` ravichandran, - chitraloka.com | Kannada Movie News, Reviews | Image

ravichandran,

 • ಪಾಪ.. ಪ್ರೇಮಲೋಕದ ರಸಿಕ ರವಿಗೆ ಹಿಂಗಾ ಮಾಡೋದು..!!!

  no heroine, no romance for ravichadran in aa drishya

  ರವಿಚಂದ್ರನ್ ಅಂದರೆ ಕಣ್ಣ ಮುಂದೆ ಕಾಣಿಸೋದೇ ಪ್ರೇಮಲೋಕ. ರಸಿಕ, ಚೆಲುವ, ರಣಧೀರ, ಕಲಾವಿದ.. ಏನೇ ಕರೆದರೂ ಅಲ್ಲೊಂದು ಪ್ರೀತಿಯ ಕಥೆ ಇದ್ದೇ ಇರಬೇಕು. ಕನ್ನಡ ಚಿತ್ರರಂಗದಲ್ಲಿ ಪ್ರೀತಿ ಪ್ರೇಮ ಪ್ರಣಯಕ್ಕೆ ರಾಯಭಾರಿ ಎಂದೇನಾದರೂ ಇದ್ದರೆ ಅದು ರವಿಚಂದ್ರನ್ ಮಾತ್ರ. ಇಂತಹ ರವಿಚಂದ್ರನ್‌ಗೆ ಶಿವಗಣೇಶ್ ಏನ್ ಮಾಡಿದ್ದಾರೆ ಗೊತ್ತೇ..

  ಆ ದೃಶ್ಯ ಚಿತ್ರದಲ್ಲಿ ಒಂದೇ ಒಂದು ರೊಮ್ಯಾನ್ಸ್ ಸೀನ್ ಅಥವಾ ಹಾಡು ಇಲ್ಲ. ಹೋಗಲಿ ಪಾಪ ಎಂದರೆ, ರವಿಚಂದ್ರನ್‌ಗೆ ನಾಯಕಿಯೇ ಇಲ್ಲ.

  ಕುರುಕ್ಷೇತ್ರದಲ್ಲಿ ಕೃಷ್ಣನ ಪಾತ್ರ ಕೊಟ್ಟರೂ ರೊಮ್ಯಾನ್ಸ್ ಇರಲಿಲ್ಲ. ಇಲ್ಲಿ ನಾಯಕಿಯೇ ಇಲ್ಲ. ರವಿಚಂದ್ರನ್ ಅವರನ್ನು ನಿರ್ದೇಶಕರು ಬೇರೆಯದೇ ರೀತಿಯಲ್ಲಿ ನೋಡ್ತಿದ್ದಾರೆ ಎಂದು ನಗುತ್ತಾರೆ ರವಿಚಂದ್ರನ್.

  ನಾಯಕಿಯರಿಲ್ಲದ, ರೊಮ್ಯಾನ್ಸ್ ಇಲ್ಲದ, ಹಾಡೂ ಇಲ್ಲದ ಚಿತ್ರದಲ್ಲಿ ರವಿಚಂದ್ರನ್ ಹೇಗಿರುತ್ತಾರೆ.. ಅಂದಹಾಗೆ.. ಚಿತ್ರದಲ್ಲಿ ಅವರದ್ದು ಎರಡು ಶೇಡ್ ಪಾತ್ರ. ಒಂದು ಯುವಕ ಆಫೀಸರ್ ಮತ್ತೊಂದು ವಾಕಿಂಗ್ ಸ್ಟಿಕ್ ಹಿಡಿದೇ ನಡೆದಾಡುವ ನಿವೃತ್ತ ಅಧಿಕಾರಿ.

 • ಪಾಪ.. ರವಿಚಂದ್ರನ್‍ಗೆ ಮುನಿರತ್ನ ಹೀಗೆ ಮಾಡಬಾರದಿತ್ತು..!

  krishna ravichandran is mssing this in kurukshetra

  ಕ್ರೇಜಿ ಸ್ಟಾರ್ ರವಿಚಂದ್ರನ್, ಕನ್ನಡ ಚಿತ್ರರಂಗದ ಕನಸುಗಾರ. ಸೊಗಸುಗಾರ. ಈ ಚೆಲುವಾಂತ ಚೆನ್ನಿಗ ಕುರುಕ್ಷೇತ್ರ ಚಿತ್ರದಲ್ಲಿ ಕೃಷ್ಣನ ಪಾರ್ಟು ಹಾಕಿದ್ದಾರೆ. ಆದರೆ, ನೋಡಿ.. ಕೃಷ್ಣ ಅಂದಮೇಲೆ ಗೋಪಿಕೆಯರು ಇರಬೇಕಲ್ವಾ..? 16 ಸಾವಿರ ಚೆಲುವೆಯರ ಚೆಲುವಾಂತ ಚೆಲುವ ಕೃಷ್ಣನ ಪಾತ್ರ ಮಾಡಿರುವ ರವಿಚಂದ್ರನ್‍ಗೆ ಕುರುಕ್ಷೇತ್ರ ಚಿತ್ರದಲ್ಲಿ ಮುನಿರತ್ನ ಏನ್ ಮಾಡಿದ್ದಾರೆ ಗೊತ್ತಾ..?

  ಕೃಷ್ಣನ ಪಾತ್ರ ಕೊಟ್ಟಿದ್ದರೂ ಹುಡುಗಿಯರಿಲ್ಲ. ರೊಮ್ಯಾನ್ಸ್ ಇಲ್ಲ. ಎಲ್ಲರೂ ದ್ರಾಕ್ಷಿ ಅಂದ ಕೂಡ್ಲೇ ನನ್ನ ನೆನಪಿಸಿಕೊಳ್ತಾರೆ. ಇಲ್ಲಿ ದ್ರಾಕ್ಷಿ ತಿನ್ನಿಸೋದು ಕೂಡಾ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಕೃಷ್ಣ ಅಂತ ಯಾರಾದ್ರೂ ಇದ್ರೆ ಅದು ನಾನು. ಲವ್ ಮಾಡಿಸೋ ನಾನು ಚಿತ್ರದಲ್ಲಿ ಯುದ್ಧ ಶುರು ಮಾಡಿಸುತ್ತೇನೆ ಎಂದು ಚಟಾಕಿ ಹಾರಿಸಿದ್ದಾರೆ ರವಿಚಂದ್ರನ್.

 • ಪಾರುಲ್ ಮಿಸ್ಸಿಂಗ್.. ನಾಟ್ ರೀಚಬಲ್ - ಸೀಜರ್ ಟೀಂ

  seizer director prpducer upset on heroine parul

  ಬಿಡುಗಡೆಯ ಹೊಸ್ತಿಲಲ್ಲಿ ನಿಂತಿರುವ ಚಿತ್ರ ಸೀಜರ್. ಆದರೆ, ಚಿತ್ರದ ಪ್ರಚಾರಕ್ಕೆ ಚಿತ್ರದ ಕಲಾವಿದರೇ ಸಹಕರಿಸುತ್ತಿಲ್ಲವಾ..? ಸೀಜರ್ ಚಿತ್ರದ ನಿರ್ಮಾಪಕ, ನಿರ್ದೇಶಕರ ಮಾತು ಕೇಳಿದರೆ ಹಾಗನ್ನಿಸೋದು ಸಹಜ.

  ಚಿತ್ರದ ನಾಯಕಿ ಪಾರುಲ್ ಯಾದವ್. ಆದರೆ, ನಿರ್ಮಾಪಕರಿಗೆ, ನಿರ್ದೇಶಕರಿಗೆ ಸಿಗುತ್ತಿಲ್ಲ. ಫೋನ್ ಸ್ವಿಚ್‍ಆಫ್. ಅವರು ಉಳಿದುಕೊಂಡಿರುವ ಹೋಟೆಲ್‍ಗೆ ಹೋಗಿ ಗಂಟೆಗಟ್ಟಲೆ ಕಾದರೂ ಸಿಕ್ಕಲ್ಲ. ತಾವು ನಟಿಸಿರುವ ಸಿನಿಮಾ ಬಗ್ಗೆ ಒಂದೇ ಒಂದು ಮಾತೂ ಆಡಲ್ಲ. ನಾವು ಪಾರುಲ್ ಅವರಿಗೆ ಯಾವುದೇ ಸಂಭಾವನೆ ಬಾಕಿ ಉಳಿಸಿಕೊಂಡಿಲ್ಲ ಎನ್ನುತ್ತಾರೆ ಚಿತ್ರದ ನಿರ್ದೇಶಕ ವಿನಯ್ ಕೃಷ್ಣ.

  ನಿರ್ಮಾಪಕ ತ್ರಿವಿಕ್ರಮ್ ಅವರದ್ದೂ ಇದೇ ಆರೋಪ. ಚಿತ್ರ 4 ವರ್ಷಗಳ ಹಿಂದೆ ಶುರುವಾಯ್ತು. ಆರಂಭದಲ್ಲಿ ಕನ್ನಡದಲ್ಲಷ್ಟೇ ಎಂದುಕೊಂಡಿದ್ದೆವು, ನಂತರ 4 ಭಾಷೆಯಲ್ಲೂ ನಿರ್ಮಿಸಿದೆವು. 15 ಕೋಟಿ ವೆಚ್ಚದ ಸಿನಿಮಾ. ಬಿಡುಗಡೆ ವಿಳಂಬವಾಗಿದ್ದಕ್ಕೆ ಬೇರೆ ಬೇರೆ ಕಾರಣಗಳಿವೆ. ಕಲಾವಿದರು ನಿರ್ಮಾಪಕರಿಗೆ ಈ ರೀತಿ ಅವಮಾನ ಮಾಡಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ ತ್ರಿವಿಕ್ರಮ್.

  ಚಿತ್ರತಂಡದ ಮುನಿಸು, ಆಕ್ರೋಶವೇನೇ ಇರಲಿ, ಸೀಜರ್ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಉಳಿದದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು.

 • ಪೈಲ್ವಾನ್ ಗೆಲ್ತಾನಾ..? ರವಿಚಂದ್ರನ್ ನುಡಿದ ಭವಿಷ್ಯ ಏನ್ ಗೊತ್ತಾ..?

  crazy star predicts pailwan to be a super hit

  ‘ಆ ಕೃಷ್ಣ ಗೆದ್ದಿದ್ದಾನೆ. ಇನ್ನೂ ಈ ಕೃಷ್ಣನೂ ಗೆಲ್ತಾನೆ’ ಈ ಮಾತನ್ನು ರವಿಚಂದ್ರನ್ ಹೇಳಿದ್ದು ಪೈಲ್ವಾನ್ ಚಿತ್ರದ ಸುದ್ದಿಗೋಷ್ಟಿಯಲ್ಲಿ. ‘‘ಇತ್ತೀಚಿಗೆ ಕುರುಕ್ಷೇತ್ರದಲ್ಲಿ ನಾನು ಕೃಷ್ಣನ ಗೆಟಪ್ ಹಾಕಿದ್ದೆ. ನನ್ನ ಕೈನಲ್ಲಿ ಅದು ಆಗುತ್ತಾ ಎಂದು ಅನೇಕರು ಅನುಮಾನ ಪಟ್ಟಿದ್ದರು. ಆ ಕೃಷ್ಣ ಗೆದಾಯ್ತು. ಈಗ ಈ ಕೃಷ್ಣನೂ ಗೆಲ್ತಾನೆ. ಅನುಮಾನವಿಲ್ಲ’’ ಇದು ರವಿಚಂದ್ರನ್ ಮಾತು.

  ಅಂದಹಾಗೆ ಚಿತ್ರದ ನಿರ್ದೇಶಕ ಕೃಷ್ಣ. ಅಷ್ಟೇ ಅಲ್ಲ, ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಪಾತ್ರದ ಹೆಸರೂ ಕೃಷ್ಣ.

  ನಿರ್ದೇಶನದ ಜೊತೆಗೆ ಮೊದಲ ಬಾರಿಗೆ ಅವರು ನಿರ್ಮಾಣವನ್ನೂ ಮಾಡಿದ್ದಾರೆ. ಅವರಿಗೆ ಒಳ್ಳೆದಾಗಲಿ ಎಂದು ಹಾರೈಸಿದ ರವಿಚಂದ್ರನ್ಗೆ ಚಿತ್ರದ ಟ್ರೇಲರ್ನಲ್ಲೊಂದು ಫೈರ್ ಕಾಣಿಸಿದೆ.

  ‘ಪೈಲ್ವಾನ್ ಚಿತ್ರದಲ್ಲೊಂದು ಫೈರ್ ಇದೆ. ಜೋಷ್ ಇದೆ. ಟ್ರೇಲರ್ ನೋಡಿದವರಿಗೆ ಸಿನಿಮಾ ನೋಡಬೇಕು ಅಂತ ಅನ್ನಿಸಬೇಕು. ಪೈಲ್ವಾನ್ ಟ್ರೇಲರಿಗೆ ಆ ತಾಕತ್ತಿದೆ ಎಂದಿದ್ದಾರೆ ರವಿಚಂದ್ರನ್.

  ಅಂದಹಾಗೆ ರವಿಚಂದ್ರನ್ ಖುಷಿಗೆ ಇನ್ನೂ ಒಂದು ಕಾರಣ ಇದೆ. ಪೈಲ್ವಾನ್ ದೊಡ್ಡ ಮಟ್ಟದಲ್ಲಿ ಬರುತ್ತಿದ್ದಾನೆ. ಇಂಡಿಯಾ ಲೆವೆಲ್ಲಿನಲ್ಲಿ ಸುತ್ತುತ್ತಿದ್ದಾನೆ. ಆ ಚಿತ್ರದಲ್ಲಿ ನನ್ನ ದೊಡ್ಡಮಗ ಇದ್ದಾನೆ ಎನ್ನುವುದೇ ನನಗೆ ಖುಷಿ, ಹೆಮ್ಮೆ ಎಂದಿದ್ದಾರೆ ಕ್ರೇಜಿಸ್ಟಾರ್. ಅಂದಹಾಗೆ ರವಿಚಂದ್ರನ್ ದೊಡ್ಡ ಮಗ ಯಾರು..? ಅದನ್ನೂ ನಾವೇ ಹೇಳ್ಬೇಕಾ..?

   

 • ಪ್ರಕಾಶ್ ಬುಲೆಟ್ ಪ್ರಕಾಶ್ ಆದ ಕ್ರೇಜಿ ಸ್ಟೋರಿ

  prakash to bullet prakash

  ಕನ್ನಡ ಚಿತ್ರ ಪ್ರೇಕ್ಷಕರಿಗೆ ಪ್ರಕಾಶ್ ಎಂದರೆ, ಯಾರು ಅಂತಾರೆ. ಬುಲೆಟ್ ಪ್ರಕಾಶ್ ಎಂದರೆ, ಅವರ ಮುಖದ ಮೇಲೊಂದು ಮುಗುಳ್ನಗೆ ಸರಿದು ಹೋಗುತ್ತೆ. ಆ ಕರಿಯಾನಾ.. ಆ ದಡಿಯಾನಾ.. ಅಂಥಾ ಕೇಳ್ತಾರೆ. ಹಾಗಂತ ಅವರೆಲ್ಲ ಪ್ರಕಾಶ್ ಅವರನ್ನು ಬೈತಾರೆ ಅಂತಾನೋ.. ಲೇವಡಿ ಮಾಡ್ತಾರೆ ಅಂತಾನೋ ಅಂದ್ಕೋಬೇಕಿಲ್ಲ. ಅಭಿಮಾನಿಗಳು ಹಾಗೆ ಕರೆಯುತ್ತಲೇ ಬುಲೆಟ್‍ನ್ನು ಪ್ರೀತಿಸ್ತಾರೆ. 

  ಆದರೆ, ಈ ಪ್ರಕಾಶ್‍ಗೆ  ಬುಲೆಟ್ ಪ್ರಕಾಶ್ ಅಂತಾ ನಾಮಕರಣ ಮಾಡಿದ್ಯಾರು..? ಇಂಥಾದ್ದೊಂದು ಬುಲೆಟ್‍ನಂತಾ ಪ್ರಶ್ನೆಗೆ ಉತ್ತರ ಕೊಟ್ಟಿದ್ಧಾರೆ ಬುಲೆಟ್ ಪ್ರಕಾಶ್. ಇವರಿಗೆ ಆ ಹೆಸರು ನಾಮಕರಣ ಮಾಡಿದ್ದು ಕ್ರೇಜಿ ಸ್ಟಾರ್ ರವಿಚಂದ್ರನ್.

  ರವಿಚಂದ್ರನ್ ಅವರ ಶಾಂತಿ ಕ್ರಾಂತಿ ಚಿತ್ರದಲ್ಲಿ ಬಾಲಕನಾಗಿದ್ದ ಬುಲೆಟ್ ಪ್ರಕಾಶ್, ನಂತರ ಪ್ರೀತ್ಸು ತಪ್ಪೇನಿಲ್ಲ ಚಿತ್ರದಲ್ಲಿ ನಟಿಸಿದ್ದರು. ಅದು ಅವರ ಅಭಿನಯದ 3ನೇ ಚಿತ್ರ. ಬರೀ ಪ್ರಕಾಶ್ ಅಂದ್ರೆ ಜನ ನೆನಪಿನಲ್ಲಿಟ್ಟುಕೊಳ್ಳಲ್ಲ ಅಂತಾ ಹೇಳಿ ಬುಲೆಟ್ ಪ್ರಕಾಶ್ ಎಂದು ನಾಮಕರಣ ಮಾಡಿದರಂತೆ ರವಿಚಂದ್ರನ್. ಆಗ ಪ್ರಕಾಶ್ ಬಳಿ ಒಂದು ಭರ್ಜರಿ ಬುಲೆಟ್ ಇತ್ತು. ಆದರೆ ಅದೀಗ ಇಲ್ಲ. ಸಾಲ ತೀರಿಸಲಾಗದೆ ಮಾರಿಬಿಟ್ಟರಂತೆ ಪ್ರಕಾಶ್. 

  ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಮೊದಲ ಗುರು, ದೇವರು ಅಂದ್ರೆ ಅದು ರವಿಚಂದ್ರನ್ ಎನ್ನುತ್ತಾರೆ ಬುಲೆಟ್ ಪ್ರಕಾಶ್.

 • ಪ್ರೀತಿಯ ಮಗಳ ಮದುವೆಗೆ ರವಿಮಾಮನ ಅದ್ಭುತ ಗಿಫ್ಟ್

  ravichandran;s musical gift to dauhter geethanajl

  ಬೆಳೆದ ಮೇಲೆ ನೀನು.. ನಾನು ಮಗುವಾದೆ.. ಯಾಕೋ ಏನೋ ತಿಳಿದೇನೇ ಚಡಪಡಿಸಿದೆ ಮನಸು.. ನೋವು ನಲಿವು ಜೊತೆಗೆ ಸಂಭ್ರಮ ಅಡಗಿದೆ.. ಓಓಓಓ... ನನ್ನಾ ಮಗಳೇ..

  ಇದು ರವಿಚಂದ್ರನ್, ತಮ್ಮ ಪ್ರೀತಿಯ ಮಗಳು ಗೀತಾಂಜಲಿ ಮದುವೆಗೆ ಕೊಡುತ್ತಿರುವ ಹಾಡಿನ ಉಡುಗೊರೆ. ಈ ಹಾಡಿನ ಸಾಹಿತ್ಯ, ಸಂಗೀತ ಎಲ್ಲವೂ ಅವರದ್ದೇ. ಹಾಡು ಹಾಡಿರುವುದು ಗೌತಮ್ ಶ್ರೀವಾಸ್ತವ್.

  ಮೇ 29ನೇ ತಾರೀಕು ರವಿಚಂದ್ರನ್‍ನ ಪ್ರೀತಿಯ ಪುತ್ರಿ ಗೀತಾಂಜಲಿ ಅವರ ಮದುವೆ, ಉದ್ಯಮಿ ಅಜಯ್ ಅವರೊಂದಿಗೆ ನಡೆಯಲಿದೆ. ಅಂದಹಾಗೆ ಮೇ 29 ಅಂಬರೀಷ್ ಅವರ ಹುಟ್ಟಹಬ್ಬ. ಅದಾದ ಮಾರನೇ ದಿನ ಮೇ 30, ರವಿಚಂದ್ರನ್ ಹುಟ್ಟುಹಬ್ಬ.

  ಒಟ್ಟಿನಲ್ಲಿ ಪ್ರತಿಯೊಬ್ಬ ಮಗಳೂ ತನಗೂ ತನ್ನ ಅಪ್ಪ ಇಂಥದ್ದೊಂದು ಉಡುಗೊರೆ ಕೊಡಲಿ ಎಂದು ಬಯಸುವಂತಹ, ಮಗಳನ್ನು ಪ್ರೀತಿಸುವ ಪ್ರತಿಯೊಬ್ಬ ಅಪ್ಪನೂ, ಮಗಳಿಗೆ ಸ್ಪೆಷಲ್ ಗಿಫ್ಟ್ ಕೊಡಬೇಕು ಎಂದು ನಿರ್ಧರಿಸುವಂತಹ ಅಪರೂಪದ ಕಾಣಿಕೆಯನ್ನಂತೂ ರವಿಚಂದ್ರನ್ ಕೊಟ್ಟಿದ್ದಾರೆ.

 • ಪ್ರೀತಿಯಲ್ಲಿ ಬಂದ್ರೆ ಪ್ರೇಮಲೋಕ.. ರಣವೀಳ್ಯ ಕೊಟ್ಟು ಬಂದ್ರೆ ರಣಧೀರ

  ravichandran fans thrilled over mass dialogues

  ರವಿಚಂದ್ರನ್ ಅಂದ್ರೆ ಹತ್ತಾರು ಸಿನಿಮಾಗಳ ಹೆಸರು ಥಟ್ಟಂತ ಕಣ್ಣ ಮುಂದೆ ಬರುತ್ವೆ. ಪ್ರೇಮಲೋಕ ಮತ್ತು ರಣಧೀರ ಫಸ್ಟು ಸೆಕೆಂಡು ಲಿಸ್ಟಿನಲ್ಲೇ ಇರುತ್ವೆ. ರವಿಚಂದ್ರನ್ ಈಗ ದಶರಥನಾಗಿ ಬಂದಿದ್ದಾರೆ. ಲಾಯರ್ ದಶರಥ. ಚಿತ್ರದ ಟ್ರೇಲರ್‍ನ ಮೊದಲನೇ ಡೈಲಾಗ್ ಇದು..ಪ್ರೀತಿಯಲ್ಲಿ ಬಂದ್ರೆ ಪ್ರೇಮಲೋಕ.. ರಣವೀಳ್ಯ ಕೊಟ್ಟು ಬಂದ್ರೆ ರಣಧೀರ.

  ಅಭಿಮಾನಿಗಳ ಹೃದಯಕ್ಕೇ ಕಿಚ್ಚು ಹಚ್ಚುವ ಇಂತಹ ಡೈಲಾಗು ಬರೆಯೋದ್ರಲ್ಲಿ ಎಂ.ಎಸ್.ರಮೇಶ್ ಹೆಸರುವಾಸಿ. ಚಿತ್ರದ ಟ್ರೇಲರ್ ನೋಡಿದವರಿಗೆ ಇದು ದೃಶ್ಯ ಚಿತ್ರದಂತೆಯೇ ಥ್ರಿಲ್ಲರ್ ಸಿನಿಮಾ ಎನ್ನುವುದು ಗೊತ್ತಾಗುತ್ತೆ. ದೃಶ್ಯದಲ್ಲಿ ಕೋರ್ಟ್ ಇರಲಿಲ್ಲ, ಇಲ್ಲಿ ಕೋರ್ಟೇ ಎಲ್ಲ.

  ಸೋನಿಯಾ ಅಗರ್‍ವಾಲ್, ರಂಗಾಯಣ ರಘು, ಅಭಿರಾಮಿ, ಶೋಭರಾಜ್, ಅವಿನಾಶ್ ನಟಿಸಿರುವ ಸಿನಿಮಾಗೆ ಅಕ್ಷಯ್ ನಿರ್ಮಾಪಕರು. ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ.

 • ಪ್ರೇಮಲೋಕ ರವಿಚಂದ್ರನ್ ಅವರದ್ದಲ್ಲವಂತೆ..!

  inside story of premaloka

  ಪ್ರೇಮಲೋಕ, ರವಿಚಂದ್ರನ್ ಅವರ ಸಿನಿಮಾ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ಬರೆದ ಸಿನಿಮಾ. ಆದರೆ, ಆ ಸಿನಿಮಾ ಅಂದ್ರೆ, ಸಿನಿಮಾದ ಟೈಟಲ್ ಅವರದ್ದಲ್ಲವಂತೆ. ಅದನ್ನು ಸ್ವತಃ ರವಿಚಂದ್ರನ್ ಹೇಳಿಕೊಂಡಿದ್ದಾರೆ. 

  ಅವರ ಜೊತೆ ಡೈಲಾಗ್ ರೈಟರ್ ಆಗಿ ಕೆಲಸ ಮಾಡುತ್ತಿದ್ದ ಸೋಮು ಎಂಬುವರು ಕೊಟ್ಟ ಟೈಟಲ್ ಪ್ರೇಮಲೋಕ. ಅವರು ತಮ್ಮ ಚಿತ್ರಕ್ಕೆ ನಾ ನಿನ್ನ ಪ್ರೀತಿಸುವೆ ಹಾಗೂ ಪ್ರೇಮಲೋಕ ಎಂಬ ಎರಡು ಟೈಟಲ್ ತಂದು ಮುಂದಿಟ್ಟರಂತೆ. ರವಿಚಂದ್ರನ್, ಅವುಗಳಲ್ಲಿ ಪ್ರೇಮಲೋಕವನ್ನು ರಿಜಿಸ್ಟರ್ ಮಾಡಿಸಿದ್ರಂತೆ. ಸೋಮು ನಾ ನಿನ್ನ ಪ್ರೀತಿಸುವೆ ಟೈಟಲ್ ರಿಜಿಸ್ಟರ್ ಮಾಡಿಸಿದ್ರಂತೆ.

  ಅಷ್ಟೇ ಅಲ್ಲ, ಚಿತ್ರಕ್ಕೆ ಮೊದಲು ನಿರ್ಮಾಪಕರಾಗಿದ್ದವರು ಕೆಸಿಎನ್ ಚಂದ್ರಶೇಖರ್.ಆದರೆ ಚಿತ್ರದ ಬಜೆಟ್ 60 ಲಕ್ಷ ಎಂಬುದನ್ನು ಕೇಳಿ ಅವರು ಅದನ್ನು ಕೈಬಿಟ್ಟರು. ನಂತರ ಅದು ಕೆಸಿಎನ್ ಪ್ರೊಡಕ್ಷನ್ಸ್​ನಿಂದ ನಮಗೆ ಬಂತು. ನಂತರ ಸೃಷ್ಟಿಯಾಗಿದ್ದೇ ಪ್ರೇಮಲೋಕ. ಮುಂದಿನದ್ದು ಇತಿಹಾಸ.

 • ಪ್ರೇಮಲೋಕ ೨ ಸೃಷ್ಟಿಗೆ ರವಿಚಂದ್ರನ್ ರೆಡಿ

  ravichandran plans for premaloka 2

  ಪ್ರೇಮಲೋಕ ಕನ್ನಡ ಚಿತ್ರರಂಗಕ್ಕಷ್ಟೇ ಅಲ್ಲ, ಭಾರತೀಯ ಚಿತ್ರರಂಗಕ್ಕೇ ಹಿತವಾದ ಶಾಕ್ ಕೊಟ್ಟ ಸಿನಿಮಾ. ಟ್ರೆಂಡ್ ಸೆಟ್ಟರ್. ಈಗ ಆ ಚಿತ್ರದ ಸೀಕ್ವೆಲ್ ಮಾಡೋಕೆ ಮುಂದಾಗಿದ್ದಾರೆ. ಅದೇ ರವಿಚಂದ್ರನ್. ಬರೋಬ್ಬರಿ ೩೨ ವರ್ಷಗಳ ನಂತರ.

  ರವಿ ಜೊತೆ ಆಗ ಜ್ಯೂಲಿ (ಜೂಹಿ ಚಾವ್ಲಾ) ಇದ್ದರು. ಇನ್ನು ರವಿಚಂದ್ರನ್‌ಗೆ ಬೂಸ್ಟ್ ಕೊಟ್ಟು ಪುಟ್ಟ ಪುಟ್ಟ ಪಾತ್ರಗಳಲ್ಲಿ ಅತಿಥಿ ನಟರಾಗಿ ನಟಿಸಿದ್ದ ವಿಷ್ಣು, ಅಂಬಿ, ಪ್ರಭಾಕರ್ ಮೂವರೂ ಈಗಿಲ್ಲ.

  ಪ್ರೇಮಲೋಕ-೨ನಲ್ಲಿ ರವಿಚಂದ್ರನ್ ಮಕ್ಕಳಿರುತ್ತಾರಂತೆ. ಮನೋರಂಜನ್ ಮತ್ತು ವಿಕ್ರಂ ಇಬ್ಬರೂ ನಟಿಸಲಿದ್ದಾರಂತೆ. ಸುಮಾರು ೨೦ ವರ್ಷಗಳ ಹಿಂದೆ ಹೊಳೆದಿದ್ದ ಕಥೆ. ಇತ್ತೀಚೆಗೆ ಮಗಳ ಬರ್ತ್ ಡೇ ದಿನ ಒಂದೊಳ್ಳೇ ಶೇಪಿಗೆ ಬಂತು. ಸ್ಸೋ.. ಮಕ್ಕಳ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದೇನೆ ಎಂದಿದ್ದಾರೆ ರವಿಚಂದ್ರನ್.

 • ಪ್ರೇಮಲೋಕವೇ ಬೇರೆ.. ಪಡ್ಡೆಹುಲಿಯೇ ಬೇರೆ.. 

  ravichandran requess not to compare paddehuli with premeloka

  ರವಿಚಂದ್ರನ್‍ರನ್ನು ಕ್ರೇಜಿಸ್ಟಾರ್ ಆಗಿಸಿದ ಸಿನಿಮಾ ಪ್ರೇಮಲೋಕ. ಆಗಿನ ಕಾಲಕ್ಕೆ ಹಾಡುಗಳ ಮೂಲಕವೇ ರೋಮಾಂಚನ ಮೂಡಿಸಿದ್ದ ಸಿನಿಮಾ ಅದು. ವಿಶೇಷ ಅಂದ್ರೆ, ರವಿಚಂದ್ರನ್ ಹೀರೋ ತಂದೆಯಾಗಿ ನಟಿಸಿರುವ ಪಡ್ಡೆಹುಲಿಯಲ್ಲಿ 10 ಹಾಡುಗಳಿವೆ. ಅವುಗಳಲ್ಲಿ ಟಪ್ಪಾಂಗುಚ್ಚಿ, ಪ್ರೇಮಗೀತೆಗಳ ಜೊತೆಗೆ, ಭಾವಗೀತೆ, ವಚನ ಸಾಹಿತ್ಯದ ಹಾಡುಗಳೂ ಇವೆ. 

  ಇನ್ನೂ ಒಂದು ಹೋಲಿಕೆ ಇದೆ. ರವಿಚಂದ್ರನ್ ಪ್ರೇಮಲೋಕದಲ್ಲಿ ವಿಷ್ಣು, ಅಂಬಿ, ಶ್ರೀನಾಥ್, ಪ್ರಭಾಕರ್, ಲೋಕೇಶ್ ಎಲ್ಲರೂ ಇದ್ದರು. ಪುಟ್ಟ ಪುಟ್ಟ ಪಾತ್ರಗಳಲ್ಲಿ ನಟಿಸಿ, ನನಗೆ ಶುಭ ಕೋರಿದ್ದರು. ಈಗ ಪಡ್ಡೆಹುಲಿಯಲ್ಲಿ ನಾನಿದದ್ದೇನೆ. ಹೊಸ ಹುಡುಗ ಶ್ರೇಯಸ್‍ಗೆ ಶುಭ ಕೋರುತ್ತಿದ್ದೇನೆ ಎಂದಿದ್ದಾರೆ ಕ್ರೇಜಿ ಸ್ಟಾರ್ ರವಿಚಂದ್ರನ್.

  ಅಷ್ಟೇ ಅಲ್ಲ, ಪಡ್ಡೆಹುಲಿಯಲ್ಲಿ ಪುನೀತ್ ರಾಜ್‍ಕುಮಾರ್, ರಕ್ಷಿತ್ ಶೆಟ್ಟಿ, ನಿರ್ದೇಶಕ ಯೋಗರಾಜ್ ಭಟ್, ಸುಧಾರಾಣಿ ಕೂಡಾ ಇದ್ದಾರೆ. ಆದರೆ, ಪ್ರೇಮಲೋಕ, ಪಡ್ಡೆಹುಲಿಯನ್ನು ಹೋಲಿಸುವುದು ಬೇಡ, ಆ ಚಿತ್ರವೇ ಬೇರೆ. ಪಡ್ಡೆಹುಲಿಯೇ ಬೇರೆ. ಪಡ್ಡೆಹುಲಿಯನ್ನು ಹೊಸಬರ ಚಿತ್ರ ಎಂದು ನೋಡಿ ಎಂದು ಮನವಿ ಮಾಡಿರೋದು ರವಿಚಂದ್ರನ್.

  ಕೆ.ಮಂಜು ಪುತ್ರ ಶ್ರೇಯಸ್, ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡ್ತಿರೋ ಸಿನಿಮಾ ಇದು. ಗುರು ದೇಶಪಾಂಡೆ ನಿರ್ದೇಶನದ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ನಾಯಕಿ. 

 • ಬಕಾಸುರ ಎಂದರೆ ರಾಕ್ಷಸನಲ್ಲ.. ನಿಜ ಅರ್ಥವೇ ಬೇರೆ..!

  real meaning of buckaasura

  ಬಕಾಸುರ. ಆ ಹೆಸರು ಕೇಳಿದರೆ ನಮಗೆಲ್ಲ ತಕ್ಷಣ ನೆನಪಾಗೋದು ಮಹಾಭಾರತದಲ್ಲಿ ಬಲಭೀಮನಿಂದ ಕೊಲ್ಲಲ್ಪಟ್ಟ ರಾಕ್ಷಸ. ಬಂಡಿ ಅನ್ನ, ಎರಡು ಕೋಣ, ಒಬ್ಬ ಮನುಷ್ಯನನ್ನು ತಿನ್ನುತ್ತಿದ್ದ ರಾಕ್ಷಸ. ಅಂಥಾದ್ದೊಂದು ಹೆಸರಿನ ಸಿನಿಮಾ ಶುರುವಾದಾಗ, ಎಲ್ಲರ ತಲೆಯಲ್ಲೂ ಇದ್ದದ್ದು ಇಷ್ಟೆ. ಆದರೆ, ಬಕಾಸುರ ಅನ್ನೋ ಹೆಸರಿನಲ್ಲೇ ಹತ್ತಾರು ವಿಶೇಷ ಅಡಗಿಸಿಟ್ಟಿದ್ದಾರೆ ನಿರ್ದೇಶಕ ನವನೀತ್.

  ಈಗ ಚಿತ್ರದ ಟೈಟಲ್‍ನ ಒಂದೊಂದೇ ವಿಶೇಷಗಳನ್ನು ನೋಡಿ.ಬಕಾಸುರ ಚಿತ್ರದ ಟೈಟಲ್‍ನ್ನು ವಿಭಾಗಿಸಿ. ಬಕ್ ಅಂದ್ರೆ ಇಂಗ್ಲಿಷ್‍ನ buck ಎಂದು ತೆಗೆಕೊಳ್ಳಿ. ಹಾಗಂದ್ರೆ, ದುಡ್ಡು ಎಂದರ್ಥ. ಇಂಗ್ಲಿಷ್‍ನಲ್ಲಿ. ನಂತರ kasu ಎಂಬ ಪದವನ್ನು ತೆಗೆದುಕೊಳ್ಳಿ. ಕಾಸು ಎಂದರೆ ಕೂಡಾ ಅರ್ಥ ದುಡ್ಡು ಅನ್ನೋದೇ. 

  ಇನ್ನು ಕೊನೆಯದಾಗಿ ಉಳಿಯೋದು ಸುರ (sura) ಅನ್ನೋ ಪದ. ಅಂದರೆ ಒಳ್ಳೆಯತನಕ್ಕೆ ಹೆಸರಾದ ದೇವರು.ಚಿತ್ರದ ಕಥೆಯ ಹಿಂದಿರೋದು ಇದೇ ತತ್ವ. ಒಬ್ಬ ಮನುಷ್ಯ ದುಡ್ಡು ಇರುವಾಗ, ದುಡ್ಡು ಇಲ್ಲದೇ ಇರುವಾಗ ಹೇಗೆ ವರ್ತಿಸ್ತಾನೆ ಅನ್ನೋದನ್ನು ಚಿತ್ರ ಹೇಳುತ್ತೆ.

  ಸಾಮಾನ್ಯವಾಗಿ ಗಿಟಾರ್, ರೋಸ್ ಹಿಡಿಯುವ ರೊಮ್ಯಾಂಟಿಕ್ ಕ್ರೇಜಿ ಸ್ಟಾರ್ ರವಿಚಂದ್ರನ್, ಇಲ್ಲಿ ಸಿಗಾರು ಹಿಡಿದಿದ್ದಾರೆ. ನಿರ್ಮಾಪಕರೂ ಆಗಿರುವ ರೋಹಿತ್ ಇಲ್ಲಿ ನಾಯಕ. ವೃತ್ತಿಯಲ್ಲಿ ಲಾಯರ್. ಅಂದಹಾಗೆ ಈ ಸಿನಿಮಾ ಮಾಡಿರೋದು ಕರ್ವ ಅನ್ನೋ ಥ್ರಿಲ್ಲರ್ ಸಿನಿಮಾ ಮಾಡಿದ್ದ ಚಿತ್ರತಂಡ. ಹೀಗಾಗಿಯೇ ನಿರೀಕ್ಷೆ ಅನ್ನೋದು ಬಕಾಸುರನಂತೆಯೇ ಇದೆ.

 • ಬಕಾಸುರ ಚಿತ್ರದ ಹೀರೋ ರವಿಚಂದ್ರನ್ ಅಲ್ಲ..ಹಣ..!

  money is hero n bakasura

  ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಹೊಸ ಚಿತ್ರ ಬಕಾಸುರ. ರವಿಚಂದ್ರನ್ ಜೊತೆಗೆ ಹೀರೋ ಆಗಿರುವ ಇನ್ನೊಬ್ಬ ನಟ ಆರ್‍ಜೆ ರೋಹಿತ್. ಇಬ್ಬರದ್ದೂ ನೆಗೆಟಿವ್ ಶೇಡ್ ಇರುವ ಪಾತ್ರ. ಹಾಗಾದರೆ, ಹೀರೋ ಯಾರು..? ನಿಮಗೆ ಅಚ್ಚರಿಯಾಗಬಹುದು. ಚಿತ್ರದ ಹೀರೋ ದುಡ್ಡು.

  ಈ ಸಿನಿಮಾದಲ್ಲಿ ಹಣವೇ ಅತ್ಯಂತ ದೊಡ್ಡ ಪಾತ್ರ. ಒಬ್ಬ ಒಳ್ಳೆಯ ವ್ಯಕ್ತಿ ಹಣದ ಹಿಂದೆ ಬಿದ್ದರೆ ಏನೆಲ್ಲ ಅನಾಹುತಗಳಾಗುತ್ತವೆ ಅನ್ನುವುದೇ ಚಿತ್ರದ ಕಥಾವಸ್ತು. ಅದನ್ನು ಕಾಮಿಡಿ ಮತ್ತು ಹಾರರ್ ಮೂಲಕ ಹೇಳಿದ್ದಾರೆ ನಿರ್ದೇಶಕ ನವನೀತ್.

  ಎಷ್ಟೋ ವರ್ಷಗಳ ನಂತರ ರವಿಚಂದ್ರನ್, ನೆಗೆಟಿವ್ ರೋಲ್‍ನಲ್ಲಿ ನಟಿಸಿದ್ದಾರೆ ಎನ್ನುವುದೇ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಗಾಂಧಾರಿ ಸೀರಿಯಲ್ ಖ್ಯಾತಿಯ ಕಾವ್ಯಾಗೌಡ ಚಿತ್ರದ ನಾಯಕಿ. 

   

 • ಬಕಾಸುರದಲ್ಲಿ ಅರ್ಧಶತಕ ದಾಟಿದ ಸ್ಟಾರ್ಸ್ ಸಮ್ಮಿಲನ

  bakasura creates different record

  ಬಕಾಸುರ. ರವಿಚಂದ್ರನ್ ನಟಿಸುತ್ತಿರುವ ಈ ಚಿತ್ರದಲ್ಲಿ 50ಕ್ಕೂ ಹೆಚ್ಚು ಸ್ಟಾರ್‍ಗಳು ನಟಿಸುತ್ತಿದ್ದಾರೆ. ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್, ಗಣೇಶ್, ಪರೂಲ್ ಯಾದವ್, ನೀನಾಸಂ ಸತೀಶ್, ಮೇಘನಾ ಗಾಂವ್ಕರ್, ಮೇಘನಾ ರಾಜ್, ಶಾನ್ವಿ, ನಭಾ ನಟೇಶ್, ವಿಜಯ್ ರಾಘವೇಂದ್ರ, ಪ್ರಜ್ವಲ್ ದೇವರಾಜ್, ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್, ಶ್ರೀಮುರಳಿ.. ನಿರ್ದೇಶಕರಾದ ಸಿಂಪಲ್ ಸುನಿ, ಪವನ್ ಒಡೆಯರ್, ಅನೂಪ್ ಭಂಡಾರಿ.. ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯಾ, ಗುರುಕಿರಣ್, ರಘು ದೀಕ್ಷಿತ್.. ಹೀಗೆ ಪಟ್ಟಿ ದೊಡ್ಡದಿದೆ. ಅಧಿಕೃತ ಪಟ್ಟಿ ಪ್ರಕಾರವೇ ಒಂದು ಹಾಡಿನಲ್ಲಿ ಕಾಣಿಸಿಕೊಂಡಿರುವ ಚಿತ್ರೋದ್ಯಮದ ಸೆಲಬ್ರಿಟಿಗಳ ಸಂಖ್ಯೆ 56 ದಾಟಿದೆ.

  ಕನ್ನಡದಲ್ಲಿ ಕಲಾವಿದರು, ತಂತ್ರಜ್ಞರು ತೆರೆಯ ಮೇಲೆ ಕಾಣಿಸಿಕೊಳ್ಳೋದು ಹೊಸದೇನೂ ಅಲ್ಲ. ಆದರೆ, ಇಷ್ಟು ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು. ಅಫ್‍ಕೋರ್ಸ್.. ರವಿಚಂದ್ರನ್ ಎಂಬ ಹೆಸರು ಇಷ್ಟೂ ಕಲಾವಿದರು, ತಂತ್ರಜ್ಞರನ್ನು ಒಟ್ಟುಗೂಡಿಸುವಂತೆ ಮಾಡಿದೆ ಎನ್ನುವುದರಲ್ಲಿ ಅನುಮಾನವೇನೂ ಇಲ್ಲ. 

 • ಬಕಾಸುರನ ಕುಟುಂಬದಲ್ಲಿ ಯಾರೆಲ್ಲ ಇದ್ದಾರೆ..?

  buckaasura is family of lawyers

  ಆರ್‍ಜೆ ರೋಹಿತ್ ನಾಯಕರಾಗಿರುವ ಚಿತ್ರ ಬಕಾಸುರ. ಕರ್ವ ಚಿತ್ರತಂಡದ 2ನೇ ಪ್ರಯತ್ನವಿದು. ಕರ್ವದಂತ ಸಸ್ಪೆನ್ಸ್ ಥ್ರಿಲ್ಲರ್ ಮಾಡಿ ಗೆದ್ದಿದ್ದ ನವನೀತ್, ಈ ಚಿತ್ರದಲ್ಲಿಯೂ ಸಸ್ಪೆನ್ಸ್ ಥ್ರಿಲ್ಲರ್‍ನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ಪಾತ್ರಗಳು ಹಲವಾರಿವೆ. ಆದರೆ, ಚಿತ್ರದ ಕೇಂದ್ರ ಬಿಂದು ಪಾತ್ರಗಳು ಎರಡು.

  ರವಿಚಂದ್ರನ್, ಹಲವು ವರ್ಷಗಳ ನಂತರ ತೆರೆಯ ಮೇಲೆ ನೆಗೆಟಿವ್ ಶೇಡ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ಯಮಿಯಾಗಿರುವ ರವಿಚಂದ್ರನ್, ದುಡ್ಡೇ ಮುಖ್ಯ ಎಂದು ನಂಬುವ ವ್ಯಕ್ತಿ.

  ರೋಹಿತ್ ಅವರದ್ದು ಇಲ್ಲಿ ವಕೀಲನ ಪಾತ್ರ. ತನ್ನ ಕಕ್ಷಿದಾರರನ್ನು ಗೆಲ್ಲಿಸೋಕೆ ಯಾವ ರೀತಿಯ ಸಾಹಸಕ್ಕೂ ತಯಾರಾಗುವ ಯುವಕ. ರವಿಚಂದ್ರನ್ ಇವರ ಬಳಿ ಕಕ್ಷಿದಾರರಾಗಿ ಬರ್ತಾರೆ.

  ಸಿತಾರಾ ರವಿಚಂದ್ರನ್ ಪತ್ನಿಯಾಗಿದ್ದರೆ, ಕಾವ್ಯಾ ಗೌಡ ಕೂಡಾ ಯಂಗ್  ಲಾಯರ್ ಪಾತ್ರದಲ್ಲಿದ್ದಾರೆ. ಸಾಧುಕೋಕಿಲಾ, ರವಿಚಂದ್ರನ್‍ಗೆ ಪರ್ಸನಲ್ ಸೆಕ್ರೆಟರಿ. ಮಕರಂದ್ ದೇಶಪಾಂಡೆ ಖಳನಟ. ಸುಚೇಂದ್ರ ಪ್ರಸಾದ್, ಶುದ್ಧ ಕನ್ನಡದಲ್ಲಿ ವಾದ ಮಾಡುವ ವಕೀಲರಾದರೆ, ಸಿಹಿಕಹಿ ಚಂದ್ರು ಜಡ್ಜ್ ಆಗಿದ್ದಾರೆ. ಶಂಕರ್ ಅಶ್ವತ್ಥ್ ಪ್ರಮುಖ ಪಾತ್ರದಲ್ಲಿದ್ದಾರೆ.

  ಒಟ್ಟಾರೆ ಸಿನಿಮಾದಲ್ಲಿ ಲಾಯರ್‍ಗಳ ಸಂಖ್ಯೆಯೇ ಹೆಚ್ಚು. ಹೀರೋ ರೋಹಿತ್, ಸುಚೇಂದ್ರ ಪ್ರಸಾದ್, ಕಾವ್ಯಾ ಗೌಡ ಹಾಗೂ ಜಡ್ಜ್ ಸಿಹಿಕಹಿ ಚಂದ್ರು.. ಎಲ್ಲರೂ ಕರಿಕೋಟು ಧಾರಿಗಳೇ. ಸಿನಿಮಾ ಇದೇ 27ಕ್ಕೆ ರಿಲೀಸ್.

 • ಬರುತ್ತಿದೆ ಆ ದೃಶ್ಯ.. ಹೆಂಗೈತೆ ರವಿಚಂದ್ರನ್ ಗೆಟಪ್ಪು..?

  aa drisha to release on nov 8th

  ದೃಶ್ಯ ಚಿತ್ರದಲ್ಲಿ ಮಧ್ಯಮ ವರ್ಗದ ಮನೆಯ ಯಜಮಾನನಾಗಿ, ಪತ್ನಿ, ಮಕ್ಕಳ ರಕ್ಷಣೆಗೆ ಅತಿ ದೊಡ್ಡ ರಿಸ್ಕ್ ತೆಗೆದುಕೊಳ್ಳುವ ಮಧ್ಯವಯಸ್ಕನಾಗಿ ಥ್ರಿಲ್ ಕೊಟ್ಟಿದ್ದ ರವಿಚಂದ್ರನ್, ಈಗ ಆ ದೃಶ್ಯದ ಮೂಲಕ ಮತ್ತೆ ಎದುರಾಗುತ್ತಿದ್ದಾರೆ. ಕೆ.ಮಂಜು ನಿರ್ಮಾಣದ ಸಿನಿಮಾ ನವೆಂಬರ್ 8ಕ್ಕೆ ರಿಲೀಸ್ ಆಗುತ್ತಿದೆ.

  ಆ ದೃಶ್ಯಕ್ಕೆ ನಿರ್ದೇಶಕ ಜಿಗರ್‍ಥಂಡ ಖ್ಯಾತಿಯ ಶಿವಗಣೇಶ್. ಮರ್ಡರ್ ಮಿಸ್ಟರಿ ಕಥೆಯಲ್ಲಿ ರವಿಚಂದ್ರನ್ ಯಂಗ್ ಲುಕ್‍ನಲ್ಲಿ ಮಿಂಚಿದ್ದಾರೆ. ಇನ್ನೂ ಒಂದು ಗೆಟಪ್ ಇದೆಯಂತೆ. ಅದು ಸಸ್ಪೆನ್ಸ್.

  ಅಚ್ಯುತ್ ಕುಮಾರ್, ರಮೇಶ್ ಭಟ್, ಯಶ್ ಶೆಟ್ಟಿ, ಅರ್ಜುನ್ ಗೌಡ, ಚೈತ್ರ ಆಚಾರ್ ನಟಿಸಿರುವ ಚಿತ್ರದಲ್ಲಿ ರವಿಚಂದ್ರನ್ ಅವರದ್ದು ತನಿಖಾಧಿಕಾರಿಯ ಪಾತ್ರ.

 • ಬೆಳ್ಳಿ ತೆರೆಯಲ್ಲಿ ರವಿಚಂದ್ರನ್-ಮನೋರಂಜನ್ ಮಿಲನ

  father and son unite on silver screen

  ಕನ್ನಡದಲ್ಲಿ ತಂದೆ ಮಕ್ಕಳು ಬೆಳ್ಳಿ ತೆರೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿರುವುದು ಹೊಸದೇನಲ್ಲ. ಡಾ.ರಾಜ್, ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್ ಜೊತೆ, ದೇವರಾಜ್, ಪ್ರಜ್ವಲ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಈಗ ರವಿಚಂದ್ರನ್ ಮತ್ತು ಮನೋರಂಜನ್ ಸರದಿ.

  ಅಪ್ಪ ಮಕ್ಕಳನ್ನು ಒಂದಾಗಿಸುತ್ತಿರುವುದು ಉರ್ವಿ ಖ್ಯಾತಿಯ ನಿರ್ದೇಶಕ ಪ್ರದೀಪ್ ವರ್ಮಾ. ಆರಂಭದಲ್ಲಿ ಮನೋರಂಜನ್ ಪ್ರದೀಪ್ ವರ್ಮಾ ಅವರ ತಲೆಯಲ್ಲಿರಲಿಲ್ಲ. ರವಿಚಂದ್ರನ್ ಅವರಿಗೆ ಕಥೆ ಹೇಳಿದ್ದ ವರ್ಮಾ, ಅವರನ್ನು ಒಪ್ಪಿಸಿದ್ದರು ಕೂಡಾ. ಅದಾದ ಮೇಲೆ ಆಕಸ್ಮಿಕವಾಗಿ ಸಿಕ್ಕ ಮನೋರಂಜನ್ ಅವರಿಗೆ ಕಥೆ ಹೇಳಿ, ಅವರು ಇಷ್ಟಪಟ್ಟಾಗ ನಿರ್ಧಾರ ಫೈನಲ್ ಆಯ್ತು ಎಂದಿದ್ದಾರೆ ಪ್ರದೀಪ್.

  ಚಿತ್ರದಲ್ಲಿ ಮನೋರಂಜನ್ ಮತ್ತು ರವಿಚಂದ್ರನ್ ಅಪ್ಪ-ಮಗನಾಗಿಯೇ ಕಾಣಿಸಿಕೊಳ್ಳಲಿದ್ದಾರೆ. ತಂದೆ-ಮಗನ ಬಾಂಧವ್ಯದ ಸುತ್ತಲೇ ಚಿತ್ರದ ಕಥೆ ಹೆಣೆಯಲಾಗಿದೆ. ಚಿತ್ರದಲ್ಲಿ ಸಂಗೀತವೇ ಪ್ರಧಾನ ಎಂದಿದ್ದಾರೆ ಪ್ರದೀಪ್. ಡಿಸೆಂಬರ್‍ನಲ್ಲಿ ಚಿತ್ರ ಶುರುವಾಗಲಿದ್ದು, ಚಿತ್ರದ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ.

 • ಮತ್ತೆ ಒಂದಾಗುತ್ತಿದೆ ರವಿಚಂದ್ರನ್-ಉಮಾಶ್ರೀ ಜೋಡಿ

  umashree to act with ravichandran again

  ಉಮಾಶ್ರೀ, ಚಿತ್ರರಂಗದಲ್ಲಿ ಪುಟ್ಮಲ್ಲಿ ಎಂದೇ ಫೇಮಸ್. ಅವರಿಗೆ ಅಂಥಾದ್ದೊಂದು ಬಿರುದು ಸಿಗುವಂತೆ ಮಾಡಿದ್ದು ಕ್ರೇಜಿಸ್ಟಾರ್ ರವಿಚಂದ್ರನ್. ತಮ್ಮ ಪುಟ್ನಂಜ ಚಿತ್ರದಲ್ಲಿ ಉಮಾಶ್ರೀ ಅವರಿಗೆ ಅದುವರೆಗೆ ಇದ್ದ ಇಮೇಜನ್ನೇ ಬದಲಿಸಿಬಿಟ್ಟಿದ್ದರು ರವಿಚಂದ್ರನ್. ಅದಾದ ಮೇಲೆ ಮಲ್ಲ ಚಿತ್ರದಲ್ಲಿ ಉಮಾಶ್ರೀ ಮತ್ತೊಮ್ಮೆ ರವಿಚಂದ್ರನ್ ಅವರಿಗೆ ಅಮ್ಮನಾಗಿದ್ದರು. ಆ ಜೋಡಿ ಈಗ ಮತ್ತೆ ಒಂದಾಗುತ್ತಿದೆ.

  ರವಿಚಂದ್ರನ್ ಅಭಿನಯಿಸುತ್ತಿರುವ ಬ್ಯಾಟ್ರಾಯ ಚಿತ್ರದಲ್ಲಿ ಉಮಾಶ್ರೀ ನಟಿಸುತ್ತಿದ್ದಾರೆ. ಎಲೆಕ್ಷನ್‍ನಲ್ಲಿ ಸೋತ ಮೇಲೆ ಉಮಾಶ್ರೀ ಮತ್ತೊಮ್ಮೆ ಬೆಳ್ಳಿತೆರೆಗೆ ಬರುತ್ತಿದ್ದಾರೆ. ಮದನ್ ಮೋಹನ್ ರೆಡ್ಡಿ ನಿರ್ದೇಶನದ ಬ್ಯಾಟ್ರಾಯ ಚಿತ್ರ, ಆರ್.ಎಸ್. ಪ್ರೊಡಕ್ಷನ್ಸ್‍ನಲ್ಲಿ ನಿರ್ಮಾಣವಾಗುತ್ತಿದೆ.

 • ಮತ್ತೆ ಕ್ರೇಜಿಕಿಚ್ಚ ಕಾಂಬಿನೇಷನ್ - ರವಿಚಂದ್ರನ್ ಡೈರೆಕ್ಷನ್

  crazy star to direct again

  ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತೆ ನಿರ್ದೇಶನದ ಅಖಾಡಕ್ಕೆ ಇಳಿಯುತ್ತಿದ್ದಾರೆ. ರವಿಚಂದ್ರನ್ ನಿರ್ದೇಶನದ ಚಿತ್ರದ ಟೈಟಲ್ ರವಿ ಬೋಪಣ್ಣ. ಅರೆ.. ಈ ಚಿತ್ರಕ್ಕೆ ಅಜಿತ್ ಎನ್ನುವವರು ನಿರ್ದೇಶಕರಾಗಿದ್ದರಲ್ಲ ಎಂದುಕೊಳ್ಳಬೇಡಿ, ಡೈರೆಕ್ಷನ್ ಬದಲಾಗಿದೆ. ಇದುವರೆಗೆ 10 ದಿನಗಳ ಶೂಟಿಂಗ್ ಮಾಡಿದ್ದ ಫುಟೇಜ್‍ನ್ನೂ ಡಿಲೀಟ್ ಮಾಡಿ ನಿರ್ದೇಶಕರ ಕ್ಯಾಪ್ ಧರಿಸಿದ್ದಾರೆ ರವಿಚಂದ್ರನ್. ನಿರ್ದೇಶನದ ಹೊಣೆಯನ್ನು ರವಿಚಂದ್ರನ್‍ಗೇ ಬಿಟ್ಟುಕೊಟ್ಟಿರುವ ಅಜಿತ್, ನಿರ್ಮಾಪಕರಾಗಿ ಅಷ್ಟೇ ಮುಂದುವರೆದಿದ್ದಾರೆ.

  ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರಂತೆ. ಸುದೀಪ್‍ಗೆ ರವಿಚಂದ್ರನ್ ಈಗಾಗಲೇ ತಂದೆಯಾಗಿ, ಅಣ್ಣನಾಗಿ ನಟಿಸಿದ್ದಾರೆ. ಅಪೂರ್ವ ಚಿತ್ರದಲ್ಲಿ ರವಿ ಚಂದ್ರನ್ ಚಿತ್ರದಲ್ಲಿ ಸುದೀಪ್ ಅತಿಥಿ ನಟನಾಗಿ ನಟಿಸಿದ್ದರು. ಈಗ ಮತ್ತೊಮ್ಮೆ ರವಿಚಂದ್ರನ್ ಮತ್ತು ಸುದೀಪ್ ಒಟ್ಟಿಗೇ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

  ಇದು ಮಲಯಾಳಂನ ಜೋಸೆಫ್ ಚಿತ್ರದ ರೀಮೇಕ್. ನಟ ಮೋಹನ್ ಸಂಭಾಷಣೆ ಬರೆಯುತ್ತಿದ್ದು, ಕಾವ್ಯಾ ಶೆಟ್ಟಿ, ಒಬ್ಬ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇನ್ನೊಬ್ಬ ಹೀರೋಯಿನ್ ಇನ್ನೂ ಆಯ್ಕೆಯಾಗಬೇಕಿದೆ.

 • ಮತ್ತೊಮ್ಮೆ ಜಡ್ಜ್ ಆಗಲಿದ್ದಾರೆ ಕ್ರೇಜಿಸ್ಟಾರ್

  ravichandran will be judge again

  ಕ್ರೇಜಿ ಸ್ಟಾರ್ ರವಿಚಂದ್ರನ್, ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸ್ ಶೋದಲ್ಲಿ ಜಡ್ಜ್ ಆಗಿದ್ದರು. ರವಿಚಂದ್ರನ್ ಅವರ ಹೊಸ ಶೈಲಿಯ ಜಡ್ಜ್‍ಮೆಂಟ್ ವೀಕ್ಷಕರ ಮನಗೆದ್ದಿತ್ತು. ಅದೇ ರವಿಚಂದ್ರನ್ ಈಗ ಮತ್ತೊಂದು ರಿಯಾಲಿಟಿ ಶೋ ಜಡ್ಜ್ ಆಗುತ್ತಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಕಿಲಾಡಿ ಕಿಡ್ಸ್ ಕಾರ್ಯಕ್ರಮದ ನಿರ್ಣಾಯಕರಾಗಿ ಬರುತ್ತಿದ್ದಾರೆ ರವಿಚಂದ್ರನ್.

  5ರಿಂದ 13 ವರ್ಷದ ಮಕ್ಕಳು ಪಾಲ್ಗೊಳ್ಳಲಿರುವ ರಿಯಾಲಿಟಿ ಶೋದಲ್ಲಿ ರವಿಚಂದ್ರನ್ ಮುಖ್ಯ ಜಡ್ಜ್ ಆಗಿ ಭಾಗವಹಿಸಲಿದ್ದಾರೆ. 16 ಮಕ್ಕಳು ಭಾಗವಹಿಸಲಿರುವ ಸ್ಪರ್ಧೆಯಲ್ಲಿ ಪ್ರತಿವಾರವೂ ಬೇರೆ ಬೇರೆ ಕಲಾವಿದರು ಹಾಗೂ ಸಂಗೀತಗಾರರು ನಿರ್ಣಾಯಕರಾಗಿ ಭಾಗವಹಿಸುತ್ತಾರೆ. ಮುಖ್ಯ ನಿರ್ಣಾಯಕರಾಗಿ ರವಿಚಂದ್ರನ್ ಇರುತ್ತಾರೆ.

 • ಮರೆತೇನೆಂದರೆ ಮರೆಯಲಿ ಹ್ಯಾಂಗ.. ಆ ದಿನವಾ.. - ಕಿಚ್ಚ

  sudeep recalls maankiya days and ravichandran

  ಪ್ರತಿಯೊಬ್ಬರಿಗೂ ಅವರವರ ಜೀವನದಲ್ಲಿ ಕೆಲವೊಂದು ಅದ್ಭುತ ಕ್ಷಣ, ದಿನಗಳು ಇದ್ದೇ ಇರುತ್ತವೆ. ಕಿಚ್ಚ ಸುದೀಪ್‍ಗೆ ಅಂಥಾದ್ದೊಂದು ಮರೆಯಲಾಗದ ದಿನ ಮೇ 1. ಏಕೆಂದರೆ, ಅದು ರವಿಚಂದ್ರನ್‍ಗೆ ಆ್ಯಕ್ಷನ್ ಹೇಳಿದ ಆ ದಿನ.

  ಮಾಣಿಕ್ಯ, ರವಿಚಂದ್ರನ್ ಮತ್ತು ಕಿಚ್ಚ ಸುದೀಪ್ ಒಟ್ಟಿಗೇ ತೆರೆ ಮೇಲೆ ಕಾಣಿಸಿಕೊಂಡ ಮೊದಲ ಸಿನಿಮಾ. ಆ ಚಿತ್ರಕ್ಕೆ ಸುದೀಪ್ ಅವರೇ ಡೈರೆಕ್ಟರ್. ಆ ದಿನವನ್ನು ನೆನಪಿಸಿಕೊಂಡಿರುವ ಸುದೀಪ್, ಮಾಣಿಕ್ಯ ಚಿತ್ರದ ಶೂಟಿಂಗ್, ಕಥೆ, ತಂತ್ರಜ್ಞರು, ಕಲಾವಿದರ ಬಳಗವನ್ನೆಲ್ಲ ನೆನಪಿಸಿಕೊಂಡಿದ್ದಾರೆ.

  ಒಂದು ಒಳ್ಳೆಯ ಸ್ಕ್ರಿಪ್ಟ್, ಮಾನವೀಯತೆ, ಭಾವನೆಗಳ ಮೌಲ್ಯವೇ ಇದ್ದ ಕಥೆ ಅದು. ಚಿತ್ರದ ಪ್ರತಿಯೊಂದು ಹಂತವೂ ಅದ್ಭುತವಾಗಿತ್ತು. ಆದರೆ, ಫಸ್ಟ್ ಕಾಪಿ ನೋಡುವ ಭಾಗ್ಯವೇ ನನಗೆ ಸಿಗಲಿಲ್ಲ. ಆದರೆ, ರಿಲೀಸ್ ದಿನ ಚಿತ್ರವನ್ನು ಥಿಯೇಟರ್‍ನಲ್ಲಿ ನೋಡಿದಾಗ ಆದ ಸಂಭ್ರಮವೇ ಬೇರೆ. 

  ಆ ಸಂಭ್ರಮ, ಆ ಗೆಲುವು.. ನನ್ನನ್ನು ಇಂದಿಗೂ ಪ್ರತಿದಿನವೂ ಉಲ್ಲಸಿತನನ್ನಾಗಿ ಮಾಡುತ್ತದೆ ಎಂದು ಪ್ರೀತಿಯಿಂದ ಹೇಳಿಕೊಂಡಿದ್ದಾರೆ ಕಿಚ್ಚ ಸುದೀಪ್.

   

Sagutha Doora Doora Movie Gallery

Popcorn Monkey Tiger Movie Gallery