಟಾರ್ ಆಗಿಸಿದ ಸಿನಿಮಾ ಪ್ರೇಮಲೋಕ. ಆಗಿನ ಕಾಲಕ್ಕೆ ಹಾಡುಗಳ ಮೂಲಕವೇ ರೋಮಾಂಚನ ಮೂಡಿಸಿದ್ದ ಸಿನಿಮಾ ಅದು. ವಿಶೇಷ ಅಂದ್ರೆ, ರವಿಚಂದ್ರನ್ ಹೀರೋ ತಂದೆಯಾಗಿ ನಟಿಸಿರುವ ಪಡ್ಡೆಹುಲಿಯಲ್ಲಿ 10 ಹಾಡುಗಳಿವೆ. ಅವುಗಳಲ್ಲಿ ಟಪ್ಪಾಂಗುಚ್ಚಿ, ಪ್ರೇಮಗೀತೆಗಳ ಜೊತೆಗೆ, ಭಾವಗೀತೆ, ವಚನ ಸಾಹಿತ್ಯದ ಹಾಡುಗಳೂ ಇವೆ.
ಇನ್ನೂ ಒಂದು ಹೋಲಿಕೆ ಇದೆ. ರವಿಚಂದ್ರನ್ ಪ್ರೇಮಲೋಕದಲ್ಲಿ ವಿಷ್ಣು, ಅಂಬಿ, ಶ್ರೀನಾಥ್, ಪ್ರಭಾಕರ್, ಲೋಕೇಶ್ ಎಲ್ಲರೂ ಇದ್ದರು. ಪುಟ್ಟ ಪುಟ್ಟ ಪಾತ್ರಗಳಲ್ಲಿ ನಟಿಸಿ, ನನಗೆ ಶುಭ ಕೋರಿದ್ದರು. ಈಗ ಪಡ್ಡೆಹುಲಿಯಲ್ಲಿ ನಾನಿದದ್ದೇನೆ. ಹೊಸ ಹುಡುಗ ಶ್ರೇಯಸ್ಗೆ ಶುಭ ಕೋರುತ್ತಿದ್ದೇನೆ ಎಂದಿದ್ದಾರೆ ಕ್ರೇಜಿ ಸ್ಟಾರ್ ರವಿಚಂದ್ರನ್.
ಅಷ್ಟೇ ಅಲ್ಲ, ಪಡ್ಡೆಹುಲಿಯಲ್ಲಿ ಪುನೀತ್ ರಾಜ್ಕುಮಾರ್, ರಕ್ಷಿತ್ ಶೆಟ್ಟಿ, ನಿರ್ದೇಶಕ ಯೋಗರಾಜ್ ಭಟ್, ಸುಧಾರಾಣಿ ಕೂಡಾ ಇದ್ದಾರೆ. ಆದರೆ, ಪ್ರೇಮಲೋಕ, ಪಡ್ಡೆಹುಲಿಯನ್ನು ಹೋಲಿಸುವುದು ಬೇಡ, ಆ ಚಿತ್ರವೇ ಬೇರೆ. ಪಡ್ಡೆಹುಲಿಯೇ ಬೇರೆ. ಪಡ್ಡೆಹುಲಿಯನ್ನು ಹೊಸಬರ ಚಿತ್ರ ಎಂದು ನೋಡಿ ಎಂದು ಮನವಿ ಮಾಡಿರೋದು ರವಿಚಂದ್ರನ್.
ಕೆ.ಮಂಜು ಪುತ್ರ ಶ್ರೇಯಸ್, ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡ್ತಿರೋ ಸಿನಿಮಾ ಇದು. ಗುರು ದೇಶಪಾಂಡೆ ನಿರ್ದೇಶನದ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ನಾಯಕಿ.