` cm hd kumaraswamy, - chitraloka.com | Kannada Movie News, Reviews | Image

cm hd kumaraswamy,

  • CM H D Kumaraswamy Releases Lyrical Video Song Of Seetharama Kalyana

    cm hd kumaraswamy releases lyrcial video song

    Chief Minister H D Kumaraswamy has released the first lyrical video song of 'Seetharama Kalyana’ which stars his son Nikhil Kumar in the lead.

    Produced under the Channambika Films banner, Mr Kumaraswamy along with his wife Mrs. Anitha Kumaraswamy, Ramanagara MLA are presenting their son's second venture directed by choreographer turned director A Harsha.

    The chief minister who has released the lyrical video song ‘Ninna Raja Naanu, Ninna Rani Naanu,’ a romantic number from the movie which features Nikhil Kumar along with the beautiful Rachitha Ram. The song composed by Anup Rubens has been performed by singing sensation Armaan Malik to the lyrics penned by V Sai Sukunya.

    Further, Mr Kumaraswamy has thanked the Kannada movie lovers and seeks for their continuous support and love as the most anticipated movie is inching towards release in the coming days.

  • Film City And Film University In Ramanagara, Announces HDK

    cm announces state budget

    Chief Minister HD Kumaraswamy in his Budget speech today announced the establishment of a Film University and Film City in Ramanagara. He also announced a yoga centre in memory of Dr Rajkumar in the Kanteerava Studio premises. 

    The budget has set aside Rs 30 crore for the establishment of a film university in Ramanagara that will teach students film making, direction, photography among other things. Rs 40 crore has been set aside for encouraging industries that will provide film services like animation studios, computer graphics etc in the Ramangara Film City. Another Rs 20 crore will be used for creating housing and other facilities for foreigners coming to make films. 

    The Budget says, "In memory of Dr Rajkumar, a well-equipped yoga centre will established in Sri Kanteerava Studio premises."

    About the other investments, the budget says, "Film industry is growing on a large scale. It will be very useful for the film industry if training is provided in the fields of film production like film making, direction, photography, sound, editing etc. In this background, I propose to provide capital of Rs 30 crore to open a Film University at Ramanagara with private partnership. Besides, I propose to provide Rs 40 crore capital to encourage industries providing services to film industries such as photography, editing, sound recording institutes, animation studios, computer graphic studios in Ramanagara film city. In addition, I provide Rs 20 crore for housing and creation of other essential infrastructure for the artists and technicians coming from other countries for film production."

  • Is The State Government Cursed Over Award Functions ?

    is state government cursed over award functions

    There seems to be something wrong with the recent state government award functions! They are often getting postponed for one or the other reasons, which has left many baffled and many even starting to doubt whether the state government is ‘cursed’ when it comes to awards functions.

    Recently around two months ago, the popular Kempegowda awards function was postponed twice! The award which is to honour notable contributions of civilians in various fields such as medicine, education, media, sports, theater, film, literature, environment, folklore, music, dance, yogasana, judiciary, journalism, culture, photography, social service, astrology and painting, was initially postponed due to the passing away of DMK supremo Dr. M Karunanidhi.

    Later, when the function was again rescheduled to another date, the function was pushed to another date following the demise of former Indian prime minister and BJP leader Sri. Atal Bihari Vajpayee. 

    The curse has hit back again when the state government was about to honour the best of technicians and artists in the Kannada film industry for the year 2017. The stage was all set for the State Film Awards-2017, in which several noted film personalities were to be awarded for the best performances including lifetime achievements to veteran actress Julie Lakshmi with Dr. Rajkumar Award while Puttanna Kanagal award for director S. Narayan and Dr. Vishnuvardhan award to be given to G N Lakshmipati.

    However, the Information Department has called it off the film award function due to the unfortunate bus accident near Pandavapura taluk in Mandya district which has resulted in the death of several innocent school students.With frequent postponement of state awards functions, many feel that the government is facing some kind of a curse, and it is better to seek the intervention of an expert in this matter. While cursed or not cursed, it is certainly not a good development with state functions often getting postponed.

  • ಕನ್ನಡಲ್ಲಿ ಕ್ವಾಲಿಟಿ ಸಿನಿಮಾಗಳು ಬರಲಿ - ಸಿಎಂ ಹೆಚ್.ಡಿ.ಕುಮಾರಸ್ವಾಮಿ

    cm ha kumaraswamy at biffes inaguration

    ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಿದೆ. ಬೆಂಗಳೂರಿನ ಒರಾಯನ್ ಮಾಲ್ ಮತ್ತು ಕಲಾವಿದರ ಸಂಘದಲ್ಲಿ 60 ದೇಶಗಳ 125ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಫೆಬ್ರವರಿ 28ರವರೆಗೆ ಈ ಚಲನಚಿತ್ರೋತ್ಸವ ನಡೆಯಲಿದೆ. 

    biffes_inauguration_2019.jpgವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಹೆಚ್.ಡಿ.ಕುಮಾರಸ್ವಾಮಿ `ಕನ್ನಡದಲ್ಲಿ ವರ್ಷಕ್ಕೆ 200ಕ್ಕೂ ಹೆಚ್ಚು ಸಿನಿಮಾ ಬರುತ್ತಿವೆ. ಆದರೆ, ಗುಣಮಟ್ಟದ ಸಿನಿಮಾಗಳು ಬರುತ್ತಿಲ್ಲ. ಮೊದಲು ಒಳ್ಳೆಯ ಕತೆ ಮಾಡಿಕೊಂಡು, ಅದ್ಧೂರಿಯಾಗಿ ಸಿನಿಮಾ ಮಾಡಬೇಕು. ಆದರೆ, ಕಥೆಯನ್ನೇ ಮರೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಸಮಾರಂಭದಲ್ಲಿ ಭಾಗವಹಿಸಿದ್ದ ಫಿಲಂ ಚೇಂಬರ್ ಅಧ್ಯಕ್ಷ ಚಿನ್ನೇಗೌಡ ಬೆಂಗಳೂರಿನಲ್ಲಿ ಕಡಿಮೆಯಾಗುತ್ತಿರುವ ಚಲನಚಿತ್ರ ಮಂದಿರಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ರು. ಈ ಬಾರಿಯ ಬಜೆಟ್‍ನಲ್ಲಿ ಚಿತ್ರರಂಗಕ್ಕೆ ಯಾವುದೇ ಅನುದಾನ ದೊರೆತಿಲ್ಲ. ಇದೇ ವೇದಿಕೆ ಮೇಲೆ ಸಿಎಂ ಜೊತೆ ಮಾತನಾಡಿದ್ದೇನೆ. ಅವರೂ ಕೂಡಾ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿಕೊಂಡರು.

    ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ, ಅನಂತ್ ನಾಗ್, ರಮೇಶ್ ಭಟ್, ಶಿವರಾಂ. ವಿ.ಮನೋಹರ್, ರಿಷಬ್ ಶೆಟ್ಟಿ, ಗಾಯತ್ರಿ ಅನಂತ್ ನಾಗ್, ಸುಮನ್ ನಗರ್‍ಕರ್, ಹೇಮಾಚೌಧರಿ ಮೊದಲಾದವರು ಭಾಗವಹಿಸಿದ್ದರು.

  • ಫಿಲಂಚೇಂಬರ್ ನೂತನ ಸದಸ್ಯರಿಂದ ಸಿಎಂಗೆ ಸನ್ಮಾನ

    kfcc new committee members honors cm hdk

    ಫಿಲಂಚೇಂಬರ್ ಚುನಾವಣೆಯ ಭರಾಟೆ ಮುಗಿಯುತ್ತಿದ್ದಂತೆ, ಚೇಂಬರ್‍ನ ನೂತನ ಸದಸ್ಯರು ಕೆಲಸವನ್ನೂ ಆರಂಭಿಸಿದ್ದಾರೆ. ಫಿಲಂಚೇಂಬರ್‍ನ ನೂತನ ಪದಾಧಿಕಾರಿಗಳೆಲ್ಲ ಅಧ್ಯಕ್ಷ ಚಿನ್ನೇಗೌಡರ ನೇತೃತ್ವದಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಕುಮಾರಸ್ವಾಮಿ ಅವರನ್ನು ಸನ್ಮಾನಿಸಿದರು. ಫಿಲಂಚೇಂಬರ್‍ನ ಕಾರ್ಯದರ್ಶಿ ಬಾ.ಮಾ.ಹರೀಶ್, ಶಿಲ್ಪಾ ಶ್ರೀನಿವಾಸ್, ಕರಿಸುಬ್ಬು, ಉಪಾಧ್ಯಕ್ಷರಾದ ಕೆ.ಮಂಜು, ಕೆ.ಸಿ ಅಶೋಕ್ ಮತ್ತು ಖಜಾಂಚಿಯಾಗಿರುವ ಕೆ.ಎಂ.ವೀರೇಶ್.. ಸಿಎಂ ಕುಮಾರಸ್ವಾಮಿ ಅವರನ್ನು ಸನ್ಮಾನಿಸಿದ್ರು.

    ಫಿಲಂಚೇಂಬರ್‍ನ ನೂತನ ಪದಾಧಿಕಾರಿಗಳು, ಅಧಿಕಾರ ಸ್ವೀಕಾರದ ನಂತರ, ಸಂಪ್ರದಾಯದಂತೆ ರಾಜ್ ಸಮಾಧಿ, ಪಾರ್ವತಮ್ಮ ರಾಜ್‍ಕುಮಾರ್ ಸಮಾಧಿಗೆ ಭೇಟಿ ಕೊಟ್ಟು ನಮನ ಸಲ್ಲಿಸಿದರು. ರಾಘವೇಂದ್ರ ರಾಜ್‍ಕುಮಾರ್ ಹಾಗೂ ಅಂಬರೀಷ್ ಅವರ ಮನೆಗೆ ತೆರಳಿ ಹೂಗುಚ್ಛ ನೀಡಿ ಸಹಕಾರ ಕೋರಿದರು.

  • ರಾಮನಗರಕ್ಕೆ ಸಿನಿಮಾ ಯುನಿವರ್ಸಿಟಿ - ಬಜೆಟ್ ಘೋಷಣೆ

    state budget announced

    ಈ ಬಾರಿಯ ಬಜೆಟ್‌ನಲ್ಲಿ ಕನ್ನಡ ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ದೊಡ್ಡದಾಗಿ ಬೆಳೆಯುತ್ತಿರುವ ಚಲನಚಿತ್ರೋದ್ಯಮದಲ್ಲಿ ಚಲನಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚಿತ್ರದ ತಯಾರಿಕೆ, ನಿರ್ದೇಶನ, ಛಾಯಾಚಿತ್ರ, ಧ್ವನಿ, ಸಂಕಲನ ಇತ್ಯಾದಿ ವಿಷಯಗಳಲ್ಲಿ ತರಬೇತಿ ನೀಡಲು ಚಲನಚಿತ್ರ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿದ್ದಾರೆ. ಕುಮಾರಸ್ವಾಮಿಯವರ ಸ್ವಕ್ಷೇತ್ರವೂ ಆಗಿರುವ ರಾಮನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಚಲನಚಿತ್ರ ವಿಶ್ವವಿದ್ಯಾನಿಲಯ ತೆರೆಯಲು 30 ಕೋಟಿ ರೂ. ಬಂಡವಾಳ ಮೀಸಲಿಟ್ಟಿದ್ದಾರೆ. 

    ಅಷ್ಟೇ ಅಲ್ಲ, ರಾಮನಗರ ಫಿಲಂ ಸಿಟಿಯಲ್ಲಿ ಛಾಯಾಚಿತ್ರ, ಸಂಕಲನ, ಸೌಂಡ್ ರೆರ್ಕಾಡಿಂಗ್ ಮಾಡುವ ಸಂಸ್ಥೆ, ಅನಿಮೇಷನ್ ಸ್ಟುಡಿಯೋಗಳು, ಕಂಪ್ಯೂಟರ್ ಗ್ರಾಫಿಕ್ ಸ್ಟುಡಿಯೋಗಳು ಚಲನಚಿತ್ರ ರಂಗಕ್ಕೆ ಸೇವೆ ಸಲ್ಲಿಸುವ ಉದ್ಯಮಗಳಿಗೆ ಪ್ರೋತ್ಸಾಹ ನೀಡಲು 40 ಕೋಟಿ ರೂ.ಗಳ ಬಂಡವಾಳ ಹೂಡಿಕೆಗೆ ಬಜೆಟ್​ನಲ್ಲಿ ಘೋಷಿಸಿದ್ಧಾರೆ.

    ಅಲ್ಲದೆ, ಹೊರ ದೇಶದಿಂದ ಚಿತ್ರ ನಿರ್ಮಾಣಕ್ಕಾಗಿ ಬರುವ ಕಲಾವಿದರು ಮುಂತಾದ ತಂತ್ರಜ್ಞರಿಗೆ ವಸತಿ ಹಾಗೂ ಇನ್ನಿತರೆ ಅವಶ್ಯಕ ಮೂಲಭೂತ ಸೌಲಭ್ಯಗಳ ನಿರ್ಮಾಣಕ್ಕಾಗಿ 20 ಕೋಟಿ ರೂ. ನೀಡುವುದಾಗಿ ಬಜೆಟ್​ನಲ್ಲಿ ಪ್ರಕಟಿಸಿದ್ದಾರೆ. 

    ಅಲ್ಲದೆ, ಡಾ. ರಾಜ್‍ಕುಮಾರ್ ಸ್ಮರಣಾರ್ಥ ಕಂಠೀರವ ಸ್ಟುಡಿಯೋ ಆವರಣದಲ್ಲಿ ಸುಸಜ್ಜಿತವಾದ ಯೋಗ ಕೇಂದ್ರ ಸ್ಥಾಪನೆಗೂ ಸರ್ಕಾರ ಮುಂದಾಗಿದೆ. ಆದರೆ, ಮಲ್ಟಿಪ್ಲೆಕ್ಸ್​ಗಳಲ್ಲಿ ಟಿಕೆಟ್ ದರಕ್ಕೆ ಗರಿಷ್ಟ ಮಿತಿ ನಿಗದಿ ಕುರಿತಂತೆ ಬಜೆಟ್​ನಲ್ಲಿ ಪ್ರಸ್ತಾಪವೇನೂ ಆಗಿಲ್ಲ.

  • ಸಿಎಂ ಕುಮಾರಸ್ವಾಮಿ ಜೊತೆ ಭಾರತಿ ವಿಷ್ಣುವರ್ಧನ್ ಭೇಟಿ

    bharathi vishnuvardhan meets cm hdk

    ಮುಖ್ಯಮಂತ್ರಿಯಾದ ಮೇಲೆ ಪ್ರತಿಕ್ಷಣವೂ ಬ್ಯುಸಿಯಾಗಿರುವ ಕುಮಾರಸ್ವಾಮಿ, ಒಂದು ಕಡೆ ಸಂಪುಟದ ಸಂಕಟ, ಸಾಲಮನ್ನಾ ಸಂಕಟದಲ್ಲಿ ಮುಳುಗಿ ಹೋಗಿದ್ದಾರೆ. ಈ ನಡುವೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದಾರೆ. ಅಳಿಯ ಅನಿರುದ್ಧ ಅವರೊಂದಿಗೆ ಭೇಟಿ ಮಾಡಿದ ಭಾರತಿ, ವಿಷ್ಣುವರ್ಧನ್ ಸ್ಮಾರಕದ ಕುರಿತು ಪ್ರಸ್ತಾಪವನ್ನಿಟ್ಟಿದ್ದಾರೆ.

    ಸ್ಮಾರಕದ ಕುರಿತು ಇನ್ನೊಂದು ವಾರದ ನಂತರ ನಾನೇ ನಿಮ್ಮನ್ನು ಭೇಟಿ ಮಾಡುತ್ತೇನೆ. ಸದ್ಯಕ್ಕೆ ಬ್ಯುಸಿ ಇದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರಂತೆ. ಸ್ಮಾರಕವನ್ನು ಮೈಸೂರಿನಲ್ಲೇ ಮಾಡಬೇಕು ಎನ್ನುವುದು ನಮ್ಮ ಆಸೆ ಎಂದು ಹೇಳಿಕೊಂಡಿದ್ದಾರೆ ಭಾರತಿ.

    ವಿಷ್ಣುವರ್ಧನ್ ಅಭಿನಯದ ಸೂರ್ಯವಂಶ ಚಿತ್ರದ ನಿರ್ಮಾಪಕರೂ ಆಗಿದ್ದ ಕುಮಾರಸ್ವಾಮಿ, ವಿಷ್ಣುವರ್ಧನ್ ಅವರ ಅತಿದೊಡ್ಡ ಅಭಿಮಾನಿಯೂ ಹೌದು. ವಿಷ್ಣು ಸ್ಮಾರಕದ ಗೊಂದಲ, ಕುಮಾರಸ್ವಾಮಿ ಅವಧಿಯಲ್ಲಿ ಬಗೆಹರಿಯುತ್ತಾ..? ಸಮಯ ಇನ್ನೂ ಇದೆ.

  • ಸಿಎಂ ಕುಮಾರಸ್ವಾಮಿ ನಿರ್ಮಾಪಕರಾಗಿ ಮಾತನಾಡಿದಾಗ..

    cm hd kumaraswamy speaks as film producer

    ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ, ಚಿತ್ರ ನಿರ್ಮಾಪಕರೂ  ಹೌದು. ಅವರ ಬೇರುಗಳಿರೋದೇ ಚಿತ್ರರಂಗದಲ್ಲಿ. ಸದ್ಯಕ್ಕೆ ಅವರ ನಿರ್ಮಾಣದ ಸೀತಾರಾಮ ಕಲ್ಯಾಣ ಚಿತ್ರ ಶೂಟಿಂಗ್ ಹಂತದಲ್ಲಿದೆ. ನಿಖಿಲ್-ರಚಿತಾ ರಾಮ್ ಜೋಡಿಯ ಚಿತ್ರಕ್ಕೆ ಹರ್ಷ ನಿರ್ದೇಶನವಿದೆ. ಸಿಎಂ ಆಗಿದ್ದರೂ, ಮಗನ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಕುಮಾರಸ್ವಾಮಿ, ರಾತ್ರಿ ಎಷ್ಟೇ ಹೊತ್ತಾಗಿದ್ದರೂ, ಸಿನಿಮಾದ ಶೂಟಿಂಗ್, ಮತ್ತಿತರ ಮಾಹಿತಿ ತಿಳಿದುಕೊಂಡೇ ಮಲಗುತ್ತಾರಂತೆ.

    ಜಾಗ್ವಾರ್ ಸಿನಿಮಾ ಮಾಡಿದಾಗ, ಹಲವರು ಸೂರ್ಯವಂಶ, ಚಂದ್ರಚಕೋರಿಯ ರೀತಿಯಲ್ಲಿ ಹಳ್ಳಿ ಸೊಗಡಿನ ಕಥೆ, ಹಾಡು ಇರಬೇಕಿತ್ತು ಎಂದಿದ್ದರು. ಈ ಚಿತ್ರದಲ್ಲಿ ಅದೆಲ್ಲವೂ ಇದೆ. ಜೊತೆಗೆ ಜಾಗ್ವಾರ್ ಸಿನಿಮಾದಲ್ಲಿ ತೆಲುಗು ಕಲಾವಿದರೇ ಹೆಚ್ಚು ಎಂಬ ಆರೋಪವಿತ್ತು. ಈ ಚಿತ್ರದಲ್ಲಿ ಅದನ್ನು ನಿವಾರಿಸಿದ್ದೇವೆ. ಕನ್ನಡ ಕಲಾವಿದರಿಗೇ ಹೆಚ್ಚು ಮನ್ನಣೆ ನೀಡಿದ್ದೇವೆ. ಇದು ರೀಮೇಕ್ ಅಲ್ಲ, ಈ ಚಿತ್ರವೇ ತೆಲುಗಿಗೆ ರೀಮೇಕ್ ಆಗಬಹುದು ಎನ್ನುತ್ತಾರೆ ಕುಮಾರಸ್ವಾಮಿ.

    ಪೋಸ್ಟರ್ ನೋಡಿಯೇ ಸಿನಿಮಾ ಸಕ್ಸಸ್ ಆಗುತ್ತೋ ಇಲ್ಲವೋ ಅನ್ನೋದನ್ನು ಹೇಳುತ್ತಿದ್ದೆ. ಅದು ದೇವರು ನನಗೆ ನೀಡಿದ ವರ ಎಂದಿರುವ ಕುಮಾರಸ್ವಾಮಿ, ಎಲ್ಲವೂ ನಾನು ಹೇಳಿದಂತೆಯೇ ಆಗಿದೆ ಎಂದು ಹೇಳಿದ್ದಾರೆ.

    ಸೀತಾರಾಮ ಕಲ್ಯಾಣ ಚಿತ್ರದ ಕುರಿತು ನಿಖಿಲ್, ರಚಿತಾ,ಹರ್ಷ ಅವರೊಂದಿಗೆ ಸುದ್ದಿಗೋಷ್ಟಿ ನಡೆಸಿದ ಕುಮಾರಸ್ವಾಮಿ, ಚಿತ್ರದ ಶೂಟಿಂಗ್, ಮತ್ತಿತರ ಕೆಲಸಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery