` ravichandran, - chitraloka.com | Kannada Movie News, Reviews | Image

ravichandran,

 • ಕ್ರೇಜಿ ಪುತ್ರನ ಹೆಸರು ಬದಲಾವಣೆ

  ravichandran's son manoranjan is manuranjan

  ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. ಅವರೀಗ ಮನೋರಂಜನ್ ಅಲ್ಲ, ಮನು ರಂಜನ್. ಇಂಗ್ಲಿಷ್‌ನಲ್ಲಿ ಓ ಜಾಗಕ್ಕೆ ಯು ಬಂದಿದೆ. ಅಷ್ಟೆ. ಮುಗಿಲ್ ಪೇಟೆ ಚಿತ್ರದ ಜಾಹೀರಾತಿನಲ್ಲಿ ಮನು ರಂಜನ್ ಹೆಸರು ಬದಲಾಗಿರುವುದು ಗಮನಕ್ಕೆ ಬಂದಿದೆ.

  ಇದಕ್ಕೆಲ್ಲ ಕಾರಣ ನ್ಯೂಮರಾಲಜಿ ಪ್ರಕಾರ ಈ ಬದಲಾವಣೆ ಎಂದಿರುವ ಮನುರಂಜನ್, ನನ್ನನ್ನು ಮನೆಯವರು, ಗೆಳೆಯರು ಎಲ್ಲರೂ ಕರೆಯೋದು ಮನು ಎಂದೇ. ಇದೂ ಕೂಡಾ ಹೆಸರು ಬದಲಾವಣೆಗೆ ಕಾರಣ ಎಂದಿದ್ದಾರೆ.

 • ಕ್ರೇಜಿ ಸ್ಟಾರ್ ಜೊತೆ ಬಕಾಸುರನ ಅನುಭವ

  buckasura movie directors' crazy experience with crazystar

  ಬಕಾಸುರ ಚಿತ್ರ ಇದ್ಯಲ್ಲ, ಇದು ನಿರ್ದೇಶಕ ನವನೀತ್‍ಗೆ 2ನೇ ಸಿನಿಮಾ ಅಷ್ಟೆ. ಮೊದಲ ಚಿತ್ರ ಕರ್ವ. ಅದು ಸೂಪರ್ ಹಿಟ್ ಆದ ಚಿತ್ರ. 2ನೇ ಚಿತ್ರದಲ್ಲೂ ಅದೇ ತಂಡ ಮತ್ತೆ ಒಟ್ಟುಗೂಡಿದೆ. ಹೊಸದಾಗಿ ಆ ತಂಡಕ್ಕೆ ಸೇರಿಕೊಂಡಿರೋದು ಕ್ರೇಜಿಸ್ಟಾರ್ ರವಿಚಂದ್ರನ್.

  ಒಬ್ಬ ಹೊಸ ನಿರ್ದೇಶಕನ 2ನೇ ಸಿನಿಮಾದಲ್ಲೇ ರವಿಚಂದ್ರನ್ ಅಂಥಹವರಿಗೆ ಡೈರೆಕ್ಟ್ ಮಾಡೋದು ಚಾಲೆಂಜಿಂಗ್ ಅಲ್ವಾ ಅಂತಾ ನಿರ್ದೇಶಕರನ್ನ ಕೇಳಿದ್ರೆ ಅದು ಚಾಲೆಂಜಿಂಗ್ ಅಲ್ಲ, ಥ್ರಿಲ್ಲಿಂಗ್ ಅಂತಾರೆ.

  ಒಂದ್ಸಲ ಕಥೆ ಫೈನಲ್ ಮಾಡಿದ್ಮೇಲೆ ರವಿ ಸರ್ ಜೊತೆ ಹಲವಾರು ಮೀಟಿಂಗ್‍ಗಳಾದವು. ಪ್ರತಿ ಮೀಟಿಂಗ್‍ನಲ್ಲೂ ರವಿ ಸರ್ ಕಂಫರ್ಟ್ ಎನಿಸುತ್ತಾ ಹೋದರು. ನಮ್ಮನ್ನು ಹೊಸಬರು ಎಂದು ನೋಡಲೇ ಇಲ್ಲ. ಕೆಲವು ಸಲಹೆಗಳನ್ನು ಕೊಡುತ್ತಾರೆ. ಆದರೆ, ಆಯ್ಕೆಯನ್ನು ನಮಗೇ ಬಿಡುತ್ತಾರೆ. ರವಿ ಸರ್ ಜೊತೆ ಕೆಲಸ ಮಾಡುವುದೇ ಒಂದು ಅದ್ಭುತ ಅನುಭವ ಅಂತಾರೆ ನವನೀತ್.

  ರೋಹಿತ್ ಶೆಟ್ಟಿ, ರವಿಚಂದ್ರನ್, ಕಾವ್ಯಾ ಗೌಡ ಪ್ರಮುಖ ಪಾತ್ರದಲ್ಲಿರುವ ಬಕಾಸುರ ಶುಕ್ರವಾರ ಥಿಯೇಟರ್‍ನಲ್ಲಿರುತ್ತೆ. ಜಸ್ಟ್ ಥ್ರಿಲ್.

 • ಕ್ರೇಜಿ ಸ್ಟಾರ್ ಮಗಳ ಮದುವೆ ಕ್ರೇಜಿ ಲಗ್ನಪತ್ರಿಕೆ

  crazy star's daughter marriage invitation is also crazy

  ಕ್ರೇಜಿ ಸ್ಟಾರ್ ರವಿಚಂದ್ರನ್ ಮಗಳ ಮದುವೆ ಅದ್ಧೂರಿಯಾಗಿ ಆಗುತ್ತಿದೆ. ತಾವು ಏನೇ ಮಾಡಿದರೂ ಪ್ಯಾಷನೇಟ್ ಆಗಿ ಮಾಡುವ ರವಿ, ಮುದ್ದಿನ ಮಗಳ ಮದುವೆಯ ಲಗ್ನಪತ್ರಿಕೆಯನ್ನೂ ಅಷ್ಟೇ ಪ್ಯಾಷನೇಟ್ ಆಗಿ ಮಾಡಿದ್ದಾರೆ. ಅದೂ 3ಡಿಯಲ್ಲಿ.

  ಆಮಂತ್ರಣ ಪತ್ರಿಕೆಯಲ್ಲಿ ರವಿಚಂದ್ರನ್ ಅವರ ಪೇಂಟಿಂಗ್ ಮಾದರಿಯ ಫೋಟೋದೊಂದಿಗೆ, ಮನೆಯ ಸದಸ್ಯರೆಲ್ಲರ ಹೆಸರುಗಳಿವೆ. ಅವರೆಲ್ಲರೂ ನಿಮ್ಮನ್ನು ಮದುವೆಗೆ ಆಹ್ವಾನಿಸುತ್ತಾರೆ. ಈ ಲಗ್ನಪತ್ರಿಕೆಯ ಮೌಲ್ಯ ಎಷ್ಟು ಗೊತ್ತೇ.? ಒಂದು ಪತ್ರಿಕೆಗೆ 3,000 ರೂ. 

  ರವಿಚಂದ್ರನ್ ಮುದ್ದಿನ ಮಗಳು ಗೀತಾಂಜಲಿ ಅವರ ಮದುವೆ ಉದ್ಯಮಿ ಅಜಯ್ ಅವರೊಂದಿಗೆ ಮೇ 28, 29ರಂದು ನಡೆಯಲಿದೆ.

 • ಕ್ರೇಜಿ ಸ್ಟಾರ್, ರಿಯಲ್ ಸ್ಟಾರ್ ಸಿನಿಮಾಗೆ ಓಂ ಪ್ರಕಾಶ್ ಡೈರೆಕ್ಟರ್

  ravichandran and upendra to act togerther in a movie

  ಒಬ್ಬರು ಕ್ರೇಜಿ ಸ್ಟಾರ್. ಇಡೀ ಭಾರತದ ನಿರ್ದೇಶಕರು, ನಟರು ರವಿಚಂದ್ರನ್ ಚಿತ್ರ ರಿಲೀಸ್ ಆದರೆ, ಯಾವ ರೀತಿ ಮಾಡಿರಬಹುದು ಎಂದು ನೋಡೋಕೆ ಕಾಯುತ್ತಿದ್ದರು. ಕ್ರೇಜಿ ಚಿತ್ರಗಳ ರಿಲೀಸ್ ದಿನ, ಬೆಂಗಳೂರಿನಲ್ಲಿ ವಿವಿಧ ಚಿತ್ರರಂಗದ ಖ್ಯಾತನಾಮರು ಬಂದು ನೋಡಿ ಹೋಗುತ್ತಿದ್ದರು. ರವಿ ಚಿತ್ರಗಳಲ್ಲಿ ನಮಗೊಂದು ಚಾನ್ಸ್ ಸಿಗುತ್ತಾ ಎಂದು ನಾಯಕಿಯರು ಕಾಯುತ್ತಿದ್ದರು.

  ಇನ್ನೊಬ್ಬರು ರಿಯಲ್ ಸ್ಟಾರ್. ಚಿತ್ರರಂಗದಲ್ಲಿನ ಕಥೆ, ಚಿತ್ರಕಥೆಗಳ ಸ್ವರೂಪವನ್ನೇ ಬದಲಿಸಿದ ನಿರ್ದೇಶಕ. 

  ಈ ಇಬ್ಬರನ್ನೂ ಈಗ ಒಂದುಗೂಡಿಸಿದ್ದಾರೆ ನಿರ್ದೇಶಕ ಓಂಪ್ರಕಾಶ್ ರಾವ್. ಕನಕಪುರ ಶ್ರೀನಿವಾಸ್ ನಿರ್ಮಾಪಕರಾಗಿದ್ದು, ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಶಾನ್ವಿ ಶ್ರೀವಾಸ್ತವ್ ಹಾಗೂ  ಮಂಗಳೂರು ಹುಡುಗಿ ನಿಮಿಕಾ ನಾಯಕಿಯರು. ಆಗಸ್ಟ್‍ನಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.

 • ಕ್ರೇಜಿ ಸ್ಟಾರ್‍ರ ಇನ್ನೊಬ್ಬ ಪುತ್ರ ಬೆಳ್ಳಿತೆರೆಗೆ ಎಂಟ್ರಿ

  ravichandran second son to launch in movies

  ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ನಾಯಕರಾಗಿ ನಟಿಸುತ್ತಿರುವ ಸಾಹೇಬ ಚಿತ್ರ ರಿಲೀಸ್‍ಗೆ ರೆಡಿಯಾಗುತ್ತಿದೆ. ಈಗ ರವಿಚಂದ್ರನ್‍ರ ಎರಡನೇ ಮಗ ವಿಕ್ರಂ ಕೂಡಾ ಹೀರೋ ಆಗುತ್ತಿದ್ದಾರೆ.

  ವಿಕ್ರಂ ಕೂಡಾ ತಂದೆಯ ಬ್ಯಾನರ್‍ನಲ್ಲಿ ಲಾಂಚ್ ಆಗುತ್ತಿಲ್ಲ. ವಿಕ್ರಂ ಲಾಂಚ್ ಆಗ್ತಿರೋದು ಆರ್.ಎಸ್. ಶ್ರೀನಿವಾಸ್ ನಿರ್ಮಾಣದ ಚಿತ್ರದಲ್ಲಿ. ಚಿತ್ರದ ನಿರ್ದೇಶಕ ನಾಗಶೇಖರ್. ಆಷಾಡ ಮುಗಿದು ಶ್ರಾವಣ ಶುರುವಾದೊಡನೆ, ಚಿತ್ರಕ್ಕೆ ಮುಹೂರ್ತವಾಗಲಿದೆ.  ಚಿತ್ರದ ಕಥೆ ಓಕೆ ಆಗಿದ್ದು, ಟೈಟಲ್, ತಾರಾಗಣದ ಆಯ್ಕೆ ಇನ್ನಷ್ಟೇ ಶುರುವಾಗಬೇಕಿದೆ.

  ವಿಕ್ರಂಗೆ ನಟನೆಗಿಂತ ಡೈರೆಕ್ಷನ್ ಇಷ್ಟ ಎಂದು ರವಿಚಂದ್ರನ್ ಹೇಳಿಕೊಳ್ತಾ ಇದ್ರು. ಆದರೆ, ಮನೋರಂಜನ್‍ಗೂ ಮೊದಲೇ ಮಲ್ಲ ಸೇರಿದಂತೆ ಹಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು ವಿಕ್ರಂ. ಥೇಟು ರವಿಚಂದ್ರನ್ ಎಂಟ್ರಿ ಕೊಟ್ಟಂತೆಯೇ. ರವಿಚಂದ್ರನ್ ಕೂಡಾ ಹೀಗೇನೇ ಮೊದಲು ಸಣ್ಣ ಸಣ್ಣ ಪಾತ್ರಗಳಲ್ಲಿ ನಟಿಸಿಯೇ, ಹೀರೋ ಆದವರು. 

  ಈಗ ಒಬ್ಬ ಮಗ ಹೀರೋ ಆಗಿದ್ದಾನೆ. ತೆರೆಗೆ ಬರೋದಷ್ಟೇ ಬಾಕಿ. ಎರಡನೇ ಮಗ ಹೀರೋ ಆಗುತ್ತಿದ್ದಾನೆ. ಕ್ಯಾಮೆರಾ ಸ್ಟಾರ್ಟ್ ಆಗೋದಷ್ಟೇ ಬಾಕಿ. ಇಬ್ಬರೂ ಮಕ್ಕಳಿಗೆ  ತಮ್ಮ ಬ್ಯಾನರ್‍ನಲ್ಲಿ ಚಿತ್ರ ಮಾಡಲು ಆಗಲಿಲ್ಲ ಅನ್ನೋದಷ್ಟೇ ರವಿಚಂದ್ರನ್ ಕೊರಗು.

 • ಕ್ರೇಜಿ ಹುಟ್ಟುಹಬ್ಬಕ್ಕೆ ಪಡ್ಡೆಹುಲಿಯ ಕಾಣಿಕೆ

  paddehuli teaser

  ಕ್ರೇಜಿಸ್ಟಾರ್ ರವಿಚಂದ್ರನ್‍ಗೆ ಇಂದು ಹುಟ್ಟುಹಬ್ಬ. ಈ ಬಾರಿಯ ಹುಟ್ಟುಹಬ್ಬ ರವಿಚಂದ್ರನ್‍ಗೆ ಒಂಥರಾ ಸ್ಪೆಷಲ್. ಈ ಬಾರಿ ಅವರ ಅಭಿನಯದ ಮೂರು ಚಿತ್ರಗಳು ಸುದ್ದಿಯಲ್ಲಿವೆ. ಚಿತ್ರಮಂದಿರಕ್ಕೆ ಬರಲು ಸಿದ್ಧವಾಗುತ್ತಿವೆ. ಕುರುಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ರವಿಚಂದ್ರನ್, ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ರಾಜೇಂದ್ರ ಪೊನ್ನಪ್ಪ ಚಿತ್ರ ವಿಚಿತ್ರ ಕುತೂಹಲ ಹುಟ್ಟಿಸಿದೆ. ಇವುಗಳಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುತ್ತಿರುವುದು ಪಡ್ಡೆಹುಲಿ ಚಿತ್ರದಲ್ಲಿ. ಈ ಚಿತ್ರದಲ್ಲಿ ರವಿಚಂದ್ರನ್ ಕನ್ನಡ ಮೇಷ್ಟ್ರು.

  ಹಳ್ಳಿಮೇಷ್ಟ್ರು ಚಿತ್ರದಲ್ಲಿ ಸಿಲ್ಕ್‍ಗೆ ಅಆಇಈ ತಿದ್ದಿಸಿದ್ದ ರವಿಚಂದ್ರನ್, ಈ ಚಿತ್ರದಲ್ಲಿ ಅಪ್ಟಟ ಚಾಮಯ್ಯ ಮೇಷ್ಟ್ರಂತೆ ಕಾಣಿಸಿಕೊಳ್ಳಲಿದ್ದಾರೆ. ರವಿಚಂದ್ರನ್ ಈ ಚಿತ್ರದಲ್ಲಿ ಹೀರೋ ಶ್ರೇಯಸ್ ತಂದೆ. ಕನ್ನಡ ಪ್ರೊಫೆಸರ್. ಚಿತ್ರದುರ್ಗದ ಹಿನ್ನೆಲೆಯಿದೆ. ಕನ್ನಡವೇ ನನ್ನುಸಿರು ಎನ್ನುವ ಸೀರಿಯಸ್ ಪಾತ್ರವದು.

  ಹೀಗಾಗಿ ರವಿಚಂದ್ರನ್ ಅವರ ಹುಟ್ಟುಹಬ್ಬವನ್ನು ಪಡ್ಡೆಹುಲಿ ಚಿತ್ರತಂಡ ವಿಭಿನ್ನವಾಗಿ ಸಂಭ್ರಮಿಸುತ್ತಿದೆ. ಕನ್ನಡದ ಜ್ಞಾನಪೀಠ ಸಾಹಿತಿಗಳು ಹಾಗೂ ಸಾಹಿತ್ಯವನ್ನೊಳಗೊಂಡ ಪುಟ್ಟ ಟೀಸರ್ ಹೊರಬಿಟ್ಟಿದೆ. ಆ ಮೂಲಕ ರವಿಚಂದ್ರನ್ ಅವರನ್ನು ಪರಿಚಯಿಸುವ ಕೆಲಸ ಮಾಡಿದೆ ಪಡ್ಡೆಹುಲಿ ತಂಡ.

  ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕೃತಿ ಹಿಡಿದು ಶ್ರೇಯಸ್‍ಗೆ ವಿವರಣೆ ನೀಡುತ್ತಿರುವ ರವಿಚಂದ್ರನ್ ಅವರ ಭಂಗಿ, ಕುತೂಹಲ ಹುಟ್ಟಿಸುವುದು ದಿಟ. ರಮೇಶ್ ರೆಡ್ಡಿ ನಂಗ್ಲಿ ನಿರ್ಮಾಣದ ಚಿತ್ರಕ್ಕೆ ರಾಜಾಹುಲಿ ಗುರು ದೇಶಪಾಂಡೆ ನಿರ್ದೇಶನವಿದೆ.

  ಈ ಟೀಸರ್ ಮೂಲಕ ಚಿತ್ರತಂಡ ಒಂದು ಸಂದೇಶವನ್ನೂ ನೀಡಿದೆ. ಮೊಬೈಲ್ ಬಿಡಿ, ಸಾಮಾಜಿಕ ಜಾಲತಾಣಗಳಿಂದ ಹೊರಬನ್ನಿ. ಪುಸ್ತಕ ಹಿಡಿಯಿರಿ. ಓದುವ ಹವ್ಯಾಸ ಬೆಳೆಸಿಕೊಳ್ಳಿ. ಆ ಮೂಲಕ ರವಿಚಂದ್ರನ್ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ ಅನ್ನೋದು ಪಡ್ಡೆಹುಲಿ ತಂಡದ ಮನವಿ.

 • ಕ್ರೇಜಿಸ್ಟಾರ್ ದಶರಥನಿಗೆ ದರ್ಶನ್ ಗಾಯನ..!

  darshan sings a song for ravichandran

  ಚಾಲೆಂಜಿಂಗ್ ಸ್ಟಾರ್ ಹಾಡಿದ್ದನ್ನು ಕೇಳಿದ್ದೀರಾ..? ನೋ ಚಾನ್ಸ್. ದರ್ಶನ್ ಅವರು ಇದುವರೆಗೆ ಹಾಡುವ ಸಾಹಸಕ್ಕೆ ಕೈ ಹಾಕಿರಲಿಲ್ಲ. ಹೀಗಿದ್ದರೂ.. ಅವರೀಗ ಸಿಂಗರ್. ಹೌದು, ರವಿಚಂದ್ರನ್ ಅಭಿನಯದ ದಶರಥ ಚಿತ್ರದ ಇಂಟ್ರೊಡಕ್ಷನ್ ಹಾಡಿಗೆ ದರ್ಶನ್ ಹಾಡಿದ್ದಾರೆ.

  ಹಾಗಂತ, ಪೂರ್ತಿ ಸಿಂಗರ್ ಅಂತಲೂ ಹೇಳೋಕಾಗಲ್ಲ. ಚಿತ್ರತಂಡದವರು ಹಾಡೋಕೆ ಕೇಳಿಕೊಂಡರಂತೆ. ದರ್ಶನ್ ನೋ ಎಂದಿದ್ದಾರೆ. ನಂತರ ದರ್ಶನ್ ಸಾಹಿತ್ಯವನ್ನು ತಮ್ಮದೇ ಸ್ಟೈಲ್‍ನಲ್ಲಿ ಓದಿದ್ದಾರೆ. ಅದಕ್ಕೇ ಮ್ಯೂಸಿಕ್ ಹಾಕಿದೆಯಂತೆ ಚಿತ್ರತಂಡ. ಹೀಗಾಗಿ.. ದಶರಥನ ಎಂಟ್ರಿ ಸಾಂಗ್‍ನಲ್ಲಿ ದರ್ಶನ್ ವಾಯ್ಸ್ ಇರಲಿದೆ.

  ಎಂ.ಎಸ್.ರಮೇಶ್ ನಿರ್ದೇಶನದ ದಶರಥ ಚಿತ್ರ, ಫೆಬ್ರವರಿಯಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

 • ಕ್ರೇಜಿಸ್ಟಾರ್ ರವಿಚಂದ್ರನ್ ಇನ್ಮುಂದೆ ಡಾ.ರವಿಚಂದ್ರನ್

  ravichandran gets honorary doctorate

  ಕ್ರೇಜಿಸ್ಟಾರ್, ರಣಧೀರ, ಅಂಜದಗಂಡು, ಮಲ್ಲ.. ಎಂದೆಲ್ಲ ಅಭಿಮಾನಿಗಳಿಂದ ಕರೆಸಿಕೊಳ್ಳುವ ರವಿಚಂದ್ರನ್, ಇನ್ನು ಮುಂದೆ ಡಾ.ರವಿಚಂದ್ರನ್ ಆಗಲಿದ್ದಾರೆ. ಬೆಂಗಳೂರಿನ ಸಿಎಂಆರ್ ಯುನಿವರ್ಸಿಟಿ, ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ನೀಡುತ್ತಿದೆ. ನವೆಂಬರ್ 3ರಂದು ಯುನಿವರ್ಸಿಟಿ, ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ.

  ರವಿಚಂದ್ರನ್ ಚಿತ್ರರಂಗಕ್ಕೆ ಬಂದಿದ್ದು ಬಾಲನಟನಾಗಿ. 1971ರಲ್ಲಿ ಕುಲಗೌರವ ಚಿತ್ರದಲ್ಲಿ ಬಾಲನಟ. ನಂತರ ಖದೀಮ ಕಳ್ಳರು ಚಿತ್ರಕ್ಕೆ ನಿರ್ಮಾಪಕರಾದರು. ಆ ಚಿತ್ರದಲ್ಲಿ ವಿಲನ್ ಆಗಿ ಪುಟ್ಟ ಪಾತ್ರ ಮಾಡಿದ್ದ ರವಿಚಂದ್ರನ್, ನಾನೇ ರಾಜ ಚಿತ್ರದ ಮೂಲಕ ಹೀರೋ ಆದರು. ಪ್ರೇಮಲೋಕದ ಮೂಲಕ ನಿರ್ದೇಶಕರಾಗಿಯೂ ಗೆದ್ದ ರವಿಚಂದ್ರನ್, ನಾನು ನನ್ನ ಹೆಂಡ್ತೀರು ಚಿತ್ರದಿಂದ ಸಂಗೀತ ನಿರ್ದೇಶಕರೂ ಆದರು. ಒಂದು ರೀತಿಯಲ್ಲಿ ರವಿಚಂದ್ರನ್, ಚಿತ್ರರಂಗದ ಆಲ್‍ರೌಂಡರ್. ಈಗ ಡಾ.ರವಿಚಂದ್ರನ್.

  ಈ ಮೂಲಕ ರವಿಚಂದ್ರನ್, ಡಾ.ರಾಜ್, ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ ಕುಮಾರ್, ಲೀಲಾವತಿ ಮೊದಲಾದವರ ಸಾಲಿಗೆ ಸೇರಿದ್ದಾರೆ.

 • ಗೋ ಹತ್ಯೆ.. ಡೈಲಾಗ್‍ಗೆ ಕತ್ತರಿ..!

  cow slaughter dialogue removied from seizer

  ಸೀಜರ್ ಚಿತ್ರ ನಾಳೆ ತೆರೆಕಾಣುತ್ತಿದೆ. ಚಿತ್ರದಲ್ಲಿ ಒಂದು ಕಡೆ ಗೋಹತ್ಯೆ ಕುರಿತ ಡೈಲಾಗ್ ಇದೆ. ಪಾತ್ರಧಾರಿ ರವಿಚಂದ್ರನ್, ಹಸುವಿನ ತಲೆ ಕಡಿಯುವುದು ಹಾಗೂ ಹೆತ್ತ ತಾಯಿಯ ತಲೆ ಹಿಡಿಯುವುದು ಎರಡೂ ಒಂದೇ ಎಂದು ಹೇಳುವ ಡೈಲಾಗ್ ಅದು. ಆ ಸಂಭಾಷಣೆಗೆ ವಿರೋಧ ವ್ಯಕ್ತವಾಗಿತ್ತು. ಗೋಹತ್ಯೆ ಪರ ಇರುವ ಸಂಘಟನೆಗಳು ಹಾಗೂ ಚಿತ್ರತಂಡದ ಭಾಗವಾಗಿರುವ ಪ್ರಕಾಶ್ ರೈ, ನಿರ್ದೇಶಕ ವಿನಯ್ ಕೃಷ್ಣ ವಿರುದ್ಧ ಕೆಂಡಕಾರಿದ್ದರು. ಫೋನ್ ಮಾಡಿ ಬೈದಿದ್ದೇನೆ ಎಂದು ಹೇಳಿದ್ದರು ಪ್ರಕಾಶ್ ರೈ.

  ಸಂಭಾಷಣೆಗೂ ರೈಗೂ ಸಂಬಂಧ ಇಲ್ಲ. ಅವರು ನನಗೆ ಫೋನ್ ಮಾಡಿಲ್ಲ ಎಂದಿದ್ದ ವಿನಯ್ ಕೃಷ್ಣ, ಈಗ ಚಿತ್ರದಲ್ಲಿ ಡೈಲಾಗ್‍ಗೆ ಮ್ಯೂಟ್ ಹಾಕಿಸಿದ್ದಾರೆ. ಅಂದರೆ, ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡುವಾಗ ಆ ಸಂಭಾಷಣೆ ಬರುವ ವೇಳೆ ಬೀಪ್ ಸೌಂಡ್ ಮಾತ್ರ ಕೇಳುತ್ತೆ. 

  ನಟ ರವಿಚಂದ್ರನ್ ಕೂಡಾ ವಿವಾದ ಏಕೆ, ಡೈಲಾಗ್ ಬಿಡಿ ಎಂದು ಸೂಚಿಸಿದ ಹಿನ್ನೆಲೆಯಲ್ಲಿ ನಿರ್ದೇಶಕ ವಿನಯ್ ಹಾಗೂ ನಿರ್ಮಾಪಕ ತ್ರಿವಿಕ್ರಮ್ ಡೈಲಾಗ್‍ಗೆ ಕತ್ತರಿ ಆಡಿಸಿದ್ದಾರೆ. ಗೋಹತ್ಯೆ ಡೈಲಾಗ್ ಇಲ್ಲದ ಸೀಜರ್ ಸಿನಿಮಾ ನಾಳೆ ತೆರೆ ಕಾಣಲಿದೆ.

 • ಗೋಹತ್ಯೆ ಕುರಿತ ರವಿಚಂದ್ರನ್ ಡೈಲಾಗ್ ವಿವಾದ

  ravichandran dialogue creates controversy

  `ಹಸು ತಲೆ ಕಡಿಯೋದೂ ಒಂದೇ.. ಹೆತ್ತ ತಾಯಿಯ ತಲೆ ಹಿಡಿಯೋದೂ ಒಂದೇ..' ಇದು ರವಿಚಂದ್ರನ್ ಅಭಿನಯದ ಸೀಜರ್ ಚಿತ್ರದಲ್ಲಿರೋ ಡೈಲಾಗ್. ಈ ಡೈಲಾಗ್ ಹೇಳೋದು ನಾಯಕ ಕ್ರೇಜಿಸ್ಟಾರ್ ರವಿಚಂದ್ರನ್. ಸೀಜರ್ ಚಿತ್ರದ ಟ್ರೇಲರ್‍ನಲ್ಲೂ ಈ ಡೈಲಾಗ್ ಇದೆ. ಆದರೆ, ಈ ಡೈಲಾಗ್ ಈಗ ವಿವಾದಕ್ಕೆ ಕಾರಣವಾಗಿದೆ. 

  ರವಿಚಂದ್ರನ್ ಅವರಿಗೆ ಈಗ ಮಾರ್ಕೆಟ್ ಇಲ್ಲ. ಹೀಗಾಗಿ ಇಂತಹ ಗಿಮಿಕ್ ಮಾಡಿದ್ದಾರೆ. ಬೇರೆಯವರ ಆಹಾರ ಅಭ್ಯಾಸಗಳ ಬಗ್ಗೆ ಮಾತನಾಡೋ ಹಕ್ಕು ಅವರಿಗೆ ಇಲ್ಲ ಎನ್ನುವುದು ವಕೀಲ ಬಿ.ಟಿ.ವೆಂಕಟೇಶ್ ಎಂಬುವರ ಹೇಳಿಕೆ. ಹಿರಿಯ ನಟರಾದ ರವಿಚಂದ್ರನ್, ಈ ರೀತಿಯ ಡೈಲಾಗ್‍ಗೆ ನೋ ಎನ್ನಬೇಕಿತ್ತು. ಇದು ಕೋಮುಗಲಭೆಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಜನವಾದಿ ಸಂಘಟನೆ ನಾಯಕಿ ವಿಮಲಾ. 

  ಒಬ್ಬ ಹಿಂದೂ ಆಗಿ ಹಸುಗಳನ್ನು ಕೊಲ್ಲಬೇಡಿ ಎಂದು ಹೇಳೋದು ನನ್ನ ಹಕ್ಕು. ಗೋವನ್ನು ನಾವು ಪೂಜಿಸುತ್ತೇವೆ. ಗೋಹತ್ಯೆ ನಿಲ್ಲಿಸಬೇಕು. ಚಿತ್ರದಲ್ಲಿ ನಾವು ಅದನ್ನೇ ಹೇಳಿದ್ದೇವೆ. ಚಿತ್ರದ ಬಗ್ಗೆ ಸೆನ್ಸಾರ್ ಮಂಡಳಿಯೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಒಂದೇ ಒಂದು ಕಟ್ ಇಲ್ಲದೆ ಪ್ರಮಾಣ ಪತ್ರ ಕೊಟ್ಟಿದೆ. ಇದರಲ್ಲಿ ವಿವಾದವೇ ಇಲ್ಲ ಎಂದಿದ್ದಾರೆ ನಿರ್ದೇಶಕ ವಿನಯ್ ಕೃಷ್ಣ.

  ಸೀಜರ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚುನಾವಣೆ ಹೊಸ್ತಿಲಲ್ಲಿ ನಿಂತಿರುವಾಗ ಇಂತಹ ವಿವಾದವಾದರೆ ಬಿಡುಗಡೆ ಸಾಧ್ಯವೇ ಎಂಬ ಅನುಮಾನವನ್ನೂ ಹುಟ್ಟುಹಾಕಿದೆ. ರವಿಚಂದ್ರನ್ ಜೊತೆ ಚಿತ್ರದಲ್ಲಿ ಚಿರಂಜೀವಿ ಸರ್ಜಾ, ಪ್ರಕಾಶ್ ರೈ ಕೂಡಾ ಇದ್ದಾರೆ.

 • ಚಂದನ್ ಶೆಟ್ಟಿ ಸಂಗೀತ ನಿರ್ದೇಶನದ ಸೀಜರ್

  chandan shetty's music in seizer

  ಚಂದನ್ ಶೆಟ್ಟಿ ಎಂದರೆ ತಕ್ಷಣ ನೆನಪಾಗುವುದು ಮೂರೇ ಮೂರು ಪೆಗ್ಗಿಗೆ.. ಹಾಡು. ಆದರೆ, ಚಂದನ್ ಶೆಟ್ಟಿ ಇದಿಷ್ಟೇ ಅಲ್ಲ, ಅವರು ಗಾಯಕರೂ ಹೌದು. ಹಾಡನ್ನು ಬರೆಯುವ ಕಲೆಯೂ ಅವರಿಗೆ ಸಿದ್ಧಿಸಿದೆ. ಸಂಗೀತ ಸಂಯೋಜಿಸುವುದೂ ಗೊತ್ತಿದೆ. ಇದೆಲ್ಲವೂ ಗೊತ್ತಿರುವ ಚಂದನ್ ಶೆಟ್ಟಿ, ಸೀಜರ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

  ಚಂದನ್ ಶೆಟ್ಟಿಯವರಿಗೆ ಇಂತಾದ್ದೊಂದು ಅವಕಾಶ ಕೊಟ್ಟಿದ್ದು ನಿರ್ಮಾಪಕ ತ್ರಿವಿಕ್ರಮ್. ಪವರ್ ಚಿತ್ರದ ಧಮ್ ಪವರೇ ಹಾಡು ಕೇಳಿದ ನಂತರ ತ್ರಿವಿಕ್ರಮ್, ಚಂದನ್ ಅವರನ್ನು ಆಯ್ಕೆ ಮಾಡಿದರಂತೆ.

  ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ನಾಲ್ಕೂ ಹಾಡುಗಳು ಸದ್ಯಕ್ಕೆ ಹಿಟ್ ಲಿಸ್ಟ್‍ನಲ್ಲಿವೆ. ವೆಸ್ಟರ್ನ್ ಶೈಲಿಯಲ್ಲಿರುವ ಸಂಗೀತ, ಅಭಿಮಾನಿಗಳಿಗೆ ಇಷ್ಟವಾಗಿದೆ.ರವಿಚಂದ್ರನ್, ಚಿರಂಜೀವಿ ಸರ್ಜಾ, ಪಾರೂಲ್ ಯಾದವ್ ಅಭಿನಯದ ಚಿತ್ರಕ್ಕೆ ವಿನಯ್ ಕೃಷ್ಣ ನಿರ್ದೇಶಕರು. ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ.

 • ಚಿತ್ರನಗರಿಗೆ 500 ಕೋಟಿ : ರವಿಚಂದ್ರನ್ ರಿಯಾಕ್ಷನ್ ಏನಿತ್ತು ಗೊತ್ತಾ..?

  ravichandran's suggestion on film city issue

  ಈ ಬಜೆಟ್‍ನಲ್ಲಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ 500 ಕೋಟಿ ಘೋಷಿಸಿರುವುದನ್ನು ಚಿತ್ರರಂಗದ ಅನೇಕರು ಸ್ವಾಗತಿಸಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿ ಸ್ಥಳ ಗುರುತಿಸುವ ಕೆಲಸವಾಗಲಿ ಎಂದಿದೆ. ಬೆಂಗಳೂರಿಗಿಂತ ಮೈಸೂರಿನಲ್ಲಾಗಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವುದು ನಟ ಯಶ್ ಅವರ ವಾದ.

  ಚಿತ್ರನಗರಿ ಅನ್ನೋ ಕನಸಿಗೆ ದೊಡ್ಡ ರೂಪ ಕೊಟ್ಟ ರವಿಚಂದ್ರನ್ ರಿಯಾಕ್ಷನ್ ಏನಿರಬಹುದು..?

  ಪ್ರಾರಂಭ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿರುವ ರವಿಚಂದ್ರನ್, ಏನಾದರೂ ಆಗಲಿ, ಮೊದಲು ಕೆಲಸ ಶುರುವಾಗಲಿ. ಅದು ಚಲನಚಿತ್ರ ವಾಣಿಜ್ಯ ಮಂಡಳಿ ಉಸ್ತುವಾರಿಯಲ್ಲೇ ಆಗಲಿ. ಕಿತ್ತಾಡದಿದ್ದರೆ ಅಷ್ಟೇ ಸಾಕು ಎಂದಿದ್ದಾರೆ.

 • ಚುಟು ಚುಟು ಬ್ಯೂಟಿಗೆ ಕ್ರೇಜೀ ಟಚ್

  ashika in ravichandran's next

  ಕ್ರೇಜಿ ಸ್ಟಾರ್ ರವಿಚಂದ್ರನ್ ಚಿತ್ರಗಳಲ್ಲಿ ನಟಿಸುವುದು ಹಲವು ಹೀರೋಯಿನ್‍ಗಳ ಕನಸು. ಅದು ಈಗಲೂ ಬದಲಾಗಿಲ್ಲ. ಅವರ ನಿರ್ದೇಶನದ ಚಿತ್ರಗಳೆಂದರೆ, ನಾಯಕಿಯರು ಸದಾ ಸಿದ್ಧ. ಕಾರಣ ಇಷ್ಟೆ, ನಾಯಕಿಯರ ಚೆಲುವನ್ನು, ಸೌಂದರ್ಯವನ್ನು ರವಿಚಂದ್ರನ್‍ರಷ್ಟು ಅದ್ಭುತವಾಗಿ ತೋರಿಸಬಲ್ಲವರು ಮತ್ತೊಬ್ಬರಿಲ್ಲ. ಈಗ ಅಂತಹ ಅವಕಾಶ ಚುಟು ಚುಟು ಸ್ಟಾರ್  ಅಶಿಕಾ ರಂಗನಾಥ್ ಪಾಲಾಗಿದೆ.

  ರವಿಚಂದ್ರನ್ ನಿರ್ದೇಶನದ ಹೊಸ ಚಿತ್ರದಲ್ಲಿ ಅಶಿಕಾ ರಂಗನಾಥ್ ನಟಿಸಲಿದ್ದಾರೆ. ಕ್ಯೂಟ್ ಫೇಸ್‍ನ ಗ್ಲಾಮರಸ್ ಹುಡುಗಿ ಬೇಕಿತ್ತು. ನನ್ನ ಚಿತ್ರದ ಪಾತ್ರಕ್ಕೆ ಅಶಿಕಾ 100% ಸೂಟ್ ಆಗ್ತಾರೆ ಎಂದಿದ್ದಾರೆ ರವಿಚಂದ್ರನ್.

  ರವಿಚಂದ್ರನ್‍ರನ್ನು ಮೀಟ್ ಮಾಡಿ, ಚಿತ್ರಕ್ಕೆ ಓಕೆ ಎಂದಿರುವ ಅಶಿಕಾ ತಮ್ಮ ಡೇಟ್ಸ್‍ನ್ನು ರವಿಚಂದ್ರನ್ ಚಿತ್ರಕ್ಕಾಗಿ ಅಡ್ಜಸ್ಟ್ ಮಾಡಿಕೊಳ್ತೇನೆ ಎಂದಿದ್ದಾರೆ.

  ಸದ್ಯಕ್ಕೆ ಅಶಿಕಾ ರಂಗನಾಥ್ ಕನ್ನಡದ ಬ್ಯುಸಿ ಹೀರೋಯಿನ್‍ಗಳಲ್ಲಿ ಒಬ್ಬರು. ಶರಣ್ ಜೊತೆ ಅವತಾರ ಪುರುಷ, ಪವನ್ ಒಡೆಯರ್ ನಿರ್ದೇಶನದ ರೆಮೋ, ಪಿಸಿ ಶೇಖರ್ ನಿರ್ದೇಶನದ ಹೊಸ ಸಿನಿಮಾ, ಗರುಡ, ರಂಗಮಂದಿರ ಹೀಗೆ ಕೈತುಂಬಾ ಚಿತ್ರಗಳಿವೆ.

 • ಟಿಕ್‍ಟಾಕ್‍ನಲ್ಲೂ ದಶರಥ..!

  dasharatha craze in tik tok

  ದಶರಥ ಚಿತ್ರದಲ್ಲಿ ರವಿಚಂದ್ರನ್ ಅವರ ಜೊತೆ, ಟ್ರೇಲರ್‍ನಲ್ಲಿರೋ ಡೈಲಾಗುಗಳೂ ವೈರಲ್ ಆಗುತ್ತಿವೆ. ಎಂ.ಎಸ್.ರಮೇಶ್ ಹೇಳಿಕೇಳಿ ಬೆಂಕಿ ಡೈಲಾಗುಗಳಿಗೆ ಫೇಮಸ್ಸು. ಅದು ಟ್ರೇಲರಿನಲ್ಲೂ ಎದ್ದು ಕಾಣ್ತಿದೆ. ಈಗ ಟ್ರೇಲರ್‍ನಲ್ಲಿ ರವಿಚಂದ್ರನ್ ಅವರಿಗಾಗಿಯೇ ಬರೆದಿರುವ ಕೆಲವು ಸಾಲುಗಳು ಟಿಕ್‍ಟಾಕ್‍ನಲ್ಲಿ ವೈರಲ್ಲೋ ವೈರಲ್ಲು.

  ಇವನು ಪ್ರೀತಿಯಲ್ಲಿ ಬಂದ್ರೆ ಪ್ರೇಮಲೋಕ ಕಟ್ಟೋವ್ನು.. ರಣವೀಳ್ಯ ಕೊಟ್ರೆ ರಣಧೀರ ಆಗೋವ್ನು.

  ನನ್ ಕುಟುಂಬನೇ ನನ್ನ ಪ್ರಪಂಚ. ಅದರ ಮೇಲೆ ಯಾರದೇ ಕಣ್ಣು ಬಿದ್ರು ಸುಟ್ಟು ಹೋಗ್ತಾರೆ. ಯಾಕಂದ್ರೆ ಈ ದಶರಥ ಸೂರ್ಯವಂಶದವ್ನು.

  ನನ್ನ ವೆಪನ್ ಯಾವತ್ತಿದ್ರೂ ಲಾನೇ. ಲವ್ ಅಂಡ್ ವಿನ್ ನನ್ನ ಫಸ್ಟ್ ಸ್ಟೆಪ್ಪು. ಲೀಗಲಿ ಅನೌನ್ಸ್ ವಾರ್ ಅನ್ನೋದೇ ಫೈನಲ್ ಸ್ಟೆಪ್.

  ಇಟ್ಸ್ ಟೈಂ ಫಾರ್ ಜಡ್ಜ್‍ಮೆಂಟ್. ನಾಟ್ ಫಾರ್ ಆಗ್ರ್ಯುಮೆಂಟ್..

  ಹೀಗೆ ಟ್ರೇಲರ್‍ನ ಡೈಲಾಗುಗಳನ್ನೇ ಟಿಕ್‍ಟಾಕ್‍ನಲ್ಲಿ ಸೃಷ್ಟಿಸಿ ಎಂಜಾಯ್ ಮಾಡ್ತಿದ್ದಾರೆ ಕ್ರೇಜಿ ಫ್ಯಾನ್ಸ್.

  ರವಿಚಂದ್ರನ್ ಬಹಳ ವರ್ಷಗಳ ನಂತರ ಲಾಯರ್ ಆಗಿದ್ದಾರೆ. ಸೋನು ಅಗರ್‍ವಾಲ್ ನಾಯಕಿ. ರಂಗಾಯಣ ರಘು ಪ್ರತಿ ನಾಯಕ. ಸಿನಿಮಾ ಥ್ರಿಲ್ ಎನ್ನಿಸುತ್ತಿರುವುದೇ ಈ ಕಾರಣಕ್ಕೆ.

 • ಡಾ. ವಿ.ರವಿಚಂದ್ರನ್ : ಕ್ರೇಜಿಸ್ಟಾರ್‌ಗೆ ಸ್ಯಾಂಡಲ್ ವುಡ್ ಶುಭ ಹಾರೈಕೆ

  ravichandran dedicates his doctorate to his father veeraswamy

  ಕ್ರೇಜಿಸ್ಟಾರ್ ರವಿಚಂದ್ರನ್ ಈಗ ಡಾ.ರವಿಚಂದ್ರನ್. ಸಿಎಂಆರ್ ವಿವಿ, ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ಕ್ಯಾಂಪಸ್‌ನಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ್ ಗೌ.ಡಾ. ನೀಡಿ ಗೌರವಿಸಿದ್ರು.

  ಇನ್ನು ಮುಂದೆ ಹೊಸ ದಾರಿಯಲ್ಲಿ ನಡೆಯುತ್ತೇನೆ. ಹಳೆ ದಾರಿಯನ್ನು ಸರಿ ಮಾಡಿಕೊಳ್ಳುವ ಹಾಗೆ ನಡೆಯುತ್ತೇನೆ ಎಂದ ರವಿಚಂದ್ರನ್, ಸಿಎಂಆರ್ ವಿವಿಗೆ ಧನ್ಯವಾದ ಸಲ್ಲಿಸಿದ್ರು.

  ರವಿಚಂದ್ರನ್ ಅವರ ಇಡೀ ಕುಟುಂಬವೇ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು. ತಮಗೆ ಸಿಕ್ಕ ಪುರಸ್ಕಾರವನ್ನು ತಂದೆ ಎನ್.ವೀರಸ್ವಾಮಿಗೆ ಅರ್ಪಿಸಿದರು ರವಿಚಂದ್ರನ್.

   ಇತ್ತ ಸ್ಯಾಂಡಲ್‌ವುಡ್ ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿರುವುದನ್ನು ಸಂಭ್ರಮಿಸಿದೆ. ಚಿತ್ರರಂಗದ ಕಲಾವಿದರು, ತಂತ್ರಜ್ಞರು ಡಾ.ರವಿಚಂದ್ರನ್‌ಗೆ ಶುಭ ಹಾರೈಸಿದ್ದಾರೆ. ಖುಷಿ ಹಂಚಿಕೊAಡಿದ್ದಾರೆ.

 • ದಶರಥನ ಜೊತೆ ದರ್ಶನ್ ಪವರ್

  dasharatha gets darshan's power

  ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ದಶರಥ ಇದೇ ವಾರ ರಿಲೀಸ್. ಈ ಚಿತ್ರದಲ್ಲಿ ದರ್ಶನ್ ಅವರೂ ಇದ್ದಾರೆ. ತೆರೆಯ ಮೇಲಲ್ಲ.. ತೆರೆಯ ಹಿಂದೆ. ದರ್ಶನ್ ಅವರು ಒಂದು ಹಾಡು ಹಾಡಿದ್ದಾರೆ. ಅರೆ.. ದರ್ಶನ್ ಯಾವಾಗ ಗಾಯಕರಾದ್ರು ಎಂದುಕೊಂಡ್ರಾ..? ನೋ ಚಾನ್ಸ್...

  ದರ್ಶನ್ ಅವರ ಬಳಿ ಕೆಲವು ಸಾಲುಗಳನ್ನು ಹೇಳಿಸಿ, ಆ ಸಾಲುಗಳಿಗೇ ಮ್ಯೂಸಿಕ್ ಹೊಂದಿಸಿ ಹಾಡು ಸೃಷ್ಟಿಸಲಾಗಿದೆ. ಇದೊಂದು ಬೇರೆಯದೇ ರೀತಿಯ ಪ್ರಯತ್ನ. ಇದು ಚಿತ್ರದ ಟೈಟಲ್ ಟ್ರ್ಯಾಕ್. ರಮೇಶ್ ಚಿತ್ರಕ್ಕೆ ಒನ್ಸ್ ಎಗೇಯ್ನ್ 14ನೇ ಬಾರಿಗೆ ಗುರುಕಿರಣ್ ಸಂಗೀತ ನಿರ್ದೇಶನವಿದೆ.

  ಇಲ್ಲಿ ದೃಶ್ಯವನ್ನೂ ನೆನಪಿಸುವ ಇನ್ನೂ ಒಂದು ಡೈಲಾಗ್ ಇದೆ. ನನಗೆ ನನ್ನ ಕುಟುಂಬವೇ ಪ್ರಪಂಚ. ಅದರ ಮೇಲೆ ಯಾರ ಕಣ್ಣು ಬಿದ್ರೂ ಸುಟ್ಟು ಹೋಗ್ತಾರೆ ಅನ್ನೋ ಡೈಲಾಗ್ ಟ್ರೇಲರ್‍ನಲ್ಲಿದೆ. ಕುತೂಹಲ ಹುಟ್ಟೋದು ಇಲ್ಲೇ.

  ರವಿಚಂದ್ರನ್, ರಂಗಾಯಣ ರಘು, ಸೋನು ಅಗರ್‍ವಾಲ್, ಅಭಿನೇತ್ರಿ, ಅವಿನಾಶ್, ಶೋಭರಾಜ್ ನಟಿಸಿರುವ ಚಿತ್ರಕ್ಕೆ ಎಂ.ಎಸ್.ರಮೇಶ್ ನಿರ್ದೇಶಕ. ಅಕ್ಷಯ್ ಸಮರ್ಥ ನಿರ್ಮಾಣದ ಸಿನಿಮಾದಲ್ಲಿ ಆಧುನಿಕ ರಾಮಾಯಣದ ಕಥೆಯೂ ಇದೆ.

 • ದುಡ್ಡಿನ ತಾಕತ್ತು ರವಿಚಂದ್ರನ್‍ಗೆ ಗೊತ್ತಾಯ್ತು.. ಮುಂದೇನಾಯ್ತು..?

  ravichandran talks about money

  ಕ್ರೇಜಿ ಸ್ಟಾರ್ ರವಿಚಂದ್ರನ್ ಅವರನ್ನು ಚಿತ್ರರಂಗದಲ್ಲಿ ಬಲ್ಲ ಪ್ರತಿಯೊಬ್ಬರಿಗೂ ಅವರು ಹಣವನ್ನು ಯಾವ ರೀತಿ ನೋಡ್ತಾ ರೆ ಅನ್ನೋದು ಗೊತ್ತು. ಸಿನಿಮಾದಿಂದ ಕೋಟಿ ಕೋಟಿ ಗಳಿಸಿರುವ ರವಿಚಂದ್ರನ್, ಗಳಿಸಿದ್ದಕ್ಕಿಂತ ಹೆಚ್ಚಿನ ಹಣವನ್ನು ಸಿನಿಮಾಗಾಗಿಯೇ ಸುರಿದು ಕಳೆದುಕೊಂಡಿದ್ದಾರೆ. ಸಿನಿಮಾ ಅದ್ಭುತವಾಗಿ ಬರಬೇಕು ಎನ್ನುವುದಷ್ಟೇ ರವಿಚಂದ್ರನ್ ಗುರಿ. ಅಂತಹ ರವಿಚಂದ್ರನ್‍ಗೆ ಈಗ ದುಡ್ಡಿನ ಮಹತ್ವದ ಅರಿವಾಗಿದೆ. ಬಯಲಾಟದ ಭೀಮಣ್ಣ ಚಿತ್ರದಲ್ಲಿ ದುಡ್ಡಿನ ಬಗ್ಗೆ ರವಿಚಂದ್ರನ್ ಹೇಳಿರುವ ಮಾತುಗಳೇ ಇದಕ್ಕೆ ಸಾಕ್ಷಿ.

  `ನನ್ನ ಮಗಳ ಮದುವೆ ಮಾಡುವಾಗ ಅನಿಸಿದ್ದು ದುಡ್ಡು ಮಾಡಬೇಕಿತ್ತು ಅಂತಾ. ಏಕೆಂದರೆ ಪ್ರತಿಯೊಂದು ಲೆಕ್ಕಾಚಾರವೂ ದುಡ್ಡಿನಿಂದಲೇ ಆರಂಭವಾಗುತ್ತೆ. ಅದು ಗೊತ್ತಾದ ಮೇಲೆ ಗುರಿ ಇಟ್ಟುಕೊಂಡು ದುಡ್ಡು ಮಾಡಬೇಕು ಎಂದುಕೊಂಡಿದ್ದೇನೆ. ಇನ್ನು ಮುಂದೆ ದುಡ್ಡು ಮಾಡ್ತೀನಿ, ಮಾಡಿ ತೋರಿಸ್ತೀನಿ' ಇದು ರವಿಚಂದ್ರನ್ ಮಾತು.

  ಇದುವರೆಗೆ ಸಿನಿಮಾಗಳಲ್ಲಿ ಇಂತಹ ಚಾಲೆಂಜ್ ಹಾಕಿ ಗೆದ್ದಿರುವ ರವಿಚಂದ್ರನ್, ಇದೇ ಮೊದಲ ಬಾರಿಗೆ ದುಡ್ಡಿನ ಸವಾಲ್ ಹಾಕಿದ್ದಾರೆ. ಮುಂದೆ..?

 • ದೃಶ್ಯ ಎಫೆಕ್ಟ್ : ಆ ದೃಶ್ಯಕ್ಕೆ ಭರ್ಜರಿ ಡಿಮ್ಯಾಂಡ್

  aa drishya creates high demand in theaters

  ದೃಶ್ಯ ರಿಲೀಸ್ ಆಗಿ 5 ವರ್ಷಗಳಾಗಿವೆ. 2014ರ ಜೂನ್ನಲ್ಲಿ ರಿಲೀಸ್ ಆಗಿದ್ದ ಸಿನಿಮಾ, ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದಿತ್ತು. ಒಂದು ಕಡೆ ಬಾಕ್ಸಾಫೀಸ್ನಲ್ಲಿ ದಾಖಲೆ ಬರೆದರೆ, ದೇಶಾದ್ಯಂತ ಹಲವು ಅಪರಾಧಿಗಳು ದೃಶ್ಯ ಸ್ಟೈಲ್ನಲ್ಲಿ ಕ್ರೈಂ ಮಾಡಲು ಹೋಗಿ ಸಿಕ್ಕಿಬಿದ್ದಿದ್ದರು. ಅಷ್ಟು ಸೆನ್ಸೇಷನ್ ಸೃಷ್ಟಿಸಿದ್ದ ಚಿತ್ರದ ಸೀಕ್ವೆಲ್ ಇದಲ್ಲ. ಇದು ಆ ದೃಶ್ಯ. 2014ರ ದೃಶ್ಯಕ್ಕೂ, 2019ರ ಈ ‘ಆ ದೃಶ್ಯ’ಕ್ಕೂ ಹೋಲಿಕೆಯೇ ಇಲ್ಲ. ಆದರೆ, 2014ರ ದೃಶ್ಯದ ಸಕ್ಸಸ್ ಈ ದೃಶ್ಯಕ್ಕೂ ಸಿಗುತ್ತಿದೆ. ಏಕೆಂದರೆ ಈ ಚಿತ್ರಕ್ಕೂ ಹೀರೋ ರವಿಚಂದ್ರನ್ ಅವರೇ.

  ಕೆ.ಮಂಜು ನಿರ್ಮಾಣದ ಆ ದೃಶ್ಯ ಚಿತ್ರವನ್ನು 150 ಸೆಂಟರುಗಳಲ್ಲಿ ರಿಲೀಸ್ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಚಿತ್ರಕ್ಕೆ ಥಿಯೇಟರುಗಳಿಂದಲೇ ಡಿಮ್ಯಾಂಡ್ ಸೃಷ್ಟಿಯಾಗಿದೆ. ಹೀಗಾಗಿ, ಆ ದೃಶ್ಯ ಸಿನಿಮಾ ನವೆಂಬರ್ 8ರಂದು ರಾಜ್ಯಾದ್ಯಂತ  300 ಕ್ಕೂ ಹೆಚ್ಚು ಚಿತ್ರಮಂದಿರಗಳಿಲ್ಲಿ ರಿಲೀಸ್ ಆಗುತ್ತಿದೆ.

  ಒನ್ಸ್ ಎಗೇಯ್ನ್ ಇದು ಕೂಡಾ ಸಸ್ಪೆನ್ಸ್ ಜಾನರ್ ಸಿನಿಮಾ. ಶಿವಗಣೇಶ್ ನಿರ್ದೇಶನದ ಚಿತ್ರದಲ್ಲಿ ಹಾಡೂ ಇಲ್ಲ. ರೊಮ್ಯಾನ್ಸೂ ಇಲ್ಲ. ಆದರೆ, ಕುರ್ಚಿಯಲ್ಲಿ ಹಿಡಿದು ಕೂರಿಸುವ ಥ್ರಿಲ್ಲಿಂಗ್ ಅಂಶಗಳಿವೆ.

  ರವಿಚಂದ್ರನ್‌ ಇಲ್ಲಿ ಎರಡು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

 • ದೃಶ್ಯ ಕೊಟ್ಟ ಧೈರ್ಯವೇ ಆ ದೃಶ್ಯಕ್ಕೆ ಕಾರಣ

  drishya movies courage is aa drisha

  ದೃಶ್ಯ ಚಿತ್ರಕ್ಕೂ ಮೊದಲು ರವಿಚಂದ್ರನ್ ಅವರನ್ನು ಆ ರೀತಿ ನೋಡೋಕೆ ಸಾಧ್ಯವೇ ಇರಲಿಲ್ಲ. ಭಾರತೀಯ ಚಿತ್ರರಂಗದ ವಂಡರ್ ಡೈರೆಕ್ಟರ್‌ಗಳಲ್ಲಿ ಒಬ್ಬರಾದ ರವಿಚಂದ್ರನ್, ಹೀರೋ ಆಗಿ ಲವ್ವರ್ ಬಾಯ್ ಆಗಿಯೇ ಕಾಣಿಸಿಕೊಂಡಿದ್ದರು. ಅಭಿಮಾನಿಗಳು, ಪ್ರೇಕ್ಷಕರು ಒಪ್ಪುತ್ತಾರೋ ಇಲ್ಲವೋ ಎಂಬ ಆತಂಕದಲ್ಲಿಯೇ ಬೌಂಡರಿ ಹಾಕಿಕೊಂಡಿದ್ದ ರವಿಚಂದ್ರನ್ ಅವರಿಗೆ ಧೈರ್ಯ ನೀಡಿದ್ದು ದೃಶ್ಯ.

  ಮಧ್ಯವಯಸ್ಕ ಗೃಹಸ್ಥನಾಗಿ, ಕುಟುಂಬವನ್ನು ರಕ್ಷಿಸಿಕೊಳ್ಳಲು ಅಪರಾಧ ಮುಚ್ಚಿ ಹಾಕುವ ಕ್ರಿಮಿನಲ್ ತಂತ್ರ ಹೆಣೆಯುವವನಾಗಿ ರವಿಚಂದ್ರನ್ ಪ್ರೇಕ್ಷಕರ ಮನಸ್ಸು ಗೆದ್ದುಬಿಟ್ಟರು. ಅದಾದ ಮೇಲೆ ರವಿಚಂದ್ರನ್ ಪ್ರಯೋಗಗಳಿಗೆ ಕೈ ಹಾಕಿದ್ದು. ಅದರ ಮುಂದುವರಿದ ಭಾಗವೇ ಈಗ ಥಿಯೇಟರಿನಲ್ಲಿರೋ ಆ ದೃಶ್ಯ.

  ಚಿತ್ರದಲ್ಲಿ ರವಿಚಂದ್ರನ್ ಎರಡು ಗೆಟಪ್ಪಿನಲ್ಲಿದ್ದಾರೆ. ಗುಂಗುರು ಕೂದಲಿಲ್ಲ. ಒಂದು ರೋಲ್‌ನಲ್ಲಿ ವಾಕಿಂಗ್ ಸ್ಟಿಕ್ ಹಿಡಿದೇ ನಡೆದಾಡುವ ವೃದ್ಧನಾದರೆ, ಇನ್ನೊಂದು ರೋಲ್‌ನಲ್ಲಿ ಯಂಗ್ ಆಫೀಸರ್.

  ದೃಶ್ಯ ಕೊಟ್ಟ ಶಕ್ತಿಯೇ ಆ ದೃಶ್ಯಕ್ಕೂ ಪ್ರೇರಣೆ. ಅದಾದ ಮೇಲೆ ಪ್ರೇಕ್ಷಕರು ನನ್ನನ್ನು ಎಲ್ಲ ರೀತಿಯಲ್ಲಿಯೂ ಒಪ್ಪುತ್ತಾರೆ ಎಂಬ ನಂಬಿಕೆ ಬಂತು. ಹೀಗಾಗಿಯೇ ಕುರುಕ್ಷೇತ್ರದಲ್ಲಿ ಕೃಷ್ಣನಾದೆ, ಅಣ್ಣ, ಅಪ್ಪನ ಪಾತ್ರಗಳಲ್ಲೂ ನಟಿಸಿದೆ. ನನ್ನೊಳಗಿನ ಕಲಾವಿದನಿಗೆ ಈಗ ಫುಲ್ ಕೆಲಸ. ಆ ದೃಶ್ಯವೂ ಅಂಥಾದ್ದೊAದು ಥ್ರಿಲ್ ಕೊಟ್ಟಿದೆ ಎಂದಿದ್ದಾರೆ ರವಿಚಂದ್ರನ್.

  ಕೆ.ಮAಜು ನಿರ್ಮಾಣದ ಆ ದೃಶ್ಯ ಚಿತ್ರಕ್ಕೆ ಜಿಗರ್‌ಥಂಡ ಖ್ಯಾತಿಯ ಶಿವಗಣೇಶ್ ನಿರ್ದೇಶಕ.

 • ದೃಶ್ಯಕ್ಕೂ ದಶರಥನಿಗೂ ಏನು ಸಂಬಂಧ..?

  dasharatha is a family oriented story

  ನನ್ನದು ಪುಟ್ಟ ಪ್ರೇಮಲೋಕ. ಆ ಪ್ರೇಮಲೋಕ ಕೆಡವಲು ಬಂದವನನ್ನು ನಿವಾರಿಸಿಕೊಳ್ಳಲೇಬೇಕಿತ್ತು. ನನಗೆ ನನ್ನ ಪ್ರೇಮಲೋಕವೇ ಮುಖ್ಯ.. ದೃಶ್ಯ ಚಿತ್ರದ ಕ್ಲೈಮಾಕ್ಸ್‍ನಲ್ಲಿ ಇಂಥದ್ದೊಂದು ಡೈಲಾಗ್ ಬರುತ್ತೆ. ದಶರಥದ ಟ್ರೇಲರ್‍ನಲ್ಲೇ ಅಂಥದ್ದೊಂದು ಡೈಲಾಗ್ ಇದೆ.

  ಹಾಗಾದರೆ ಇಲ್ಲಿಯೂ ಮಗಳು ಮತ್ತು ಕುಟುಂಬಕ್ಕಾಗಿ ಹೊಡೆದಾಡುತ್ತಾರಾ ರವಿಚಂದ್ರನ್. ಅಷ್ಟೆಲ್ಲ ಸಸ್ಪೆನ್ಸ್ ಮೊದಲೇ ಬಿಟ್ಟುಕೊಟ್ಟರೆ.. ಸಿನಿಮಾದಲ್ಲೇನಿರುತ್ತೆ.. ಅಲ್ವಾ..? 

  ಮೊದಲೇ ಎಂ.ಎಸ್.ರಮೇಶ್ ನಿರ್ದೇಶನದ ಸಿನಿಮಾ. ಎಲ್ಲವೂ ಅರ್ಥವಾಯಿತು ಎಂದುಕೊಳ್ಳುತ್ತಿರುವಾಗಲೇ ನಿರೀಕ್ಷೆಗೆ ನಿಲುಕದ ಟ್ವಿಸ್ಟ್ ಕೊಟ್ಟು ಪ್ರೇಕ್ಷಕರನ್ನು ತುದಿಗಾಲಲ್ಲಿ ಕೂರಿಸೋದ್ರಲ್ಲಿ ಎತ್ತಿದ ಕೈ.

  ಅಷ್ಟೇ ಅಲ್ಲ, ದೃಶ್ಯದಲ್ಲಿ ರವಿಚಂದ್ರನ್ ಒಬ್ಬ ಚಾಣಾಕ್ಷ ವಕೀಲನಂತೆಯೇ ಸಾಕ್ಷಿಗಳನ್ನು ಸೃಷ್ಟಿಸುತ್ತಾ ಹೋಗುತ್ತಾರೆ. ಇಲ್ಲಿ ಅವರೇ ವಕೀಲ.

  ದೃಶ್ಯದಲ್ಲಿ ಸಾಹಸ ಇರಲಿಲ್ಲ, ಇಲ್ಲಿ ಸಾಹಸವೂ ಇದೆ.

  ಹಲವು ವಿಶೇಷಗಳ ಮೂಟೆಯನ್ನೇ ಹೊತ್ತುಕೊಂಡು ಬರುತ್ತಿರುವ ದಶರಥ ಇದೇ ವಾರ ರಿಲೀಸ್ ಆಗುತ್ತಿದೆ. ರವಿಚಂದ್ರನ್, ರಂಗಾಯಣ ರಘು, ಸೋನು ಅಗರ್‍ವಾಲ್, ಅವಿನಾಶ್, ಶೋಭರಾಜ್, ಅಭಿರಾಮಿ ಮೊದಲಾದವರು ನಟಿಸಿದ್ದಾರೆ. ಎಂ.ಎಸ್.ರಮೇಶ್ ಜೊತೆ 14ನೇ ಬಾರಿ ಗುರುಕಿರಣ್ ಸಂಗೀತ ನೀಡಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery